ವಿಷಯಕ್ಕೆ ಹೋಗು

ಕಾಜಿರಂಗ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಜಿರಂಗ ರಾಷ್ಟ್ರೀಯ ಉದ್ಯಾನ*
UNESCO ವಿಶ್ವ ಪರಂಪರೆಯ ತಾಣ

ಉದ್ಯಾನದಲ್ಲಿ ಒಂದು ಘೇಂಡಾಮೃಗ
ಉದ್ಯಾನದಲ್ಲಿ ಒಂದು ಘೇಂಡಾಮೃಗ
ರಾಷ್ಟ್ರ Indiaಭಾರತ
ತಾಣದ ವರ್ಗ ಪ್ರಾಕೃತಿಕ
ಆಯ್ಕೆಯ ಮಾನದಂಡಗಳು ix, x
ಆಕರ 337
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1985  (9ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ಕಾಜಿರಂಗ ರಾಷ್ಟ್ರೀಯ ಉದ್ಯಾನವು ಭಾರತಅಸ್ಸಾಂ ರಾಜ್ಯದಲ್ಲಿದೆ. ವಿಶ್ವ ಪರಂಪರೆಯ ತಾಣವಾಗಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಜಗತ್ತಿನಲ್ಲಿರುವ ಒಟ್ಟು ಏಕ ಕೊಂಬಿನ ಘೇಂಡಾಮೃಗ (ಖಡ್ಗಮೃಗ)ಗಳ ಪೈಕಿ ಮೂರನೆಯ ಎರಡು ಭಾಗಕ್ಕೆ ನೆಲೆಯಾಗಿದೆ. ಗೋಲಾಘಾಟ್ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಹರಡಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನದ ಒಟ್ಟು ವಿಸ್ತೀರ್ಣ ೪೩೦ ಚದರ ಕಿ.ಮೀ.ಗಳಷ್ಟು. ಈ ಉದ್ಯಾನದಲ್ಲಿ ಹುಲಿಗಳ ಸಂಖ್ಯೆ ಬಲು ಸಾಂದ್ರವಾಗಿದ್ದು ಇದು ವಿಶ್ವದ ಕಾಪಿಟ್ಟ ಅರಣ್ಯಗಳ ಪೈಕಿ ಅತಿ ಹೆಚ್ಚೆನಿಸಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ೨೦೦೬ರಲ್ಲಿ ಹುಲಿ ಮೀಸಲು ಎಂದು ಘೋಷಿಸಲಾಗಿದೆ. ಇಲ್ಲಿ ಬಲು ದೊಡ್ಡ ಸಂಖ್ಯೆಯಲ್ಲಿ ಆನೆಗಳು, ಕಾಡುಕೋಣಗಳು ಮತ್ತು ಜಿಂಕೆಗಳು ಸಹ ವಾಸವಾಗಿವೆ. ಉಳಿದಂತೆ ಚಿರತೆ, ಮೀನುಗಾರ ಕಾಡುಬೆಕ್ಕು, ಪುನುಗು ಬೆಕ್ಕು, ಸಾಂಬಾರ್ ಜಿಂಕೆ, ಬೊಗಳುವ ಜಿಂಕೆ, ಹೂಲಾಕ್ ಗಿಬ್ಬನ್, ಕಿರೀಟವುಳ್ಳ ಲಂಗೂರ್, ಕರಡಿ ಮತ್ತು ಗಂಗಾ ಡಾಲ್ಫಿನ್‍‍ಗಳು ಸಹ ಈ ಪ್ರದೇಶದಲ್ಲಿ ನೆಲೆಸಿವೆ. ವಿಶ್ವದ ಒಂದು ಪ್ರಮುಖ ಪಕ್ಷಿನೆಲೆಯಾಗಿ ಸಹ ಇದನ್ನು ಗುರುತಿಸಲಾಗಿದೆ. ಪೂರ್ವ ಹಿಮಾಲಯದ ಜೈವಿಕ ಕ್ರಿಯಾಕೇಂದ್ರದ ಅಂಚಿನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವು ದೊಡ್ಡ ಪ್ರಮಾಣದಲ್ಲಿ ಜೀವವೈವಿಧ್ಯವನ್ನು ತೋರುತ್ತದೆ.

ಕಾಜಿರಂಗ ರಾಷ್ಟ್ರೀಯ ಉದ್ಯಾನದ ನಕಾಶೆ
ಕಾಜಿರಂಗದ ಹುಲ್ಲುಗಾವಲು ಮತ್ತು ಅರಣ್ಯ

ಕಾಜಿರಂಗ ರಾಷ್ಟ್ರೀಯ ಉದ್ಯಾನವು ಎತ್ತರದ ಆನೆ ಹುಲ್ಲು ಹೊಂದಿರುವ ವ್ಯಾಪಕ ಬಯಲು, ಜೌಗುಪ್ರದೇಶ ಮತ್ತು ಉಷ್ಣವಲಯದ ಅಗಲ ಎಲೆಗಳ ತೇವಭರಿತ ಕಾಡನ್ನು ಹೊಂದಿದೆ. ಇಲ್ಲಿ ಮಹಾನದಿ ಬ್ರಹ್ಮಪುತ್ರ ಸೇರಿದಂತೆ ೪ ಪ್ರಮುಖ ನದಿಗಳು ಹರಿಯುತ್ತವೆ. ಉಳಿದಂತೆ ದೊಡ್ಡ ಸಂಖ್ಯೆಯ ಸಣ್ಣಪುಟ್ಟ ಜಲಸಮೂಹಗಳನ್ನು ಸಹ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಒಳಗೊಂಡಿದೆ. ಅಸ್ಸಾಂನ ಜನತೆಯ ನಿತ್ಯಜೀವನದ ಅವಿಭಾಜ್ಯ ಅಂಗವಾಗಿರುವ ಕಾಜಿರಂಗ ಹಲವು ಗ್ರಂಥಗಳು, ಹಾಡುಗಳು ಮತ್ತು ಸಾಕ್ಷ್ಯಚಿತ್ರಗಳಿಗ ಮೂಲವಾಗಿದೆ. ೧೯೦೫ರಲ್ಲಿ ಮೀಸಲು ಅರಣ್ಯವಾಗಿ ಘೋಷಿಸಲ್ಪಟ್ಟ ಕಾಜಿರಂಗ ರಾಷ್ಟ್ರೀಯ ಉದ್ಯಾನವು ೨೦೦೫ರಲ್ಲಿ ಶತಾಬ್ದಿಯನ್ನು ಆಚರಿಸಿಕೊಂಡಿತು.

ಇವನ್ನೂ ನೋಡಿ

[ಬದಲಾಯಿಸಿ]

ಅಸ್ಸಾಂ

ವಿಶ್ವ ಪರಂಪರೆಯ ತಾಣ

ಬಾಹ್ಯ ಸಂಪರ್ಕಕೊಂಡಿಗಳು

[ಬದಲಾಯಿಸಿ]
ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ