ಶಾರ್ದೂಲ್ ಠಾಕೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search


ಶಾರ್ದೂಲ್ ನರೇಂದ್ರ ಠಾಕೂರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ಮುಂಬೈ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರ ಆಡುತ್ತಾರೆ.[೧][೨]

ಆರಂಭಿಕ ಜೀವನ[ಬದಲಾಯಿಸಿ]

ಶಾರ್ದೂಲ್ ಠಾಕೂರ್ ಅಕ್ಟೋಬರ್ ೧೬, ೧೯೯೧ ರಂದು ಮಹಾರಾಷ್ಟ್ರದ ಪಾಲ್ಗಾರ್‌ನಲ್ಲಿ ಜನಿಸಿದರು. ೨೦೧೩-೧೪ರ ರಣಜಿ ಟ್ರೋಫೀಯಲ್ಲಿ ಇವರು ೧೦ ಪಂದ್ಯಗಳಲ್ಲಿ ೪೮ ವಿಕೆಟ್‍ಗಳನ್ನು ಪಡೆದರು. ನಂತರ ೨೦೧೬ರಲ್ಲಿ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲಾಯಿತು ಆದರೂ ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ೨೦೧೭ರಲ್ಲಿ ಏಕದಿನ ಕ್ರಿಕೆಟ್‍ಗೆ ಆಯ್ಕೆಯಾಗಿ ಅವಕಾಶ ಪಡೆದರು.[೩][೪]


ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಮೇ ೦೧, ೨೦೧೫ರಂದು ಫಿರೋಜ್ ಷಾ ಕೋಟ್ಲಾ, ದೆಹಲಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಡೆದ ೩೧ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಕಿಂಗ್ಸ್ ೧೧ ಪಂಜಾಬ್ ತಂಡದಿಂದ ಐಪಿಎಲ್ನಲ್ಲಿ ಪಾದಾರ್ಪಣೆ ಮಾಡಿದರು.[೫]


ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಆಗಸ್ಟ್ ೩೧, ೨೦೧೭ರಲ್ಲಿ ಶ್ರೀಲಂಕಾದ ಕೊಲಂಬೊನಲ್ಲಿ ಶ್ರೀಲಂಕಾ ವಿರುದ್ದ ನಡೆದ ನಾಲ್ಕನೇ ಏಕದಿನ ಪಂದ್ಯದ ಮೂಲಕ ಶಾರ್ದೂಲ್ ಠಾಕೂರ್‌ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಫೆಬ್ರವರಿ ೨೧, ೨೦೧೮ರಲ್ಲಿ ದಕ್ಷಿಣ ಆಫ್ರಿಕಾದ ಸೆಂಚೂರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ೨ನೇ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.[೬][೭]

ಪಂದ್ಯಗಳು[ಬದಲಾಯಿಸಿ]

 • ಏಕದಿನ ಕ್ರಿಕೆಟ್ : ೦೫ ಪಂದ್ಯಗಳು.[೮]
 • ಟಿ-೨೦ ಕ್ರಿಕೆಟ್ : ೦೭ ಪಂದ್ಯಗಳು.
 • ಐಪಿಎಲ್ ಕ್ರಿಕೆಟ್ : ೨೬ ಪಂದ್ಯಗಳು.

ವಿಕೇಟ್‍ಗಳು[ಬದಲಾಯಿಸಿ]

 • ಏಕದಿನ ಪಂದ್ಯಗಳಲ್ಲಿ  : ೦೬
 • ಟಿ-೨೦ ಪಂದ್ಯಗಳಲ್ಲಿ  : ೦೮
 • ಐಪಿಎಲ್ ಪಂದ್ಯಗಳಲ್ಲಿ  : ೨೮


ಉಲ್ಲೇಖಗಳು[ಬದಲಾಯಿಸಿ]

 1. http://www.espncricinfo.com/india/content/player/475281.html
 2. https://www.iplt20.com/teams/chennai-super-kings/squad/1745/shardul-thakur
 3. https://www.cricbuzz.com/profiles/8683/shardul-thakur
 4. https://timesofindia.indiatimes.com/topic/Shardul-Thakur
 5. https://www.cricbuzz.com/live-cricket-scorecard/14625/delhi-daredevils-vs-kings-xi-punjab-31st-match-indian-premier-league-2015
 6. https://www.cricbuzz.com/live-cricket-scorecard/18465/sri-lanka-vs-india-4th-odi-india-tour-of-sri-lanka-2017
 7. https://www.cricbuzz.com/live-cricket-scorecard/19167/south-africa-vs-india-2nd-t20i-india-tour-of-south-africa-2017-18
 8. https://www.news18.com/cricketnext/profile/shardul-thakur/63345.html