ಮೊಹಾಲಿ
Mohali ਮੋਹਾਲੀ Sahibzada Ajit Singh Nagar | |
---|---|
![]() PCA International Cricket Stadium, Mohali, Punjab | |
Country | India |
State | Punjab |
District | Sahibzada Ajit Singh Nagar district |
Named for | Sahibzada Ajit Singh |
Government | |
• Type | Municipality |
• Body | Municipal Corporation Mohali |
• Mayor | Kulwant Singh [೧] |
• Deputy Commissioner | TPS Sidhu[೨] |
Elevation | ೩೧೬ m (೧,೦೩೭ ft) |
Population (2011) | |
• Total | ೧,೭೬,೧೫೨ |
Languages | |
• Official | Punjabi |
ಸಮಯ ವಲಯ | UTC+5:30 (IST) |
Telephone code | +91-172-XXXXXXX |
ವಾಹನ ನೊಂದಣಿ | PB-65 |
Website | http://mcmohali.org/ |
ಭಾರತದ ಪಂಜಾಬ್ ರಾಜ್ಯದಲ್ಲಿರುವ, ಚಂಡೀಘಡದ ಉಪನಗರವಾಗಿರುವ ಮೊಹಾಲಿಯನ್ನು ಈಗ ಅಜಿತಗಡ್ ಎಂದು ಕರೆಯಲಾಗುತ್ತದೆ. ಮೊಹಾಲಿ ಚಂಡೀಘಡದ ಟ್ರೈಸಿಟಿ(ಮೂರು ನಗರ)ಗಳಲ್ಲಿ ಒಂದಾಗಿದೆ, ಚಂಡೀಘಡ ಮತ್ತು ಹರಿಯಾಣದ ಪಂಚಕುಲ ಉಳಿದೆರಡು ನಗರಗಳು. ಮೊಹಾಲಿಯನ್ನು ಗುರು ಗೋವಿಂದ ಸಿಂಗ್ ನ ಮೊದಲ ಮಗ ಸಹಿಬ್ಜಾದಾ ಅಜಿತ್ ಸಿಂಗ್ ನೆನಪಿಗಾಗಿ ಸಾಸ್ (SAS)ನಗರ ಎಂದು ಕೂಡ ಕರೆಯಲಾಗುತ್ತದೆ. ೨೦೦೬ ರಲ್ಲಿ ಪಂಜಾಬ್ ಸರ್ಕಾರ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವವರೆಗೆ ಮೊಹಾಲಿ ರೂಪನಗರ ಜಿಲ್ಲೆಯ ಭಾಗವಾಗಿತ್ತು. ಕಾಲಾನಂತರದಲ್ಲಿ ಚಂಡೀಘಡದ ಹೊರವಲಯದಲ್ಲಿದ್ದ ಈ ನಗರ ಬೃಹತ್ ಅಭಿವೃದ್ದಿ ಹೊಂದಿತು ಮತ್ತು ಈಗ ಇಲ್ಲಿ ಐಟಿ ಕಂಪನಿಗಳು ಅದರಲ್ಲೂ ವಿದೇಶಿ ಕಂಪನಿಗಳಾದ ಕ್ವಾರ್ಕ್, ಡೆಲ್, ಫಿಲಿಪ್ಸ್ ನಂತಹ ಅಂತಾರಾಷ್ಟ್ರೀಯ ಕಂಪನಿಗಳನ್ನು ಕಾಣಬಹುದು.[೩]
ಆಕರ್ಷಣೀಯ ಸ್ಥಳಗಳು[ಬದಲಾಯಿಸಿ]
ಮೊಹಾಲಿಯಲ್ಲಿ ಪ್ರವಾಸಿಗರಿಗೆ ನೋಡಲು ಸಾಕಷ್ಟು ಸ್ಥಳಗಳಿವೆ. ಮೊಹಾಲಿ ಕ್ರಿಕೆಟ್ ಸ್ಟೇಡಿಯಂ ನಿಂದ ಪ್ರಾರಂಭಿಸಿ ಸುಕನ ಕೊಳ, ರಾಕ್ ಗಾರ್ಡನ್, ಚತ್ಬೀರ್ ಜೂ, ಸುಕನ ವನ್ಯಜೀವಿ ಅಭಯಾರಣ್ಯ, ರೋಸ್ ಗಾರ್ಡನ್ ಮತ್ತು ಭಕ್ರಾನಂಗಲ್ ಡ್ಯಾಮ್ ಇವುಗಳು ಮೊಹಾಲಿಯ ಜನಪ್ರಿಯ ಪ್ರವಾಸಿ ಸ್ಥಳಗಳು. ನಗರದಲ್ಲಿ ಸಾಕಷ್ಟು ಧಾರ್ಮಿಕ ಸ್ಥಳಗಳೂ ಇವೆ, ಅವುಗಳಲ್ಲಿ ಗುರುದ್ವಾರ ಅಂಬ ಸಾಹಿಬ್, ಗುರುದ್ವಾರ ನಡಾ ಸಾಹಿಬ್, ಮಾನಸಾ ದೇವಿ ದೇವಾಲಯ ಮತ್ತು ನಭಾ ಸಾಹಿಬ್ ಗಳು ಮುಖ್ಯವಾದವುಗಳು. ಮೊಹಾಲಿಯಿಂದ ರಸ್ತೆ ಮಾರ್ಗದಲ್ಲಿ ಕೆಲವೇ ಘಂಟೆಗಳ ಮಾರ್ಗದಲ್ಲಿ ಶಿಮ್ಲಾ, ಪಂಚಕುಲ ಮತ್ತು ಶರಣ್ಪುರ ಮುಂತಾದ ಪ್ರವಾಸಿ ಸ್ಥಳಗಳು ಕೂಡ ಇವೆ. ಮೊಹಾಲಿಗೆ ಭೇಟಿ ನೀಡುವ ಪ್ರವಾಸಿಗರು ಸಾಮಾನ್ಯವಾಗಿ ಹತ್ತಿರದ ಇತರ ಸ್ಥಳಗಳಿಗೂ ಭೇಟಿ ನೀಡಲೆಂದು ಅನುಕೂಲ ಮಾಡಿಕೊಂಡು ಬರುತ್ತಾರೆ.[೪]
ಮೊಹಾಲಿ ತಲುಪುವ ಮಾರ್ಗ[ಬದಲಾಯಿಸಿ]
ಮೊಹಾಲಿಯನ್ನು ಚಂಡೀಘಡ ದ ರೇಲ್ವೆ ಅಥವಾವಿಮಾನ ನಿಲ್ದಾಣದ ಮೂಲಕ ಸುಲಭವಾಗಿ ತಲುಪಬಹುದು. ಮೋಹಾಲಿಯ ಸುತ್ತಮುತ್ತಲಿನ ಸ್ಥಳಗಳಿಂದಲು ಕೂಡ ಇಲ್ಲಿಗೆ ತಲುಪಲು ಸಾಕಷ್ಟು ಬಸ್ಸುಗಳು ಅಥವಾ ಟ್ಯಾಕ್ಸಿಗಳು ದೊರೆಯುತ್ತವೆ.
ಮೊಹಾಲಿಯ ವಾತಾವರಣ[ಬದಲಾಯಿಸಿ]
ಮೊಹಾಲಿ ಆರ್ದ್ರ ಬೇಸಿಗೆ, ಹಿತಕರ ಚಳಿಗಾಲ ಮತ್ತು ಅನಿರೀಕ್ಷಿತ ಮಳೆ ಒಳಗೊಂಡ ವಿಶಿಷ್ಟ ಲಕ್ಷಣ ಹೊಂದಿರುವ ಒಂದು ಉಪೋಷ್ಣವಲಯದ ಹವಾಮಾನವನ್ನು ಹೊಂದಿದೆ. ಮೊಹಾಲಿ ಪ್ರವಾಸೋದ್ಯಮಕ್ಕೆ ಉತ್ತಮ ಸಮಯ ಅಕ್ಟೋಬರ್ ನಿಂದ ಮಾರ್ಚ್.[೫]
ಉಳೇಖಗಳು[ಬದಲಾಯಿಸಿ]
- ↑ India (1 September 2015). "Mohali's first mayor: Kulwant Singh takes charge, promises bus service, transparency". The Indian Express.
- ↑ "
TPS Sidhu is SAS Nagar DC
". http://www.hindustantimes.com/. 19 April 2013. Retrieved 4 September 2015. External link in|website=
(help) - ↑ http://mohaliflats.in/about-mohali/
- ↑ http://travel.india.com/mohali/places-to-visit/
- ↑ https://www.google.co.in/search?client=ubuntu&channel=fs&q=weather+in+mohali&ie=utf-8&oe=utf-8&gfe_rd=cr&ei=QXh3V_j2AYjB4AKBpZWoCg