ರೋಜರ್ ಬಿನ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋಜರ್ ಬಿನ್ನಿ
ಜನನಜುಲೈ ೧೯, ೧೯೫೯
ಬೆಂಗಳೂರು
ವೃತ್ತಿಕ್ರಿಕೆಟ್ ಆಲ್ ರೌಂಡರ್

ರೋಜರ್ ಬಿನ್ನಿ (ಜುಲೈ ೧೯, ೧೯೫೫) ಭಾರತೀಯ ಕ್ರಿಕೆಟ್ ಆಟಗಾರರಾಗಿ ಪ್ರಖ್ಯಾತರಾಗಿದ್ದಾರೆ.

ಭಾರತ ವಿಶ್ವಕಪ್ ಗೆದ್ದ ತಂಡದಲ್ಲಿ[ಬದಲಾಯಿಸಿ]

ಭಾರತ ಪ್ರಪ್ರಥಮವಾಗಿ ವಿಶ್ವಕಪ್ ಕ್ರಿಕೆಟ್ ಗೆದ್ದದ್ದನ್ನು ನೆನಪಿಟ್ಟುಕೊಂಡಿರುವವರಿಗೆ ಖಂಡಿತವಾಗಿ ರೋಜರ್ ಬಿನ್ನಿ ನೆನಪಿನಲ್ಲಿರುತ್ತಾರೆ. ಬಿನ್ನಿ ಅವರು ಹುಟ್ಟಿದ್ದು ಜುಲೈ ೧೯, ೧೯೫೫ರಲ್ಲಿ.

ವಿಶ್ವಕಪ್ ೧೯೮೩ರಲ್ಲಿ ಭಾರತಕ್ಕೆ ಅಚ್ಚರಿಯ ಗೆಲುವು ತಂದ ಅಚ್ಚರಿಯ ಹುಡುಗರಲ್ಲಿ ರೋಜರ್ ಬಿನ್ನಿ ಪ್ರಮುಖರು. ಆ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ೧೮ ವಿಕೆಟ್ ಪಡೆದವರು ರೋಜರ್ ಬಿನ್ನಿ. ಮಧ್ಯಮ ವೇಗದ ಬೌಲರ್ ಆಗಿ ವೃತ್ತಿ ಜೀವನದಲ್ಲಿ ಸಾಮಾನ್ಯವೆನ್ನಬಹುದಾದ ಯಶಸ್ಸು ಕಂಡ ರೋಜರ್ ಬಿನ್ನಿ ಅವರ ಬೌಲಿಂಗಿಗೆ ಇಂಗ್ಲೆಂಡಿನ ಪಿಚ್ಚುಗಳು ಹೇಳಿ ಮಾಡಿಸಿದಂತಿವೆಯೇನೋ ಎನ್ನುವಂತಹ ಅಪ್ರತಿಮ ಪ್ರದರ್ಶನ ನೀಡಿದರು. ೧೯೮೫ರಲ್ಲಿ ಭಾರತ ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಅಂಡ್ ಹೆಡ್ಜಸ್ ವಿಶ್ವಸರಣಿ ಪಂದ್ಯಗಳ ಗೆಲುವು ಸಾಧಿಸುವಲ್ಲಿ ಕೂಡಾ ಇದೇ ಮಾದರಿಯ ತೋರಿದ ಶ್ರೇಷ್ಠ ಸಾಧನೆ ತೋರಿದ ಬಿನ್ನಿ ಅಲ್ಲೂ ಹದಿನೇಳು ವಿಕೆಟ್ ಗಳಿಸಿ ಭಾರತದ ಗೆಲುವಿನ ಪ್ರಮುಖ ಪಾಲುದಾರರಾಗಿದ್ದರು.

ವೈಶಿಷ್ಯತೆ[ಬದಲಾಯಿಸಿ]

ಭಾರತಕ್ಕೆ ಮೊಟ್ಟ ಮೊದಲು ವಿಶ್ವಕಪ್ ತಂದುಕೊಟ್ಟವರು ಕರ್ನಾಟಕದವರು. ಕಪಿಲ್ ದೇವ್ ಸಾರಥ್ಯದಲ್ಲಿ ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್ ಗೆಲುವಿನ ಗರಿ ಮುಡಿಗೇರಿದೆ ಅಂತ ಎಲ್ಲರೂ ಹೇಳ್ತಾರೆ.. ಆದರೆ ಆ ತಂಡದಲ್ಲಿದ್ದ ಅದೆಷ್ಟೋ ಅದ್ಭುತ ಆಟಗಾರರು ಇದೀಗ ನಿಶಬ್ಧತೆಯ ಕತ್ತಲೆಗೆ ಸರಿದು ಹೋಗಿದ್ದಾರೆ.. ಅಂಥವರಲ್ಲಿ ಕರ್ನಾಟಕದ ಹೆಮ್ಮೆಯ ಪುತ್ರನೂ ಒಬ್ಬನಿದ್ದ ಅನ್ನೋದನ್ನು ಜನರು ಮರೆತೇ ಬಿಟ್ಟಿದ್ದಾರೆ.. ಹೌದು.. ಅವರೇ ರೋಜರ್ ಮೈಕೆಲ್ ಹಂಫ್ರೆ ಬಿನ್ನಿ. ಜುಲೈ 19, 1955 ರಲ್ಲಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ಜನಿಸಿದ್ದರು.

ಅತ್ಯದ್ಭುತ ಗೂಗ್ಲಿಕಾರ ಎಂದೇ ಕರೆಯಬಹುದಾದ ಬೌಲರ್ ಗಳಲ್ಲಿ ರೋಜರ್ ಬೆನ್ನಿ ಕೂಡ ಒಬ್ಬರಾಗಿದ್ರು. 1983 ರ ವಿಶ್ವಕಪ್ ಕ್ರಿಕೇಟ್ ರಣರಂಗದಲ್ಲಿ ಎದುರಾಳಿಗಳ ವಿಕೆಟ್ ಗಳನ್ನು ಚಂಡುಗಳಿಂದ ನೆಲಕ್ಕುರುಳಿಸಿದ ದಿಟ್ಟ ದೇಶಭಕ್ತ. ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ.. 1983 ರ ವಿಶ್ವಕಪ್ ಕ್ರಿಕೇಟ್ ಸಮಯದಲ್ಲಿ 18 ವಿಕೆಟ್ ಗಳನ್ನು ನೆಲಕ್ಕುರುಳಿಸುವ ಮೂಲಕ ಎದುರಾಳಿಗಳಿಗೆ ಸಿಂಹ ಸ್ವಪ್ನವಾಗಿ ಕಂಡಿದ್ದು ಕಪಿಲ್ ದೇವ್ ಅಲ್ಲ.. ಬದಲಾಗಿ ಕರ್ನಾಟಕದ ರೋಜರ್ ಬೆನ್ನಿ... ಕ್ರಿಕೇಟ್ ಕದನದಲ್ಲಿ ಸೋಲಿನ ಸುಳಿಗೆ ಸಿಲುಕಲೊಪ್ಪದ ಈ ವಿಕೆಟ್ ಬೇಟೆಗಾರ 1985 ರ ವರ್ಲ್ಡ್ ಸೀರೀಸ್ ಕ್ರಿಕೇಟ್ ಚಾಂಪಿಯನ್ ಶಿಪ್ ನಲ್ಲಿ ಮತ್ತದೇ ವಿಕೇಟ್ ಘರ್ಜನೆಯನ್ನು ಮಾಡಿದ್ರು.. ಸಿಂಹಘರ್ಜನೆಯ ಬೌಲಿಂಗ್ ಗಳಿಗೆ ಸ್ಟೇಡಿಯಂನ ನೆಲಗಳೇ ಅದುರಿಹೋಗುವಂತಾಗಿದ್ದವು.. ಪರಿಣಾಮವಾಗಿ 17 ವಿಕೆಟ್ ಗಳು ನೆಲಕ್ಕುರುಳಿದ್ದವು.

ಒಟ್ಟಾರೆ ಕ್ರಿಕೇಟ್ ಬದುಕಿನಲ್ಲಿ ಗೂಗ್ಲಿಕಾರ ಭಾರತಕ್ಕಾಗಿ ಆಡಿದ್ದು 27 ಟೆಸ್ಟ್ ಗಳು ಮತ್ತು 72 ಏಕದಿನ ಪಂದ್ಯಗಳು.. ಬಿನ್ನಿ ಅಂತರ್ ರಾಷ್ಟ್ರೀಯ ಕ್ರಿಕೇಟ್ ಬದುಕನ್ನು ಆರಂಭಿಸಿದ್ದು ಕರ್ನಾಟಕದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ.. 1979 ರಲ್ಲಿ ಮೊಟ್ಟ ಮೊದಲ ಬಾರಿಗೆ ತಾಯ್ನಾಡಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದ ವಿಕೇಟ್ ಗಳನ್ನು ನೆಲಕ್ಕುರುಳಿಸುವುದರ ಮೂಲಕ ಅಮೋಘ ಪ್ರದರ್ಶನ ನೀಡಿದರು. ಇಮ್ರಾನ್ ಖಾನ್, ಸರ್ಫರಾಜ್ ನವಾಜ್ ರಂತಹ ಶ್ರೇಷ್ಠರ ಬೌಲಿಂಗ್ ವಿರುದ್ಧ ಆಡಿ ಪ್ರಥಮ ಟೆಸ್ಟ್ನಲ್ಲಿಯೇ 46 ರನ್ನುಗಳನ್ನು ಜೇಬಿಗಿಳಿಸಿಕೊಂಡರು.

ನಾಯಕ ಕಪಿಲ್ ದೇವ್ ರೊಂದಿಗೆ ಜೊತೆಗೂಡಿ, 1983 ರಲ್ಲಿ ಕ್ರಿಕೇಟ್ ವಿಶ್ವಕಪ್ ನ ವಿಜಯದ ಮುಕುಟವನ್ನು ಭಾರತಕ್ಕೆ ತಂದುಕೊಡುವಲ್ಲಿ ಸಫಲರಾದರು.. ಭಾರತೀಯ ಕ್ರಿಕೇಟ್ ತಂಡದಲ್ಲಿ ಸ್ಥಾನಗಳಿಸಿದ ಮೊಟ್ಟ ಮೊದಲ ಆಂಗ್ಲೋ ಇಂಡಿಯನ್ ಇವರಾಗಿದ್ದು ಇವರ ಪುತ್ರ ಸ್ಟುವರ್ಟ ಕೂಡ ತಂದೆಯ ಹಾದಿಯನ್ನೇ ತುಳಿಯುತ್ತಿದ್ದಾರೆ.. ಕರ್ನಾಟಕ ತಂಡದಲ್ಲಿದ್ದುಕೊಂಡು ತಂದೆಯಂತೆ ಕ್ರಿಕೇಟ್ ಲೋಕಕ್ಕೊಂದು ವಿಶೆಷ ಕಾಣಿಕೆ ನೀಡುವ ಹುಮ್ಮಸ್ಸಿನಲ್ಲಿದ್ದಾರೆ.

ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಗಣನೀಯ ಪ್ರತಿಭೆ ಹೊಂದಿದ್ದ ಬಿನ್ನಿ ಅಂದಿನ ಕಾಲದ ಒಬ್ಬ ಆಲ್ ರೌಂಡರ್ ಅಗಿದ್ದರು. ರೋಜರ್ ಬೆನ್ನಿ ಶಾಲೆಯ ದಿನಗಳಲ್ಲಿಯೇ ಜಾವೆಲಿನ್ ಎಸೆತದಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ್ದರು. ಫುಟ್ ಬಾಲ್, ಹಾಕಿಯಲ್ಲಿ ಕೂಡಾ ತಮ್ಮ ಪ್ರತಿಭೆ ಪ್ರದರ್ಶಿಸಿದ ಸಾಧಕನಿಗೆ ಓದಿನ ದಾಹವೂ ಇತ್ತು.. ಇವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಪದಾಧಿಕಾರಿಗಳಾಗಿ, ಕ್ರಿಕೆಟ್ ಆಯ್ಕೆದಾರರಾಗಿ ಮತ್ತು ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಸೆಂಟ್ ಜರ್ಮೇನ್ ಶಾಲೆಯಲ್ಲಿ ಮೊದಲಿಗೆ ವಿದ್ಯಾಭ್ಯಾಸ ಆರಂಭಿಸಿದ ರೋಜರ್ ಬೆನ್ನಿ, ನಂತರ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲಿನಲ್ಲಿ ಶಿಕ್ಷಣ ಮುಂದುವರೆಸಿದ್ದರು.. ಇಲ್ಲೇ ನೋಡಿ ಸೃಷ್ಟಿಯಾಗಿದ್ದು ಮತ್ತೊಂದು ಮಹತ್ತರವಾದ ಇತಿಹಾಸ.. ಜಾವ್ಲಿನ್ ತ್ರೋ ನಲ್ಲಿ ರಾಷ್ಟ್ರಮಟ್ಟದಲ್ಲಿ ದಾಖಲೆ ಮಾಡಿಬಿಟ್ಟರು.. ಬೆಂಗಳೂರಿನ ಬೆನ್ಶನ್ ಟೌನ್ ನಲ್ಲಿ ಇವರ ಅಬ್ಬರದ ಆಟದ ಆರ್ಭಟ ಕ್ರಿಕೇಟ್ ಸಾಧನೆಗೆ ಪೂರಕವಾಗಿತ್ತು.

ರೋಜರ್ ಬೆನ್ನಿ ಮದುವೆಯಾಗಿದ್ದು ಬಾಲ್ಯದ ಗೆಳತಿ, ಪ್ರೇಯಸಿಯಾಗಿದ್ದ ಸಿಂಥಿಯಾ ಅವರನ್ನು.. ತಂಗಿಯ ಆಪ್ತ ಗೆಳತಿಯಾಗಿದ್ದ ಸಿಂಥಿಯಾರನ್ನು ರೋಜರ್ ಪ್ರೀತಿಸಿ ವರಿಸಿದ್ದರು.. ಆ ಪ್ರೀತಿಯ ಫಲವಾಗಿಯೇ ಲಾರಾ , ಲೀಸಾ, ಮತ್ತು ಸ್ಟುವರ್ಟ ಎಂಬ ಮೂವರು ಮಕ್ಕಳು ಈ ಜಗತ್ತಿಗೆ ಕಣ್ತೆರೆದುಕೊಂಡಿದ್ದಾರೆ.