ವಿನೋದ್ ಖನ್ನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
VinodKhanna.jpg

ವಿನೋದ್ ಖನ್ನಾ (6 ಅಕ್ಟೋಬರ್ 1946 – 27 ಎಪ್ರಿಲ್ 2017)[೧] ಒಬ್ಬ ಭಾರತೀಯ ನಟ ಮತ್ತು ಬಾಲಿವುಡ್ ಚಿತ್ರಗಳ ನಿರ್ಮಾಪಕರಾಗಿದ್ದರು. ಅವರು ಎರಡು ಬಾರಿ ಫ಼ಿಲ್ಮ್‌ಫ಼ೇರ್ ಪ್ರಶಸ್ತಿ ಗೆದ್ದಿದ್ದರು. ಅವರು ಸಕ್ರಿಯ ರಾಜಕಾರಣಿಯೂ ಆಗಿದ್ದರು ಮತ್ತು ಗುರ್ದಾಸ್‍ಪುರ್ ಕ್ಷೇತ್ರದಿಂದ ಈಗಿನ ಸಂಸದರಾಗಿದ್ದರು (1998-2009 ಮತ್ತು 2014-2017 ನಡುವೆ)

ಖನ್ನಾ ಅನೇಕ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡರು ಮತ್ತು ಮೇರೆ ಅಪ್ನೆ, ಮೇರಾ ಗಾಂವ್ ಮೇರಾ ದೇಶ್, ಗದ್ದಾರ್, ಜೇಯ್ಲ್ ಯಾತ್ರಾ, ಇಮ್ತಿಹಾನ್, ಮುಕದ್ದರ್ ಕಾ ಸಿಕಂದರ್, ಇನ್ಕಾರ್, ಕಚ್ಚೆ ಧಾಗೆ, ಅಮರ್ ಅಕ್ಬರ್ ಆ್ಯಂಥನಿ, ರಾಜ್‍ಪುತ್, ಕುರ್ಬಾನಿ, ಕುದ್ರತ್, ದಯಾವಾನ್, ಕಾರ್‍ನಾಮಾ ಮತ್ತು ಜುರ್ಮ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಸ್ಮರಣೀಯರಾಗಿದ್ದಾರೆ.

೧೯೬೮ರಲ್ಲಿ ಪಾದಾರ್ಪಣೆ ಮಾಡಿದ ನಂತರ, ಖನ್ನಾ ಮೊದಲು ಸಣ್ಣ ಮತ್ತು ಖಳನಟನ ಪಾತ್ರಗಳಲ್ಲಿ ನಟಿಸಿದರು. ಮೇರೆ ಅಪ್ನೆ ಚಿತ್ರದಲ್ಲಿನ ಅವರ ಕೋಪಗೊಂಡ ಯುವಕನ ಪಾತ್ರ, ಸೂಪರ್‍ಹಿಟ್ ಚಿತ್ರ ಮೇರಾ ಗಾಂವ್ ಮೇರಾ ದೇಶ್ ಚಿತ್ರದಲ್ಲಿ ಮುಖ್ಯ ಖಳನಟನಾಗಿ ಅವರ ನಕಾರಾತ್ಮಕ ಪಾತ್ರ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆಪಡೆದ ಚಿತ್ರ ಅಚಾನಕ್‍ನಲ್ಲಿ ಅವರ ಪಾತ್ರ ಮೆಚ್ಚುಗೆಪಡೆದವು.

೧೯೮೨ರಲ್ಲಿ, ತಮ್ಮ ಚಿತ್ರವೃತ್ತಿಯ ಉತ್ತುಂಗದಲ್ಲಿದ್ದಾಗ, ಖನ್ನಾ ತಾತ್ಕಾಲಿಕವಾಗಿ ಚಿತ್ರೋದ್ಯಮವನ್ನು ತ್ಯಜಿಸಿ ತಮ್ಮ ಆಧ್ಯಾತ್ಮಿಕ ಗುರು ಓಶೊ ರಜನೀಶ್‍ರನ್ನು ಅನುಸರಿಸಿದರು. ೫ ವರ್ಷಗಳ ವಿರಾಮದ ನಂತರ, ಅವರು ಹಿಂದಿ ಚಿತ್ರೋದ್ಯಮಕ್ಕೆ ಹಿಂತಿರುಗಿ ಬಂದು ಇನ್ಸಾಫ಼್ ಮತ್ತು ಸತ್ಯಮೇವ್ ಜಯತೆ ಎಂಬ ಒಂದರ ಹಿಂದೆ ಮತ್ತೊಂದು ಹಿಟ್ ಚಿತ್ರಗಳನ್ನು ನೀಡಿದರು.

ಖನ್ನಾರನ್ನು ಬಾಲಿವುಡ್‍ನ ಅತ್ಯಂತ ಸುಂದರ ಮುಖ್ಯನಟರ ಪೈಕಿ ಒಬ್ಬರೆಂದು ಜನಪ್ರಿಯವಾಗಿ ಪ್ರಶಂಸಿಸಲಾಗಿದೆ.

ಖನ್ನಾ ೨೭ ಎಪ್ರಿಲ್ ೨೦೧೭ರಂದು ಮುಂಬೈನಲ್ಲಿ ಪಿತ್ತಕೋಶದ ಕ್ಯಾನ್ಸರ್‍ನಿಂದ ಕೊನೆಯುಸಿರೆಳೆದರು.

೨೦೧೮ ರಲ್ಲಿ ವಿನೋದ್ ಖನ್ನಾ ಅವರಿಗೆ ಮರಣೋತ್ತರವಾಗಿ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ

ಉಲ್ಲೇಖಗಳು[ಬದಲಾಯಿಸಿ]