ಅರಿಸಿನ ತೇಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರಿಸಿನ ತೇಗ, ಹೆತ್ತೇಗ (ಅಣವು)
Haldina cordifolia Bra33.png
Haldina cordifolia
Egg fossil classification
Kingdom:
Division:
Class:
Eudicots
(unranked):
Order:
Family:
Genus:
ಹಲ್ಡಿನ(Haldina)

Ridsdale
Species:
H. cordifolia
Binomial nomenclature
ಹಲ್ದಿನ (ಅಡಿನ) ಕಾರ್ಡಿಫೊಲಿಯ en:Haldina cordifolia
(Roxb.) Ridsdale

ಅರಿಸಿನ ತೇಗ : ರೂಬಿಯೇಸೀ ಕುಟುಂಬಕ್ಕೆ ಸೇರಿದ ಅರಣ್ಯವೃಕ್ಷ. ಹೆತ್ತೇಗ, ಹೆದ್ದಿ ಎಂಬ ಹೆಸರುಗಳನ್ನೂ ಉಳ್ಳ ಈ ಮರದ ವೈಜ್ಞಾನಿಕ ಹೆಸರು ಅಡಿನ ಕಾರ್ಡಿಫೋಲಿಯ. ಒಂದು ದೊಡ್ಡ ಪ್ರಮಾಣದ ಪರ್ಣಪಾತಿ ಮರ ಎಂದೂ ಹೇಳಬಹುದು. ಮಧ್ಯಮ ಗಾತ್ರದಿಂದ ಹಿಡಿದು ಅತಿ ದೊಡ್ಡ ಗಾತ್ರದ ಮರವಾಗಿ ಬೆಳೆಯುತ್ತದೆ. ಫಲವತ್ತಾದ ಪ್ರದೇಶದಲ್ಲಿ ಸುಮಾರು 5 ಮೀ ಸುತ್ತಳತೆಯವರೆಗೂ ಬೆಳೆದ ನಿದರ್ಶನಗಳಿವೆ. ವರ್ಷಂಪ್ರತಿ ಎಲೆ ಉದುರುವ ಅರಣ್ಯಗಳಲ್ಲಿ (ಡೆಸಿಡ್ಯುವಸ್) ಹೆಚ್ಚಾಗಿ ಬೆಳೆಯುತ್ತದೆ. ಇದು ನುಣುಪಾದ ಕಣರಚನೆಯುಳ್ಳ (ಈವನ್‍ಗೇನ್ಡ್) ಸಾಧಾರಣ ಗಟ್ಟಿ ಜಾತಿಯ ಮರ. ಹೊಸದಾಗಿ ಕಡಿದಾಗ ಈ ಮರದ ಬಣ್ಣ ನಿಂಬೆ ಹಳದಿ. ಕ್ರಮೇಣ ಮಾಸಲು ಹಳದಿಬಣ್ಣಕ್ಕೆ ತಿರುಗುತ್ತದೆ. ಮರ ಕೊರೆಯಲು ಸುಲಭ, ಹದಮಾಡಲು ತುಂಬ ಯೋಗ್ಯವಾಗಿದೆ. ಮರವನ್ನು ಮನೆಯ ಮರಮುಟ್ಟು ಸಾಮಾನು, ಬಾಚಣಿಗೆ, ಕೆತ್ತನೆ ಸಾಮಾನು, ಕಂಡರಣೆ ಸಾಮಾನು, ಆಟದ ಸಾಮಾನು, ಬ್ಯಾಟರಿ ಸೆಪರೇಟರ್ ಮತ್ತು ಸಣ್ಣ ಪೆಟ್ಟಿಗೆಗಳು ಇತ್ಯಾದಿಗಳನ್ನು ಮಾಡಲು ಸಾಧಾರಣವಾಗಿ ಉಪಯೋಗಿಸುತ್ತಾರೆ. ಇತ್ತೀಚೆಗೆ, ನೂಲಿನ ಮತ್ತು ಬಟ್ಟೆ ಗಿರಣಿಗಳಲ್ಲಿ ಉಪಯೋಗಿಸುವ ಉರುಟಣೆಗಳನ್ನು (ಬಾಬಿನ್ಸ್) ತಯಾರಿಸಲು ವಿಶೇಷವಾಗಿ ಉಪಯೋಗಿಸುತ್ತಾರೆ. ಪಶ್ಚಿಮ ಕರಾವಳಿಯಲ್ಲಿ ಸಣ್ಣ ಸಣ್ಣ ದೋಣಿಗಳನ್ನು ತಯಾರಿಸಲು ಇವನ್ನು ಬಳಸುತ್ತಾರೆ. ಇದು ಮುಖ್ಯವಾಗಿ ಭಾರತ ಹಾಗೂ ನೆರೆಯ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವ ಮರ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ರುಬಿಯೇಸಿ ಕುಟುಂಬಕ್ಕೆ ಸೇರಿದ್ದು,ಅಡಿನ ಕಾರ್ಡಿಫೋಲಿಯ (Adina cordifolia)ಎಂಬುದು ಸಸ್ಯಶಾಸ್ತ್ರೀಯ ಹೆಸರು. ಕನ್ನಡದಲ್ಲಿ ಅರಶಿನ ತೇಗ, ಹೆಡ್ಡಿ ಎಂದೂ,ತುಳು ವಿನಲ್ಲಿ ಅಣವು, ಹಿಂದಿಯಲ್ಲಿ ಕದಂಬ ಎಂದೂ ಹೆಸರು ಇದೆ.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಇದು ದೊಡ್ಡ ಹಂದರವುಳ್ಳ ಮರ.ಕಾಂಡ ನೇರವಾಗಿ ಬೆಳೆದಿರುವುದು.ಊರೆ ಬೇರುಗಳಿದ್ದು ಕಾಂಡದ ಕೆಳಭಾಗ ವಿಚಿತ್ರ ಆಕಾರ ಹೊಂದಿರುವುದು.ಹೃದಯಾಕಾರದ ಎಲೆಗಳಿದ್ದು,ತೊಗಟೆ ಬೂದು ಬಣ್ಣವಾಗಿರುತ್ತದೆ.ಇದರ ದಾರುವು ಹಳದಿ ಬಣ್ಣದಾಗಿದ್ದು ಸಾದಾರಣ ಗಡುಸಾಗಿರುತ್ತದೆ.ನುಣುಪಾಗಿದ್ದು ಉತ್ತಮವಾಗಿ ಹೊಳಪು ಬರುತ್ತದೆ.ಮರದ ಕೆಲಸಗಳಿಗೆ ಸುಲಭವಾಗಿದೆ.

ಉಪಯೋಗಗಳು[ಬದಲಾಯಿಸಿ]

ಗೃಹನಿರ್ಮಾಣದಲ್ಲಿ,ಪಿಠೋಪಕರಣಗಳ ತಯಾರಿಕೆಯಲ್ಲಿ,ಕೆತ್ತನೆ ಕೆಲಸಗಳಲ್ಲಿ ಹೆಚ್ಚಾಗಿ ಉಪಯೋಗದಲ್ಲಿದೆ.

ಅಧಾರ ಗ್ರಂಥಗಳು[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: