ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
IUCN category II (national park)
Bengal-Tiger Corbett Uttarakhand Dec-2013.jpg
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ
Map showing the location of ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
Map showing the location of ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
ನೆಲೆನೈನಿತಾಲ್, ಪೌರಿ ಗರ್ವ್ಹಾಲ್ ಜಿಲ್ಲೆ ಉತ್ತರಾಖಂಡ, ಭಾರತ
ಅತಿ ಹತ್ತಿರದ ನಗರರಾಮನಗರ, ನೈನಿತಾಲ್ ಜಿಲ್ಲೆ
ಸ್ಥಾಪಿತ1936
Visitors500,000[೧] (in 1999)
ಆಡಳಿತ ಮಂಡಳಿಹುಲಿ ಯೋಜನೆ, ಉತ್ತರಾಖಂಡ್ ರಾಜ್ಯ, ವನ್ಯಜೀವಿ ವಾರ್ಡನ್, ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
http://corbettonline.uk.gov.in/
ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಜೇನು ಹಿಡುಕಗಳು
ಜೆಮ್ ಕಾರ್ಬೆಟ್ ಉದ್ಯಾನದಲ್ಲಿ ಆನೆಗಳ ಗುಂಪು


ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು ಭಾರತದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನವಾಗಿದೆ [೨]. ಇದು ಅಳಿವಿನಂಚಿನಲ್ಲಿರುವ ಬಂಗಾಳ ಹುಲಿಯನ್ನು ರಕ್ಷಿಸಲು 1936 ರಲ್ಲಿ ಹೇಲಿ ರಾಷ್ಟ್ರೀಯ ಉದ್ಯಾನವನವಾಗಿ ಸ್ಥಾಪಿಸಲಾಯಿತು. ಇದು ಉತ್ತರಾಖಂಡ ರಾಜ್ಯದ ನೈನಿತಾಲ್ ಜಿಲ್ಲೆ ಮತ್ತು ಪೌರಿ ಗರ್ವಾಲ್ ಜಿಲ್ಲೆಯಲ್ಲಿದೆ. ಬೇಟೆಗಾರ ಮತ್ತು ನಿಸರ್ಗವಾದಿ ಜಿಮ್ ಕಾರ್ಬೆಟ್ ಅವರ ಹೆಸರನ್ನು ಈ ರಾಷ್ಟ್ರೀಯ ಉದ್ಯಾನಕ್ಕೆ ಇಡಲಾಗಿದೆ. ಹುಲಿ ಯೋಜನೆ ಉಪಕ್ರಮದಲ್ಲಿ ಈ ಉದ್ಯಾನವನವು ಮೊದಲು ಬಂದಿತು[೩].

ಕಾರ್ಬೆಟ್ ರಾಷ್ಟ್ರೀಯ ಉದ್ಯಾನವು 520.8 ಕಿಮಿ 2 ಬೆಟ್ಟಗಳು, ನದಿ ಪಾತ್ರ, ಜವುಗು ಪ್ರದೇಶ, ಹುಲ್ಲುಗಾವಲುಗಳು ಮತ್ತು ಒಂದು ದೊಡ್ಡ ಸರೋವರವನ್ನು ಒಳಗೊಂಡಿದೆ. ಎತ್ತರವು 400 ರಿಂದ 1,220 ಮೀ (1,300 ರಿಂದ 4,000 ಅಡಿ) ವರೆಗೆ ಇರುತ್ತದೆ. ಚಳಿಗಾಲದ ರಾತ್ರಿಗಳು ತಂಪಾಗಿರುತ್ತವೆ ಆದರೆ ಹಗಲುಗಳು ಪ್ರಕಾಶಮಾನವಾಗಿ ಮತ್ತು ಬಿಸಿಲಿನಿಂದ ಕೂಡಿರುತ್ತವೆ. ಜುಲೈನಿಂದ ಸೆಪ್ಟೆಂಬರ್ ವರೆಗೆ ಮಳೆಯಾಗುತ್ತದೆ. ಉದ್ಯಾನವು ಹಿಮಾಲಯದ ತಪ್ಪಲಿನ ಭೌಗೋಳಿಕ ಮತ್ತು ಪಾರಿಸಾರಿಕ ಗುಣಲಕ್ಷಣಗಳನ್ನು ಹೊಂದಿದೆ[೪]. ದಟ್ಟವಾದ ಹಸಿ ಎಲೆ ಉದುರುವ ಕಾಡು ಮುಖ್ಯವಾಗಿ ಶಾಲ ಮರ, ಅರಿಸಿನ ತೇಗ, ಅಶ್ವತ್ಥಮರ ಮತ್ತು ಮಾವಿನ ಮರಗಳನ್ನು ಒಳಗೊಂಡಿದೆ. ಅರಣ್ಯವು ಉದ್ಯಾನವನದ ಸುಮಾರು 73% ನಷ್ಟು ಪ್ರದೇಶವನ್ನು ಒಳಗೊಂಡಿದೆ, 10% ಪ್ರದೇಶವು ಹುಲ್ಲುಗಾವಲು ಪ್ರದೇಶಗಳನ್ನು ಒಳಗೊಂಡಿದೆ. ಇದು ಸುಮಾರು 110 ಮರ ಪ್ರಭೇದಗಳು, 50 ಪ್ರಭೇದದ ಸಸ್ತನಿಗಳು, 580 ಪಕ್ಷಿ ಪ್ರಭೇದಗಳು ಮತ್ತು 25 ಸರೀಸೃಪ ಪ್ರಭೇದಗಳನ್ನು ಹೊಂದಿದೆ. ಪ್ರವಾಸಿ ಚಟುವಟಿಕೆಗಳ ಹೆಚ್ಚಳ, ಇತರ ಸಮಸ್ಯೆಗಳ ಜೊತೆಗೆ, ಉದ್ಯಾನದ ಪರಿಸರ ಸಮತೋಲನಕ್ಕೆ ಗಂಭೀರ ಸವಾಲನ್ನು ಪ್ರಸ್ತುತಪಡಿಸುತ್ತಿದೆ [೫].

ಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Sinha, B. C., Thapliyal, M. and K. Moghe. "An Assessment of Tourism in Corbett National Park". Wildlife Institute of India. Archived from the original on 5 November 2007. Retrieved 2007-10-12.{{cite web}}: CS1 maint: uses authors parameter (link)
  2. "Corbett National Park". ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ. ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ. Retrieved 10 June 2021.
  3. ರೈಲಿ, ಲಾರಾ; ರೈಲಿ, ವಿಲಿಯಂ (2005). Nature's Strongholds: The World's Great Wildlife Reserves. ಪ್ರಿನ್ಸ್ಟನ್ ಯೂನಿವರ್ಸಿಟಿ ಪ್ರೆಸ್. ISBN 0-691-12219-9.
  4. ತಿವಾರಿ, ಪಿ. ಸಿ.; ಜೋಷಿ, ಭಗವತಿ (1997). Wildlife in the Himalayan Foothills: Conservation and Management. ನವ ದೆಹಲಿ: ಇಂಡಸ್ ಪಬ್ಲಿಷಿಂಗ್ ಕಂಪನಿ. ISBN 8173870667.
  5. ತಿವಾರಿ, ಪಿ. ಸಿ.; ಜೋಷಿ, ಭಗವತಿ (1997). Wildlife in the Himalayan Foothills: Conservation and Management. ನವ ದೆಹಲಿ: ಇಂಡಸ್ ಪಬ್ಲಿಷಿಂಗ್ ಕಂಪನಿ. ISBN 8173870667.