೨೦೦೮ ಇಂಡಿಯನ್ ಪ್ರೀಮಿಯರ್ ಲೀಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಇಂಡಿಯನ್ ಪ್ರೀಮಿಯರ್ ಲೀಗ್ ನ ೧೮ನೇ ಎಪ್ರಿಲ್ ೨೦೦೮ ರಂದು ಆಯಿತು. ಮೊದಲ ಪಂದ್ಯಾವಳಿ ಆದ್ದರಿಂದ, ಉದ್ಘಾಟನೆ ಬಹಳ ವಿಶೇಷವಾಗಿತ್ತು. ಬೆಂಗಳೂರಿನಲ್ಲಿ ನಡೆಯಿತು. ೪೬ ದಿನಗಳ ಈ ಪಂದ್ಯಾವಳಿಯಲ್ಲಿ ಒಟ್ಟು ೫೯ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಒಂದು ಪಂದ್ಯ ಮಳೆಯ ಕಾರಣ ರದ್ದಾಯಿತು. ಈ ಪಂದ್ಯಾವಳಿ ರೌಂಡ್ ರಾಬಿನ್ ಲೀಗ್ ಮಾದರಿ ನಡೆಯಿತು. ಪ್ರತಿ ತಂಡ ಉಳಿದ ಎಲ್ಲಾ ತಂಡಗಳ ಜೊತೆಗೆ ಎರೆಡೆರಡು ಪಂದ್ಯಗಳನ್ನು ಆಡಿತು. ಓಂದೊಂದು ಪಂದ್ಯ ಒಂದೊಂದು ತಂಡದ ಸ್ಟೇಡಿಯಂ ನಲ್ಲಿ ನಡೆಯಿತು. ಈ ಹಂತದಲ್ಲಿ ಅತಿ ಹೆಚ್ಚು ಅಂಕ ಪಡೆದ ನಾಲ್ಕು ತಂಡಗಳು ಸೆಮಿ ಫೈನಲ್ ಗೆ ಪ್ರವೇಶ ಪಡೆಯಿತು. ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಡೇರ್ಡೆವಿಲ್ಸ್ ನಡುವೆ ಪ್ರಥಮ ಸೆಮಿ ಫೈನಲ್ ನಡೆದು, ರಾಜಸ್ಥಾನ್ ರಾಯಲ್ಸ್ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿ ಫೈನಲ್ ಚೆನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ೧೧ ಪಂಜಾಬ್ ನಡುವೆ ನಡೆದು ಚೆನ್ನೈ ಸೂಪರ್‌ಕಿಂಗ್ಸ್ ಫೈನಲ್ ಗೆ ಪ್ರವೇಶ ಪಡೆಯಿತು. ನವಿ ಮುಂಬಯಿನ ಡಿ.ವೈ. ಪಾಟೀಲ್ ಸ್ಟೇಡಿಯಮ್ ನಲ್ಲಿ ನಡೆದ ಫೈನಲ್ ಬಹಳ ರೋಮಾಂಚಕಾರಿಯಾಗಿತ್ತು. ಪಂದ್ಯದ ಕೊನೆ ಬಾಲ್ ನಲ್ಲಿ ಗೆದ್ದ ರಾಜಸ್ಥಾನ್ ರಾಯಲ್ಸ್ ಈ ಪಂದ್ಯಾವಳಿಯ ಪ್ರಥಮ ವಿಜೇತರಾಗಿ ಹೊರ ಹೊಮ್ಮಿದರು.