೨೦೧೦ ಇಂಡಿಯನ್ ಪ್ರೀಮಿಯರ್ ಲೀಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐ ಪಿ ಎಲ್ ನ ಪ್ರಂಚಂಡ ಯಶಸ್ಸು ೨೦೧೦ ರಲ್ಲೂ ಮುಂದುವರೆಯಿತು. ಇದು ೩ನೇ ಆವೃತ್ತಿ. ಈ ಬಾರಿ ಕ್ರೀಡಾಕೂಟಕ್ಕೂ ಮೊದಲು, ಅನೇಕ ಆಟಗಾರರನ್ನು ಮಾರಾಟಕ್ಕೆ ಇಡಲಾಯಿತು. ಒಟ್ಟು ೬೬ ಹೊಸ ಆಟಗಾರರು ಹರಾಜಿನಲ್ಲಿ ಪಾಲ್ಗೊಂಡಿದ್ದರು. ನ್ಯೂಜಿಲ್ಯಾಂಡ್ ನ ಶೇನ್ ಬಾಂಡ್ ಮತ್ತು ವೆಸ್ಟ್ ಇಂಡೀಸ್ ನ ಕೈರನ್ ಪೋಲಾರ್ಡ್ ಅತ್ಯಂತ ಹೆಚ್ಚು, ಎಂದರೆ ೭,೫೦,೦೦೦ ಅಮೇರಿಕನ್ ಡಾಲರ್ ಗಳಿಗೆ ಹರಾಜಾದರು.

ಹೈದರಾಬಾದ್ ನಲ್ಲಿ ತೆಲಂಗಾಣ ಕುರಿತ ನಿರಶನ ಹಾಗು ಗಲಾಟೆಗಳು ನಡೆಯುತ್ತಿದ್ದ ಕಾರಣ, ಹೈದರಾಬಾದ್ ನಲ್ಲಿ ಯಾವುದೇ ಪಂದ್ಯ ನಡೆಯಲಿಲ್ಲ. ಇದರ ಬದಲಾಗಿ ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ತಂಡ ನವಿ ಮುಂಬಯಿ, ನಾಗಪುರ ಹಾಗು ಕಟಕ್ ನಲ್ಲಿ ತನ್ನ ತವರಿನ ಪಂದ್ಯಗಳನ್ನು ಆಡಿತು.

ಈ ಬಾರಿ ಸಹ ಹಿಂದಿನ ಬಾರಿಯಂತೆ ಮೊದಲು ರೌಂಡ್ ರಾಬಿನ್ ನಂತರ ಸೆಮಿ ಫೈನಲ್ ಹಾಗು ಫೈನಲ್ ಪಂದ್ಯಗಳನ್ನು ಆಡಿಸಲಾಯಿತು. ಮೊದಲ ಸೆಮಿ ಫೈನಲ್ ನಲ್ಲಿ ಮುಂಬಯಿ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೊಲಿಸಿತು. ಎರಡನೇ ಸೆಮಿ ಫೈನಲ್ ನಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡ ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಸೋಲಿಸಿತು.

ರೋಚಕವಾದ ಫೈನಲ್ ನಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡ ಮುಂಬಯಿ ಇಂಡಿಯನ್ಸ್ ತಂಡವನ್ನು ೨೨ ರನ್ ಗಳಿಂದ ಸೋಲಿಸಿ ೨ನೇ ಆವೃತ್ತಿಯ ವಿಜೇತರಾಗಿ ಹೊರ ಹೊಮ್ಮಿದರು. ಈ ಮೂಲಕ ಚೆನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲನೇ ಆವೃತ್ತಿಯ ಫೈನಲ್ ನ ೧ ರನ್ ಸೋಲಿನ ಕಹಿ ನೆನಪನ್ನು ಮರೆತರು.