೨೦೧೨ ಇಂಡಿಯನ್ ಪ್ರೀಮಿಯರ್ ಲೀಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Infobox cricket tournament

ಐಪಿಎಲ್ ನ ೫ ನೇ ಆವೃತ್ತಿ ೪ನೇ ಎಪ್ರಿಲ್ ನಂದು ಆರಂಭವಾಗಿದೆ. ಮೇ ೨೭ ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಆವೃತ್ತಿಯಲ್ಲಿ ಆಡುವ ಒಟ್ಟು ತಂಡಗಳ ಸಂಖ್ಯೆ ೯. ಬಿಸಿಸಿಐ ನ ಜೊತೆಗಿನ ಒಪ್ಪಂದದ ಕರಾರುಗಳನ್ನು ಉಲ್ಲಂಘಿಸಿದ ಕಾರಣ ಕೊಚ್ಚಿ ಟಸ್ಕರ್ ಕೇರಳ ತಂಡವನ್ನು ಪಂದ್ಯಾವಳಿಯಿಂದ ಉಚ್ಚಾಯಿಟಿಸಲಾಯಿತು. ಬಿಸಿಸಿಐ ಮತ್ತು ತಂಡದ ಮಾಲೀಕರ ನಡುವೆ ಆದ ಒಪ್ಪಂದದ ಪ್ರಕಾರ, ತಂಡದ ಮಾಲೀಕರು ಪ್ರತಿ ವರ್ಷ ಪಂದ್ಯಾವಳೀ ಆರಂಭವಾಗುವ ಮುನ್ನ ಆ ವರ್ಷದ ಪಂದ್ಯಾವಳಿಗೆ ತಗಲುವ ವೆಚ್ಛ ಕ್ಕಾಗಿ ಬಿಸಿಸಿಐಗೆ ಬ್ಯಾಂಕ್ ಖಾತರಿ ಪತ್ರವನ್ನು ನೀಡಬೇಕು. ಕೊಚ್ಚಿ ಟಸ್ಕರ್ ಕೇರಳ ತಂಡದ ಮಾಲೀಕರು, ಈ ಪತ್ರ ನೀಡಲಾಗದ ಕಾರಣ, ಈ ತಂಡವನ್ನು ಉಚ್ಚಾಯಿಟಿಸಲಾಯಿತು. ಈ ಕಾರಣದಿಂದಾಗಿ, ಆಟಗಾರರಿಗೆ ತೊಂದರೆ ಆಗದಿರಲೆಂದು, ಆ ಆಟಗಾರರನ್ನು ಇತರೆ ತಂಡದ ಮಾಲೀಕರು ಖರೀದಿಸ ಬಹುದೆಂದು ಹೇಳಲಾಯಿತು. ಅದರಂತೆ ಕೊಚ್ಚಿ ಟಸ್ಕರ್ ಕೇರಳ ತಂಡದ ಆಟಗಾರರು ಈ ವರ್ಷದ ಆಟಗಾರರ ಹರಾಜಿನಲ್ಲಿ ಭಾಗವಹಿಸಿ, ಇತರೆ ತಂಡದ ಸದಸ್ಯರಾಗಿ ಆಡುತ್ತಿದ್ದಾರೆ. ಇದರಲ್ಲಿ ಚೆನ್ನೈ ಸುಪರ್ ಕಿನ್ಗಸ್ ತಂಡ ಗೆದ್ದಿತು.

ಉಲ್ಲೇಖಗಳು[ಬದಲಾಯಿಸಿ]