ಕೇವಲಾದೇವ್ ರಾಷ್ಟ್ರೀಯ ಉದ್ಯಾನ
ಗೋಚರ
ಕೇವಲಾದೇವ್ ರಾಷ್ಟ್ರೀಯ ಉದ್ಯಾನ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಪ್ರಾಕೃತಿಕ |
ಆಯ್ಕೆಯ ಮಾನದಂಡಗಳು | (x) |
ಆಕರ | 340 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1985 (9ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಕೇವಲಾದೇವ್ ರಾಷ್ಟ್ರೀಯ ಉದ್ಯಾನವು ಭಾರತದ ರಾಜಸ್ಥಾನ ರಾಜ್ಯದಲ್ಲಿದೆ. ಇದೊಂದು ಸುಪ್ರಸಿದ್ಧ ಪಕ್ಷಿಧಾಮವಾಗಿದ್ದು ಮೊದಲು ಇದರ ಹೆಸರು ಭರತ್‍ಪುರ್ ಪಕ್ಷಿಧಾಮ ಎಂಬುದಾಗಿತ್ತು. ಕೇವಲಾದೇವ್ ರಾಷ್ಟ್ರೀಯ ಉದ್ಯಾನಕ್ಕೆ ಪ್ರತಿ ಚಳಿಗಾಲದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೈಬೀರಿಯನ್ ಕೊಕ್ಕರೆಗಳು ವಲಸೆ ಬರುತ್ತವೆ. ಸಾವಿರಾರು ಮೈಲಿ ದೂರದ ಸೈಬೀರಿಯಾದಿಂದ ಇಲ್ಲಿಗೆ ಬರುವ ಈ ಕೊಕ್ಕರೆಗಳು ಇಂದು ಅತಿ ತೀವ್ರವಾಗಿ ಅಳಿವಿನತ್ತ ಸಾಗುತ್ತಿರುವ ಜೀವತಳಿಗಳಲ್ಲಿ ಸೇರಿವೆ. ಸಮಾರು ೨೩೦ ಜಾತಿಯ ಪಕ್ಷಿಗಳು ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ್ನು ತಮ್ಮ ವಾಸನೆಲೆಯನ್ನಾಗಿಸಿಕೊಂಡಿವೆ. ೧೯೮೫ರಲ್ಲಿ ಯುನೆಸ್ಕೋ ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿತು.
ಬಾಹ್ಯ ಸಂಪರ್ಕಕೊಂಡಿಗಳು
[ಬದಲಾಯಿಸಿ]- ಯುನೆಸ್ಕೋ ಪಟ್ಟಿಯಲ್ಲಿ ಕೇವಲಾದೇವ್ ರಾಷ್ಟ್ರೀಯ ಉದ್ಯಾನ
- ಕೇವಲಾದೇವ್ ರಾಷ್ಟ್ರೀಯ ಉದ್ಯಾನ
- ಭಾರತದ ಪಕ್ಷಿನೆಲೆಗಳು
- ಕೇವಲಾದೇವ್ ರಾಷ್ಟ್ರೀಯ ಉದ್ಯಾನದ ಅಧಿಕೃತ ಮಾಹಿತಿ ತಾಣ Archived 2015-08-01 ವೇಬ್ಯಾಕ್ ಮೆಷಿನ್ ನಲ್ಲಿ.