ಕೆಂಪು ಕೋಟೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕೆಂಪು ಕೋಟೆ*
UNESCO ವಿಶ್ವ ಪರಂಪರೆಯ ತಾಣ

ದೆಹಲಿಯ ಕೆಂಪು ಕೋಟೆ
ರಾಷ್ಟ್ರ ಭಾರತಭಾರತ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು ii, iii, iv
ಆಕರ 231
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 2007  (31ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ಕೆಂಪು ಕೋಟೆ ದೆಹಲಿಯ ಸಮೀಪ ಆಗ್ರಾ ನಗರದಲ್ಲಿ ಇದೆ. ಪ್ರಸಿದ್ಧ ತಾಜ್ ಮಹಲ್ ಇಂದ ೨.೫ ಕಿಮೀ ದೂರದಲ್ಲಿದೆ. ಕೆಂಪು ಕೋಟೆ ನಿಜವಾಗಿ ಕೋಟೆಯಿಂದ ಸುತ್ತುವರಿದ ಅರಮನೆಗಳ ನಗರ ಎನ್ನಬಹುದು.

ಚರಿತ್ರೆ[ಮೂಲವನ್ನು ಸಂಪಾದಿಸು]

೧೬ ನೆಯ ಶತಮಾನದ ಕೊನೆಯಲ್ಲಿ ಅಕ್ಬರನ ಕಾಲದಲ್ಲಿ ಮೊಘಲರು ಈ ಕೋಟೆಯನ್ನು ಲೋದಿ ವಂಶದಿಂದ ಪಡೆದರು. ಅಕ್ಬರ್ ತನ್ನ ಆಡಳಿತದ ಸಮಯದಲ್ಲಿ ರಾಜಧಾನಿಯನ್ನು ದೆಹಲಿಯಿಂದ ಆಗ್ರಾಕ್ಕೆ ವರ್ಗಾಯಿಸಿದನು. ಇದರಿಂದಾಗಿ ಆಗ್ರಾ ನಗರ ಹೆಚ್ಚು ಸಮೃದ್ಧವಾಯಿತೆನ್ನಬಹುದು. ಅಕ್ಬರ್ ಸಾಮಾನ್ಯವಾಗಿ ಕೋಟೆ-ಕಟ್ಟಡಗಳನ್ನು ಕಟ್ಟಿಸುತ್ತಿದ್ದದ್ದು ಕೆಂಬಣ್ಣದ ಕಲ್ಲಿನಿಂದ, ಮತ್ತು ಕೆಂಪು ಕೋಟೆಯಲ್ಲಿಯೂ ಇದೇ ಪ್ರಭಾವವನ್ನು ಕಾಣಬಹುದು. ಕೆಂಪು ಕೋಟೆ ಕೇವಲ ಕೋಟೆಯಾಗಿ ಉಳಿಯದೆ ರಾಜ-ರಾಣಿಯರ ನಿವಾಸವಾಗಿಯೂ ಉಪಯೋಗಗೊಳ್ಳಲಾರಂಭಿಸಿತು.

ಕೆಂಪು ಕೋಟೆ ತನ್ನ ಇಂದಿನ ರೂಪ ಪಡೆದದ್ದು ಅಕ್ಬರನ ಮೊಮ್ಮಗ ಷಾ ಜಹಾನನ ಕಾಲದಲ್ಲಿ. ಷಾ ಜಹಾನ್ ನ ಕಾಲದ ಶಿಲ್ಪಕಲೆ ಶ್ವೇತ ಅಮೃತಶಿಲೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿತ್ತು (ಉದಾಹರಣೆಗೆ ತಾಜ್ ಮಹಲ್). ಷಾ ಜಹಾನ್ ಇಲ್ಲಿದ್ದ ಕೆಲವು ಕಟ್ಟಡಗಳನ್ನು ಉರುಳಿಸಿ ತನ್ನವೇ ಆದ ಹೊಸ ಕಟ್ಟಡಗಳನ್ನು ನಿರ್ಮಿಸಲು ಆರಂಭಿಸಿದ.

ನಂತರದ ವರ್ಷಗಳಲ್ಲಿ ಷಾ ಜಹಾನ್ ನ ಮಗ ಔರಂಗಜೇಬ್ ಷಾ ಜಹಾನನನ್ನು ಇದೇ ಕೆಂಪು ಕೋಟೆಯಲ್ಲಿ ಬಂಧನದಲ್ಲಿರಿಸಿದ. ನಂಬಿಕೆಯಂತೆ, ಷಾ ಜಹಾನ್ ನಿಧನನಾಗಿದ್ದು ಕೆಂಪು ಕೋಟೆಯ ಮುಸಮ್ಮನ್ ಬುರ್ಜ್ ಎಂಬ ಗೋಪುರದಲ್ಲಿ - ಇದು ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದ್ದು ತಾಜ್ ಮಹಲ್ ನ ಅದ್ಭುತ ದೃಶ್ಯ ಇಲ್ಲಿಗೆ ಕಾಣುತ್ತದೆ.

೧೮೫೭ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಒಂದು ಯುದ್ಧ ಇದೇ ಸ್ಥಳದಲ್ಲಿ ಜರುಗಿತು.

ವಿನ್ಯಾಸ[ಮೂಲವನ್ನು ಸಂಪಾದಿಸು]

ಇಡೀ ಕೋಟೆ ಅರ್ಧಚಂದ್ರಾಕಾರವಾಗಿದ್ದು, ಕೋಟೆ ಗೋಡೆಗಳು ೨೧ ಮೀ ಎತ್ತರ ಇವೆ. ಕೋಟೆಯ ಸುತ್ತಲೂ ಒಂದು ಕಾಲುವೆ ಹರಿಯುತ್ತದೆ. ಮುಖ್ಯ ದ್ವಾರ (ದೆಹಲಿ ದ್ವಾರ) ಯಮುನಾ ನದಿಯ ಕಡೆಗಿದೆ. ಕೋಟೆಯ ಸುತ್ತಳತೆ ೨.೪ ಕಿಮೀ.

ಕೋಟೆಯಲ್ಲಿ ಎರಡು ದ್ವಾರಗಳಿವೆ - ದೆಹಲಿ ದ್ವಾರ ಮತ್ತು ಲಾಹೋರ್ ದ್ವಾರ (ಅಥವಾ ಅಮರ್ ಸಿಂಗ್ ದ್ವಾರ). ದೆಹಲಿ ದ್ವಾರ ಹೆಚ್ಚು ವೈಭವದಿಂದ ಕೂಡಿದೆ. ಇಂದಿಗೂ ಭಾರತೀಯ ಭೂಸೈನ್ಯ (ಮುಖ್ಯವಾಗಿ ರಜಪುಟಾಣಾ ರೈಫಲ್ಸ್ ತುಕಡಿ) ಕೋಟೆಯ ಈ ಭಾಗವನ್ನು ಉಪಯೋಗಿಸುವುದರಿಂದ ಈ ದ್ವಾರ ಸಾರ್ವಜನಿಕರಿಗೆ ತೆರೆದಿರುವುದಿಲ್ಲ. ಪ್ರವಾಸಿಗಳು ಸಾಮಾನ್ಯವಾಗಿ ಉಪಯೋಗಿಸುವುದು ಲಾಹೋರ್ ದ್ವಾರವನ್ನು (ಲಾಹೋರ್ ನ ಕಡೆ ಮುಖ ಮಾಡಿರುವುದರಿಂದ ಈ ಹೆಸರು).

ಶಿಲ್ಪಕಲೆ[ಮೂಲವನ್ನು ಸಂಪಾದಿಸು]

ಶಿಲ್ಪಕಲೆಯ ದೃಷ್ಟಿಯಿಂದ ಈ ಕೋಟೆಯಲ್ಲಿ ಹಿಂದೂ ಮತ್ತು ಮುಸ್ಲಿಮ್ ಶೈಲಿಗಳ ಸಮಾಗಮವನ್ನು ಕಾಣಬಹುದು. ಒಟ್ಟಾರೆ ಶಿಲ್ಪಕಲೆ ಮುಸ್ಲಿಮ್ ಶೈಲಿಗಳಿಂದ ಸ್ಫೂರ್ತಿ ಪಡೆದಿದ್ದರೂ, ಕೆಲವು ಅಲಂಕಾರಗಳಲ್ಲಿ ಹಿಂದೂ ಶಿಲ್ಪಕಲೆಯ ಪ್ರಭಾವವನ್ನು ಕಾಣಬಹುದು.

ಮುಖ್ಯ ಭಾಗಗಳು[ಮೂಲವನ್ನು ಸಂಪಾದಿಸು]

 • ಅಂಗೂರಿ ಬಾಗ್: ಸುಂದರ ವಿನ್ಯಾಸವುಳ್ಳ ಉದ್ಯಾನಗಳು
 • ದಿವಾನ್-ಎ-ಆಮ್: ಸಾರ್ವಜನಿಕರ ಸಭೆ ಸೇರುತ್ತಿದ್ದ ಸ್ಥಳ; ಪ್ರಸಿದ್ಧ ನವಿಲು ಸಿಂಹಾಸನ ಇದ್ದದ್ದು ಈ ಸಭಾಮಂಟಪದಲ್ಲಿ
 • ದಿವಾನ್-ಎ-ಖಾಸ್: ಮುಖ್ಯ ಜನರನ್ನು ರಾಜ ಬರಮಾಡಿಕೊಳ್ಳುತ್ತಿದ್ದ ಸ್ಥಳ - ಜಹಾಂಗೀರನ ಕಪ್ಪು ಸಿಂಹಾಸನ ಇಲ್ಲಿದೆ
 • ಚಿನ್ನದ ಪಡಸಾಲೆಗಳು: ಬೆಂಗಾಲಿ ಗುಡಿಸಲುಗಳ ಮಾದರಿಯ ಛಾವಣಿಗಳಿರುವ ಹೊಂಬಣ್ಣದ ಪಡಸಾಲೆಗಳು
 • ಜಹಾಂಗೀರಿ ಮಹಲ್: ಅಕ್ಬರ್ ತನ್ನ ಮಗ ಜಹಾಂಗೀರನಿಗೆ ಕಟ್ಟಿಸಿಕೊಟ್ಟ ಅರಮನೆ
 • ಖಾಸ್ ಮಹಲ್: ಅಮೃತಶಿಲೆಯ ಅರಮನೆ, ಅಮೃತಶಿಲೆಯ ಮೇಲಿನ ಚಿತ್ರಕಲೆಯ ಅತ್ಯುತ್ತಮ ನಿದರ್ಶನ
 • ಮಚ್ಛಿ ಭವನ್: ಒಂದು ಕಾಲದಲ್ಲಿ ಕೊಳ ಮತ್ತು ಕಾರಂಜಿಗಳನ್ನು ಹೊಂದಿದ್ದು ಉತ್ಸ್ವಗಳಿಗೆ ಉಪಯೋಗವಾಗುತ್ತಿತ್ತು
 • ಮೀನಾ ಮಸೀದಿ: ಸಣ್ಣ ಮಸೀದಿ, ಸಾರ್ವಜನಿಕರಿಗೆ ಪ್ರವೇಶವಿಲ್ಲ
 • ಮೋತಿ ಮಸೀದಿ: ಷಾ ಜಹಾನನ ವೈಯಕ್ತಿಕ ಉಪಯೋಗಕ್ಕಾಗಿ ಮಸೀದಿ
 • ಮುಸಮ್ಮನ್ ಬುರ್ಜ್: ಅಷ್ಟ ಮುಖವಾದ ಮಂಟಪ - ತಾಜ್ ಮಹಲ್ ಇಲ್ಲಿಂದ ಕಾಣುತ್ತದೆ
 • ನಗೀನಾ ಮಸೀದಿ: ಆಸ್ಥಾನದ ಮಹಿಳೆಯರಿಗಾಗಿ ಮಸೀದಿ
 • ಜನಾನಾ ಮೀನಾ ಬಜಾರ್: ಮಹಿಳಾ ವರ್ತಕರು ಮಾತ್ರ ಅಂಗಡಿಗಳನ್ನು ತೆರೆದಿದ್ದ ಮಾರುಕಟ್ಟೆ
 • ನೌಬತ್ ಖಾನಾ: ರಾಜನಿಗಾಗಿ ಸಂಗೀತ ಕಛೇರಿಗಳು ನಡೆಯುತ್ತಿದ್ದ ಸ್ಥಳ
 • ರಂಗ್ ಮಹಲ್: ರಾಣಿಯರು ವಾಸಿಸುತ್ತಿದ್ದ ಅರಮನೆ
 • ಶಾಹಿ ಬುರ್ಜ್: ಷಾ ಜಹಾನನ ಕಛೇರಿ
 • ಶೀಶ್ ಮಹಲ್: ಗೋಡೆಗಳ ಪೂರ ಸಣ್ಣ ಕನ್ನಡಿಗಳಿರುವ ಕೋಣೆ

ಇತರ ಮಾಹಿತಿ[ಮೂಲವನ್ನು ಸಂಪಾದಿಸು]

ಆಗಸ್ಟ್ ೧೫ ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನ ಮಂತ್ರಿಗಳ ಭಾಷಣ ನಡೆಯುವುದು ಕೆಂಪು ಕೋಟೆಯಲ್ಲಿಯೇ. ಇದೇ ದಿನ ಭಾರತೀಯ ಸೈನ್ಯದ ಅನೇಕ ತುಕಡಿಗಳು ಇಲ್ಲಿ ಪ್ರಭಾತಭೇರಿ (ಪೆರೇಡ್) ನಡೆಸುತ್ತವೆ. ಹಾಗೆಯೇ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬರುವ ಸಾಂಸ್ಕೃತಿಕ ಪ್ರದರ್ಶನಗಳ ಮೆರವಣಿಗೆ ನಡೆಯುತ್ತದೆ. ಇದೇ ಸಂದರ್ಭದಲ್ಲಿಯೇ ಭಾರತದ ರಕ್ಷಣೆಗೆ ಅತ್ಯುನ್ನತ ಸೇವೆ ನೀಡಿದ ಸೈನಿಕರಿಗೆ ಪರಮ್ ವೀರ್ ಚಕ್ರ ಪ್ರಶಸ್ತಿಯ ಪ್ರದಾನ ಮಾಡಲಾಗುತ್ತದೆ.

೧೯೮೩ ರಲ್ಲಿ ಯುನೆಸ್ಕೋ ಈ ಕೋಟೆಯನ್ನು ಪ್ರಪಂಚ ಸಂಸ್ಕೃತಿ ಕ್ಷೇತ್ರ ಎಂದು ಘೋಷಿಸಿತು.

ಬಾಹ್ಯ ಸಂಪರ್ಕಗಳು[ಮೂಲವನ್ನು ಸಂಪಾದಿಸು]

ಆಕರಗಳು[ಮೂಲವನ್ನು ಸಂಪಾದಿಸು]

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ