ಮಾನಸ್ ವನ್ಯಜೀವಿ ಧಾಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಾನಸ್ ವನ್ಯಜೀವಿ ಧಾಮ*
UNESCO ವಿಶ್ವ ಪರಂಪರೆಯ ತಾಣ
ರಾಷ್ಟ್ರ ಭಾರತಭಾರತ
ತಾಣದ ವರ್ಗ ಪ್ರಾಕೃತಿಕ
ಆಯ್ಕೆಯ ಮಾನದಂಡಗಳು vii, ix, x
ಆಕರ 338
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1985  (9ನೆಯ ಅಧಿವೇಶನ)
ಅವನತಿಯತ್ತ 1992
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ಮಾನಸ್ ವನ್ಯಜೀವಿಧಾಮ[ಬದಲಾಯಿಸಿ]

ಮಾನಸ್ ವನ್ಯಜೀವಿ ಧಾಮವು ಭಾರತಅಸ್ಸಾಂ ರಾಜ್ಯದಲ್ಲಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಘೋಷಿಸಿದೆ. ಅಲ್ಲದೆ 'ಮಾನಸ್ ವನ್ಯಜೀವಿ ಧಾಮವು ಪ್ರಾಜೆಕ್ಟ್ ಟೈಗರ್ ಮೀಸಲು, ಆನೆ ಮೀಸಲು ಮತ್ತು ಜೀವಗೋಲ ಮೀಸಲು ವಲಯವೆಂದು ಸಹ ಘೋಷಿಸಲ್ಪಟ್ಟಿದೆ. ಹಿಮಾಲಯದ ಪಾದದಲ್ಲಿರುವ ಮಾನಸ್ ವನ್ಯಜೀವಿ ಧಾಮವು ಭೂತಾನ್ ರಾಷ್ಟ್ರದಲ್ಲಿ ಸಹ ಕೊಂಚ ಭಾಗ ವ್ಯಾಪಿಸಿದೆ. ಮಾನಸ್ ವನ್ಯಜೀವಿ ಧಾಮವು ಅಸ್ಸಾಂನ ಸೂರುಳ್ಳ ಆಮೆ, ಹಿಸ್ಪಿಡ್ ಮೊಲ, ಚಿನ್ನದ ಬಣ್ಣದ ಲಂಗೂರ್ ಮತ್ತು ಪಿಗ್ಮಿ ಕಾಡುಹಂದಿ ಗಳಂತಹ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ಈ ನಾಲ್ಕು ಬಗೆಯ ಪ್ರಾಣಿಗಳು ವಿಶ್ವದ ಬೇರೆ ಯಾವುದೇ ಭಾಗದಲ್ಲಿ ಕಾಣಬರುವುದಿಲ್ಲ. ಈ ಧಾಮದ ಹೆಸರು ಇಲ್ಲಿ ಹರಿಯುವ ಮಾನಸ್ ನದಿಯಿಂದ ಬಂದಿರುತ್ತದೆ. ಈ ನದಿಯು ಬ್ರಹ್ಮಪುತ್ರ ಮಹಾನದಿಯ ಒಂದು ಪ್ರಮುಖ ಉಪನದಿಯಾಗಿದೆ. ಸುಮಾರು ೩೯೧ ಚದರ ಕಿ.ಮೀ. ಗಳಷ್ಟು ವಿಸ್ತಾರವಾಗಿರುವ ಮಾನಸ್ ವನ್ಯಜೀವಿ ಧಾಮವು ಸರಾಸರಿ ಸಮುದ್ರ ಮಟ್ಟದಿಂದ ೬೧ ರಿಂದ ೧೧೦ ಮೀಟರ್‌ಗಳಷ್ಟು ಎತ್ತರದಲ್ಲಿದೆ. ಮಾನಸ್ ವನ್ಯಜೀವಿ ಧಾಮದ ಪ್ರದೇಶದಲ್ಲಿ ೩೭೪ ತಳಿಗಳ ಗಿಡಮರಗಳು, ೫೫ ತಳಿಯ ಸಸ್ತನಿಗಳು, ೩೮೦ ಪ್ರಕಾರದ ಪಕ್ಷಿಗಳು, ೫೦ ತಳಿಗಳ ಉರಗಗಳು ಮತ್ತು ೩ ಪ್ರಬೇಧದ ದ್ವಿಚರಿಗಳನ್ನು ಗುರುತಿಸಲಾಗಿದೆ. ಇಲ್ಲಿನ ಪ್ರಾಣಿ ಸಂಕುಲದಲ್ಲಿ ೩೧ ತಳಿಗಳು ಅಳಿವಿನಂಚಿನಲ್ಲಿರುವುದಾಗಿ ಘೋಷಿಸಲ್ಪಟ್ಟಿವೆ. ಮೇಲೆ ತಿಳಿಸಿದ ಪ್ರಾಣಿಗಳ ಹೊರತಾಗಿ ಮಾನಸ್ ವನ್ಯಜೀವಿ ಧಾಮವು ಏಷ್ಯನ್ ಆನೆ, ಭಾರತದ ಘೇಂಡಾಮೃಗ, ಕಾಡೆಮ್ಮೆ, ನೀರೆಮ್ಮೆ, ಬಾರಾಸಿಂಘಾ, ಹುಲಿ, ಚಿರತೆ, ಕರಡಿ ಮತ್ತು ಹಲವು ಪ್ರಕಾರದ ಕೋತಿ ಮತ್ತು ಜಿಂಕೆಗಳಿಗೆ ವಾಸಸ್ಥಾನವಾಗಿದೆ.

ಇವನ್ನೂ ನೋಡಿ[ಬದಲಾಯಿಸಿ]

ಅಸ್ಸಾಂ

ವಿಶ್ವ ಪರಂಪರೆಯ ತಾಣ

ಬಾಹ್ಯ ಸಂಪರ್ಕಕೊಂಡಿಗಳು[ಬದಲಾಯಿಸಿ]

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ