ಕೊಣಾಜೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಕೊಣಾಜೆ ಕಲ್ಲು[ಬದಲಾಯಿಸಿ]

ಮೂಡುಬಿದಿರೆ ಪ್ರದೇಶದಲ್ಲಿ ಕಂಡುಬರುವ ಈ ಗ್ರಾಮ ಎರಡು ವಿಬಾಗಗಳಾಗಿದೆ.ಕೊಣಾಜೆ ಎಂಬ ಈ ಗ್ರಾಮ ಪಡುಕೊಣಾಜೆ ಮತ್ತು ಮೂಡುಕೊಣಾಜೆ ಎಂಬುದಾಗಿ ವಿಭಜಿಸಿದೆ.ಈ ಗ್ರಾಮಕ್ಕೆ ಕೊಣಾಜೆ ಎಂಬ ಹೆಸರು ಬರಲು ಮುಖ್ಯ ಕಾರಣ ಇಲ್ಲಿರುವ ಕೊಣಾಜೆ ಎಂಬ ಪ್ರಸಿದ್ಧ ಸ್ಥಳ. ಕೊಣಾಜೆಕಲ್ಲು ಎಂಬುದು ಋಷಿಗಳ ಆಶ್ರಮ ಸ್ಥಳವೆಂಬ ಪ್ರತೀತಿ ಇದೆ. ಇಲ್ಲಿ ಹಿಂದೆ ಹಲವು ಜನ ಋಷಿಗಳಿದ್ದರು ಹಾಗೂ ಅವರ ಸಮಾಧಿ ಕುರುಹುಗಳು ಇಲ್ಲಿ ಕಂಡುಬರುತ್ತವೆ. ಋಷಿಗಳ ಕಾಲದ ಬಾವಿಗಳು, ದನದ ಕೊಟ್ಟಿಗೆ ,ಶಾರದೆಯ ಗರ್ಭಗುಡಿಗಲು ಇಲ್ಲಿ ಕಂಡು ಬರುತ್ತವೆ.ಇದು ಎತ್ತರ ಪ್ರದೆಶದಲ್ಲಿದ್ದು ಈ ಕಲ್ಲಿನ ಮೆಲೆ ನಿಂತುಕೊಂಡು ಬಹಳ ದೂರದ ಪ್ರದೆಶವನ್ನು ವೀಕ್ಶಿಸಬಹುದು. ಈ ರಮಣೀಯ ಸೊಬಗನ್ನು ವೀಕ್ಷಿಸಲು ಹಲವಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

"https://kn.wikipedia.org/w/index.php?title=ಕೊಣಾಜೆ&oldid=1017947" ಇಂದ ಪಡೆಯಲ್ಪಟ್ಟಿದೆ