ವಿಷಯಕ್ಕೆ ಹೋಗು

ರಾಣಿ ಮುಖರ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Rani Mukerji

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1978-03-21) ಮಾರ್ಚ್ ೨೧, ೧೯೭೮ (ವಯಸ್ಸು ೪೬)
ಕೊಲ್ಕತ್ತ, West Bengal, India
ವೃತ್ತಿ Film actress


ರಾಣಿ ಮುಖರ್ಜಿ ([1]) ಜನನ 21 ಮಾರ್ಚ್ 1978; ರಾಣಿ ಮುಖರ್ಜಿ ಯು ಹಿಂದಿ ಚಲನಚಿತ್ರಗಳಲ್ಲಿ ನಿರತರಾಗಿರುವ ಭಾರತದ ಚಿತ್ರನಟಿ.

ರಾಜಾ ಕಿ ಆಯೇಗಿ ಬಾರಾತ್ (1997) ರಲ್ಲಿ ತಮ್ಮ ನಟನೆಯ ಪ್ರಥಮ ಪ್ರವೇಶ ಮಾಡಿದ, ಮುಖರ್ಜಿಯವರು ಇಲ್ಲಿಯವರೆಗೂ ತಮ್ಮ ಅತ್ಯಂತ ದೋಡ್ಡ ವಾಣಿಜ್ಯದ ಯಶಸ್ಸನ್ನು ಕರಣ್ ಜೋಹರ್ ರವರ ಪ್ರೇಮ ಪ್ರಕರಣದ 'ಕುಚ್ ಕುಚ್ ಹೋತಾ ಹೈ ' ನಲ್ಲಿ (1990) ತಮ್ಮ ನಟನೆಯ ಮೊದಲ ಅಧ್ಬುತ ಜಯವನ್ನು ಕಂಡರು, ಹಾಗೂ ಆ ಚಿತ್ರದಲ್ಲಿ ತಮ್ಮ ಅಭಿನಯಕ್ಕಾಗಿ ಫಿಲ್ಮ್ ಫೇರ್ ನ ಅತ್ಯಂತ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು. ಅವರು ನಂತರ ಅನೇಕ ಚಲನಚಿತ್ರಗಳಲ್ಲಿ ನಟಿಸಿದರು, ಆದರೆ ಅವುಗಳಲ್ಲಿ ಹೆಚ್ಚು ನಿರೀಕ್ಷೆಯ ಮಟ್ಟವನ್ನು ಮುಟ್ಟಲಿಲ್ಲ. ಆದರೆ 2002 ರಲ್ಲಿ ಚಲನಚಿತ್ರ ವಿಮರ್ಶಕರಿಂದ ವಿಮರ್ಶಾತ್ಮಕವಾಗಿ ಜಯಶಾಲಿಯಾದ ಚಿತ್ರ ಸಾಥಿಯಾ ದಲ್ಲಿ ತಮ್ಮ ನಟನಾ ಕೌಶಲ್ಯವನ್ನು ಪುರ್ನಸಥಷ್ಟಿಸಿ ಕೊಂಡರು, ಈ ಚಿತ್ರಕ್ಕಾಗಿ ಅವರು ಅನೇಕ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳನ್ನು ಪಡೆದರು.[]

2004 ರಲ್ಲಿ, ಯಶಸ್ವಿ ಚಿತ್ರ ಹಮ್ ತುಮ್ ' ಹಾಗೂ ವಿಮರ್ಶಾತ್ಮಕವಾಗಿ ಯಶಸ್ಸು ಕಂಡ 'ಯುವ' ದಲ್ಲಿ ಅವರ ಸಾಧನೆಗಳಿಗಾಗಿ ಫಿಲ್ಮ್ ಫೇರ್ ಉತ್ಸವದಲ್ಲಿಅವರಿಗೆ ಅತ್ಯಂತ ಶ್ರೇಷ್ಠ ನಟಿ ಹಾಗೂ ಅತ್ಯಂತ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಗಳನ್ನು ಗಳಿಸಿ ಕೊಟ್ಟವು, ಇದರಿಂದ ಅವರು ಅನೇಕ ವರ್ಷಗಳಲ್ಲಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಗಳಿಸಿದ ಮೊದಲ ನಟಿಯಾದರು. ಅವರು ನಂತರ ಬ್ಲಾಕ್ ' ಚಲನಚಿತ್ರದಲ್ಲಿ (2005) ಕುರುಡಿ, ಕಿವುಡಿ ಮತ್ತು ಮೂಕ ಮಹಿಳೆಯಾಗಿ ತಮ್ಮ ನಟನೆಗಾಗಿ ಸರ್ವಾನುಮತದ ಹೊಗಳಿಕೆಯನ್ನು ಗಳಿಸಿದರು, ಈ ಚಿತ್ರಕ್ಕಾಗಿ ಅವರು ಅನೇಕ ಪ್ರಮುಖ ಪ್ರಶಸ್ತಿಗಳನ್ನು ಸಂಗ್ರಹಿಸಿದರು. ಅಂದಿನಿಂದ ಮುಖರ್ಜಿಯವರು ಹಿಂದಿ ಚಲನಚಿತ್ರರಂಗದ ಒಬ್ಬ ಪ್ರಸಿದ್ಧ ಅಭಿನೇತ್ರಿಯಾಗಿದ್ದಾರೆ.[][]

ಆರಂಭಿಕ ಜೀವನ ಮತ್ತು ಹಿನ್ನೆಲೆ

[ಬದಲಾಯಿಸಿ]

ಮುಖರ್ಜಿ ಯವರು ಬೆಂಗಾಲಿ ಮೂಲದ ಚಲನಚಿತ್ರ ತಯಾರಿಕೆಯಲ್ಲಿ ತೊಡಗಿಸಿಕೊಂಡ ಹಿನ್ನೆಲೆಯ ಕುಟುಂಬದಿಂದ ಬಂದವರು. ಅವರ ತಂದೆ ರಾಮ್ ಮುಖರ್ಜಿ ಯವರು ಒಬ್ಬ ನಿವೃತ್ತ ನಿರ್ದೇಶಕರು ಹಾಗೂ ಫಿಲ್ಮಾಲಯ ಸ್ಟುಡಿಯೋದ[] ಸಂಸ್ಥಾಕಪರಲ್ಲೊಬ್ಬರು, ಅವರ ತಾಯಿ ಕೃಷ್ಣಾ ಒಬ್ಬ ಹಿನ್ನಲೆ ಗಾಯಕಿಯಾಗಿದ್ದರು. ಅವರ ಸಹೋದರ ರಾಜಾ ಮುಖರ್ಜಿ ಒಬ್ಬ ಚಲನಚಿತ್ರ ತಯಾರಕರು, ಈಗ ನಿರ್ದೇಶಕರಾಗಿದ್ದಾರೆ. ಅವರ ತಾಯಿ ಕಡೆಯ ಚಿಕ್ಕಮ್ಮ ದೇಬಶ್ರೀ ರಾಯ್, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಸಿದ ಬೆಂಗಾಲಿ ಚಲನಚಿತ್ರ ನಟಿಯಾಗಿದ್ದಾರೆ ಹಾಗೂ ಅವರ ಸಹೋದರಿ ಕಜೋಲ್, ಒಬ್ಬ ಬಾಲಿವುಡ್ ನ ಜನಪ್ರಿಯ ನಟಿ ಹಾಗೂ ಸಹೋದರ, ಆಯನ್ ಮುಖರ್ಜಿ 'ವೇಕ್ ಅಪ್ ಸಿಡ್' ಚಿತ್ರದ ಲೇಖಕ ಹಾಗೂ ನಿರ್ದೇಶಕರು.

ಮುಖರ್ಜಿ ತರಬೇತಿ ಪಡೆದ ಒಡಿಸ್ಸಿ ನೃತ್ಯ ಕಲಾವಿದೆ,[] ಹಾಗೂ ಹತ್ತನೆಯ ವರ್ಗದಲ್ಲಿರುವಾಗ ನೃತ್ಯವನ್ನು ಕಲಿಯಲಾರಂಭಿಸಿದರು. ಮುಖರ್ಜಿ ಯವರು ಜುಹು ನಲ್ಲಿರುವ ಮಾಣಿಕ್ ಜಿ ಕೂಪರ್ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು, ಹಾಗೂ ನಂತರ ಮುಂಬಯಿನ ಮಿಥಿ ಬಾಯ್ ಕಾಲೇಜಿಗೆ ಸೇರಿದರು.

ನಟನಾ ವೃತ್ತಿ ಬದುಕು

[ಬದಲಾಯಿಸಿ]

ಹಿಂದಣ ಕೆಲಸ ಮತ್ತು ಅದ್ಭುತ ಯಶಸ್ಸು1997-2002

[ಬದಲಾಯಿಸಿ]

ತಮ್ಮ ತಂದೆಯವರ ಬೆಂಗಾಲಿ ಚಿತ್ರ ಬಿಯರ್ ಫೂಲ್' (1992) ರಲ್ಲಿ ಮೊದಲ ಬಾರಿಗೆ ಕ್ಯಾಮೆರಾದ ಮುಂದೆ ಚಿಕ್ಕ ಪಾತ್ರ ಅಭಿನಯ ಮಾಡಿದ ನಂತರ, ಮುಖರ್ಜಿಯವರು ರಾಜಾ ಕಿ ಆಯೇಗಿ ಬರಾತ್ (1997) ರಲ್ಲಿ ಮುಖಂಡಳಾಗಿ ಐದು ವರ್ಷಗಳ ನಂತರ ನಟನೆಯ ಮೊದಲ ಪ್ರವಾಶವನ್ನು ಮಾಡಿದರು. ಆ ಚಲನಚಿತ್ರದಲ್ಲಿ ಒಬ್ಬ ಅತ್ಯಾಚಾರದ ಬಲಿಪಶುವಾಗಿ ಅವರ ಅಭಿನಯವು ಚೆನ್ನಾಗಿ ಜನಮನ್ನಣೆ ಗಳಿಸಿತು, ಆದರೆ ಆ ಚಿತ್ರವು ವ್ಯಾವಹಾರಿಕವಾಗಿ ನೆಲಕಚ್ಚಿತು. ಆದಾಗ್ಯೂ, ಅವರು ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳಲ್ಲಿ ವಿಶೇಷ ತೀರ್ಪುಗಾರರ ಮನ್ನಣೆ ಗಳಿಸಿದರು. ಆದರೆ, ಗಲ್ಲಾ ಪೆಟ್ಟಿಗೆಯಲ್ಲಿ ಚಿತ್ರವು ಸೋತು ಹೋದಾಗ ಅವರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಲು ಕಾಲೇಜಿಗೆ ಹಿಂದಿರುಗಿದರು.[]

ಚಿತ್ರ:Rani in KKHH.jpg
ಇಲ್ಲಿಯವರೆಗೂ ಅತ್ಯಂತ ದೊಡ್ಡ ವ್ಯಾಪಾರದ ಯಶಸ್ವಿ ಚಲನಚಿತ್ರ ಕುಚ್ ಕುಚ್ ಹೋತಾ ಹೈ ನಲ್ಲಿ (1998) ಟೀನಾ ಮಲ್ಹೋತ್ರ ಆಗಿ ಮುಖರ್ಜಿ ಯವರು.ಶಾ ರುಖ್ ಖಾನ್ ಜೊತೆ ತೆಗೆಸಿಕೊಂಡ ಒಂದು ಛಾಯಾಚಿತ್ರ.

ಮುಖರ್ಜಿಯವರು 1998 ರ ಘುಲಾಮ್ ' ಚಲನಚಿತ್ರದಲ್ಲಿ, ಅಮೀರ್ ಖಾನ್ ವಿರುದ್ಧ ಯಶಸ್ವಿಯಾಗಿ ಹಿಂದಿರುಗಿದರು; ಆ ಚಲನಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಅದ್ಭುತ ಯಶಸ್ಸನ್ನು ಕಂಡು ಜಯಗಳಿಸಿತು.[] ಆತಿ ಹೈ ಖಂಡಾಲಾ' ಎಂಬ ಹಾಡು ಅಧಿಕ ಜನಮನ್ನಣೆ ಗಳಿಸಿ ಮುಖರ್ಜಿಯವರಿಗೆ ಜನಪ್ರಿಯತೆ ಗಳಿಸಿಕೊಟ್ಟಿತು, ಇದರಿಂದ ಅವರು ಖಂಡಾಲಾ ಹುಡುಗಿ ಎಂಬ ಅಡ್ಡ ಹೆಸರು ಪಡೆದರು. ಕರಣ್ ಜೋಹರ್ ರವರ ಮೊದಲ ನಿರ್ದೇಶನದ ಚಲನಚಿತ್ರ ಶಾರುಖ್ ಖಾನ್ ಹಾಗೂ ಕಜೋಲ್ ಅವರ ಜೊತೆ ಸಹ ನಟನಾ ಚಿತ್ರ ಕುಚ್ ಕುಚ್ ಹೋತಾ ಹೈ , ಆ ವರ್ಷ ಅವರನ್ನು ಹಿಂಬಾಲಿಸಿತು. ಆ ಚಲನಚಿತ್ರವು ಅದ್ಭುತ ಯಶಸ್ಸನ್ನು ಕಂಡಿತು,[] ಹಾಗೂ ಅವರು ಅತ್ಯಂತ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ವಿಭಾಗದಲ್ಲಿ ತಮ್ಮ ಮೊದಲ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದರು.

ಅವರು ಅನೇಕ ಚಲನಚಿತ್ರಗಳಿಗೆ ಸಹಿ ಹಾಕುವುದರ ಮೂಲಕ ತಮ್ಮ ವೃತ್ತಿ ಜೀವನವನ್ನು ಹಿಂಬಾಲಿಸಿದರು. ದುರಾದೃಷ್ಟಕ್ಕೆ, ಅವುಗಳಲ್ಲಿ ಹೆಚ್ಚಿನ ಚಲನಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸನ್ನು ಕಾಣಲಿಲ್ಲ. 2000 ದರಲ್ಲಿ ತೆರೆ ಕಂಡ ಬಾದಲ್ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರವಾದರೂ, ಅವರು ಆ ಸಮಯದಲ್ಲಿ ಉದ್ಯಮದಲ್ಲಿ ತಮ್ಮ ಅಂತಸ್ಥನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಲಿಲ್ಲ.[][]

2001 ರಲ್ಲಿ, ಮುಖರ್ಜಿಯವರು ಸಲ್ಮಾನ್ ಖಾನ್ ಮತ್ತು ಪ್ರೀತಿ ಜಿಂಟಾ ರವರ ಜೊತೆ, ಅಬ್ಬಾಸ್ ಮಸ್ತಾನ್ ಅವರ ಪ್ರಣಯ ಪ್ರಸಂಗದ ಚಲನಚಿತ್ರ 'ಚೋರಿ ಚೋರಿ ಚುಪ್ಕೆ ಚುಪ್ಕೆ ' ಚಿತ್ರದಲ್ಲಿ ಸಹ ನಟಿಯಾಗಿ ನಟಿಸಿದರು. ಆ ಚಲನಚಿತ್ರವು ಒಂದು ವರ್ಷ ತಡವಾಗಿ ಬಿಡುಗಡೆಯಾಯಿತು, ಮತ್ತು ಬಾಡಿಗೆ ತಾಯಿ ಹಾಗೂ ಮಗುವಿನ ಜನನ ವಿಷಯವನ್ನು ಕೈಗೆತ್ತಿಕೊಂಡ ಬಾಲಿವುಡ್ ನ ಮೊದಲ ಚಿತ್ರಗಳಲ್ಲೊಂದಾಗಿತ್ತು.[೧೦] ಗರ್ಭಪಾತದ ನಂತರ ಗರ್ಭ ಧರಿಸಲು ಅಶಕ್ತಳಾದ ಒಬ್ಬ ಮಹಿಳೆಯು ಬಾಡಿಗೆ ತಾಯಿಯನ್ನು ಪಡೆದ ಪ್ರಿಯಾ ಮಲ್ಹೋತ್ರಾರ ಪಾತ್ರವನ್ನು ಮುಖರ್ಜಿಯವರು ನಿರ್ವಹಿಸಿದರು. ರೆಡ್ ಇಫ್.ಕಾಂ ಬರೆದಿತ್ತು "ದುಃಖಿಸುವುದು ಹಾಗೂ ಬಿಕ್ಕಿ ಅಳುವುದನ್ನು ಬಿಟ್ಟರೆ ಅವರಿಗೆ ಹೆಚ್ಚು ಉತ್ತೇಜನ ನೀಡದ ಒಂದು ಪಾತ್ರದಲ್ಲಿ ರಾಣಿ ಮುಖರ್ಜಿಯವರು ಪ್ರತಿ ಬಂಧಿಸಲ್ಪಟ್ಟಿದ್ದಾರೆ. ಅವರ ಖ್ಯತಿಗೆ ತಕ್ಕಂತೆ ಅವರು, ಒಬ್ಬ ಸ್ಥಿರವಾದ ಸರ್ವೇಸಾಮಾನ್ಯ ತ್ಯಾಗಮಯಿ ಭಾರತೀಯ ನಾರಿಯ ಪಾತ್ರವನ್ನು ವಹಿಸಿದ್ದರೂ, ತಮ್ಮ ಸ್ವಂತಿಕೆಯನ್ನು ನಿರ್ವಹಿಸಿಲು ಯಶಸ್ವಿಯಾಗಿದ್ದಾರೆ".[೧೧]

2002 ರಲ್ಲಿ, ಹೃತಿಕ್ ರೋಶನ್ ಮತ್ತು ಕರೀನಾ ಕಪೂರ್ ರವರ ಜೊತೆ ಕುನಾಲ್ ಕೊಹ್ಲಿಯವರ ಪ್ರೀತಿ ಪೂರ್ವಕ ಚಲನಚಿತ್ರ ಮುಝಸೆ ದೋಸ್ತಿ ಕರೋಗೆ ' ನಲ್ಲಿ ಮುಖರ್ಜಿಯವರು ಪ್ರಮುಖ ಪಾತ್ರದಲ್ಲಿ ಸಹ ನಟಿಯಾಗಿ ನಟಿಸಿದರು. ಆ ಚಲನಚಿತ್ರವು ಭಾರತದಲ್ಲಿ ಅಷ್ಟಾಗಿ ಯಶಸ್ಸನ್ನು ಕಾಣದಿದ್ದರೂ,[೧೨] ಹೊರದೇಶಗಳಲ್ಲಿ ಅದು ಅತ್ಯಧಿಕ ಹೆಚ್ಚು ವ್ಯಾಪಾರವನ್ನು ಗಳಿಸಿತು,[೧೩] ಹಾಗೂ ಭಾರತದ ಅತ್ಯಂತ ದೊಡ್ಡ ನಿರ್ಮಾಣ ಸಂಸ್ಥೆ, ಯಶ್ ರಾಜ್ ಫಿಲಮ್ಸ್ ನಲ್ಲಿ ಪ್ರವೇಶವನ್ನು ಪಡೆದರು. ಮುಂದೆ ಆ ವರ್ಷದಲ್ಲಿ, ಮುಖರ್ಜಿಯವರು ವಿವೇಕ್ ಓಬೆರಾಯ್ ಅವರ ವಿರುದ್ಧ ವಿಮರ್ಶಾತ್ಮಕವಾಗಿ ಯಶಸ್ಸು ಕಂಡ ಶಾದ್ ಅಲಿಯವರ ಸಾಥಿಯಾ ' ದಲ್ಲಿ ಅಭಿನಯಿಸಿದರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಒತ್ತಡಗಳು ಹಾಗೂ ಅತೃಪ್ತಿಯನ್ನು ಎದುರಿಸುವ ಒಬ್ಬ ವೈದ್ಯಕೀಯ ವಿದ್ಯಾರ್ಥಿ ಸುಹಾನಿ ಶರ್ಮಾಳ ಪಾತ್ರವನ್ನು ನಿರ್ವಹಿಸಿ, ಅವರು ಅತ್ಯಂತ ಶ್ರೇಷ್ಠ ಅಭಿನಯಕ್ಕಾಗಿ ಫಿಲ್ಮ್ ಫೇರ್ ವಿಮರ್ಶಕರ ಪ್ರಶಸ್ತಿಯನ್ನು ಪಡೆದರು, ಹಾಹೂ ಇತರ ಅನೇಕ ಚಲನಚಿತ್ರಗಳಿಗೆ ನಾಮನಿರ್ದೇಶನದ ಜೊತೆಗೆ, ಫಿಲ್ಮ್ ಫೇರ್ನಲ್ಲಿ ಮೊದಲ ಅತ್ಯುನ್ನತ ನಟಿ ಪ್ರವೇಶವನ್ನು ಅವರು ಗಳಿಸಿದರು. ಬಿಬಿಸಿ ಯಿಂದ ಮಣಿಶ್ ಗುಜ್ಜರ್ ಅವರು ಸೂಚಿಸಿದರು, "...ರಾಣಿ ಮುಖರ್ಜಿ... ಹೆಚ್ಚಿನ ದೃಢ ಸಂಕಲ್ಪದಿಂದ ಒಬ್ಬ ಮಧ್ಯಮ ವರ್ಗೀಯ ಹುಡುಗಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ."[೧೪]

ಯಶಸ್ಸುಗಳು, 2003 - 06

[ಬದಲಾಯಿಸಿ]

ಶಾರುಖ್ ಖಾನ್ ರವರ ವಿರುದ್ಧ ಅಜೀಜ್ ಮಿರ್ಜಾ ರವರ ಚಲ್ತೆ ಚಲ್ತೆ ಮುಖರ್ಜಿ ಯವರ 2003 ರಲ್ಲಿ ತೆರೆಕಂಡ ಮೊದಲ ಚಲನಚಿತ್ರವಾಗಿತ್ತು.[೧೫] ಆ ಚಲನಚಿತ್ರದಲ್ಲಿ ಅವರು ಸಾಥಿಯಾ ದ ತದ್ರೂಪ ಪಾತ್ರದಲ್ಲೇ ಅಭಿನಯಿಸಿದರು, ಮತ್ತು ಅವರು ಫಿಲ್ಮ್ ಫೇರ್ ಅತ್ಯಂತ ಶ್ರೇಷ್ಠ ಅಭಿನೇತ್ರಿ ಪ್ರಶಸ್ತಿಗೆ ತಮ್ಮ ಎರಡನೆಯ ಬಾರಿಯ ನಾಮನಿರ್ದೇಶನವನ್ನು ಪಡೆದರು. ಆ ವರುಷದಲ್ಲಿ ಬಿಡುಗಡೆಯಾದ ಇತರೆ ಮೂರು ಚಿತ್ರಗಳಲ್ಲಿ, ಮುಖರ್ಜಿ ಚೋರಿ ಚೋರಿ ಚಲನಚಿತ್ರದಲ್ಲಿ ತಮ್ಮ ಮೊದಲ ಹಾಸ್ಯದ ಪಾತ್ರದಲ್ಲಿ ಅಭಿನಯಿಸಿದರು. ಆ ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಮಿಂಚದೆ ಹೋದರೂ, ಮುಖರ್ಜಿಯವರ ಹಾಸ್ಯದ ಸಂಧರ್ಭ ಮೆಚ್ಚುಗೆ ಗಳಿಸಿತು.[೧೬]

2004 ರಲ್ಲಿ, ಮಣಿರತ್ನಂರವರ ಯುವ ದಲ್ಲಿ ಒಬ್ಬ ಬೆಂಗಾಲಿ ಗೃಹಿಣಿಯ ಅವರ ಅಭಿನಯವು ಮುಖರ್ಜಿ ಯವರಿಗೆ ಅವರ ಫಿಲ್ಮ್ ಫೇರ್ ನ ಎರಡನೆಯ ಅತ್ಯಂತ ಶ್ರೇಷ್ಠ ಪೋಷಕ ಅಭಿನೇತ್ರಿ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಆ ಚಲನಚಿತ್ರವು ಹಣ ಗಳಿಸದೇ ನೆಲಕಚ್ಚಿದರೂ,[೧೭] ಅವರ ನಟನೆಯು ಒಬ್ಬ ವಿಮರ್ಶಕರ ಬರಹದೊಂದಿಗೆ ವಿಮರ್ಶಾತ್ಮಕವಾಗಿ ಪ್ರಶಂ ಸೆ ಗಳಿಸಿತು, "ಆ ಪಾತ್ರಕ್ಕೆ ಒಬ್ಬ ಮಹತ್ವದ ನಟಿಯ ಬೇಡಿಕೆಯತ್ತು ಹಾಗೂ ರಾಣಿಯವರು ಆ ನಿರೀಕ್ಷೆಯ ಮಟ್ಟವನ್ನು ಮೀರಿದ್ದಾರೆ".[೧೮] ಪ್ರೇಮ ಪ್ರಕರಣದ ಹಾಸ್ಯದ ಹಮ್ ತುಮ್ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುವುದರ ಮೂಲಕ ಮುಂದುವರಿದರು, ಆ ಚಲನಚಿತ್ರವು ಆ ವರ್ಷದ ಅತ್ಯಂತ ಉನ್ನತ ಹಣ ಗಳಿಕೆಯ ಚಿತ್ರಗಳಲ್ಲೊಂದಾಯಿತು.[೧೭] ಆ ಚಲನಚಿತ್ರವು, 1989 ರ ವೆನ್ ಹ್ಯಾರಿ ಮೆಟ್ ಸ್ಯಾಲಿ ... ಚಿತ್ರವನ್ನಾಧರಿಸಿದ ಕುಣಾಲ್ ಕೊಹ್ಲಿಯವರಿಂದ ನಿರ್ದೇಶಿಸಲ್ಪಟ್ಟಿತು. ಇಂದಿನ ಪೀಳಿಗೆಯ, ಒಬ್ಬ ಮಹಿಳೆ ರ್ಹಿಯಾ ಶರ್ಮಾ ಅಗಿ ಮುಖರ್ಜಿಯವರ ಪಾತ್ರವು ಅವರ ಮೊದಲ ಫಿಲ್ಮ್ ಫೇರ್ ನ ಅತ್ಯಂತ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ತಂದು ಕೊಟ್ಟಿತು. ಬಿಬಿಸಿ ಯು ಅವರ ಸಾಧನೆಯ ಬಗ್ಗೆ ಉಲ್ಲೇಖಿಸಿತು, "ರಾಣಿಯವರು ತಮ್ಮ ಪೀಳಿಗೆಯ ಹೆಚ್ಚು ನಂಬಲಾರ್ಹ ಹಾಗೂ ಬಹುಮುಖ ಪ್ರತಿಭೆಗಳಲ್ಲಿ ಬಹುಬೇಗನೆ ಒಬ್ಬರಾಗುತ್ತಿದ್ದಾರೆ."[೧೯]

ಶಾರುಖ್ ಖಾನ್ ಹಾಗೂ ಪ್ರೀತಿ ಜಿಂಟಾ ರವರ ಜೊತೆ ಸಹ ನಟಿಯಾಗಿ ನಟಿಸಿದ ಯಶ್ ಛೋಪ್ರಾ ಅವರ ಪ್ರೀಯ ವೀರಗಾಥೆ ವೀರ್ ಜರ್ರಾ ಅವರ ಆ ವರುಷದ ಕೊನೆಯ ಚಿತ್ರವಾಗಿತ್ತು. ಆ ಚಲನಚಿತ್ರವು ಭಾರತ ಮತ್ತು ಪರದೇಶಗಳಲ್ಲಿ ವರುಷದ ಒಟ್ಟಾರೆ ಅತಿ ಹೆಚ್ಚು ಗಳಿಕೆಯ ಶ್ರೇಷ್ಠ ಚಿತ್ರವಾಗಿ ಹೊರ ಬಂದಿತು,[೧೩][೧೭] ಆ ಚಿತ್ರದಲ್ಲಿ ಖಾನ್ ರವರು ಅಭಿನಯಿಸಿದ ಭಾರತೀಯ ಅಧಿಕಾರಿ, ವೀರ್ ಪ್ರತಾಪ್ ಸಿಂಗ್ ಹಾಗೂ ಜಿಂಟಾ ರವರಿಂದ ನಟಿಸಲ್ಪಟ್ಟ ಒಬ್ಬ ಪಾಕಿಸ್ತಾನಿ ಮಹಿಳೆ ಜರ್ರಾ ರ ಪ್ರೇಮ ಪ್ರಕರಣದ ಗಾಥೆಯನ್ನು ತಿಳಿಸುತ್ತದೆ. ಮುಖರ್ಜಿಯವರು ವೀರ್ ಪ್ರತಾಪ್ ಸಿಂಗ್ ನ ಬಗ್ಗೆ ಸತ್ಯಾಂಶವನ್ನು ಕಂಡುಹಿಡಿಯಲು ಸ್ವತಃ ಜವಾಬ್ದಾರಿ ವಹಿಸುವ ಒಬ್ಬ ಪಾಕಿಸ್ತಾನಿ ನ್ಯಾಯವಾದಿಯಾಗಿ ಸಾಮಿಯಾ ಸಿದ್ದಿಕಿಯ ಪೋಷಕ ಪಾತ್ರದಲ್ಲಿ ಅಭಿನಯಿಸಿದರು.

ಚಿತ್ರ:Rani in Black.jpg
ಮುಖರ್ಜಿ ಅವರು ಚಲನಚಿತ್ರ ವಿಮರ್ಶಕರಿಂದ ಅತ್ಯಧಿಕವಾಗಿ ಶ್ಲಾಘಿಸಲ್ಪಟ್ಟ ಬ್ಲಾಕ್ (2005) ರಲ್ಲಿ ಕುರುಡಿ, ಕಿವುಡಿ ಹಾಗೂ ಮೂಕಿ ಮೈಖೆಲ್ಲಿ ಮ್ಯಾಕ್ ನಲ್ಲಿ ಆಗಿ ಕ್ರಮವಾಗಿ ಎರಡನೆಯ ವರುಷದಲ್ಲಿ ಫಿಲ್ಮ್ ಫೇರ್ ಅತ್ಯಂತ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಗಳಿಸಿದಾಗ.

2005 ರಲ್ಲಿ, ಮುಖರ್ಜಿಯವರು ನಾಲ್ಕು ಉನ್ನತ-ವ್ಯಕ್ತಿ ಚಲನಚಿತ್ರಗಳಲ್ಲಿ ನಟಿಸಿದರು: ಸಂಜಯ್ ಲೀಲಾ ಬನ್ಸಾಲಿ ಅವರ ಬ್ಲಾಕ್ ', ಶಾದ್ ಅಲಿ ಅವರ ಬಂಟಿ ಔರ್ ಬಬ್ಲಿ' , ಅಮೋಲ್ ಪಾಲೇಕರ್ ಅವರ ಪಹೇಲಿ ' ಹಾಗೂ ಕೇತನ್ ಮೆಹ್ತಾ ಅವರ ದಿ ರೈಸಿಂಗ್ '. ಅವರು ಬ್ಲಾಕ್ ' ಚಲನಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಪ್ರಾಥಮಿಕವಾಗಿ ಪ್ರಸಿದ್ಧರಾದರು. ಬನ್ಸಾಲಿಯವರು ತಮ್ಮ ಪ್ರಸ್ತಾವನೆಯೊಂದಿಗೆ ಮುಖರ್ಜಿ ಅವರ ಬಳಿ ಮೊದಲು ಬಂದಾಗ, ಅವರು ಅದನ್ನು ನಿರಾಕರಿಸಿದರು[೨೦] ಹಾಗೂ ಕಿವುಡಿ - ಕುರುಡಿ ಹುಡುಗಿಯ ಪಾದಲ್ಲಿ ಮಾಡಲು ತಮಗೆ ಸಾಕಷ್ಟು ಭರವಸೆಯಿಲ್ಲವೆಂದು ತಿಳಿಸಿದರು.[೨೦] ಒಮ್ಮ ನಿರ್ದೇಶಕರು ಅವರಲ್ಲಿ ಭರವಸೆ ವಹಿಸಿದಾಗ, ಅವರು ಆ ಪಾತ್ರವನ್ನು ನಿರ್ವಹಿಸಲು ಒಪ್ಪಿದರು ಮತ್ತು ಮುಂಬೈನಲ್ಲಿನ ಹೆಲೆನ್ ಕೆಲ್ಲರ್ ಸಂಸ್ಥೆಯಲ್ಲಿ ವೃತ್ತಿಪರ ತರಬೇತುದಾರರ ಜೊತೆ ಸಂಜ್ಞಾ ಭಾಷೆಯನ್ನು ತೀವ್ರವಾಗಿ ಅಧ್ಯಯನ ಮಾಡಿದರು.[೨೧] ಮುಖರ್ಜಿ ಯವರು ತಮ್ಮ ಅಭಿನಯಕ್ಕಾಗಿ ಹೆಚ್ಚಿನ ವಿಮರ್ಶಾ ಪ್ರಶಂಸೆ ಗಳಿಸಿದರು ಹಾಗೂ ಅನೇಕ ಪ್ರಶಸ್ತಿ ಸಮಾರಂಭಗಳಲ್ಲಿ ಅತ್ಯಂತ ಶ್ರೇಷ್ಠ ನಟಿಯ ವರ್ಗದಲ್ಲಿ ಬಹಳಷ್ಟು ಬಹುಮಾನಗಳನ್ನು ಸಂಗ್ರಹಿಸಿದರು. ಇಂಡಿಯಾಎಫ್ಎಮ್ ಉಲ್ಲೇಖಿಸಿತು, "ಇಂದಿನವರೆಗೂ ಸಮಯಕ್ಕೆ ಸರಿಯಾಗಿ ರಾಣಿಯವರು ತಮ್ಮ ಅತ್ಯುನ್ನತ ಸಾಧನೆಯನ್ನು ನೀಡಿದ್ದಾರೆ ಎಂಬುದನ್ನು ತಿರಸ್ಕರಿಸುವಂತಿಲ್ಲ. ಅವರ ಪಾತ್ರದಲ್ಲಿ ಯಾವುದೇ ಸಂಭಾಷಣೆಯಿಲ್ಲದೆ, ಏಕಾಂಗಿಯಾಗಿ ತಮ್ಮ ಭಾವನೆಗಳ ಮೂಲಕ ನಟಿಯು ವ್ಯಕ್ತಪಡಿಸುತ್ತಾರೆ ಹಾಗೂ ಅವರು ಎಂತಹ ಅದ್ಭುತ ಪ್ರಭಾವ ಬೀರುತ್ತಾರೆ. ಅವರ ಈ ಅಭಿನಯದ ಸಾಧನೆಯು ಎಲ್ಲಾ ಮಹತ್ವಾಕಾಂಕ್ಷೆಯ ನಟರಿಗೂ ಪರಾಮರ್ಶೆಯ ಮಾರ್ಗದರ್ಶಿಯಾಗಿ ಮುನ್ನಡೆಸಲಿದೆ".[೨೨] ಅವರ ಮುಂದಿನ ಬಿಡುಗಡೆ, ಬಂಟಿ ಔರ್ ಬಬ್ಲಿ ' ಚಲನಚಿತ್ರ ಆ ವರ್ಷದ ಅತಿಹೆಚ್ಚು ಹಣಗಳಿಕೆಯ ಅತ್ಯುನ್ನತ ಚಿತ್ರಗಳಲ್ಲೊಂದಾಗಿ ಹೊರಬಂದಿತು.[೨೩] ಆ ಚಲನಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾದರೂ ಹಾಗೂ ಅಂತೆಯೇ ಮುಖರ್ಜಿಯವರ ಅಭಿನಯವೂ, ಒಬ್ಬ ವಿಮರ್ಶಕ ಬರವಣಿಗೆಯೊಂದಿಗೆ, ಮಿಶ್ರ ಪ್ರತಿಕ್ರಿಯೆಗಳನ್ನು ಕಂಡಿತು, ಅಳುವ ದೃಶ್ಯಗಳಲ್ಲಿ ಕೆಲವು ಬಾರಿ ಮೇರೆ ಮೀರಿ ನಟನೆ ಮಾಡಿದ್ದಾರೆ, "ರಾಣಿಯವರು ಹೆಚ್ಚು ಸಮಯ ಒಂದು ಶ್ರೇಷ್ಠ ನಟನೆ ಮಾಡಿದ್ದಾರೆ".[೨೪] ಆದಾಗ್ಯೂ, ಮುಖರ್ಜಿಯವರು ಐಐಎಫ್ಎ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳಿಂದಅತ್ಯಂತ ಶ್ರೇಷ್ಠ ನಟಿ ನಾಮನಿರ್ದೇಶನವನ್ನು ಪಡೆದರು.

ಮೀರಾ ನಾಯರ್ ಅವರ ಹಾಲಿವುಡ್ ಚಲನಚಿತ್ರ ದಿ ನೇಮ್ ಸೇಕ್ ' (2007) ರಲ್ಲಿ ಮುಖರ್ಜಿಯವರಿಗೆ ಪ್ರಮುಖ ಪಾತ್ರ ಕೊಡಲ್ಪಟ್ಟಿತು, ಆದರೆ ಕಭಿ ಅಲ್ವಿದ ನಾ ಕೆಹೆನಾ ' ಚಿತ್ರ ದೊಂದಿಗೆ ಸಮಯ ಹೊಂದಾಣಿಕೆಯಾಗದ ಕಾರಣ, ಆ ಚಿತ್ರಕ್ಕೆ ಅವರು ತಮ್ಮ ಒಪ್ಪಿಗೆ ಕೊಡಲಿಲ್ಲ.[೨೫] ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಅಭಿಷೇಕ್ ಬಚ್ಚನ್, ಪ್ರೀತಿ ಜಿಂಟಾ ಹಾಗೂ ಕಿರೊಣ್ ಖೇರ್ ರಂತಹ ಬಹು ನಟರನ್ನು ಒಳಗೊಂಡ ಕರಣ್ ಜೋಹರ್ ಅವರ ಚಲನಚಿತ್ರ ಕಭಿ ಅಲ್ವಿದ ನಾ ಕೆಹೆನಾ 2006 ರಲ್ಲಿ ತೆರೆಕಂಡ ಅವರ ಮೊದಲ ಚಿತ್ರವಾಗಿತ್ತು. ಆ ಚಿತ್ರವು ಮಿಶ್ರ ಪುರ್ನವಿಮರ್ಶೆಗಳೊಂದಿಗೆ ಆರಂಭಗೊಂಡಿತು ಕಂಡಿತು ಆದರೆ ಪರದೇಶಗಳಲ್ಲಿ ಎಂದೆಂದಿಗೂ ಅತಿ ಹೆಚ್ಚು ಗಳಿಕೆಯ ಅತ್ಯಂತ ಶ್ರೇಷ್ಠ ಯಶಸ್ವಿ ಚಿತ್ರವಾಗಿ ಹೊರಬಂದಿತು.[೧೩] ಇತರೆ ಹೊರಗಿನ ಹೆಚ್ಚಿನ ದಾಂಪತ್ಯದ ಸಂಬಂಧಗಳಲ್ಲಿ ಪರಿಣಮಿಸುವ, ನ್ಯೂಯಾರ್ಕ್ ನಲ್ಲಿನ ಇಬ್ಬರು ದುಃಖಿ ವಿವಾಹವಾದ ದಂಪತಿಗಳ ಕತೆಯನ್ನು ಈ ಚಲನಚಿತ್ರವು ತಿಳಿಸುತ್ತದೆ. ಅಭಿಷೇಕ್ ಬಚ್ಚನ್ ಅಭಿನಯಿಸಿದ ಆಕೆಯ ಪತಿಯಾಗಿ ಹಾಗೂ ಆಕೆಯ ಮಧ್ಯದ ಸಂಬಂಧದ ಬಗ್ಗೆ ಸ್ವತಃ ಆಶಂಕೆ ಹಾಗೂ ಪ್ರಶ್ನೆಗಳೊಂದಿಗೆ ವಿಸ್ತರಣೆಯಾದ ಒಬ್ಬ ಮಹಿಳೆ, ಮಾಯಾ ತಲ್ವಾರರ ಪಾತ್ರವನ್ನು ಮುಖರ್ಜಿಯವರು ನಿರ್ವಹಿಸಿದರು; ಆಕೆಯ ಅಭಿನಯವು ಬಹಳವಾಗಿ ಶ್ಲಾಘನೆಯೊಂದಿಗೆ ಸ್ವೀಕರಿಸಲ್ಪಟ್ಟಿತು. ಸಿಎನ್ ಎನ್-ಐಬಿಎನ್ ನಿಂದ ರಾಜೀವ್ ಮಸಂದ್ ರವರು ಅಭಿಪ್ರಾಯಪಟ್ಟರು, "ರಾಣಿಯವರು ಒಂದು ಮಿಯನ್ ಹಣದಂತೆ ಕಾಣುತ್ತಾರೆ ಹಾಗೂ ಬಹಳ ಕಾಲದವರೆಗೆ ನಾವು ನೆನಪಿನಲ್ಲಿಟ್ಟುಕೊಳ್ಳುವಂತೆ ಒಂದು ಭಾಗವನ್ನು ನಿರ್ವಹಿಸಲು ತಮ್ಮ ಪಾತ್ರದೊಳಗೆ ಮುಳುಗಿ ಹೋಗುತ್ತಾರೆ".[೨೬] ಅತ್ಯುತ್ತಮ ನಟಿ ಪ್ರಶಸ್ತಿಗೆ ಅವರು ಅನೇಕ ನಾಮನಿರ್ದೇಶನಗಳನ್ನು ಪಡೆದರು ಮತ್ತು ಅನುಕ್ರಮವಾಗಿ ಮೂರನೆಯ ವರ್ಷಕ್ಕೆ ಮೂರನೆಯ ಐಐಎಫ್ಎ ಅತ್ಯಂತ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಗಳಿಸಿದರು. ಮುಖರ್ಜಿಯವರ ಮುಂದಿನ ಬಿಡುಗಡೆಯಾದ ಚಲನಚಿತ್ರ ಬಿ.ಆರ್.ಚೋಪ್ರಾ ರವರ ಬಾಬುಲ್ . ಪರದೇಶಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಚಲನಚಿತ್ರವಾದರೂ, ಆ ಚಿತ್ರವು ಭಾರತದಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಸೋತಿತು[೨೭].[೧೩] ಒಬ್ಬ ವಿಧವೆಯಾಗಿ ಅವರ ಪಾತ್ರವು ಮಿಶ್ರ ಪ್ರತಿಕ್ರಿಯೆಗಳನ್ನು ಕಂಡಿತು.

ಇತ್ತೀಚಿನ ಕೆಲಸ, 2007 - ವರ್ತಮಾನ

[ಬದಲಾಯಿಸಿ]

2007ರಲ್ಲಿ ಮೊದಲನೆಯದಾಗಿ ಬಿಡುಗಡೆಯಾದ ಮುಖರ್ಜಿಯ ಚಿತ್ರ ತಾ ರಾ ರಮ್ ಪಮ್ ನಲ್ಲಿ ಮುಖರ್ಜಿ ಮೊಟ್ಟ ಮೊದಲ ಬಾರಿಗೆ ಪಿಯಾನೋವಾದಕಿಯಾಗಿದ್ದು ನಂತರ ಗೃಹಿಣಿ ಹಾಗೂ ತಾಯಿಯಾಗಿ ಅಭಿನಯಿಸಿದರು; ಈ ಚಿತ್ರ ಅರೆ-ಯಶಸ್ವಿಯಾಯಿತು.[೨೮] ಅವರ ಅಭಿನಯವು ಸಾಮಾನ್ಯವಾಗಿ ಒಳ್ಳೆಯ ಪ್ರತಿಕ್ರಿಯೆಯನ್ನೇ ಪಡೆಯಿತು; ಒಬ್ಬ ವಿಮರ್ಶಕನು "ರಾಣಿ ತಾಯಿ ಮತ್ತು ಹೆಂಡತಿಯ ಪಾತ್ರವನ್ನು ಸೊಗಸಾಗಿ ನಿಭಾಯಿಸಿದ್ದಾರೆ" ಎಂದನು.[೨೯] ಆ ವರ್ಷದ ಅವರ ಕಡೆಯ ಎರಡು ಚಿತ್ರಗಳಾದ ಪ್ರದೀಪ್ ಸರ್ಕಾರ್ ರ ನಾಟಕಾಧಾರಿತ ಲಾಗಾ ಚುನರೀ ಮೇ ದಾಗ್ (ಈ ಚಿತ್ರದಲ್ಲಿ ಅವರು ಕುಟುಂಬದ ಸಮಸ್ಯೆಗಳ ಒತ್ತಡದಿಂದ ವೇಶ್ಯೆಯಾಗಬೇಕಾದ ಮಹಿಳೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ) ಮತ್ತು ಸಂಜಯ್ ಲೀಲಾ ಬನ್ಸಾಲಿಯವರ ಸಾವರಿಯಾ (ಈ ಚಿತ್ರದಲ್ಲೂ ಅವರು ವೇಶ್ಯೆಯ ಪಾತ್ರವಹಿಸಿದ್ದರು)ಗಳು ವಿಮರ್ಶೆ ಮತ್ತು ಗಳಿಕೆ ಎರಡರಲ್ಲೂ ಸೋತವು.[೨೮]

27 ನೇ ಜೂನ್ 2008 ರಂದು ಬಿಡುಗಡೆಯಾದ ಕುನಾಲ್ ಕೊಹ್ಲಿಯವರ ಥೋಡಾ ಪ್ಯಾರ್ ಥೋಡಾ ಮ್ಯಾಜಿಕ್ ನಲ್ಲಿ ಮುಖರ್ಜಿಯವರ ಪಾತ್ರವು ವಿಮರ್ಶಕರಿಂದ ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯಿತು ಆದಾಗ್ಯೂ, ಗಲ್ಲಾ ಪೆಟ್ಟಿಗೆಯಲ್ಲಿ ಆ ಚಲನಚಿತ್ರವು ಚೆನ್ನಾಗಿ ನಡೆಯದೆ ಸೋತು ಹೋಯಿತು. ಯಶ್ ರಾಜ್ ಫಿಲಮ್ಸ್ ಲಾಂಛನದಡಿ 18 ನೇ ಸೆಪ್ಟೆಂಬರ್ 2009 ರಂದು ಬಿಡುಗಡೆಯಾದ ಅವರ ಅತ್ಯಂತ ಇತ್ತೀನ ಚಲನಚಿತ್ರ ದಿಲ್ ಬೋಲೆ ಹಡಿಪ್ಪ ಟೊರಾಂಟೊ ಅಂತರರಾಷ್ಟ್ರೀಯ ಚತ್ರೋತ್ಸವದಲ್ಲಿ ತೆರೆ ಕಂಡಿತು ಹಾಗೂ ಗಲ್ಲಾ ಪೆಟ್ಟಿಗೆಯಲ್ಲಿ ಸಾಧಾರಣ ಪ್ರತಿಕ್ರಿಯೆ ಗಳನ್ನು ಕಂಡಿತು. ಏನೇ ಆದರೂ, ಮೊದಲ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡುವ ಕನಸು ಕಾಣುವ ಒಬ್ಬ ಧೈರ್ಯವಂತ ಪಂಜಾಬಿ ಹಳ್ಳಿಯ ಹುಡುಗಿಯಾಗಿ ಮುಖರ್ಜಿಯವರು ಅಭಿನಯಿಸಿದರು. ಆ ಚಲನಚಿತ್ರದಲ್ಲಿ ಅವರ ಅಭಿನಯ ಸಾಮರ್ಥ್ಯವು ವಿಮರ್ಶಕರಿಂದ ಚೆನ್ನಾಗಿ ಸ್ವೀಕರಿಸಲ್ಪಟ್ಟಿತು.[೩೦] ಆ ಚಲನಚಿತ್ರದಲ್ಲಿ ಸಹ ನಟರಾಗಿ ಶಾಹಿದ್ ಕಪೂರ್ ಹಾಗು ಅನುಪಮ್ ಖೇರ್ ಅಭಿನಯಿಸಿದ್ದಾರೆ. ಮುಖರ್ಜಿಯವರು ಈಗ ಪ್ರಚಲಿತದಲ್ಲಿ ರಾಜ್ಕುಮಾರ್ ಗುಪ್ತಾ ರವರು ನಿರ್ದೇಶಿಸುತ್ತಿರುವ ಹಾಗೂ ಯುಟಿವಿ ಮೋಷನ್ ಪಿಕ್ಚರ್ಸ್ ರವರಿಂದ ತಯಾರಿಸಲ್ಪಡುತ್ತಿರುವ ನೊ ಒನ್ ಕಿಲ್ಲಡ್ ಜಸ್ಸಿಕಾ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಲನಚಿತ್ರವು ವಿವಾದಾಸ್ಪದ ಜಸ್ಸಿಕಾ ಲಾಲ್ ಕೊಲೆ ಮೊಕದ್ದಮೆಯ ಮೇಲೆ ಆಧರಿಸಲ್ಪಟ್ಟಿದೆಯೆಂದು ನಂಬಲಾಗಿದೆ.[೩೧]

ವೈಯಕ್ತಿಕ ಜೀವನ

[ಬದಲಾಯಿಸಿ]

ಮುಖರ್ಜಿ ಯವರು ತಮ್ಮ ಉಪನಾಮಧೇಯವನ್ನು ಮುಖರ್ಜೀ ಇಂದ ಮುಖರ್ಜಿ ಗೆ ಅನೇಕ ವರ್ಷಗಳ ಹಿಂದೆಯೇ ಬದಲಾಯಿಸಿ ಕೊಂಡಿದ್ದರು. ಆ ಸಮಯದಲ್ಲಿ, ಅವರು ಇದನ್ನು ಭವಿಷ್ಯ ತಿಳಿಸುವ ಸಂಖ್ಯಾಶಾಸ್ತ್ರದ ಕಾರಣಗಳಿಗಾಗಿ ಮಾಡಿದುದಾಗಿ ವರದಿಯಾಗಿತ್ತು. 2006 ರಲ್ಲಿ, ಸಂಖ್ಯಾ ಶಾಸ್ತ್ರವು ವ್ಯಾಕುಲತೆಯಲ್ಲವೆಂದು ಮುಖರ್ಜಿ ಯವರು ತಿಳಿಸಿದ್ದರು; ಅವರ ಹೆಸರು ರಹದಾರಿ ಪತ್ರದ ಮೇಲೆ ಮುಖರ್ಜಿ ಎಂದು ಬರೆದ ಕಾರಣ, ಮತ್ತು ತಾವು ಏಕ ರೂಪತೆಯನ್ನು ಬಯಸುವುದಾಗಿ ಹೇಳಿದರು.

ತಮ್ಮ ಬಾಲ್ಯದ ಮನೆಯೂ ಸೇರಿದಂತೆ ಮುಂಬೈನಲ್ಲಿ ಮುಖರ್ಜಿಯವರು ಮೂರು ಮನೆಗಳನ್ನು ಹೊಂದಿದ್ದಾರೆ. 2005 ರ ಮಧ್ಯ ಭಾಗದಲ್ಲಿ ತಮ್ಮ ಸ್ವಂತಕ್ಕೊಂದು ಹಾಗೂ ತಮ್ಮ ತಂದೆತಾಯಿಗಳಿಗೆಂದು ಜುಹು ನಲ್ಲಿ ಅವರು ಒಂದು ಬಂಗಲೆಯನ್ನು ಕೊಂಡುಕೊಂಡರು. ಟ್ವಿಂಕಲ್ ಖನ್ನಾ ಮತ್ತು ಸುಸ್ಸಾನೆ ರೋಷನ್ ರವರಿಂದ ಆಂತರಿಕ ವಿನ್ಯಾಸದೊಡನೆ ಮನೆಯು ಎರಡು ವರುಷಗಳ ಪುನ ರ್ನವೀಕರಣವನ್ನು ಕಂಡಿತು.[೩೨]

ವಿವಾದಗಳು

[ಬದಲಾಯಿಸಿ]

ಜೂನ್ 2005,ರಲ್ಲಿ ಬ್ರಿಟಿಷ್ ಪತ್ರಿಕೆ ದೇಸಿ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದ ನಂತರ ಮುಖರ್ಜಿ ಬಹಳ ಟೀಕೆಗೆ ಒಳರಾದರು. ಮುಖರ್ಜಿಯನ್ನು ನಿಮ್ಮ ಆರಾಧ್ಯವ್ಯಕ್ತಿ ಯಾರು ಎಂದು ಕೇಳಿದಾಗ ಅವರು "ಅಡಾಲ್ಫ್ ಹಿಟ್ಲರ್" ಎಂದರು.[೩೩] ಆದರೆ, ಒಂದು ವರ್ಷದ ನಂತರ ಟೈಮ್ಸ್ ನೌ ಗೆ ನೀಡಿದ ಸಂದರ್ಶನದಲ್ಲಿ, ಅವರು ತಾವು ಹಿಟ್ಲರ್ ನ ಹೆಸರನ್ನು ಎಂದೂ ಹೇಳಿಯೇ ಇಲ್ಲವೆಂದು ಹೇಳಿಕೆಯಿತ್ತರು.[೩೩]

ನವೆಂಬರ್ 2006ರಲ್ಲಿ ಮುಖರ್ಜಿ ಲಾಗಾ ಚುನರೀ ಮೇ ದಾಗ್ ನ ಚಿತ್ರೀಕರಣಕ್ಕೆಂದು ವಾರಣಾಸಿಯಲ್ಲಿದ್ದಾಗ ಅವರ ಅಭಿಮಾನಿಗಳು ಆ ಚಿತ್ರೀಕರಣ ತಂಡವನ್ನು ಸುತ್ತುವರಿದರು. ರಕ್ಷಣಾ ಸಿಬ್ಬಂದಿಗಳು ಆ ಗುಂಪನ್ನು ಥಳಿಸಿ ಹಿಂದಕ್ಕಟ್ಟಿದರು.[೩೪] ಹಲವಾರು ತಂಡಗಳು ಮುಖರ್ಜಿ ಆ ಸಿಬ್ಬಂದಿಗಳನ್ನು ತಡೆಯಬೇಕಿತ್ತು ಎಂದು ವಾದ ಹೂಡಲಾರಂಭೀಸಿ ಮಾಧ್ಯಮದಲ್ಲಿ ಒಂದು ಬಿರುಗಾಳಿಯೇ ಎದ್ದಿತು. ಮುಖರ್ಜಿ ನಂತರ ಕ್ಷಮೆ ಯಾಚಿಸಿದರು.[೩೪]

ಇತರೆ ಸಾಧನೆಗಳು

[ಬದಲಾಯಿಸಿ]

ಮಾರ್ಚ್ 2004ರಲ್ಲಿ ಮುಖರ್ಜಿ ಸೈನಿಕರ ನೈತಿಕಬಲವನ್ನು ದೃಢಪಡಿಸುವ ಸಲುವಾಗಿ ರಾಜಾಸ್ತಾನದ ಮರಳುಗಾಡಿಗೆ ಭೇಟಿ ಇತ್ತರು. NDTV ತಂಡದೊಂದಿಗೆ ದೂರ ಪ್ರದೇಶಗಳಲ್ಲಿ ಕೆಲಸ ಮಾಡುವ ಭಾರತೀಯ ಸೇನೆಗೆ ಮನರಂಜನೆ ನೀಡಲು ಹಾಗೂ ಹುರಿದುಂಬಿಸಲು ಮನರಂಜಕರು ಮತ್ತು ತಾರೆಯರು ಭೇಟಿ ನೀಡುವಂತಹ ಷೋ ಅದಾಗಿತ್ತು.[೩೫]

ಫೆಬ್ರವರಿ 2005ರಲ್ಲಿ ಮುಖರ್ಜಿ HELP! ನಲ್ಲಿ ಪ್ರದರ್ಶನವಿತ್ತರು.ತ್ಸುನಾಮಿಗೆ ಬಲಿಯಾದವರಿಗೆ ಪರಿಹಾರ ನೀಡಲು ಹಣ ಹೊಂದಿಸುವುದಕ್ಕಾಗಿ ಹಮ್ಮಿಕೊಂಡ ಕಾರ್ಯಕ್ರಮ ಟೆಲಿಥಾನ್ ಕನ್ಸರ್ಟ್ ನಲ್ಲಿ ಇವರು ಇತರ ಬಾಲಿವುಡ್ ತಾರೆಯರೊಡನೆ ಭಾಗವಹಿಸಿದರು.[೩೬]

2005ರಲ್ಲಿ ನವದೆಹಲಿಯಲ್ಲಿ ನಡೆದ ಟೆಂಪ್ಟೇಷನ್ಸ್ 2005 ನಲ್ಲಿ ಅವರು ತಮ್ಮನ್ನು ಬಹಳವಾಗಿಯೇ ತೊಡಗಿಸಿಕೊಂಡರು. ವಿಕಲಚೇತನರ ಹಕ್ಕುಗಳಿಗಾಗಿ ಹೋರಾಡುವ ಪ್ರಮುಖ ಸಂಸ್ಥೆಗಳಲ್ಲೊಂದಾದ ನ್ಯಾಷನಲ್ ಸೆಂಟರ್ ಫಾರ್ ಪ್ರೊಮೋಷನಲ್ ಆಪ್ ಎಂಪ್ಲಾಯ್ಮೆಂಟ್ ಫಾರ್ ಡಿಸೇಬಲ್ಡ್ ಪೀಪಲ್ (NCPEDP)ಗಾಗಿ ಹಣ ಸಂಗ್ರಹಿಸಲು ಈ ನಟಿ ಸಹಾಯ ಮಾಡಿದರು.[೩೭]

2007ರಲ್ಲಿ ಕೌನ್ ಬನೇಗ ಕರೋಡ್ ಪತಿ ಯಲ್ಲಿ ಪ್ರೀತಿ ಝಿಂಟಾರೊಡನೆ ಭಾಗವಹಿಸಿದಾಗ ತಮ್ಮ ಪಾಲಿಗೆ ಬಂದ 50 ಲಕ್ಷ ರೂಗಳನ್ನು ಮುಖರ್ಜಿ ಹೋಲಿ ಫ್ಯಾಮಿಲಿ ಹಾಸ್ಪಿಟಲ್ ಗೆ ದಾನ ಮಾಡಿದರು. ಈ ಸಂಸ್ಥೆಯು ಹೃದಯಸಂಬಂಧಿತ ತೊಂದರೆಗಳಿರುವ ಮಕ್ಕಳನ್ನು ನೋಡಿಕೊಳ್ಳುತ್ತದೆ ಎಂದು ಅರು ಹೇಳಿದರು.[೩೮]

ಮುಖರ್ಜಿ ವೇದಿಕೆಯಲ್ಲಿ ಪ್ರದರ್ಶನ ನೀಡುವುದರಲ್ಲೂ ಚದುರೆ; ಅವರು ಎರಡು ವಿಶ್ವಪ್ರವಾಸಗಳನ್ನು ಕೈಗೊಂಡಿದ್ದಾರೆ. 1999ರಲ್ಲಿ ಅವರ ಮೊದಲ ವಿಶ್ವ ಪರ್ಯಟನೆಯಲ್ಲಿ ಅವರೊಂದಿಗಿದ್ದವರು ಆಮೀರ್ ಖಾನ್, ಐಶ್ವರ್ಯ ರೈ, ಅಕ್ಷಯ್ ಖನ್ನಾ ಮತ್ತು ಟ್ವಿಂಕಲ್ ಖನ್ನಾ. ಈ ತಂಡವು ಮ್ಯಾಗ್ನಿಫಿಸೆಂಟ್ ಫೈವ್ ಎಂದೇ ಖ್ಯಾತವಾಗಿತ್ತು.[೩೯] ಐದು ವರ್ಷಗಳ ನಂತರ Tಟೆಂಪ್ಟೇಷನ್ಸ್ 2004 ಬಂದಿತು. ಅದು ಆ ಕಾಲದ ಅತ್ಯಂತ ಯಶಸ್ವಿ ಬಾಲಿವುಡ್ ಕಚೇರಿಯಾಗಿತ್ತು. ಮುಖರ್ಜಿ ಶಾ ರೂಖ್ ಖಾನ್, ಸೈಫ್ ಆಲಿ ಖಾನ್, ಪ್ರೀತಿ ಝಿಂಟಾ, ಅರ್ಜುನ್ ರಾಂಪಾಲ್ ಮತ್ತು ಪ್ರಿಯಾಂಕಾ ಛೋಪ್ರಾರೊಡಗೂಡಿ ಹತ್ತೊಂಬತ್ತು ವೇದಿಕಾ ಪ್ರದರ್ಶನಗಳನ್ನು ವಿಶ್ವದಾದ್ಯಂತ ನೀಡಿದರು.[೪೦]

2005ರಲ್ಲಿ ಜನರಲ್ ಪರ್ವೇಝ್ ಮುಷರಫ್ ಹಾಗೂ ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಘ್ರವರಿಗಾಗಿ ಏರ್ಪಡಿಸಿದ್ದ ಸ್ಟೇಟ್ ಡಿನ್ನರ್ ಗೆ ಆಮಂತ್ರಿಸಿದ ಗಣ್ಯರಲ್ಲಿ ಮುಖರ್ಜಿ ಒಬ್ಬರಾಗಿದ್ದರು.[೪೧] ಮುಖರ್ಜಿ ಆ ಗಣ್ಯಾತಿಗಣ್ಯ ಅತಿಥಿಗಳ ಪಟ್ಟಿಯಲ್ಲಿದ್ದ ಏಕೈಕ ಬಾಲಿವುಡ್ ತಾರೆಯಾಗಿದ್ದರು.[೪೨]

2010 ರ ಕಾಮನ್ ವೆಲ್ತ ಆಟೋಟಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರದರ್ಶಿಸುವ ಅಭಿನಯದ ಅಂಗವಾಗಿ ಮೆಲ್ಬೊರನ್ ನಲ್ಲಿ 2006 ರ ಕಾಮನ್ ವೆಲ್ತ್ ಆಟೋಟಗಳ ಮುಕ್ತಾಯ ಸಮಾರಂಭದಲ್ಲಿ ಇತರೆ ಅನೇಕ ಬಾಲಿವುಡ್ ತಾರೆಯೊರಂದಿಗೆ ಅವರು ಭಾಗವಹಿಸಿದರು.[೪೩]

ಸಮೂಹ ಮಾಧ್ಯಮಗಳಲ್ಲಿ

[ಬದಲಾಯಿಸಿ]

ರಾಣಿ ಮುಖರ್ಜಿಯವರು ಸತತವಾಗಿ ಎರಡು ವರ್ಷಗಳ ಕಾಲದವರೆಗೆ (2004-2005) ಫಿಲ್ಮ ಫೇರ್ ನ 'ಟಾಪ್ ಟೆನ್ ಬಾಲಿವುಡ್ ಆಕ್ಟ್ರೆಸ್' ಪಟ್ಟಿಯಲ್ಲಿ ಉನ್ನತ ಸ್ಥಾನವನ್ನು ಗಳಿಸಿದರು.[೪೪] ಅವರು ಅನುಕ್ರಮವಾಗಿ ಮೂರು ವರ್ಷಗಳ ಕಾಲದವರೆಗೆ (2004-2006) ರೆಡ್ ಇಫ್ ನ 'ಟಾಪ್ ಬಾಲಿವುಡ್ ಫೀಮೇಲ್ ಸ್ಟಾರ್" ನಲ್ಲಿ ಒಂದನೆಯ ಸ್ಥಾನವನ್ನು ಅಲಂಕರಿಸಿದ್ದರು, ಹಾಗೂ 2007 ರಲ್ಲಿ ಐದನೆಯ ಶ್ರೇಯಾಂಕವನ್ನು ಪಡೆದಿದ್ದರು.[] ಫೆಬ್ರವರಿ 2006 ರಲ್ಲಿ, ಫಿಲ್ಮ್ ಫೇರ್ ಮ್ಯಾಗಜೈನ್ ಅವರನ್ನು 'ಟೆನ್ ಮೊಸ್ಟ್ ಪವರ್ ಫುಲ್ ನೇಮ್ಸ್ ಆಫ್ ದಿ ಬಾಲಿವುಡ್'[೪೫] ಪಟ್ಟಿಯಲ್ಲಿ ಅವರನ್ನು ಎಂಟನೆಯವರನ್ನಾಗಿ ಆರಿಸಿತು, ಅವರ ಹಿಂದಣ ವರ್ಷದಿಂದ ಮುನರಾವೃತ್ತಿಗೊಂಡ ಒಂದು ದಾಖಲೆ, ಆ ಪಟ್ಟಿಯಲ್ಲಿ ಅವರು ಏಕೈಕ ಮಹಿಳೆಯಾಗಿ ಹತ್ತನೆಯ ಶ್ರೇಯಾಂಕವನ್ನು ಪಡೆದರು.[೪೬] 2007 ರಲ್ಲಿ, ಅವರು ಐದನೆಯ ಶ್ರೇಣಿಯನ್ನು ಗಳಿಸಿದರು.[೪೭] 2007 ರ ಅಂತರಾಷ್ಟ್ರೀಯ ಮಹಿಳಾ ದಿನದಂದು, ಆಲ್-ಟೈಮ್ ಬೆಸ್ಟ್ ಬಾಲಿವುಟ್ ಆಕ್ಟ್ರೆಸ್ ಎವರ್ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನವನ್ನು ಗಳಿಸಿದರು.[೪೮]

ಅವರು ಏಷ್ಯಾಸ್ ಸೆಕ್ಸಿಯಸ್ಟ್ ವುಮನ್ (ಸೆಪ್ಟೆಂಬರ್/2006) ಗಳಲ್ಲಿ ಒಬ್ಬರೆಂದು ಯು ಕೆ ಸಂಚಿಕೆ ಈಸ್ಟರನ್ ಐ ರವರಿಂದ 36 ನೇ ಸ್ಥಾನ ಪಡೆದುಕೊಂಡರು.[೪೯] ಮುಖರ್ಜಿಯವರು ಆಗಾಗ್ಗೆ ರೆಡ್ ಇಫ್.ಕಾಂ ರವರಿಂದ ಅನೇಕ ಪಟ್ಟಿಗಳಲ್ಲಿ ಕಾಣಿಸಿಕೊಂಡು ಹೆಸರಿಸಿಕೊಂಡಿದ್ದಾರೆ, ಅವುಗಳಲ್ಲಿ, ಬಾಲಿವುಡ್ಸ್ ಮೋಸ್ಟ್ ಬ್ಯೂಟಿಫುಲ್ ಆಕ್ಟ್ರೆಸ್ ,[೫೦] ಬಾಲಿವುಡ್ಸ್ ಬೆಸ್ಟ್ ಡ್ರೆಸ್ಸಡ್ ವುಮೆನ್ ಹಾಗೂ[೫೧] ವುಮೆನ್ ಆಫ್ ಮೆನಿ ಫೇಸಸ್ .[೫೨]

ಮುಖರ್ಜಿಯವರು ಕರಣ್ ಜೋಹರ್ ಅವರ ಚರ್ಚಾ ಪ್ರದರ್ಶನ ಕಾಫಿ ವಿಥ್ ಕರಣ್ ನಲ್ಲಿ ಮೂರು ಬಾರಿ ಕಾಣಿಸಿಕೊಂಡಿದ್ದಾರೆ. ಅವರು ಕರೀನಾ ಕಪೂರ್, ಶಾರುಖ್ ಖಾನ್, ಕಜೋಲ್ ಹಾಗೂ ಮಾಧುರಿ ದೀಕ್ಷಿತ್ ಅವರುಗಳ ಜೊತೆ ಅನಿರೀಕ್ಷಿತ ಅತಿಥಿಯಾಗಿ ಗೋಚರಿಸಿ ಕೊಂಡರು. ರಾಣಿಯವರು 2009 ರಲ್ಲಿ, ಡ್ಯಾನ್ಸ್ ಪ್ರೀಮಿಯರ್ ಲೀಗ್ ನೃತ್ಯ ರಿಯಾಲಿಟಿ ಪ್ರದರ್ಶನದ ಜೊತೆಯಲ್ಲಿ ತಮ್ಮ ದೂರದರ್ಶನದಲ್ಲಿ ಅವರು ಮೊದಲ ಪ್ರವೇಶ ಪಡೆದರು.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ದಿಲ್ ಬೋಲೆ ಹಡಿಪ್ಪಾ! || ವೀರಾ ಕೌರ್/ವೀರ್ ಪ್ರತಾಪ್ ಸಿಂಗ್ ||
ವರ್ಷ ಚಿತ್ರ ಪಾತ್ರ ಇತರೆ ಟಿಪ್ಪಣಿಗಳು
1992 ಬಿಯೆರ್ ಫೂಲ್ ಚಿಕ್ಕ ಪಾತ್ರ
ಬಂಗಾಳಿ ಚಿತ್ರ
1997 ರಾಜಾ ಕಿ ಆಯೇಗಿ ಬಾರಾತ್ ಮಾಲಾ
1998 ಘುಲಾಮ್ ಅಲಿಷಾ
ಕುಚ್ ಕುಚ್ ಹೋತಾ ಹೈ ಟೀನಾ ಮಲ್ಹೊತ್ರಾ ಫಿಲಂಫೇರ್ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ
ಮೆಹಂದಿ ಪೂಜಾ
1999 ಮಾನ್ ಕಾಲಿ ನಾಗಿನ್ ಕೆ ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ
ಹೆಲೋ ಬ್ರದರ್ ರಾಣಿ
2000 ಬಾದಲ್ ರಾಣಿ
ಹೇ ರಾಮ್ ಅಪರ್ಣಾ ರಾಮ್ ತಮಿಳು ಚಲನಚಿತ್ರ
ಏಕಕಾಲದಲ್ಲಿ ತಯಾರಿಕೆ ಹಿಂದಿ ಯಲ್ಲೂ ಹೇ ರಾಮ್ ಎಂಬ ಬೆಸರಿನಲ್ಲೇ.
{0ಹದ್ ಕರ್ ದೀ ಆಪ್ನೆ{/0} ಅಂಜಲಿ ಖನ್ನ
ಬಿಚ್ಚೂ ಕಿರಣ್ ಬಾಲಿ
ಹರ್ ದಿಲ್ ಜೋ ಪ್ಯಾರ್ ಕರೇಗಾ ಪೂಜಾ ಒಬೆರಾಯ್ ನಾಮನಿರ್ದೇಶಿತ, ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
ಕಹೀ ಪ್ಯಾರ್ ನ ಹೋ ಜಾಯೆ ಪ್ರಿಯಾ ಶರ್ಮ
2001 ಚೋರಿ ಚೋರಿ ಚುಪ್ಕೆ ಚುಪ್ಕೆ ಪ್ರಿಯಾ ಮಲ್ಹೋತ್ರ
ಬಸ್ ಇತ್ನಾ ಸಾ ಖ್ವಾಬ್ ಹೈ ಪೂಜಾ ಶ್ರೀವಾಸ್ತವ್
Nayak: The Real Hero ಮಂಜರಿ
ಕಭೀ ಖುಷೀ ಕಭೀ ಗಮ್ ನಳಿನಾ ಕಪೂರ್ ಚಿಕ್ಕಪಾತ್ರ
2002 ಪ್ಯಾರ್ ದಿವಾನಾ ಹೋತಾ ಹೈ ಪಾಯಲ್ ಖುರಾನಾ
ಮುಝಸೆ ದೋಸ್ತಿ ಕರೋಗೆ! ಪೂಜ ಸಾಹನಿ
ಸಾಥಿಯ ಡಾ. ಸುಹಾನಿ ಶರ್ಮ/ಸೆಹಗಾಲ್ ಪ್ರಶಸ್ತಿ ವಿಜೇತೆ , ಅತ್ಯುತ್ತಮ ನಟನೆಗಾಗಿ ಫಿಲ್ಮ್ ಫೇರ್ ಚಲನಚಿತ್ರ ವಿಮರ್ಶಕರ ಪ್ರಶಸ್ತಿ
ನಾಮನಿರ್ದೇಶಿತ, ಫಿಲ್ಮ್ ಫೇರ್ ಬೆಸ್ಟ್ ಅಕ್ಟ್ರೆಸ್ಸ್ ಅವಾರ್ಡ್
ಚಲೋ ಇಶ್ಕ ಲಡಾಯೆ ಸಪ್ನ
2003 ಚಲ್ತೆ ಚಲ್ತೆ ಪ್ರಿಯಾ ಚೋಪ್ರ ನಾಮನಿರ್ದೇಶನ ಫಿಲ್ಮ್ ಫೇರ್ ಅತ್ಯುತಮ ನಟಿ ಪ್ರಶಸ್ತಿಗೆ

ಚೋರಿ ಚೋರಿ || ಖುಷಿ ಮಲ್ಹೋತ್ರ || |-

' ಚೋರಿ ಚೋರಿ/0} ಖುಷಿ ಮಲ್ಹೋತ್ರ
ಕೋಲ್ಕತ್ತ ಮೇಲ್ ರೀಮಾ/ಬುಲ್ಬುಲ್
ಕಲ್ ಹೋ ನ ಹೋ ಒಂದು ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯ ಮಾಹಿ ವೆ
' LOC ಕಾರ್ಗಿಲ್/0} ಹೆಮಾ
2004 ಯುವ ಶಶಿ ಬಿಸ್ವಾಸ್ ಪ್ರಶಸ್ತಿ ವಿಜೇತೆ , ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ/2}
ಹಮ್ ತುಮ್ ರಿಯಾ ಪ್ರಕಾಶ್ ಪ್ರಶಸ್ತಿ ವಿಜೇತೆ , ಫಿಲ್ಮ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
ವೀರ್-ಜರ್ರಾ ಸಾಮಿಯಾ ಸಿದ್ದಿಕಿ ನಾಮನಿರ್ದೇಶನ, ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ
2005 ಬ್ಲಾಕ್ ಮೈಕೆಲ್ಲಿ ಮ್ಯಾಕ್ ನೆಲ್ಲಿ ಎರಡು ವಿವಿಧ-ಪ್ರಶಸ್ತಿ ವಿಜೇತೆ , ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ಅಭಿನಯಕ್ಕಾಗಿ ಫಿಲ್ಮ್ ಫೇರ್ ಚಲನಚಿತ್ರ ವಿಮರ್ಶಕರ ಪ್ರಶಸ್ತಿ
ಬುಟಿ ಅರ್ ಬಬ್ಲಿ ವಿಮ್ಮಿ ಸಲುಜ (ಬಬ್ಲಿ) ನಾಮನಿರ್ದೇಶನ, ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
ಪಹೇಲಿ ಲಛಚಿ ಬನ್ವರ್ ಲಾಲ್
Mangal Pandey: The Rising ಹೀರಾ
2006 ಕಭಿ ಅಲ್ವಿದ ನಾ ಕೆಹೆನಾ ಮಾಯಾ ತಲ್ವಾರ್ ನಾಮನಿರ್ದೇಶ, ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
ಬಾಬುಲ್ ಮಾಲವಿಕ "ಮಿಲ್ಲಿ" ತಲ್ವಾರ್/ಕಪೂರ್
2007 ತ ರ ರುಮ್ ಪಮ್ ರಾಧಿಕ ಶೇಖರ್ ರಾಯೈ
ಬ್ಯಾನರ್ಜೀ (ಶೋನ)
ಲಾಗ ಚುನರಿ ಮೆನ್ ದಾಗ್ ವಿಭವಾರಿ ಸಹಾಯ್ (ಬಡ್ಕಿ)/
ನತಾಶ
ನಾಮನಿರ್ದೇಶನ, ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ
ಸಾವರಿಯ ಗುಲಾಬ್ಜಿ ನಾಮನಿರ್ದೇಶನ, ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ
ಓಂ ಶಾಂತಿ ಓಂ ಆಕೆಯೇ ಆಗಿ ಒಂದು ಹಾಡಿನಲ್ಲಿ ವಿಶೇಷ ಪಾತ್ರಾಭಿನಯ ದೀವಾನಗಿ ದೀವಾನಗಿ
2008 ಥೋಡಾ ಪ್ಯಾರ್ ಥೋಡಾ ಮ್ಯಾಜಿಕ್ ಗೀತ
ರಬ್ ನೆ ಬನಾದಿ ಜೋಡಿ ಒಂದು ಹಾಡಿನಲ್ಲಿ ವಿಶೇಷ ಪಾತ್ರಾಭಿನಯ ಫಿರ್ ಮಿಲೇಂಗೆ ಚಲ್ತೆ ಚಲ್ತೆ
2009 ಲಕ್ ಬೈ ಛಾನ್ಸ್ ಆಕೆಯೇ ಆಗಿ ವಿಶೇಷ ಪಾತ್ರಾಭಿನಯ
2011 ನೋ ಒನ್ ಕಿಲ್ಲಡ್ ಜೆಸ್ಸಿಕಾ ಮೀರಾ ಜನವರಿ 7, 2011 ರಂದು ಪ್ರದರ್ಶನಕ್ಕೆ ತೆರೆಕಾಣಲಿದೆ
ಕೂಛಿ ಕೂಛಿ ಹೋತಾ ಹೈ ಟೀನಾ (voice) ಪ್ರದರ್ಶನಕ್ಕೆಂದು - ಸಿದ್ಧವಾಗುತ್ತಿದೆ

ಇವನ್ನೂ ಗಮನಿಸಿ

[ಬದಲಾಯಿಸಿ]
  • ಭಾರತೀಯ ಚಲನಚಿತ್ರ ನಟಿಯರ ಪಟ್ಟಿ
  • ಬಂಗಾಳಿ ನಟಿಯರ ಪಟ್ಟಿ

ಉಲ್ಲೇಖಗಳು

[ಬದಲಾಯಿಸಿ]
  1. Gangadhar, V. (5 February 2005). "Superstars". The Tribune. Retrieved 11 February 2008.
  2. ೨.೦ ೨.೧ ಸೆನ್, ರಾಜಾ (29 ಡಿಸೆಂಬರ್ 2004).ಉತ್ತಮ ನಟಿ[23] ರೆಡ್ ಇಫ್.ಕಾಂ 2009ರ ಆಗಸ್ಟ್ 25ರಂದು ಮರುಸಂಪಾದಿಸಲಾಯಿತು.
    ಕುಲ್ಕರ್ಣಿ, ರೊಂಜಿತ (23 ಡಿಸೆಂಬರ್ 2005). 2005ರ ಹತ್ತು ಶ್ರೇಷ್ಠ ಬಾಲಿವುಡ್ ನಟಿಯರು. ರೆಡ್ ಇಫ್.ಕಾಂ. 12 ಫೆಬ್ರುವರಿ 2007ಯಲ್ಲಿ ಮರುಸಂಪಾದಿಸಲಾಯಿತು.
    ಸೆನ್, ರಾಜಾ (25 ಆಗಸ್ಟ್ 2006). ತುಟ್ಟತುದಿಯ ಬಾಲಿವುಡ್ ನಟಿಯರು. ರೆಡ್ ಇಫ್.ಕಾಂ. 12 ಫೆಬ್ರುವರಿ 2007ಯಲ್ಲಿ ಮರುಸಂಪಾದಿಸಲಾಯಿತು.
    ಸೆನ್, ರಾಜಾ (18 ಡಿಸೆಂಬರ್ 2007).ಅತ್ಯಂತ ಪ್ರಭಾವಶಾಲಿ ನಟಿಯರು 2007. ರೆಡ್ ಇಫ್.ಕಾಂ. 2007 ರ ಡಿಸೆಂಬರ್ 4 ರಂದು ಪುನಃ ಸಂಪಾದಿಸಲಾಯಿತು.
  3. "When Rani whistled for Rakhi!". Indiatimes. Archived from the original on 2009-08-28. Retrieved 2009-08-16.
  4. "First-time fumblings". Rediff.com. 14 November 2007. Retrieved 23 December 2007.
  5. Karishma Upadhyay (11 September 2002). "Did you know Rani's an Odissi dancer?". Times of India. Retrieved 13 January 2010.
  6. Singh, Asha (11 October 2001). "Her talent speaks for itself". The Tribune, India. Archived from the original on 21 ನವೆಂಬರ್ 2013. Retrieved 16 July 2005.
  7. ೭.೦ ೭.೧ "Box Office 1998". BoxOfficeIndia.com. Archived from the original on 29 ಜೂನ್ 2012. Retrieved 8 January 2008.
  8. "Box Office 2000". BoxOfficeIndia.com. Archived from the original on 7 ಜುಲೈ 2012. Retrieved 8 January 2008.
  9. Verma, Suparn (2 January 2001). "Rewind... flash forward". Rediff. Retrieved 27 January 2008.
  10. Adarsh, Taran (8 March 2001). "Chori Chori Chupke Chupke: Movie Review". Indiafm.com. Retrieved 25 January 2008.
  11. Verma, Sukanya (9 March 2001). "Preity Trite". Rediff.com. Retrieved 25 January 2008.
  12. "Box Office 2002". BoxOfficeIndia.com. Archived from the original on 8 ಜುಲೈ 2012. Retrieved 8 January 2008.
  13. ೧೩.೦ ೧೩.೧ ೧೩.೨ ೧೩.೩ "Overseas Earnings (Figures in Ind Rs)". BoxOfficeIndia.com. Archived from the original on 4 ಡಿಸೆಂಬರ್ 2012. Retrieved 8 January 2008.
  14. Gajjar, Manish (20 December 2002). "Saathiya". BBC. Retrieved 25 January 2008.
  15. "Box Office 2003". BoxOfficeIndia.com. Archived from the original on 9 ಜುಲೈ 2012. Retrieved 8 January 2008.
  16. Verma, Sukanya (1 August 2003). "Chori Chori is heartwarming". Rediff.com. Retrieved 2 June 2007.
  17. ೧೭.೦ ೧೭.೧ ೧೭.೨ "Box Office 2004". BoxOfficeIndia.com. Archived from the original on 24 ಮೇ 2012. Retrieved 8 January 2008.
  18. Adarsh, Taran (21 May 2004). "Movie Review: Yuva". Indiafm.com. Retrieved 28 May 2007.
  19. Mamtora, Jay (3 June 2004). "Hum Tum". BBC. Retrieved 25 January 2008.
  20. ೨೦.೦ ೨೦.೧ Chakrabarti, Paromita (3 February 2005). "Rani's given a magnificent performance in Black: Big B". Express India. Archived from the original on 3 ಅಕ್ಟೋಬರ್ 2012. Retrieved 22 December 2007.
  21. Siddiqui, Rana (3 February 2005). "A dash of sunshine". ದಿ ಹಿಂದೂ. Archived from the original on 3 ಅಕ್ಟೋಬರ್ 2012. Retrieved 22 December 2007.
  22. Adarsh, Taran (4 February 2005). "Movie Review: Black". Indiafm.com. Retrieved 27 April 2007.
  23. "Box Office 2005". BoxOfficeIndia.com. Archived from the original on 14 ಅಕ್ಟೋಬರ್ 2013. Retrieved 8 January 2008.
  24. "Bunty Aur Babli". Indiatimes. 27 May 2005. Archived from the original on 5 ಜೂನ್ 2008. Retrieved 8 January 2008.
  25. Kulkarni, Ronjita (7 February 2005). "'Namesake is very uncannily my story!'". Rediff.com. Retrieved 22 December 2007.
  26. Masand, Rajeev (11 August 2006). "Masand's verdict: Kabhi Alvida Naa Kehna". IBNLive. Archived from the original on 29 ಅಕ್ಟೋಬರ್ 2011. Retrieved 25 January 2008.
  27. "Box Office 2006". BoxOfficeIndia.com. Archived from the original on 30 ಜೂನ್ 2012. Retrieved 8 January 2008.
  28. ೨೮.೦ ೨೮.೧ "Box Office 2007". BoxOfficeIndia.com. Archived from the original on 5 ಜೂನ್ 2012. Retrieved 8 January 2008.
  29. Adarsh, Taran (27 April 2007). "Movie Review: Ta Ra Rum Pum". Indiafm.com. Retrieved 30 September 2007.
  30. Chopra, Anupama. "Dil Bole Hadippa: Review". NDTVMovies.com. Archived from the original on 20 ಜೂನ್ 2010. Retrieved 22 May 2010.
  31. "Vidya Balan and Rani Mukherjee in No One Killed Jessica". Bollywood Hungama. 23 January 2010. Retrieved 22 May 2010.
  32. TNN (25 December 2007). "Priyanka is happy!". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 25 December 2007.
  33. ೩೩.೦ ೩೩.೧ IndiaFM News Bureau (11 November 2006). ""If Babul does well, I will give credit to my parents" - Rani". Indiafm.com. Retrieved 23 December 2007.
  34. ೩೪.೦ ೩೪.೧ Mukherjee, Ram Kamal (16 November 2006). "Rani renders public apology". Indiatimes. Archived from the original on 13 ಜೂನ್ 2008. Retrieved 23 December 2007.
  35. "Rani Mukerji's day out with jawans". Rediff.com. 4 March 2004. Retrieved 6 April 2006.
  36. "Bollywood unites to present caring face". The Telegraph. 8 February 2005. Archived from the original on 18 ಜನವರಿ 2012. Retrieved 8 February 2006.
  37. Perappadan, Bindu Shajan (3 September 2005). "Shah Rukh, Rani Mukerjee coming to Capital". ದಿ ಹಿಂದೂ. Archived from the original on 18 ಜನವರಿ 2008. Retrieved 23 December 2007.
  38. "Rani and Preity give away donations". Hindustan Times. Archived from the original on 30 ಸೆಪ್ಟೆಂಬರ್ 2007. Retrieved 28 August 2007.
  39. "Magnificent Five". Elite Entertainment (bollywoodconcerts.com). Archived from the original on 7 ಏಪ್ರಿಲ್ 2007. Retrieved 14 April 2007.
  40. "Shahrukh may attend cinema festival". Bahrain Tribune. 20 December 2004. Archived from the original on 16 ಮೇ 2008. Retrieved 22 December 2007.
  41. Jha, Subhash K (22 April 2005). "Rani: I'd love to go to Pakistan!". Rediff.com. Retrieved 1 October 2006.
  42. Chatterjee, Mohua (TNN) (18 April 2005). "The Rani of all CBMs for Pervez". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 14 April 2007.
  43. "Bollywood's taste of Delhi 2010". melbourne2006.com. 26 March 2006. Archived from the original on 28 ಏಪ್ರಿಲ್ 2006. Retrieved 22 April 2006.
  44. "Top 10 Actresses". Rani-Mukerji.com. Archived from the original on 10 ಫೆಬ್ರವರಿ 2009. Retrieved 19 July 2006.
  45. "8: Rani Mukerji". Rani-Mukerji.com. Archived from the original on 22 ನವೆಂಬರ್ 2007. Retrieved 19 July 2006.
  46. TNN (3 February 2005). "SRK & Rani are Bollywoods most powerful". Indiatimes. Archived from the original on 19 ಅಕ್ಟೋಬರ್ 2008. Retrieved 25 December 2007.
  47. Iyer, Meena (6 March 2007). "Rani Mukerji only woman in power list". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 11 February 2007.
  48. Sen, Raja (6 March 2007). "Bollywood's best actresses. Ever". Rediff.com. Retrieved 13 March 2007.
  49. "Asia's sexiest women". Rediff.com. 22 December 2007. Retrieved 13 October 2006.
  50. Kuckian, Uday (24 March 2004). "Bollywood's Most Beautiful Actresses". Rediff.com. Retrieved 13 October 2006.
  51. Verma, Sukanya (2 May 2007). "Bollywood's Best Dressed Women". Rediff.com. Retrieved 20 May 2007.
  52. Verma, Sukanya (8 March 2007). "Women of Many Faces". Rediff.com. Retrieved 12 September 2007.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ರಾಣಿ ಮುಖರ್ಜಿ]]