ರಾಹುಲ್ ದ್ರಾವಿಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಹುಲ್ ದ್ರಾವಿಡ್

ಭಾರತ
ವೈಯಕ್ತಿಕ ಮಾಹಿತಿ
ಪೂರ್ಣಹೆಸರು ರಾಹುಲ್ ಶರದ್ ದ್ರಾವಿಡ್
ಅಡ್ಡಹೆಸರು ದಿ ವಾಲ್, ಜ್ಯಾಮಿ
ಹುಟ್ಟು ಜನವರಿ ೧೧ ೧೯೭೩
ಇಂದೋರ್, ಮಧ್ಯ ಪ್ರದೇಶ, ಭಾರತ
ಪಾತ್ರ ಬಾಟ್ಸ್ಮನ್, ಓಮ್ಮೊಮ್ಮೆ ವಿಕೆಟ್ ಕೀಪರ್
ಬ್ಯಾಟಿಂಗ್ ಶೈಲಿ ಬಲಗೈ
ಬೌಲಿಂಗ್ ಶೈಲಿ ಬಲಗೈ ಆಫ್ ಸ್ಪಿನ್
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap ೧೫೮) ಜೂನ್ ೨೦ ೧೯೯೬: v ಇಂಗ್ಲೆಂಡ್
ಕೊನೆಯ ಟೆಸ್ಟ್ ಪಂದ್ಯ ಜನವರಿ ೨೪ ೨೦೧೨: v ಆಸ್ಟ್ರೇಲಿಯ
ODI ಪಾದಾರ್ಪಣೆ (cap ೩೪೪) ಏಪ್ರಿಲ್ ೩ ೧೯೯೬: v ಶ್ರೀಲಂಕಾ
ಕೊನೆಯ ODI ಪಂದ್ಯ ಸೆಪ್ಟೆಂಬರ್ ೧೬ ೨೦೧೧: v ಇಂಗ್ಲೆಂಡ್
ODI ಅಂಗಿಯ ಸಂಖ್ಯೆ ೧೯
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
೧೯೯೦ – ಪ್ರಸ್ತುತ ಕರ್ನಾಟಕ
೨೦೦೩ ಸ್ಕಾಟ್ಲೆಂಡ್
೨೦೦೦ ಕೆಂಟ್
೨೦೦೮ – ೨೦೧೦ ರಾಯಲ್ ಚಾಲೆಂಜರ್ಸ್ ಬೆಂಗಳೂರು
೨೦೧೧ – ಪ್ರಸ್ತುತ ರಾಜಸ್ಥಾನ್ ರಾಯಲ್ಸ್
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ODIಗಳುFCLA
ಪಂದ್ಯಗಳು ೧೬೪ ೩೪೪ ೨೯೮ ೪೪೯
ಒಟ್ಟು ರನ್ನುಗಳು ೧೩,೨೮೮ ೧೦,೮೮೯ ೨೩೭೯೪ ೧೫,೨೭೧
ಬ್ಯಾಟಿಂಗ್ ಸರಾಸರಿ ೫೨.೩೧ ೩೯.೧೬ ೫೫.೩೩ ೪೨.೩೦
೧೦೦/೫೦ ೩೬/೬೩ ೧೨/೮೩ ೬೮/೧೧೭ ೨೧/೧೧೨
ಅತೀ ಹೆಚ್ಚು ರನ್ನುಗಳು ೨೭೦ ೧೫೩ ೨೭೦ ೧೫೩
ಬೌಲ್ ಮಾಡಿದ ಚೆಂಡುಗಳು ೧೨೦ ೧೮೬ ೬೧೭ ೪೭೭
ವಿಕೆಟ್ಗಳು
ಬೌಲಿಂಗ್ ಸರಾಸರಿ 39.00 ೪೨.೫೦ ೫೪.೬೦ ೧೦೫.೨೫
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ
೧೦ ವಿಕೆಟುಗಳು ಪಂದ್ಯದಲ್ಲಿ
ಶ್ರೇಷ್ಠ ಬೌಲಿಂಗ್ ೧/೧೮ ೨/೪೩ ೨/೧೬ ೨/೪೩
ಕ್ಯಾಚುಗಳು /ಸ್ಟಂಪಿಂಗ್‍ಗಳು ೨೧೦/0 ೧೯೬/೧೪ ೩೫೩/೧ ೨೨೭/೧೭

ದಿನಾಂಕ ಜನವರಿ ೩೦, ೨೦೧೨ ವರೆಗೆ.
ಮೂಲ: ಕ್ರಿಕ್ಇನ್ಫೊ

ರಾಹುಲ್ ಶರದ್ ದ್ರಾವಿಡ್ (ಜನನ: ಜನವರಿ ೧೧, ೧೯೭೩) - ಇವರು ಭಾರತ ಕ್ರಿಕೆಟ್ ತಂಡದ ಆಟಗಾರರಲ್ಲೊಬ್ಬರು ಮತ್ತು ತಂಡದ ಮಾಜಿ ನಾಯಕ. ಮದ್ಯಪ್ರದೇಶ ಮೂಲದವರಾದ ದ್ರಾವಿಡ್ ಪೂರ್ಣ ಕನ್ನಡಿಗರು. ಟೆಸ್ಟ್ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸುವುದರಲ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ನಂತರ ಮೂರನೇಯ ಸ್ಥಾನ ಪಡೆದ ಭಾರತೀಯ. ಫೆಬ್ರುವರಿ ೧೪, ೨೦೦೭ ರಂದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸಿ ವಿಶ್ವದ ೬ನೇ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ.[೧] ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರ ನಂತರ ರಾಹುಲ್ ದ್ರಾವಿಡ್ ಮೂರನೇ ಭಾರತೀಯ. ಇವರು ಅಕ್ಟೋಬರ್ ೨೦೦೫ರಲ್ಲಿ ಭಾರತದ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿ, ಸೆಪ್ಟೆಂಬರ್ ೨೦೦೭ ರಲ್ಲಿ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.[೨] ರಾಹುಲ್ ಡ್ರಾವಿಡ್ ಭಾರತೀಯ ಪ್ರಿಮಿಯರ್ ಲೀಗ್ ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ೨ ವರ್ಷ್ 'ಐಕಾನ್ ಆಟಗಾರ'ನಾಗಿ ಆಡಿ, ಜೈಪೂರದ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ರಾಹುಲ್ ದ್ರಾವಿಡ್‌ಗೆ, ೨೦೦೦ರಲ್ಲಿ, "ವಿಜಡನ್ ಕ್ರಿಕೆಟರ್" ಎಂದು ಗೌರವಿಸಲಾಗಿದೆ.[೩] . ದ್ರಾವಿಡ್‌ಗೆ, ೨೦೦೪ರಲ್ಲಿ, ವರ್ಷದ ಐಸಿಸಿ ಪ್ಲೆಯರ್ ಹಾಗೂ ವರ್ಷದ ಟೆಸ್ಟ್ ಆಟಗಾರನೆಂದೂ ಸನ್ಮಾನಿಸಲಾಗಿದೆ.[೪] . ರಾಹುಲ್ ದ್ರಾವಿಡ್, ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ (೨೧೦) ಹಿಡಿದ ಆಟಗಾರರಾಗಿರುತ್ತಾರೆ.

೭ ಅಗಸ್ಟ್ ೨೦೧೧ ರಂದು, ಒಂದು ದಿನದ ಹಾಗೂ ಟಿ ೨೦ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.[೫] ೨೦೧೨ ಮಾರ್ಚಿ ೯ ರಂದು ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದರು. ೨೦೧೩ ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಯನ್ನು ಇವರಿಗೆ ನೀಡಲಾಗಿದೆ.

ದಿನಾಂಕ ನವೆಂಬರ್ ೧ ೨೦೧೨ರಂದು ಸಿಡ್ನಿಯಲ್ಲಿ ನಡೆದ ಏಳನೆಯ ಬ್ರಾಡ್ಮನ್ ವಾರ್ಷಿಕ ಪುರಸ್ಕಾರ ಸಮಾರಂಭದಲ್ಲಿ ರಾಹುಲ್ ದ್ರಾವಿಡ್ ಹಾಗು ಗ್ಲೆನ್ ಮ್ಯಾಕ್ಗ್ರಾಥ್ ಅವರುಗಳನ್ನು ಸನ್ಮಾನಿಸಲಾಯಿತು. ಭಾರತದ ಮೂರನೇ ಹಾಗು ನಾಲ್ಕನೆಯ ಅತ್ಯುಚ್ಚ ನಾಗರಿಕ ಸನ್ಮಾನವಾದ ಪದ್ಮ ಭೂಷಣ ಹಾಗು ಪದ್ಮ ಶ್ರೀ ಪುರಸ್ಕಾರಗಳಿಗೂ ಸಹ ರಾಹುಲ್ ದ್ರಾವಿಡ್ ಭಾಜನರಾಗಿದ್ದಾರೆ.

೨೦೧೪ರಲ್ಲಿ ಬೆಂಗಳೂರಿನ ಗೋ ಸ್ಪೋರ್ಟ್ಸ್ ಪ್ರತಿಷ್ಠಾನದ ಸಲಹಾ ಮಂಡಳಿಯ ಸದಸ್ಯರಾಗಿ ರಾಹುಲ್ ದ್ರಾವಿಡ್ ಅವರು ಸೇರ್ಪಡೆಯಾದರು. ಗೋ ಸ್ಪೋರ್ಟ್ಸ್ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಭಾರತದ ಭವಿಷ್ಯ ಒಲಿಂಪಿಕ್ ಸ್ಪರ್ಧಾಳುಗಳನ್ನು ರೂಪಿಸುವ ಯೋಜನೆಯಲ್ಲಿ ರಾಹುಲ್ ದ್ರಾವಿಡ್ ತೊಡಗಿಸಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ರವರ ನೇತೃತ್ವದ ಮೇಲಿನ ಯೋಜನೆಯಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಪ್ರನ್ನೊಯ್ ಕುಮಾರ್, ಈಜುಗಾರಾದ ಶರತ್ ಗಾಯಕ್ವಾಡ್ ಹಾಗು ಯುವ ಗೋಲ್ಫೆರ್ ಚಿಕ್ಕರಂಗಪ್ಪ ರವರು ಸ್ಪರ್ಧಾಳುಗಳನ್ನು ರೂಪಿಸುವ ಪ್ರಥಮ ತಂಡದ ತರಬೇತಿಯಲ್ಲಿ ಭಾಗಿಯಾಗಿದ್ದರು.

ಬಾಲ್ಯ ಮತ್ತು ಕ್ರಿಕೆಟ್ ಜೀವನದ ಮೊದಲ ಘಟ್ಟಗಳು[ಬದಲಾಯಿಸಿ]

ದ್ರಾವಿಡ ಅವರು ತಮ್ಮ ೧೨ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು ಮತ್ತು ಕರ್ನಾಟಕ ರಾಜ್ಯದ ಪರವಾಗಿ ಅಂಡರ್-೧೫, ಅಂಡರ್-೧೭, ಅಂಡರ್-೧೯ ಮಟ್ಟದ ತಂಡಗಳಲ್ಲಿ ಆಡಿದ್ದರು. ಇವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಮಾಜಿ ಕ್ರಿಕೆಟ್ ಆಟಗಾರರಾದ ಕೆಕಿ ತಾರಾಪೊರ್‌ರವರು. ತಮ್ಮ ಶಾಲೆಗೆ ಆಡಿದ ಮೊದಲನೆಯ ಪಂದ್ಯದಲ್ಲೇ ಶತಕ ಬಾರಿಸಿದ ದ್ರಾವಿಡ್, ಬ್ಯಾಟ್ಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು. ಆದರೆ ಇವರು ಮಾಜಿ ಟೆಸ್ಟ್ ಆಟಗಾರರಾದ ಗುಂಡಪ್ಪ ವಿಶ್ವನಾಥ್, ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್ ಮತ್ತು ತಾರಾಪೊರ್ ರವರ ಸಲಹೆಯಂತೆ ವಿಕೆಟ್ ಕೀಪಿಂಗ್ ಮಾಡುವುದನ್ನು ನಿಲ್ಲಿಸಿದರು.

ಕ್ರಿಕೆಟ್[ಬದಲಾಯಿಸಿ]

೧೯೯೬ರಿಂದ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿರುವ ರಾಹುಲ್ ದ್ರಾವಿಡ್ ಬಲಗೈ ಬ್ಯಾಟ್ಸ್‌ಮನ್. ಕೆಕಿ ತಾರಾಪೊರ್‌ರವರ ಬಳಿ ಅಭ್ಯಾಸ ಮಾಡಿದ ಇವರು ಬ್ಯಾಟಿಂಗ್‌ನ ಅತ್ಯುತ್ತಮ ತಾಂತ್ರಿಕತೆಗೆ ಹೆಸರುವಾಸಿ. ಔಟಾಗದೆಯೇ ತೀಕ್ಷ್ಣವಾಗಿ ಬ್ಯಾಟಿಂಗ್ ಮಾಡುವ ಇವರಿಗೆ ಸುದ್ದಿ ಮಾಧ್ಯಮದವರಿಂದ "ದ ವಾಲ್" (ಗೋಡೆ) ಎಂದೂ ಬಣ್ಣಿಸಲಾಗುತ್ತದೆ. ಇವರ ಖಾತೆಯಲ್ಲಿ ಈಗಾಗಲೆ ಟೆಸ್ಟ್ ಕ್ರಿಕೆಟ್‌ನ ೩೬ ಶತಕಗಳು (ಸರಾಸರಿ ೫೪ರಲ್ಲಿ) ಇವೆ. ಒಂದು ದಿನದ ಅಂತರ ರಾಷ್ಟ್ರೀಯ ಪಂದ್ಯಗಳಲ್ಲಿ ಇವರ ಸರಾಸರಿ ೩೯ (ಸ್ಟ್ರೈಕ್ ರೇಟ್ - ೬೯). ಇವರು ಆಗಿಂದಾಗ್ಗೆ ತಂಡಕ್ಕೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು.

ಭಾರತ ಹಾಗೂ ಕರ್ನಾಟಕಕ್ಕೆ ಆಡುವುದಲ್ಲದೆ ದ್ರಾವಿಡ್ ಕೆಂಟ್ ಹಾಗೂ ಸ್ಕಾಟ್ಲ್ಯಾಂಡ್‌ಗೆ ಕೂಡ ಆಡಿದ್ದಾರೆ. ಇವರ ಚೊಚ್ಚಲ ಟೆಸ್ಟ್ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತದ ೧೯೯೬ರ ಇಂಗ್ಲೆಂಡ್‌ ಪ್ರವಾಸದ ಎರಡನೆ ಯ ಟೆಸ್ಟ್ ಪಂದ್ಯ. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅದೇ ವರ್ಷ ಸಿಂಗಪೂರಿನಲ್ಲಿ ನಡೆದ ಸಿಂಗರ್ ಕಪ್‌ನ ಶ್ರೀಲಂಕಾ ವಿರುದ್ಧದ ಪಂದ್ಯದಿಂದ ಪಾದಾರ್ಪಣೆ ಮಾಡಿದರು. ವಿಸ್ಡನ್ ಸಂಸ್ಥೆಯು ಇವರನ್ನು ೨೦೦೦ನೆ ವರ್ಷದಲ್ಲಿ, ವರ್ಷದ ಕ್ರಿಕೆಟಿಗನೆಂದು ಪುರಸ್ಕರಿಸಿತು.

೨೦೦೪ ರಲ್ಲಿ ಇವರಿಗೆ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿತು. ೨೦೦೪, ಸೆಪ್ಟೆಂಬರ್ ೭ರಂದು ಇವರಿಗೆ ಐಸಿಸಿಯು ವರ್ಷದ ಆಟಗಾರನೆಂದೂ, ವರ್ಷದ ಅತ್ಯುತ್ತಮ ಟೆಸ್ಟ್ ಆಟಗಾರ ನೆಂದೂ ಗೌರವಿಸಿತು. ೨೦೦೪ರಲ್ಲಿ ಇವರು ಭಾರತ ತಂಡದ ಉಪನಾಯಕರಾಗಿದ್ದರು. ಕೆಲವೊಮ್ಮೆ ಸೌರವ್ ಗಂಗೂಲಿ ಇಲ್ಲದಿರುವಾಗ ಭಾರತ ತಂಡದ ನಾಯಕತ್ವ ವಹಿಸಿದ್ದರು.

೨೦೦೫ರಲ್ಲಿ ಭಾರತದ ನಾಯಕತ್ವ ವಹಿಸಿಕೊಂಡ ಇವರು, ಶ್ರೀಲಂಕಾ ವಿರುದ್ಧ ಸರಣಿ ಜಯ ಪಡೆದು, ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತದಲ್ಲಿ ನಡೆದ ಸರಣಿಯನ್ನು ೨-೨ರಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಡಾನ್ ಬ್ರಾಡ್ಮನ್ ಮತ್ತು ಸಚಿನ್ ತೆಂಡೂಲ್ಕರ್ ಬಳಿಕ ವಿಶ್ವದ ಆಗ್ರಮಾನ್ಯ ಆಟಗಾರ ಎಂದು ಕರೆಸಿಕೊಳ್ಳುವ ರಾಹುಲ್ ಹದಿನಾರು ವರ್ಷದ ಅಂತರ್ ರಾಷ್ಟ್ರೀಯ ಕ್ರಿಕೆಟ್ ನ ಸಾಧನೆಗಳು ಮತ್ತು ಧಾಖಲೆಗಳು ಒಂದೆರಡಲ್ಲ. ಸಚಿನ್ ಬಳಿಕ ಭಾರತದ ಪರ ಅತ್ಯಂತ ಹೆಚ್ಹು ಟೆಸ್ಟ್ ರನ್ (೧೩,೨೮೮) ಗಳಿಸಿದಾತ. ಮೂರನೇ ಕ್ರಮಾಂಕದಲ್ಲಿ ಬಂದು ಒಟ್ಟು ಹತ್ತು ಸಾವಿರ ರನ್ ಹೊಡೆದ ವಿಶ್ವದ ಏಕೈಕ ಕ್ರಿಕೆಟಿಗ. ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯದಿಕ (88) ಶತಕದ ಜೊತೆಯಾಟ ನೀಡಿದಾತ. ಟೆಸ್ಟ್ ಆಡುವ ಎಲ್ಲ ಹತ್ತು ದೇಶಗಳ ವಿರುದ್ದ ಶತಕ ಬಾರಿಸಿರುವ ವಿಶ್ವದ ಏಕೈಕ ಆಟಗಾರ. ಟೆಸ್ಟ್ನಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಹು ಚೆಂಡುಗಳನ್ನು (೩೧೨೫೮)ಎದುರಿಸಿರುವ ಆಟಗಾರ. ಸೊನ್ನೆ ಹೊಡೆಯದೆ ಅತ್ಯದಿಕ (೧೭೩) ಇನ್ನಿಂಗ್ಸ್ ಗಳನ್ನು ಸತತವಾಗಿ ಆಡಿರುವ ವಿಶ್ವದ ಏಕೈಕ ಆಟಗಾರ. ಡಾನ್ ಬ್ರಾಡ್ಮನ್ ನಂತರ ಸತತ ಮೂರು ಸರಣಿಗಳಲ್ಲಿ ಡಬಲ್ ಸೆಂಚುರಿ ಹೊಡೆದ ಏಕೈಕ ಕ್ರಿಕೆಟಿಗ.

ಆಗಸ್ಟ್ ೨೦೧೧ರಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ೧೦,೦೦೦ ರನ್ ಗಳಿಸಿರುವ ರಾಹುಲ್ ದ್ರಾವಿಡ್ ಸಾಧನೆಯನ್ನು ನೆನಪಿಸುವ ಗೋಡೆಯೊಂದನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದಾರೆ. ಗೋಡೆಯ ಮೇಲೆ ದ್ರಾವಿಡ್ ಆಟದ ಮೂರು ಗುಣಗಳಾದ ಬದ್ಧತೆ, ದೃಢತೆ ಹಾಗೂ ಉತ್ಕೃಷ್ಟತೆಯನ್ನು ಬಿಂಬಿಸಲಾಗಿದೆ. ಕೆಎಸ್ ಸಿಎ ಹಾಗೂ ಸ್ಕೈಲೈನ್ ಬಿಲ್ಡರ್ಸ್ ಈ ಗೋಡೆಗೆ 'ದಿ ವಾಲ್' ಎಂದೇ ಹೆಸರಿಸಿವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 'ದಿ ವಾಲ್' ಅನ್ನು ಅನಾವರಣಗೊಳಿಸಿದ್ದರು. ಈ ಗೋಡೆಯು ೧೫ ಅಡಿ ಎತ್ತರ ಹಾಗೂ ೨೭ ಅಡಿ ಅಗಲವಿದ್ದು ಇದರ ನಿರ್ಮಾಣಕ್ಕಾಗಿ ೧೦,೦೦೦ ಇಟ್ಟಿಗೆಗಳನ್ನು ಬಳಸಲಾಗಿದೆ. ಕವರ್ ಡ್ರೈವ್ ಭಂಗಿಯ ಶಿಲ್ಪ ಹೊಂದಿದ್ದು, ಗೋಡೆಗೆ ವಿದ್ಯುನ್ಮಾನ ಪರದೆಯನ್ನು ಅಳವಡಿಸಲಾಗಿದ್ದು, ದ್ರಾವಿಡ್ ಪ್ರತಿ ರನ್ ಗಳಿಸುತ್ತಿದ್ದಾಗ ಒಟ್ಟು ರನ್ ಇಲ್ಲಿನ ವಿದ್ಯುನ್ಮಾನ ಪರದೆಯಲ್ಲಿ ಮೂಡುತಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದ " ದಿ ವಾಲ್ "

೨೦೧೨ ಮಾರ್ಚಿ ೯ ರಂದು ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದರು.

ಪ್ರತಿನಿಧಿಸಿದ ತಂಡಗಳು[ಬದಲಾಯಿಸಿ]

Dravid in action during a Test match

ಅಂತರ್ರಾಷ್ಟ್ರೀಯ[ಬದಲಾಯಿಸಿ]

 • ಭಾರತ
 • ಏಸಿಸಿ ಏಷ್ಯಾ ‍೧೧
 • ಐಸಿಸಿ ವರ್ಡ್ಲ ೧೧
 • ಎಮ್‌ಸಿಸಿ

ದೇಶಿಯ[ಬದಲಾಯಿಸಿ]

 • ಕರ್ನಾಟಕ
 • ಸೌಥ್ ಝೋನ್

ಇಂಡಿಯನ್ ಫ್ರಿಮಿಯರ್ ಲೀಗ್[ಬದಲಾಯಿಸಿ]

ಇಂಗ್ಲೀಷ್ ಕೌಂಟಿ[ಬದಲಾಯಿಸಿ]

 • ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್
 • ಸ್ಕೌಟಿಶ್ ಕ್ರಿಕೆಟ್ ಟೀಮ್

ಪ್ರಶಸ್ತಿಗಳು / ಗೌರವಗಳು[ಬದಲಾಯಿಸಿ]

 • ೧೯೯೯: ಸಿಯೆಟ್ ಕ್ರಿಕೆಟರ್ ಆಫ್ ೧೯೯೯ ವರ್ಲ್ಡ್ ಕ
 • ೨೦೦೦: 'ವಿಸ್ಡನ್ ವರ್ಷದ ಕ್ರಿಕೆಟಿಗ' ಪ್ರಶಸ್ತಿ.
 • ೨೦೦೪: 'ಸರ್ ಗಾರ್ಫೀಲ್ಡ್ ಸೋಬರ್ಸ್' ಪ್ರಶಸ್ತಿ.( ವರ್ಷದ ಐಸಿಸಿ ಕ್ರಿಕೆಟಿಗನಿಗೆ ಕೊಡಲಾಗುತ್ತದೆ)
 • ೨೦೦೪: ಭಾರತ ಸರ್ಕಾರದ ಪದ್ಮಶ್ರಿ ಪ್ರಶಸ್ತಿ.
 • ೨೦೦೪; ವರ್ಷದ ಐಸಿಸಿ ಟೆಸ್ತ್ ಆಟಗಾರ.
 • ೨೦೦೬: ಐಸಿಸಿ ಟೆಸ್ಟ್ ತಂಡದ ನಾಯಕ.
 • ೨೦೧೩: ಪದ್ಮಭೂಷಣ ಪ್ರಶಸ್ತಿ
 • ಗೌರವ ಡಾಕ್ಟರೇಟ್‌ ನಿರಾಕರಣೆ : ಬೆಂಗಳೂರು ವಿಶ್ವವಿದ್ಯಾಲಯವು 52ನೇ ಘಟಿಕೋತ್ಸವದ ಅಂಗವಾಗಿ ತಮಗೆ ನೀಡಲು ನಿರ್ಧರಿಸಿದ್ದ ಗೌರವ ಡಾಕ್ಟರೇಟ್‌ ಪದವಿಯನ್ನು ನಯವಾಗಿ ನಿರಾಕರಿಸಿದ ರಾಹುಲ್‌ ದ್ರಾವಿಡ್‌ ಸಂಶೋಧನೆ ಮಾಡಿಯೇ ಡಾಕ್ಟರೇಟ್‌ ಪಡೆಯುವುದಾಗಿ ತಿಳಿಸಿದ್ದಾರೆ.

ಟೆಸ್ಟn ಕ್ರಿಕೆ.mಟ್mm ಪ್ರಶಸ್ತಿಗಳು .[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

http://deepakkasavanahally.wordpress.com/2012/03/12/dravid/ದ್ರಾವಿಡ್[ಶಾಶ್ವತವಾಗಿ ಮಡಿದ ಕೊಂಡಿ] ಮೈದಾನದಲ್ಲಿನ ಮರೆಯಲಾಗದ ಕ್ಷಣಗಳು.

ಉಲ್ಲೇಖಗಳು[ಬದಲಾಯಿಸಿ]

 1. "Cricinfo - Records - India - Test matches - Most runs". Retrieved 2007-05-06.
 2. "Resignation from India Cricket Captiancy". Content-usa.cricinfo.com. Retrieved 20 December 2010.
 3. "Cricketer of the Year, 2000– Rahul Dravid". Content.cricinfo.com. Retrieved 20 December 2010.
 4. "ICC Awards: Look no further Dravid". Espnstar.com. 5 September 2008. Archived from the original on 21 ಜುಲೈ 2011. Retrieved 20 December 2010.
 5. The Times Of India. 6 August 2011 http://timesofindia.indiatimes.com/sports/cricket/series-tournaments/india-in-england/top-stories/Rahul-Dravid-set-to-retire-from-T20s-and-ODIs/articleshow/9510285.cms. Retrieved 6 August 2011. {{cite news}}: |first= missing |last= (help); Missing or empty |title= (help); Unknown parameter |deadurl= ignored (help) [ಮಡಿದ ಕೊಂಡಿ]