ವಿಷಯಕ್ಕೆ ಹೋಗು

ಗುರು ಗ್ರಂಥ ಸಾಹೀಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರು ಗೋಬಿಂದ್ ಸಿಂಗರ,ದೀಪಗಳಿಂದ ಶೃಂಗಾರಗೊಂಡ 'ಗುರುಗ್ರಂಥ' ದ ದೊಡ್ಡ ಹಾಳೆ ನಿಸಾನ್ ನೊಂದಿಗೆ, (ಮೂಲ ಮಂತ್ರ ). ತಖ್ತ್ ಶ್ರೀ ಹರಮಂದಿರ್ ಸಾಹಿಬ್ ನ ಸಂಗ್ರಹ - ಪಾಟ್ನಾ
Part of a series on
Sikh scriptures


ಚಿತ್ರ:Manuscript copy of Guru Granth Sahib.jpg

Sikhism
History of Sikhism
Sikh beliefs
Sikh

Guru Granth Sahib

Japji Sahib
Anand Sahib
Kirtan Sohila
Sukhmani Sahib
Asa di Var

Dasam Granth

Jaap Sahib
Benti Chaupai
Amrit Savaiye

Sarbloh Granth
Varan Bhai Gurdas

Articles on Sikhism

ಗುರು ಗ್ರಂಥ ಸಾಹೀಬ (ಪಂಜಾಬಿ:ਗੁਰੂ ਗ੍ਰੰਥ ਸਾਹਿਬ, gurū granth sāhib ),ಅಥವಾ ಆದಿ ಗ್ರಂಥ , ಸಿಖ್ಖ[] ಅಂತಿಮ ಗುರುಗಳು. ಇದೊಂದು ಬೃಹತ್ ಗ್ರಂಥವಾಗಿದ್ದು, 1430 ಶ್ಲೋಕಗಳನ್ನು ಹೊಂದಿದೆ.ಇದರ ಸಂಗ್ರಹ ಮತ್ತು ಜೋಡಣೆಯು ಸಿಖ್ ಗುರುಗಳ ಕಾಲದಲ್ಲಿ ,ಅಂದರೆ 1469 ರಿಂದ 1708 [] ರ ಅವಧಿಯಲ್ಲಿ ಆಗಿದೆ. ಹಲವು ಶ್ಲೋಕಗಳ ಅಥವಾ ಶಾಬಾದ್ ಸಂಗ್ರಹ ಇದಾಗಿದೆ.ಇದರಲ್ಲಿ ದೇವರ ಗುಣಗಳನ್ನು ವಿವರಿಸಲಾಗಿದೆ.[] ಮತ್ತು ಯಾವ ಕಾರಣಕ್ಕಾಗಿ ದೇವರ ಹೆಸರಿನಲ್ಲಿ ಧ್ಯಾನ ಮಾಡಬೇಕು ಎಂದು ವಿವರಿಸಲಾಗಿದೆ. ಗುರು ಗೋಬಿಂದ್ ಸಿಂಗ್ (1666–1708), 10 ನೇ ಸಿಖ್ಖರ ಗುರುಗಳು , ದಶಮ ಗ್ರಂಥ /ದಾಸಂ ಗ್ರಂಥವು ತನ್ನ ನಂತರದ ಅಧಿಕಾರ ಹೊಂದುತ್ತದೆ ಎಂದು ತಿಳಿಸಿದ್ದಾನೆ. ಗುರು ಗ್ರಂಥ ಸಾಹೀಬ [] ಅನ್ನು ಎತ್ತಿ ಹಿಡಿದಿದ್ದಾನೆ. ಹೀಗಾಗಿ ಈ ಗ್ರಂಥ ಸಿಖ್ಖರ ಪಾಲಿಗೆ ಧಾರ್ಮಿಕ ಗ್ರಂಥವಾಗಿ ಉಳಿದಿದೆ.ಹಾಗೂ ಹತ್ತು ಗುರುಗಳ [] ಉಪದೇಶ ಇದರಲ್ಲಿದೆ. ಪ್ರಾರ್ಥನೆಯ ಹಾದಿಗೆ [] ದಾರಿ ಮತ್ತು ಮೂಲ ಈ ಆದಿಗ್ರಂಥವಾಗಿದೆ. ಸಿಖ್ಖರಿಗೆ ಪ್ರಾರ್ಥನೆಗೆ ಈ ಪುಸ್ತಕ ಕೇಂದ್ರ ಬಿಂದುವಾಗಿದೆ. ಆದಿಗ್ರಂಥವನ್ನು ಮೊಟ್ಟ ಮೊದಲ ಭಾರಿಗೆ ಸಂಗ್ರಹಿಸಿದವರು ,5 ನೇ ಸಿಖ್ ಗುರು , ಗುರು ಅರ್ಜನ್ ದೇವ್ (1563–1606),ಶ್ಲೋಕಗಳಿಂದ ಮೊದಲ 5 ಸಿಖ್ಖರ ಗುರುಗಳು ಹಾಗು ಇತರ ಹೆಸರಾಂತ ಸಂತರು ಹಾಗು ಹಿಂದೂ ಮತ್ತು ಮುಸ್ಲಿಂ ಸಂತರು ಇದ್ದರು.[] 10 ನೇ ಸಿಖ್ಖರ ಗುರು ನಿಧನಾನಂತರ, ಹಲವಾರು ಸಂಪಾದಿತ ಪ್ರತಿಗಳನ್ನು ತಯಾರು ಮಾಡಿ , ಬಾಬಾ ದೀಪ್ ಸಿಂಗ್ ರವರಿಂದ ಹಂಚಲ್ಪಟ್ಟಿತು.ಇದನ್ನು ಗುರ್ಮುಖಿ ಕೈ ಬರಹದಲ್ಲಿ ಬರೆಯಲಾಗಿದ್ದು ,ಪ್ರಧಾನವಾಗಿ ಪುರಾತನ ಪಂಜಾಬಿ ಹಾಗು ಬೇರೆ ಬಾಷೆಗಳಲ್ಲಿನ ಪ್ರಾಸಂಗಿಕವಾಗಿ ಬ್ರಜ್ , ಪಂಜಾಬಿ , ಖರಿಬೋಲಿ (ಹಿಂದಿ ), ಸಂಸ್ಕೃತ , ಸ್ಥಳೀಯ ಬಾಷೆಗಳಲ್ಲಿ , ಮತ್ತು ಪರ್ಷಿಯನ್ ,ಸಾಮಾನ್ಯ ಹೆಸರಿನ ಸಂತ ಭಾಷೆ ಯಲ್ಲಿ ರಚಿಸಲಾಗಿದೆ.1/}[][][][][೧೦]

ಸಿಖ್ಖ್ ಧರ್ಮದ ಅರ್ಥ ಹಾಗು ಪಾತ್ರ

[ಬದಲಾಯಿಸಿ]

ಸಿಖ್ಖರಿಗೆ ಆದಿಗ್ರಂಥವು ಪವಿತ್ರ ಹಾದಿಯಾಗಿದ್ದು, ಮನುಷ್ಯತ್ವದ ರಹದಾರಿಯಾಗಿದ್ದು;ಮುಂಬರುವ ತಲೆಮಾರಿಗೆ ಮಾದರಿಯಾಗಿದೆ. ಹಾಗು ಜನರಿಗೆ ಜೀವನದ ಹಾದಿಯನ್ನು ತೋರಿಸುವ ಸಿಖ್ಖರ ಮಾರ್ಗವಾಗಿದೆ. ಸಿಖ್ ರ ಪ್ರಾರ್ಥನಾ ಜೀವನದಲ್ಲಿ ಎರಡು ಮುಖ್ಯ ಮೂಲಭೂತ ತತ್ವಗಳಾಗಿವೆ. ಈ ಗ್ರಂಥವು ಒಂದು ದೈವೀಕ ಹಾದಿಯಾಗಿದ್ದು,,[೧೧] ಧರ್ಮ ಮತ್ತು ತತ್ವದ ಪ್ರಶ್ನೆಗಳಿಗೆ ಉತ್ತರವಾಗಿದ್ದು,ಎಲ್ಲ ಉತ್ತರವನ್ನು ಅಂದರೆ ಧರ್ಮ ಮತ್ತು ನೀತಿಗೆ ಸಂಬಂಧಿಸಿದ ಎಲ್ಲವನ್ನು ಅದರಲ್ಲಿ ಕಂಡುಕೊಳ್ಳಬಹುದಾಗಿದೆ. ಅದರಲ್ಲಿನ ಶ್ಲೋಕ ಹಾಗು ಉಪನ್ಯಾಸಗಳನ್ನು ಗುರ್ಬನಿ ಅಥವಾ "ಗುರುಗಳ ಮಾತು " ಎಂದು, ಕೆಲವೊಮ್ಮೆ ಧುರ್ ಕಿ ಬನಿ ಅಥವಾ "ದೇವರ ಮಾತು " ಎನ್ನಲಾಗಿದೆ . ಸತ್ಯವಾಗಿ ,ದೇವರ ಮತ್ತು ದೈವತ್ವದ ಬಗ್ಗೆ ಹಿಂದಿನ ಗುರುಗಳು ಬರೆದು ಹೋಗಿದ್ದಾರೆ.[೧೨] ಆದಿಗ್ರಂಥದಲ್ಲಿ ,ಸಿಖ್ಖ್ ಗುರುಗಳಲ್ಲದೆ, ಬೇರೆ ಬೇರೆ ಸಂತರು ಬರೆದಿರುವ ಬರಹಗಳು ಸೇರಿದ್ದು, ಅವುಗಳನ್ನು ಭಾಗತ್ಸ್ "ಆರಾಧಕರು " ಹಾಗು ಅವರ ಬರಹಗಳನ್ನು ಭಗತ್ ಬನಿ "ಆರಾಧಕರ ಮಾತುಗಳು "ಎಂದು ತಿಳಿಯಲಾಗಿದೆ. ಈ ಸಂತರು ಬೇರೆ ಬೇರೆ ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯುಳ್ಳವರಾಗಿದ್ದು,ಹಿಂದೂಗಳು,ಮುಸ್ಲಿಮರು,ಚಮ್ಮಾರ ಹಾಗು ಅಸ್ಪೃಶ್ಯರು ಗಳೂ ಸೇರಿದವರಾಗಿದ್ದಾರೆ . 'ಶ್ರೀ ಗುರುಗ್ರಂಥ ಸಾಹಿಬ್ ಜಿ'ಯಲ್ಲಿ ಸಿಖ್ಖರ ಗುರುಗಳ ಹಾಗು ಇತರ ಸಂತರ (ಭಾಗತ್ಸ್ )ಬರಹಗಳಿಂದ ಕೂಡಿದ್ದರೂ, ಹಿಂದೂ ಮತ್ತು ಮುಸ್ಲಿಂ ನಂಬಿಕೆಯ ವ್ಯತ್ಯಾಸವನ್ನು ಮಾಡದೆ, ಸಿಖ್ಖರ ಗುರುಗಳ ಹಾಗು ಭಾಗತ್ಸ್ ರ ಕೆಲಸಗಳಲ್ಲಿ ಭೇದ ತೋರದೆ, ಶ್ರೀ ಗುರುಗ್ರಂಥ ಸಾಹೀಬ ರಚನೆಯಾಗಿದೆ  ; "ಗುರು " ಮತ್ತು "ಭಗತ್ "ಶಿರೋನಾಮೆಯ ಹೆಸರುಗಳು ತಪ್ಪು ದಾರಿಗೆ ತಂದು ನಿಲ್ಲಿಸುವುದಿಲ್ಲ. ಆದರೂ , ಸಿಖ್ಖರು ಯಾವುದೇ ಜಾತಿ ಅಥವಾ ಸಂಸ್ಕೃತಿಯನ್ನು ತಮ್ಮ ಧರ್ಮದ ಅಂಗವಾಗಿ ಪರಿಗಣಿಸದೆ ಇದ್ದರೂ, ಗುರುಗ್ರಂಥ ಸಾಹೀಬವು ಏಕೈಕ ಹಾಗು ಅಂತಿಮ ತೀರ್ಮಾನವಾಗಿ ಗುರುಗಳಿಗೆ ಉಳಿದುಬಿಟ್ಟಿದೆ.[೧೩]

ಹಿನ್ನೆಲೆ/ಇತಿಹಾಸ

[ಬದಲಾಯಿಸಿ]
'ಆದಿಗ್ರಂಥ' ವನ್ನು, 'ಚಿನ್ನದ ದೇವಸ್ಥಾನ' ದಲ್ಲಿ ಮೊದಲಬಾರಿಗೆ ಇಡಲಾಯಿತು.
ನಕ್ಷೆ ಗುರು ಗ್ರಂಥ ಸಾಹಿಬ್ ನ ಅನೇಕ ಲೇಖಕರ ಜನ್ಮ ಸ್ಥಳಗಳಲ್ಲಿ ವಿವರಿಸುತ್ತದೆ

ಗುರು ನಾನಕ್ ದೇವ್ ಅವರ ಕೆಲಸಗಳನ್ನು ಭಾಷಾಂತರಿಸುತ್ತಾ,ಮೊದಲ ಸಿಖ್ಖ್ ಧರ್ಮದ ಗುರು ಹಾಗು ಸಿಖ್ಖ್ ಸಂಸ್ಥಾಪಕ,ತನ್ನ ಜೀವನಾವಧಿಯಲ್ಲಿ ಪ್ರಾರಂಭಿಸುತ್ತಾನೆ.[೧೪] ಗುರು ಅಂಗದ್ , ಸಿಖ್ಖರ ಎರಡನೇ ಗುರು , 'ಗುರುನಾನಕ್ ದೇವರ' ಹಾಡುಗಳ ಸಂಗ್ರಹ ಮತ್ತು ಕೈ ಬರಹದ ಸಂಗ್ರಹ ಮಾಡಿ ,ತಮ್ಮದೇ ಆದ ಸ್ವಂತ 63 ರಚನೆಗಳನ್ನು ಸೇರಿಸಿದರು. 3 ನೇ ಗುರು, ಗುರು ಅಮರ್ ದಾಸ್ ಹಲವಾರು ಕೈ ಬರಹಗಳನ್ನು ತಯಾರು ಮಾಡಿ, 974 ತಮ್ಮದೇ ಆದ ಸ್ವಂತ ರಚನೆಗಳನ್ನು ಹಾಗು ಭಾಗತ್ಸ್ ರವರ ಹಲವು ಬರಹಗಳನ್ನು ಸೇರಿಸಲಾಗಿದೆ. ಈ ಕೈ ಬರಹಗಳನ್ನು , ಗೊಇಂದ್ವಾಲ್ ಪೋಥಿಸ್ ಎಂದು ಕರೆಯಲಾಗಿದ್ದು, ಗುರು ಅಮರದಾಸರ ಸಂದೇಶಗಳನ್ನು ಬರೆಯುತ್ತಾ, ಭಗತ್ ಬನಿ ಯನ್ನು ಯಾಕೆ ಸೇರಿಸಲಾಗಿದೆ ಹಾಗು ಭಾಗತ್ಸ್, ಗುರು ನಾನಕರ ಮೇಲೆ ಹೇಗೆ ಪರಿಣಾಮ ಬೀರಿದೆ, ಎಂದು ತಿಳಿಯುವುದಾಗಿದೆ.[೧೪] ನಾಲ್ಕನೆಯ ಸಿಖ್ಖರ ಗುರೂ ಸಹ ಹಲವು ಶ್ಲೋಕ/ ಕವಿತೆ ರಚಿಸಿದ್ದಾರೆ. ಐದನೆಯ ಗುರು , ಗುರು ಅರ್ಜನ್ ದೇವ್ ,ಹಳೆಯ ಗುರುಗಳ ಬನಿ (ದೇವರ ಮಾತು )ಗಳನ್ನೂ ಕ್ರೋಡೀಕರಿಸಲು ಹಾಗು ಕೃತ್ರಿಮ ರಚನೆಗಳನ್ನು ತಡೆಯಲು, 1599 ರ ಪ್ರಾರಂಭದಲ್ಲಿ ಆದಿ ಗ್ರಂಥ ವನ್ನು ಸಂಕಲಿಸಲು ಗುರುನಾನಕ್ ದೇವರ [೧೪] ಯೋಜನೆಯಂತೆ ಸಿದ್ಧಪಡಿಸಲಾಯಿತು. ತವರಿಖ್ ಗುರು ಖಾಲ್ಸ ಹೇಳುವಂತೆ,ನೀಡಿದ ಆದೇಶದಂತೆ ಹುಕಂನಾಮ (ಆಡಳಿತ ಆಣತಿ ),ಯಾರಾದರೂ, ಏನಾದರೂ ತಮ್ಮ ತಮ್ಮ ಕಾಣಿಕೆಗಳನ್ನು ನೀಡಬಹುದಾಗಿದೆ. ಎಲ್ಲ ಮೂಲಗಳಿಂದ ಬಂದ ವಿಷಯಗಳನ್ನು ಕ್ರಮವಾಗಿ ಪರಿಶೀಲಿಸಿ ಅದರ ಅಧಿಕಾರತ್ವವನ್ನು ಸಾಬೀತು ಪಡಿಸಲಾಗಿದೆ.[೧೪][೧೫] ಗುರು ಅರ್ಜನ ದೇವರ ನೇರ ನೇತೃತ್ವದಲ್ಲಿ ,ಭಾಯಿ ಗುರ್ದಾಸ್ ಬರೆದ ಅಂತಿಮ ಪುಸ್ತಕದಲ್ಲಿ ಮೊದಲ ಐದು ಸಿಖ್ಖರ ಗುರುಗಳ ರಚನೆಗಳು, ಹದಿನೈದು ಭಾಗತ್ಸ್ ಗಳು , ಹದಿನೇಳು 'ಭಟ್ಟ್' ಗಳು ("ಬರ್ದ್ಸ್ ", ಸಾಂಪ್ರದಾಯಿಕ ರಚನೆಗಾರರು ) ಇತರೆ ನಾಲ್ಕು ಅಂದರೆ 'ಭಾಯ್ ಮುರ್ಧಾನ' ,ಗುರು ನಾನಕರ ಜೀವಮಾನ ಸ್ನೇಹಿತ ಸೇರಿಸಲ್ಪಟ್ತಿವೆ. ಆದಿ ಗ್ರಂಥ ರಚನೆಯಾಗಲು ಐದು ವರ್ಷಗಳ ಕಾಲಾವಧಿ ಹಿಡಿದು, ಅದನ್ನು ಹರಮಂದಿರ್ ಸಾಹೀಬ ನಲ್ಲಿ ಅಳವಡಿಸಿ ("ದೇವರ ವಾಸಸ್ಥಾನ "),ಜನಪ್ರಿಯವಾಗಿ ಗುರುತಿಸಲ್ಪಟ್ಟ 'ಚಿನ್ನದ ದೇವಸ್ಥಾನ' , ಸೆಪ್ಟೆಂಬರ್ 1, 1604, ರಲ್ಲಿ ಬಾಬಾ ಬುದ್ಧ ರವರನ್ನು, ಮೊದಲ ಗ್ರಂಥಿ [೧೫] ಎಂದು ಪರಿಗಣಿಸಲಾಗಿದೆ. ಮೂಲ ಪುಸ್ತಕವು ಕರ್ತಾರಪುರ ದಲ್ಲಿದ್ದು, ಗುರು ಅರ್ಜನ ದೇವ [೧೬] ರ ಸಹಿಯನ್ನು ಹೊಂದಿದೆ. ಗುರು ಹರಗೋಬಿಂದ ರವರ ಬಳಿ ಮೂಲ ಪ್ರತಿ ಇತ್ತು.ಇವರು ಆರನೇ ಗುರುಗಳಾಗಿದ್ದರು.ಆದರೆ ಅವರಲ್ಲೊಬ್ಬ ಮೊಮ್ಮಗನಿಂದ, 'ಧೀರ್ ಮಲ' ನಿಂದ 'ಗುರು' ಪಟ್ಟವನ್ನು ವಹಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದುಹಾಕಲಾಯಿತು. 30 ವರ್ಷಗಳ ನಂತರ ಸಿಖ್ಖರು,ಬಲವಂತವಾಗಿ ಹುಡುಕಿಸಿ ತೆಗೆದು ಒಂಭತ್ತನೆಯ ಗುರುಗಳಿಗೆ ಹಸ್ತಾಂತರಿಸಲಾಯಿತು.ಅವರೇ ತೆಗ್ಹ್ ಬಹಾದುರ್ . ಇವರ ಜನಾಂಗದಲ್ಲಿ ಈ ಮೂಲ ಗ್ರಂಥಕ್ಕೆ ಸರಿಯಾಗಿ ಆಧ್ಯತೆ ನೀಡದಿದ್ದರೂ,ಪುಸ್ತಕದ ವಾಪಸಾತಿ 'ಆದಿ ಗ್ರಂಥ'ದ ದೈವತ್ವದ ತತ್ವ ಯಾವುದಕ್ಕೂ ಸಾಟಿ ಇಲ್ಲವೆಂದೆನಿಸಿತು. ಈ ಮೂಲ ಆದಿಗ್ರಂಥ ( "ಕರ್ತರ್ಪುರ್ ಪೋಥಿ ")ಚಾರಿತ್ರಿಕ ಅರ್ಥಪೂರ್ಣ ಬೆಲೆಯನ್ನು ಹೊಂದಿದ್ದು,ಪ್ರತಿ ವೈಶಾಖಿ ದಿನದಂದು, ಧೀರ್ ಮಲ ಕಡೆಯವರಿಂದ ಕರ್ತಾರಪುರ ದಲ್ಲಿ ಪ್ರದರ್ಶಿಸಲಾಗುತ್ತದೆ.ಅಂತಿಮವಾಗಿ, 'ಆದಿ ಗ್ರಂಥ' ವನ್ನು ಗುರು ಗೋಬಿಂದ್ ಸಿಂಗ್ ಮತ್ತು ಭಾಯಿ ಮಣಿಸಿಂಗ್ ಪತ್ರಕರ್ತರಾಗಿ,ತಲ್ವಂಡಿ ಸಬೂ ( ದಂದಮಾ ಸಾಹೀಬ ಎಂದು ಪುನರ್ನಾಮಕರಣ ಮಾಡಲಾಗಿದೆ. )ರಚಿಸಿದ್ದಾರೆ. ಗುರು ಗೋಬಿಂದ್ ಸಿಂಗರು, ಗುರು ತೆಗ್ಹ್ ಬಹಾದುರ್ [೧೭] ರ ಹಾಡುಗಳನ್ನು ಸೇರಿಸಿದರೂ,ತಮ್ಮ ಸ್ವಂತ ರಚನೆಗಳನ್ನು ಕೈಬಿಟ್ಟರು. "ಅಖಂಡ ಪಥ್ " (ಗುರು ಗ್ರಂಥ ಸಾಹೀಬರ ಮುಂದುವರಿದ ಹಾಡು )[೧೮] ಗಳನ್ನೂ ಗುರು ಗೋಬಿಂದ್ ಸಿಂಗ್ ರವರು ಹೊಂದಿರುವ ಬಗ್ಗೆ ತಿಳಿಸಿದೆ. 'ತಲ್ವಂಡಿ ಸಬೂ' ದಿಂದ , ಗುರು ಗೋಬಿಂದ್ ಸಿಂಗರು ಡೆಕ್ಕನ್ ಗೆ ಹೊರಟರು. ನಂದೆದ್ ನಲ್ಲಿರುವಾಗ , ಗುರು ಗೋಬಿಂದ್ ಸಿಂಗರು ಅಂತಿಮ ಅವತರಣಿಕೆಯನ್ನು, ಶಾಶ್ವತವಾದ ಸಿಖ್ಖರ ಗುರುವಾಗಿ 1708 ರಲ್ಲಿ ರಚಿಸಿದರು. 'ಗುರು ಗ್ರಂಥಸಾಹೀಬ' ರ ಹಾಡುಗಳನ್ನು ರಾಗ ಗಳ ಅಥವಾ ಶಾಸ್ತ್ರೀಯ ಸಂಗೀತದ ವಿಭಾಗದಲ್ಲಿ ಗುರುತಿಸಲಾಗಿದೆ. ಕಾಲಾನುಕ್ರಮದ ಸಿದ್ಧತೆಯನ್ನು ರಾಗದ ತತ್ವಕ್ಕೆ ಅಳವಡಿಸದೆ , ಹತ್ತು ಸಿಖ್ಖ ಗುರುಗಳ ಕ್ರಮಣಿಕೆಗೆ ಒಳಪಡಿಸಲಾಗಿದೆ. 'ಆದಿ ಗ್ರಂಥ' ದಂತೆ, ಸಿಖ್ಖರು, ನಿರ್ಧಿಷ್ಟ ಪ್ರತಿಗೆ ಪ್ರಾಧಾನ್ಯತೆಯನ್ನು ನೀಡಲಿಲ್ಲ, ಆದರೆ 'ಸಿರಿ ಗುರು ಗ್ರಂಥ ಸಾಹೀಬ' ರನ್ನು 'ಗುರು' ಎಂದು ಪರಿಗಣಿಸಿಲ್ಲ. 'ಗುರು ಗ್ರಂಥ ಸಾಹೀಬ' ಅನ್ನು ಚಾರಿತ್ರಿಕ ಹಾಗು ನ್ಯಾಯಾಂಗದ ಕಾರಣದಿಂದ 'ನ್ಯಾಯಾಂಗ ವ್ಯಕ್ತಿ' ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಪರಿಗಣಿಸಿದೆ."ಗ್ರಂಥವು ಗುರುಗಳನ್ನು ಬದಲಾವಣೆ ಮಾಡಿದ್ದು, ಹತ್ತನೆಯ ಗುರುಗಳ ನಂತರ. 'ಗುರು ಗ್ರಂಥ ಸಾಹೀಬ'ಅನ್ನು ನ್ಯಾಯಾಂಗ ವ್ಯಕ್ತಿಯಾಗಿ ಪರಿಗಣಿಸುವುದರಲ್ಲಿ ಯಾವುದೇ ರೀತಿಯಾಗಿ ಅನುಮಾನಿಸುವುದಿಲ್ಲ". ಆಸ್ತಿಗೆ ಸಂಬಂಧಿಸಿದ ಒಂದು ವಿಷಯದಲ್ಲಿ ನ್ಯಾಯಾಂಗವು ಸ್ಪಷ್ಟಪಡಿಸಿದೆ.

'ಆದಿ ಗ್ರಂಥ'ವನ್ನು 'ಗುರು ಗ್ರಂಥ ಸಾಹೀಬ'ಗೆ ಉದಾತ್ತೀಕರಿಸಿರುವುದು.

[ಬದಲಾಯಿಸಿ]

1708 ರಲ್ಲಿ "ಸಿಖ್ಖರ ಹತ್ತನೆಯ ಗುರು ", ಗುರು ಗೋಬಿಂದ್ ಸಿಂಗರು 'ಆದಿ ಗ್ರಂಥ'ವನ್ನು "ಸಿಖ್ಖರ ಗುರು" ಎಂದು ಅನುಗ್ರಹಿಸಿದರು. ಗುರು ಗೋಬಿಂದ್ ಸಿಂಗರು , 'ಆದಿ ಗ್ರಂಥ' ವನ್ನು 'ಸಿಖ್ಖಿಸಂ' ನ ಗುರು ಎಂದು ಪರಿಗಣಿಸಿದ ಸಂದರ್ಭದಲ್ಲಿ, ಭಟ್ಟ್ ವಾಹಿ ಯಲ್ಲಿ ( ಬರ್ಡ್ಸ್ ಸ್ಕ್ರೋಲ್ ನಲ್ಲಿ ) ನರ್ಬುದ್ ಸಿಂಗ [೧೯] ನ ಮುಂದೆ,ಕಣ್ಣಿನ ಸಾಕ್ಷಿಯಾಗಿ ದಾಖಲಿಸಲಾಯಿತು. ಈತನು ಗುರುಗಳ ನ್ಯಾಯಾಲಯದಲ್ಲಿ 'ಬಾರ್ಡ್' ಆಗಿದ್ದನು. ಇದಕ್ಕೆ ಹೊಂದಿದಂತೆ ಹಲವಾರು ದಾಖಲೆಗಳು ಹತ್ತನೇ ಗುರುವಿನ ಬಳಿ ಪ್ರಕಟಣೆಗೆ ಸಾಕ್ಷಿಯಾಗಿದ್ದವು.ಚತ್ತ ಭ್ರಮ ಇದ್ದರೂ,ಸಿಖ್ಖರು ಮಿತಿಮೀರಿದಂತೆ 'ಗುರು ಗ್ರಂಥ'ವನ್ನು ತಮ್ಮ ನಿರಂತರ ಗುರುಗಳು ಎಂದು ಪರಿಗಣಿಸಿದರು. ಅಕ್ಟೋಬರ್ 1708 ರಿಂದ, ಇದು ಸಿಖ್ಖರ ತಿಳುವಳಿಕೆ ಮತ್ತು ಹೊಣೆಗಾರಿಕೆಯಾಗಿದೆ.

ಗುರುಗಳ ಅಪ್ಪಣೆ

[ಬದಲಾಯಿಸಿ]
Punjabi: "ਸੱਬ ਸਿੱਖਣ ਕੋ ਹੁਕਮ ਹੈ ਗੁਰੂ ਮਾਨਯੋ ਗ੍ਰੰਥ"
Transliteration: "Sab sikhan kō hukam hai gurū mānyō granth"
ಆಂಗ್ಲ:"All Sikhs are commanded to take the Granth as Guru."

- Guru Gobind Singh, October, 1708, Nanded

ರೇಹಿತ್ -ನಾಮ ದ ಕರ್ತೃ , ಪ್ರಹ್ಲಾದ್ ಸಿಂಗ್ ಹಾಗು ಗುರು ಗೋಬಿಂದ್ ಸಿಂಗರ ಹತ್ತಿರದ ಸ್ನೇಹಿತ, ಗುರುಗಳ ಅಪ್ಪಣೆಯನ್ನು ದಾಖಲಿಸಿಕೊಳ್ಳುತ್ತಾ,"ನಿರಂತರ ದೈವ ವಾಣಿಯನ್ನು ಸಿಖ್ಖರ ಪಂಥದಲ್ಲಿ ಅಳವಡಿಸುತ್ತಾ,ಎಲ್ಲಾ ಸಿಖ್ಖರು 'ಗ್ರಂಥ'ದ ಆದೇಶಗಳನ್ನು ಪಾಲಿಸಲೆಬೇಕೆಂದು,'ಗುರು' ಗಳೆಂದು ಪರಿಗಣಿಸಬೇಕೆಂದು", (ರೇಹತ್ -ನಾಮ , ಭಾಯಿ ಪ್ರಹ್ಲಾದ್ ಸಿಂಗ್ )[೨೦] ತಿಳಿಸಲಾಗಿದೆ. ಹಾಗೆಯೇ ಮತ್ತೊಬ್ಬ ಸಹವರ್ತಿ, ಗುರು ಗೋಬಿಂದ್ ಸಿಂಗರ ,'ಚೌಪ ಸಿಂಗ್' ಈ ಅಪ್ಪಣೆಯನ್ನು ತನ್ನ ರೇಹತ್ -ನಾಮ ದಲ್ಲಿ daak

ಸಂಯೋಜನೆ/ಪ್ರಬಂಧ

[ಬದಲಾಯಿಸಿ]

ಸಿಖ್ಖರ ಗುರುಗಳು ಹೊಸ ರೀತಿಯ ಬರಹದ ತತ್ವ ಗುರ್ಮುಖಿ ಬಳಸಿ ,ತಮ್ಮ ಪವಿತ್ರವಾದ ಸಾಹಿತ್ಯವನ್ನು ರಚಿಸಿದರು.[೨೧] ಈ ರಚನೆಗಳ ಮೂಲ ರಚನೆ ಯಾರದೆಂದು ತಿಳಿಯದಿದ್ದರೂ ,[೨೨] ಗುರುನಾನಕರ ಕಾಲದಲ್ಲಿ ಇದು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದವು ಎಂದು ತಿಳಿಯುತ್ತದೆ. ಸಿಖ್ ಸಂಪ್ರದಾಯದ ಪ್ರಕಾರ , ಗುರು ಅಂಗದ ನು ಈ ಬರಹಗಳನ್ನು ರಚಿಸಿದ್ದು,[೨೧] ಹಾಗು ಸಿಖ್ಖರಲ್ಲಿ ಇದನ್ನು ಜನಪ್ರಿಯಗೊಳಿಸಿದನು. ಮಹ್ಮನ್ ಪ್ರಕಾಶ್ ದಲ್ಲಿ ,ಸಿಖ್ಖರ ಪ್ರಾಚೀನ ಬರಹದಲ್ಲಿ ಇರುವಂತೆ, 'ಗುರು ಅಂಗದ'ನು ಬರಹಗಳನ್ನು ರಚಿಸಿದವನಾಗಿದ್ದು,ಇದನ್ನು 'ಗುರು ನಾನಕ' ರ ಸಲಹೆಯಂತೆ ಬರೆಯಲಾಗಿದೆ. ಇವರು ಜೀವನಾವಧಿಯ ಸಂಸ್ಥಾಪಕರು.[೨೩] ' ಗುರ್ಮುಖಿ'ಎಂಬ ಶಬ್ದ "ಗುರುಗಳ ಬಾಯಿಯಿಂದ ಬಂದ ಶಬ್ದ " ಎಂದು ಭಾಷಾಂತರಿಸಿದೆ. ಈ ಬರಹವನ್ನು , ಸಿಖ್ಖರ ರಚನೆಗಳಲ್ಲಿ ಮೊದಲಿನಿಂದಲೂ ಉಪಯೋಗಿಸಲಾಗಿದೆ. 'ಗುರ್ಮುಖಿ' ಭಾಷಾ ರಚನೆಗೆ ಸಿಖ್ಖರು ಉನ್ನತ ಮಟ್ಟದ ಪಾವಿತ್ರ್ಯತೆ ನೀಡುತ್ತ ಬಂದಿದ್ದಾರೆ.[೨೪] 'ಗುರ್ಮುಖಿ'ಭಾಷಾ ರಚನೆಯನ್ನು ಭಾರತ ರಾಷ್ಟ್ರದ, ಪಂಜಾಬ್ ರಾಜ್ಯದ ಆಡಳಿತ/ಅಧಿಕೃತ ಭಾಷೆಯನ್ನಾಗಿ ಪರಿಗಣಿಸಲಾಗಿದೆ.

ಚಿತ್ರ:Guru Granth Sahib By Bhai Pratap Singh Giani.jpg
'ಆದಿ ಗ್ರಂಥ' ದ ಕೈ ಬರಹದ ಕೊನೆಯ ಭಾಗ - ಪ್ರತಾಪ್ ಸಿಂಗ್ ಗ್ಯಾನಿಯವರಿಂದ , ಹರಮಂದಿರ್ ಸಾಹಿಬ್ ನ ಮೊದಲನೇ ಮಹಡಿಯಲ್ಲಿ ಸ್ಥಾಪಿತವಾಗಿದೆ.

ಗುರು ಗ್ರಂಥ ಸಾಹೀಬ ಅನ್ನು ಸಿಖ್ ಸಂಪ್ರದಾಯದಂತೆ 1430 ಭಾಗಗಳನ್ನಾಗಿ ಅಂಗ್ಸ್ (ಲಿಮ್ಬ್ಸ್ )ವಿಭಜಿಸಲ್ಪಟ್ಟಿದ್ದು, ಮತ್ತೆ 3 ಬೇರೆ ಬೇರೆ ಭಾಗಗಳಾಗಿ ಗುರುತಿಸಲ್ಪಟ್ಟಿದೆ.  :[೨೫]

  1. ಮೂಲ ಮಂತ್ರ ದ ಪೀಟಿಕೆ ವಿಭಾಗ ಜಪ್ಜಿ ಮತ್ತು ಸೋಹಿಲ , ಗುರು ನಾನಕ ರ ರಚನೆ.
  2. ಸಿಖ್ ಗುರುಗಳ ರಚನೆಯನ್ನು ಅನುಸರಿಸಿದ 'ಸಿಖ್ ಭಾಗತ್ಸ್'ಕ್ರಮಾನುಸಾರವಾಗಿ, ರಾಗ ಮತ್ತು ಸಂಗೀತ ಟಿಪ್ಪಣಿಗಳಾಗಿ ಸಂಗ್ರಹ (ಕೆಳಗೆ ನೋಡಿ ).
  3. ಗುರು ತೇಗ್ಹ್ ಬಹಾದ್ದೂರ್ ರವರ ಸಂಗ್ರಹಗಳು.

ಹಾಡುಗಳನ್ನು ಅದರ ಸಂಗೀತದ ಭಾವಾನುಸಾರ ಬೇರೆ ಬೇರೆ ರಾಗ ಗಳಿಂದ ವಿಭಜಿಸಲ್ಪಟ್ಟಿದೆ.[೨೬] ಹಾಡುಗಾರನೊಬ್ಬನ ಹಾಡಿಗೆ ತಕ್ಕಂತೆ ರಾಗ ,ತಾಳದ ಧಾಟಿ ಯನ್ನು ಅನುಸರಿಸಿ, ರಾಗಗಳ ಕ್ರಮಾಂಕವನ್ನು ಗುರುತಿಸಲಾಗಿದೆ. ಈ ರಾಗಗಳ ಜೊತೆಗೆ ಬೇರೆ ಬೇರೆ ಭಾವಗಳು ಸಮಯ ,ದಿನ ಮತ್ತು ವರ್ಷಗಳನ್ನು ಸೇರಿಸಲಾಗಿದೆ.[೨೬] ಸಿಖ್ಖರ ಪದ್ಧತಿಯಲ್ಲಿ 31 ರಾಗಗಳಿದ್ದು,ಅವುಗಳನ್ನು 14 ರಾಗಗಳು ಮತ್ತು 17 ರಾಗಿಣಿ (ಕಡಿಮೆ ಔಸಹಿತ್ಯ ಅಥವಾ ರಾಗಗಳೆಂದು ಸ್ಪಷ್ಟವಿಲ್ಲದ ) ಗಳಾಗಿ ವಿಭಜಿಸಲ್ಪಟ್ಟಿದೆ. ಈ ರಾಗಗಳ ವಿಭಜನೆಯನ್ನು , ಅಂದರೆ ಹಾಡುಗಳನ್ನು ಸಿಖ್ಖರ ಗುರುಗಳು ಮತ್ತು ಸಿಖ್ ಭಾಗತ್ಸ್ ರ ಕ್ರಮಾನುಸಾರವಾಗಿದೆ. ಹಲವು ಬೇರೆ ಬೇರೆ ರಾಗಗಳು ಕ್ರಮವಾಗಿ; : ರಾಗ ಶ್ರೀ , ಮಂಜ್ಹ್ , ಗೌರಿ , ಅಸ , ಗುಜ್ರಿ , ದೇವಗಂಧಾರಿ , ಬಿಹಾಗರ , ವಾದಹಂಸ್ , ಸೋರತ್ , ಧನಶ್ರಿ , ಜೈತ್ಸ್ರಿ , ತೋಡಿ , ಬೈರಾರಿ , ತಿಲಂಗ್ , ಸುಹಿ , ಬಿಲಾವಲ್ , ಗೋಂದ್ (ಗುಂಡ್ ), ರಾಮ್ಕಲಿ , ನಟ -ನಾರಾಯಣ್ , ಮೌಲಿ -ಗೌರ , ಮರು , ತುಖರಿ , ಕೇದಾರ , ಭೈರವ (ಭೈರೋ ), ಬಸಂತ , ಸಾರಂಗ್ , ಮಲಾರ್ , ಕನ್ರ , ಕಲ್ಯಾಣ , ಪ್ರಭಾತಿ ಮತ್ತು ಜೈಜವಂತಿ . ಇದರ ಜೊತೆಗೆ 22 ರಚನೆಗಳು ವರ್ಸ್ ನಲ್ಲಿದ್ದು,(ಸಾಂಪ್ರದಾಯಿಕ ಬಲ್ಲದ್ಸ್ ) ಇವೆ . ಅದರಲ್ಲಿ ಒಂಭತ್ತಕ್ಕೆ ಸ್ಪಷ್ಟವಾದ ರಾಗಗಳಿದ್ದು, ಇನ್ನುಲಿದವಕ್ಕೆ ಬೇರೆ ಯಾವುದೇ ರಾಗದ ಧಾಟಿಗೆ ಹಾಡಬಹುದಾಗಿದೆ.[೨೬]

ಸಿಖ್ಖರ ಸಾಧುತ್ವ

[ಬದಲಾಯಿಸಿ]
ಮೂಲಮಂತ್ರದ ಕೈ-ಬರಹವು ಗುರು ಹರ ರೈ ರವರದ್ದು.

'ಗುರು ಗ್ರಂಥ ಸಾಹೀಬ'ದಲ್ಲಿರುವ ಪಾವಿತ್ರ್ಯತೆಯ ಗುಣವನ್ನು ಎಲ್ಲ ಸಿಖ್ಖರು ಗೌರವಿಸುತ್ತಾರೆ. ಚಿನ್ನದ ದೇವಸ್ಥಾನದ ಸಮಿತಿಯನ್ನು ಹೊರತು ಪಡಿಸಿ, ಇನ್ನ್ಯಾರು 'ಆದಿಗ್ರಂಥ'ದಲ್ಲಿ ಸಿಖ್ಖ್ ಗುರು ಬರೆದಿರುವ ಬರಹಗಳನ್ನು ಬದಲಾವಣೆ ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಇದರಲ್ಲಿ ವಾಕ್ಯರಚನೆ, ಶಬ್ದಗಳು , ವಿನ್ಯಾಸ , ವ್ಯಾಕರಣ ,ಅರ್ಥಗಳಿಂದ ಕೂಡಿವೆ. ಗುರುಗಳೇ ಇದರ ಪಾವಿತ್ರ್ಯತೆಯನ್ನು ಗಮನಿಸಿ ಕಂಡುಕೊಂಡಿದ್ದರು.ಆದರೆ ಅದು ಇತ್ತೀಚಿನ ಸಿಖ್ಖರುಗಳಲ್ಲಿ ಇಲ್ಲ. ಗುರು ಹರ ರಾಯ್ ರವರ ಹಿರಿಯ ಮಗ 'ರಾಮ ರಾಯ್',ಇದರಲ್ಲಿ ಕೆಲವೊಂದು ಶಬ್ದಗಳ ಬದಲಾವಣೆಯನ್ನು ,ಗುರು ನಾನಕರ ಹಾಡುಗಳಲ್ಲಿ ಮಾಡಿದ್ದರಿಂದ,ಮಗನನ್ನೇ ತ್ಯಜಿಸಿದರು.[೨೭] ಗುರು ಹರ ರಾಯ್ ರವರು , ರಾಮ ರಾಯ್ ರನ್ನು ದೆಹಲಿಗೆ ಕಳುಹಿಸಿ, ಮುಘಲ್ ಚಕ್ರವರ್ತಿ ಔರಂಗಜೇಬನ ಮುಂದೆ ಗುರ್ಬನಿ ಯ ಬಗ್ಗೆ ವಿವರಿಸಲು ಕಳುಹಿಸಲಾಯಿತು. ಮೊಘಲ ದೊರೆಯನ್ನು ಸಂಪ್ರೀತಿ ಪಡಿಸಲು, ಈತನು ಗುರು ನಾನಕರ ಹಾಡುಗಳ ರಚನೆಯನ್ನು ಬದಲಾಯಿಸಿದನು. ಈ ವಿಷಯವನ್ನು ಗುರುಗಳಿಗೆ ತಿಳಿಸಲಾಯಿತು. ಮಗನ ಬಗ್ಗೆ ಬೇಸರವಾಗಿ ಮಗನನ್ನು ತ್ಯಜಿಸಿದನು. ವಯಸ್ಸಾದ ನಂತರ , ರಾಮ್ ರಾಯ್ ನನ್ನು , ಗುರು ಗೋಬಿಂದ್ ಸಿಂಗರು ಕ್ಷಮಿಸಿದರು.

ಭಾಷಾಂತರಗಳು

[ಬದಲಾಯಿಸಿ]

ಗುರು ಗ್ರಂಥ ಸಾಹೀಬರ ಸಂಪಾದಿತ ಭಾಷಾಂತರಗಳು ದೊರೆಯುತ್ತವೆ. ಆದರೆ , ಸಿಖ್ಖರು ಗುರ್ಮುಖಿ ಯ ಕಲಿಯುವಿಕೆಯ ಅಗತ್ಯವನ್ನು ಮನಗಂಡಿದ್ದಾರೆ. , ಸಿಖ್ಖರ ಗುರುಗಳು ,ಅಲಂಕರಿಸಿ ಉಪಯೋಗಿಸಲು ಪ್ರಾಮುಖ್ಯತೆ ನೀಡುತ್ತಾರೆ. ಇದರಿಂದಾಗಿ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಹಾಗು ಸಂದೇಶಗಳನ್ನು ಹೊಗಳಲು ಸರಿಹೊಂದುತ್ತದೆ. ಭಾಷಾಂತರಗಳು, 'ಗುರು ಗ್ರಂಥ ಸಾಹೀಬ'ದ ಪೂರ್ವಭಾವಿಯಾದ ಅರ್ಥವನ್ನು ಮಾತ್ರ ಕೊಡುತ್ತದೆ. 'ಗುರು ಗ್ರಂಥ ಸಾಹೀಬ' ವನ್ನು ಅರ್ಥಮಾಡಿಕೊಂಡು ,ಅನುಭವಿಸಲು ಸಿಖ್ಖರು ಗುರ್ಮುಖಿ ಯನ್ನು ಕಲಿಯಲು ಪ್ರೇರೇಪಿಸಲಾಗುತ್ತದೆ.

ಅನುವಾಚನ/ಪಠನ

[ಬದಲಾಯಿಸಿ]
ಗ್ರಂಥಿ ಪಠಣವು ಗುರು ಗ್ರಂಥ ಸಾಹಿಬದಿಂದ

'ಆದಿ ಗ್ರಂಥ' ವನ್ನು ಯಾವಾಗಲೂ, ಗುರುದ್ವಾರದ ಮಧ್ಯ ಭಾಗದಲ್ಲಿ ,ಎತ್ತರದ ತಖ್ತ್ (ಸಿಂಹಾಸನ )ಸ್ಥಳದಲ್ಲಿ ಇಡಲಾಗುತ್ತದೆ. 'ಗುರು ಗ್ರಂಥ' ಕ್ಕೆ ಅತ್ಯುತ್ತಮ ಗೌರವವನ್ನು ಮತ್ತು ಮರ್ಯಾದೆಯನ್ನು ನೀಡಲಾಗುತ್ತದೆ. 'ಗುರು ಗ್ರಂಥ'ದ ಸನ್ನಿಧಿಯಲ್ಲಿ ಸಿಖ್ಖರು ತಮ್ಮ ಶಾಲೆಯನ್ನು ಮುಚ್ಚಿಕೊಂಡು,ಕಾಲಿನಿಂದ 'ಶೂ'ಗಳನ್ನೂ ಕಳಚಿ ಗೌರವ ಸಲ್ಲಿಸುತ್ತಾರೆ. ಅದರ ಸನ್ನಿಧಿಗೆ ಬರುವ ಮುಂಚೆ , ಗ್ರಂಥಕ್ಕೆ ತಲೆಯನ್ನು ಬಾಗಿಸುತ್ತಾರೆ. ' ಗುರು ಗ್ರಂಥ'ವನ್ನು ಸಾಮಾನ್ಯವಾಗಿ ತಲೆಯ ಮೇಲಿಟ್ಟುಕೊಂಡು ಗೌರವದ ದೃಷ್ಟಿಯಿಂದ, ಕೈಗಳನ್ನು ತೊಳೆಯದೇ ಮುಟ್ಟುವುದಿಲ್ಲ, ಹಾಗು ನೆಲದ ಮೇಲೆ ಇಡುವುದಿಲ್ಲ.[೨೮] ಯಾವುದೇ ಗುರುದ್ವಾರದ ಕೇಂದ್ರ ಬಿಂದುವೇ 'ಗುರು ಗ್ರಂಥ ಸಾಹೀಬ'. ಸಿಖ್ಖರ ಗುರುಗಳಿಂದ ಬಂದ ಸಂಪ್ರದಾಯದಂತೆ, ಎಲ್ಲಾ ರೀತಿಯ ಗೌರವಾದರಗಳನ್ನು ನೀಡಲಾಗುತ್ತದೆ.ಮತ್ತು ಎತ್ತರದ ಸ್ಥಳದಲ್ಲಿ ಇರಿಸಲಾಗುತ್ತದೆ. ಹಾಗು ಬಂದವರೆಲ್ಲರೂ ಅದರ ಕೆಳಗೆ ಕೂರುತ್ತಾರೆ. ಅತ್ಯತ್ತಮ ವಸ್ತುವಿನಿಂದ ಮಾಡಲ್ಪಟ್ಟ ಚೌರ (ಗಾಳಿ ಬೀಸುವ ಒಂದು ವಿಧಾನ )ದಲ್ಲಿ ಗಾಳಿ ಹಾಕುತ್ತಾರೆ.ಅದರ ಮೇಲೆ ಒಂದು 'ಕಾನೋಪಿ' ಯನ್ನು ಇಡಲಾಗುತ್ತದೆ. ಭಕ್ತ ಜನರು ಗುರುಗಳಿಗೆ ತಲೆಬಾಗಿ ಗೌರವದಿಂದ ನಮಿಸುತ್ತಾರೆ. ಗ್ರಂಥಿ ಯೊಬ್ಬನು 'ಗುರು ಗ್ರಂಥ ಸಾಹೀಬ'ದ ರಕ್ಷಣೆಯನ್ನು ಮಾಡುತ್ತಾನೆ. ' ಗುರು ಗ್ರಂಥ' ಗಳನ್ನು ನೋಡಿ ಹಾಡುವ ಹಾಗು ಸಿಖ್ಖರ ಪ್ರಾರ್ಥನೆಗೆ ಅವನೇ ಜವಾಬ್ದಾರನಾಗುತ್ತಾನೆ. 'ಗುರು ಗ್ರಂಥ' ದ ಗಂಭೀರ ಲಕ್ಷಣದ ಹೊಣೆ ಹಾಗು ಭಕ್ತರು ನೀಡುವ ಹಣದ ಸಂಗ್ರಹಣೆಯ ಅನಿವಾರ್ಯತೆ 'ಗ್ರಂಥಿ'ಯದಾಗಿರುತ್ತದೆ. ಈ ಕಾರ್ಯವನ್ನು ಬೇರೆಯವರು ಯಾರೂ ಮಾಡಲಾರರು. ಈ 'ಗ್ರಂಥ' ವನ್ನು ಬೆಂಕಿ , ಧೂಳು , ಮಾಲಿನ್ಯ ಮುಂತಾದವುಗಳಿಂದ ರಕ್ಷಿಸಲು, ರುಮಾಲ ಎಂದು ಕರೆಯುವ ರೇಷ್ಮೆ ಹೊದಿಕೆಯಿಂದ ಮುಚ್ಚಲಾಗುತ್ತದೆ. ರುಮಾಲ ದ ಕೆಳಗೆ ಮಂಜಿ ಸಾಹಿಬ್ ನಲ್ಲಿ,ಮತ್ತೆ ಹೊರಗೆ ತೆಗೆಯುವವರೆಗೆ [೨೮] ವಿರಮಿಸುತ್ತದೆ.

ಮುದ್ರಣ

[ಬದಲಾಯಿಸಿ]

ಅಮೃತಸರ ದಲ್ಲಿರುವ ಸಿಖ್ಖರ ಧಾರ್ಮಿಕ ಅಧಿಕೃತ ಸಂಸ್ಥೆ 'ಗುರು ಗ್ರಂಥ ಸಾಹೀಬ'ದ ಸಂಪಾದಕೀಯವನ್ನು ಮಾಡುತ್ತದೆ. 'ಗುರು ಗ್ರಂಥ ಸಾಹೀಬ'ದ ಪ್ರಪಂಚದಾದ್ಯಂತ ಏಕೈಕ ಪ್ರಕಟಣಾಗಾರಾರು ಈ ಸಂಸ್ಥೆಯವರೇ ಆಗಿರುತ್ತಾರೆ. ಸಂಪಾದಿತ ಪ್ರತಿಗಳನ್ನು ತೆಗೆಯುವಲ್ಲಿ ಹೆಚ್ಚಿನ ಗಮನವನ್ನು ಹಾಗು ಶಿಸ್ತು ಬದ್ಧ ಕಾನೂನಿನ್ವಯ ನಿಯಮಗಳನ್ನು ಈ ಸಂದರ್ಭದಲ್ಲಿ ಪಾಲಿಸುತ್ತಾರೆ.[೨೯] ಇಪ್ಪತ್ತನೆಯ ಶತಮಾನಕ್ಕೆ ಮುಂಚೆ ,'ಗುರು ಗ್ರಂಥ ಸಾಹೀಬ' ನ ಕೈ-ಬರಹ ಪ್ರತಿಗಳು ಮಾತ್ರ ಲಭ್ಯವಿತ್ತು. 1864 ರಲ್ಲಿ ಮೊದಲ ಬಾರಿಗೆ ಮುದ್ರಣದ ಪ್ರತಿಯು ಲಭ್ಯವಾಯಿತು. 20 ನೇ ಶತಮಾನದ ಆರಂಭದಿಂದ 'ಗುರು ಗ್ರಂಥ ಸಾಹೀಬ' ನ 1430 ಪುಟಗಳಿಗೆ ಸಂಪಾದಕೀಯವಾಗಿದೆ.' ಶ್ರೀ ಗುರು ಗ್ರಂಥ ಸಾಹೀಬ ಜೀ'ಯವರು ಪ್ರಸ್ತುತ ಅಮೃತಸರ ದ ,ಗುರುದ್ವಾರ ರಾಮ್ಸರ್ ನ ತಳಭಾಗದಲ್ಲಿರುವ ಪ್ರಮಾಣೀಕರಿಸಿದ ಮುದ್ರಣಾಲಯ ದಲ್ಲಿ ಮುದ್ರಿಸುತ್ತಿದ್ದು, ಪರಿಣಾಮವಾಗಿ ಯಾವುದೇ ಪವಿತ್ರ ಪುಸ್ತಕಗಳು ಮುದ್ರಣಗಳಿಂದ "ಹಾಳಾಗಿದ್ದು" , ಅವುಗಳನ್ನು ಗೊಇಂದ್ವಾಲ್ [೩೦] ನಲ್ಲಿ ದಹನ ಮಾಡಲಾಗಿದೆ. ಆದರೂ , 'ಶ್ರೀ ಗುರು ಗ್ರಂಥ ಸಾಹೀಬ ಜೀ' ಪ್ರಮಾಣೀಕೃತವಲ್ಲದ ಪ್ರತಿಗಳನ್ನು ಸಹ ಸಂಪಾದೀಕರಿಸಿರುತ್ತಾರೆ .

ಹರಿದ ಪ್ರತಿಗಳ ಚಿಕಿತ್ಸೆ

[ಬದಲಾಯಿಸಿ]

ಉಪಯೋಗಕ್ಕೆ ಬರದ ರೀತಿಯಲ್ಲಿ 'ಗುರು ಗ್ರಂಥ ಸಾಹೀಬ' ನ ಹರಿದ ಪ್ರತಿಗಳು, ಮುದ್ರಣದ ಸಮಯದಲ್ಲಿ ಅಳಿದ-ಉಳಿದ ಪ್ರತಿಗಳು. ಇವುಗಳನ್ನು, ಸತ್ತ ಮನುಷ್ಯನ ಶವಸಂಸ್ಕಾರ ಮಾಡಿದಂತೆ ಸಂಸ್ಕಾರ ಮಾಡಲಾಗುತ್ತದೆ. ಅಂತಹ ದಹನ ಕ್ರಿಯೆಯನ್ನು ಅಗನ್ ಭೇಟ್ ಎಂದು ಕರೆಯಲಾಗುತ್ತದೆ.

'ಗುರು ಗ್ರಂಥ ಸಾಹೀಬ' ನ ಕೈ ಬರಹದ ಗಣಕೀಕರಣ

[ಬದಲಾಯಿಸಿ]

ಪಂಜಾಬ್ ಡಿಜಿಟಲ್ ಲೈಬ್ರರಿ (ಪಿ ಡಿ ಎಲ್ ) ಯು, ನನಕ್ಷಾಹಿ ಟ್ರಸ್ಟ್ ಜೊತೆಗೂಡಿ ಶತಮಾನದಷ್ಟು ಹಳೆಯದಾದ ಕೈ ಬರಹದ ಗ್ರಂಥವನ್ನು 2003 ರಲ್ಲಿ ಗಣಕೀಕೃತಿಸಲಾಯಿತು.

' ಶ್ರೀ ಗುರು ಗ್ರಂಥ ಸಾಹೀಬ' ದ ಬಗ್ಗೆ ಸಿಖ್ಖರಲ್ಲದವರ ಅಭಿಪ್ರಾಯಗಳು

[ಬದಲಾಯಿಸಿ]

ಗುರುಗಳ ಉಪನ್ಯಾಸದ ಬಗ್ಗೆ ಮಾಕ್ಸ್ ಅರ್ಥರ್ ಮಕೋಲಿಫ್ ಹೇಳುವುದೇನೆಂದರೆ::ಬೇರೆಲ್ಲಾ ತತ್ವಗಳಿಗೆ ಹಾಗು ಅದರ ಪದ್ಧತಿಗಳಿಗೆ ಹೋಲಿಸಿದರೆ, ಸಿಖ್ಖರ ಧರ್ಮ ಅದೆಲ್ಲಕ್ಕಿಂತ ಭಿನ್ನವಾಗಿದ್ದು, ತನ್ನ ತತ್ವ ಸಿದ್ಧಾಂತ ಗಳ ರೀತಿ-ನೀತಿಗಳಿಂದ ಸತ್ಯ ವಾಗಿದೆ. .ಪ್ರಪಂಚದ ಎಲ್ಲಾ ಉಪನ್ಯಾಸಕರಿಗೆ ತಿಳಿದಿರುವಂತೆ, ತಮ್ಮದೇ ಆದ ಸ್ವಂತ ರಚನೆಯನ್ನು ಬಿತ್ತುಹೊಗದೆ , ನಮಗೆಲ್ಲಾ ತಿಳಿದಿರುವಂತೆ ಸಂಪ್ರದಾಯಬದ್ಧ ಉಪನ್ಯಾಸಗಳನ್ನು ನೀಡಿದ್ದು, ಅಥವಾ 'ಎರಡನೇ - ಕೈ' ನ ವಿಷಯಗಳನ್ನು ತಿಳಿಸಿರುತ್ತಾರೆ. ಪೈಥಾಗೊರಸ ನು ತನ್ನ ತತ್ವ ಗಳ ಬಗ್ಗೆ ಬರೆದಿದ್ದು, ಅವನ ಬರಹಗಳು ನಮಗೆ ತಲುಪದೇ ಇದ್ದಿದ್ದರೆ; ಸಾಕ್ರಟೀಸ್ ನ ಉಪನ್ಯಾಸಗಳು ಪ್ಲೇಟೋ ಮತ್ತು ಕ್ಸೆನೋಫೋನ್ ಬರಹಗಳ ಮೂಲಕ ತಿಳಿಯುತ್ತಿತ್ತು. ಬುದ್ಧ ನು ತನ್ನ ಉಪನ್ಯಾಸಗಳನ್ನು ಬರಹ ರೂಪದಲ್ಲಿ ಬಿಟ್ಟು ಹೋಗಲಿಲ್ಲ . ಯೂರೋಪಿನ ಕಾನ್ಫುಶಿಯಸ್ ಎಂದು ಗುರುತಿಸಲ್ಪಟ್ಟ, ಕುಂಗ್ಫು -ತ್ಜೆ,ಯಾವುದೇ ರೀತಿಯ ದಾಖಲೆಗಳನ್ನು ಬಿಟ್ಟು ಹೋಗಲಿಲ್ಲ.ಆದರೆ ನೀತಿ ಮತ್ತು ಸಾಮಾಜಿಕ ಪದ್ಧತಿಯ ಬಗ್ಗೆ ಬೆಳಕು ಚೆಲ್ಲಿದ್ದಾನೆ. ಕ್ರಿಶ್ಚಿಯನ್ ಧರ್ಮ ಸಂಸ್ಥಾಪಕರು ತಮ್ಮ ಬೋಧನೆಗಳನ್ನು ಬರಹ ರೂಪಕ್ಕಿಳಿಸದೆ, ಮ್ಯಾಥ್ಯು , ಮಾರ್ಕ್ ,ಲ್ಯುಕ್ ಮತ್ತು ಜಾನ್ ಹೇಳಿದ ವಿಷಯಗಳನ್ನು ನಂಬಿಕೊಂಡು ಬರಲಾಗಿದೆ. ಅರೇಬಿಯಾದ ಪ್ರವಾದಿಗಳು ಕುರಾನ್ ಅಧ್ಯಾಯಗಳ ಬರಹಕ್ಕೆ ಇಳಿಯದೆ, ಅದನ್ನೇ ಹೇಳುತ್ತಾ ಬಂದಿದ್ದು, ಅವೆಲ್ಲವನ್ನು ಅವರ ಅನುಯಾಯಿಗಳು ಹಾಗು ಹಿಂಬಾಲಕರು ಬರಹದ ಮೂಲಕ ಸಂಪಾದಿಸಿರುತ್ತಾರೆ. ಆದರೆ ಸಿಖ್ಖರ ಗುರುಗಳ ರಚನೆಗಳನ್ನು ರಕ್ಷಿಸಲಾಗಿದ್ದು,ಅವರು ಹೇಳಿರುವ ಉಪನ್ಯಾಸದ ಮೊದಲನೇ ಮೂಲ ವಿಷಯದ ಪ್ರತಿಯು ತಿಳಿದುದೇ ಆಗಿದೆ. ಗುರು ಗ್ರಂಥ ಸಾಹೀಬ' ನ ಮೊದಲ ಇಂಗ್ಲೀಷಿನ ಭಾಷಾಂತರವನ್ನು/ಆವೃತ್ತಿಯನ್ನು ಪಡೆದ ನೊಬೆಲ್ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಪರ್ಲ್ ಬಕ್ ಈ ಕೆಳಕಂಡಂತೆ ವಿವರಣೆ ನೀಡುತ್ತಾರೆ.

.... ನಾನು ಹಲವಾರು ಧರ್ಮದ ವಿಚಾರಗಳನ್ನು ಓದಿದ್ದೇನೆ, ಆದರೆ ಈ ಗ್ರಂಥದಲ್ಲಿ ಬರೆದಿರುವ ವಿಷಯಗಳು ಮನಸ್ಸಿಗೆ ಮತ್ತು ಹೃದಯಕ್ಕೆ ತಟ್ಟಿದಂತೆ ಯಾವುದೂ ತಟ್ಟುವುದಿಲ್ಲ. ಬರಹ ಧೀರ್ಘವಾಗಿದ್ದರೂ ವಿಚಾರಗಳು ಮಾತ್ರ ಸ್ಪಷ್ಟವಾಗಿವೆ.ಮನುಷ್ಯನ ಹೃದಯವನ್ನು ತಟ್ಟುವಲ್ಲಿ ,ದೇವರ ಬಗ್ಗೆ ಇರುವ ಒಳ್ಳೆಯ ಭಾವನೆ ಎಲ್ಲರನ್ನು ಮುಟ್ಟುತ್ತದೆ.ಮನುಷ್ಯನ ಪ್ರಾಯೋಗಿಕ ಅಗತ್ಯಗಳನ್ನು ಗುರುತಿಸಿ ಪೂರೈಸುತ್ತವೆ. ಈ ಗ್ರಂಥವು ಆಧುನಿಕತೆಯಿಂದ ಕೂಡಿದವುಗಳಾಗಿದ್ದು,ಆಶ್ಚರ್ಯದಿಂದ ಕೂಡಿದ್ದು, ಆಧುನಿಕತೆಗೆ ಹೆಚ್ಚು ಹತ್ತಿರವಾಗಿದ್ದು, 16 ನೇ ಶತಮಾನಕ್ಕೆ ಪೂರಕವಾಗಿದೆ.ಸಂಶೋಧಕರು ಭೂಮಿಯ ಬಗ್ಗೆ ಸಂಶೋಧಿಸುತ್ತಾ, ಮನುಷ್ಯ ಜೀವಿ ಇರುವ ಏಕೈಕ ಗ್ರಹದ ಬಗ್ಗೆ ಮನುಷ್ಯನ ನಿರಂಕುಶ ಪ್ರಭುತ್ವದ ಸಂದರ್ಭದಲ್ಲಿ ಇದರ ಆಗಮನವಾಗಿದೆ. ಬಹುಶಃ 'ನಾವೆಲ್ಲಾ ಒಂದು'ಎಂಬ ಭಾವನೆಯನ್ನು ಪ್ರಕಟಿಸಿದ ಶಕ್ತಿಯೇ ಈ ಗ್ರಂಥದ ಸಾರ. ಯಾವುದೇ ಧರ್ಮದ, ಯಾವುದೇ ವ್ಯಕ್ತಿಯ ಅಥವಾ ಧರ್ಮ ರಹಿತರ ಬಗ್ಗೆ ಹೇಳುತ್ತಾ ಹೋಗುತ್ತದೆ. ಇದು ಮಾನವ ಹೃದಯದ ಬಗ್ಗೆ ಮಾತನಾಡುತ್ತದೆ ಮತ್ತು ಹುಡುಕಾಟದ ಮನಸ್ಸಿನ ಬಗ್ಗೆ ...
    • ( 'ಗುರು ಗ್ರಂಥ ಸಾಹೀಬ'ನ ಇಂಗ್ಲೀಷಿನ ಆವೃತ್ತಿ 1960 ರಲ್ಲಿ ಗೋಪಾಲ್ ಸಿಂಗ್ ರಿಂದ ಭಾಷಾಂತರ ಪ್ರಕ್ರಿಯೆ )(bold added later /ನಂತರದಲ್ಲಿಬೋಲ್ಡ್ ಅನ್ನು seri )

ಗುರು ಗ್ರಂಥ ಸಾಹೀಬರ ಸಂದೇಶಗಳು

[ಬದಲಾಯಿಸಿ]

ಅರ್ಥಗರ್ಭಿತವಾಗಿ ಮಾಡಿರುವ ಕೆಲವು ಮುಖ್ಯ ಸಂದೇಶಗಳು ಹೀಗಿವೆ : -

  1. ಪ್ರಪಂಚದಲ್ಲಿರುವ ಎಲ್ಲಾ ವ್ಯಕ್ತಿಗಳು ಸಮಾನರು
  2. ಸ್ತ್ರೀಯರು ಪುರುಷರಿಗೆ ಸಮಾನರು
  3. ಎಲ್ಲರಿಗೂ ಒಬ್ಬನೇ ದೇವರು
  4. ಸತ್ಯವಾಗಿ ನುಡಿಯಿರಿ ಮತ್ತು ಜೀವಿಸಿರಿ.
  5. ಐದು ದುರ್ಮಾರ್ಗಗಳನ್ನು ತ್ಯಜಿಸಿರಿ.
  6. ದೇವರ ಆಜ್ಞೆಯಂತೆ ನಡೆಯಿರಿ (ದೇವರೊಬ್ಬನ ಇಚ್ಚಾಶಕ್ತಿ )
  7. ಮನುಷ್ಯತ್ವ ,ಕರುಣೆ ,ಅನುಕಂಪ ,ಪ್ರೀತಿ , ಮುಂತಾದವುಗಳನ್ನು ಅಭ್ಯಾಸ ಮಾಡಿರಿ.

ಎಚ್ಚರ ಮತ್ತು ಮೂಲಪ್ರತಿ

[ಬದಲಾಯಿಸಿ]

ವೈಯಕ್ತಿಕ ನಡತೆ

[ಬದಲಾಯಿಸಿ]

ಯಾವುದೇ ವ್ಯಕ್ತಿಯು, ಯಾವುದೇ ಸೇವೆ ಅಥವಾ ಸೇವಾ ಯನ್ನು ಮಾಡುವಾಗ ಈ ಕೆಳಕಂಡ ವಿಷಯಗಳನ್ನು ಗಮನಿಸಬೇಕು.  :

  • ತಲೆಯನ್ನು ಯಾವಾಗಲೂ ಮುಚ್ಚಿರಬೇಕು.
  • ಗುರುವಿನ ಕೋಣೆಯ ಹೊರಗೆ 'ಶೂ' ಮತ್ತು 'ಸಾಕ್ಸ್' ಗಳನ್ನು ಕಳಚಿಡಬೇಕು.
  • ಶುಚಿತ್ವಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಆದ್ಯತೆಯನ್ನು ಮೂಲಭೂತವಾಗಿ ನೀಡಬೇಕು.
  • ಸೇವೆಯಲ್ಲಿರುವಾಗ ತಿನ್ನುವುದನ್ನು ಮತ್ತು ಕುಡಿಯುವುದನ್ನು ಶಿಸ್ತಾಗಿ ಪರಿಗ್ರಹಿಸಬೇಕು /ತಳ್ಳಿಹಾಕಬೇಕು.
  • ಗುರುಗಳ ಸೇವೆಯ ಸಂದರ್ಭದಲ್ಲಿ ನಿಶ್ಯಬ್ದವಾಗಿರಬೇಕು.
  • ಉಪಸ್ಥಿತರಿರುವ ಬೇರೆಯವರಿಗೆ ಗೌರವ ತೋರಿಸಬೇಕು. ಸೇವೆ ಮಾಡುವ ಸಂದರ್ಭದಲ್ಲಿ ಬೇಧಗಳಿರಬಾರದು.

ಪರಿಸರ

[ಬದಲಾಯಿಸಿ]
  • ಕೊಠಡಿಯನ್ನು ಸ್ವಚ್ಚವಾಗಿಟ್ಟಿರಬೇಕು.
  • 'ಗುರು ಗ್ರಂಥ'ಕ್ಕೆ ಹೊದಿಸಿದ ಹೊದಿಕೆ ಶುಚಿಯಾಗಿರಬೇಕು, ಪ್ರತಿದಿನ ಬದಲಾಯಿಸಬೇಕು. ಕೆಲವರು ಅಲಂಕಾರಿಕ ಬಟ್ಟೆಗಳನ್ನು ಆಯ್ಕೆ ಮಾಡುವವರಿದ್ದು, ಆದರೆ ಇದರ ಅಗತ್ಯವಿರುವುದಿಲ್ಲ.
  • 'ಗುರು ಗ್ರಂಥ'ವನ್ನು ಯಾವಾಗಲೂ 'ಮಂಜಿ ಸಾಹಿಬ್' (ಕೈ ನಿಂದ ಮಾಡಲ್ಪಟ್ಟ ಹಾಸಿಗೆಯಂತಹ ವೇದಿಕೆ ) ನಲ್ಲಿ ಇಡಬೇಕು.
  • ' ಗುರು ಗ್ರಂಥ' ದ ಮೇಲೆ ಹೊದಿಕೆ ಹೊದಿಸಬೇಕು.
  • 'ಗುರು ಗ್ರಂಥ' ದ ಪಕ್ಕದಲ್ಲಿ ಚಾಮರ ಇಟ್ಟು, (ಕೃತಕ ಕೂದಲುಗಳಿಂದ ತಯಾರಿಸಿದ ಬೀಸಣಿಗೆಯನ್ನು ಗುರು ಗ್ರಂಥ ಸಾಹಿಬಾದ ಮೇಲಿಡುವುದು ) ಒಂದು ಸಣ್ಣ ವೇದಿಕೆ ಮಾಡಿ, ಮನೆಯ ಕರಃ ಪ್ರಸಾದವನ್ನು (ಪೂಜಾರ್ಹ ಆಹಾರವನ್ನು)ಅದರ ಮೇಲೆ ಇಡಬೇಕು, ಬೇರೆ ಬೇರೆ ಕೊಡುಗೆಗಳನ್ನು ಇಡಬಹುದು.

ಚಲನೆಯಲ್ಲಿ

[ಬದಲಾಯಿಸಿ]

'ಗುರು ಗ್ರಂಥ ಸಾಹೀಬ'ಚಲನೆಯಲ್ಲಿದ್ದಾಗ ಈ ಕೆಳಕಂಡವುಗಳನ್ನು ಗಮನಿಸಲಾಯಿತು:

  • ಪ್ರಯಾಣದ ಸಮಯದಲ್ಲಿ , ಐವರು ಪ್ರಮುಖ ಸಿಖ್ಖರು 'ಗುರು ಗ್ರಂಥ ಸಾಹಿಬ್ 'ರ ಜೊತೆಗಿರುತ್ತಾರೆ.
  • ಮತ್ತೊಬ್ಬ ಸಿಖ್ಖ ಚಾಮರ ಸೇವೆಯನ್ನು ಮಾಡುತ್ತಾನೆ.
  • 'ಗುರು ಗ್ರಂಥ ಸಾಹೀಬ' ಅನ್ನು ಒಯ್ಯುವ ಮುಖ್ಯ ಸಿಖ್ಖ್ ಶುಚಿಯಾದ ರುಮಾಲನ್ನು ಅವನ ಅಥವಾ ಅವಳ ತಲೆಗೆ ಸುತ್ತಿದ್ದು,ಜೋಪಾನವಾಗಿ, ಗೌರವಯುತವಾಗಿ, 'ಗುರು ಗ್ರಂಥ ಸಾಹಿಬ್'ಅನ್ನು ಆ ರುಮಾಲಿನ ಮೇಲೆ ಇಡಬೇಕು. ಎಲ್ಲಾ ಸಮಯದಲ್ಲಿಯೂ , ಗುರು ಗ್ರಂಥ ಸಾಹಿಬ್ ಅನ್ನು ಸಣ್ಣ ರುಮಾಲಿನಿಂದ ಮುಚ್ಚಿಡಬೇಕು.ಅಂದರೆ, ಗುರು ಗ್ರಂಥ ಸಾಹಿಬ್ ಅನ್ನು ಯಾವಾಗಲೂ ಮುಚ್ಚಿಟ್ಟಿರಲಾಗುತ್ತದೆ. 'ಗುರು ಗ್ರಂಥ ಸಾಹಿಬ್'ಅನ್ನು ಒಯ್ಯುವ ಸಿಖ್ಖನು "ಕೇಶಿ ಇಷ್ನಾನ್ " ಅಥವಾ ಶುಚಿಯಾದ ಕೂದಲನ್ನು ಗೌರವ ದೃಷ್ಟಿಯಿಂದ ಹೊಂದಿರಬೇಕು.
  • "ವಾಹೇಗುರು "ಪಠನ ನಿರಂತರವಾಗಿರಬೇಕು.

ಇತರ ಆಲೋಚನೆಗಳು

[ಬದಲಾಯಿಸಿ]
  • ಗುರುಗಳ ವೇದಿಕೆಯ ಎತ್ತರಕ್ಕಿಂತ ಮೇಲೆ ಯಾರೂ ಕುಳಿತಿರಬಾರದು.

ಗುರು ಗ್ರಂಥ ಸಾಹಿಬ್, ಪ್ರಪಂಚ ವಿಶ್ವವಿದ್ಯಾನಿಲಯ

[ಬದಲಾಯಿಸಿ]

ಜುಲೈ 2009 ರಲ್ಲಿ ಸಾಂಪ್ರದಾಯಿಕವಾಗಿ ಗುರು ಗ್ರಂಥ ಸಾಹಿಬ್ ಪ್ರಪಂಚ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಲಾಗುವುದು. ಈ ಬಗ್ಗೆ 'ಶ್ರೀ ಗುರು ಗ್ರಂಥ ಸಾಹಿಬ್ ' ನ 14 ನೇ ಶತಮಾನೋತ್ಸವದ ಸ್ಮಾರಕ ಟ್ರಸ್ಟಿನಿಂದ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಭೆಯ ಅಧ್ಯಕ್ಷತೆಯನ್ನು ಪಂಜಾಬಿನ ಮುಖ್ಯ ಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ವಹಿಸಿದ್ದರು. ಮುಖ್ಯ ಮಂತ್ರಿಗಳ ಪತ್ರಿಕಾ ಸಲಹೆಗಾರರಾದ , ಶ್ರೀಯುತ . ಹರಚರಣ್ ಬೈನ್ಸ್ ಹೇಳಿಕೆಯೊಂದನ್ನು ನೀಡಿ ,'ಗುರು ಗ್ರಂಥಸಾಹಿಬ್'ನ ಅಧ್ಯಯನದ ಜೊತೆ ಜೊತೆಗೆ ವಿಶ್ವವಿದ್ಯಾನಿಲಯದಲ್ಲಿ ಬೇರೆ ಬೇರೆ ಶಿಕ್ಷಣವನ್ನು ಆಧುನಿಕ ತಂತ್ರಜ್ಞಾನಗಳಾದ ನಾನೋ - ಟೆಕ್ನಾಲಜಿ , ಬಯೋ - ಟೆಕ್ನಾಲಜಿ , ಇನ್ಫಾರ್ಮಶನ್ ಟೆಕ್ನಾಲಜಿ ಮತ್ತು ಬಿಸಿನೆಸ್ ಮ್ಯಾನೇಜ್ಮೆಂಟ್ ಹಾಗು ಇತರ ಧರ್ಮಗಳ ಅಧ್ಯಯನ ನಡೆಸಲಾಗುವುದೆಂದು ತಿಳಿಸಿದರು. ಈ ಕೋರ್ಸುಗಳನ್ನು ಶೈಕ್ಷಣಿಕ ವರ್ಷದ ಉದ್ಘಾಟನಾ ಸಮಯದಲ್ಲಿ, ಮುಂದಿನ ವರ್ಷದಲ್ಲಿ ಆರಂಭಿಸಲಾಗುವುದು. ತದ ನಂತರ , ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯದಲ್ಲಿ ಎಮೆರ್ಜಿಂಗ್ ಟೆಕ್ನಾಲಜಿ , ಬೇಸಿಕ್ ಸೈನ್ಸ್, ಮ್ಯಾನೇಜ್ಮೆಂಟ್ , ಸೋಶಿಯಲ್ ಸೈನ್ಸ್ , ಆರ್ಟ್ಸ್ , ಭಾಷೆ , ಇಂಜಿನಿಯರಿಂಗ್ , ವಾಸ್ತುಶಿಲ್ಪ , ಕಾನೂನು ಮತ್ತು ಸಾಮಾಜಿಕ ನ್ಯಾಯ ವಿಭಾಗಗಳನ್ನು ಸೃಷ್ಟಿಸಲು ನಿರ್ಧರಿಸಲಾಗುವುದು.. ಕಟ್ಟಡದ ನಿರ್ಮಾಣವನ್ನು ಕೂಡಲೇ ಪ್ರಾರಂಭಿಸಲಾಗುವುದು.

ಬೇರೆ ವಿಶ್ವವಿದ್ಯಾನಿಲಯಗಳು

[ಬದಲಾಯಿಸಿ]

ಪಂಜಾಬಿ ವಿಶ್ವವಿದ್ಯಾನಿಲಯಪಟಯಾಲ ವು , ಗುರು ಗ್ರಂಥ ಸಾಹಿಬರ ವಿಭಾಗವನ್ನು ತೆರೆದು, ಶೈಕ್ಷಣಿಕ ವರ್ಷದಿಂದ ಕೋರ್ಸುಗಳನ್ನು ಆರಂಭಿಸಲಾಗುವುದು. 1962 ರಲ್ಲಿ ಈ ವಿಭಾಗವನ್ನು ಆರಂಭಿಸಲಾಯಿತು. ಸಿಖ್ಖಿಸಮ್ ಶ್ರುತ ಪಡಿಸುವ ಧರ್ಮವಾದ್ದರಿಂದ ಸಿಖ್ಖಿಸಂ ಬಗ್ಗೆ ಸಂಶೋಧನೆ ನಡೆಸುವ ವಿಭಾಗವನ್ನು ತೆರೆಯಲಾಗಿದೆ.ಸಿಖ್ಖರ ಗ್ರಂಥಗಳ ಬಗ್ಗೆಯೂ ಸಂಶೋಧನೆ ಇಲ್ಲಿ ಆಗಿದೆ.[೩೧] ಈ ವಿಭಾಗದ ಉದ್ದೇಶವೆಂದರೆ ಸಿಖ್ಖಿಸಂ ಬಗ್ಗೆ ಶೈಕ್ಷಣಿಕ ಶಿಸ್ತಿನಿಂದ ಅಧ್ಯಯನ ನಡೆಸಿ, ಇದರಿಂದ ವಿದ್ಯಾರ್ಥಿಗಳಿಗೆ ಸಿಖ್ಖರ ಅಧ್ಯಯನ ನಡೆಸಲು ಅವಕಾಶವಾಗಿದೆ. ಇಲಾಖೆಯ ಸಂಶೋಧನಾ ವಿಭಾಗದಲ್ಲಿ ಸಿಖ್ಖರ ತತ್ವ ಮತ್ತು ಸಿಖ್ಖರ ತತ್ವಜ್ಞಾನದ ಸಂಶೋಧನೆ ಪ್ರಮುಖವಾಗಿದೆ.[೩೧] ವಿಶ್ವವಿದ್ಯಾನಿಲಯವು ತನ್ನ ಶೈಕ್ಷಣಿಕ ಕೋರ್ಸುಗಳನ್ನು ಆನ್-ಲೈನ್ ಮೂಲಕ 'ಗುರು ಗ್ರಂಥ ಸಾಹಿಬ್'ನ ಅಡ್ವಾನ್ಸ್ಡ್ ಸ್ಟಡೀಸ್ ಗೆ ಕೆಲಸ ಮಾಡಲು ಆರಂಭಿಸಿದೆ. ಸಿಖ್ಖರ ಧರ್ಮದ ಬಗ್ಗೆ ತಿಳಿಯಲು ಈ ಶೈಕ್ಷಣಿಕ ಕೋರ್ಸು ಅಂತರ ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ. ಶೈಕ್ಷಣಿಕ ಪರೀಕ್ಷಾ ಪತ್ರಿಕೆಗಳನ್ನು "ದಿ ಅಡ್ವಾನ್ಸ್ಡ್ ಸೆಂಟರ್ ಫಾರ್ ಡೆವೆಲಪ್ಮೆಂಟ್ ಆಫ್ ಪಂಜಾಬಿ ಲ್ಯಾಂಗ್ವೇಜ್ , ಲಿಟರೇಚರ್ ಅಂಡ್ ಕಲ್ಚರ್ " ರೂಪಿಸುತ್ತದೆ.[೩೨]

ಸಿಖ್ಖ್ ಗುರುಗಳ ಪಟ್ಟಿ

[ಬದಲಾಯಿಸಿ]
# Name Date of birth Guruship on Date of ascension Age
1 Guru Nanak 15 April 1469 20 August 1507 22 September 1539 69
2 Guru Angad 31 March 1504 7 September 1539 29 March 1552 48
3 Guru Amar Das 5 May 1479 26 March 1552 1 September 1574 95
4 Guru Ram Das 24 September 1534 1 September 1574 1 September 1581 46
5 Guru Arjan 15 April 1563 1 September 1581 30 May 1606 43
6 Guru Har Gobind 19 June 1595 25 May 1606 28 February 1644 48
7 Guru Har Rai 16 January 1630 3 March 1644 6 October 1661 31
8 Guru Har Krishan 7 July 1656 6 October 1661 30 March 1664 7
9 Guru Tegh Bahadur 1 April 1621 20 March 1665 11 November 1675 54
10 Guru Gobind Singh 22 December 1666 11 November 1675 7 October 1708 41
11 Guru Granth Sahib n/a 7 October 1708 n/a n/a

ದೊರಕುವ ಪುಸ್ತಕಗಳು

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]

ಟೆಂಪ್ಲೇಟು:Portal

ಆಕರಗಳು

[ಬದಲಾಯಿಸಿ]
  1. ೧.೦ ೧.೧ Keene, Michael (2003). Online Worksheets. Nelson Thornes. p. 38. ISBN 074877159X.
  2. ೨.೦ ೨.೧ Penney, Sue. Sikhism. Heinemann. p. 14. ISBN 0435304704.
  3. Partridge, Christopher Hugh (2005). Introduction to World Religions. p. 223.
  4. Kashmir, Singh. SRI GURU GRANTH SAHIB — A JURISTIC PERSON. Global Sikh Studies. Retrieved 2008-04-01.
  5. Singh, Kushwant (2005). A history of the sikhs. Oxford University Press. ISBN 0195673085.
  6. ಗುರಿಂದರ್ ಸಿಂಗ್ ಮಾನನ್ ರ ಸಿಖ್ಖರ ಧರ್ಮ ಗ್ರಂಥವನ್ನು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯವು ಅಮೆರಿಕಾದಲ್ಲಿ, 2001 ರಲ್ಲಿ ಪ್ರಕಟಿಸಿದ್ದು ಐ ಎಸ್ ಬಿ ಎನ್ 0195130243, 9780195130249 ಪುಟ 5. " ಆದಿ ಗ್ರಂಥದ ಹಾಡುಗಳ ಭಾಷೆಯನ್ನು, "ಸಂತ ಭಾಷಾ " ಎಂದು ಕರೆಯಲಾಗಿದ್ದು,ಉತ್ತರ ಭಾರತದ ಸಂತ-ಕವಿಗಳ, ಭಾಷಾ-ವಿಶೇಷ ರಚನೆಯಾಗಿದ್ದು,ಆ ಮಧ್ಯಕಾಲದ ವಿಶೇಷವಾಗಿದೆ. ಆದರೆ ವಿಶಾಲ ಮನೋಭಾವದಿಂದ ,ಈ ಪುಸ್ತಕದ ಕೊಡುಗೆಗಳಿಂದ ಸ್ಥಳೀಯ ಸಂಭಾಷಣೆಗಳ ಸಮ್ಮಿಶ್ರಣ ವಾಗಿದೆ."
  7. 'ಸುರಿಂದರ್ ಸಿಂಗ್ ಕೊಹ್ಲಿ' ಅವರ ಪಂಜಾಬಿ ಸಾಹಿತ್ಯ ಚರಿತ್ರೆ . ಪುಟ 48 ಪ್ರಕಟಣೆ : ನ್ಯಾಷನಲ್ ಬುಕ್ , 1993. ಐ ಎಸ್ ಬಿ ಎನ್ 978-0804680752 " ಗುರುಗಳು ರಚಿಸಿರುವ ಸಂತ ಭಾಷಾದ (ಸಂತ - ಭಾಷೆ ) ಗ್ರಂಥ ಹಾಗು ಅದರಲ್ಲಿನ ಹಾಡುಗಳನ್ನು ಅಧ್ಯಯನ ಮಾಡಿದಾಗ 16 ನೇ ಶತಮಾನದ ಭಾರತೀಯ ಸಂತರ ಪರಿಚಯವಾಗುತ್ತದೆ."
  8. ಪೀಠಿಕೆ : ಗುರು ಗ್ರಂಥ ಸಾಹಿಬ್ . " ಗುರು ಗ್ರಂಥ ಸಾಹಿಬ್ ಅನ್ನು ಗುರ್ಮುಖಿ ಭಾಷೆಯಲ್ಲಿ ರಚಿಸಲಾಗಿದೆ." ಭಾಷೆಯು ,ಸಾಮಾನ್ಯವಾಗಿ ಸಂತ ಭಾಷೆಯಾಗಿರುತ್ತದೆ , ಪಂಜಾಬಿ ಭಾಷೆಗೆ ಹತ್ತಿರವಾಗಿದೆ . ಇದು ಉತ್ತರ ಭಾರತ ,ಉತ್ತರ -ಪಶ್ಚಿಮ ಭಾರತದಲ್ಲಿ ಜನಪ್ರಿಯವಾಗಿದ್ದು, ಅಲೆದಾಡುವ ಧರ್ಮ-ಧಾರ್ಮಿಕ ವ್ಯಕ್ತಿಗಳಿಗೆ ಚಿರಪರಿಚಿತವಾಗಿದೆ. ಪರ್ಷಿಯನ್ ಮತ್ತು ಕೆಲವು ಸ್ಥಳೀಯ ಸಂಭಾಷಣೆಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಹಲವಾರು ಹಾಡುಗಳಲ್ಲಿ ಬೇರೆ ಬೇರೆ ಭಾಷೆಗಳ ಮತ್ತು ಸಂಭಾಷಣೆಗಳನ್ನು ಉಪಯೋಗಿಅಲಾಗಿದೆ.ಇದು ಬರೆದವನ ಭಾಷೆಯ (ಮಾತೃ ಭಾಷೆಯ)ಅಥವಾ ಸ್ಥಳೀಯ ಭಾಷೆಗಳ ಪ್ರಭಾವ ರಚನೆಯಲ್ಲಿ ಅಡಗಿದೆ."
  9. ನಿರ್ಮಲ ದಾಸ್ ರವರ 'ಆದಿ ಗ್ರಂಥ'ದಿಂದ ಸಂತರ ಹಾಡುಗಳು. ಪ್ರಕಟಣೆ ಸನ್ನಿ ಮುದ್ರಣಾಲಯ , 2000. ಐ ಎಸ್ ಬಿ ಎನ್ 978-0804680752 ಪುಟ 13 " ಆದಿ ಗ್ರಂಥದ ಭಾಷಾಂತರ ಪ್ರಕ್ರಿಯೆಯು ಒಂದು ಭಾಷೆಯ ಕೆಲಸವಾಗದೇ,ಹಲವಾರು ಭಾಷೆಗಳ,ಹಲವು ಸಂಭಾಷಣೆಗಳ ಸಮ್ಮಿಶ್ರಣದ ಭಾಷಾಂತರವಾಗಿದೆ. ಸಿಖ್ಖರು ಪಂಜಾಬಿಯನ್ನು, ಹಾಗು ಆವರ ಭಾಷೆಯಾದ ಪಂಜಾಬಿ ಭಾಷೆಯನ್ನು ತಮ್ಮ ಸ್ವಂತದ್ದೆಂದು ಅಧಿಕಾರ ಚಲಾಯಿಸುತ್ತಾರೆ.ಪಂಜಾಬಿ ರಾಜ್ಯ ತಮ್ಮದೆಂದು ತಿಳಿದಿದ್ದರೂ ,ಪಂಜಾಬಿನ ಸಂತರು ಉಪಯೋಗಿಸಿರುವ ಭಾಷೆಗಳು ಭಿನ್ನ ಭಿನ್ನವಾಗಿದ್ದು, ಸಂಸ್ಕೃತ ; ಸ್ಥಳೀಯ ಪ್ರಕ್ರಿತ್ಸ್ ; ಪಾಶ್ಚಿಮಾತ್ಯ , ಪೂರ್ವ ಹಾಗು ದಕ್ಷಿಣ ಅಪಭ್ರಂಸ ; ಮತ್ತು ಸಹಸ್ಕ್ರಿತ್ ಆಗಿದೆ . ಅದರಲ್ಲಿಯೂ ,ವಿಶೇಷವಾಗಿ ಸಂತ ಭಾಷಾ , ಮರಾಠಿ ,ಹಳೆ ಹಿಂದಿ , ಕೇಂದ್ರೀಯ ಮತ್ತು ಲೆಹಂಡಿ ಪಂಜಾಬಿ , ಸ್ಗೆತ್ತ್ ಲ್ಯಾಂಡ್ ಪರ್ಷಿಯನ್ ಗಳಾಗಿವೆ. ,ಹಲವಾರು ಸಂಭಾಷಣೆ ,ಮಾತುಗಳು ಪರ್ಬಿ ಮರ್ವರಿ , ಬಂಗ್ರು , ದಖನಿ , ಮಾಲ್ವಿ , ಮತ್ತು ಅವಧಿಗಳಾಗಿವೆ."
  10. ಸಿಖ್ಖಿಸಮ್ . ದಿ ಗುರು ಗ್ರಂಥ ಸಾಹಿಬ್ (ಜಿ ಜಿ ಎಸ್ ) ಹರ್ಜಿನ್ದೆರ್ ಸಿಂಗ್ ರವರ ರಚನೆ . "ಸಂಸ್ಕೃತಿ ಭಾಷೆಯಲ್ಲಿಯೂ ಸಹ 'ಗುರು ಗ್ರಂಥ ಸಾಹಿಬ್'ಹಾಡುಗಳ ರಚನೆಯಾಗಿದೆ.ಹಾಗೆಯೇ ಸಂತ ಭಾಷೆಯನ್ನು ಸಹ ಬಳಸಲಾಗಿದೆ.ಹಾಗೆಯೇ ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯನ್ನು ಸಹ ಬಳಸಲಾಗಿದೆ."
  11. Ganeri, Anit (2003). Guru Granth Sahib and Sikhism. Black Rabbit Books. p. 2023. ISBN 1583402454.
  12. foley- Garces, Kathleen (2005). Death and Religion in a changing World. M.E Sharpe. p. 180.
  13. Deol, Harnik (2000). Religion and Nationalism in India. Routledge. p. 62. ISBN 041520108X.
  14. ೧೪.೦ ೧೪.೧ ೧೪.೨ ೧೪.೩ Singh, Roopinder (4 September 2004). "The Word of faith". The tribune. Retrieved 2008-04-04.
  15. ೧೫.೦ ೧೫.೧ Singh, Sangat (1995). The Sikhs in History. Singh Brothers. p. 33. ISBN 0964755505.
  16. "Original Text". Retrieved 2008-01-21.
  17. Keene, Michael (2002). New Steps in Religious Education. Nelson thomes. p. 38. ISBN 0748764585.
  18. Singh, Sangat (1995). The Sikhs in History. Singh Brothers. p. 74. ISBN 0964755505.
  19. Singh, Gurbachan (1998). The Sikhs : Faith, Philosophy and Folks. Roli & Janssen. p. 55. ISBN 81-7436-037-9. {{cite book}}: Unknown parameter |coauthors= ignored (|author= suggested) (help)
  20. Singh, Ganda (1996). Perspectives on The Sikh Tradition. Singh Brothers, Amritsar (India). p. 224. ISBN 81-7205-178-6. {{cite book}}: Unknown parameter |coauthors= ignored (|author= suggested) (help)
  21. ೨೧.೦ ೨೧.೧ Hoiberg, Dale (2000). Students' Britannica India. Popular Prakashan. p. 207. ISBN 0852297602. {{cite book}}: Unknown parameter |coauthors= ignored (|author= suggested) (help)
  22. Duggal, Kartar Singh (1998). Philosophy and Faith of Sikhism. Himalayan Institute Press. p. 14. ISBN 0893891096.
  23. Gupta, Hari Ram (2000). History of the Sikhs Vol.1; The Sikh Gurus, 1469-1708. Munshiram Manoharlal Publishers (P) Ltd. p. 114. ISBN 8121502764.
  24. Mann, Gurinder Singh (2001). The making of Sikh Scripture. Oxford University Press. p. 5. ISBN 0195130243.
  25. Nayar, Kamala Elizabeth (2007). The Socially Involved Renunciate: Guru Nanak's Discourse to the Nath. p. 60. ISBN 0791472132. {{cite book}}: Unknown parameter |coauthors= ignored (|author= suggested) (help)
  26. ೨೬.೦ ೨೬.೧ ೨೬.೨ Brown, Kerry (1999). Sikh Art and Literature. Routledge. p. 200. ISBN 0415202884.
  27. Bains, K.S. "A tribute to Bal Guru". The Tribune. Archived from the original on 2013-06-14. Retrieved 2010-06-15.
  28. ೨೮.೦ ೨೮.೧ Fowler, Jeaneane (1997). World Religions:An Introduction for Students. Sussex Academic Press. pp. 354–357. ISBN 1898723486.
  29. "Sikh holy book flown to Canada". 2004-04-03. Retrieved 2010-01-05.
  30. ಎಲೆನೋರ್ ನೆಸ್ಬಿತ್ತ್ , "ಸಿಖ್ಖಿಸಂ : ಬಹಳ ಚಿಕ್ಕ ಪೀಠಿಕೆ ", ಐ ಎಸ್ ಬಿ ಎನ್ 0-19-280601-7, ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ , . 40-41
  31. ೩೧.೦ ೩೧.೧ "Guru Granth Sahib Research Department". Archived from the original on 2010-04-05.
  32. ಯುನಿವರ್ಸಿಟಿಯ ಯೋಜನೆಗಳಲ್ಲಿ ಆನ್ ಲೈನ್ ಕೋರ್ಸುಗಳು


This article contains Indic text. Without proper rendering support, you may see question marks or boxes, misplaced vowels or missing conjuncts instead of Indic text.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಶ್ರೀ ಗುರು ಗ್ರಂಥ ಸಾಹಿಬ್ (ಇಂಗ್ಲಿಷ್ ಆವೃತ್ತಿ ) ಡಾ. ಗೋಪಾಲ್ ಸಿಂಗ್ ಎಂ.ಎ , ಪಿ ಹೆಚ್ ಡಿ. ರವರಿಂದ , 1960 ರಲ್ಲಿ ' ವರ್ಲ್ಡ್ ಬುಕ್ ಸೆಂಟರ್' ರವರಿಂದ ಪ್ರಕಟಣೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ವೀಡಿಯೊಗಳು

[ಬದಲಾಯಿಸಿ]

ಶ್ರವಣ ಸಾಧನಗಳು

[ಬದಲಾಯಿಸಿ]