ಶಿಖರ್ ಧವನ್

ವಿಕಿಪೀಡಿಯ ಇಂದ
Jump to navigation Jump to search

ಶಿಖರ್ ಧವನ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ಬಲಗೈ ಆ‍ಫ್ ಬ್ರೇಕ್ ಬೌಲರ್. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸನ್ ರೈಸರ್ಸ್ ಹೈಡೆರಾಬಾದ್ ತಂಡಕ್ಕೆ ಆಡುತ್ತಾರೆ.

ಆರಂಭಿಕ ಜೀವನ[ಬದಲಾಯಿಸಿ]

ಶಿಖರ್ ರವರು ದಶಂಬರ ೦೫,೧೯೮೫ರಂದು ದೆಹಲಿಯಲ್ಲಿ ಸುನೈನ ಹಾಗು ಮಹೇಂದ್ರ ಪಾಲ್ ಧವನ್ ದಂಪತಿಗೆ ಜನಿಸಿದರು. ಇವರಿಗೆ ಕಿರಿಯ ಸಹೋದರಿ ಇದ್ದಾರೆ, ಶ್ರೇಷ್ಟ. ತಮ್ಮ ೧೨ನೇ ವಯಸ್ಸಿನಿಂದ ಸೊನೆಟ್ ಕ್ಲಬ್‍ನ ತಾರಕ್ ಸಿನ್ಹ‍ರವರ ಆಶ್ರಯದಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಮೊದಲಿಗೆ ಇವರು ವಿಕೇಟ್ ಕೀಪರ್‍ ಆಗಿ ಸೇರಿಕೊಂಡಿದ್ದರು.[೧] ೨೦೦೪ರಲ್ಲಿ ನಡೆದ ೧೯ರ ವಯ್ಯೋಮಿತಿಯ ತಂಡದಲ್ಲಿ ೦೩ ಶತಕಗಳ ಸಹಿತ ೫೦೫ ರನ್ ಕಲೆಹಾಕಿ ಗಮನ ಸಳೆದಿದ್ದರು.[೨]

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಏಪ್ರಿಲ್ ೧೯, ೨೦೦೮ರಂದು ದೆಹಲಿಯಾ ಫಿರೋಜ್ ಶಾ ಕೋಟ್ಲಾದಲ್ಲಿ ನಡೆದ ೩ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ದೆಲ್ಲಿ ಡೇರ್ ಡೆವಿಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.ಇಂಡಿಯನ್ ಪ್ರೀಮಿಯರ್ ಲೀಗ್ನ ತಮ್ಮ ಚೊಚ್ಚಲ ಪಂದ್ಯದಲ್ಲಿ ೦೮ ಬೌಂಡರಿ ಸಹಿತ ೪೧ ಎಸೆತಗಳಲ್ಲಿ ಆರ್ಧಶತಕ (೫೨) ಗಳಿಸಿ ಅಜೇಯರಾಗಿ ಉಳಿದರು. ಇಲ್ಲಿಯವರೆಗೆ ಐಪಿಎಲ್‍ನಲ್ಲಿ ೩೫೬೧ ರನ್‍ಗಳನ್ನು ಗಳಿಸಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಸನ್ ರೈಸರ್ಸ್ ಹೈಡೆರಾಬಾದ್ ತಂಡಕ್ಕೆ ಆಡುತ್ತಾರೆ.[೩][೪]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಅಕ್ಟೋಬರ್ ೨೦, ೨೦೧೦ರಲ್ಲಿ ವಿಶಾಖಪಟ್ಟನಮ್‍ನಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಎರಡನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಮಾರ್ಚ ೧೪, ೨೦೧೩ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ಈ ಪಂದ್ಯದಲ್ಲಿ ಕೇವಲ ೧೭೪ ಎಸೆತಗಳಲ್ಲಿ ೧೮೭ರನ ಬಾರಿಸಿದ್ದರು. ಜೂನ್ ೦೪, ೨೦೧೧ರಂದು ಟ್ರಿನಿಡ್ಯಾದ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು.[೫][೬][೭]

ಶ್ರೇಯಾಂಕ[ಬದಲಾಯಿಸಿ]

 • ಪ್ರಸ್ತುತ ಶಿಖರ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ[೮] ಪ್ರಕಟಿಸುವ ಬ್ಯಾಟಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
  • ಟಿ-೨೦ ಕ್ರಿಕೆಟ್ ಶ್ರೇಯಾಂಕದಲ್ಲಿ ೪೯ನೇ ಸ್ಥಾನವನ್ನು ಹೊಂದಿದ್ದಾರೆ.[೯]
  • ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ೧೪ನೇ ಸ್ಥಾನವನ್ನು ಹೊಂದಿದ್ದಾರೆ.[೧೦]
  • ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ೩೪ನೇ ಸ್ಥಾನವನ್ನು ಹೊಂದಿದ್ದಾರೆ.[೧೧]

ಪಂದ್ಯಗಳು[ಬದಲಾಯಿಸಿ]

 • ಟೆಸ್ಟ್ ಕ್ರಿಕೆಟ್ : ೨೯ ಪಂದ್ಯಗಳು[೧೨][೧೩]
 • ಏಕದಿನ ಕ್ರಿಕೆಟ್ : ೯೬ ಪಂದ್ಯಗಳು
 • ಟಿ-೨೦ ಕ್ರಿಕೆಟ್ : ೨೯ ಪಂದ್ಯಗಳು
 • ಐಪಿಎಲ್ ಕ್ರಿಕೆಟ್ : ೧೪೩ ಪಂದ್ಯಗಳು


ಶತಕಗಳು[ಬದಲಾಯಿಸಿ]

 1. ಏಕದಿನ ಪಂದ್ಯಗಳಲ್ಲಿ : ೧೨
 2. ಟೆಸ್ಟ್ ಪಂದ್ಯಗಳಲ್ಲಿ : ೦೬


ಅರ್ಧ ಶತಕಗಳು[ಬದಲಾಯಿಸಿ]

 1. ಟೆಸ್ಟ್ ಪಂದ್ಯಗಳಲ್ಲಿ : ೦೫
 2. ಏಕದಿನ ಪಂದ್ಯಗಳಲ್ಲಿ : ೨೩
 3. ಟಿ-೨೦ ಪಂದ್ಯಗಳಲ್ಲಿ : ೦೩
 4. ಐಪಿಎಲ್ ಪಂದ್ಯಗಳಲ್ಲಿ : ೨೮

ಉಲ್ಲೇಖಗಳು[ಬದಲಾಯಿಸಿ]

 1. https://www.indiatoday.in/magazine/sports/cricket/story/20130401-shikhar-dhawan-bhuvneswar-kumar-indian-cricket-test-one-day-matches-india-vs-australia-762863-1999-11-30
 2. https://en.wikipedia.org/wiki/Shikhar_Dhawan
 3. http://www.cricbuzz.com/live-cricket-scorecard/10555/delhi-daredevils-vs-rajasthan-royals-3rd-match-indian-premier-league-2008
 4. http://www.iplt20.com/teams/sunrisers-hyderabad/squad/41/Shikhar-Dhawan/
 5. http://www.cricbuzz.com/live-cricket-scorecard/3349/india-vs-australia-2nd-odi-australia-in-india-2010
 6. http://www.cricbuzz.com/live-cricket-scorecard/9847/windies-vs-india-only-t20i-india-in-west-indies-2011
 7. http://www.cricbuzz.com/live-cricket-scorecard/11944/india-vs-australia-3rd-test-australia-tour-of-india-2013
 8. https://www.icc-cricket.com/
 9. https://www.icc-cricket.com/rankings/mens/player-rankings/t20i/batting
 10. https://www.icc-cricket.com/rankings/mens/player-rankings/odi/batting
 11. https://www.icc-cricket.com/rankings/mens/player-rankings/test/batting
 12. http://www.cricbuzz.com/profiles/1446/shikhar-dhawan
 13. http://www.espncricinfo.com/india/content/player/28235.html