ಮುನಾಫ ಪಟೇಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಮುನಾಫ ಮುಸಾ ಪಟೇಲ್


ಮುನಾಫ ಮುಸಾ ಪಟೇಲ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ಗುಜರಾತ್ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೊನಯ ಬಾರಿ ಗುಜರಾತ್ ಲೈಯನ್ಸ್ ತಂಡದ ಪರ ಆಡಿದ್ದರು.[೧]

ಆರಂಭಿಕ ಜೀವನ[ಬದಲಾಯಿಸಿ]

ಮುನಾಫ ಪಟೇಲ್ ಜುಲೈ ೧೨, ೧೯೮೩ ರಂದು ಗುಜರಾತ್‌ನಲ್ಲಿ ಜನಿಸಿದರು. ಚೆನ್ನೈನಲ್ಲಿ ಎಮ್ ಆರ್ ಎಫ್ ಪೇಸ್ ಫೌಂಡೇಷನ್ಗೆ ಆಯ್ಕೆಯಾಗಿ ಪಟೇಲ್ ಮೊದಲ ಬಾರಿಗೆ ತಮ್ಮ ೨೦ನೇ ವಯಸ್ಸಿನಲ್ಲಿಯೇ ೨೦೦೩ರಲ್ಲಿ ಪ್ರಥಮ ಗುಜರಾತ್ ಪರ ಆಡಿದ್ದರು. ೨೦೦೩ರಲ್ಲಿ ಮುನಾಫ್ ತಮ್ಮ ಆಟದ ವೈಖರಿಯ ಮೂಲಕ ಗುಜರಾತ್ ತಂಡಕ್ಕೆ ಆಡದೇ ಇದ್ದರು ಮುಂಬೈ ತಂಡಕ್ಕೆ ವರ್ಗಾವಣೆ ಒಪ್ಪಂದದ ಮೂಲಕ ಆಯ್ಕೆಯಾದರು. ಇವರು ೨೦೦೬ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು. [೨]

ವೃತ್ತಿ ಜೀವನ[ಬದಲಾಯಿಸಿ]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಮಾರ್ಚ್ ೦೯, ೨೦೦೬ರಲ್ಲಿ ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ದ ನಡೆದ ಎರಡನೇ ಟೆಸ್ಟ್ ಪಂದ್ಯದ ಮೂಲಕ ಮುನಾಫ ಪಟೇಲ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಏಪ್ರಿಲ್ ೦೩, ೨೦೦೬ರಲ್ಲಿ ಮಾರ್ಗೋವದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ನಂತರ ಜನವರಿ ೦೯, ೨೦೧೧ರಲ್ಲಿ ದರ್ಬನ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕೈಕ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು.[೩][೪][೫]


ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಏಪ್ರಿಲ್ ೧೯, ೨೦೦೮ರಂದು ಫಿರೋಜ್ ಷಾ ಕೋಟ್ಲಾ, ದೆಹಲಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಡೆದ ೦೩ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.[೬]


ಪಂದ್ಯಗಳು[ಬದಲಾಯಿಸಿ]

 • ಟೆಸ್ಟ್ ಕ್ರಿಕೆಟ್ : ೧೩ ಪಂದ್ಯಗಳು.[೭]
 • ಏಕದಿನ ಕ್ರಿಕೆಟ್ : ೭೦ ಪಂದ್ಯಗಳು
 • ಟಿ-೨೦ ಕ್ರಿಕೆಟ್ : ೦೩ ಪಂದ್ಯಗಳು.
 • ಐಪಿಎಲ್ ಕ್ರಿಕೆಟ್ : ೬೩ ಪಂದ್ಯಗಳು

ವಿಕೇಟ್‍ಗಳು[ಬದಲಾಯಿಸಿ]

 • ಟೆಸ್ಟ್ ಪಂದ್ಯಗಳಲ್ಲಿ : ೩೫[೮]
 • ಏಕದಿನ ಪಂದ್ಯಗಳಲ್ಲಿ  : ೮೬
 • ಟಿ-೨೦ ಪಂದ್ಯಗಳಲ್ಲಿ  : ೦೪
 • ಐಪಿಎಲ್ ಪಂದ್ಯಗಳಲ್ಲಿ  : ೭೪


ಉಲ್ಲೇಖಗಳು[ಬದಲಾಯಿಸಿ]

 1. https://www.cricketcountry.com/players/munaf-patel/
 2. https://www.cricbuzz.com/profiles/522/munaf-patel
 3. https://www.cricbuzz.com/live-cricket-scorecard/4326/india-vs-england-2nd-test-england-in-india-test-series-2006
 4. https://www.cricbuzz.com/live-cricket-scorecard/4283/india-vs-england-3rd-odi-england-in-india-odi-series
 5. https://www.cricbuzz.com/live-cricket-scorecard/3361/south-africa-vs-india-only-t20i-india-in-south-africa-2010-11
 6. https://www.cricbuzz.com/live-cricket-scorecard/10555/delhi-daredevils-vs-rajasthan-royals-3rd-match-indian-premier-league-2008
 7. http://www.espncricinfo.com/india/content/player/32965.html
 8. https://sports.ndtv.com/cricket/players/765-munaf-patel-playerprofile