ಸಲ್ಮಾನ್ ಖಾನ್
ಸಲ್ಮಾನ್ ಖಾನ್ | |
---|---|
Salman Khan at the Jaan-E-Mann and UFO tie-up party (2006). | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಅಬ್ದುಲ್ ರಶೀದ್ ಸಲೀಂ ಸಲ್ಮಾನ್ ಖಾನ್ ೨೭ ಡಿಸೆಂಬರ್ ೧೯೬೫ ಇಂದೋರ್, ಮಧ್ಯ ಪ್ರದೇಶ, ಭಾರತ |
ವೃತ್ತಿ | ಚಲನಚಿತ್ರ ನಟ, ನಿರ್ಮಾಪಕ, ನಿರೂಪಕ |
ವರ್ಷಗಳು ಸಕ್ರಿಯ | 1988 – ಪ್ರಸ್ತುತ |
Official website |
ಅಬ್ದುಲ್ ರಷೀದ್ ಸಲೀಮ್ ಸಲ್ಮಾನ್ ಖಾನ್ (ಹಿಂದಿ:सलमान ख़ान, ಉರ್ದು: سلمان خان, ಎಂದು ಉಚ್ಚರಿಸಲಾಗುವ ಬಾಲಿವುಡ್ ಚಲನಚಿತ್ರಗಳಲ್ಲಿ ಅಭಿನಯಿಸಿದ ಭಾರತೀಯ ಚಿತ್ರ ನಟ. ಜನ್ಮ ದಿನ ಡಿಸೆಂಬರ್ 27, 1965.
ಸಲ್ಮಾನ್ ಖಾನ್ ಅಭಿನಯಿಸಿದ ಮೊದಲ ಚಿತ್ರ 'ಬಿವಿ ಹೋ ತೋ ಐಸಿ' (1988).ಖಾನ್‌ನ ಮೊದಲ ಯಶಸ್ವೀ ಚಿತ್ರ ಮೈನೆ ಪ್ಯಾರ್ ಕಿಯಾ (1989). ಇದು ಗಳಿಕೆಯಲ್ಲಿ ಭರ್ಜರಿ ಯಶಸ್ವಿಯಾಗಿ, ಚಿತ್ರದಲ್ಲಿನ ಅವರ ಅಭಿನಯಕ್ಕೆ ಫಿಲ್ಮ್‌ಫೇರ್ ಮೊದಲ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ಸಾಜನ್ (1991), [[ಹಮ್ ಅಪ್ಕೆ ಹೈ ಕೌನ್]] (1994), [[ಬಿವಿ ನಂ.1]] (1999) ಅಂತಹ ಕೆಲವು ಬಾಲಿವುಡ್‌ನ ಅತ್ಯಂತ ಯಶಸ್ವೀ ಚಿತ್ರಗಳಲ್ಲಿ ಅಭಿನಯಿಸಿದರು. ಸಲ್ಮಾನ್ ತಮ್ಮ ವೃತ್ತಿ ಜೀವನದ ಪ್ರತ್ಯೇಕ ಐದು ವರ್ಷಗಳಲ್ಲಿ ಭಾರಿ ಗಳಿಕೆಯ ಚಿತ್ರಗಳಲ್ಲಿ ಕಾಣಿಸಿಕೊಂಡರು.
[[ಕುಚ್ ಕುಚ್ ಹೋತಾ ಹೈ]] ನಲ್ಲಿನ (1998) ಅಭಿನಯಕ್ಕಾಗಿ 1999ರಲ್ಲಿ ಫಿಲ್ಮ್‌ಫೇರ್ ಶ್ರೇಷ್ಠ ಪೋಷಕ ನಟ ಪ್ರಶಸ್ತಿಪಡೆದ ಸಲ್ಮಾನ್ ಹಮ್ ದಿಲ್ ದೆ ಚುಕೆ ಸನಮ್ (1999), ತೆರೆ ನಾಮ್ (2003), ನೋ ಎಂಟ್ರಿ (2005) ಮತ್ತು ಪಾರ್ಟ್ನರ್ (2007) ಸೇರಿದಂತೆ ಹಲವಾರು ಗಳಿಕೆಯಲ್ಲಿ ಯಶಸ್ಸು ಕಂಡ ಚಿತ್ರಗಳಲ್ಲಿ ಅಭಿನಯಿಸಿದರು. ಹೀಗೆ ಖಾನ್ ಹಿಂದಿ ಚಿತ್ರರಂಗದ ಪ್ರಮುಖ ನಟರಲ್ಲೊಬ್ಬರಾಗಿ ತಮ್ಮನ್ನು ತಾವು ಸಾಬೀತು ಪಡಿಸಿಕೊಂಡರು.[೧][೨]
ಜೀವನ ಚರಿತ್ರೆ
[ಬದಲಾಯಿಸಿ]ಸಾಗಿ ಬಂದ ವೃತ್ತಿ ಮಾರ್ಗ
[ಬದಲಾಯಿಸಿ]1988ರಲ್ಲಿ ಸಲ್ಮಾನ್ ಖಾನ್ ಬಿವಿ ಹೊ ತೊ ಐಸಿ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಮೊದಲ ಬಾರಿ ಅಭಿನಯಿಸಿದನು. ಬಾಲಿವುಡ್‌ನಲ್ಲಿ ನಾಯಕ ನಟನಾಗಿ ಮೊದಲ ಬಾರಿ ಪ್ರವೇಶ ಪಡೆದದ್ದು ಸೂರಜ್ R. ಬರ್ಜಾತ್ಯಅವರ ಪ್ರೇಮ ಕಥಾ ಹಂದರವುಳ್ಳ ಚಿತ್ರ ಮೈನೆ ಪ್ಯಾರ್ ಕಿಯಾ (1989). ಬಾಆ ಚಿತ್ರವು ಭಾರತದ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳಲ್ಲಿ ಒಂದು.[೩] ಹಾಗೆಯೇ ಈ ಚಿತ್ರವು ಫಿಲ್ಮ್‌ಫೇರ್ ಮೊದಲ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿತು.
1990ರಲ್ಲಿ ಖಾನ್ ದಕ್ಷಿಣ ಭಾರತದ ನಟಿ ನಗ್ಮಾಜೊತೆ ಬಾಘಿ ಎಂಬ ಒಂದು ಚಿತ್ರದಲ್ಲಿ ಮಾತ್ರ ಕಾಣಿಸಿಕೊಂಡರು. ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡ ಈ ಚಿತ್ರದ ನಂತರ ಇವರು ಅಭಿನಯಿಸಿದ ಪತ್ಥರ್ ಕೆ ಫೂಲ್ , ಸನಮ್ ಬೇವಫಾ ಮತ್ತು ಸಾಜನ್ ಎಂಬ ಮೂರು ಯಶಸ್ವೀ ಚಿತ್ರಗಳು 1991ರಲ್ಲಿ ತೆರೆಕಂಡವು.[೪] ಈ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಲಭಿಸಿದ್ದರೂ ಸಹ, 1992-1993ರಲ್ಲಿ ಬಿಡುಗಡೆಗೊಂಡ ಅವರ ಚಿತ್ರಗಳೆಲ್ಲವೂ ಗಲ್ಲಾ ಪೆಟ್ಟಿಗೆ ಯಶ ಸಾಧಿಸುವಲ್ಲಿ ವಿಫಲವಾದವು.[೪]
1994ರಲ್ಲಿ ಎರಡನೆಯ ಬಾರಿ ನಿರ್ದೇಶಕ ಸೂರಜ್ ಬಾರ್ಜಾತ್ಯನೊಂದಿಗೆ ಜೊತೆಗೂಡಿ ಪ್ರೇಮಕಥೆಯಾದ ಹಮ್ ಅಪ್ಕೆ ಹೈ ಕೌನ್ ಯಲ್ಲಿ ನಟಿ ಮಾಧುರಿ ದೀಕ್ಷಿತ್‌ಳೊಂದಿಗೆ ನಟಿಸಿ, ಖಾನ್ ತನ್ನ ಹಿಂದಿನ ಗೆಲುವಿನ ಹಾದಿಗೆ ಮರಳಿದರು. ಈ ಚಿತ್ರವು ವರ್ಷದ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿತು ಮತ್ತು ಬಾಲಿವುಡ್‌ನ ಇತಿಹಾಸದಲ್ಲಿಯೇ ನಾಲ್ಕನೆ ಅತಿ ಹೆಚ್ಚು ಗಳಿಕೆಯ ಚಿತ್ರವಾಗುವುದರ ಮೂಲಕ, ಬಾಲಿವುಡ್‌ನ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು.[೫] ಈ ಚಿತ್ರವು ಯಶಸ್ವಿ ಗಳಿಕೆಯನ್ನು ಹೊರತುಪಡಿಸಿ, ಅಪಾರ ಹೊಗಳಿಕೆಗೆ ಪಾತ್ರವಾಯಿತು ಮತ್ತು ಖಾನ್ ತನ್ನ ಅಭಿನಯಕ್ಕಾಗಿ ಪ್ರಶಂಸೆಗೆ ಪಾತ್ರರಾದರಲ್ಲದೇ , ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗಾಗಿ ಎರಡನೆಯ ಬಾರಿಗೆ ಅವರ ಹೆಸರು ನಾಮನಿರ್ದೇಶನಗೊಂಡಿತು. ಅದೇ ವರ್ಷ ಖಾನ್ ಅಭಿನಯಿಸಿದ ಮೂರು ಚಿತ್ರಗಳಲ್ಲಿ ಯಾವುದು ಸಹ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಲು ಈ ಹಿಂದೆ ಉಲ್ಲೇಖಿಸಿದ ಶೀರ್ಷಿಕೆಯೊಂದಿಗಿನ ವಿಷಯದಿಂದಾಗಿ ವಿಫಲವಾಯಿತು. ಆದರೂ ಸಹ ಅಂದಾಜ್ ಅಪ್ನಾ ಅಪ್ನಾ ದಲ್ಲಿ ಸಹನಟ ಅಮೀರ್ ಖಾನ್‌ನೊಂದಿಗಿನ ಅಭಿನಯಕ್ಕಾಗಿ ಅವನು ಮೆಚ್ಚುಗೆಗೆ ಪಾತ್ರರಾದರು. ಆ ಚಿತ್ರವು ಬಿಡುಗಡೆಗೊಂಡಾಗಿನಂದ ಒಂದು ರೀತಿ ಆರಾಧನಾ ಸ್ಥಾನವನ್ನು ಗಿಟ್ಟಿಸಿತ್ತು. 1995ರಲ್ಲಿ ರಾಕೇಶ್ ರೋಶನ್‌ನ ಭರ್ಜರಿ ಯಶಸ್ವೀ ಚಿತ್ರ ಕರಣ್ ಅರ್ಜುನ್ ನಲ್ಲಿ ಶಾರುಖ್ ಖಾನ್‌ನೊಂದಿಗೆ ಅಭಿನಯಿಸಿ, ತಮ್ಮ ಯಶಸ್ಸನ್ನು ಭದ್ರ ಪಡಿಸಿಕೊಂಡರು. ಜನಾದರಣೆಯಲ್ಲಿ ಆ ಚಿತ್ರವು ವರ್ಷದ ಎರಡನೆಯ ಸ್ಥಾನ ಪಡೆಯಿತು. ಇದರಲ್ಲಿನ ಕರಣ್ ಪಾತ್ರವು ಅವರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಗೆ ನಾಮನಿರ್ದೇಶನಗೊಂಡಿತ್ತಾದರೂ ಕೊನೆಗೆ ಆ ಪ್ರಶಸ್ತಿಯು ಕರಣ್ ಅರ್ಜುನ್ ಚಿತ್ರದ ಸಹನಟ ಶಾರುಖ್ ಖಾನ್ ಪಾಲಾಯಿತು.
1996ರಲ್ಲಿ ಖಾನ್‌ನ ಎರಡು ಚಿತ್ರಗಳು ಜಯಭೇರಿ ಹೊಡೆದವು. ಸಂಜಯ್ ಲೀಲಾ ಭಂಸಾಲಿ ನಿರ್ದೇಶಿಸಿದ ಮೊದಲ ಚಿತ್ರವು ಆ ವರ್ಷದ ಸಲ್ಮಾನ್‌ನ ಮೊದಲ ಚಿತ್ರ ಖಾಮೋಶಿ: ದಿ ಮ್ಯೂಸಿಕಲ್ ನಲ್ಲಿ ಇವರು ಮನಿಷಾ ಕೊಯಿರಾಲ, ನಾನಾ ಪಾಟೇಕರ್ ಮತ್ತು ಸೀಮಾ ಬಿಸ್ವಾಸ್‌ರೊಂದಿಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. ಈ ಚಿತ್ರವು ಗಲ್ಲಾ ಪೆಟ್ಟಿಗೆ ಗಳಿಕೆಯಲ್ಲಿ ವಿಫಲವಾದರೂ ಸಹ, ಚಿತ್ರವು ಮೆಚ್ಚಿಗೆಯ ವಿಮರ್ಶೆ ಪಡೆಯಿತು. ಖಾನ್ ನಂತರ ರಾಜ್ ಕನ್ವಾರ್ ಸಾಹಸ ಪ್ರಧಾನ ಚಿತ್ರ ಜೀತ್ ನಲ್ಲಿ ಸನ್ನಿ ಡಿಯೋಲ್ ಮತ್ತು ಕರಿಷ್ಮಾ ಕಪೂರ್‌ಜೊತೆ ಅಭಿನಯಿಸಿದರು.
1997ರಲ್ಲಿ ತೆರೆ ಕಂಡದ್ದು ಜುಡ್ವಾ ಮತ್ತು ಔಜಾರ್ ಎಂಬ ಕೇವಲ ಎರಡು ಚಿತ್ರಗಳು ಮಾತ್ರ. ಡೇವಿಡ್ ಧವನ್‌ರವರ ನಿರ್ದೇಶಿಸಿದ ಜುಡ್ವಾ ಚಿತ್ರದಲ್ಲಿ ಕರಿಷ್ಮಾ ಕಪೂರ್‌ಜೊತೆ ಅಭಿನಯಿಸಿದರು. ಅದರಲ್ಲಿ ಅವರದು ದ್ವಿಪಾತ್ರ.ಅವಳಿ ಜವಳಿ ಸೋದರರು ಹುಟ್ಟಿದಾಕ್ಷಣ ಪ್ರತ್ಯೇಕಗೊಂಡದ್ದು ಇದರ ಕಥಾ ಹಂದರ. ಆ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಶಿಲ್ಪಾ ಶೆಟ್ಟಿಜೊತೆಗಿನ ಔಜಾರ್ ಹೇಳಿಕೊಳ್ಳುವಂಥ ಯಶ ಸಾಧಿಲಿಲ್ಲವಾದರೂ, ಅದರ ವೀಡಿಯೊ ಬಿಡುಗಡೆಯಾದ ನಂತರ ಪ್ರೇಕ್ಷಕರಲ್ಲಿ ಗುಂಗು ಹಿಡಿಸಿತು.
1998ರಲ್ಲಿ ಖಾನ್ ಐದು ವಿವಿಧ ಚಿತ್ರದಲ್ಲಿ ಕಾಣಿಸಿಕೊಂಡ. ಅವುಗಳಲ್ಲಿ ಮೊದಲು ತೆರೆಕಂಡ ಹಾಸ್ಯಚಿತ್ರ ಪ್ಯಾರ್ ಕಿಯಾ ತೊ ಡರ್ನಾ ಕ್ಯಾ.{{1} ಆ ವರ್ಷದ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳಲ್ಲಿ ಒಂದಾದ ಈ ಚಿತ್ರದಲ್ಲಿ ಕಾಜೋಲ್ ನಾಯಕಿ.ನಂತರದ ಖಾನ್ ಚಿತ್ರಜಬ್ ಪ್ಯಾರ್ ಕಿಸೀಸೆ ಹೋತಾ ಹೈ ಜಬ್ ಪ್ಯಾರ್ ಕಿಸೀಸೆ ಹೋತಾ ಹೈ.ಇದರ ಯಶಸ್ಸು ಮಧ್ಯಮ ಪ್ರಮಾಣದ್ದು. ಮಗವೊಂದನ್ನು ತನ್ನ ಮಗು ಎಂದು ವಶಕ್ಕೆ ತೆಗೆದುಕೊಂಡು, ಜವಬ್ದಾರಿಯುತವಾಗಿ ಮಗುವನ್ನು ಬೆಳೆಸಬೇಕಾದ ಪಾತ್ರವೊಂದನ್ನು ಖಾನ್ ನಿರ್ವಹಿಸಿದ್ದಾನೆ.ಈ ಚಿತ್ರದಲ್ಲಿನ ಖಾನ್‌ರ ಅಭಿನಯಕ್ಕೆ ವಿಮರ್ಶಿಕರಿಂದ ನೆಚ್ಚಿನ ಮಿಮರ್ಶೆಗಳನ್ನು ಲಭಿಸಿತು, ಹಲವು ಧನಾತ್ಮಕ ಅವಕಾಶಗಳು ಇಣಕಿ ನೋಡಿದವು. ಅವರು ಕರಣ್ ಜೋಹರ್‌ನ ಪ್ರಥಮ ನಿರ್ದೇಶಿತ ಚಿತ್ರ ಕುಚ್ ಕುಚ್ ಹೋತಾ ಹೈ ನಲ್ಲಿ ಅಭಿನಯಿಸಿದ್ದು ಆ ವರ್ಷದ ಕಡೆಯ ಚಿತ್ರ. ಇದರಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಎದುರು ಕಾಣಿಸಿಕೊಂಡರು. ಅಮನ್ ಎಂಬ ಚಿಕ್ಕ ಪಾತ್ರದಲ್ಲಿ ಮನಮುಟ್ಟುವಂಥ ಅಭಿನಯ ನೀಡಿದರು. ಈ ಮನೋಜ್ಞ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಎಂಬ ಎರಡನೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು.
1999ರಲ್ಲಿ ಇವರ ಮೂರು ಯಶಸ್ವೀ ಚಿತ್ರ ತೆರೆ ಕಂಡವು. ಅವುಗಳೆಂದರೆ: ಮೂರನೆಯ ಬಾರಿಗೆ ಸೂರಜ್ ಬರ್ಜಾತ್ಯ ಅವರ ಚಿತ್ರಹಮ್ ಸಾಥ್-ಸಾಥ್ ಹೈ: ವಿ ಸ್ಟ್ಯಾಂಡ್ ಯುನೈಟೆಡ್ ನಲ್ಲಿ; ಆ ವರ್ಷದ ಅತಿ ಹೆಚ್ಚು ಆದಾಯ ಗಳಿಸಿದ ಬೀವಿ ನಂ.1 ನಲ್ಲಿ; ಮತ್ತು ಫಿಲ್ಮ್‌ಫೇರ್‌ನಲ್ಲಿ ಇನ್ನೊಂದು ಅತ್ಯುತ್ತಮ ನಟ ಎಂದು ನಾಮನಿರ್ದೇನಗೊಂಡರು ಮತ್ತು ಉತ್ತಮ ವಿಮರ್ಶೆ ಸಿಕ್ಕಿತು.ಯಶಸ್ಸನ್ನು ತಂದುಕೊಟ್ಟ ಹಮ್ ದಿಲ್ ದೆ ಚುಕೆ ಸನಮ್ ನಲ್ಲಿ ಅಭಿನಯಿಸಿದರು. 2000ದಲ್ಲಿ ಖಾನ್ ಅಭಿನಯಿಸಿದ್ದು ಒಟ್ಟು ಆರು ಚಿತ್ರಗಳಲ್ಲಿ . ಅವುಗಳನ್ನು ರಾಣಿ ಮುಖರ್ಜಿ ಮತ್ತು ಪ್ರೀತಿ ಜಿಂಟಾಜೊತೆ ನಟಿಸಿದ ಹರ್ ದಿಲ್ ಜೊ ಪ್ಯಾರ್ ಕರೆಗಾ ಮತ್ತು ಚೋರಿ ಚೋರಿ ಚುಪ್ಕೆ ಚುಪ್ಕೆ ಎರಡು ಚಿತ್ರಗಳು ಮಧ್ಯಮ ಮಟ್ಟದ ಯಶ ಗಳಿಸಿದ್ದನ್ನು ಹೊರತುಪಡಿಸಿ, ಉಳಿದೆಲ್ಲಾ ಚಿತ್ರಗಳೂ ತೋಪಾದವು.2001ರ ತನಕವೂ ಬಿಡುಗಡೆಯಾದೇ ಕುಳಿತಿದ್ದ ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರ ಬಿಡುಗಡೆಯಾದ ನಂತರ ಪ್ರೇಕ್ಷಕರಿಂದ ಖುಷಿಯಿಂದಲೇ ಸ್ವೀಕರಿಸಲ್ಪಟ್ಟಿತು. ಬಾಡಿಗೆ ತಾಯಿಯ ಕಥಾ ಹಂದರವುಳ್ಳ ಈ ಚಿತ್ರ ಪ್ರಸ್ತುತ ಸಂಗತಿಯ ಮೇಲೆ ಬೆಳಕು ಚೆಲ್ಲುವ ಬಾಲಿವುಡ್ ಚಿತ್ರಗಳಲ್ಲಿ ಮೊದಲನೆಯದು. ಇದರಲ್ಲಿ ತನ್ನ ಪತ್ನಿ ಬಂಜೆ ಎಂದು ಗೊತ್ತಾದ ನಂತರ ಬಾಡಿಗೆ ತಾಯಿಯನ್ನು ಗೊತ್ತು ಮಾಡಿಕೊಳ್ಳುವ ಶ್ರೀಮಂತ ಉದ್ಯಮಿಯ ಪಾತ್ರ ಇವರದ್ದು . ಅವರ ಹಿಂದಿನ ಎಲ್ಲಾ ಪಾತ್ರಗಳಿಗೆ ಹೋಲಿಸಿದರೆ ಇದೊಂದು ಗಟ್ಟಿ ಪಾತ್ರ. ಗಂಭೀರ ಪಾತ್ರ ನನಿರ್ವಹಣೆಯನ್ನು ವಿಮರ್ಶಕರು ಗುರುತಿಸಿದರು. 2002ರಲ್ಲಿ ತಡವಾಗಿ ಬಿಡುಗಡೆಗೊಂಡು ಚಿತ್ರ ಹಮ್ ತುಮ್ಹಾರೆ ಹೈ ಸನಮ್ ಹಮ್ ತುಮ್ಹಾರೆ ಹೈ ಸನಮ್.ಗಲ್ಲಾ ಪೆಟ್ಟಿಗೆಯಲ್ಲಿ ಅಷ್ಟೇನೂ ಯಶಸ್ಸು ಕಾಣದ ಚಿತ್ರವಿದು.
ನಂತರ 2003ರಲ್ಲಿ ತೇರೆ ನಾಮ್ ಚಿತ್ರ ಬಿಡುಗಡೆಯಾಗಿ ಯಶಸ್ಸು ಲಭಿಸುವವರೆಗೂ ಖಾನ್‌ರ ಎಲ್ಲ ಚಿತ್ರಗಳೂ ಗಲ್ಲಾ ಪೆಟ್ಟಿಗೆಯಲ್ಲಿ ಸೋತವು. ಈ ಚಿತ್ರವು ಗಳಿಕೆಯಲ್ಲಿ ಯಶಸ್ಸು ಕಂಡಿತು ಮತ್ತು ಅವರ ಅಭಿನಯವನ್ನು ವಿಮರ್ಶಕರು ಕೊಂಡಾಡಿದರು. ಹಾಗೇಯೇ ಚಲನಚಿತ್ರ ವಿಮರ್ಶಕ ತರಣ್ ಆದರ್ಶ್‌ರವರ ಹೀಗೆ ಬರೆಯುತ್ತಾರೆ "ವಹಿಸುವ ಪಾತ್ರದಲ್ಲಿ ಸಲ್ಮಾನ್ ಖಾನ್ ಮುಳುಗಿಬಿಡುತ್ತಾನೆ,ಸುಲಭವಲ್ಲದ ಸನ್ನಿವೇಶಗಳು ಎದುರಾದರೆ ಕೆಂಡ ಕಾರುತ್ತಾನೆ. ತೋರಿಕೆಗೆ ಬಾಹ್ಯದಲ್ಲಿ ಕಾಠಿಣ್ಯ ಕಂಡರೂ ಅಂತರಂಗದಲ್ಲೊಬ್ಬ ಮೃದು ಮಾನವ ಅಡಗಿ ಕೊಂಡಿರುವುದು ತೇರೆ ನಾಮ್ ಚಿತ್ರದಲ್ಲಿ ಗೋಚರಿಸುತ್ತದೆ. ಅದ್ಭುತವಾದ ಭಾವನಾತ್ಮಕ ಅಭಿನಯ ಆತನದು..." ಮುಜ್‌ಸೆ ಶಾದಿ ಕರೋಗಿ (2004) ಮತ್ತು ನೋ ಎಂಟ್ರಿ ರೀತಿಯ(2005) ಹಾಸ್ಯ ಪ್ರಧಾನ ಚಿತ್ರಗಳು ಗಲ್ಲಾ ಪೆಟ್ಟಿಗೆಯ ಸೂರುಹೊಡೆಯುತ್ತಾ ಯಶಸ್ಸಿನಿಂದ ಮುನ್ನುಗ್ಗಿದವು.[೪] ಆದರೆ 2006ನೇ ವರ್ಷ ಅವರ ಪಾಲಿಗೆ ಕಹಿಯಾಯಿತು. ಜಾನ್-ಎ-ಮನ್ ಮತ್ತು ಬಾಬುಲ್ ಎರಡು ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಕುಸಿದು ನೆಲ ಕಚ್ಚಿದವು.
ಖಾನ್ 2007ರಲ್ಲಿ ಸಲಾಮ್ ಎ ಇಷ್ಕ್ ಚಿತ್ರದಿಂದ ಆರಂಭಿಸಿದರು. ಆದರೆ ಇದೂ ಕೂಡಾ ಆ ಸಹ ಗಲ್ಲಾ ಪೆಟ್ಟಿಗೆ ತುಂಬಿಸುವಲ್ಲಿ ವಿಫಲವಾಯಿತು. ನಂತರದ ಅವರ ಚಿತ್ರ ಪಾರ್ಟ್ನರ್ ಗಲ್ಲಾ ಪೆಟ್ಟಿಗೆ ತುಂಬಿ ತುಳುಕುವಂತೆ ಭರ್ಜರಿ ಪ್ರದರ್ಶನ ಕಂಡಿತು. ನಂತರ ಅವರು ಅಮೆರಿಕಾದ ನಟಿ ಅಲಿ ಲರ್ಟರ್ ಎದುರು ಮಾರಿಗೋಲ್ಡ್: ಆನ್ ಅಡ್ವೆಂಚರ್ ಇನ್ ಇಂಡಿಯಾ ಎಂಬ ತಮ್ಮ ಚೊಚ್ಚಲ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಂಡರು. ಭಾರತೀಯ ಪುರುಷ ಮತ್ತು ಅಮೆರಿಕೆಯ ಮಹಿಳೆಯ ನಡುವಿನ ಪ್ರೀತಿಯ ಕಥೆ ಕುರಿತ ಈ ಚಿತ್ರವು ಗಳಿಕೆಯಲ್ಲಿ ಮತ್ತು ವಿಮರ್ಶೆಯಲ್ಲಿ ಎರಡರಲ್ಲೂ ಹಿನ್ನಡೆ ಅನುಭವಿಸಿತು.
2008ರಲ್ಲಿ ಖಾನ್ ಅಭಿನಯಿಸಿದ ಮೂರು ಚಿತ್ರಗಳಲ್ಲಿ ಎಲ್ಲವೂ ನಿರೀಕ್ಷಿತ ಯಶಸ್ಸು ಗಳಿಸದಿದ್ದರೂ [೬] ಅವರ ಆ ವರ್ಷದ ಎರಡನೆಯ ಚಿತ್ರ ಹೀರೋಸ್ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು.
ವೈಯುಕ್ತಿಕ ಜೀವನ
[ಬದಲಾಯಿಸಿ]ಚಿತ್ರಕಥೆಗಾರ ಸಲೀಮ್ ಖಾನ್ ಮತ್ತು ಅವರ ಮೊದಲ ಪತ್ನಿ ಸಲ್ಮಾ ಖಾನ್‌ರ (ಮೊದಲ ಹೆಸರು ಸುಶೀಲಾ ಛರಕ್) ಪ್ರಥಮ ಪುತ್ರ ಸಲ್ಮಾನ್ ಖಾನ್. ಹಿಂದೆ ಬಾಲಿವುಡ್‌ನ ಪ್ರಸಿದ್ಧ ನಟಿಯಾದ, ಅವನ ಮಲತಾಯಿ ಹೆಲನ್ ಖಾಮೋಶಿ: ದಿ ಮ್ಯೂಸಿಕಲ್ (1996) ಮತ್ತು ಹಮ್ ದಿಲ್ ದೆ ಚುಕೆ ಸನಮ್ (1999) ಚಿತ್ರಗಳಲ್ಲಿ ಈತನೊಂದಿಗೆ ಅಭಿನಯಿಸಿದ್ದರು. ಇವರಿಗೆ ಅರ್ಬಾಜ್ ಖಾನ್ ಮತ್ತು ಸೋಹಿಲ್ ಖಾನ್ ಎಂಬ ಇಬ್ಬರು ಸಹೋದರರು ಮತ್ತು ಅಲ್ವಿರಾ ಮತ್ತು ಅರ್ಪಿತಾ ಎಂಬ ಇಬ್ಬರೂ ಸಹೋದರಿಯರಿದ್ದಾರೆ. ನಟ/ನಿರ್ದೇಶಕ ಅತುಲ್ ಅಗ್ನಿಹೋತ್ರಿಯನ್ನು ಸಹೋದರಿ ಅಲ್ವಿರಾ ಮದುವೆಯಾದರು.
ಖಾನ್ ಶ್ರದ್ಧಾವಂತ ದೇಹದಾಢ್ಯ ಪಟು. ದೇಹದಾಢ್ಯತೆಗಾಗಿ ಪ್ರತಿ ದಿನ ಸಾಧನೆಯನ್ನು ನಡೆಸುತ್ತಾರೆ. ಮತ್ತು ಚಲನಚಿತ್ರಗಳಲ್ಲಾಗಲಿ ಮತ್ತು ವೇದಿಕೆಯಲ್ಲಿ ನಡೆಸಿಕೊಡುವ ಕಾರ್ಯಕ್ರಮಗಳಲ್ಲಾಗಲಿ ಅಂಗಿಯನ್ನು ಬಿಚ್ಚಿ ಬೀಸುವುದರಲ್ಲಿ ಈತನು ಜನಪ್ರಿಯ. U.Sನಪೀಪಲ್ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ 2004ರಲ್ಲಿ ಈತ ವಿಶ್ವದ ಸುಂದರ ಪುರಷರ ಪಟ್ಟಿಯಲ್ಲಿ 7ನೇ ಸ್ಥಾನ ಗಿಟ್ಟಿಸಿದರೆ ಭಾರತದ ಅತ್ಯಂತ ಚೆಲುವ ಎಂದು ಆಯ್ಕೆಗೊಂಡರು. ತನ್ನ ವೃತ್ತಿಜೀವನದಲ್ಲಿ ಖಾನ್ ಹಲವಾರು ಧಾನ ದತ್ತಿ ನೀಡಿದ್ದಾರೆ.
ಐಶ್ವರ್ಯ ರೈ, ಸೊಮ್ಯ್ ಅಲಿ ಮತ್ತು ಸಂಗೀತಾ ಬಿಜಲಾನಿಮೊದಲಾದ ನಟಿಯರೊಂದುಗೆ ಖಾನ್ ಪ್ರಣಯ ಸಂಬಂಧದ ಕೊಕ್ಕೆಗೆ ಸಿಲುಕಿದ್ದರಾದರೂ ಬಾಲಿವುಡ್‌ನ ಯೋಗ್ಯ ಅವಿವಾಹಿತ ಎಂದು ಭಾರತದ ಮಾಧ್ಯಮಗಳಲ್ಲಿ ಆಗಾಗ್ಗೆ ಬಿಂಬಿತರಾದರು. ಅವರು 2003ರಿಂದಲೂ ನಟಿಯಾಗಿ ಪರಿವರ್ತಿತಳಾದ ರೂಪದರ್ಶಿ ಕತ್ರಿನಾ ಕೈಫ್ ಜೊತೆ ಸಲ್ಲಾಪ ನಡೆಸಿದರು[೭]
ಆಕ್ಟೋಬರ್ 11, 2007ರಲ್ಲಿ ಖಾನ್ ತಮ್ಮ ಮೇಣದ ಪ್ರತಿಕೃತಿ ನಿರ್ಮಿಸುವುದಕ್ಕಾಗಿ ಲಂಡನ್‌ನಲ್ಲಿರುವ ಮೇಣದ ಮೂರ್ತಿಗಳ ಮಾಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯದ ಆಮಂತ್ರಣ ಸ್ವೀಕರಿಸಿದರು. ಅವರ ಆಳೆತ್ತರದ ಮೇಣದ ಪ್ರತಿಕೃತಿಯನ್ನು ಜನವರಿ 15, 2008ರಲ್ಲಿ ಸ್ಥಾಪಿಸಲಾಯಿತು. ಹೀಗೆ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯದಲ್ಲಿ ಮೇಣದ ಪ್ರತಿಕೃತಿ ಸ್ಥಾಪಿಸಸಲ್ಪಟ್ಟ ಭಾರತದ ನಾಲ್ಕನೇ ನಟ.[೮][೯]
ವಿವಾದಗಳು
[ಬದಲಾಯಿಸಿ]ಕಾನೂನು ಅಡೆತಡೆಗಳು
[ಬದಲಾಯಿಸಿ]ವಾಹನವನ್ನು ಬೇಜವಬ್ದಾರಿಯಿಂದ ಅತ್ಯಾತುರವಾಗಿ ಚಲಾಯಿಸಿದ ಕಾರಣದ ಮೇಲೆ ಸಪ್ಟೆಂಬರ್ 28, 2002ರಲ್ಲಿ ಸಲ್ಮಾನ್‌ನನ್ನು ಬಂಧಿಸಲಾಯಿತು. ಅವರ ಕಾರು ಮುಂಬಯಿನಲ್ಲಿ ಬೇಕರಿಯೊಂದಕ್ಕೆ ಬಲವಾಗಿ ಡಿಕ್ಕಿಹೊಡೆದಿದ್ದರಿಂದಾಗಿ, ಹೊರಗಡೆ ಮಲಗಿದ್ದ ಒಬ್ಬ ವ್ಯಕ್ತಿ ಸತ್ತು, ಇತರ ಮೂವರು ಘಟನೆಯಲ್ಲಿ ಗಾಯಗೊಂಡಿದ್ದರು.[೧೦] ಆಗ ಅವರ ವಿರುದ್ಧ ದಂಡನಾರ್ಹ ನರಹತ್ಯೆ ಮೊಕದ್ದಮೆಯನ್ನು ದಾಖಲಿಸಲಾಯಿತು. ಆದರೆ ದೋಷಿ ಎಂದು ಪರಿಗಣಿಸಲಾಗದೇ ಹೊರಿಸಲಾಗಿದ್ದ ಆರೊಪಗಳನ್ನು ಕೈ ಬಿಡಲಾಯಿತು. ಆದರೂ ಅವರು ಈಗಲೂ ಆ ಘಟನೆಗೆ ಸಂಬಂಧಿಸಿದ ಅಲ್ಪ ಮಟ್ಟದ ಕೆಲವು ಆರೋಪಗಳನ್ನು ಎದುರಿಸುತ್ತಿದ್ದಾರೆ.
ಅವನತಿಯ ಅಂಚಿನಲ್ಲಿರುವ ಚಿಂಕಾರವನ್ನು ಖಾನ್ ಬೇಟೆಯಾಡಿದ್ದಕ್ಕಾಗಿ ಫೆಬ್ರುವರಿ 17, 2006ರಲ್ಲಿ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು. ಉನ್ನತ ನ್ಯಾಯಾಲಯವೊಂದರಲ್ಲಿ ಮೇಲ್ಮನವಿ ಸಲ್ಲಿಸದ್ದರಿಂದಾಗಿ ತೀರ್ಪನ್ನು ತಡೆಹಿಡಿಯಲಾಯಿತು.[೧೧] ಎಪ್ರಿಲ್ 10, 2006ರಲ್ಲಿ ಸಲ್ಮಾನ್‌ಗೆ ಅವನತಿಯ ದವಡೆಯಲ್ಲಿರುವ ಚಿಂಕಾರವನ್ನು ಬೇಟೆಯಾಡಿದ್ದಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಜೋಧಪುರ ಜೈಲಿನಲ್ಲಿ ಶಿಕ್ಷೆಗೆ ಒಳಗಾಗುವಂತೆ ಆದೇಶಿಸಲಾಯಿತು. ಜಾಮೀನು ದೊರೆಯುವವರೆಗೂ ಅಂದರೆ ಏಪ್ರಿಲ್ 13ರವರೆಗೆ ಅವರು ಅಲ್ಲಿಯೇ ಕಾಲ ನೂಕಿದರು.[೧೨] ಆಗಸ್ಟ್ 24, 2007ರಲ್ಲಿ ಜೋಧಪುರದ ಸೆಷನ್ಸ್ ನ್ಯಾಯಾಲಯವು 2006ರ ತೀರ್ಪಿನ ವಿರುದ್ಧ ಖಾನ್ ಸಲ್ಲಿಸಿದ ಮೇಲ್ಮನವಿಯನ್ನು ತಿರಸ್ಕರಿಸಿತು. ಈ ಮೂಲಕ ಕಾನೂನು ಬಾಹಿರವಾಗಿ ಚಿಂಕಾರವನ್ನು ಬೇಟೆಯಾಡಿದ ಖಾನ್‌ಗೆ ಮೊಕದ್ದಮೆಯಲ್ಲಿ ನೀಡಿದ 5 ವರ್ಷದ ಜೈಲು ಶಿಕ್ಷೆಯನ್ನು ಎತ್ತಿಹಿಡಿಯಿತು. ವಿಚಾರಣಾ ಸಮಯದಲ್ಲಿ ಅವರು ಬೇರೆಡೆ ಚಿತ್ರೀಕರಣದಲ್ಲಿ ನಿರತನಾಗಿದ್ದರಿಂದ ಅವರ ತಂಗಿ ವಿಚಾರಣೆ ಸಮಯದಲ್ಲಿ ಹಾಜರಿದ್ದರು. ಕಾನೂನುಬಾಹಿರವಾಗಿ ಬೇಟೆಯಾಡಿದಕ್ಕಾಗಿ ನೀಡಿದ ತೀರ್ಪನ್ನು ರಾಜಸ್ಥಾನ ನ್ಯಾಯಾಲಯವು ಎತ್ತಿಹಿಡಿದ ನಂತರ ಜೋಧಪುರದಲ್ಲಿ ಅವರನ್ನು ಪೊಲೀಸರು ಬಂಧಿಸಿದರು. ಆರು ದಿನಗಳ ಕಾಲ ಖಾನ್ ಜೋಧಪುರ ಜೈಲಿನಲ್ಲಿ ಕಳೆದ ನಂತರ ಜಾಮೀನಿನ ಮೂಲಕ ಆಗಸ್ಟ್ 31, 2007ರಂದು ಬಿಡುಗಡೆಗೊಂಡರು.
ಬಿಗಡಾಯಿಸಿದ ಸಂಬಂಧ
[ಬದಲಾಯಿಸಿ]ನಟಿ ಐಶ್ವರ್ಯ ರೈಜೊತೆಗಿನ ಗೊಂದಲದ ಅವರ ಸಂಬಂಧವು ಭಾರತೀಯ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಗಿಟ್ಟಿಸಿತು. ಐಶ್ವರ್ಯ-ಸಲ್ಮಾನ್ ಸಂಬಂಧ ಗಾಸಿಪ್ ಕಾಲಮ್‌ಗಳಲ್ಲಿ ತುಂಬಿಕೊಳ್ಳುತ್ತಿದ್ದವು.[೧೩] ಈ ಸಂಬಂಧ ಮಾರ್ಚ್ 2002ರಲ್ಲಿ ಹಳಸಿತು. ನಂತರ, ಖಾನ್‌ನ ಮೇಲೆ ರೈ ಕಿರುಕುಳದ ಆರೋಪ ಮಾಡಿದರು. ಪರಸ್ಪರ ಬೇರೆ ಬೇರೆ ಇರಬೇಕು ಎಂಬ ಷರತ್ತಿಗೆ ಖಾನ್ ಬದ್ಧನಾಗಿರದೆ ತನ್ನನ್ನು ಪೀಡಿಸುತ್ತಿದ್ದಾನೆ, ನನಗೆ ನೋವುಂಟು ಮಾಡುತ್ತಿದ್ದಾನೆ ಎಂದು ಐಶ್ವರ್ಯ ದೂರಿದಳು.ಅವರ ಪೋಷಕರು ಈತನ ವಿರುದ್ಧ ದೂರು ಸಲ್ಲಿಸಿದರು.
ಮುಂಬಯಿ ಪೋಲಿಸರಿಂದ 2001ರಲ್ಲಿ ಧ್ವನಿ ಮುದ್ರಿಸಿಕೊಂಡರೆಂದು ಹೇಳಲಾದ ದೂರವಾಣಿ ಕರೆಯು ಖೊಟ್ಟಿ ಹಾಗೂ ಕಾನೂನು ಬಾಹಿರ ನಕಲು ಎಂದು 2005ರಲ್ಲಿ ಸುದ್ಧಿ ಮಾದ್ಯಮಗಳಿಗೆ ಬಿಡುಗಡೆಗೊಳಿಸಲಾಯಿತು. ಖಾನ್‌ನ ಹಿಂದಿನ ಪ್ರೇಯಸಿ ಐಶ್ವರ್ಯ ರೈಗೆ ಅವರು ಮುಂಬಯಿ ಅಪರಾಧೀ ವಲಯದ ರೂವಾರಿಯೊಬ್ಬನು ಆಯೋಜಿಸುವ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಧಮಕಿ ಹಾಕುವಂತೆ ಒತ್ತಾಯಿಸುತ್ತಿರುವುದು ಆ ಕರೆಯಲ್ಲಿ ಕೇಳಿಬರುತ್ತದೆ. ಈ ಕರೆಯು ಇತರ ನಟರ ವಿರುದ್ಧದಸಂಘಟಿತ ಅಪರಾಧ ಮತ್ತು ಮಾನ ಹಾನಿಯಾಗುವಂಥ ಟೀಕೆಗೆ ಸ್ಥಾನ ಕಲ್ಪಿಸಿರುವುದನ್ನು ಎತ್ತಿತೋರಿಸಿತು. ಆರೋಪಿತ ಟೇಪ್ ಅನ್ನು ಚಂಡೀಗಢ್‌ದಲ್ಲಿರುವ ಸರಕಾರದವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಅದು ನಕಲಿ ಎಂಬ ತೀರ್ಮಾನಿಸಲಾಯಿತು.
ಫತ್ವಾಗಳು
[ಬದಲಾಯಿಸಿ]ಸಪ್ಟೆಂಬರ್ 2007ರಲ್ಲಿ ಗಣೇಶ ಪೂಜೆಗೆ ಹಾಜರಾದ ಕಾರಣ ಖಾನ್ ವಿರುದ್ಧ ಮುಸ್ಲಿಂ ಸಂಘಟನೆಯುಫತ್ವಾ ಹೊರಡಿಸಿತು. ಇಸ್ಲಾಂ ಮೂರ್ತಿ ಪೂಜೆಯನ್ನು ನಿಷೇದಿಸುತ್ತದೆ ಎಂದು ಕಾರಣ ನೀಡಲಾಯಿತು.ಖಾನ್ ನಂಬಿಕೆಯ ಉದ್ಘೋಷಗಳಾದ ಕಲ್ಮಾಸ್ - ಓದುವವರೆಗೆ, ಈತನನ್ನು ಮುಸ್ಲಿಂ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸಂಘಟನೆ ತಿಳಿಸಿತು. ಇದಕ್ಕೂ ಮಿಗಿಲಾಗಿ ಖಾನ್ ಬಂದ್ರಾದಲ್ಲಿರುವ ಅವರ ಕುಟುಂಬದೊಂದಿಗೆ ಗಣೇಶ ಮಹೋತ್ಸವವನ್ನು ಅಚರಿಸಿದರು. ಅವರ ಮಲತಾಯಿ ಹೆಲನ್‌ಗೊಸ್ಕರ ಒಂದು ದಿನಕ್ಕಾಗಿ ಗಣೇಶ ವಿಗ್ರಹವನ್ನು ತಂದಿದ್ದರು. ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಖಾನ್ ಜನರೊಂದಿಗೆ ಬೆರೆತು ಕುಣಿದಿದ್ದ. ಇದಕ್ಕೆ ಪ್ರತಿಕ್ರಯಿಸಿದ ಅವರ ತಂದೆ, ಸಲ್ಮಾನ್ ಯಾವುದೇ ತಪ್ಪನ್ನೂ ಎಸಗಿಲ್ಲ ಎಂದು ಫತ್ವಾವನ್ನು ಟೀಕಿಸಿದರು.[೧೪]
ಮುಫ್ತಿ ಸಲೀಮ್ ಅಹಮದ್ ಕ್ವಾಸಿಮ್ ಎಂಬ ಸಂಘಟನೆಯು ತನ್ನ ಮೇಣದ ಪ್ರತಿಕೃತಿ ರೂಪಿಸಲುಲಂಡನ್‌ನಲ್ಲಿರುವ ಮಾಡಮ್ ಟುಸ್ಸಾಡ್ಸ್ಗೆ ಖಾನ್ ಅನುಮತಿಸಿದ್ದೇ ಇನ್ನೊಂದು ಫತ್ವಾ ಹೇರಲು ಇಂಬು ನೀಡಿತು. ಶರಿಯಾವು ಸಜೀವಿಗಳ ಚಿತ್ರಣವನ್ನು ನಿಷೇಧಿಸುತ್ತದೆ ಮತ್ತುಎಂದು ಹೇಳಿದರು ಆ ಪ್ರತಿಮೆಯು ಕಾನೂನುಬಾಹಿರವಾಗಿದೆ ಎಂಬುದು ಅವರ ವಾದ. ಇದೇ ವಸ್ತುಸಂಗ್ರಹಾಲಯದಲ್ಲಿ ಶಾರುಖ್ ಖಾನ್ ಮೇಣದ ಪ್ರತಿಮೆ ಇದ್ದರೂ ಆತನ ಶಾರುಖ್ ಖಾನ್ ವಿರುದ್ಧ ಫತ್ವಾ ಹೇರಲಿಲ್ಲ. ಈ ಬಗ್ಗೆ ಮಾದ್ಯಮಗಳಲ್ಲಿ ಚರ್ಚೆಯ ಮಹಾಪೂರ ಹರಿದು ಬಂತು. "ಈ ಫತ್ವಾಗಳು ಹಾಸ್ಯಾಸ್ಪದವಾಗಿಬಿಟ್ಟಿವೆ"ಎಂದು ಸಲ್ಮಾನ್ ಪ್ರತಿಕ್ರಿಯಿಸಿದರು.[೧೫]
ಸಪ್ಟೆಂಬರ್ 2008ರಲ್ಲಿ ಹಿಂದೂ ಹಬ್ಬ ಗಣೇಶೋತ್ಸವವನ್ನು ಕುಟುಂಬದೊಂದಿಗೆ ಆಚರಿಸಿದ್ದಕ್ಕಾಗಿ ಮತ್ತೊಮ್ಮೆ ಖಾನ್ ವಿರುದ್ದ ಮತ್ತೆ ಫತ್ವಾ ಹೇರಲಾಯಿತು. ನವದೆಹಲಿಯಲ್ಲಿರುವ ಜಮಾ ಮಸೀದಿಯ ಸಲಹಾ ಸಮಿತಿಯ ಸದಸ್ಯರು ಈ ಫತ್ವಾ ಹೇರಿದರು. ಈ ಸಂದರ್ಭದಲ್ಲಿ ಸಲ್ಮಾನ್‌ರ ತಂದೆ ಸಲೀಮ್ ಫತ್ವಾ ವಿರುದ್ಧ ದನಿ ಎತ್ತಿದ ಮತ್ತು ಅದನ್ನು ಹೇರಿರುವವರ ವಿರುದ್ಧ ಟೀಕಾಸ್ತ್ರ ಬಿಟ್ಟರು.
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
[ಬದಲಾಯಿಸಿ]ಫಿಲ್ಮ್‌ಫೇರ್ ಪ್ರಶಸ್ತಿಗಳು
[ಬದಲಾಯಿಸಿ]ವಿಜೇತರು
- 1990: ಮೈನೆ ಪ್ಯಾರ್ ಕಿಯಾ ದಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಮೊದಲ ಅತ್ಯುತ್ತಮ ನಟ ಪ್ರಶಸ್ತಿ
- 1999: ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ
ನಾಮನಿರ್ದೇಶನಗಳು
- 1990: ಮೈನೆ ಪ್ಯಾರ್ ಕಿಯಾ ದಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
- 1995: ಹಮ್ ಆಪ್ಕೆ ಹೈ ಕೌನ್ ನಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
- 1996: ಕರಣ್ ಅರ್ಜುನ್ ನಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
- 1997: ಜೀತ್ ನಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ
- 1999: ಪ್ಯಾರ್ ಕಿಯಾ ತೊ ಡರ್ನಾ ಕ್ಯಾ ದಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
- 2000: ಹಮ್ ದಿಲ್ ದೆ ಚುಕೆ ಸನಮ್ ನಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
- 2000: ಬೀವಿ ನಂ.1 ನಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ
- 2004: ತೇರೆ ನಾಮ್ ನಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
- 2004: ಬಘ್ಬನ್ ನಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ
- 2006: ನೋ ಎಂಟ್ರಿ ಯಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ
ಸ್ಟಾರ್ ಸ್ಕ್ರೀನ್ ಪ್ರಶಸ್ತಿ
[ಬದಲಾಯಿಸಿ]ನಾಮನಿರ್ದೇಶನಗಳು
- 2004: ತೆರೆ ನಾಮ್ ನಲ್ಲಿನ ಅಭಿನಯಕ್ಕಾಗಿ ಸ್ಟಾರ್ ಸ್ಕ್ರೀನ್ ಅತ್ಯುತ್ತಮ ನಟ ಪ್ರಶಸ್ತಿ
- 2005: ಗರ್ವ್: ಪ್ರೈಡ್ ಆಂಡ್ ಆನರ್ ನಲ್ಲಿನ ಅಭಿನಯಕ್ಕಾಗಿ ಸ್ಟಾರ್ ಸ್ಕ್ರೀನ್ ಅತ್ಯುತ್ತಮ ನಟ ಪ್ರಶಸ್ತಿ
ಝೀ ಸಿನಿ ಪ್ರಶಸ್ತಿ
[ಬದಲಾಯಿಸಿ]ನಾಮನಿರ್ದೇಶನಗಳು
- 2004: ತೆರೆ ನಾಮ್ ನಲ್ಲಿನ ಅಭಿನಯಕ್ಕಾಗಿ ಜೀ ಸಿನಿ ಅತ್ಯುತ್ತಮ ನಟ ಪ್ರಶಸ್ತಿ
- 2005: ಮುಜ್‌ಸೆ ಶಾದಿ ಕರೋಗಿ ಯಲ್ಲಿನ ಅಭಿನಯಕ್ಕಾಗಿ ಜೀ ಸಿನಿ ಅತ್ಯುತ್ತಮ ನಟ ಪ್ರಶಸ್ತಿ
- 2006: ನೋ ಎಂಟ್ರಿ ಯಲ್ಲಿನ ಅಭಿನಯಕ್ಕಾಗಿ ಜೀ ಸಿನಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ
ಬಾಲಿವುಡ್ ಚಲನಚಿತ್ರ ಪ್ರಶಸ್ತಿಗಳು
[ಬದಲಾಯಿಸಿ]ವಿಜೇತರು
- 2002: ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರದಲ್ಲಿನ ಅಭಿನಯಕ್ಕಾಗಿ ಬಾಲಿವುಡ್ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ಸಂಚಲನಾತ್ಮಕ ನಟ
ರಾಷ್ಟ್ರೀಯ ಮನ್ನೆಣೆ
[ಬದಲಾಯಿಸಿ]- 2007: ಮನರಂಜನೆಯಲ್ಲಿ ಅವರ ಅತ್ಯುತ್ತಮ ಸಾಧನೆಗಾಗಿ ರಾಜೀವ್ ಗಾಂಧಿ ಪ್ರಶಸ್ತಿ .[೧೬]
ಭಾರತೀಯ ಟೆಲ್ಲಿ ಪ್ರಶಸ್ತಿಗಳು
[ಬದಲಾಯಿಸಿ]- 2008: ದಸ್ ಕಾ ದಮ್ ನಲ್ಲಿನ ನಿರೂಪಣೆಗಾಗಿ ಅತ್ಯುತ್ತಮ ನಿರೂಪಕ
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ವರ್ಷ | ಶೀರ್ಷಿಕೆ | ಪಾತ್ರ | ಇತರೆ ಟಿಪ್ಪಣಿಗಳು |
---|---|---|---|
1988 | ಬಿವಿ ಹೊ ತೊ ಐಸಿ | ವಿಕ್ಕಿ ಭಂಡಾರಿ | |
1989 | ಮೈನೆ ಪ್ಯಾರ್ ಕಿಯಾ | ಪ್ರೇಮ್ ಚೌಧರಿ | ಫಿಲ್ಮ್‌ಫೇರ್ ಮೊದಲ ಅತ್ಯುತ್ತಮ ನಟ ಪ್ರಶಸ್ತಿ ವಿಜೇತ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶಿಸಲ್ಪಟ್ಟಿದ್ದರು |
1990 | ಬಾಘಿ: ಎ ರೆಬಲ್ ಫಾರ್ ಲವ್ | ಸಾಜನ್ ಸೂದ್ | |
1991 | ಸನಮ್ ಬೆವಫಾ | ಸಲ್ಮಾನ್ ಖಾನ್ | |
ಪತ್ತರ್ ಕೆ ಫೂಲ್ | ಇನ್ಸ್‌ಪೆಕ್ಟರ್ ಸೂರಜ್ | ||
ಕುರ್ಬಾನ್ | ಆಕಾಶ್ ಸಿಂಗ್ | ||
ಲವ್ | ಪ್ರಥ್ವಿ | ||
ಸಾಜನ್ | ಆಕಾಶ್ ವರ್ಮಾ | ||
1992 | ಸೂರ್ಯವಂಶಿ | ವಿಕ್ಕಿ/ಸೂರ್ಯವಂಶಿ ವಿಕ್ರಮ್ ಸಿಂಗ್ | |
ಏಕ್ ಲಡ್ಕಾ ಏಕ್ ಲಡ್ಕಿ | ರಾಜ | ||
ಜಾಗ್ರತಿ | ಜುಗ್ನು | ||
ನಿಶ್ಚಯ್ | ರೋಹನ್ ಯಾದವ್/ವಾಸುದೇವ್ ಗುಜ್ರಾಲ್ | ||
1993 | ಚಂದ್ರ ಮುಖಿ | ರಾಜ ರೈ | |
ದಿಲ್ ತೇರಾ ಆಶಿಕ್ | ವಿಜಯ್ | ||
1994 | ಅಂದಾಜ್ ಅಪ್ನಾ ಅಪ್ನಾ | ಪ್ರೇಮ್ ಭೋಪಾಲಿ | |
ಹಮ್ ಅಪ್ಕೆ ಹೈ ಕೌನ್...! | ಪ್ರೇಮ್ ನಿವಾಸ್ | ||
ಚಾಂದ್ ಕಾ ತುಕ್ಡಾ | ಶ್ಯಾಮ್ ಮಲ್ಹೋತ್ರಾ | ||
ಸಂಗ್‌ದಿಲ್ ಸನಮ್ | ಕಿಶನ್ | ||
1995 | ಕರಣ್ ಅರ್ಜುನ್ | ಕರಣ್ ಸಿಂಗ್/ಅಜಯ್ | ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶಿಸಲ್ಪಟ್ಟಿದ್ದರು |
ವೀರ್‌ಗಾತಿ | ಅಜಯ್ | ||
1996 | ಮಜ್‌ಧಾರ್ | ಗೋಪಾಲ್ | |
ಖಾಮೋಶಿ: ದಿ ಮ್ಯೂಸಿಕಲ್ | ರಾಜ್ | ||
ಜೀತ್ | ರಾಜು | ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮನಿರ್ದೇಶಿಸಲ್ಪಟ್ಟಿದ್ದರು | |
ದುಶ್ಮನ್ ದುನಿಯಾ ಕಾ | ವಿಶೇಷ ಪಾತ್ರ | ||
1997 | ಜುಡ್ವಾ | ರಾಜ/ಪ್ರೇಮ್ ಮಲ್ಹೋತ್ರಾ | ದ್ವಿಪಾತ್ರ |
ಔಜಾರ್ | ಇನ್ಸ್‌ಪೆಕ್ಟರ್ ಸೂರಜ್ ಪ್ರಕಾಶ್ | ||
ದಸ್ | ಕ್ಯಾಪ್ಟನ್ ಜೀತ್ ಶರ್ಮಾ | ಚಿತ್ರ ಪೂರ್ಣಗೊಂಡಿಲ್ಲ | |
ದೀವಾನಾ ಮಸ್ತಾನಾ | ಪ್ರೇಮ್ ಕುಮಾರ್ | ವಿಶೇಷ ಪಾತ್ರ | |
1998 | ಪ್ಯಾರ್ ಕಿಯಾ ತೊ ಡರ್ನಾ ಕ್ಯಾ | ಸೂರಜ್ ಖನ್ನಾ | ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶಿಸಲ್ಪಟ್ಟಿದ್ದರು |
ಜಬ್ ಪ್ಯಾರ್ ಕಿಸೀಸೆ ಹೋತಾ ಹೈ | ಸೂರಜ್ ಧನ್‌ರಾಜ್‌ಗಿರ್ | ||
ಸರ್ ಉಟಾ ಕೆ ಜಿಯೊ | ವಿಶೇಷ ಪಾತ್ರ | ||
ಬಂಧನ್ | ರಾಜು | ||
ಕುಚ್ ಕುಚ್ ಹೋತಾ ಹೈ | ಅಮನ್ ಮೆಹ್ರಾ | ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ವಿಜೇತರು ವಿಶೇಷ ಪಾತ್ರ | |
1999 | ಜಾನಮ್ ಸಂಜ್ಹಾ ಕರೊ | ರಾಹುಲ್ | |
ಬಿವಿ ನಂ.1 | ಪ್ರೇಮ್ | ಫಿಲ್ಮ್‌ಫೇರ್ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿಗೆ ನಾಮನಿರ್ದೇಶಿಸಲ್ಪಟ್ಟಿದ್ದರು | |
ಸಿರ್ಫ್ ತುಮ್ | ಪ್ರೇಮ್ | ವಿಶೇಷ ಪಾತ್ರ | |
ಹಮ್ ದಿಲ್ ದೆ ಚುಕೆ ಸನಮ್ | ಸಮೀರ್ ರಫಿಲ್ಲಿನಿ | ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶಿಸಲ್ಪಟ್ಟಿದ್ದರು | |
ಹಲೋ ಬ್ರದರ್ | ಹೀರೋ | ||
ಹಮ್ ಸಾಥ್-ಸಾಥ್ ಹೈ: ವಿ ಸ್ಟ್ಯಾಂಡ್ ಯುನೈಟೆಡ್ | ಪ್ರೇಮ್ | ||
2000 | ದುಲ್ಹನ್ ಹಮ್ ಲೆ ಜಾಯೆಂಗೆ | ರಾಜ ಒಬೆರಾಯ್ | |
ಚಲ್ ಮೆರೆ ಭಾಯ್ | ಪ್ರೇಮ್ ಒಬೆರಾಯ್ | ||
ಹರ್ ದಿಲ್ ಜೊ ಪ್ಯಾರ್ ಕರೆಗಾ | ರಾಜ್/ರೋಮಿ | ||
ಡಾಯಿ ಅಕ್ಷರ್ ಪ್ರೇಮ್ ಕೆ | ಸ್ನೇಹಪೂರ್ವಕ ಅಭಿನಯ | ||
ಕಹಿ ಪ್ಯಾರ್ ನ ಹೊ ಜಾಯೆ | ಪ್ರೇಮ್ ಕಪೂರ್ | ||
2001 | ಚೋರಿ ಚೋರಿ ಚುಪ್ಕೆ ಚುಪ್ಕೆ | ರಾಜ್ ಮಲ್ಹೋತ್ರಾ | |
(2002) | ತುಮ್ಕೊ ನ ಭೂಲ್ ಪಾಯೆಂಗೆ | ವೀರ್ ಸಿಂಗ್ ಟಾಕೂರ್/ಅಲಿ | |
ಹಮ್ ತುಮ್ಹಾರೆ ಹೈ ಸನಮ್ | ಸೂರಜ್ | ||
ಯೆಹ್ ಹೈ ಜಲ್ವಾ | ರಾಜ್ 'ರಾಜು' ಸಕ್ಸೆನಾ/ರಾಜ್ ಮಿತ್ತಲ್ | ||
2003 | ಲವ್ ಎಟ್ ಟೈಮ್ಸ್ ಸ್ಕ್ವಾರ್ | ವಿಶೇಷ ಪಾತ್ರಧಾರಿ (ಹಾಡು) | |
ಸ್ಟಂಪಡ್ | ವಿಶೇಷ ಪಾತ್ರಧಾರಿ (ಹಾಡು) | ||
ತೆರೆ ನಾಮ್ | ರಾಧೆ ಮೋಹನ್ | ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶಿಸಲ್ಪಟ್ಟಿದ್ದರು | |
ಬಘ್ಬನ್ | ಅಲೋಕ್ ರಾಜ್ | ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮನಿರ್ದೇಶಿಸಲ್ಪಟ್ಟಿದ್ದರು ವಿಶೇಷ ಪಾತ್ರ | |
2004 | ಗರ್ವ್: ಪ್ರೈಡ್ ಆಂಡ್ ಆನರ್ | ಇನ್ಸ್‌ಪೆಕ್ಟರ್ ಅರ್ಜನ್ ರಣಾವತ್ | |
ಮುಝ್‌ಸೆ ಶಾದೀ ಕರೋಗಿ | ಸಮೀರ್ ಮಲ್ಹೋತ್ರಾ | ||
ಫಿರ್ ಮಿಲೆಂಗೆ | ರೋಹಿತ್ ಮಂಚಂದ | ||
ದಿಲ್ ನೆ ಜಿಸೆ ಅಪ್ನಾ ಕಹಾ | ರಿಶಾಭ್ | ||
2005 | ಲಕ್ಕಿ: ನೋ ಟೈಮ್ ಫಾರ್ ಲವ್ | ಆದಿತ್ಯ | |
ಮೈನೆ ಪ್ಯಾರ್ ಕ್ಯೂ ಕಿಯಾ? | Dr. ಸಮೀರ್ ಮಲ್ಹೋತ್ರಾ | ||
ನೋ ಎಂಟ್ರಿ | ಪ್ರೇಮ್ | ಫಿಲ್ಮ್‌ಫೇರ್ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿಗೆ ನಾಮನಿರ್ದೇಶಿಸಲ್ಪಟ್ಟಿದ್ದರು | |
ಕ್ಯೋ ಕಿ | ಆನಂದ್ | ||
2006 | ಸಾವನ್: ದಿ ಲವ್ ಸೀಸನ್ | ಭಗವಾನ್‌ಸ್ ಮೆಸ್ಸೆಂಜರ್ | |
ಶಾದಿ ಕರ್ಕೆ ಪಾಸ್ ಗಯಾ ಯಾರ್ | ಆಯಾನ್ | ||
ಜಾನ್-ಈ-ಮನ್ | ಸುಹಾನ್ | ||
ಬಾಬುಲ್ | ಅವಿನಾಶ್ ಕಪೂರ್ | ||
2007 | ಸಲಾಮ್-ಎ-ಇಷ್ಕ್: ಎ ಟ್ರಿಬ್ಯೂಟ್ ಟು ಲವ್ | ರಾಹುಲ್ | |
ಪಾರ್ಟ್ನರ್ | ಪ್ರೇಮ್ | ||
ಮಾರಿಗೋಲ್ಡ್: ಆನ್ ಅಡ್ವೆಂಚರ್ ಆನ್ ಇಂಡಿಯಾ | ಪ್ರೇಮ್ | ||
ಓಂ ಶಾಂತಿ ಓಂ | ಸ್ವಯಂ/ಸ್ವತಃ/ತಮ್ಮದೇ ಚಿತ್ರೀಕರಣ | ದೀವಾನಗೀ ದೀವಾನಗೀ ಹಾಡಿನಲ್ಲಿ ವಿಶೇಷ ಪಾತ್ರ | |
ಸಾವರಿಯಾ | ಇಮಾನ್ | ||
2008 | ಗಾಡ್ ತುಸೀ ಗ್ರೇಟ್ ಹೊ | ಅರುಣ್ ಪ್ರಜಾಪತಿ | |
ಹೆಲೋ! | ಸ್ವಯಂ/ಸ್ವತಃ/ತಮ್ಮದೇ ಚಿತ್ರೀಕರಣ | ವಿಶೇಷ ಪಾತ್ರ | |
ಹೀರೋಸ್ | ಬಲ್ಕಾರ್ ಸಿಂಗ್/ಜಸ್ವಿಂದರ್ ಸಿಂಗ್ | ||
ಯುವ್‌ರಾಜ್ | ದೇವನ್ ಯುವ್‌ರಾಜ್ | ||
2009 | ವಾಂಟೆಡ್ | ರಾಧೆ | ಸಪ್ಟೆಂಬರ್ 18, 2009ರಂದು ಬಿಡುಗಡೆಯಾಗಲಿದೆ |
ಮೈ ಔರ್ ಮಿಸಿಸ್ ಖನ್ನಾ | ಸಮೀರ್ ಖನ್ನಾ | ಆಕ್ಟೋಬರ್ 16, 2009ರಂದು ಬಿಡುಗಡೆಯಾಗಲಿದೆ | |
ಲಂಡನ್ ಡ್ರಿಮ್ಸ್ | ಆಕ್ಟೋಬರ್ 30, 2009ರಂದು ಬಿಡುಗಡೆಯಾಗಲಿದೆ | ||
2010 | ವೀರ್ | ಚಿತ್ರೀಕರಣಗೊಳ್ಳುತ್ತಿದೆ |
DABANG
ಆಕರಗಳು
[ಬದಲಾಯಿಸಿ]- ↑ "Top Box Office Draws of Indian Cinema (using raw collections)". International Business Overview Standard. Retrieved 2007-12-05.
- ↑ Sen, Raja (August 8, 2006). "Powerlist: Top Bollywood Actors". Rediff.com. Retrieved 2007-12-05.
- ↑ "http://boxofficeindia.com/alltime.htm". Archived from the original on 2006-04-22. Retrieved 2006-04-22.
{{cite web}}
: External link in
(help)|title=
- ↑ ೪.೦ ೪.೧ ೪.೨ "Salman Khan's box office filmography". BoxOfficeIndia.Com. Archived from the original on 2006-10-15. Retrieved 2007-12-01.
- ↑ "All Time Grossers Inflation Adjusted". BoxOfficeIndia.Com. Archived from the original on 2006-04-22. Retrieved 2006-10-28.
- ↑ http://www.boxofficemojo.com/movies/?id=godtussigreatho.htm
- ↑ Menon, Sita (July 21,2003). "Katrina's beautiful, and she knows it". Retrieved 2008-01-26.
{{cite web}}
: Check date values in:|date=
(help); Text "Rediff.com" ignored (help) - ↑ Indo-Asian News Service (January 15, 2008). "Salman Khan unveils wax figure at Madame Tussauds". Hindustan Times. Archived from the original on 2008-03-17. Retrieved 2008-01-15.
- ↑ "ಈಗ ಸಲ್ಮಾನ್ ಖಾನ್ ಮಾಡಮ್ ಟುಸ್ಸಾಡ್ಸ್‌ನಲ್ಲಿ ವಾಸಿಸುತ್ತಿದ್ದಾರೆ". Archived from the original on 2014-12-16. Retrieved 2009-11-04.
- ↑ ""Salman Khan's jeep runs over pavement dwellers, one dead; actor surrenders"".
{{cite web}}
: Text "Rediff.com" ignored (help); Text "September 28, 2002" ignored (help) - ↑ ""Salman Khan sentenced to one-year imprisonment in poaching case"". Asian News International (ANI) via Yahoo! News India. February 17, 2006. Retrieved 2006-06-28.
- ↑ ""Salman granted bail on poaching case"". sify.com. 13 April 2006. Retrieved 2006-06-28.
- ↑ ""Salman in news for the wrong reasons"".
{{cite web}}
: Text "March 3, 2002" ignored (help); Text "Tribune of India" ignored (help) - ↑ "Fatwa against Salman for attending puja - Times India".
- ↑ "Muslim Cleric Issues Fatwa Against Bollywood Star for Wax Figure". Fox News. January 24, 2008. Retrieved 2008-09-13.
- ↑ NDTV Correspondent (August 10, 2007). "Salman to get the Rajiv Gandhi award". NDTV.com. Archived from the original on 2008-02-26. Retrieved 2007-12-03.
{{cite web}}
:|author=
has generic name (help)
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- Ghosh, Biswadeep (2004). Hall of Fame: Salman Khan. Mumbai: Magna Books. ISBN 8178092492.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- CS1 errors: external links
- CS1 errors: unrecognized parameter
- CS1 errors: dates
- CS1 errors: generic name
- ಫಿಲ್ಮ್‌ಫೇರ್ ಪ್ರಶಸ್ತಿಗಳ ವಿಜೇತರು
- ಭಾರತೀಯ ನಟರು
- ಭಾರತೀಯ ಚಲನಚಿತ್ರ ನಟರು
- ಭಾರತೀಯ ಕಿರುತೆರೆ ಪ್ರಸ್ತುತಿಕರ್ತರು
- ಭಾರತೀಯ ಮುಸ್ಲಿಮರು
- ಇಂದೋರ್ನಿಂದ ಬಂದ ಜನರು
- ಹಿಂದಿ ಚಲನಚಿತ್ರ ನಟರು
- ೧೯೬೫ ಜನನ
- ಜೀವಿಸುತ್ತಿರುವ ಜನರು
- ಬಾಲಿವುಡ್