ಸಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Shorea robusta
Conservation status
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಮಾಲ್ವೇಲೀಸ್
ಕುಟುಂಬ: ಡಿಪ್ಟೆರೊಕಾರ್ಪೇಸೀ
ಕುಲ: ಶೋರಿಯಾ
ಪ್ರಜಾತಿ:
S. robusta
Binomial name
Shorea robusta
Synonyms

Vatica robusta

ಸಾಲ್ (ಶಾಲ ಮರ) ಡಿಪ್ಟಿರೊಕಾರ್ಪೇಸೀ ಕುಟುಂಬಕ್ಕೆ ಸೇರಿದ ಶೊರಿಯ ರೊಬುಸ್ಟ ಎಂಬ ಪ್ರಭೇದದ ಸಸ್ಯ. ದೊಡ್ಡ ಪ್ರಮಾಣದ, ಹೊಳಪುಳ್ಳ ದೊಡ್ಡ ತೊಗಲೆಲೆಗಳ ದುಂಡು ಹರವಿನ ನೇರ ಕಾಂಡದ ಸಾಮೂಹಿಕವಾಗಿ ಬೆಳೆಯುವ ಈ ಮರ ಗಂಗಾನದಿಯ ಬಯಲು ಪ್ರದೇಶಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಪಂಜಾಬ್, ಉತ್ತರಪ್ರದೇಶ, ಬಿಹಾರ, ಒರಿಸ್ಸ, ಮಧ್ಯ ಪ್ರದೇಶದ ಕೆಲವು ಭಾಗಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ.[೨]

ಉಪಯೋಗಗಳು[ಬದಲಾಯಿಸಿ]

ಚೌಬೀನೆಯ ಉಪಯೋಗಗಳಿಗೆ, ದಕ್ಷಿಣದಲ್ಲಿ ಸಾಗುವಾನಿ (ತೇಗ) ಯಾವ ಸ್ಥಾನವನ್ನು ಪಡೆದಿದೆಯೋ ಆ ಸ್ಥಾನವನ್ನು ಪಡೆದಿದೆ. ಅಡ್ಡನಾರಿನ, ಕೆಂಪುಮಿಶ್ರ ಕಂದುಬಣ್ಣದ ಗಡುಸಾದ, ಹೆಚ್ಚು ಬಾಳಿಕೆಯುತ ಈ ಮರದ ಚೌಬೀನೆ ಮನೆಕಟ್ಟಡಕ್ಕೂ ರೈಲ್ವೆ ಕೋಚು ತಯಾರಿಕೆ, ಸೇತುವೆ ನಿರ್ಮಾಣ, ಆಯುಧಗಳ ಹಿಡಿಗಳ ತಯಾರಿಕೆಗೂ ಉಪಯುಕ್ತವಾಗಿದೆ.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Ashton, P. (1998). "Shorea robusta". IUCN Red List of Threatened Species. 1998: e.T32097A9675160. doi:10.2305/IUCN.UK.1998.RLTS.T32097A9675160.en. Retrieved 19 November 2021.
  2. "Shorea robusta C.F.Gaertn. | Plants of the World Online | Kew Science". Plants of the World Online (in ಇಂಗ್ಲಿಷ್). Retrieved 2022-08-16.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಸಾಲ್&oldid=1169738" ಇಂದ ಪಡೆಯಲ್ಪಟ್ಟಿದೆ