೨೦೧೧ ಇಂಡಿಯನ್ ಪ್ರೀಮಿಯರ್ ಲೀಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿವರಣೆ[ಬದಲಾಯಿಸಿ]

ಐಪಿಎಲ್ ನ ನಾಲ್ಕನೇ ಆವೃತ್ತಿಗೆ ಸಧ್ಯ ಇದ್ದ ೮ ತಂಡಗಳ ಜೊತೆಯಲ್ಲಿ ಇನ್ನೂ ಎರಡು ತಂಡಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಲಾಯಿತು. ಅದರಂತೆ ಹೊಸ ಎರಡು ತಂಡಗಳಿಗೆ ಹರಾಜು ಹಾಕಲಾಯಿತು. ಅದರಂತೆ ಪುಣೆ ವಾರಿಯರ್ಸ್ ಇಂಡಿಯಾ ಹಾಗು ಕೊಚ್ಚಿ ಟಸ್ಕರ್ಸ್ ಕೇರಳ ತಂಡಗಳನ್ನು ಸೇರಿಸಲಾಯಿತು. ಇದರಿಂದ ಐಪಿಎಲ್ ನಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆ ೮ ರಿಂದ ೧೦ ಕ್ಕೆ ಏರಿತು. ಆದಕ್ಕೆ ತಕ್ಕ ಹಾಗೆ ಕ್ರೀಡಾಕೂಟದ ಪಂದ್ಯಗಳ ಮಾದರಿಯನ್ನು ಬದಲಾಯಿಸಲಾಯಿತು. ಹೊಸ ಪದ್ದತಿಯಲ್ಲಿ, ಪ್ರತಿ ತಂಡವು ೫ ತಂಡಗಳ ವಿರುದ್ಧ ತವರಿನಲ್ಲಿ ಒಂದು ಹಾಗು ಪ್ರತಿಯೋಗಿ ತಂಡದ ತವರಿನಲ್ಲಿ ಒಂದು, ಹೀಗೆ ೧೦ ಪಂದ್ಯಗಳು, ನಂತರ ಉಳಿದ ೪ ತಂಡಗಳಲ್ಲಿ ೨ ತಂಡಗಳ ವಿರುಧ್ಧ ತವರಿನಲ್ಲಿ ಹಾಗು ೨ ತಂಡಗಳ ವಿರುಧ್ಧ ಆ ತಂಡಗಳ ತವರಿನಲ್ಲಿ, ಹೀಗೆ ೪ ಪಂದ್ಯ ಆಡಬೇಕಾಯಿತು. ಒಟ್ಟು ಪ್ರತಿ ತಂಡ ೧೪ ಪಂದ್ಯ ಆಡಿದವು.

ವಿವಾದಗಳು[ಬದಲಾಯಿಸಿ]

ಈ ಪಂದ್ಯಾವಳೀಯ ಆರಂಭದಿಂದಲೂ ಬಹಳಷ್ಟು ವಿವಾದಗಳಿಗೆ ಓಳಗಾಯಿತು. ೨೦೧೦ರ ಅಕ್ಟೋಬರ್ ನಲ್ಲಿ ರಾಜಸ್ಥಾನ್ ರಾಯಲ್ ಹಾಗು ಕಿಂಗ್ಸ್ ಇಲವೆನ್ ಪಂಜಾಬ್ ತಂಡಗಳನ್ನು ಪಂದ್ಯಾವಳಿಯಿಂದ ಉಚ್ಚಾಟಿಸಲಾಯಿತು. ಮಾಲೀಕತ್ವದ ಒಪ್ಪಂದ ಉಲ್ಲಂಗಿಸಲಾಯಿತೆಂದು ಈ ನಿರ್ಣಯ ಕೈಗೊಳ್ಳಲಾಯಿತು. ತದ ನಂತರ ನ್ಯಾಯಾಲಯದ ಆದೇಶದಂತೆ, ಈ ತಂಡಗಳನ್ನು ಮತ್ತೆ ಸೇರಿಸಲಾಯಿತು.

ಕೊಚ್ಚಿ ತಂಡದ ಸೇರ್ಪಡೆ ಕುರಿತು ವಿವಾದ ಅರಂಭವಾಯಿತು. ತಂಡದ ಮಾಲೀಕರ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಕಾರಣದಿಂದ ಅಂದಿನ ಕೇಂದ್ರ ಸಚಿವರಾದ ಶಶಿ ತರೂರ್ ರಾಜೀನಾಮೆ ನೀಡಿದರು. ನಂತರ ನಡೆದ ಘಟನೆಗಳು, ಕೇಂದ್ರ ಸರ್ಕಾರಬಿಸಿಸಿಐ ನ ವಾಣಿಜ್ಯ ಚಟುವಟಿಕೆಗಳ ತನಿಖೆ ಆರಂಭಿಸುವ ಹಾಗೆ ಪ್ರೇರೆಪಿಸಿತು. ಇದೇ ವಿವಾದದಲ್ಲಿ ಐಪಿಎಲ್ ನ ಮೂಖ್ಯಸ್ಥ್ಸ್ತ ಲಲಿತ್ ಮೋದಿಯನ್ನು ಉಚ್ಚಾಟಿಸಲಾಯಿತು. ಕೊಚ್ಚಿ ತಂಡ ಪಂದ್ಯವಳಿಯಲ್ಲಿ ಭಾಗವಹಿಸುವುದೆ ಅನುಮಾನವಾಗಿತ್ತು. ಕೊನೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಯಿತು.

ಪಂದ್ಯಗಳು[ಬದಲಾಯಿಸಿ]