ಸುರತ್ಕಲ್

ವಿಕಿಪೀಡಿಯ ಇಂದ
Jump to navigation Jump to search
ಸುರತ್ಕಲ್
India-locator-map-blank.svg
Red pog.svg
ಸುರತ್ಕಲ್
ರಾಜ್ಯ
 - ಜಿಲ್ಲೆ
ಕರ್ನಾಟಕ
 - ದಕ್ಷಿಣ ಕನ್ನಡ
ನಿರ್ದೇಶಾಂಕಗಳು 12.9833° N 74.7833° E
ವಿಸ್ತಾರ
 - ಎತ್ತರ
 km²
 - 0 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 575014
 - +0824
 - KA-19

ಸುರತ್ಕಲ್ ಮಂಗಳೂರು ತಾಲುಕು ಈಗ ಜಿಲ್ಲೆ ಒಂದು ನಗರವಾಗಿದೆ. ಇಲ್ಲಿನ ಅಂಚೆ ಕಛೇರಿ ಸಂಖ್ಯೆ ೫೭೫೦೧೪. ಮಂಗಳೂರಿಂದ ಉಡುಪಿಗೆ ಹಾದು ಹೊಗುವ ರಾಷ್ಟ್ರಿಯ ಹೆದ್ದಾರಿ ೧೭ರಲ್ಲಿರುವ ಸುಂದರ ನಗರವಾಗಿದೆ. ಇಲ್ಲಿ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ (ಎನ್ ಐ ಟಿ ಕೆ) ಇದೆ. ಹಾಗು ಕರ್ನಾಟಕ ಪ್ರಾದೇಶಿಕ ಯಂತ್ರಜ್ಞಾನ ಕಾಲೇಜು ( ಕೆ. ಅರ್. ಇ. ಸಿ) ತಲೆ ಎತ್ತಿ ನಿಂತಿದೆ. ಪಡುವಣ ದಿಕ್ಕಿಗೆ ಅರಬ್ಬಿ ಸಮುದ್ರ ತೀರವಿದೆ. ಇಲ್ಲಿಗೆ ಸಾವಿರಾರು ಯಾತ್ರಾರ್ಥಿಗಳು ಸುಂದರ ಸೂರ್ಯಾಸ್ತಮಾನವನ್ನು ಕಾಣಲು ಬರುತ್ತಾರೆ. ವಿದ್ಯಾದಾಯನಿ ಶಾಲೆ ಹಾಗೂ ಗೋವಿಂದದಾಸ ಮಹಾವಿದ್ಯಾಲಯ ಇದೆ. ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಬದ್ರಿಯ ಜುಮ್ಮ ಮಸೀದಿಯು ಇದೆ. ಇಡ್ಯ ಮಹಲಿಂಗೇಶ್ವರ ದೇವಸ್ತಾನವು ಊರ ಸಮಸ್ತರಿಂದ ಸುಂದರವಾಗಿ ನಿರ್ಮಿಸಲ್ಪಟ್ಟಿದೆ. ಒಂದು ಕಾಲದಲ್ಲಿ ಶಾಂತಿಯ ನಾಡಾಗಿದ್ದ ಸುರತ್ಕಲ್ ನಗರವು ಈಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಗರದಲ್ಲಿ ಆಗಾಗ ಚಿಕ್ಕಪುಟ್ಟ ಕಾರಣಗಳಿಗೆ ಗಲಭೆ ಎಬ್ಬಿಸುತ್ತಿರುತ್ತಾರೆ. ಎಮ್.ಆರ್.ಪಿ.ಎಲ್ ಹಾಗೂ ಓ.ಎನ್.ಜಿ.ಸಿ ಈ ನಗರಕ್ಕೆ ಒಳಪಟ್ಟಿದೆ. ಮಂಗಳೂರು ವಿಮಾನ ನಿಲ್ಡಾಣವು ಇಲ್ಲಿಂದ ೧೫ ಕಿ.ಮೀ. ದೂರದಲ್ಲಿದೆ. ದಿ. ಲಿಬರ್ಟಿ ಬಾವ ಹಾಗೂ ಊರ ಸಮಸ್ತರ ಶ್ರಮದಿಂದ ನಿರ್ಮಿಸಲ್ಪಟ್ಟ ಬದ್ರಿಯ ಜುಮ್ಮಾ ಮಸೀದಿಯ ಉಸ್ತುವಾರಿಯಲ್ಲಿ ಇಡ್ಯ ಖಿಲ್ ರ್ ನಬಿ ಉರೂಸು ನಡೆಸುತ್ತಾ ಬಂದಿದೆ, ಆದರೆ ಒಂದು ವರ್ಗದ ಜನರು ಇದನ್ನು ವಿರೋದಿಸುತ್ತಾ ಬಂದಿದೆ. ಲಿಬರ್ಟಿ ಕಾದರ್ ಹಾಗೂ ದಿ. ವಾಣಿ ಸಂಜೀವ ಹಾಗೂ ಜೆರಾಲ್ಡ್ ಪಾಯಸ್ ಇಲ್ಲಿಯ ಗಣ್ಯ ವ್ಯಕ್ತಿಗಳು. ವಾರದ ೨ ದಿವಸ (ಬುಧವಾರ ಮತ್ತು ರವಿವಾರ)ಸುರತ್ಕಲ್ ಸಂತೆ ನಡೆಯುತ್ತದೆ. ಬಜ್ಪೆ ರಸ್ತೆಯಲ್ಲಿ ಹೊಟೇಲ್ ಲಲಿತ್ ಎಂಬ ತ್ರಿತಾರ ಹೊಟೇಲ್ ಇದೆ.ಶುಚಿ ರುಚಿಯಾದ ಆಹಾರಗಳಿಗೆ ನಗರದ ರಾಷ್ತ್ರೀಯ ಹೆದ್ದಾರಿಗೆ ತಾಗಿ ಕೊಂಡು ಹೊಟೇಲ್ ಸದಾನಂದ ಹಾಗೂ ಸಿಟಿಲಂಚ್ ಹೋಮ್ ಕಾಣಸಿಗುತ್ತದೆ. ರಾಷ್ಟ್ರಕ್ಕೆ ಸುಮಾರು ೯ ಶೇ. ದಷ್ಟು ಆದಾಯ ತರುವ ನವಮಂಗಳೂರು ಬಂದರು ಇಲ್ಲಿಂದ ದಕ್ಷಿಣಕ್ಕೆ ೬ ಕಿ.ಮೀ ದೂರದಲ್ಲಿದೆ. ಅಷ್ಠ ಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠವು ಇಲ್ಲಿಂದ ಪೂರ್ವಕ್ಕೆ ೩ ಕಿ.ಮೀ. ದೂರಕ್ಕೆ ಇದೆ. ಮಂಗಳೂರಿನಿಂದ ಮುಂಬಯಿಗೆ ಹೋಗುವ ಕೊಂಕಣ ರೈಲ್ವೆ ಈ ನಗರವನ್ನು ಹಾದು ಗೋವಾವಾಗಿ ಮುಂಬಯಿ ತಲುಪುತ್ತದೆ.