ಸಾಕ್ರಟೀಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Portrait of Socrates, a Roman copy from a Greek statue, Louvre museum

ಸಾಕ್ರೆಟಿಸ್ ಕ್ರಿ.ಪೂ.೪೬೯-೩೯೯ ರಲ್ಲಿ ಗ್ರೀಸ್ ದೇಶದಲ್ಲಿ ಜೀವಿಸಿದ್ದ ಒಬ್ಬ ಶ್ರೇಷ್ಠ ತತ್ವ ಜ್ಞಾನಿ.ಅವನು ಸತ್ಯವಾದಿಯೂ,ನಿಷ್ಟೂರವಾದಿಯೂ ಆಗಿದ್ದನು.

ಗ್ರೀಕ್ ಸಮಾಜ ವಿಷಮ ಘಟದಲ್ಲಿದ್ದಾಗ, ಅನೈತಿಕತೆ, ಡಂಬಾಚಾರ, ಸ್ವೇಚ್ಛಾಚಾರ ಖಂಡಿಸಿ, ಸಮಾಜದ ಧ್ಯೇಯ ಆದರ್ಶಗಳನ್ನು ಎತ್ತಿ ಹಿಡಿದವನು ಸಾಕ್ರಟೀಸ್.“ಆತ್ಮವಿಮರ್ಶೆವಿಲ್ಲದ ಅವೈಚಾರಿಕ ಜೀವನ ಬಾಳಲು ಯೋಗ್ಯವಾದುದಲ್ಲ” ಎಂಬ ತತ್ವ ಇವನದು. ಸಾಕ್ರಟೀಸಿನ ವಿಮರ್ಶ ಅಥವಾ ತರ್ಕಬುದ್ಢಿ ಸಮಾಜದಲ್ಲಿ ಯಾರನ್ನು ಬಿಡಲಿಲ್ಲ. ಅವನು ರಾಜಕೀಯ ನಾಯಕನಿರಲಿ, ಆಡಳಿತ ಸೂತ್ರಧಾರಿಗಳಾಗಿರಲಿ, ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಾಗಿರಲಿ ಅವರನ್ನು ತನ್ನ ವಿಚಾರ ವಿಮರ್ಶೆಗೆ ಒಳಪಡಿಸಿ ತೂಗದೆ ಇರುತ್ತಿರಲಿಲ್ಲ. ಅವನು ನಿರ್ಭಯದಿಂದ ತಪ್ಪನ್ನು ತಪ್ಪೆಂದು ಕಡ್ಡಿ ಮುರಿದಂತೆ ಹೇಳುತ್ತಿದ್ದ. ಜನರ ಮೌಡ್ಯವನ್ನು ದಯೆದಾಕ್ಷಣ್ಯವಿಲ್ಲದೆ ವಿಮರ್ಶೆಯಿಂದ ಬಟ್ಟ ಬಯಲಾಗಿಸುತ್ತಿದ್ದ. ಈ ಕ್ರಿಯೆಯಿಂದ ಕೆಲವರ ಸ್ವಾಭಿಮಾನಕ್ಕೆ ದಕ್ಕೆ ಉಂಟಾಗಿ, ಕೆಲ ಅಧಿಕಾರಿಗಳ, ಪ್ರತಿಷ್ಠಿತ ಜನರ ದ್ವೇಷಕ್ಕೆ ಗುರಿಯಾದ. ಯುವಕರನ್ನು ದುರ್ಮಾಗಕ್ಕೆ ಎಳೆಯುತ್ತಿದ್ದಾನೆ ಮತ್ತು ಸಂಪ್ರದಾಯ ವಿರೋಧಿ ಮತ್ತು ಅಥೆನ್ಸಿನ ದೇವರು ಮೇಲೆ ನಂಬಿಕೆಯಿಟ್ಟಿಲ್ಲ ಎಂಬ ಸುಳ್ಳು ಅಪವಾದಗಳನ್ನು ಆಧಾರಿಸಿ, ಸಾಕ್ರಟೀಸ್ ತಪ್ಪಿತಸ್ಠನೆಂದು ನಿರ್ಧರಿಸಿ ಅವನಿಗೆ ಮರಣದಂಡನೆಯನ್ನು ವಿಧಿಸಲಾಯಿತ್ತು. ಸಾವಿಗೆ ಅಂಜದ ಸಾಕ್ರಟೀಸ್ “ಸಾವು ಬಂದರೆ ಬರಲಿ, ಅಧರ್ಮವನ್ನಾಚರಿಸುವುದಿಲ್ಲ” ಎಂದು ಸಾವಿಗೆ ತಯಾರಾಗುತ್ತಾನೆ.

ಸಾಕ್ರೆಟಿಸ್ಗೆ "ಪ್ಲೇಟೋ "ನಂತಹ ಶ್ರೇಷ್ಠ ಶಿಷ್ಯರೂ ಇದ್ದರು.ಸಾಕ್ರಟೀಸ್ ಮರಣದಂಡನೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿತ್ತು, ಅದರೆ ಯಾವುದೇ ವಿಧದಲ್ಲೂ ತಪ್ಪಿಸಿಕೊಳ್ಳುವುದಕ್ಕೆ ಸ್ವಲ್ಪವೂ ಪ್ರಯತ್ನಿಸದೆ,“ಹತ್ತು ಸಲ ಮರಣಯಾತನೆಯನ್ನು ಅನುಭವಿಸಬೇಕಾದರೂ ನನ್ನ ನಡತೆಯನ್ನೇನೂ ಬದಲಾಯಿಸುವುದಿಲ್ಲವೆಂದು ಮಾತ್ರ ತಿಳಿಯಿರಿ”ಎಂದು ಹೇಳುತ್ತಾ ಜೈಲಿನ ಸೇವಕನು ತಂದುಕೊಟ್ಟ "ಹೆಮ್ಲಾಕ್ "ಎಂಬ ವಿಷದ ಬಟ್ಟಲಿಂದ ವಿಷವನ್ನು ನಿರ್ವಿಕಾರ ಚಿತ್ತದಿಂದ ತಾನೆ ತೆಗೆದುಕೊಂಡು ಗಟಗಟನೆ ಕುಡಿದು ಸಂತೋಷದಿಂದ ಸಾಯುತ್ತಾನೆ.

ಸಾಕ್ರಟೀಸ್ ಬಗ್ಗೆ ಜೂಲಿಯನ್ ಚಕ್ರವರ್ತಿಯ ಮಾತುಗಳು"ಸಾಕ್ರಟೀಸ್ ರಣರಂಗದಲ್ಲಿ ನೂರಾಳುಗಳನ್ನು ಕೊಂದು ಗೆದ್ದ ವೀರನಲ್ಲ. ಬದಲಾಗಿ ತನ್ನನ್ನು ತಾನು ಗೆದ್ದ ಋಷಿ" “ಸಾಫ್ರೊನಿಸ್ಕನ್ಸಿನ ಮಗನು (ಸಾಕ್ರಟೀಸ್) ಅಲೆಕ್ಸಾಂಡರನಿಗಿಂತ ಮಹತ್ವದ ಕೆಲಸಗಳನ್ನು ಮಾಡಿದ್ದಾನೆ. ಅಲೆಕ್ಸಾಂಡರನ ವಿಜಯದಿಂದ ಯಾರಿಗೆ ಮೋಕ್ಷ ದೊರೆತಿದೆ? ಆದರೆ ತತ್ವಜ್ಞಾನದಿಂದ ಮೋಕ್ಷವನ್ನು ಪಡೆದಿರುವರೆಲ್ಲರೂ ಸಾಕ್ರಟೀಸ್‌ನ ಋಣಿಗಳು.ನಮನ.