*ವಿವರಣೆ: ಸಸ್ಯಾಹಾರ ಮೊಟ್ಟೆಗಳಿಲ್ಲದೆ, ಡೈರಿ ಉತ್ಪನ್ನ, ಸಸ್ಯ ಉತ್ಪನ್ನಗಳನ್ನು ಹೊಂದಿದೆ.
*ವಿಧಗಳು: ಹಾಲು, ಹಸಿತರಕಾರಿ, ಹಣ್ಣುಗಳು:
ಹಿಂದೂ ಸಸ್ಯಾಹಾರ, ಬೌದ್ಧ ಸಸ್ಯಾಹಾರ, ಜೈನ್ ಸಸ್ಯಾಹಾರ
ಆರೋಗ್ಯವಾಗರಲು ಸಸ್ಯಾಹಾರಿ ಆಹಾರ ಕ್ರಮ ಎಂದಿಗೂ ಸೂಕ್ತವಾದುದು. ಆರೋಗ್ಯವಾಗಿರಲು, ಹೃದಯ ಸ್ವಾಸ್ಥ್ಯಕ್ಕೆ, ಶಕ್ತಿಯುತವಾಗಿರಲು, ಮಧುಮೇಹಕ್ಕೆ, ಕ್ಯಾನ್ಸರ್‌ಗಳ ತಡೆಗೆ ಸರಳ. ಎಲ್ಲಕ್ಕೂ ಸಸ್ಯಾಹಾರಿ ಡಯೆಟ್ ಸಹಾಯವಾಗಬಲ್ಲದು.ಮನೆಯಲ್ಲೇ ಇರುವ ಕೆಲವೇ ಆಹಾರಗಳಿಂದ ನಮ್ಮ ಆರೋಗ್ಯವನ್ನು ಸಮತೋಲನವಾಗಿಟ್ಟುಕೊಳ್ಳಬಹುದು.
ಒಮೆಗಾ 3 ಫ್ಯಾಟಿ ಆಸಿಡ್; ಸ್ವಸ್ಥ ಹೃದಯ, ಮೆದುಳು, ಚರ್ಮ ಹಾಗೂ ಕೀಲಿಗೆ ಒಮೆಗಾ 3 ತುಂಬಾ ಅಗತ್ಯ. ಇದು ಅಗಸೆ ಬೀಜ, ಅಗಸೆ ಎಣ್ಣೆ, ಅಕ್ರೋಡ, ಗೋಣಿ ಸೊಪ್ಪಿನಲ್ಲಿ ಇರುತ್ತದೆ.
ವಿಟಮಿನ್ ಡಿ: ವಿಟಮಿನ್ ಡಿ-೩ ಸೂರ್ಯನ ಬೆಳಕಿನಿಂದಲೇ ಪಡೆಯಬಹುದು. ಇದರೊಂದಿಗೆ ಕಿತ್ತಳೆ ಹಣ್ಣಿನ ರಸ, ಸೋಯಾ ಮಿಲ್ಕ್‌ನಲ್ಲಿ ಕೂಡ ಇತರೆ ವಿಟಮಿನ್ ಡಿ ಯ ಅಂಶಗಳಿವೆ
ಕರ್ನಾಟಕದ ಸಸ್ಯಾಹಾರಿ ಊಟ-ಗುಂಡಲಪೇಟೆ
ಕೊಲೆಸ್ಟ್ರಾಲ್ ಹತೋಟಿ: ಸಸ್ಯಾಹಾರಿ ಆಹಾರ ಕ್ರಮ ಕೊಲೆಸ್ಟ್ರಾಲ್ ಹೆಚ್ಚಿನ ಅಂಶವನ್ನು ತಡೆಯುತ್ತದೆ
200ಎಂ.ಜಿಗಿಂತ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಅಂಶವು ಹೃದಯದ ತೊಂದರೆ ಹಾಗೂ ರಕ್ತದ ಏರೊತ್ತಡಕ್ಕೆ ಕಾರಣವಾಗಬಲ್ಲದು. ಇಂಥ ಕೆಟ್ಟ ಕೊಬ್ಬನ್ನು ಸಸ್ಯಾಹಾರಿ ಆಹಾರ ಕ್ರಮ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ..
ಸಸ್ಯಾಹಾರದ ಊಟ-ತಿಂಡಿ ಸರಳವಾದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಡಿಮೆ ಹಣ ಸಾಕಾಗುವುದು. ಅದರಿಂದ ಭವಿಷ್ಯದಲ್ಲಿ ಚಿಕಿತ್ಸೆಗೆ ಹಣ ಸುರಿಯುವುದೂ ತಪ್ಪುತ್ತದೆ.