ಮಮ್ತಾಝ್

ವಿಕಿಪೀಡಿಯ ಇಂದ
Jump to navigation Jump to search
'ನಟಿ ಮಮ್ತಾಝ್'

'ಮಮ್ತಾಝ್',(ಜನನ : ೩೧, ಜುಲೈ, ೧೯೪೭-) 'ಭಾರತೀಯ ಚಲನಚಿತ್ರರಂಗ'ದಲ್ಲಿ ಕೆಲವು ಚಿತ್ರಗಳಲ್ಲಿ ತಮ್ಮ ಅನುಪಮ ಅಭಿನಯದಿಂದ ಇಂದಿಗೂ ಜನಪ್ರಿಯರಾಗಿ, ಚಿತ್ರಪ್ರಿಯರ, ನೆನೆಪಿನಲ್ಲಿ ಉಳಿದಿರುವ 'ಮಮ್ತಾಝ್ ', ಈಗ ವಿದೇಶದಲ್ಲಿದ್ದಾರೆ.[೧][೨]

'ಬೆಡಗಿ ಮಮ್ತಾಝ್'ಹೆಚ್ಚು-ಬೇಡಿಕೆ ನಟಿ[ಬದಲಾಯಿಸಿ]

  • ಅಂದಿನ ದಿನಗಳಲ್ಲಿ ತಮ್ಮ ಅನುಪಮ ಸೌಂದರ್ಯದಿಂದ ಬಾಲಿವುಡ್ ನಲ್ಲಿ ಹೆಚ್ಚು-ಬೇಡಿಕೆಯಲ್ಲಿದ್ದರು. ಸನ್ ೧೯೭೧ ರಲ್ಲಿ, ತೇರೆಮೇರೆ ಸಪ್ನೆ ಎಂಬ ಚಲನಚಿತ್ರ, ೧೯೭೦ ರಲ್ಲಿ ನಿರ್ಮಿಸಲ್ಪಟ್ಟ ಖಿಲೋನಾ, ಅತ್ಯುತ್ತಮ ಅಭಿನಯಕ್ಕೆ ಸಾಕ್ಷಿಯಾಗಿವೆ. ಈ ಚಿತ್ರಕ್ಕೆ ಅತ್ಯುತ್ತಮ ನಟಿಯೆಂಬ ಫಿಲ್ಮ್ ಫೇರ್ ಪ್ರಶಸ್ತಿ ದೊರೆಯಿತು.
  • ಆ ಚಿತ್ರಕ್ಕೂ ಅತ್ಯುತ್ತಮ ಚಿತ್ರವೆಂಬ ಪ್ರಶಸ್ತಿ ದೊರೆತಿದೆ. ಮಮ್ತಾಝ್ ಸಮಯದಲ್ಲಿ ಆಕೆಗೆ 'ಒಳ್ಳೆಯ ಸ್ಪುರದ್ರೂಪಿಯಾದ ಅಭಿನೇತ್ರಿ' ಎಂಬ ಹೆಸರು ಬಂದಿತ್ತು. ಮಮ್ತಾಝ್, ಉದ್ಯೋಗಪತಿ, ಮಯೂರ್ ಮಾಧ್ವಾನಿ ಯವರನ್ನು ಲಗ್ನವಾದರು.[೩]

ಮಮ್ತಾಝ್ ಅವರ ಪರಿವಾರ[ಬದಲಾಯಿಸಿ]

ಮಮ್ತಾಝ್ ರ ತಂದೆ ತಾಯಿಗಳು, ಬೊಂಬಾಯಿನ, ಅಬ್ದುಲ್ ಸಲೀಮ್ ಅಸ್ಕರಿ ಮತ್ತು ಶಾದಿ ಹಬಿಬ್ ಆಘ. ಮಮ್ತಾಝ್, ಸನ್, ೩೧,ಜುಲೈ, ೧೯೪೭ ರಲ್ಲಿ ಜನಿಸಿದರು. ತಮ್ಮ ೧೨ ನೇ ವಯಸ್ಸಿನಲ್ಲೇ ಹಿಂದಿ ಚಲನಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿ ದ್ದರು. ೧೯೬೦ ರಲ್ಲಿ ಒಬ್ಬ ಎಕ್ ಸ್ಟ್ರ ಅಭಿನೇತ್ರಿಯಾಗಿ ಆರಿಸಿಕೊಳ್ಳಲಾಯಿತು. ಮುಝೆ ಜೀನೆದೊ ಚಿತ್ರದಲ್ಲಿ ಚಿಕ್ಕಪಾತ್ರವನ್ನು ಮಾಡಲು ಅವರು ಒಪ್ಪಿಕೊಂಡರು.[೪]

ಆರಂಭದಲ್ಲಿ ಚಿತ್ರಜೀವನ[ಬದಲಾಯಿಸಿ]

  • ಕಡಿಮೆ ಬಡ್ಜೆಟ್ ಚಿತ್ರಗಳಲ್ಲಿ ನಾಯಕಿ, ಮತ್ತು ದೊಡ್ಡ ಬಡ್ಜೆಟ್ ಚಿತ್ರಗಳಲ್ಲಿ ಸಹಾಯಕ ಪಾತ್ರಾಭಿನಯ. ಕೆಲವು ಕಡಿಮೆ ಬಡ್ಜೆಟ್ ಹಣದಿಂದ ನಿರ್ಮಿಸಿದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. ಉದಾಹರಣೆಗೆ, ಬಾಕ್ಸರ್, ಸ್ಯಾಮ್ಸನ್, ಟರ್ಝನ್ ಮತ್ತು ಕಿಂಗ್ ಕಾಂಗ್ ಚಿತ್ರಗಳು.
  • ೧೯೬೫ ರಲ್ಲಿ ನಿರ್ಮಿಸಿದ, ಎ ಗ್ರೇಡ್ ಕಲರ್ ಚಿತ್ರ, ಮೇರೆ ಸನಮ್ ಚಿತ್ರದಲ್ಲಿ, ಅವರ ಪಾತ್ರಾಭಿನಯಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂತು. ಯೆ ಹೈ ರೇಶಮಿ ಎಂಬ ಹಾಡಿನಮೇಲೆ ಚಿತ್ರೀಕರಿಸಲಾಯಿತು. ಇದು ಚಿತ್ರರಸಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ಇದರಿಂದ ಉತ್ತೇಜಿತರಾದ ಚಲನಚಿತ್ರ ನಿರ್ಮಾಪಕರು, ಆಯೆ ದುಶ್ಮನ್ ಜಾನ್ ಎಂಬ ಹಾಡನ್ನು ಪತ್ಥರ್ ಕೆ ಸನಮ್ ಎಂಬ ಚಿತ್ರದಲ್ಲಿ ಚಿತ್ರೀಕರಿಸಲಾಯಿತು.[೫]

ರಾಮ್ ಔರ್ ಶ್ಯಾಮ್, ಮಮ್ತಾಝ್ ರನ್ನು ನಾಯಕಿಯ ಪಾತ್ರಕ್ಕೆ ಸಿದ್ಧಪಡಿಸಿದ ಚಿತ್ರ[ಬದಲಾಯಿಸಿ]

  • ೧೯೬೭ ರಲ್ಲಿ ಮೇರು ನಟ ದಿಲೀಪ್ ಕುಮಾರ್, ರವರು ನಟಿಸಿದ ರಾಮ್ ಔರ್ ಶ್ಯಾಮ್ ಚಿತ್ರದಲ್ಲಿ ಅವರಿಗೆ ನಾಯಕಿಯ ಪಾತ್ರ ದೊರೆಯಿತು. ಆ ಚಿತ್ರ ಜನರ ಮನ್ನಣೆಗೆ ಪಾತ್ರವಾಗಿತ್ತು ಮತ್ತು ಮಮ್ತಾಝ್ ಅವರ ಹೆಸರನ್ನು ಫಿಲ್ಮ್ ಫೇರ್ ಅವಾರ್ಡ್ಗೆ ಆರಿಸ ಲಾಯಿತು. ಒಬ್ಬ ಅತ್ಯುತ್ತಮ ಸಹಾಯಕ ಅಭಿನೇತ್ರಿ ಎಂದು ಅವರ ಪಾತ್ರಕ್ಕೆ ಅಪಾರ ಬೇಡಿಕೆ ಬರತೊಡಗಿತು.
  • ೧೯೬೦ ರಲ್ಲಿ ಅಭಿನೇತ್ರಿ ಶರ್ಮಿಲಾ ಟ್ಯಾಗೊರ್ ರವರ ಜೊತೆಯಲ್ಲಿ, ಸಾವನ್ ಕಿ ಘಟ, ಯೆಹ್ ರಾತ್ ಫಿರ್ ನ ಆಯೇಗಿ, ಮೇರೆ ಹಮ್ ದಮ್ ಮೇರೆ ದೋಸ್ತ್ ಇತ್ಯಾದಿ ಚಿತ್ರಗಳಲ್ಲಿ ಅಭಿನಯಿಸಿದರು. ಮಮ್ತಾಝ್ ತಮ್ಮ ಬಾಯ್ ಫ್ರೆಂಡ್ ಶಮ್ಮಿ ಕಪೂರ್ ಜೊತೆ ಹಾಡುತ್ತಾ ನೃತ್ಯಮಾಡಿದ ಡಾನ್ಸ್ ನಂಬರ್, ಆಜ್ ಕಲ್ ತೇರೆ ಮೇರೆ ಅಭಿನಯಕ್ಕೆ ಎಲ್ಲರೂ ಅವಾಕ್ಕಾದರು. ಇದು ೧೯೬೮ ರಲ್ಲಿ ನಿರ್ಮಿಸಿದ ಬ್ರಹ್ಮಚಾರಿ ಚಿತ್ರದ ಒಂದು ಸನ್ನಿವೇಶ.[೬]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಮಮ್ತಾಝ್&oldid=789636" ಇಂದ ಪಡೆಯಲ್ಪಟ್ಟಿದೆ