ವಿಷಯಕ್ಕೆ ಹೋಗು

ಭಾರತದ ವಾಸ್ತುಶೈಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾಜ್‌ ಮಹಲ್‌—ಒಂದು UNESCO ವಿಶ್ವ ಪರಂಪರೆ ತಾಣ — ಆಗ್ರಾದಲ್ಲಿದೆ.

ಭಾರತದ ವಾಸ್ತುಶೈಲಿ ಯು ಇತಿಹಾಸ, ಸಂಸ್ಕೃತಿ ಮತ್ತು ಧರ್ಮಗಳಲ್ಲಿ ತನ್ನ ಬೇರುಗಳನ್ನು ಹೊಂದಿದೆ.[೧] ತನ್ನ ಸಹಸ್ರಮಾನಗಳಷ್ಟು ಪ್ರಾಚೀನವಾದ ಇತಿಹಾಸದುದ್ದಕ್ಕೂ ಭಾರತವು ವಿಶ್ವದ ಇತರೆ ಪ್ರಾಂತ್ಯಗಳೊಂದಿಗೆ ಹೊಂದಿದ್ದ ಜಾಗತಿಕ ಅನುಬಂಧದ ಪರಿಣಾಮವಾಗಿ ಭಾರತೀಯ ವಾಸ್ತುಶೈಲಿಯು ಸಮಯಕ್ಕೆ ಅನುಗುಣವಾಗಿ ಮುನ್ನಡೆಯುತ್ತಾ ಕಂಡುಬಂದ ಹಲವು ಹತ್ತು ಪ್ರಭಾವಗಳನ್ನು ಸಮ್ಮಿಳಿತಗೊಳಿಸಿಕೊಂಡಿದೆ[೧] ಭಾರತದಲ್ಲಿ ಚಾಲ್ತಿಯಲ್ಲಿರುವ ವಾಸ್ತುಶಿಲ್ಪೀಯ ವಿಧಾನಗಳು ತನ್ನ ಸ್ಥಾಪಿತ ಕಟ್ಟಡನಿರ್ಮಾಣ ಸಂಪ್ರದಾಯಗಳು ಹಾಗೂ ಹೊರರಾಷ್ಟ್ರಗಳ ಸಾಂಸ್ಕೃತಿಕ ಪಾರಸ್ಪರಿಕ ಸಂವಾದಗಳ ಸೂಕ್ತ ಪರೀಕ್ಷೆ ಹಾಗೂ ಕಾರ್ಯಗತಗೊಳಿಸುವಿಕೆಗಳ ಪರಿಣಾಮಗಳಾಗಿವೆ.[೧]

ಹಳೆಯದಾದರೂ ಈ ಪೌರ್ವಾತ್ಯ ಸಂಪ್ರದಾಯವು ಭಾರತವು ಆಧುನಿಕ ರಾಜ್ಯಗಳಿಂದ ಕೂಡಿದ ರಾಷ್ಟ್ರವಾಗಿ ಮಾರ್ಪಡುತ್ತಾ ಬಂದಂತೆ ಆಧುನಿಕ ಮೌಲ್ಯಗಳನ್ನು ಕೂಡಾ ಸಂಯೋಜನೆಗೊಳಿಸುತ್ತಲಿದೆ.[೧] ರಾಷ್ಟ್ರವು ವಿಶ್ವದ ಆರ್ಥಿಕತೆಯೊಂದಿಗೆ ಮತ್ತಷ್ಟು ಸಂಘಟಿತಗೊಳ್ಳುತ್ತಾ ಹೋದಂತೆ ೧೯೯೧ರ ಆರ್ಥಿಕ ಸುಧಾರಣೆಗಳು ಭಾರತದ ಮಹಾನಗರಪ್ರದೇಶಗಳ ವಾಸ್ತುಶೈಲಿಯ ಅಭಿವೃದ್ಧಿಗೆ ಮತ್ತಷ್ಟು ಆಸರೆ ನೀಡಿದವು.[೧] ಸಾಂಪ್ರದಾಯಿಕ ವಾಸ್ತು ಶಾಸ್ತ್ರ ವು ಸಮಕಾಲೀನ ಯುಗದಲ್ಲಿ ಕೂಡಾ ಭಾರತದಲ್ಲಿನ ವಾಸ್ತುಶೈಲಿಗೆ ಸಂಬಂಧಪಟ್ಟ ಹಾಗೆ ಪ್ರಭಾವಶಾಲಿಯಾಗಿಯೇ ಉಳಿದಿದೆ.[೧]

ಮೆಹ್ರ್‌ಗಢ ಸಂಸ್ಕೃತಿ —ಸಿಂಧೂ ಕಣಿವೆ ನಾಗರೀಕತೆ (೭೦೦೦ ಕ್ರಿ.ಪೂ—೧೫೦೦ ಕ್ರಿ.ಪೂ)[ಬದಲಾಯಿಸಿ]

ಮೆಹ್ರ್‌ಗಢದಲ್ಲಿ (೭೦೦೦ ಕ್ರಿ.ಪೂ) ಲಭ್ಯವಾದ ಪುರಾತತ್ವಶಾಸ್ತ್ರೀಯ ಕುರುಹೊಂದು ಮಣ್ಣಿನ ಇಟ್ಟಿಗೆಯಿಂದ ನಿರ್ಮಿತವಾಗಿದ್ದ ಗೃಹಗಳು ಹಾಗೂ ಉಗ್ರಾಣಗಳ ನಿರ್ಮಾಣವನ್ನು ತೋರಿಸುತ್ತದೆ.[೨] ಸರಿಸುಮಾರು ೪೫೦೦ ಕ್ರಿ.ಪೂಯ ಅವಧಿಯಲ್ಲಿ ಸಿಂಧೂ ಕಣಿವೆ ನಾಗರೀಕತೆಯಲ್ಲಿ ನೀರಾವರಿ ವ್ಯವಸ್ಥೆಯು ಬೆಳವಣಿಗೆ ಹೊಂದಿತ್ತು.[೩] ಈ ನವೀನ ತಂತ್ರಜ್ಞಾನದ ಪರಿಣಾಮವಾಗಿ ಸಿಂಧೂ ನಾಗರೀಕತೆಯ ಗಾತ್ರ ಹಾಗೂ ಉಚ್ಛ್ರಾಯವು ಬೆಳೆಯುತ್ತಾ ಹೋಯಿತಲ್ಲದೇ, ಅಂತಿಮವಾಗಿ ಒಳಚರಂಡಿ ವ್ಯವಸ್ಥೆ ಹಾಗೂ ಒಳಚರಂಡಿ ನಾಲೆಗಳ ವ್ಯವಸ್ಥೆಗಳ ಬಳಕೆಯನ್ನು ಮಾಡುತ್ತಿದ್ದ ಮತ್ತಷ್ಟು ಯೋಜಿತವಾದ ವಸಾಹತುಗಳ ನಿರ್ಮಾಣಕ್ಕೆ ಕಾರಣವಾದವು.[೩]

ಬಿಹಾರದ ಬರಾಬರ್‌ ಮೌಂಟ್ಸ್‌‌ನಲ್ಲಿನ ಮೌರ್ಯರ ವಾಸ್ತುಶೈಲಿ. ಲೋಮಷ ಋಷಿಯ ಗವಿಕೋಣೆ . 3ನೆಯ ಶತಮಾನ ಕ್ರಿ.ಪೂ.

೨೮೦೦ ಕ್ರಿ.ಪೂಯ ವೇಳೆಗೆ ನೆಲಮಹಡಿಯಲ್ಲಿ ಸ್ಥಾಪಿಸಲಾಗಿರುತ್ತಿದ್ದ ಖಾಸಗಿ ಸ್ನಾನಗೃಹಗಳು ಸಿಂಧೂ ಕಣಿವೆ ನಾಗರೀಕತೆಯ ಬಹುತೇಕ ಎಲ್ಲಾ ಗೃಹಗಳಲ್ಲಿ ಕಂಡುಬರುತ್ತಿದ್ದವು.[೪] ಕೊಳಚೆನೀರಿನ ಹರಿವಿಗೆ ಅವಕಾಶವಿರಲೆಂದು ಗೋಡೆಗಳಲ್ಲಿ ಮೂಡಿಸಿರುತ್ತಿದ್ದ ಮಣ್ಣಿನ ಕೊಳವೆಗಳು ಇರುತ್ತಿದ್ದವಲ್ಲದೇ ಕೆಲವು ಸಂದರ್ಭಗಳಲ್ಲಿ ಕುಳಿತುಕೊಳ್ಳಲು ಅವಕಾಶವಿರುವ ಹಾಗೆ ತಳಗಟ್ಟು ಅಥವಾ ಮಗ್ಗಲುತಡೆಗಳನ್ನು ಕೂಡಾ ನೀಡಿರಲಾಗಿರುತ್ತಿತ್ತು.[೪] ಸಿಂಧೂ ಕಣಿವೆ ನಾಗರೀಕತೆಯು ವಿಶ್ವದಲ್ಲೇ ಅತ್ಯಂತ ಆಧುನಿಕವಾದ ಹಲವು ಖಾಸಗಿ ಶೌಚಾಲಯಗಳನ್ನು ಹೊಂದಿತ್ತು.[೪] "ಪಾಶ್ಚಿಮಾತ್ಯ-ಶೈಲಿಯ" ಶೌಚಾಲಯಗಳನ್ನು ಇಟ್ಟಿಗೆಗಳಿಂದ ನಿರ್ಮಿಸಿರಲಾಗುತ್ತಿದ್ದರೆ ಮೇಲ್ಭಾಗದಲ್ಲಿ ಕಲ್ಲಿದ್ದಲಿನಿಂದ ನಿರ್ಮಿತವಾಗಿದ್ದ ಶೌಚಾಲಯದ ಆಸನಗಳನ್ನು ಅವು ಹೊಂದಿರುತ್ತಿದ್ದವು.[೪] ಗಲೀಜನ್ನು ನಂತರ ಒಳಚರಂಡಿ ವ್ಯವಸ್ಥೆಗಳಿಗೆ ಹರಿಯಬಿಡಲಾಗುತ್ತಿತ್ತು.[೪] ೩೦೦೦ ಕ್ರಿ.ಪೂಯ ವೇಳೆಗೆ ಗಿರ್ನಾರ್‌‌ನಲ್ಲಿ ನಿರ್ಮಿಸಲಾಗಿದ್ದ ಕೃತಕ ಜಲಾಶಯಗಳು ಹಾಗೂ ಆದಿಮ ಕಾಲುವೆ ನೀರಾವರಿ ವ್ಯವಸ್ಥೆಗಳೂ ಸೇರಿದಂತೆ ಸುಮಾರು ೨೬೦೦ ಕ್ರಿ.ಪೂಯ ವೇಳೆಗೆ ನಿರ್ಮಿಸಲಾಗಿದ್ದ ಅತ್ಯಾಧುನಿಕವಾದ ನೀರಾವರಿ ಹಾಗೂ ಸಂಗ್ರಹಣಾ ವ್ಯವಸ್ಥೆಗಳನ್ನು ಸಿಂಧೂ ಕಣಿವೆ ನಾಗರೀಕತೆಯವರು ಅಭಿವೃದ್ಧಿಪಡಿಸಿದ್ದರು.[೫]

ಮೊಹೆಂಜೋ-ದಾರೋದ ಭೂಶೋಧನೆ ಮಾಡಿದ ಉಳಿಕೆಗಳು, ಆಧುನಿಕ -ದಿನಮಾನದ ಪಾಕಿಸ್ತಾನ.

೨೭೦೦ ಕ್ರಿ.ಪೂರ ವೇಳೆಗೆ ಭಾರೀ ಪ್ರಮಾಣದ ನೈರ್ಮಲ್ಯಕಾರಿ ಒಳಚರಂಡಿ ನಾಲೆ ವ್ಯವಸ್ಥೆಗಳು ಸಿಂಧೂ ಕಣಿವೆಯಲ್ಲಿ ಅಸ್ತಿತ್ವದಲ್ಲಿದ್ದವು.[೪] ಒಳಚರಂಡಿ ಕಾಲುವೆಗಳು ೭–೧೦ ಅಡಿಗಳಷ್ಟು ಅಗಲವಾಗಿದ್ದು ನೆಲಮಟ್ಟಕ್ಕಿಂತ ಕೆಳಗೆ 2 feet (0.61 m)ಗಳಷ್ಟು ಆಳವಾಗಿದ್ದವು.[೪] ಕೊಳಚೆ ನೀರಿನ ವ್ಯವಸ್ಥೆಯನ್ನು ಆಗ ಭಾರೀ ರೊಚ್ಚುಗುಂಡಿಗಳೆಡೆ ಹರಿಯುವಂತೆ ಮಾಡಲಾಗುತ್ತಿತ್ತು, ಎರಡು ಕೊಳಚೆ ನೀರಿನ ಕಾಲುವೆಗಳ ಛೇದಕ ಸ್ಥಳದಲ್ಲಿ ನಿರ್ಮಿತವಾಗಿರುತ್ತಿದ್ದ ಅದಕ್ಕೆ ನಿಯಮಿತವಾಗಿ ಶುದ್ಧಿಗೊಳಿಸಲು ಅನುಕೂಲವಾಗುವಂತೆ ಮೆಟ್ಟಿಲುಗಳಿರುತ್ತಿದ್ದವು.[೪] ಸೋರುವಿಕೆಯಾಗದಂತೆ ಕಲ್ಲರಗುವಿನ ಸಹಾಯದಿಂದ ಸುಲಭವಾಗಿ ಸೇರಿಸಲಾಗುವಂತೆ ಅಗಲವಾದ ಚಾಚುಪಟ್ಟಿಗಳನ್ನು ಹೊಂದಿದ ಸುಟ್ಟ ಜೇಡಿಮಣ್ಣಿನ ಕೊಳಾಯಿ ಕೊಳವೆಗಳನ್ನು ಹೊಂದಿರುವ ಕೊಳಾಯಿ ವ್ಯವಸ್ಥೆಯು ೨೭೦೦ ಕ್ರಿ.ಪೂಯ ವೇಳೆಗೆ ಅಸ್ತಿತ್ವದಲ್ಲಿತ್ತು.[೪]

ಪ್ರಮೋದ್‌ ಚಂದ್ರರು (೨೦೦೮) ೨೫೦೦–೧೮೦೦ ಕ್ರಿ.ಪೂರವರೆಗಿನ ಸಿಂಧೂ ಕಣಿವೆ ವಾಸ್ತುಶೈಲಿಯ ಬಗ್ಗೆ ವಿಸ್ತೃತ ವರ್ಣನೆಯನ್ನು ಹೀಗೆ ಕೊಡುತ್ತಾರೆ:[೬]

ಮಹಾ ಜನಪದರ ಯುಗದ ನಂತರದ ಅವಧಿ (೧೫೦೦ ಕ್ರಿ.ಪೂ—೨೦೦ ಕ್ರಿ.ಶ)[ಬದಲಾಯಿಸಿ]

ಸಾಂಚಿಯಲ್ಲಿ ಬೃಹತ್‌ ಸ್ತೂಪ (4ರಿಂದ-1ನೆಯ ಶತಮಾನ ಕ್ರಿ.ಪೂ). ಭಾರತದಲ್ಲಿ ಪವಿತ್ರ ಅವಶೇಷಗಳನ್ನು ಸಂಗ್ರಹಿಸಿಡುವ ಉದ್ದೇಶಕ್ಕಾಗಿ ನಿರ್ಮಿಸಲಾಗುತ್ತಿದ್ದ ಸ್ಮಾರಕಾರ್ಥವಾದ ಕಟ್ಟಡವೆಂದರೆ ಗುಮ್ಮಟಾಕಾರದ ಸ್ಮಾರಕವಾದ ಸ್ತೂಪ.

ಭಾರತದಲ್ಲಿ ಪವಿತ್ರ ಅವಶೇಷಗಳನ್ನು ಸಂಗ್ರಹಿಸಿಡುವ ಉದ್ದೇಶಕ್ಕಾಗಿ ನಿರ್ಮಿಸಲಾಗುತ್ತಿದ್ದ ಸ್ಮಾರಕಾರ್ಥವಾದ ಕಟ್ಟಡವೆಂದರೆ ಗುಮ್ಮಟಾಕಾರದ ಸ್ಮಾರಕವಾದ ಬೌದ್ಧ ಸ್ತೂಪ.[೭] ಪವಿತ್ರ ಅವಶೇಷಗಳನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ ಬೌದ್ಧ ಸ್ಮಾರಕಗಳನ್ನು ಪ್ರಧಾನವಾಗಿ ಬಳಸುತ್ತಿದ್ದ ಆಗ್ನೇಯ ಮತ್ತು ಪೂರ್ವ ಏಷ್ಯಾಗಳಲ್ಲಿ ಸ್ತೂಪ ವಾಸ್ತುಶೈಲಿಯನ್ನು ಅಳವಡಿಸಿಕೊಳ್ಳಲಾಗಿತ್ತು.[೭][೭] ಮೌರ್ಯ ಸಾಮ್ರಾಜ್ಯದ ಅವಧಿಯಲ್ಲಿ (c. ೩೨೧–೧೮೫ ಕ್ರಿ.ಪೂ) ಸ್ತೂಪಗಳು, ವಿಹಾರಗಳು ಹಾಗೂ ದೇವಾಲಯಗಳನ್ನು ಒಳಗೊಂಡ ಕೋಟೆಗಳಿಂದ ರಕ್ಷಿತವಾಗಿರುತ್ತಿದ್ದ ನಗರಗಳನ್ನು ಕಟ್ಟಲಾಗಿತ್ತು .[೬] ಮರದಿಂದ ನಿರ್ಮಿಸಿದ ವಾಸ್ತುಕೃತಿಗಳು ಜನಪ್ರಿಯವಾಗಿದ್ದವು ಹಾಗೂ ಶಿಲೆಗಳನ್ನು ಕತ್ತರಿಸಿ ನಿರ್ಮಿಸಿದ ವಾಸ್ತುಶೈಲಿಯು ಮತ್ತಷ್ಟು ಸದೃಢವಾಯಿತು.[೬] ಗೂಟಗಳು, ಅಡ್ಡಸರಳುಗಳು ಹಾಗೂ ಕಳಸಗಳನ್ನು ಹೊಂದಿರುತ್ತಿದ್ದ ರಕ್ಷಣಾ ಅಡ್ಡಕಂಬಿಗಳು ಸ್ತೂಪದ ಸುತ್ತಲೂ ಇರುತ್ತಿದ್ದ ರಕ್ಷಣಾ ಬೇಲಿಯ ಲಕ್ಷಣವಾಗಿ ಮಾರ್ಪಟ್ಟಿತ್ತು.[೬] ಅಂಡಾಕೃತಿಯ, ವೃತ್ತಾಕೃತಿಯ, ಚತುರ್ಭುಜಾಕೃತಿಯ ಅಥವಾ ಕಮಾನುಗೂಡಿನ ಆಕಾರದ ನಕ್ಷೆಗಳನ್ನು ಆಧರಿಸಿದ ದೇವಾಲಯಗಳನ್ನು ಇಟ್ಟಿಗೆಗಳು ಹಾಗೂ ಮರಮುಟ್ಟುಗಳನ್ನು ಬಳಸಿ ನಿರ್ಮಿಸಲಾಗುತ್ತಿತ್ತು.[೬] ತೋರಣ ಗಳೆಂದು ಕರೆಯಲ್ಪಡುತ್ತಿದ್ದ ಭಾರತೀಯ ಮಹಾದ್ವಾರಗಳ ಕಮಾನುಗಳು ಬೌದ್ಧ ಧರ್ಮದ ಹರಡುವಿಕೆಯೊಂದಿಗೆ ಪೂರ್ವ ಏಷ್ಯಾವನ್ನೂ ತಲುಪಿದವು.[೮] ಅಡ್ಡತೊಲೆ ಬಾಗಿಲುಗಳು ಸಾಂಚಿಯ ಐತಿಹಾಸಿಕ ಬೌದ್ಧ ಕ್ಷೇತ್ರದಲ್ಲಿರುವ (೩ನೆಯ ಶತಮಾನ ಕ್ರಿ.ಪೂ - ೧೧ನೆಯ ಶತಮಾನ ಕ್ರಿ.ಶ) ತೋರಣ ದ್ವಾರಗಳಿಂದಲೇ ಸ್ಫೂರ್ತಿ ಪಡೆದು ನಿರ್ಮಿಸಲಾದಂತಹವುಗಳು ಎಂದು ಹಲವು ವಿದ್ವಾಂಸರು ವಾದ ಮಂಡಿಸುತ್ತಾರೆ.[೯]

ಶಿಲಾಖಂಡಗಳನ್ನು ಕತ್ತರಿಸಿ ನಿರ್ಮಿಸಲಾಗುತ್ತಿದ್ದ ಮೆಟ್ಟಿಲುಗಳನ್ನು ಹೊಂದಿರುತ್ತಿದ್ದ ಬಾವಿಗಳು ಭಾರತದಲ್ಲಿ ೨೦೦-೪೦೦ ಕ್ರಿ.ಶಯ ಕಾಲದಿಂದಲೇ ಕಂಡುಬರುತ್ತಿದ್ದವು.[೧೦] ತರುವಾಯವೇ ಧಾಂಕ್‌ನಲ್ಲಿ(೫೫೦-೬೨೫ ಕ್ರಿ.ಶ) ಬಾವಿಗಳ ನಿರ್ಮಾಣ ಹಾಗೂ ಭಿನ್‌ಮಲ್‌ನಲ್ಲಿನ (೮೫೦-೯೫೦ ಕ್ರಿ.ಶ) ಮೆಟ್ಟಿಲುಗಳನ್ನು ಹೊಂದಿರುವ ಪುಷ್ಕರಿಣಿಗಳ ನಿರ್ಮಾಣಗಳು ಕಾರ್ಯಗತಗೊಂಡವು.[೧೦] ಮೊಹೆಂಜೋ-ದಾರೋ ಮಹಾನಗರವು ಹಲವು ಬಾವಿಗಳನ್ನು ಹೊಂದಿದ್ದು ಅವುಗಳು ಮೆಟ್ಟಿಲುಗಳಿಂದ ಕೂಡಿದ ಬಾವಿಗಳ ಪೂರ್ವವರ್ತಿಗಳಾಗಿದ್ದಿರುವ ಸಾಧ್ಯತೆಯಿದೆ.[೧೧] ೩ನೇ ಸಹಸ್ರಮಾನ ಕ್ರಿ.ಪೂಯ ವೇಳೆಗೆ ನಿರ್ಮಿತವಾಗಿದ್ದ ೭೦೦ರಷ್ಟು ಭಾರೀ ಸಂಖ್ಯೆಯ ಬಾವಿಗಳು ಮಹಾನಗರದ ಕೇವಲ ಒಂದು ಭಾಗದಲ್ಲಿಯೇ ಪತ್ತೆಯಾಗಿದ್ದು , ಇದರಿಂದಾಗಿ 'ಕೋನಾಕೃತಿಯ ಇಟ್ಟಿಗೆ ಪಟ್ಟಿಯುಳ್ಳ ಬಾವಿಗಳನ್ನು' ಸಿಂಧೂ ಕಣಿವೆ ನಾಗರೀಕತೆಯ ಜನರೇ ಕಂಡು ಹಿಡಿದದ್ದು ಎಂದು ವಿದ್ವಾಂಸರು ಭಾವಿಸುವ ಹಾಗೆ ಮಾಡಿದೆ.[೧೧] ಅಜಂತಾ ಹಾಗೂ ಎಲ್ಲೋರಾಗಳಂತಹಾ ಸ್ಥಳಗಳಲ್ಲಿ ಗುಹಾ ದೇವಾಲಯಗಳು ಹಲವು ಅದ್ವಿತೀಯ ಲಕ್ಷಣಗಳನ್ನು ಅಳವಡಿಸಿಕೊಂಡು ಪಶ್ಚಿಮ ಭಾರತದಾದ್ಯಂತ ಗುಹಾದೇವಾಲಯಗಳ ವಾಸ್ತುಶೈಲಿಯು ಉನ್ನತಿಗೇರುವಂತೆ ಪ್ರಖ್ಯಾತವಾಯಿತು.[೬]

ಗೋಡೆಗಳನ್ನು ಹೊಂದಿದ್ದ ಹಾಗೂ ಕಂದಕಗಳಿಂದ ಕೂಡಿದ, ಬೃಹತ್‌ ದ್ವಾರಗಳನ್ನು ಹೊಂದಿರುವ ಹಾಗೂ ಸುಸಂಗತವಾಗಿ ಕಮಾನಾಕೃತಿಯ ಕಿಟಕಿಗಳು ಮತ್ತು ದ್ವಾರಗಳನ್ನು ಹೊಂದಿದ್ದ ಬಹುಮಹಡಿ ಕಟ್ಟಡಗಳು ಈ ಅವಧಿಯ ವಾಸ್ತುಶೈಲಿಯಲ್ಲಿನ ಪ್ರಧಾನವಾದ ಗುಣಲಕ್ಷಣಗಳಾಗಿದ್ದವು.[೬] ಭಾರತದ ಚಕ್ರವರ್ತಿ ಅಶೋಕನು (ಆಳ್ವಿಕೆ: ೨೭೩—೨೩೨ ಕ್ರಿ.ಪೂ) ೨೩೦ ಕ್ರಿ.ಪೂಯ ವೇಳೆಗೆ ಮೌರ್ಯ ಸಾಮ್ರಾಜ್ಯದಾದ್ಯಂತ ಚಿಕಿತ್ಸಾಲಯಗಳ ಸರಣಿಯನ್ನೇ ಸ್ಥಾಪಿಸಿದ್ದನು.[೧೨] ಅಶೋಕನು ಹೊರಡಿಸಿದ್ದ ಶಾಸನಗಳಲ್ಲಿ ಒಂದು (೨೭೨—೨೩೧ ಕ್ರಿ.ಪೂ) ಹೀಗೆ ಹೇಳುತ್ತದೆ: "ಮಹಾರಾಜ ಪಿಯಾದಸಿಯು(ಪ್ರಿಯದರ್ಶಿಯು) (ಅಶೋಕ) ಎಲ್ಲೆಡೆಗಳಲ್ಲಿ ಎರಡು ವಿಧಗಳ ಚಿಕಿತ್ಸಾಲಯಗಳನ್ನು ಸ್ಥಾಪಿಸಿದ್ದನು, ಜನರಿಗಾಗಿರುವ ಚಿಕಿತ್ಸಾಲಯಗಳು ಒಂದಾದರೆ ಪ್ರಾಣಿಗಳಿಗಾಗಿನ ಚಿಕಿತ್ಸಾಲಯವು ಮತ್ತೊಂದಾಗಿತ್ತು. ಜನರಿಗೆ ಹಾಗೂ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಚಿಕಿತ್ಸಕ ಗಿಡಮೂಲಿಕೆಗಳು ಎಲ್ಲೆಲ್ಲಿ ಇಲ್ಲವೋ ಅಲ್ಲೆಲ್ಲಾ ಅವುಗಳನ್ನು ಕೊಂಡು ತಂದಾದರೂ ಬೆಳೆಸಬೇಕು ಎಂದು ರಾಜಾಜ್ಞೆ ಹೊರಡಿಸಿದ್ದನು."[೧೩] ರೋಮನ್‌ ವಾಸ್ತುಶೈಲಿ ಮತ್ತು ಹೆಲ್ಲೆನಿಸ್ಟಿಕ್‌ ವಾಸ್ತುಶೈಲಿಗಳೊಂದಿಗೆ ಬೌದ್ಧ ವಾಸ್ತುಶೈಲಿಯನ್ನು ಮಿಳಿತಗೊಳಿಸಿ ಗ್ರೀಕ್‌-ಬೌದ್ಧ ಪಂಥಗಳಂತಹಾ ಅದ್ವಿತೀಯ ಹದಬೆರಕೆಗಳು ರೂಪುಗೊಳ್ಳುವಿಕೆಗೆ ಇಂಬು ಕೊಟ್ಟಿತ್ತು.[೧೪]

ಆದಿ ಕ್ರಿಸ್ತ ಶಕ—ಉಚ್ಛ್ರಾಯದ ಮಧ್ಯಯುಗದವರೆಗಿನ ಅವಧಿ (೨೦೦ ಕ್ರಿ.ಶ—೧೨೦೦ ಕ್ರಿ.ಶ)[ಬದಲಾಯಿಸಿ]

ಖಜುರಾಹೋದಲ್ಲಿನ ದೇವಾಲಯ ಸಂಕೀರ್ಣ— ಶಿಖಾರ ದೇವಾಲಯ ಶೈಲಿಯ ವಾಸ್ತುಶೈಲಿಯ ಪ್ರಕಾರ ನಿಮಾರ್ಣಗೊಂಡದ್ದು—ಇದೊಂದು UNESCO ವಿಶ್ವ ಪರಂಪರೆ ತಾಣ.

ಸಾವಿರಾರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ನೆಲೆ ನೀಡಿದ್ದ ವಿಶ್ವವಿದ್ಯಾಲಯಗಳು ನಳಂದಾ ಹಾಗೂ ವಲ್ಲಭಿಗಳಲ್ಲಿ ೪ನೆಯ ಶತಮಾನದಿಂದ ೮ನೆಯ ಶತಮಾನದವರೆಗಿನ ಅವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದವು.[೧೫] ೭ನೆಯ ಶತಮಾನ ಕ್ರಿ.ಶಯ ಅವಧಿಯಲ್ಲಿ ಪ್ರತ್ಯೇಕ ಸಂಪ್ರದಾಯವೆಂಬಂತೆ ಎದ್ದುಕಾಣುತ್ತಿದ್ದ ದಕ್ಷಿಣ ಭಾರತದ ದೇವಾಲಯಗಳ ವಾಸ್ತುಶೈಲಿಯನ್ನು ಈ ಕೆಳಕಂಡಂತೆ ವರ್ಣಿಸಲಾಗಿದೆ:[೧೬]

೧೦ನೆಯ ಶತಮಾನದ ವೇಳೆಗೆ ಉತ್ತರ ಭಾರತದ ದೇವಾಲಯಗಳ ಗೋಡೆಗಳ ಔನ್ನತ್ಯದ ಪ್ರಮಾಣವು ಹೆಚ್ಚಳವನ್ನು ಹೊಂದಿತ್ತಲ್ಲದೇ ಅವು ವಿಸ್ತಾರವಾದ ಶಿಖರಗಳನ್ನು ಹೊಂದಿರುತ್ತಿದ್ದವು.[೧೭] ಖಜುರಾಹೋದಲ್ಲಿನ ದೇವಾಲಯ ಸಂಕೀರ್ಣವೂ ಸೇರಿದಂತೆ ಅದ್ಭುತವಾದ ಅಲಂಕರಣಗಳನ್ನು ಹೊಂದಿರುತ್ತಿದ್ದ ದೇವಾಲಯಗಳನ್ನು ಮಧ್ಯ ಭಾರತದಲ್ಲಿ ನಿರ್ಮಿಸಲಾಯಿತು.[೧೭] ಭಾರತೀಯ ವರ್ತಕರು ಹಲವು ವಾಣಿಜ್ಯ ಮಾರ್ಗಗಳ ಮೂಲಕ ಆಗ್ನೇಯ ಏಷ್ಯಾಗೆ ಭಾರತೀಯ ವಾಸ್ತುಶೈಲಿಯನ್ನು ಕರೆತಂದರು.[೧೪]

ಮಧ್ಯಯುಗದ ಅಂತ್ಯದ ಅವಧಿ (೧೧೦೦ ಕ್ರಿ.ಶ—೧೫೨೬ ಕ್ರಿ.ಶ)[ಬದಲಾಯಿಸಿ]

ಈ ಅವಧಿಯ(೧೩೩೬ - ೧೫೬೫ ಕ್ರಿ.ಶ) ವಿಜಯನಗರ ವಾಸ್ತುಶೈಲಿಯು ಪ್ರಸ್ತುತ ದಿನಮಾನದ ಕರ್ನಾಟಕದಲ್ಲಿರುವ ತುಂಗಭದ್ರಾ ನದಿಯ ದಂಡೆಯ ಮೇಲಿದ್ದ ತಮ್ಮ ರಾಜಧಾನಿ ವಿಜಯನಗರದಿಂದ ಹಿಡಿದು ಬಹುತೇಕ ದಕ್ಷಿಣ ಭಾರತವನ್ನು ಆಳುತ್ತಿದ್ದ ವಿಜಯನಗರ ಸಾಮ್ರಾಜ್ಯವು ವಿಕಸಿತಗೊಳಿಸಿದ ಗಮನಾರ್ಹ ಕಟ್ಟಡ ನಿರ್ಮಾಣ ಶೈಲಿಯಾಗಿತ್ತು.[೧೮] ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣಗೊಂಡ ದೇವಾಲಯಗಳ ವಾಸ್ತುಶೈಲಿಯು ರಾಜಕೀಯ ಅಧಿಕಾರಸ್ಥರ ಲಾಂಛನಗಳ ಅಂಶಗಳನ್ನು ಒಳಗೊಂಡಿರುತ್ತಿತ್ತು.[೧೯] ಈ ಪ್ರವೃತ್ತಿಯು ಪ್ರಧಾನವಾಗಿ ದೇವಾಲಯಗಳು ಮಾತ್ರವಲ್ಲದೇ ದಖ್ಖನ್‌ ಪ್ರಸ್ಥಭೂಮಿಯಾದ್ಯಂತದ ಆಡಳಿತಾತ್ಮಕ ಕಟ್ಟಡಗಳಲ್ಲಿ ಕೂಡಾ ಮೂಡಿಬಂದ ವೈಶಿಷ್ಟ್ಯಸೂಚಕವಾದ ಸಾಮ್ರಾಜ್ಯಶಾಹಿಯ ವಾಸ್ತುಶೈಲಿಯು ಸ್ವರೂಪಗೊಳ್ಳಲಿಕ್ಕೆ ಕಾರಣವಾಯಿತು.[೨೦] ವಿಜಯನಗರ ಶೈಲಿಯು ಹಿಂದೆ ಈ ಸಾಮ್ರಾಜ್ಯಗಳು ಆಳ್ವಿಕೆಯಲ್ಲಿದ್ದಾಗ ವಿಕಸನಗೊಂಡ ಚಾಲುಕ್ಯ, ಹೊಯ್ಸಳ , ಪಾಂಡ್ಯ ಮತ್ತು ಚೋಳ ಶೈಲಿಗಳ ಸಂಯೋಜನೆಯಾಗಿದ್ದು ಹಿಂದೆ ಇದ್ದ ಸರಳವಾದ ಹಾಗೂ ಅಸೀಮ ವೈಶಾಲ್ಯತೆಯನ್ನು ಹೊಂದಿದ್ದ ಕಲಾಶೈಲಿಗೆ ಮರಳುವುದನ್ನು ತನ್ನ ಗುಣಲಕ್ಷಣವಾಗಿ ಹೊಂದಿತ್ತು.[೨೧]

೧೧ರಿಂದ ೧೪ನೆಯ ಶತಮಾನಗಳ ನಡುವಿನ ಅವಧಿಯಲ್ಲಿ ಹೊಯ್ಸಳ ಸಾಮ್ರಾಜ್ಯದ ಆಳ್ವಿಕೆಯಲ್ಲಿದ್ದ ಐತಿಹಾಸಿಕವಾಗಿ ಕರ್ನಾಟ ಎಂದು ಕರೆಸಿಕೊಂಡಿದ್ದ, ಇಂದಿನ ಭಾರತಕರ್ನಾಟಕ ರಾಜ್ಯದ ಪ್ರಾಂತ್ಯದಲ್ಲಿ ವಿಕಸನಗೊಂಡ ವೈಶಿಷ್ಟ್ಯಸೂಚಕ ಕಟ್ಟಡನಿರ್ಮಾಣ ಶೈಲಿಯೇ ಹೊಯ್ಸಳ ವಾಸ್ತುಶೈಲಿಯಾಗಿದೆ.[೨೨] ಈ ಕಾಲಾವಧಿಯಲ್ಲಿ ನಿರ್ಮಾಣಗೊಂಡ ಬೃಹತ್ತಾದ ಹಾಗೂ ಸಣ್ಣ ದೇವಾಲಯಗಳು, ಬೇಲೂರಿನ ಚೆನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ, ಸೋಮನಾಥಪುರದ ಕೇಶವ ದೇವಾಲಯಗಳೂ ಸೇರಿದಂತೆ ಹೊಯ್ಸಳ ವಾಸ್ತುಶಿಲ್ಪೀಯ ಶೈಲಿಗೆ ಉದಾಹರಣೆಗಳಾಗಿ ಉಳಿದಿವೆ. ಸೂಕ್ಷ್ಮ ಹೊಯ್ಸಳ ಕರಕುಶಲಗಾರಿಕೆಯ ಇತರ ಉದಾಹರಣೆಗಳೆಂದರೆ ಬೆಳವಾಡಿ, ಅಮೃತಾಪುರ ಮತ್ತು ನುಗ್ಗೇಹಳ್ಳಿಗಳಲ್ಲಿನ ದೇವಾಲಯಗಳು. ಹೊಯ್ಸಳ ವಾಸ್ತುಶಿಲ್ಪೀಯ ಶೈಲಿಯ ಮೇಲೆ ನಡೆದ ಅಧ್ಯಯನಗಳು ಅದರ ಮೇಲೆ ನಿರ್ಲಕ್ಷಿಸಬಹುದಾದಷ್ಟು ಭಾರತೀಯ-ಆರ್ಯನ್ನರ ಪ್ರಭಾವವಿತ್ತೆಂದು ಹೊರಗೆಡಹಿದರೂ ದಕ್ಷಿಣ ಭಾರತೀಯ ಶೈಲಿಯ ಪ್ರಭಾವವು ಹೆಚ್ಚು ಎದ್ದುಕಾಣುವಂತಹದ್ದಾಗಿತ್ತು.[೨೩] ಹೊಯ್ಸಳ ದೇವಾಲಯ ವಾಸ್ತುಶೈಲಿಯ ಒಂದು ಲಕ್ಷಣವೆಂದರೆ ಅದರಲ್ಲಿ ವಿವರಗಳ ಬಗ್ಗೆ ನೀಡಲಾಗುವ ಪ್ರಾಶಸ್ತ್ಯ ಹಾಗೂ ಅವರ ಕರಕುಶಲಗಾರಿಕೆಯ ಕೌಶಲ್ಯ. ಬೇಲೂರು ಹಾಗೂ ಹಳೇಬೀಡುಗಳಲ್ಲಿನ ದೇವಾಲಯಗಳನ್ನು UNESCOನ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಲು ಪ್ರಸ್ತಾಪಿಸಲಾಗಿದೆ.[೨೪] ಸುಮಾರು ೧೦೦ ಹೊಯ್ಸಳ ದೇವಾಲಯಗಳು ಇಂದಿನ ದಿನಮಾನದಲ್ಲಿ ಉಳಿದುಕೊಂಡಿವೆ.[೨೫]

ಮಹಮ್ಮದೀಯರ ಪ್ರಭಾವ ಹಾಗೂ ಮೊಘಲರ ಯುಗ (೧೫೨೬ ಕ್ರಿ.ಶ-೧೮೫೭ ಕ್ರಿ.ಶ)[ಬದಲಾಯಿಸಿ]

1604ರ ಕ್ರಿ.ಶ ಆಗಸ್ಟ್‌ನಲ್ಲಿ —ಸಿಖ್‌ ಧರ್ಮದ ಅತ್ಯಂತ ಪವಿತ್ರತಮ ದೇಗುಲವಾದ ಹರ್ಮಂದಿರ್‌ ಸಾಹಿಬ್‌ನ ನಿರ್ಮಾಣವು ಪೂರ್ಣಗೊಂಡಿತ್ತು.
ಕುತುಬ್‌ ಮಿನಾರ್‌ ಒಂದು ಭಾರತದಲ್ಲಿನ ಪ್ರಧಾನ ಮಹಮ್ಮದೀಯ ವಾಸ್ತುಕೃತಿ.

ಮರಳಶಿಲೆ ಮತ್ತು ಅಮೃತಶಿಲೆಗಳ ಮೊಘಲರ ಸಮಾಧಿಗಳು ಪರ್ಷಿಯನ್‌ ಪ್ರಭಾವವನ್ನು ಎತ್ತಿ ತೋರಿಸುತ್ತವೆ.[೨೬] ಆಗ್ರಾದಲ್ಲಿನ (೧೫೬೫–೭೪) ಕೆಂಪು ಕೋಟೆ ಹಾಗೂ ಗೋಡೆ/ಕೋಟೆಗಳಿಂದ ಕೂಡಿದ ಫತೇಹ್‌ಪುರ್‌ ಸಿಕ್ರಿ ನಗರಗಳು (೧೫೬೯–೭೪) ಈ ಒಂದು ಕಾಲಘಟ್ಟದಲ್ಲಿನ ವಾಸ್ತುಶಿಲ್ಪೀಯ ಸಾಧನೆಗಳಲ್ಲೊಂದಾಗಿವೆ, ಅದೇ ರೀತಿ ಷಾಹ್‌ಜಹಾನ್‌‌ನಿಂದ ರಾಣಿ ಮುಮ್ತಾಜ್‌ ಮಹಲ್‌ಳಿಗಾಗಿ ಅವಳ ಸಮಾಧಿಯಾಗಿ ನಿರ್ಮಾಣಗೊಂಡ ತಾಜ್‌ ಮಹಲ್‌ ಕೂಡಾ ಅಂತಹುದಾಗಿದೆ (೧೬೨೮–೫೮).[೨೬] ದೊಡ್ಡದಾದ ಗುಮ್ಮಟ, ಗೂಡಿನಂತೆ ನಿರ್ಮಿಸಿದ ಕಮಾನು ದ್ವಾರ, ಶ್ವೇತ ಅಮೃತಶಿಲೆ ಹಾಗೂ ಉದ್ಯಾನಗಳಿಂದ ಕೂಡಿದ ಹಾಗೂ ಸಮರೂಪತೆ ಹಾಗೂ ವಿವರಾತ್ಮಕತೆಗೆ ಒತ್ತು ನೀಡುವ ನಿರ್ಮಾಣಗಳು ಷಾಹ್‌ ಜಹಾನನ ಆಡಳಿತದ ಕಾಲದಲ್ಲಿ ಕಂಡುಬಂದವು.[೨೭] ಖು/ಕುರಾನಿನ ಧಾರ್ಮಿಕ ಪಠ್ಯಗಳನ್ನು ಕಟ್ಟಡಗಳ ಭಿತ್ತಿಗಳ ಮೇಲೆ ವಿವರಿಸಿರಲಾಗುತ್ತಿತ್ತು.[೧] ಆದಾಗ್ಯೂ ಮಹಮ್ಮದೀಯ ಆಕ್ರಮಣಗಳಿಗೆ ಮುನ್ನಾ ಭಾರತದ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದ್ದ ಯಾವುದೇ ಜೀವಂತ ವ್ಯಕ್ತಿಯ ಚಿತ್ರಣಗಳು ಇಸ್ಲಾಮಿನ ಬೋಧನೆಗೆ ವಿರುದ್ಧವಾಗಿದ್ದುದಾಗಿತ್ತು.[೧]

ಹಲವು ವಿದ್ವಾಂಸರು ಪೋರ್ಚುಗಲ್‌ನ ಮ್ಯಾನ್ಯುಯೆಲ್‌ Iನ (ಆಳ್ವಿಕೆ: ಅಕ್ಟೋಬರ್‌‌ ೨೫, ೧೪೯೫—ಡಿಸೆಂಬರ್‌‌ ೧೩, ೧೫೨೧) ಆಳ್ವಿಕೆಯಡಿಯಲ್ಲಿ ಯೂರೋಪ್‌ನೊಂದಿಗಿದ್ದ ಸಾಂಸ್ಕೃತಿಕ ಸಂಪರ್ಕವು ವಾಸ್ತುಶಿಲ್ಪೀಯ ಶೈಲಿಗಳ ಪ್ರಭಾವಗಳ ವಿನಿಮಯವಾಗಿಯೂ ಪರಿಣಮಿಸಿತು ಎಂದು ಭಾವಿಸುತ್ತಾರೆ.[೨೮] ಭಾರತೀಯ ಪ್ರಭಾವಗಳ ಬಗೆಗೆ ಖಚಿತಪಡಿಸಲು ತೀರ ಅಲ್ಪ ಪ್ರಮಾಣದ ಲಿಖಿತ ದಾಖಲೆಗಳು ಲಭ್ಯವಿದ್ದರೂ, ಹಲವು ವಿದ್ವಾಂಸರು ವಾಸ್ತುಶಿಲ್ಪೀಯ ಶೈಲಿಗಳ ಸಾಮೀಪ್ಯತೆಯ ಮೇಲೆ ಆಧಾರಿತವಾಗಿ ಅದೇನೆ ಇರಲಿ ಹಾಗೊಂದು ಸಂಬಂಧವಿದ್ದಿರಬಹುದು ಎಂದು ಸೂಚಿಸುತ್ತಾರೆ.[೨೮]

ವಸಾಹತುಶಾಹಿ ಯುಗ (೧೮೫೭ ಕ್ರಿ.ಶ—೧೯೪೭ ಕ್ರಿ.ಶ)[ಬದಲಾಯಿಸಿ]

ಛತ್ರಪತಿ ಶಿವಾಜಿ ಟರ್ಮಿನಸ್‌ (1897ರಲ್ಲಿ ಪೂರ್ಣಗೊಂಡಿದ್ದು), ಹಿಂದೆ ವಿಕ್ಟೋರಿಯಾ ಟರ್ಮಿನಸ್‌ ಎಂದು ಕರೆಯಲಾಗುತ್ತಿತ್ತು.

ಐರೋಪ್ಯ ವಸಾಹತುಶಾಹಿಯು ಭಾರತೀಯ ವಾಸ್ತುಶೈಲಿಯ ರೂಪಿಸುವಿಕೆಗೆ ಮತ್ತಷ್ಟು ವ್ಯಾಪಕವಾದ ಪ್ರಭಾವವಲಯಗಳನ್ನು ತನ್ನೊಂದಿಗೆ ತಂದಿತ್ತು.[೧] ಸಾಮ್ರಾಜ್ಯಶಾಹಿ ಪ್ರಭುತ್ವಗಳು ವೈಭವೋಪೇತವಾದ ಕಟ್ಟಡಗಳನ್ನು ಹೊಂದಬೇಕೆಂಬ ಒತ್ತಡಗಳನ್ನು ಹೊಂದಿರುತ್ತಿದ್ದವು.[೧] ಸ್ಥಳೀಯ ಕುಶಲಕರ್ಮಿಗಳು ನವೀನತಮವಾದ ಕೌಶಲ್ಯಗಳನ್ನು ಒಡಗೂಡಿಸಿಕೊಳ್ಳುತ್ತಿದ್ದರು ಹಾಗೂ ಅವುಗಳನ್ನು ತಮ್ಮ ಉದ್ದಿಮೆಯ ಭಾಗವನ್ನಾಗಿಸಿಕೊಳ್ಳುತ್ತಿದ್ದರು.[೧] ವಸಾಹತುಶಾಹಿ ವಾಸ್ತುಶೈಲಿಯು ಭಾರತದ ವೈವಿಧ್ಯಮಯ ಸಂಪ್ರದಾಯಗಳಲ್ಲಿ ಸಮೀಕರಿಸಿಕೊಂಡಿತು.[೧] ಐರೋಪ್ಯ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಹೊರಬಂದ ಹಲವು ನವನಿರ್ಮಿತಿಗಳು ಬ್ರಿಟಿಷರ ಆಳ್ವಿಕೆಯೊಂದಿಗೆ ಭಾರತಕ್ಕೆ ಕಾಲಿಟ್ಟವು.[೧]

೧೯೨೦ರ ದಶಕದಿಂದ ೧೯೩೦ರ ದಶಕದವರೆಗಿನ ಭಾರತದಲ್ಲಿನ ಐರೋಪ್ಯ ತೊಡಗುವಿಕೆಗಳು ವಾಸ್ತುಶಿಲ್ಪಿ ಲೆ ಕಾರ್ಬಸಿಯರ್‌ನನ್ನು ಹಾಗೂ ಕಲಾತ್ಮಕ ಅಲಂಕರಣಗಳ ಚಳುವಳಿಯನ್ನು ಭಾರತಕ್ಕೆ ಕರೆತಂದವು.[೨೯] ಸಮ್ಮಿಳನತೆಯು ಆಧುನಿಕ ಭಾರತೀಯ ವಾಸ್ತುಶೈಲಿಯ ಸುಸಂಗತ ಗುಣಲಕ್ಷಣಗಳಲ್ಲಿ ಒಂದಾಗಿಯೇ ಮುಂದುವರೆದುಕೊಂಡು ಬಂದಿದೆ—ಉದಾಹರಣೆಗೆ ಚಜ್ಜಾ/ಛಜ್ಜಾ (ಅಗಲವಾದ ಛಾವಣಿಯ ಚಾಚುವಿಕೆಗಳು), ಜಾಲಿ (ವೃತ್ತಾಕಾರದ ಕಲ್ಲಿನ/ಶಿಲಾ ಕಿಂಡಿಗಳು) ಹಾಗೂ ಛತ್ರಿ ಗಳ ಭಾರತೀಯ ಅಂಶಗಳನ್ನು (ಸ್ವತಂತ್ರವಾಗಿ ನಿಲ್ಲಬಲ್ಲ ಹೊರಕುಟೀರಗಳು) ರಾಷ್ಟ್ರಪತಿ ಭವನ ವನ್ನು ನಿರ್ಮಾಣ ಮಾಡುವ ಸಮಯದಲ್ಲಿ ಐರೋಪ್ಯ ವಾಸ್ತುಶೈಲಿಯೊಂದಿಗೆ ಪರಸ್ಪರ ಮಿಶ್ರಿತಗೊಳಿಸಲಾಗಿತ್ತು.[೨೯] ಸ್ತೂಪ ಗಳ ತರಹದ್ದೇ ಆದ ಗುಮ್ಮಟವನ್ನು ಹೊಂದಿದ್ದ ಈ ನವಪುನರುತ್ಥಾನದ ಯೋಜನೆಯ —ಮೇಲ್ವಿಚಾರಣೆಯನ್ನು ಸರ್‌ ಎಡ್ವಿನ್‌ ಲ್ಯಾಂಡ್‌ಸೀರ್‌ ಲುಟ್ಯೆನ್ಸ್‌ ಎಂಬಾತ ಹಾಗೂ ಭಾರತೀಯ ವಾಸ್ತುಶಿಲ್ಪಿಗಳ ಸಂಘ/ಸಂಸ್ಥೆಗಳು (est. ೧೯೧೭) ವಹಿಸಿಕೊಂಡಿದ್ದವು.[೨೯]

ಭಾರತೀಯ ಗಣರಾಜ್ಯ (೧೯೪೭ ಕ್ರಿ.ಶ—ಪ್ರಸ್ತುತ)[ಬದಲಾಯಿಸಿ]

ಇತ್ತೀಚಿನ ದಿನಮಾನಗಳಲ್ಲಿ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಲ್ಲಿರುವ ಕೈಗಾರಿಕಾ ಕೇಂದ್ರಗಳಿಗೆ ಜನರು ಪ್ರವಾಹೋಪಾದಿಯಲ್ಲಿ ಹರಿದುಬರುತ್ತಿದ್ದು ಭಾರತದ ಹಲವು ಮಹಾನಗರಗಳ ಸ್ಥಿರಾಸ್ತಿಗಳ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ.[೩೦] ಭಾರತದಲ್ಲಿನ ನಗರ ಪ್ರದೇಶಗಳಲ್ಲಿನ ಗೃಹನಿರ್ಮಾಣ ವ್ಯವಸ್ಥೆಗಳು ಸ್ಥಳಾವಕಾಶದ ಸಂಕೋಚನವನ್ನು ಸಮತೋಲನದಲ್ಲಿ ನಿರ್ವಹಿಸುತ್ತಿದ್ದು ಉದ್ಯೋಗಿ ವರ್ಗಕ್ಕೆ ತನ್ನ ಸೇವೆಯನ್ನು ನೀಡುವ ಗುರಿಯನ್ನು ಹೊಂದಿದೆ.[೩೧] ಭಾರತೀಯ ಸರ್ಕಾರವು ವಿಶ್ವ ವ್ಯಾಪಾರ ಸಂಸ್ಥೆಯ ಜನರಲ್‌ ಅಗ್ರೀಮೆಂಟ್‌ ಆನ್‌ ಟ್ರೇಡ್‌ ಇನ್‌ ಸರ್ವೀಸಸ್‌/ಸೇವಾಉದ್ಯಮಗಳಿಗೆ ಸಂಬಂಧಪಟ್ಟ ಸಾರ್ವತ್ರಿಕ ಒಪ್ಪಂದಕ್ಕೆ (GATS) ಒಪ್ಪಿಕೊಂಡಿರುವುದರಿಂದ ವಿದೇಶೀ ವಾಸ್ತುಶಿಲ್ಪಿಗಳು ಭಾರತದಲ್ಲಿ ತಮ್ಮ ಸೇವೆಯನ್ನು ನೀಡಲು ಹಾಗೂ ತನ್ಮೂಲಕ ಭಾರತದ ಕಟ್ಟಡನಿರ್ಮಾಣ ಸಂಪ್ರದಾಯಗಳ ಅಧಿಕಸಂಖ್ಯೆಗೆ ಮತ್ತಷ್ಟು ಸೇರಿಕೊಳ್ಳುವಿಕೆಗೆ ಅವಕಾಶ ನೀಡಿದೆ.[೩೦] ಪರಿಸರಶಾಸ್ತ್ರದ ಬಗೆಗೆ ಹೆಚ್ಚುತ್ತಿರುವ ಅರಿವು ಆಧುನಿಕ ದಿನಮಾನದಲ್ಲಿನ ಭಾರತದ ವಾಸ್ತುಶೈಲಿಯ ಮೇಲೆ ಪ್ರಭಾವ ಬೀರುತ್ತಲಿದೆ.[೩೨]

ಭಾರತೀಯ ಕಟ್ಟಡಗಳು ಭಾರತದ ಸಂಸ್ಕೃತಿ ಹಾಗೂ ದಂತಕಥೆಗಳನ್ನು ಪ್ರತಿನಿಧಿಸುತ್ತವೆ.[೩೦] ಚಾರ್ಲ್ಸ್‌ ಕೊರ್ರಿಯಾರ ವಿನ್ಯಾಸಿತ ಜೈಪುರದಲ್ಲಿನ ಜವಾಹರ್‌ ಕಲಾ ಕೇಂದ್ರವು ಉದಾಹರಣೆಗೆ ಮಂಡಲ ದ ಸಂರಚನೆಯನ್ನು ಪ್ರತಿನಿಧಿಸುತ್ತದೆ.[೩೦] ಆಧುನಿಕ ಭಾರತೀಯ ವಾಸ್ತುಶೈಲಿಯಲ್ಲಿ ಸಾಂಪ್ರದಾಯಿಕ ವಾಸ್ತು ಶಾಸ್ತ್ರ ವು ಪಡೆದುಕೊಂಡಿರುವ ಸ್ಥಾನದ ಬಗೆಗೆ ರಾಜ್‌ ಜಾಧವ್‌ (೨೦೦೭) ಹೀಗೆ ಟಿಪ್ಪಣಿಸುತ್ತಾರೆ:[೩೦]

ಸರ್ಕಾರಿ ಕಟ್ಟಡಗಳಲ್ಲಿ ಸುರಕ್ಷತೆಯದೇ ಪ್ರಮುಖ ಹಿತಾಸಕ್ತಿಯ ವಿಷಯವಾಗಿದೆ.[೩೩] ಇಂತಹಾ ಕಟ್ಟಡಗಳ ವಾಸ್ತುಶೈಲಿಯು ಸುರಕ್ಷತಾ ಮುನ್ನೆಚ್ಚರಿಕೆಗಳ ಬಗ್ಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತದೆ.[೩೩] ಅದನ್ನು ಸಾಧಿಸಬಹುದಾದ ಒಂದು ವಿಧಾನವೆಂದರೆ ಪ್ರತ್ಯೇಕ ಬಳಕೆದಾರರ ಸಮೂಹಕ್ಕೆ ಪ್ರತ್ಯೇಕ ಪ್ರವೇಶ ದ್ವಾರಗಳನ್ನು ವಿನ್ಯಾಸಗೊಳಿಸುವುದು.[೩೩] VIP ಪ್ರವೇಶದ್ವಾರಗಳು ಹಾಗೂ ನಿರ್ಗಮನಾ ಮಾರ್ಗಗಳು ಆಗ ಸಂರಕ್ಷಣೆಯನ್ನು ನೀಡಲು ಅಗತ್ಯವಾದ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿರಬಹುದಾಗಿರುತ್ತದೆ.[೩೩]

ಸಮಾನಕೇಂದ್ರತೆಯ ತತ್ವವು ಭಾರತೀಯ ವಾಸ್ತುಶೈಲಿಯಲ್ಲಿ ಸಹಸ್ರಮಾನಗಳಷ್ಟು ಹಿಂದಿನಿಂದಲೇ ಬಳಕೆಯಲ್ಲಿದೆ.[೩೪] ವಿಶ್ವವಿಜ್ಞಾನದ ಕಲ್ಪನೆಗೆ ಸಂಬಂಧಪಟ್ಟ ಆಧ್ಯಾತ್ಮಿಕ ಪ್ರಧಾನ ಆಶಯಗಳಿಗೆ ಪೂರಕವಾಗಿ ಆದಿ ಕಾಲದ ಕಟ್ಟಡಗಳು ಯೋಜನಾನಕ್ಷೆಗಳನ್ನು ಹೊಂದಿಸಿಡಲಾಗುತ್ತಿತ್ತು.[೩೪] ಭಾರತೀಯ ವಾಸ್ತುಶೈಲಿಯ ಏಕಕೇಂದ್ರೀಯತೆಯ ಗುಣಲಕ್ಷಣವು ಭಾರತದೊಳಗಿನ ಹಲವು ಹತ್ತು ಪ್ರಾಂತ್ಯಗಳು ಹಾಗೂ ಸಂಸ್ಕೃತಿಗಳಿಗೆ ಸಂಬಂಧಪಟ್ಟ ಕಟ್ಟಡಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ—ಅವುಗಳಲ್ಲಿ ಗಮನಾರ್ಹ ಉದಾಹರಣೆಗಳಲ್ಲಿ ಹಲವು ಹಿಂದೂ ದೇವಾಲಯಗಳು , ತಾಜ್‌ ಮಹಲ್‌ ಹಾಗೂ ರಾಜಸ್ಥಾನಿ ವಾಸ್ತುಶೈಲಿಯ ಪ್ರಕಾರವಾಗಿ ಕಟ್ಟಿದ ಕಟ್ಟಡಗಳಿರುತ್ತದೆ.[೩೪] ತನ್ನ ನಿರ್ಮಾಣಯೋಜನೆಯಲ್ಲಿ ಏಕಕೇಂದ್ರೀಯವಾಗಿ ಮೂಡಿಸಬೇಕೆಂದಿರುವ ವಿನ್ಯಾಸಕಾರನು ಈ ಯೋಜನಾನಕ್ಷೆಯನ್ನು ಹಲವು ಭಾಗಗಳಾಗಿ ವಿಭಜಿಸಿರುತ್ತಾರೆ.[೩೪] ಆಧುನಿಕ ಭಾರತೀಯ ವಾಸ್ತುಶಿಲ್ಪಿಗಳು ಕಟ್ಟಡಗಳಲ್ಲಿ ಈ ಗುಣಲಕ್ಷಣದ ಬಳಸುವಿಕೆಯನ್ನು ಹಾಗೂ ಒಳಗೊಳಿಸುವಿಕೆಯನ್ನು ಮುಂದುವರೆಸುತ್ತಿದ್ದಾರೆ —ಉದಾಹರಣೆಗೆ ಭಾರತದ ಸಂಸತ್‌ ಭವನದ ಗ್ರಂಥಾಲಯ ಅಥವಾ (ಭೋಪಾಲದ) ವಿಧಾನ ಸಭೆ ಯ ಕಟ್ಟಡಗಳಲ್ಲಿ ಅದನ್ನು ಬಳಸಲಾಗಿದೆ.[೩೪][೩೫]

ಭಾರತದ ವಾಸ್ತುಶೈಲಿಯಲ್ಲಿನ ಒಂದು ಗಮನಾರ್ಹ ಲಕ್ಷಣವೆಂದರೆ ಅಂಗಣದ ನಿರ್ಮಾಣ.[೩೬] ಕ್ಲಾಸ್‌-ಪೀಟರ್‌ ಗ್ಯಾಸ್ಟ್‌ (೨೦೦೭) ಭಾರತದಲ್ಲಿ ಅಂಗಣಗಳ ಮಹತ್ವದ ಬಗೆಗೆ ಹೀಗೆಂದು ವಿಷದವಾಗಿ ವಿವರಿಸುತ್ತಾರೆ:[೩೬]

ಹವಾಮಾನಕ್ಕೆ ಸರಿಯಾಗಿ ಪ್ರತಿಕ್ರಯಿಸುವ/ಅನುಗುಣವಾದ ವಾಸ್ತುಶೈಲಿಯು ದೀರ್ಘಕಾಲದಿಂದಲೂ ಭಾರತದ ವಾಸ್ತುಶೈಲಿಯ ಒಂದು ಲಕ್ಷಣವಾಗಿದ್ದು ಇತ್ತೀಚಿನ ಸಮಯದಲ್ಲಿ ತನ್ನ ಮಹತ್ವವನ್ನು ಅದು ಕಳೆದುಕೊಳ್ಳುತ್ತಲಿದೆ.[೩೭] ಭಾರತೀಯ ವಾಸ್ತುಶೈಲಿಯು ಪ್ರಾಂತ್ಯಗಳಿಂದ ಪ್ರಾಂತ್ಯಗಳಿಗೆ ವ್ಯತ್ಯಾಸಗೊಳ್ಳುವ ತನ್ನ ಹಲವು ಸಾಮಾಜಿಕ-ಸಾಂಸ್ಕೃತಿಕ ಸಂವೇದನೆಗಳನ್ನು ಪ್ರತಿನಿಧಿಸುತ್ತದೆ.[೩೭] ಕೆಲವು ಪ್ರದೇಶಗಳು ಸಾಂಪ್ರದಾಯಿಕವಾಗಿ ಮಹಿಳೆಯರಿಗೆ ಸಂಬಂಧಪಟ್ಟಿದ್ದು ಎಂದು ಭಾವಿಸಲಾಗಿದೆ.[೩೭] ಭಾರತದಲ್ಲಿನ ಹಳ್ಳಿಗಳು ಅಂಗಣಗಳು, ಛಾವಣಿಸಹಿತ ಕಮಾನುದಾರಿಗಳು, ಅಟ್ಟಣಿಗೆಗಳು ಹಾಗೂ ಕೈಸಾಲೆಗಳಂತಹಾ ಗುಣಲಕ್ಷಣಗಳನ್ನು ಹೊಂದಿರುತ್ತವೆ.[೩೧] ಕ್ಯಾಲಿಕೋ ಬಟ್ಟೆಯ/ಹತ್ತಿಯ ಬಟ್ಟೆಯ, ಚೀಟಿನ ಅರಿವೆ ಹಾಗೂ ಪಾಲಂಪೋರ್‌ಗಳು ಭಾರತೀಯ ಮೂಲದ್ದಾಗಿದ್ದು ಜಾಗತಿಕ ಒಳಾಂಗಣ ವಿನ್ಯಾಸಕ್ಕೆ ಸಂಬಂಧಪಟ್ಟ ಹಾಗೆ ಭಾರತೀಯ ವಸ್ತ್ರೋದ್ಯಮದ ಮೈಗೂಡಿಸಿಕೊಳ್ಳುವಿಕೆಯನ್ನು ಎತ್ತಿತೋರಿಸುತ್ತದೆ.[೩೮] ಮಾಳಿಗೆ ಕಿಟಕಿಗಳು ಹಾಗೂ ಕಿಟಕಿ ಗವಾಕ್ಷಿಗಳೆರಡರ ಕಾರ್ಯವನ್ನೂ ನಿರ್ವಹಿಸುವ ರೋಷಂದಾನ್‌ಗಳು ಭಾರತೀಯ ಗೃಹಗಳ ಒಂದು ಸರ್ವೇಸಾಮಾನ್ಯ ಗುಣಲಕ್ಷಣವಾಗಿದೆ, ಅದೂ ವಿಶೇಷವಾಗಿ ಉತ್ತರ ಭಾರತದಲ್ಲಿ ಹೀಗಿದೆ.[೩೯][೪೦]

ಚಿತ್ರಸಂಪುಟ[ಬದಲಾಯಿಸಿ]

ವಿವರಣಾತ್ಮಕವಾಗಿ ಭಾರತದ ವಾಸ್ತುಶೈಲಿ[ಬದಲಾಯಿಸಿ]

 • ಪಾಶ್ಚಿಮಾತ್ಯ ಚಾಲುಕ್ಯ ವಾಸ್ತುಶೈಲಿ
 • ಬದಾಮಿ/ಬಾದಾಮಿ ಚಾಲುಕ್ಯ ವಾಸ್ತುಶೈಲಿ
 • ಹೊಯ್ಸಳ ವಾಸ್ತುಶಿಲ್ಪ
 • ದ್ರಾವಿಡರ ವಾಸ್ತುಶೈಲಿ
 • ಕರ್ನಾಟಕದ ವಾಸ್ತುಶೈಲಿ
 • ಹಿಂದೂ ದೇವಾಲಯಗಳ ವಾಸ್ತುಶೈಲಿ
 • ವಿಜಯನಗರ ವಾಸ್ತುಶೈಲಿ
 • ಬದಾಮಿ/ಬಾದಾಮಿಯ ಗುಹಾ ದೇವಾಲಯಗಳು
 • ಉತ್ತರ ಕರ್ನಾಟಕದ ದೇವಾಲಯಗಳು
 • ಭಾರತದ ದೇಶೀಯ ವಾಸ್ತುಶೈಲಿ
 • ರಾಜಸ್ಥಾನಿ ವಾಸ್ತುಶೈಲಿ
 • ಹೇಮಾಡ್‌ಪಂಥಿ
 • ಉತ್ತರ ಕರ್ನಾಟಕದಲ್ಲಿ ಜೈನಧರ್ಮ
 • ಭಾರತೀಯ ವಾಸ್ತುಶಿಲ್ಪಿಗಳ ಪಟ್ಟಿ

ಟಿಪ್ಪಣಿಗಳು[ಬದಲಾಯಿಸಿ]

 1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ನೋಡಿ ರಾಜ್‌ ಜಾಧವ್‌, pp. ೭-೧೩ನಲ್ಲಿ ಮಾಡರ್ನ್‌ ಟ್ರೆಡಿಷನ್ಸ್‌  : ಕಾಂಟೆಂಪೋರರಿ ಆರ್ಕಿಟೆಕ್ಚರ್‌ ಇನ್‌ ಇಂಡಿಯಾ .
 2. ಪಾಸೆಹ್ಲ್‌ (೧೯೯೬)
 3. ೩.೦ ೩.೧ ರಾಡ್ಡಾ & ಉಬರ್ಟಿನಿ, ೨೭೯
 4. ೪.೦ ೪.೧ ೪.೨ ೪.೩ ೪.೪ ೪.೫ ೪.೬ ೪.೭ ೪.೮ ಟೆರೆಸಿ, ೩೫೧-೩೫೨
 5. ರಾಡ್ಡಾ & ಉಬರ್ಟಿನಿ, ೧೬೧
 6. ೬.೦ ೬.೧ ೬.೨ ೬.೩ ೬.೪ ೬.೫ ೬.೬ ಚಂದ್ರ (೨೦೦೮)
 7. ೭.೦ ೭.೧ ೭.೨ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (೨೦೦೮), ಪಗೋಡಾ .
 8. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (೨೦೦೮), ಅಡ್ಡತೊಲೆಬಾಗಿಲು
 9. ಜಪಾನೀಸ್‌ ಆರ್ಕಿಟೆಕ್ಚರ್‌ ಅಂಡ್‌ ಆರ್ಟ್‌ ನೆಟ್‌ ಯೂಸರ್ಸ್‌ ಸಿಸ್ಟಮ್‌ (2001), ಅಡ್ಡತೊಲೆಬಾಗಿಲು .
 10. ೧೦.೦ ೧೦.೧ ಲಿವಿಂಗ್‌ಸ್ಟನ್‌ & ಬೀಚ್‌, xxiii
 11. ೧೧.೦ ೧೧.೧ ಲಿವಿಂಗ್‌ಸ್ಟೋನ್‌ & ಬೀಚ್, ೧೯
 12. ಪಿಯೆರ್ಸೆ & ಸ್ಕಾರ್‌ಬರೋ (೨೦೦೮)
 13. ನೋಡಿ ಸ್ಟ್ಯಾನ್ಲೆ ಫಿಂಗರ್‌ (೨೦೦೧), ಆರಿಜಿನ್ಸ್‌ ಆಫ್‌ ನ್ಯೂರೋಸೈನ್ಸ್‌ : ಎ ಹಿಸ್ಟರಿ ಆಫ್‌ ಎಕ್ಸ್‌ಪ್ಲೊರೇಷನ್ಸ್‌ ಇನ್‌ಟು ಬ್ರೈನ್‌ ಫಂಕ್ಷನ್‌ , ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಮುದ್ರಣಾಲಯ, p. ೧೨, ISBN ೦೧೯೫೧೪೬೯೪೮.
 14. ೧೪.೦ ೧೪.೧ ಮಾಫೆಟ್‌ etc., ೭೫
 15. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (೨೦೦೮), ಶಿಕ್ಷಣ, ಇಂತಹುದರ ಇತಿಹಾಸ .
 16. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (೨೦೦೮), ದಕ್ಷಿಣ ಭಾರತೀಯ ದೇವಾಲಯ ವಾಸ್ತುಶೈಲಿ .
 17. ೧೭.೦ ೧೭.೧ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (೨೦೦೮), ಉತ್ತರ ಭಾರತೀಯ ದೇವಾಲಯ ವಾಸ್ತುಶೈಲಿ .
 18. ನೋಡಿ ಪರ್ಸಿ ಬ್ರೌನ್‌ ಸೂರ್ಯನಾಥ ಕಾಮತ್‌ರ ಎ ಕನ್ಸೈಸ್‌ ಹಿಸ್ಟರಿ ಆಫ್ ಕರ್ನಾಟಕ : ಫ್ರಮ್‌ ಪ್ರಿ-ಹಿಸ್ಟೋರಿಕ್‌ ಟೈಮ್ಸ್ ಟು ದ ಪ್ರೆಸೆಂಟ್‌ ನಲ್ಲಿ, p. ೧೩೨.
 19. ನೋಡಿ ಕಾರ್ಲಾ ಸಿನೋಪೊಲಿ, ಎಕೋಸ್‌ ಆಫ್‌ ಎಂಪೈರ್‌ : ವಿಜಯನಗರ ಅಂಡ್‌ ಹಿಸ್ಟಾರಿಕಲ್‌ ಮೆಮೊರಿ , ವಿಜಯನಗರ ಆಸ್‌ ಹಿಸ್ಟಾರಿಕಲ್‌ ಮೆಮೊರಿ , p. ೨೬.
 20. ನೋಡಿ ಕಾರ್ಲಾ ಸಿನೋಪೊಲಿ, ದ ಪೊಲಿಟಿಕಲ್‌ ಇಕಾನಮಿ ಆಫ್‌ ಕ್ರಾಫ್ಟ್‌ ಪ್ರೊಡಕ್ಷನ್‌ : ಕ್ರಾಫ್ಟಿಂಗ್‌ ಎಂಪೈರ್‌ ಇನ್‌ ಸೌತ್‌ ಇಂಡಿಯಾ, C. ೧೩೫೦-೧೬೫೦ , p. ೨೦೯.
 21. ನೋಡಿ ಪರ್ಸಿ ಬ್ರೌನ್‌ ಸೂರ್ಯನಾಥ ಕಾಮತ್‌ರ ಎ ಕನ್ಸೈಸ್‌ ಹಿಸ್ಟರಿ ಆಫ್ ಕರ್ನಾಟಕ : ಫ್ರಮ್‌ ಪ್ರಿ-ಹಿಸ್ಟೋರಿಕ್‌ ಟೈಮ್ಸ್ ಟು ದ ಪ್ರೆಸೆಂಟ್‌ ನಲ್ಲಿ, p. ೧೮೨.
 22. MSN ಎನ್‌ಕಾರ್ಟಾ (೨೦೦೮), ಹೊಯ್ಸಳ _ಡೈನಾಸ್ಟಿ Archived 2024-05-24 at Archive.is. ೨೦೦೯-೧೦-೩೧.
 23. ನೋಡಿ ಪರ್ಸಿ ಬ್ರೌನ್‌ ಸೂರ್ಯನಾಥ ಕಾಮತ್‌ರ ಎ ಕನ್ಸೈಸ್‌ ಹಿಸ್ಟರಿ ಆಫ್ ಕರ್ನಾಟಕ : ಫ್ರಮ್‌ ಪ್ರಿ-ಹಿಸ್ಟೋರಿಕ್‌ ಟೈಮ್ಸ್ ಟು ದ ಪ್ರೆಸೆಂಟ್‌ ನಲ್ಲಿ, p. ೧೩೪.
 24. "ದಿ ಹಿಂದೂ (2004), ವಿಶ್ವ ಪರಂಪರೆ ಸ್ಥಾನಕ್ಕೆ ಬೇಲೂರು ". Archived from the original on 2004-10-22. Retrieved 2011-03-31.
 25. ಫೋಕೆಮಾ, ೧೬
 26. ೨೬.೦ ೨೬.೧ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (೨೦೦೮), ಮೊಘಲರ ವಾಸ್ತುಶೈಲಿ .
 27. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (೨೦೦೮), ಷಾಹ್‌ ಜಹಾನ್‌ ಅವಧಿಯ ವಾಸ್ತುಶೈಲಿ .
 28. ೨೮.೦ ೨೮.೧ ಲ್ಯಾಚ್, ೫೭-೬೨
 29. ೨೯.೦ ೨೯.೧ ೨೯.೨ ಗ್ಯಾಸ್ಟ್‌, ೧೯
 30. ೩೦.೦ ೩೦.೧ ೩೦.೨ ೩೦.೩ ೩೦.೪ ನೋಡಿ ರಾಜ್‌ ಜಾಧವ್‌, p. ೧೧ರಲ್ಲಿ ಮಾಡರ್ನ್‌ ಟ್ರೆಡಿಷನ್ಸ್‌  : ಕಾಂಟೆಂಪೋರರಿ ಆರ್ಕಿಟೆಕ್ಚರ್‌ ಇನ್‌ ಇಂಡಿಯಾ .
 31. ೩೧.೦ ೩೧.೧ ಗ್ಯಾಸ್ಟ್‌, ೭೭
 32. ಗ್ಯಾಸ್ಟ್‌, ೧೧೯
 33. ೩೩.೦ ೩೩.೧ ೩೩.೨ ೩೩.೩ ಗ್ಯಾಸ್ಟ್‌, ೨೭-೨೯
 34. ೩೪.೦ ೩೪.೧ ೩೪.೨ ೩೪.೩ ೩೪.೪ ಗ್ಯಾಸ್ಟ್‌, ೪೫
 35. ಗ್ಯಾಸ್ಟ್‌, ೨೭
 36. ೩೬.೦ ೩೬.೧ ಗ್ಯಾಸ್ಟ್‌, ೨೯
 37. ೩೭.೦ ೩೭.೧ ೩೭.೨ ನೋಡಿ ರಾಜ್‌ ಜಾಧವ್‌, ೧೩ರಲ್ಲಿ ಮಾಡರ್ನ್‌ ಟ್ರೆಡಿಷನ್ಸ್‌  : ಕಾಂಟೆಂಪೋರರಿ ಆರ್ಕಿಟೆಕ್ಚರ್‌ ಇನ್‌ ಇಂಡಿಯಾ .
 38. ಸ್ಯಾವೇಜ್‌ ೨೦೦೮
 39. Thomas George Percival Spear, Margaret Spear, India remembered, Orient Longman, 1981, ISBN 9780861312658, ... The bungalow was a typical north Indian one, with a large ಕ್ರಿ.ಶntral room lit only by skylights (roshandans) and a number of others opening out from them ...
 40. Pavan K. Varma, Sondeep Shankar, Mansions at dusk: the havelis of old Delhi, Spantech Publishers, 1992, ISBN 9788185215143, ... Thirdly, while obviating direct sunlight, it had to allow some light and air to enter through overhead roshandans ...

ಉಲ್ಲೇಖಗಳು[ಬದಲಾಯಿಸಿ]

 • ಚಂದ್ರ , ಪ್ರಮೋದ್‌‌ (೨೦೦೮), ಸೌತ್‌ ಏಷ್ಯನ್‌ ಆರ್ಟ್ಸ್‌ , ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ.
 • ಫೋಕೆಮಾ, ಗೆರಾರ್ಡ್‌ (೧೯೯೬), ಎ ಕಂಪ್ಲೀಟ್‌ ಗೈಡ್‌ ಟು ಹೊಯ್ಸಳ ಟೆಂಪಲ್ಸ್‌ , ಅಭಿನವ್‌ ಪಬ್ಲಿಕೇಷನ್ಸ್‌, ISBN ೮೧೭೦೧೭೩೪೫೦.
 • ಗ್ಯಾಸ್ಟ್‌, ಕ್ಲಾಸ್‌-ಪೀಟರ್‌ (೨೦೦೭), ಮಾಡರ್ನ್‌ ಟ್ರೆಡಿಷನ್ಸ್‌  : ಕಾಂಟೆಂಪೋರರಿ ಆರ್ಕಿಟೆಕ್ಚರ್‌ ಇನ್‌ ಇಂಡಿಯಾ , ಬಿರ್‌ಖೌಸರ್‌, ISBN ೯೭೮೩೭೬೪೩೭೭೫೪೦.
 • ಲ್ಯಾಚ್‌, ಡೊನಾಲ್ಡ್‌ F. (೧೯೯೩), ಏಷ್ಯಾ ಇನ್‌ ದ ಮೇಕಿಂಗ್‌ ಆಫ್‌ ಯೂರೋಪ್‌ (vol. ೨) , ಷಿಕಾಗೋ ವಿಶ್ವವಿದ್ಯಾಲಯದ ಮುದ್ರಣಾಲಯ, ISBN ೦೨೨೬೪೬೭೩೦೯.
 • ಲಿವಿಂಗ್‌ಸ್ಟನ್‌, ಮಾರ್ನಾ & ಬೀಚ್‌, ಮಿಲೋ (೨೦೦೨), ಸ್ಟೆಪ್ಸ್‌ ಟು ವಾಟರ್‌: ದ ಏನ್‌ಷಿಯೆಂಟ್‌ ಸ್ಟೆಪ್‌ವೆಲ್ಸ್‌ ಆಫ್‌ ಇಂಡಿಯಾ , ಪ್ರಿನ್ಸ್‌ಟನ್‌ ಆರ್ಕಿಟೆಕ್ಚರಲ್‌ ಪ್ರೆಸ್‌, ISBN ೧೫೬೮೯೮೩೨೪೭.
 • ಮಾಫೆಟ್‌ etc. (೨೦೦೩), ಎ ವರ್ಲ್ಡ್‌ ಹಿಸ್ಟರಿ ಆಫ್‌ ಆರ್ಕಿಟೆಕ್ಚರ್‌ , ಮೆಕ್‌ಗ್ರಾ-ಹಿಲ್‌ ಪ್ರೊಫೆಷನಲ್‌, ISBN ೦೦೭೧೪೧೭೫೧೬.
 • ಪಿಯೆರ್ಸೆ, W. ಡಗ್ಲಾಸ್‌ & ಸ್ಕಾರ್‌ಬರೋ, ಹರಾಲ್ಡ್‌ (೨೦೦೮), ಹಾಸ್ಪಿಟಲ್ , ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ.
 • ಪಾಸೆಹ್ಲ್‌, ಗ್ರೆಗೋರಿ L. (೧೯೯೬), "ಮೆಹ್ರ್‌ಗಢ", ಆಕ್ಸ್‌ಫರ್ಡ್‌ ಕಂಪ್ಯಾನಿಯನ್‌ ಟು ಆರ್ಕಿಯಾಲಜಿ ಬ್ರಿಯಾನ್‌ ಫಾಗನ್‌ರಿಂದ ಸಂಪಾದಿತ, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಮುದ್ರಣಾಲಯ.
 • ರಾಡ್ಡಾ & ಉಬರ್ಟಿನಿ (೨೦೦೪), ದ ಬೇಸಿಸ್‌ ಆಫ್‌ ಸಿವಿಲೈಸೇಷನ್‌ -ವಾಟರ್‌ ಸೈನ್ಸ್? , ಜಲಶಾಸ್ತ್ರೀಯ ವಿಜ್ಞಾನದ ಅಂತರರಾಷ್ಟ್ರೀಯ ಒಕ್ಕೂಟ, ISBN ೧೯೦೧೫೦೨೫೭೦.
 • ಸ್ಯಾವೇಜ್‌, ಜಾರ್ಜ್‌ (೨೦೦೮), ಇಂಟೀರಿಯರ್‌ ಡಿಸೈನ್‌ , ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ.
 • ಸಿನೋಪೊಲಿ, ಕಾರ್ಲಾ M. (೨೦೦೩), ದ ಪೊಲಿಟಿಕಲ್‌ ಇಕಾನಮಿ ಆಫ್‌ ಕ್ರಾಫ್ಟ್‌ ಪ್ರೊಡಕ್ಷನ್‌ : ಕ್ರಾಫ್ಟಿಂಗ್‌ ಎಂಪೈರ್‌ ಇನ್‌ ಸೌತ್‌ ಇಂಡಿಯಾ, C. ೧೩೫೦-೧೬೫೦ , ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಮುದ್ರಣಾಲಯ, ISBN ೦೫೨೧೮೨೬೧೩೬.
 • ಸಿನೋಪೊಲಿ, ಕಾರ್ಲಾ M. (೨೦೦೩), "ಎಕೋಸ್‌ ಆಫ್‌ ಎಂಪೈರ್‌ : ವಿಜಯನಗರ ಅಂಡ್‌ ಹಿಸ್ಟಾರಿಕಲ್‌ ಮೆಮೊರಿ , ವಿಜಯನಗರ ಆಸ್‌ ಹಿಸ್ಟಾರಿಕಲ್‌ ಮೆಮೊರಿ", ಆರ್ಕೆಯಾಲಜೀಸ್‌ ಆಫ್‌ ಮೆಮೊರಿ ರುತ್‌ M. ವಾನ್‌ ಡೈಕ್‌ & ಸೂಸನ್‌ E. ಅಲ್‌ಕಾಕ್‌ರವರುಗಳಿಂದ ಸಂಪಾದಿತ, ಬ್ಲ್ಯಾಕ್‌ವೆಲ್‌ ಪಬ್ಲಿಷಿಂಗ್, ISBN ೦೬೩೧೨೩೫೮೫X.
 • ಸಿಂಗ್‌ , ವಿಜಯ್‌ P. & ಯಾದವ, R. N. (೨೦೦೩), ವಾಟರ್‌ ರಿಸೋರ್ಸಸ್‌ ಸಿಸ್ಟಮ್‌ ಆಪರೇಷನ್‌ : ಪ್ರೊಸೀಡಿಂಗ್ಸ್‌ ಆಫ್‌ ದ ಇಂಟರ್‌ನ್ಯಾಷನಲ್‌ ಕಾನ್‌ಫರೆನ್ಸ್‌ ಆನ್‌ ವಾಟರ್‌ ಅಂಡ್‌ ಎನ್‌ವಿರಾನ್‌ಮೆಂಟ್ , ಅಲ್ಲೈಡ್‌ ಪಬ್ಲಿಷರ್ಸ್, ISBN ೮೧೭೭೬೪೫೪೮X.
 • ಟೆರೆಸಿ, ಡಿಕ್‌ (೨೦೦೨), ಲಾಸ್ಟ್‌ ಡಿಸ್ಕವರೀಸ್‌ : ದ ಆನ್‌ಷಿಯೆಂಟ್‌ ರೂಟ್ಸ್‌ ಆಫ್‌ ಮಾಡರ್ನ್‌ ಸೈನ್ಸ್‌ — ಫ್ರಂ ದ ಬ್ಯಾಬಿಲೋನಿಯನ್ಸ್‌ ಟು ದ ಮಾಯಾ , ಸಿಮೊನ್ & ಷೂಸ್ಟರ್‌, ISBN ೦೬೮೪೮೩೭೧೮೮.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು‌[ಬದಲಾಯಿಸಿ]