ಅಂಬಾಟಿ ರಾಯಡು
ಅಂಬಾಟಿ ತಿರುಪತಿ ರಾಯಡು, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ವಿಕೆಟ್ ಕೀಪರ್ ಹಾಗು ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್. ಇವರು ಬಲಗೈ ಆಫ್ ಬ್ರೇಕ್ ಬೌಲಿಂಗ್ ಮಾಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.
ಆರಂಭಿಕ ಜೀವನ
[ಬದಲಾಯಿಸಿ]ರಾಯಡು ಅವರು ಸೆಪ್ಟಂಬರ್ ೨೩, ೧೯೮೫ರಂದು ಗುಂಟೂರ್, ಆಂದ್ರ ಪ್ರದೇಶದಲ್ಲಿ ಜನಿಸಿದರು. ಆಂಬಾಟಿ ರಾಯಡು ಅವರ ತಂದೆ ಇವರನ್ನು ೧೯೯೨ರಲ್ಲಿ ಹೈದೆರಾಬಾದ್‍ನ ಮಾಜಿ ಕ್ರಿಕೆಟಿಗ ವಿಜಯ ಪೌಲ್ ಅವರ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ತಮ್ಮ ೧೩ನೇ ವಯಸ್ಸಿನಲ್ಲಿ ಇವರನ್ನು ಕೋಚ್ 'ಎ' ಡಿವಿಷನ್‍ನಲ್ಲಿ ಆಡಿಸಿದರು. ತಮ್ಮ ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಿದ್ದರು. ೨೦೦೨ರಲ್ಲಿ ೧೯ರ ವಯ್ಯೋಮಿತಿಯ ಭಾರತೀಯ ತಂಡದ ಪರವಾಗಿ ಇಂಗ್ಲಾಂಡ್ ವಿರುದ್ಧ ೧೭೭ ರನ್ ಕಲೆಹಾಕಿದ್ದರು.[೧][೨][೩]
ವೃತ್ತಿ ಜೀವನ
[ಬದಲಾಯಿಸಿ]ಐಪಿಎಲ್ ಕ್ರಿಕೆಟ್
[ಬದಲಾಯಿಸಿ]ಮಾರ್ಚ್ ೧೩, ೨೦೧೦ರಂದು ಮುಂಬೈಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾದಾರ್ಪಣೆ ಮಾಡಿದರು.ಇಂಡಿಯನ್ ಪ್ರೀಮಿಯರ್ ಲೀಗ್ ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಇವರು ೩೩ ಎಸೆತಗಳಲ್ಲಿ ೫೫ರನ್ ಬಾರಿಸಿದರು. ಈ ಅರ್ಧ ಶತಕದಲ್ಲಿ ೨ ಸಿಕ್ಸರ್ ಹಾಗು ೬ ಬೌಂಡರಿಗಳನ್ನ ಬಾರಿಸಿದರು. ಐಪಿಎಲ್‍ನಲ್ಲಿ ೨೪೧೬ ರನ್‍ಗಳನ್ನ ಗಳಿಸಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.[೪][೫][೬]
ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ಜುಲೈ ೨೪, ೨೦೧೩ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.ತಮ್ಮ ಚೊಚ್ಚಲ ಪಂದ್ಯದಲ್ಲಿ ೬೩ರನ್ ಬಾರಿಸಿ ಅಜೇಯರಾಗಿ ಉಳಿದರು. ಸೆಪ್ಟಂಬರ್ ೦೭, ೨೦೧೪ರಂದು ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು.[೭][೮]
ಶ್ರೇಯಾಂಕ
[ಬದಲಾಯಿಸಿ]- ಪ್ರಸ್ತುತ ಉಮೇಶ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ[೯] ಪ್ರಕಟಿಸುವ ಬ್ಯಾಟಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
- ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ೮೬ನೇ ಸ್ಥಾನವನ್ನು ಹೊಂದಿದ್ದಾರೆ.[೧೦]
ಪಂದ್ಯಗಳು
[ಬದಲಾಯಿಸಿ]
ಶತಕಗಳು
[ಬದಲಾಯಿಸಿ]- ಏಕದಿನ ಪಂದ್ಯಗಳಲ್ಲಿ : ೦೨
ಅರ್ಧ ಶತಕಗಳು
[ಬದಲಾಯಿಸಿ]- ಏಕದಿನ ಪಂದ್ಯಗಳಲ್ಲಿ : ೦೬
- ಐಪಿಎಲ್ ಪಂದ್ಯಗಳಲ್ಲಿ : ೧೪
ಉಲ್ಲೇಖಗಳು
[ಬದಲಾಯಿಸಿ]- ↑ https://timesofindia.indiatimes.com/sports/india-in-australia/top-stories/The-second-coming-of-Ambati-Rayudu/articleshow/41417423.cms
- ↑ http://www.telegraph.co.uk/sport/cricket/international/india/3033625/Under-19-International-Rayudu-177-sparks-win.html
- ↑ https://en.wikipedia.org/wiki/Ambati_Rayudu
- ↑ http://www.cricbuzz.com/live-cricket-scorecard/10676/mumbai-indians-vs-rajasthan-royals-2nd-match-indian-premier-league-2010
- ↑ "ಆರ್ಕೈವ್ ನಕಲು". Archived from the original on 2013-08-01. Retrieved 2017-12-01.
- ↑ "ಆರ್ಕೈವ್ ನಕಲು". Archived from the original on 2017-06-30. Retrieved 2017-12-01.
- ↑ http://www.cricbuzz.com/live-cricket-scorecard/12563/zimbabwe-vs-india-1st-odi-india-tour-of-zimbabwe-2013
- ↑ http://www.cricbuzz.com/live-cricket-scorecard/12985/england-vs-india-only-t20i-india-tour-of-england-2014
- ↑ https://www.icc-cricket.com/
- ↑ https://www.icc-cricket.com/rankings/mens/player-rankings/odi/batting
- ↑ http://www.cricbuzz.com/profiles/6311/ambati-rayudu
- ↑ http://www.espncricinfo.com/india/content/player/33141.html