ಹೇಮ ಮಾಲಿನಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Hema Malini
Hema malini bhungama1.jpg
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಹೇಮಾ ಮಾಲಿನಿ ಆರ್. ಚಕ್ರವರ್ತಿ
ಟೆಂಪ್ಲೇಟು:ಜನಿಸಿದ ತಾರೀಖು ಮತ್ತು ವಯಸ್ಸು
ಅಮ್ಮನ್ ಕುಡಿ, ತಮಿಳುನಾಡು, ಭಾರತ
ವೃತ್ತಿ ಅಭಿನೇತ್ರಿ, ನಿರ್ದೇಶಕಿ ಹಾಗೂಡೈರೆಕ್ಟರ್
ಪತಿ/ಪತ್ನಿ ಧರ್ಮೇಂದ್ರ (೧೯೮೦-ಇದುವರೆವಿಗೆ)


ಹೇಮ ಮಾಲಿನಿ ಯು { {1}ಹಿಂದಿ ತಮಿಳು {1948 ಅಕ್ಟೋಬರ್ 16 ಜನನ} ಒಬ್ಬ ಭಾರತೀಯ ನಟಿ, ನಿರ್ದೇಶಕಿ, ನಿರ್ಮಾಪಕಿ, ಹಾಗೂ ಭರತನಾಟ್ಯದ ನೃತ್ಯಗಾರ್ತಿ- ಕೊರಿಯಾಗ್ರಫರ್. ಹೆಚ್ಚು ಹೆಸರುವಾಸಿಯಾದ ನಟ ಮತ್ತು ಭಾವೀ ಪತಿ ಧರ್ಮೇಂದ್ರ [೧] ನೊಂದಿಗೆ ಅವಳ ನಟನಾ ವೃತ್ತಿಯನ್ನು ಮೊಟ್ಟ ಮೊದಲ ಚಿತ್ರವಾದ ಸಪನೋ ಕ ಸೌದಾಘರ್ {1968 }ನಿಂದ ಪ್ರಾರಂಭಿಸಿ, ಮುಂದೆ ಅನೇಕ ಯಶಸ್ವಿಯಾದ ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಳು. ಪ್ರಾರಂಭದಲ್ಲಿ ಅವಳನ್ನು "ಡ್ರೀಮ್ ಗರ್ಲ್" ಎಂದು ಪ್ರಚೋದಿಸಿ, ಮತ್ತು 1977 ರಲ್ಲಿ ಅದೇ ಹೆಸರಿನ[೨] ಚಿತ್ರದಲ್ಲಿ ತಾರೆಯಾಗಿಯೂ ನಟಿಸಿದಳು. ಈ ಕಾಲದಲ್ಲಿ ಅವಳು ಹಿಂದಿ ಚಿತ್ರರಂಗದ ಮುಖ್ಯ ನಟಿಯರುಗಳಲ್ಲಿ ಸ್ವತಃ ತನ್ನನ್ನು ತಾನೇ ಗುರುತಿಸಿಕೊಂಡಿದ್ದು, ಅವಳು ಹಾಸ್ಯ ಮತ್ತು ನಾಟಕೀಯ ಪಾತ್ರಗಳನ್ನು ನಿರ್ವಹಿಸುವುದರ ಜೊತೆಗೆ ಶಾಸ್ತ್ರೀಯ ಭರತನಾಟ್ಯಕ್ಕೂ[೩] ಹೆಸರುವಾಸಿಯಾದಳು.

ಭಾರತೀಯ ಸಿನಿಮಾ ಇತಿಹಾಸದಲ್ಲಿ[೩][೪] ಹೇಮ ಮಾಲಿನಿ ಯು ಅತ್ಯಂತ ಯಶಸ್ವಿಯಾದ ಮಹಿಳಾ ಸಿನಿಮಾ ತಾರೆಯರಲ್ಲಿ ಒಬ್ಬಳಾಗಿದ್ದಾಳೆ. 40 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಅವಳು ಅತಿ ಹೆಚ್ಚು ಸಂಖ್ಯೆಯ ಯಶಸ್ವಿ ಚಿತ್ರಗಳಲ್ಲಿ ತಾರೆಯೆನಿಸಿಕೊಂಡಿದ್ದು, ವಾಣಿಜ್ಯ/ಕಮರ್ಷಿಯಲ್ ಮತ್ತು ಆರ್ಟ್ ಹೌಸ್ /ಕಲಾತ್ಮಕ ಚಿತ್ರಗಳಲ್ಲಿನ ಅವಳ ಅಭಿನಯವು ಆಗಾಗ್ಗೆ ಗುರುತಿಸಲ್ಪಟ್ಟಿತ್ತು.[೩]

ಅವಳು ಭಾರತದ ಭಾರತೀಯ ಜನತಾ ಪಾರ್ಟಿಯ ಸದಸ್ಯೆ ಮತ್ತು 2003 -2009[೫] ರ ವೇಳೆಯಲ್ಲಿ ಪಾರ್ಲಿಮೆಂಟ್ ನ ಮೇಲ್ಮನೆಯಾದ ರಾಜ್ಯ ಸಭೆಯ ಲ್ಲಿ ಪಕ್ಷದ ಸದಸ್ಯೆಯಾಗಿ ನೇಮಕಗೊಂಡಿದ್ದಳು. ಈಗ ಅವಳು ಪರೋಪಕಾರದಲ್ಲಿ ಮತ್ತು ಸಾಮಾಜಿಕ ಸೇವೆಗಳನ್ನು ಮಾಡುವುದರಲ್ಲಿ ಹೆಚ್ಚು ವೇಳೆಯನ್ನು ಕಳೆಯುತ್ತಿದ್ದಾಳೆ. ಆದಾಗ್ಯೂ ಅವಳು ಇನ್ನೂ ಚಿತ್ರಗಳಲ್ಲಿ ಆಗಾಗ ಕಾಣಿಸಿ ಕೊಳ್ಳುತ್ತಿದ್ದಾಳೆ.

ಜನನ ಮತ್ತು ಬಾಲ್ಯ[ಬದಲಾಯಿಸಿ]

ತಮಿಳು ನಾಡಿನ ,ತಂಜಾವೂರ್ ಜಿಲ್ಲೆಯ,ಅಮ್ಮನಕುಡಿಯಲ್ಲಿಅಯ್ಯಂಗಾರ್ ಕುಟುಂಬದ ವಿ.ಎಸ್.ಆರ್. ಚಕ್ರವರ್ತಿ ಮತ್ತು ಜಯಾಚಕ್ರವರ್ತಿಗೆ ಹೇಮಾಮಾಲಿನಿ ಯು ಜನಿಸಿದಳು. ಅವಳ ತಾಯಿಯು ಚಿತ್ರದ ನಿರ್ಮಾಪಕಿಯಾಗಿದ್ದಳು.

ವೃತ್ತಿ ಜೀವನ[ಬದಲಾಯಿಸಿ]

ಹೇಮ ಮಾಲಿನಿಯು ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡಿದಳು. 1961 ರ ತೆಲುಗುಚಿತ್ರ ಪಾಂಡವ ವನವಾಸಂ ನಲ್ಲಿ ನರ್ತಕಿಯಾಗಿ ಚಿಕ್ಕ ಪಾತ್ರವನ್ನು ನಿರ್ವಹಿಸಿದಳು. 1964ರಲ್ಲಿ ಹೇಮ ಮೊದಲು ಸಿನಿಮಾ ಚಿತ್ರಗಳಲ್ಲಿ ಪ್ರವೇಶ ಪಡೆಯಲು ಪ್ರಾರಂಭಿಸಿದಳು. ಆದರೆ ಅದು ತಿರಸ್ಕೃತವಾಯಿತು; ತಮಿಳ್ ನಿರ್ದೇಶಕ ಶ್ರೀಧರ್ ಅವಳಿಗೆ ತಾರೆಯಾಗುವ ಚಿತ್ತಾಕರ್ಷಕವಿಲ್ಲ, ಎಂದು ಹೇಳಿದರು. ಮತ್ತೆ ಅವಳು ಪಟ್ಟು ಹಿಡಿದು ಬಾಲಿವುಡ್ ನಲ್ಲಿ ತನಗೆ, ತನ್ನ {ಜಾಗ} ಗೂಡು/ಮಾಡನ್ನು ಕಂಡು ಕೊಂಡಳು.1968 ರಲ್ಲಿ ತನ್ನ ಮೊದಲ ಚಿತ್ರವಾದ ಸಪನೋಂಕ ಸೌದಾಘರ್ ನಲ್ಲಿ (ದಿ ಡ್ರೀಮ್ ಸೆಲ್ಲರ್) ವಯಸ್ಸಾದ ಅತ್ಯುತ್ತಮ ನಟ ರಾಜ್ ಕಪೂರ್ ನ ಜೊತೆಗೆ, ಹದಿ ಹರೆಯದ/ಯುವ ಪ್ರಾಯದ ಪಾತ್ರವನ್ನು ಮಾಡಿದ್ದಳು. ನಂತರ ದೇವ್ ಆನಂದ್ ನ ಜೊತೆ ಜಾನಿ ಮೇರ ನಾಮ್ {1970} ನಲ್ಲಿ, ಹೇಮ ಮೇರು ನಟಿಯಾದಳು. ಅವಳು ಮತ್ತೆ ಅವನ ಜೊತೆ ತೇರೆ ಮೇರೆ ಸಪನೇ ಯಲ್ಲಿ ಕೆಲಸ ಮಾಡಿದಳು. {1971} ದೇವಾನಂದ್ ಜೊತೆ ಅಭಿನಯಿಸಿದ ಉಳಿದ ಚಿತ್ರಗಳಲ್ಲಿ,ಅಮನ್ ಕೆ ಫರಿಷ್ಟೇ {2003} ಇತ್ತೀಚಿನದುದಾಗಿದೆ. 1972 ರಲ್ಲಿ ಬಾಲಿವುಡ್ ನ ಮೇರು ನಟಿಯಾಗಿ ಸೀತಾ ಔರ್ ಗೀತಾ ದಲ್ಲಿ ಧರ್ಮೇಂದ್ರ ಮತ್ತು ಸಂಜೀವ್ ಕುಮಾರ್ ಜೊತೆ ಹೇಮ ದ್ವಿ ಪಾತ್ರಗಳಲ್ಲಿ ನಟಿಸಿದಳು. ಬಾಲಿವುಡ್ ಚಿತ್ರೋದ್ಯಮದಲ್ಲಿ ಸ್ತ್ರೀ ನಟಿಯಾಗಿ ಪ್ರಭುತ್ವವನ್ನು ಸಾಧಿಸುವುದರಲ್ಲಿ ಅವಳೂ ಒಬ್ಬಳಾದಳು, ಮತ್ತು ಅವಳನ್ನು ಅವಳ ಅಭಿಮಾನಿಗಳು ಡ್ರೀಮ್ ಗರ್ಲ್ ಆಫ್ ಬಾಲಿವುಡ್ ಎಂದು ಕರೆದರು (ಧರ್ಮೇಂದ್ರನ ಜೊತೆಯಲ್ಲಿ ಚಿತ್ರ ತಾರೆಯಾಗಿ ನಟಿಸಿದ ಅದೇ ಹೆಸರಿನ ಪೂರ್ವಕಥಾಸೂಚನೆಯಿರುವ ಚಿತ್ರ).

ಚಿತ್ರ:Hema.jpg
ಹೇಮಾ ಮಾಲಿನಿ ಧರ್ಮೇಂದ್ರನೊಂದಿಗೆ ಚಲನಚಿತ್ರದಲ್ಲಿ, ಚರಸ್ 1976

1970 ಮತ್ತು 1980ರ ದಶಕಗಳ ಪೂರ್ತಿ ಹೇಮಾ ಅನೇಕ ಚಿತ್ರಗಳಲ್ಲಿ ನಟಿಸಿ ತಾರೆಯೆನಿಸಿಕೊಂಡಿದ್ದಾಳೆ. ಬಹುಶಃ ಅವಳ ಉತ್ತಮ ಶಾಸ್ತ್ರೀಯ ಭರತನಾಟ್ಯ, ಮೋಹಕ ಸೌಂದರ್ಯ,ಶೈಲಿಯು ನೆನೆಪಿಸಿಕೊಳ್ಳುವಂತಹುದು. ಅವಳು ಧರ್ಮೇಂದ್ರನೊಂದಿಗೆ ಯಶಸ್ವೀ ಜೋಡಿಯಾಗಿ ನಟಿಸಿದಳು ಮತ್ತು ಈ ಜೋಡಿಯು ನಟಿಸಿರುವ ಶೋಲೆ ,ಚರಸ್ ,ಆಸ್ ಪಾಸ್, ಜುಗ್ನು , ಸೀತಾ ಔರ್ ಗೀತಾ , ದಿ ಬರ್ನಿಂಗ್ ಟ್ರೈನ್ ಯಶಸ್ವೀ ಚಿತ್ರಗಳು. ಅವಳು ಮತ್ತೆ ಕೆಲವು ಜಟಿಲವಾದ ನಾಟಕೀಯ ಅಥವಾ ಹಾಸ್ಯ ಪಾತ್ರಗಳನ್ನೂ ನಿರ್ವಹಿಸಿದ ಚಿತ್ರಗಳೆಂದರೆ [[ತ್ರಿಶೂಲ್, ಜೋಶೀಲ, ಲಾಲ್ ಪತ್ತರ್ |ತ್ರಿಶೂಲ್''ಜೋಶೀಲ'',''ಲಾಲ್ ಪತ್ತರ್, ಮೀರಾಮತ್ತು ಸತ್ತೆ ಪೆ ಸತ್ತ .

1990 ಮತ್ತು 2000ದ ಆರಂಭದಲ್ಲಿ, ಚಿತ್ರಗಳಿಂದ ತೆಗೆದುಕೊಂಡ ದೀರ್ಘಾವಧಿಯ ಬಿಡುವಿನ ನಂತರ, ಹೇಮಾ ಇತ್ತೀಚಿಗೆ ವಿವಿಧ ಮಾದರಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. 2003ರಲ್ಲಿ ಅವಳು ಯಶಸ್ವೀ ಚಿತ್ರವಾದ ಭಾಗ್ಬಾನ್ ನಲ್ಲಿ ಅಮಿತಾಬ್ ಬಚ್ಚನ್ ಜೊತೆ ಸಹ-ನಟಿಯಾಗಿದ್ದು, 2004ರಲ್ಲಿ ಹೆಚ್ಚು ಹಣ ಮಾಡಿದ ವೀರ್-ಜ್ಹರಾ ದಲ್ಲಿ {ಅಮಿತಾಬ್ ಬಚ್ಚನ್ ಜೊತೆಗೂಡಿ) ಕ್ಷಣಿಕ ಪಾತ್ರದಲ್ಲಿ ನಟಿಸಿದ್ದಾಳೆ. ಅವಳ ವೃತ್ತಿ ಜೀವನದ ಆರಂಭದಲ್ಲಿ ಪಾತ್ರವಹಿಸಿದ ಜಾಣೆ/ಚತುರ ಪಾತ್ರಗಳಿಗಿಂತ ಭಿನ್ನವಾಗಿ, ಈ ಎರಡೂ ಚಿತ್ರಗಳಲ್ಲಿ ಅವಳು ಸ್ವಂತ ಯಜಮಾನಿಕೆ ಹೊಂದಿರುವ ಹಿರಿಯ ಮದುವೆಯಾದ/ವಯಸ್ಕ ಹೆಂಗಸಿನ ಪಾತ್ರವನ್ನು ನಿರ್ವಹಿಸಿದ್ದಾಳೆ.

ಚಿತ್ರದ ನಿರ್ದೇಶನಕ್ಕೂ ಕೈ ಹಾಕುವ ಪ್ರಯತ್ನ ಮಾಡಿ, 1992ರಲ್ಲಿ ಶಾರೂಖ್ ಖಾನ್ ಮತ್ತು ದಿವಂಗತ ದಿವ್ಯ ಭಾರತಿ, ಸೇರಿದಂತೆ ಇತರ ಚಿತ್ರ ತಾರೆಗಳ ಪಾತ್ರಗಳೂ ಇರುವ ದಿಲ್ ಆಸಾನ್ ಹೈ ಚಲನಚಿತ್ರವನ್ನು ತಯಾರಿಸಿದ್ದಾಳೆ. ಅವಳು ನಟಿಸಿ, ನಿರ್ದೇಶಿಸಿದ ಟಿ.ವಿ. ಧಾರವಾಹಿಯಾದ ನೂಪುರ್ ನಲ್ಲಿ ಅಮೆರಿಕಾಕ್ಕೆ ಹೋಗುವ ಭರತನಾಟ್ಯದ ನರ್ತಕಿಯನ್ನಾಗಿ ನಿರೂಪಿಸಲಾಗಿದೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಅವಳು ಭಾರತದ {ಒಡಿಶಾ} ಶಾಸ್ತ್ರೀಯ ನೃತ್ಯ, ಒಡಿಸ್ಸಿ ನೃತ್ಯದ ಸಮರ್ಪಣಾಭಾವದ ಕಲಾವಿದೆಯಾಗಿದ್ದಾಳೆ. ಅವಳ ಎರಡು ಹೆಣ್ಣು ಮಕ್ಕಳು ಅದೇ ಪ್ರಕಾರದ(ಒಡಿಸ್ಸಿ) ನೃತ್ಯದಲ್ಲಿ ತರಭೇತಿಯನ್ನು ಪಡೆದು, ಹಲವಾರು (ಧರ್ಮ)ಸಂಭಾವನೆ ಇಲ್ಲದ ನೃತ್ಯ ಸಮ್ಮೇಳನಗಳಲ್ಲಿ ಮೂವರೂ ಜೊತೆಗೂಡಿ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ.

ಬಾಲಿವುಡ್ನ ಮೇರು ನಟರಾದ ಸಂಜೀವ್ ಕುಮಾರ್ ಮತ್ತು ಜಿತೇಂದ್ರರು, ಅವಳಿಗೆ ಮದುವೆಯ ಪ್ರಸ್ತಾಪ ಮಾಡಿದರು. ಆದರೆ ಅವಳು ಧರ್ಮೇಂದ್ರನನ್ನು 1980[೫] ರ ಮೇ 2ರಂದು ಮದುವೆಯಾದಳು. ಸಂಜೀವ್ ಕುಮಾರ್ ಮತ್ತು ಜಿತೇಂದ್ರ ರ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಮೇಲೆ, ಅವಳು ಧೃಡಕಾಯನಾದ ನಟ ಧರ್ಮೆಂದ್ರನನ್ನು ಭೇಟಿ ಮಾಡಿ, ಪರಸ್ಪರ ಆಕರ್ಷಿತರಾಗಿ ಮತ್ತು ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಧರ್ಮೇಂದ್ರ ಈಗಾಗಲೇ ಪ್ರಕಾಶ್ ಕೌರ್ ಳನ್ನು ಮದುವೆಯಾಗಿದ್ದು, ಸನ್ನಿ ಡಿಯೋಲ್ಮತ್ತು ಬಾಬಿ ಡಿಯೋಲ್ಎಂಬ ಇಬ್ಬರು ಗಂಡು ಮಕ್ಕಳು ಇದ್ದೂ, ಪ್ರಕಾಶ್ ಅವನಿಗೆ ವಿಚ್ಛೇಧನ ಕೊಡಲು ನಿರಾಕರಿಸಿದ್ದರಿಂದ ಹೇಮಾಳನ್ನು ವಿವಾಹವಾಗಲು ಸಾಧ್ಯವಾಗಲಿಲ್ಲ. ಹಿಂದೂ ವೈವಾಹಿಕ ಕಾನೂನಿನ ಪ್ರಕಾರ, ಹಿಂದುವೂಬ್ಬನು ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ಭಾರಿ ಮದುವೆಯಾಗುವಂತಿಲ್ಲ. ಧರ್ಮೇಂದ್ರನು ಆರ್ಯ ಸಮಾಜದ ಹಿಂದೂ ಪಂಜಾಬಿ ಜಟ್ ಕುಟುಂಬಕ್ಕೆ ಸೇರಿದವನು.

1979ರ, ಆಗಸ್ಟ್ 21 ರಂದು ಹೇಮಾ ಮತ್ತು ಧರ್ಮೇಂದ್ರ ಇಬ್ಬರೂ ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗಿ, ಅವರ ಹೆಸರುಗಳನ್ನೂ ಕ್ರಮವಾಗಿ ಆಯಿಷಾ ಬಿ.ಆರ್.ಚಕ್ರವರ್ತಿ ಮತ್ತು ದಿಲವಾರ್ ಖಾನ್ ಕೇವಲ್ ಕ್ರಿಶ್ಣ್ ಎಂದು ಬದಲಾಯಿಸಿಕೊಂಡು, ಒಡಂಬಡಿಕೆಯಿಂದ ಇಸ್ಲಾಮಿಕ್ ಶಾಸ್ತ್ರದ ಪ್ರಕಾರ ಅವರುಗಳು ಮದುವೆಯಾದರು. ಅವರ ಮದುವೆಯಾದ ಮೂರು ವರ್ಷಗಳ ನಂತರ, ಹೇಮಾ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಳು: ಈಶಾ ಡಿಯೋಲ್ {1982 ಜನನ} ಮತ್ತು ಅಹನಾ ಡಿಯೋಲ್. ಅವಳ ಮಗಳಾದ ಈಶಾ, ಅವಳ ತಾಯಿಯಿಂದ ತರಭೇತಿ ಪಡೆದು, ಶಾಸ್ತ್ರೀಯ ನೃತ್ಯಗಾರ್ತಿಯಾಗಿದ್ದಾಳೆ.

2005ರಲ್ಲಿ ಕಾಫೀ ವಿಥ್ ಕರಣ್ ಎಂಬ ಟಿ.ವಿ. ಪ್ರದರ್ಶನದಲ್ಲಿ, ಅವಳ ಹೇಳಿಕೆಯಂತೆ, ಅವಳು ತನ್ನ ಹೆಣ್ಣು ಮಕ್ಕಳಿಗೆ ತಮಿಳು ಭಾಷೆಯನ್ನು ಚೆನ್ನಾಗಿ ಕಲಿಸಿದ್ದಾಳೆ, ಆದರೆ ಅವಳ ಮಗಳು ಈಶಾ ಡಿಯೋಲ್ಗೆ ಸಹಾಯ ಮಾಡಲು, ಚಿತ್ರವೂಂದಕ್ಕೆ ಪಂಜಾಬಿ ಭಾಷೆಯನ್ನು ಕಲಿಯಲು ಖಾಸಗಿ ಶಿಕ್ಷಕರನ್ನು(ಮನೆ ಮೇಸ್ಟ್ರು) ನೇಮಿಸಬೇಕಾಗಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಮಾತೃಭಾಷೆ ಪಂಜಾಬಿಯಾದ, ಈಶಾಳ ತಂದೆ ಧರ್ಮೇಂದ್ರನು ಹೇಮಾ ಮತ್ತು ಅವನ ಹೆಣ್ಣು ಮಕ್ಕಳ ಜೊತೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಸಂಭಾಷಣೆ ಮಾಡುತಿದ್ದನು.[೬]

ಹೇಮಾ ಮಾಲಿನಿ ಮತ್ತು ಅವಳ ಗಂಡ ಭಾರತೀಯ ಜನತಾ ಪಾರ್ಟಿಯ {ಬಿಜೆಪಿ} ಸದಸ್ಯರಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿಯ ಸಹಕಾರದಿಂದ ಪಾರ್ಲಿಮೆಂಟ್ ಆಫ್ ಇಂಡಿಯಾದ ಮೇಲ್ಮನೆಯಾದ ರಾಜ್ಯ ಸಭೆಗೆಅವಳು ಆಯ್ಕೆಯಾಗಿದ್ದಳು. 2004ರ ಫೆಬ್ರವರಿಯಲ್ಲಿ ಅವಳು ಅಧಿಕೃತವಾಗಿ ಪಕ್ಷಕ್ಕೆ ಸೇರಿದಳು. ಅವಳ ಸಿನಿಮಾ ವೃತ್ತಿಯ ಕಡಿಮೆ ಒತ್ತಡದಿಂದಾಗಿ, ಪಕ್ಷದಲ್ಲಿ ಕ್ರಿಯಾಶೀಲ ಸದಸ್ಯೆಯಾಗಿದ್ದಳು. ಪಕ್ಷದ ವಿವಿಧ ಚುನಾವಣೆಗಳ ಮುಖಾಂತರ ಪಾರ್ಟಿಯ ಸಭೆಗಳಲ್ಲಿ, ರ್ಯಾಲಿಗಳಲ್ಲಿ ಮತ್ತು ಚಳುವಳಿಗಳಲ್ಲಿ ಭಾಗವಹಿಸಿದ್ದಳು.

ಫೂಲ್ ಔರ್ ಕಾಂಟೆ(1991) ಮತ್ತು ರೋಜಾ(1992)[೭] ಯಶಸ್ವೀ ಚಿತ್ರಗಳಲ್ಲಿ ನಟಿಸಿರುವ ಮಧೂ ಹೇಮಾ ಮಾಲಿನಿಯ ಸೋದರಿಯ ಮಗಳು.

ಪ್ರಶಸ್ತಿಗಳು,ಗೌರವಗಳು ಮತ್ತು ಮನ್ನಣೆಗಳು[ಬದಲಾಯಿಸಿ]

ಫಿಲ್ಮ್‌ಫೇರ್ ಪ್ರಶಸ್ತಿಗಳು[ಬದಲಾಯಿಸಿ]

ಯಶಸ್ಸು ಗಳಿಸಿದೆ

ನಾಮ ನಿರ್ದೇಶನಗಳು

ಇತರೇ ಪ್ರಶಸ್ತಿಗಳು[ಬದಲಾಯಿಸಿ]

ಪ್ರಶಸ್ತಿಗಳು[ಬದಲಾಯಿಸಿ]

 • 2000 - ಭಾರತ ಸರ್ಕಾರದಿಂದ ಪದ್ಮಶ್ರೀ, ಭಾರತದ 4 ನೇ ಅತ್ಯುನ್ನತ ನಾಗರೀಕ ಪ್ರಶಸ್ತಿ.
 • 2004 - ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಉದ್ಯಮದಿಂದ (ಎಫ್ಐಸಿಸಿಐ), ಭಾರತೀಯ ಮನರಂಜನಾ ಉದ್ಯಮಕ್ಕೆ[೧೩] ಅವಳ ಕಾಣಿಕೆಯ ಗುರುತಿಗಾಗಿ "ಲಿವಿಂಗ್ ಲೆಜೆಂಡ್ ಅವಾರ್ಡ್".
 • 2007 - ದ 2007 ಬ್ಯಾಂಕಾಕ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ವಿಶೇಷ ಗೌರವಾರ್ಥ ಕಾರ್ಯಕ್ರಮವೂಂದರಲ್ಲಿ[೧೪] ಹೇಮಾ ಮಾಲಿನಿ ತಾರೆಯಾಗಿ ನಟಿಸಿರುವ ಅನೇಕ ಚಿತ್ರಗಳನ್ನು ತೋರಿಸಲಾಯಿತು.
 • 2008 - ಅವಳ ಶಾಸ್ತ್ರೀಯ ನೃತ್ಯದ[೧೫] ಕೊಡುಗೆಗಾಗಿ ಮನ್ನಣೆ.

ಆಯ್ದ ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಹೇಮಾ ಮಾಲಿನಿಯ ಚಲನಚಿತ್ರಗಳ ಪಟ್ಟಿ

ಆಕರಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. ೩.೦ ೩.೧ ೩.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. ೫.೦ ೫.೧ ಶ್ರೀಮತಿ ಹೇಮಾ ಮಾಲಿನಿ, ಪಾರ್ಲಿಮೆಂಟ್ ನ ಸದಸ್ಯೆ (ರಾಜ್ಯ ಸಭಾ)- ಬಯೋ ಡಾಟ ಭಾರತದ ವರ್ತಮಾನ ಮಾಹಿತಿ ಕೇಂದ್ರ.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. 18968& amp;newscat=Community-events [dead link]
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಹೆಚ್ಚಿನ ಓದಿಗೆ[ಬದಲಾಯಿಸಿ]

 • Somaaya, Bhawana (2007). Hema Malini: the authorized biography. New Delhi: Lotus Collection. ISBN 8174364676. 

ಹೊರಗಿನ ಕೊಂಡಿಗಳು[ಬದಲಾಯಿಸಿ]

 1. REDIRECT Template:FilmfareAwardBestActress