ಇಂಡಿಯನ್‌ ಏರ್‌‌ಲೈನ್ಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Indian
इंडियन
ಚಿತ್ರ:Indian Logo.png
IATA
IC
ICAO
IAC
Callsign
INDAIR
ಸ್ಥಾಪನೆ ೧೯೫೩
Hubs
Secondary hubs
Focus cities
Frequent-flyer program Flying Returns
Alliance Star Alliance (೨೦೧೦)
Subsidiaries
Fleet size ೮೬ (+೫ Orders) excl.subsidiaries
Destinations ೬೪ excl.subsidiaries
Company slogan New Horizons. Enduring Values.
Parent company NACIL
Headquarters ಮುಂಬೈ, India[೧]
Key people Arvind Jadhav, CMD
Website www.indianairlines.in

ಇಂಡಿಯನ್‌ ಏರ್‌‌ಲೈನ್ಸ್‌ ಅಥವಾ ಹಿಂದಿ:इंडियन एयरलाइंस or इंडियनಇಂಡಿಯನ್ ಇದು ಮುಂಬಯಿ ಮೂಲದ ಏರ್ ಲೈನ,ಇಂಡಿಯಾ,ಪ್ರಮುಖವಾಗಿ ಆಂತರಿಕ ವಿಮಾನಯಾನದ ಜೊತೆಗೆ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಸೌಲಭ್ಯವನ್ನೂ ನೆರೆ ದೇಶಗಳಿಗೆ [೨] ಒದಗಿಸುತ್ತದೆ. ಇಂಡಿಯನ್ ಏರ್ ಲೈನ್ಸ್ ರಾಜ್ಯ ಮಾಲಿಕತ್ವದಲ್ಲಿದೆ.ಇದರ ಉಸ್ತುವಾರಿಯನ್ನು ನಾಗರಿಕ ವಿಮಾನ ಯಾನ ಸಚಿವಾಲಯ ನೋಡಿಕೊಳ್ಳುತ್ತದೆ. ಇದರಲ್ಲಿ ಎರಡು ತೆರನಾದ ಫ್ಲ್ಯಾಗ(ಪತಾಕೆ) ಗಳಿವೆ.ಒಂದು ಇಂಡಿಯನ್ ಧ್ವಜ,ಮತ್ತೊಂದು ಏರ್ ಇಂಡಿಯಾ ಇದರ ಹೆಗ್ಗುರುತಾಗಿದೆ. ಇದಕ್ಕೆ ಕಂಪನಿ ಮಾಲಿಕತ್ವ ಮತ್ತು ಕಾರ್ಯಾಡಳಿತವಿದ್ದರೂ ಇದನ್ನು ೭ ಡಿಸೆಂಬರ್ ೨೦೦೫,ರಿಂದ ಇಂಡಿಯನ್ ಏರ್ ಲೈನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತದೆ.ಸಾರ್ವಜನಿಕ ವಲಯದ ಶೇರು ಬಂಡವಾಳ ಸಂಗ್ರಹಿಸಲು ಹಾಗು ಈ ಕ್ಷೇತ್ರದಲ್ಲಿ ಇದಕ್ಕೊಂದು ಹೊಸ ಛಾಪು ಮೂಡಿಸಲು ಜಾಹಿರಾತು ಮಾಧ್ಯಮಗಳಲ್ಲಿ ಇದನ್ನು ಇಂಡಿಯನ್ ಅಥವಾ इंडियन ಎಂಬ ಪದನಾಮದಿಂದ ಗುರುತಿಸಲ್ಪಡುತ್ತದೆ.ಇನಿಶಿಯಲ್ ಪಬ್ಲಿಕ್ ಆಫರಿಂಗ್ (IPO)ಸಂದರ್ಭದಲ್ಲಿ ಇದಕ್ಕೆ ನವೀನ ಕಾಯಕಲ್ಪ ಒದಗಿಸಲು [೩] ಪ್ರಯತ್ನಿಸಲಾಯಿತು. ಈ ಏರ್ ಲೈನ್ ಏರ್ ಇಂಡಿಯಾದೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತದೆ.ಅಲ್ಲದೇ ಇಂಡಿಯಾದ ನ್ಯಾಶನಲ್ ಕ್ಯಾರಿಯರ್ ಅಂತೆ ಕೆಲಸ ಮಾಡುತ್ತದೆ. ಅಲಿಯನ್ಸ್ ಏರ್ ಒಂದು ಪೂರ್ಣ ಪ್ರಮಾಣದ ಇಂಡಿಯನ್ ಏರ್ ಲೈನ್ಸ್ ನ ಶಾಖೆಯಾಗಿ ಕಾರ್ಯ ನಿರ್ವಹಿಸುತ್ತದೆ;ಇದನ್ನು ಏರ್ ಇಂಡಿಯಾ ರೀಜನಲ್ ಎಂದು ಮರುನಾಮಕರಣ [೪] ಮಾಡಲಾಗಿದೆ. ಫೆಬ್ರವರಿ ೨೦೦೭ರಲ್ಲಿ ಇಂಡಿಯನ್ ಏರ್ ಲೈನ್ಸ್ ನ್ನು ಏರ್ ಇಂಡಿಯಾದೊಂದಿಗೆ ಸೇರ್ಪಡೆಯಾಗುವಂತೆ ಸಮ್ಮತಿಸಲಾಯಿತು. ಭಾರತೀಯ ವಿಮಾನಯಾನ ಸಚಿವಾಲಯವು ರಾಷ್ಟ್ರೀಯ ಇಂಡಿಯನ್ ಧ್ವಜ ಹೊತ್ತ ಏರ್ ಇಂಡಿಯಾ ಲಿಮಿಟೆಡ್ (AI) ಮತ್ತು ಸ್ಥಳೀಯ ಆಂತರಿಕ ವಿಮಾನ ಸೇವೆಯ ಇಂಡಿಯನ್ ಏರ್ ಲೈನ್ಸ್ (IA) ಒಂದುಗೂಡುವವೆಂದು ೨೦೦೭ರಲ್ಲಿ ಘೋಷಿಸಿ ಇದನ್ನು ಜುಲೈ೧೫ರಿಂದ,೨೦೦೭ಕ್ಕೆ ಅನುಷ್ಟಾನಕ್ಕೆ ತಂದಿತು. ನೂತನವಾಗಿ ರಚನೆಯಾದ ಇದನ್ನು "ಏರ್ ಇಂಡಿಯಾ"ಎಂದು ಕರೆಯಲ್ಪಟ್ಟು ಆಂತರಿಕ ಅಥವಾ ಸ್ಥಳೀಯ ಹಾಗು ಬಾಹ್ಯ ಅಂದರೆ ಹೊರದೇಶಗಳ ಅಂತಾರಾಷ್ಟ್ರೀಯ ವಿಮಾನಯಾನ ಸೌಲಭ್ಯಕ್ಕೆ ಅನುವು ಮಾಡಲಾಗಿದೆ.

ಇತಿಹಾಸ[ಬದಲಾಯಿಸಿ]

ಈ ಏರ್ ಲೈನ್ ೧೯೫೩ರ ಏರ್ ಕಾರ್ಪೊರೇಶನ್ಸ್ ಆಕ್ಟ್ ನ ಆಶಯದಂತೆ ಪ್ರಾರಂಭಿಕ ೩೨ದಶಲಕ್ಷ ರೂಪಾಯಿ ಬಂಡವಾಳದೊಂದಿಗೆ ಆಗಸ್ಟ್ ೧,೧೯೫೩ರಲ್ಲಿ ಕಾರ್ಯ ಪ್ರವೃತ್ತವಾಯಿತು. ಭಾರತದಲ್ಲಿನ ಸಮಗ್ರ ಏರ್ ಲೈನ್ ಉದ್ದಿಮೆಯನ್ನು ರಾಷ್ಟ್ರೀಕರಣಗೊಳಿಸಲು ಈ ಕಾನೂನಿನ ಅನುಷ್ಠಾನವಾದ ನಂತರ ಇದು ಜಾರಿಯಾಯಿತು. ಈ ನೂತನ ಏರ್ ಲೈನ್ ಯುನೈಟೆಡ್ ಕಿಂಗಡಮ್ ನ ಬ್ರಿಟಿಶ್ ಓವರ್ ಸೀಸ್ ಏರ್ ವೇಸ್ ಕಾರ್ಪೋರೇಶನ್ (BOAC)ಮತ್ತು ಬ್ರಿಟಿಶ್ ಯುರೊಪಿಯನ್ ಏರ್ ವೇಸ್ (BEA)ಗಳ ಮಾದರಿಯಲ್ಲಿ ಸಮ್ಮಿಳಿತಗೊಳಿಸಲಾಯಿತು. ಏರ್ ಇಂಡಿಯಾ ಅಂತಾರಾಷ್ಟ್ರೀಯ ಯಾನವನ್ನು ವಹಿಸಿಕೊಂಡರೆ ಇಂಡಿಯನ್ ಏರ್ ಲೈನ್ಸ್ ಕಾರ್ಪೋರೇಶನ್ (IAC)ಸ್ವದೇಶಿಯ ಮತ್ತು ಪ್ರಾದೇಶಿಕ ವಿಮಾನ ಹಾರಾಟದ ವ್ಯವಸ್ಥೆಯನ್ನು [ಸೂಕ್ತ ಉಲ್ಲೇಖನ ಬೇಕು]ನೋಡಿಕೊಳ್ಳುತ್ತದೆ. ಈ ಹಿಂದಿನ ಏಳು ದೇಶೀಯ ಏರ್ ಲೈನ್ಸ್ ಗಳು,ಡೆಕ್ಕನ್ ಏರ್ ವೇಸ್ ,ಏರ್ ವೇಸ್ ಇಂಡಿಯಾ,ಭಾರತ ಏರ್ ವೇಸ್ ,ಹಿಮಾಲಯನ್ ಏವಿಯೇಶನ್ ,ಕಲಿಂಗಾ ಏರ್ ಲೈನ್ಸ್ ,ಇಂಡಿಯನ್ ನ್ಯಾಶನಲ್ ಏರ್ ವೇಸ್ ಮತ್ತು ಏರ್ ಸರ್ವಿಸಿಸ್ ಆಫ್ ಇಂಡಿಯಾಗಳು ನೂತನ ಸ್ವದೇಶಿಯ ನ್ಯಾಶನಲ್ ಕ್ಯಾರಿಯರನ್ನು ಹುಟ್ಟುಹಾಕಿವೆ. ಇಂಡಿಯನ್ ಏರ್ ಲೈನ್ಸ್ ಕಾರ್ಪೋರೇಶನ್ ೯೯ ಏರ್ ಕ್ರಾಫ್ಟ್ ಗಳ ಸರಣಿ ಸಮೂಹ ಹೊಂದಿದೆ;ಇದರಲ್ಲಿ ೭೪ ಡೊಗ್ಲಾಸ್ ಡಿಸಿ-೩ ಡಕೊಟಾಗಳು,೧೨ ವಿಕರ್ಸ್ ವಿಕಿಂಗ್ ಗಳು,೩ಡೊಗ್ಲಾಸ್ DC-೪{/0ಗಳು ಮತ್ತು ಹಲವಾರು ಸಣ್ಣ ಪ್ರಮಾಣದ ಅಂದರೆ ಏಳು ಏರ್ ಲೈನ್ಸ್ ಗಳ ಸಂಯೋಜನೆಗಳ ಮೂಲಕ ಇದನ್ನು ರಚನೆ ಮಾಡಿದೆ. ವಿಕರ್ಸ್ ವಿಸ್ಕೌಂಟ್ ಗಳನ್ನು ೧೯೫೭ರಲ್ಲಿ ಪರಿಚಯಿಸಲಾಯಿತು.ಅಂದರೆ ೧೯೬೧ರಲ್ಲಿ ಫೊಕರ್ ಎಫ್೨೭ ಫ್ರೆಂಡ್ ಶಿಪ್ಸ್ ಗಳ ಜೊತೆಗೆ ಇದನ್ನು ಸೇವೆಗೆ ಸಜ್ಜುಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ೧೯೬೦ರಹೊತ್ತಿಗೆ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಭಾರತದಲ್ಲೇ ಸಿದ್ದಪಡಿಸಿದ ಹಾವ್ಕಾರ್ ಸಿಡ್ಲಿ ಹೆಚ್ಎಸ್ ೭೪೮ ಗಳು ಸಮೂಹಕ್ಕೆ ಸೇರ್ಪಡೆಯಾದವು. IAC ಗೆ ಪೂರ್ ಜೆಟ್ ಸೂದ್ ಏವಿಯೇಶನ್ ಕಾರಾವೆಲ್ಲೆ ಹಾಗು ಅದರ ಜೊತೆಗೆ ಆರಂಭಿಕ ೧೯೭೦ರಲ್ಲಿ ಬೋಯಿಂಗ್ ೭೩೭-೨೦೦ ಗಳ ಸೇರ್ಪಡೆಯೊಂದಿಗೆ ಜೆಟ್ ಯುಗ ೧೯೬೪ರಲ್ಲಿ ಆರಂಭವಾಯಿತು. ಏಪ್ರಿಲ್ ೧೯೭೬ರಲ್ಲಿ ಮೊದಲಬಾರಿಗೆ ವಿಶಾಲ ಗಾತ್ರದ ಮೂರು ಏರ್ ಬಸ್ ಎ ೩೦೦ ಜೆಟ್ ಗಳನ್ನು ಪರಿಚಯಿಸಲಾಯಿತು. ಪ್ರಾಂತೀಯ ಏರ್ ಲೈನ್ ವಾಯುದೂತ ೧೯೮೧ರಲ್ಲಿ ಮರುಸಂಯೋಜನೆಯಾಯಿತು.

ಓಲ್ಡ್ ಆರೇಂಜ್ ಲೊಗೊ ಆಫ್ ಇಂಡಿಯನ್ ಏರ್ ಲೈನ್ಸ್ -2000ನೆಯ ಮಧ್ಯದ ಭಾಗದ ವರೆಗೆ

ಸುಮಾರು ೧೯೯೯ರ ಹೊತ್ತಿಗೆ ಏರ್ ಬಸ್ ಎ ೩೨೦-೨೦೦ಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಯಿತು. .ಭಾರತ ಸರ್ಕಾರದ ೧೯೯೦ರ ದಶಕದ ಆರ್ಥಿಕ ಉದಾರತೆಯ ಪ್ರಕ್ರಿಯೆಯು ಇಂಡಿಯನ್ ಏರ್ ಲೈನ್ ನ ಸ್ಥಳೀಯ ಏಕಸ್ವಾಮ್ಯತೆಯ ಸಾರಿಗೆ ಉದ್ಯಮಕ್ಕೆ ಕೊನೆ ಹಾಡಿತು. ಇಂಡಿಯನ್ ಏರ್ ಲೈನ್ ಬಹಳ ಸ್ಪರ್ಧೆಯನ್ನು ಎದುರಿಸಬೇಕಾಯಿತು,ಉದಾಹರಣೆಗಾಗಿ ಜೆಟ್ ಏರ್ ವೇಸ್ ,ಏರ್ ಸಹಾರಾ(ಸದ್ಯ ಜೆಟ್ ಲೈಟ್ )ಈಸ್ಟ-ವೆಸ್ಟ್ ಏರ್ ಲೈನ್ಸ್ ,ಸ್ಕೈಲೈನ್ NEPC ಮತ್ತು ಮೋದಿ ಲುಫ್ತ್ ಗಳಿಂದ ಕಠಿಣ ಉದ್ಯಮ ಸವಾಲನ್ನು ಎದುರಿಸಿದೆ.ಇಸವಿ 2005ರ ಅಂದಾಜಿನಂತೆ ಇಂಡಿಯನ್ ಏರ್ ಲೈನ್ಸ್ ಜೆಟ್ ಏರ್ ವೇಸ್ ನಂತರ ಭಾರತದಲ್ಲೇ ಎರಡನೆಯ ದೊಡ್ಡ ವಿಮಾನ ಸಾರಿಗೆಯಾಗಿದೆ.ಏರ್ ಸಹಾರಾವು ೧೭%ರಷ್ಟು ವಿಮಾನಯಾನ ಉದ್ಯಮದಲ್ಲಿ ತನ್ನ ಪಾಲು ಪಡೆದುಕೊಂಡಿದೆ. ಈಸ್ಟ್ -ವೆಸ್ಟ್ ಏರ್ ಲೈನ್ಸ್ ,ಸ್ಕೈಲೈನ್ NEPC ಮತ್ತು ಮೋದಿಲುಫ್ಟ್ ಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.ಆದರೆ ಇನ್ನು ಹಲವು ಹೊಸ ಕಡಿಮೆ ವೆಚ್ಚದ ವಿಮಾನಯಾನಗಳ ಪದಾರ್ಪಣೆಯಿಂದ ಭಾರತ ವಿಮಾನಯಾನವು ತನ್ನ ದುಬಾರಿ ಬೆಲೆಯನ್ನು ಅನಿವಾರ್ಯವಾಗಿ ಕಡಿಮೆ ಮಾಡಿದೆ.ಉದಾಹರಣೆಗಾಗಿ ಏರ್ ಡೆಕ್ಕನ್ ,ಸ್ಪೈಸ್ ಜೆಟ್ ,ಇಂಡಿಗೊ (ಇಂಟರ್ ಗ್ಲೋಬ್ ಎಂಟರ್ಪ್ರೈಸ್ )ಮತ್ತು ಇನ್ನುಳಿದಂತೆ ಕಿಂಗ್ ಫಿಶರ್ ಏರ್ಲೈನ್ಸ್ ಗಳು ವಿಮಾನಯಾನ ಮಾರುಕಟ್ಟೆಯಲ್ಲಿ ತಮ್ಮ ಸ್ಪರ್ಧೆಯನ್ನು ನಿರಂತರವಾಗಿ ಕೊಡುತ್ತಾ ಬರುತ್ತಿವೆ. ಹೇಗೆಯಾದರೂ 2006ರ ವರೆಗಿನ ಅಂದಾಜಿನಂತೆ ಇಂಡಿಯನ್ ಏರ್ ಲೈನ್ಸ್ ಸದ್ಯವೂ ಲಾಭ ಗಳಿಸುವ ಏರ್ ಲೈನ್ ಎನಿಸಿದೆ. ಇಂಡಿಯನ್ ಏರ್ ಲೈನ್ಸ್ ಲಿಮಿಟೆಡ್ ಭಾರತ ಸರ್ಕಾರದ ಒಡೆತನದ ಸಂಪೂರ್ಣ ಹೋಲ್ಡಿಂಗ್ ಕಂಪನಿಯಾಗಿದ್ದು ಸದ್ಯ (ಮಾರ್ಚ್ 2007ರ ಹೊತ್ತಿಗೆ) ೧೯,೩೦೦ [೫] ಉದ್ಯೋಗಿಗಳಿದ್ದಾರೆ. ಅದರ ವಾರ್ಷಿಕ ವಹಿವಾಟು ಅದರ ಸಹವರ್ತಿ ಅಲೈನ್ಸ್ ಏರ್ ಒಳಗೊಂಡಂತೆ ಒಟ್ಟು ೪೦೦೦ ಕೋಟಿ ರೂಪಾಯಿಗಳಾಗಿದೆ.(ಅಂದಾಜು US$ ೧ಬಿಲಿಯನ್ ) ಅಂಗಸಂಸ್ಥೆ ಅಲೈನ್ಸ್ ಏರ್ ಸೇರಿದಂತೆ ಇಂಡಿಯನ್ ಏರ್ ಲೈನ್ ಪ್ರತಿವರ್ಷ ೭.೫ ದಶಲಕ್ಷಕ್ಕೂ ಮಿಕ್ಕಿ ಪ್ರಯಾಣಿಕರನ್ನು ಸಾಗಿಸುವ ಸೇವೆ [ಸೂಕ್ತ ಉಲ್ಲೇಖನ ಬೇಕು]ಮಾಡುತ್ತದೆ. ಗ್ರುಪ್ ಆಫ್ ಮಿನಿಸ್ಟರ್ಸ್ ಅಂದರೆ ಸಚಿವರ ಸಮೂಹ (GoM) ಕಳೆದ ಫೆಬ್ರವರಿ ೨೨ ೨೦೦೭ರಲ್ಲಿ ರಾಜ್ಯ ಮಾಲಿಕತ್ವದ ಕ್ಯಾರಿಯರ್ ಗಳು ಮತ್ತು ಇಂದಿಯನ್ ಏರ್ ಲೈನ್ಸ್ ಗಳ ವಿಲೀನಕ್ಕೆ ತನ್ನ ಸಮ್ಮತಿ [೬] ಸೂಚಿಸಿತು. ಎರಡೂ ಏರ್ ಲೈನ್ ಗಳು ಏರ್ ಇಂಡಿಯಾ ಎಂಬ ಹೆಸರಿನ ಮೇಲೆ ಔಪಚಾರಿಕವಾಗಿ ಜುಲೈ೧೫ ೨೦೦೭ರಿಂದ ಕಾರ್ಯ ಪ್ರವೃತ್ತವಾಗಿವೆ.ಈ ವಿಲೀನದ ದ್ಯೋತ್ಯಕ ಎನ್ನುವಂತೆ ಬೋಯಿಂಗ್ 777-200LR ನ್ನು ಪಡೆಯುವದರ ಮೂಲಕ ಹೊಸ ಚೈತನ್ಯ [೭][೮] ತಂದಿದೆ. ಈ ನೂತನ ಏರ್ ಲೈನ್ಸ್ ನ ಪ್ರಧಾನ ಕಚೇರಿ ಮುಂಬಯಿನಲ್ಲಿಯೇ ಕಾರ್ಯನಿರ್ವಹಿಸುವುದು.ಇದು ಸುಮಾರು ೧೩೦ ವಿಮಾನಗಳ ಸಮೂಹ ಹೊಂದಿದೆ. ಡಿಸೆಂಬರ್ ೨೦೦೭ರಲ್ಲಿ ಸ್ಟಾರ್ ಅಲೈನ್ಸ್ ಗೆ ಸೇರ್ಪಡೆಯಾಗುವಂತೆ ಏರ್ ಇಂಡಿಯಾಕ್ಕೆ ಆವ್ಹಾನ ನೀಡಲಾಯಿತು. ಏರ್ ಇಂಡಿಯಾದೊಂದಿಗೆ ವಿಲೀನವಾಗಬೇಕಿದ್ದ ಇಂಡಿಯನ್ ಏರ್ ಲೈನ್ಸ್ ಇದಕ್ಕಿಂತ ಮೊದಲು ಸಕ್ರಿಯವಾಗಿ ಅದರ ಭಾಗವಾಗಿತ್ತು.

ನಿರ್ಧಿಷ್ಟ ಸ್ಥಳಗಳು[ಬದಲಾಯಿಸಿ]

ಇಂಡಿಯನ್ ಏರ್ ಲೈನ್ಸ್ ನ ಬ್ಯಾಂಕಾಕ್ -ಡೆಲ್ಹಿ ವಿಮಾನದಲ್ಲಿ ಬೆಳಗಿನ ಉಪಹಾರ ನೀಡುತ್ತಿರುವ ದೃಶ್ಯ.
ಏರ್ ಲೈನ್ ಏರ್ ಬಸ್ ನ A320ನಲ್ಲಿನ ಎಕ್ಸಿಕುಟಿವ್ ವರ್ಗದ ಕ್ಯಾಬಿನ್
ಏರ್ ಬಸ್ A319-100
A320-200
ಚಿತ್ರ:IAA320.jpg
An ಬೆಂಗಳೂರ್ ನಲ್ಲಿನ ಒಂದು A320 ನಲ್ಲಿ ಲಿವರಿ ಬಳಕೆ ಸುಮಾರು 50 ವರ್ಷಗಳ ನಂತರದ ಸೇವೆ ಹೆಚ್ಚುವರಿ ಜೋಡಿ ಚಕ್ರಗಳನ್ನು ಗಮನಿಸಿ.
ಬೆಂಗಳೂರಿನಲ್ಲಿನ ಒಂದು ಏರ್ ಬಸ್ A320 ಮುಂಬಯಿಗೆ ಹಾರಾಟಕ್ಕೆ ಸಜ್ಜಾಗಿರುವುದು.

ಕೋಡ್ ಶೇರ್[ಬದಲಾಯಿಸಿ]

ಇಂಡಿಯನ್ ಏರ್ ಲೈನ್ಸ್ ಕೆಳಗಿನ ಏರ್ ಲೈನ್ಸ್ ಗಳೊಂದಿಗೆ ಕೋಡ್ ಶೇರಿಂಗ ಒಪ್ಪಂದ [೯] ಮಾಡಿಕೊಂಡಿದೆ.

ಫ್ಲೀಟ್[ಬದಲಾಯಿಸಿ]

ಇಂಡಿಯನ್ ಏರ್ ಲೈನ್ಸ್ ಎಲ್ಲಾ ಏರ್ ಬಸ್ ಸಮೂಹ ಏರ್ ಬಸ್ A320 ಅಂದರೆ ಈ ಎಲ್ಲಾ ವಿಮಾನಗಳ ಪಂಕ್ತಿಯಲ್ಲಿ ಕಾರ್ಯ ನಡೆಸುತ್ತದೆ. ಮಾರ್ಚ್ ೨೦೦೯ರ ಅಂದಾಜಿನ ಪ್ರಕಾರ ಇಂಡಿಯನ್ ಏರ್ ಲೈನ್ಸ್ ನ ಸಮೂಹ ವಿಮಾನಗಳ ಸರಾವರಿ ಬಾಳಿಕೆ ಕಾಲ ೧೨.೫೮ ವರ್ಷಗಳಷ್ಟಾಗಿದೆ.

ಇಂಡಿಯನ್ ಏರ್ ಲೈನ್ಸ್ ಸಮೂಹದ ತಂಡ
ವಿಮಾನ ಸೇವೆಯಲ್ಲಿರುವವು ವರ್ಗಗಳು ಪ್ಯಾಸೆಂಜರ್ಸ್
(ವ್ಯಾಪಾರ/ಆರ್ಥಿಕತೆ)
ಟಿಪ್ಪಣಿಗಳು
ಏರ್ ಬಸ್ A319-100
೧೯
೧೨೦ (೧೪/೧೦೬)
೧೨೨ (೮/೧೧೪)
೧೪೪ (೦/೧೪೪)
೫ dry leased.
ವೈಡ್ ಸ್ಕ್ರೀನ್ PTV ಜೊತೆ AVOD.
ಏರ್‌ಬಸ್ A330-200 ೪೩ ೧೪೬ (೨೦/೧೨೬) ೨೪ ಡ್ರೈ ಬಿಡುಗಡೆ.
ಸದ್ಯದ ವಿಮಾನಗಳ ಸಮೂಹ ಪಂಕ್ತಿಯ ಹಳೆಯ A೩೨೦-೨೦೦s ಗಳನ್ನು ೨೦೧೪ರ ಹೊತ್ತಿಗೆ ಬದಲಿ ವ್ಯವಸ್ಥೆ ಜಾರಿಯಾಗಲಿದೆ.
ಏರ್‌ಬಸ್ A330-200 ೧೯ ೧೭೨ (೨೦/೧೫೨) ವಿಂಡ್ ಸ್ಕ್ರೀನ್ PTV ಇದರೊಂದಿಗೆAVOD.
ಒಟ್ಟು ೮೬ ಕೊಲ್‌ಸ್ಪ್ಯಾನ್=೨

ಲೈವರಿ[ಬದಲಾಯಿಸಿ]

ಲೈವರಿ ಏರ್ ಕ್ರಾಫ್ಟ್ ಉಪಯೋಗಿಸದರೂ ಸಹ ಕಂಪನಿಯನ್ನು ಇಂಡಿಯನ್ ಏರ್ ಲೈನ್ಸ್ ಅತ್ಯಂತ ಹಳೆಯ ಸುದೀರ್ಘ ಕಾಲಾವಧಿಯದು ಎಂದೇ ಕರೆಯಲಾಗುತ್ತದೆ. ಅದರ ಏರ್ ಕ್ರಾಫ್ಟ್ ಗಳು ಪ್ರಮುಖವಾಗಿ ಶ್ವೇತ ಬಣ್ಣದ್ದಾಗಿರುತ್ತವೆ. ಇದರ ಗಾತ್ರವು ಹಗುರ ಲೋಹದ ಕಂದು ಬಣ್ಣ. ಕಿಡಕಿಗಳ ಮೇಲ್ಭಾಗದ ಒಂದು ಬದಿ "ಇಂಡಿಯನ್ ಏರ್ ಲೈನ್ಸ್ "ಎಂದು ಇಂಗ್ಲಿಷ್ ನಲ್ಲಿ ಇನ್ನೊಂದು ಬದಿಗೆ ಹಿಂದಿಯಲ್ಲಿ ಬರೆಯಲಾಗಿರುತ್ತದೆ. ಇದರ ಬಾಲವು ಹೊಳೆವ ಕಿತ್ತಳೆ ಬಣ್ಣ ಹೊಂದಿರುತ್ತದೆ. ಬಹುತೇಕ ಏರ್ ಕ್ರಾಫ್ಟ್ ಗಳಲ್ಲಿ ಎಂಜಿನ್ ಕೂಡ ಚಿನ್ಹೆಯನ್ನು ಬಣ್ಣದ ಲೇಪನದಿಂದ ಅದರ ಭಾಗದ ಲೋಹದ ಬಣ್ಣದ ಮೇಲೆ ಬರೆಯಲಾಗಿರುತ್ತದೆ. ಅದೂ ಅಲ್ಲದೇ ಇಂಡಿಯನ್ ಏರ್ ಲೈನ್ಸ್ ೫೦ ವರ್ಷ ಪೂರ್ತಿಗೊಳಿಸದ ಮೇಲೆ ತನ್ನ ಸೇವೆಯ ಗುರುತಿಗಾಗಿ ಅದು "೫೦ ವರ್ಷಗಳ ವಿಮಾನಯಾನ"ಎಂಬ ಘೋಷಣೆಯನ್ನು ಅದು ಏರ್ ಕ್ರಾಫ್ಟ್ ಗಳ ಮೇಲೆ ಬರೆದಿದೆ. ಇಂಡಿಯನ್ ಎಂಬ ಹೆಸರು ಬದಲಾವಣೆ ನಂತರ ಕಂಪನಿಯ ಏರ್ ಕ್ರಾಫ್ಟ್ ಗಳ ಮೇಲೆ ಸೂರ್ಯ ದೇವನ ದೇವಾಲಯದ ಸ್ಪೂರ್ತಿ ಎಂಬಂತೆ ಒರಿಸ್ಸಾದಲ್ಲಿನ ಕೊನಾರ್ಕ್ ದೇವಾಲಯದ ವಾಸ್ತು ಶಿಲ್ಪವನ್ನು ಪ್ರದರ್ಶಿಸಲು ಆರಂಭಿಸಿದೆ. ಅವರ ಏರ್ ಕ್ರಾಫ್ಟಿನ ಬಣ್ಣ ಭಾಗಶಃ ನೀಲಿ ಚಕ್ರದ ಗುರುತಾಗಿದ್ದು ಉಳಿದದ್ದನ್ನು೩/೪ರಷ್ಟು ತೆಗೆದು ಹಾಕಲಾಗಿದೆ. ಚಕ್ರವು ಕಿತ್ತಳೆ ಬಣ್ಣದ ಹಿನ್ನಲೆ ಹೊಂದಿದ್ದು ಕ್ಯಾರಿಯರ್ ನ ಹೆಸರು "ಇಂಡಿಯನ್ "ಎಂಬುದನ್ನು ಒಂದೆಡೆ ಇಂಗ್ಲಿಷ್ ಮತ್ತೊಂದೆಡೆ ಹಿಂದಿಯಲ್ಲಿ ಬರೆಯಲಾಗಿದೆ. ಭಾರತ ಸರ್ಕಾರವು ಮೇ೧೫ ೨೦೦೭ರಲ್ಲಿ ಹೊಸ ಲೈವರಿ(ಹೊಸ ಪೋಷಾಕು ಧರಿಸುವ ಚಿನ್ಹೆ)ಯೊಂದನ್ನು ಬಿಡುಗಡೆ ಮಾಡಿ ಬೋಯಿಂಗ್ ಗೆ ಸೀಟಲ್ ಮೂಲಕ ಏರ್ ಇಂಡಿಯಾದ ಪಂಕ್ತಿಯೊಳಗೆ ಬರುವ ಎಲ್ಲಾ ಏರ್ ಕ್ರಾಫ್ಟ್ ಗಳ ಮರುಪರಿಶೀಲನೆಗೆ ಸಜ್ಜುಗೊಳಿಸಿತು. ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ ಲೈನ್ಸ್ ನ ಹಳೆಯ ಎಲ್ಲಾ ಸಮೂಹವು ನಿಧಾನವಾಗಿ ಹೊಸ ಲೈವರಿ (ಹೊಸ ಶೈಲಿಯ ಚಿನ್ಹೆ)ಗೆ ಅಂಟಿಕೊಂಡವು.

ಘಟನೆಗಳು ಮತ್ತುಅಪಘಾತಗಳು[ಬದಲಾಯಿಸಿ]

 • ನವೆಂಬರ್ ೧೫ ೧೯೬೧ರಲ್ಲಿ ವಿಕರ್ಸ್ ವಿಸ್ಕೌಂಟ್ VT-DIH ಸಿಲೊನಿನ ಕೊಲೊಂಬದಲ್ಲಿ ಸಹಪೈಲೆಟ್ ನ ಅಚಾತುರ್ಯದಿಂದಾಗಿ ರತ್ನಮಾಲನ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ತೀವ್ರ ಹಾನಿಗೆ [೧೦] ಒಳಗಾಯಿತು.
 • ಸೆಪ್ಟೆಂಬರ್ ೧೧ ೧೯೬೩ರಲ್ಲಿ ವಿಕರ್ಸ್ ವಿಸ್ಕೌಂಟ್ VT-DIO ಅಪ್ಪಳಿಸಿದ ಪರಿಣಾಮ ಆಗ್ರಾದ ದಕ್ಷಿಣ ಭಾಗದಲ್ಲಿ ಅಪಘಾತಕ್ಕೀದಾಗಿ ಅದರಲ್ಲಿದ್ದ ಎಲ್ಲಾ ೧೮ಪ್ರಯಾಣಿಕರು 51 kilometres (32 mi)[೧೧] ಅಸುನೀಗಿದರು.
 • ಇಸವಿ ೧೯೭೦ರ ಆಗಷ್ಟ ೨೯,೧೯೭೦ರಂದು ಫೊಕರ್ F೨೭ ಹಾರಾಟ ಪ್ರಾರಂಭಿಸಿದ ಕೂಡಲೇ ತಾಂತ್ರಿಕ ತೊಂದರೆಯಿಂದ ಅತ್ಯಂತ ಕಡಿದಾದ ಸಿಲ್ಚಾರ್ ಸಮೀಪ ಅವಘಢ ಸಂಭವಿಸಿ ಐವರು ಸಿಬ್ಬಂದಿ ಹಾಗು ೩೪ ಪ್ರಯಾಣಿಕರ ಸಾವಿಗೆ ಕಾರಣವಾಯಿತು.
 • ಜನವರಿ ೩೦ ೧೯೭೨ರಲ್ಲಿ ಶ್ರೀನಗರದಿಂದ ಜಮ್ಮುಗೆ ಹೋಗುತ್ತಿದ್ದ ಒಂದು ಫೋಕ್ಕರ್ F27 ನ್ನು ಲಾಹೋರ್ ಗೆ ಕೊಂಡೊಯ್ಯುವ ಮೂಲಕ ಅಪಹರಿಸಲಾಗಿತ್ತು.ಸ್ವಯಂ ಘೋಷಿತ ಕಾಶ್ಮೀರಿ ಪ್ರತ್ಯೇಕತಾವಾದಿಗಳೆನ್ನಲಾದ ಆಶ್ರಫ್ ಮತ್ತು ಹಾಶಿಮ್ ಕುರೇಶಿ ಇದನ್ನು ಅಪಹರಿಸಿದ್ದರು. ಅದರಲ್ಲಿನ ಪ್ರಯಾಣಿಕರು ಫೆಬ್ರವರಿ ೨ರಂದು ಭಾರತಕ್ಕೆ ವಾಪಸಾದರು ಆದರೆ ಹೈಜಾಕರ್ ಗಳು ಏರ್ ಕ್ರಾಫ್ಟ್ ನ್ನು ಸಂಪೂರ್ಣ ಹಾನಿಪಡಿಸಿದ್ದರು.ಇಂಡಿಯಾ ಮತ್ತು ಪಾಕಿಸ್ತಾನಗಳು ತಮ್ಮೆರಡೂ ಕಡೆಯ ಗುಪ್ತಚರ ಇಲಾಖೆಗಳನ್ನು ತರಾಟೆಗೆ ತೆಗೆದುಕೊಂಡವು.ಎರಡೂ ದೇಶಗಳ ನಡುವಿನ ಹಾರಾಟ ಪರಿಧಿಯನ್ನು ನಿಗದಿಪಡಿಸಿ ಹಾರಾಟದ ಮಿತಿಯನ್ನು ಹೇರಿದವು. ಅದೂ ಅಲ್ಲದೇ ೧೯೭೬ರ ವರೆಗೆ ಎರಡೂ ದೇಶಗಳ ಮಧ್ಯೆ ವಿಮಾನಸಂಚಾರವು ಸ್ಥಗಿತಗೊಂಡಿತು.
 • ಆಗಷ್ಟ್ ೯ ೧೯೭೧ರಲ್ಲಿ ವಿಕ್ಕರ್ಸ್ ವಿಸ್ಕೌಂಟ್ VT-DIX ಜೈಪುರದ ವಿಮಾನನಿಲ್ದಾಣದಲ್ಲಿ ರನ್ ವೇದಿಂದ ಹೊರಭಾಗಕ್ಕೆ ಓಡಿದ್ದರಿಂದ ಅದು ದುರಸ್ತಿಯಾಗದಷ್ಟು ಹಾನಿಗೊಳಗಾಯಿತು. ಈ ಏರ್ ಕ್ರಾಫ್ಟ್ ಹಿಮ್ಮುಖ ಭಾಗದಿಂದ ತೋಯ್ದ ರನ್ ವೇ ಮೇಲೆ [೧೨] ಇಳಿದಿತ್ತು.
 • ಡಿಸೆಂಬರ್ ೯ ೧೯೭೧ರಲ್ಲಿ ಹಾವ್ಕಾರ್ ಸಿಡೆಲಿ HS 748 ಮಧುರೈನಲ್ಲಿ ಇಳಿಯುವ ಸಂದರ್ಬದಲ್ಲಿಅದು ಕಡಿದಾದ ಪ್ರದೇಶಕ್ಕೆ ಹಾರಿದ ವೇಗದಲ್ಲೇ ಕೆಳಕ್ಕೆ ಧುಮಿಕಿ ಚಿನ್ನಮನುರ್ ಬಳಿ ನಾಲ್ವರು ಸಿಬ್ಬಂದಿ ಹಾಗು ೧೭ಜನ ಪ್ರಯಾಣಿಕರನ್ನು ಬಲಿ 50 mi (80 km)ತೆಗೆದುಕೊಂಡಿತು. ಹಗಲು ಹೊತ್ತಿನಲ್ಲಿ ಬೆಳಕಿನ ಕಡಿಮೆ ಪ್ರಮಾಣದಿಂದ ಅಪಘಾತಗಳು ಹೆಚ್ಚಾಗಿದ್ದು ಮಂಜು ಮಸುಕು ಬೆಳಕಿನಿಂದಾಗಿ ಇವುಗಳ ಪ್ರಮಾಣ ಅಧಿಕಎನ್ನಬಹುದು.
 • ಆಗಷ್ಟ್ ೧೧ ೧೯೭೨:ಫೊಕ್ಕರ್ F27ಏರ್ ಕ್ರಾಫ್ಟ್ ಹೊಸದಿಲ್ಲಿಯಲ್ಲಿ ಲ್ಯಾಂಡಿಂಗ್ ಪ್ರಮಾದದಿಂದಾಗಿ ನೆಲಕ್ಕಪ್ಪಳಿಸಿ ಅನಾಹುತ ಸಂಭವಿಸಿತು. ನಾಲ್ವರು ಸಿಬ್ಬಂದಿ ಮತ್ತು ೧೪ ಪ್ರಯಾಣಿಕರು ಈ ಘಟನೆಯಲ್ಲಿ ಮೃತಪಟ್ಟರು.
 • ಮೇ ತಿಂಗಳ ೩೧, ೧೯೭೩ರಲ್ಲಿ ಬೋಯಿಂಗ್ 737-2A8(VT-EAM ನೊಂದಾಯಿತ ) ದೆಹಲಿ ಬಳಿ ಇಳಿಯುವಾಗ ಅಪ್ಪಳಿಸಿ ಸುಟ್ಟು ಹೋಯಿತು.ಇದರಲ್ಲಿದ್ದ ಏಳು ಸಿಬ್ಬಂದಿಗಳಲಿ ಐವರು ಹಾಗು ೫೮ ಪ್ರಯಾಣಿಕರು ಅಸುನೀಗಿದರು.
 • ಅಕ್ಟೋಬರ್ ೧೨,೧೯೭೬ರಲ್ಲಿ ಸೂದ್ ಏವಿಯೇಶನ್ SE 210 ಕಾರಾವೆಲ್ಲೆ ವಿಮಾನ ಮುಂಬಯಿಯನಲ್ಲಿ ಟೇಕ್ ಆಫ್ ಆಗುವಾಗ ಬಲ ಎಂಜಿನ್ ಬೆಂಕಿಗಾಹುತಿಯಾಗಿ ದುರಂತ ಸಂಭವಿಸಿತು. ಸಿಬ್ಬಂದಿ ವಾಪಸಾತಿಗೆ ಪ್ರಯತ್ನಿಸಿದಾದರೂ ಎಂಜಿನ್ ಗೆ ಇಂಧನ ಪೂರೈಕೆ ನಿರಂತರವಾಗಿತ್ತು.ಇದರಿಂದಾಗಿ ಎಂಜಿನ್ ಸ್ಥಗಿತಗೊಳಿಸುವುದಾಗಲಿಲ್ಲ. ಫ್ಯೂಸ್ ಲೇಗ್ ಮತ್ತು ಹೈಡ್ರಾಲಿಕ್ ಸಿಸ್ಟೆಮ್ ಗೆ ಬೆಂಕಿ ಪಸರಿಸಿ ಅವುಗಳ ಕಾರ್ಯಾಚಾರಣೆ ನಿಂತು ಹೋಗಿ ಏರ್ ಕ್ರಾಫ್ಟ್ ನ ನಿಯಂತ್ರಣ ತಪ್ಪಿತು. ಎಲ್ಲಾ ಆರು ಸಿಬ್ಬಂದಿ ಮತ್ತು ೮೯ ಪ್ರಯಾಣಿಕರು ಕೊಲ್ಲಲ್ಪಟ್ಟರು.
 • ಆಗಷ್ಟ್ ೪,೧೯೭೯ ರಲ್ಲಿ:ಹಾವ್ಕಾರ್ ಸಿದೆಲಿ HS 748 ಮುಂಬಯಿ ಬಳಿ ಬರುತ್ತಿರುವಾಗ ವಿಮಾನ ನಿಲ್ದಾಣದಲ್ಲಿನ ಕತ್ತಲೆ ಮತ್ತು ಹವಾಮಾನದ ವೈಪರಿತ್ಯದಿಂದಾಗಿ ನೆಲಕ್ಕಪ್ಪಳಿಸಿ ನಾಲ್ವರು ಸಿಬ್ಬಂದಿ ಹಾಗು ೪೧ ಪ್ರಯಾಣಿಕರ ಸಾವಿಗೆ 6 mi (9.7 km)ಕಾರಣವಾಯಿತು.
 • ಮೇ ತಿಂಗಳ ೧೯೮೦:ರಲ್ಲಿ ಬೋಯಿಂಗ್ 737-2A8ವಿಮಾನವು ರಾಮ್ ಪುರಾತ್ ಬಳಿ ಅತ್ಯಂತ ಗಂಭೀರ ಪ್ರಕ್ಷುಬ್ದತೆಯನ್ನು ಅನುಭವಿಸಿ ಸುಮಾರು ೧೩೨ ಪ್ರಯಾಣಿಕರ ಪೈಕಿ ಇಬ್ಬರ ಸಾವಿಗೆ ಕಾರಣವಾಯಿತು.
 • ಅಕ್ಟೋಬರ್ ೧೯,೧೯೮೮ರಲ್ಲಿಫ್ಲೈಟ್ 113ಯ ಒಂದುಬೋಯಿಂಗ್ 737-2A8(ನೊಂದಾಯಿತ VT-EAH) ಅಹ್ಮದಾಬಾದ್ ಗೆ ಬರುವಾಗ ಮಂದ ಬೆಳಕಿನಿಂದಾಗಿ ವಿದ್ಯುತ್ ಕಂಬವೊಂದಕ್ಕೆ ತಗುಲಿ ಅಪಘಾತಕ್ಕೀಡಾಗಿ ಆರು ಸಿಬ್ಬಂದಿ ಹಾಗು ಓರ್ವನನ್ನು ಹೊರತುಪಡಿಸಿದಂತೆ ಎಲ್ಲಾ ೧೨೯ ಪ್ರಯಾಣಿಕರು ಜೀವ ಕಳೆದುಕೊಂಡರು.
 • ನವೆಂಬರ್ ೧೫ ರ ೧೯೯೩ರಲ್ಲಿ : ಫ್ಲೈಟ್ 440, ಒಂದು ಏರ್ ಬಸ್ A300B2-101 (ನೊಂದಾಯಿತ VT-EDV) ಹೈದ್ರಾಬಾದನ ಬೇಗಮ್ ಪುರ್ ವಿಮಾನನಿಲ್ದಾಣದಲ್ಲಿ ಮಂದ ಬೆಳಕಿನ ಕಾರಣದಿಂದ ಫ್ಲ್ಯಾಪ್ಸ್ ಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಇದು ಅಪಘಾತಕ್ಕೀಡಾಯಿತು. ಈ ಸಮಸ್ಯೆಯನ್ನು ಕೂಡಲೇ ನಿವಾರಿಸಲು ಸಿಬ್ಬಂದಿ ಹಾರಾಟ ನಡೆಸುತ್ತಲೇ ವಿಮಾನವನ್ನು ಚೆನ್ನೈಗೆ ತೆಗೆದುಕೊಂಡು ಹೋಯಿತು. ಇದನ್ನು ಬೇರೆಡೆಗೆ ತಿರುಗಿಸುವಲ್ಲಿನ ನಿಧಾನ ಮತ್ತು ಫ್ಲ್ಯಾಪ್ಸ್ ಗಳ (ಲಿಫ್ಟನ್ನು ತಿರುಗಿಸುವ ಸಾಧನ )ಹೆಚ್ಚಿನ ಬಳಕೆಯಿಂದಾಗಿ ಎಂಜಿನ್ ನಲ್ಲಿನ ಇಂಧನ ಖಾಲಿಯಾಯ್ತು. ಕೊನೆಗೆ ಈ ಏರ್ ಕ್ರಾಫ್ಟ್ ಭತ್ತದ ಗದ್ದೆಗೆ ಇಳಿಯಿತು ಆದರೆ ವಿಪರೀತ ಹಾನಿಗೊಳಗಾಯಿತು.ವಿಮಾನದಲ್ಲಿ ಅಂತಹ ದುರಂತಗಳು ಸಂಭವಿಸಲಿಲ್ಲ.
 • ಡಿಸೆಂಬರ್ ೨೪, ೧೯೯೯ರಲ್ಲಿ :ಫ್ಲೈಟ್ 814ಒಂದುಏರ್ ಬಸ್ A300B2-101' (ನೊಂದಾಯಿತ VT-EDW)ನೇಪಾಳನ ಕಠ್ಮಂಡುವಿನಿಂದ ಹೊರಟ ಸಮಯದಲ್ಲೇ ಇದನ್ನು ಅಪಹರಿಸಲಾಯಿತು.ಇದು ದೆಹಲಿಗೆ ತೆರಳುವ ಸಂದರ್ಭದಲ್ಲೇ ಅಪಹರಣಕಾರರಿಗೆ ಬಲಿಯಾಯ್ತು. ಈ ವಿಮಾನವು ಉಪಖಂಡದ ಹಲವು ಭಾಗಗಳಲ್ಲಿ ಸುತ್ತಿ ಕೊನೆಗೆ ಅಪಘಾನಿಸ್ತಾನದ ಕಂದಹಾರನಲ್ಲಿ ಒತ್ತಾಯಪೂರ್ವಕವಾಗಿ ಇಳಿಸಲಾಯಿತು.ನಂತರ ಭಾರತ ಸರ್ಕಾರ ಮತ್ತು ತಾಲಿಬಾನಿಗಳ ನಡುವೆ ಒಪ್ಪಂದದ ಮಾತುಕತೆಯಾಯಿತು. ಓರ್ವ ಪ್ರಯಾಣಿಕನ ಹತ್ಯೆಯಾಯಿತು ಉಳಿದವರನ್ನು ಬಿಡುಗಡೆಗೊಳಿಸಲಾಯಿತು. ಡಿಸೆಂಬರ್೩೧ ರ ೧೯೯೯ರಲ್ಲಿ ಫ್ಲೈಟ್ ೮೧೪ರಲ್ಲಿದ್ದ ಉಳಿದ ಪ್ರಯಾಣಿಕ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು.

ಆಯವ್ಯಯ ಶಾಸ್ತ್ರ[ಬದಲಾಯಿಸಿ]

ಇಂಡಿಯನ್ ಏರ್ ಲೈನ್ಸ್ ನ ೨೦೦೪ರ ವಾರ್ಷಿಕ ವರದಿಯಲ್ಲಿ ಅದು ಗಳಿಸಿದ ಲಾಭದ ಬಗ್ಗೆ ಕೆಳಗೆ ಪಟ್ಟಿಯೊಂದನ್ನು ನೀಡಲಾಗಿದೆ.ನಾಗರಿಕ ವಿಮಾನಯಾನ ಸಚಿವಾಲಯ ವು ಈ ಪಟ್ಟಿಯನ್ನು ಭಾರತೀಯ ಮಿಲಿಯನ ರೂಪಾಯಿಗಳಲ್ಲಿ ಇಲ್ಲಿ [೧೩] ಕೊಡಲಾಗಿದೆ.

ಕಾರ್ಯಚಟುವಟಿಕೆಯ ಆದಾಯಗಳು ನಿರ್ವಹಣಾ ಲಾಭ/(ನಷ್ಟ)ಲಾಭ/ನಷ್ಟ
೨೦೦೨ ೪೧,೦೧೫ (೧,೩೪೭)
೨೦೦೩ ೪೬,೪೯೮ ೧,೨೫೧

ಆಕರಗಳು[ಬದಲಾಯಿಸಿ]

 1. "ಆರ್ಕೈವ್ ನಕಲು". Archived from the original on 2010-04-12. Retrieved 2010-03-09.
 2. "ಆರ್ಕೈವ್ ನಕಲು". Archived from the original on 2010-04-12. Retrieved 2010-03-09.
 3. "Indian Airlines to be called 'Indian' now". Rediff.com. 2005-12-07.
 4. "Why one large airline makes economic sense". The Hindu Businessline. 2005-06-30. Retrieved 2007-07-30.
 5. "Directory: World Airlines". Flight International. 2007-04-03. pp. 92–93.
 6. "Asia's largest airline to fly soon". CNN-IBN. 2007-02-22. Retrieved 2007-06-01.
 7. "ಹಿನ್ನಲೆ". Archived from the original on 2010-01-12. Retrieved 2010-03-09.
 8. Gaurav Choudhary, Samiran Saha (2007-08-24). "Air-India, Indian Airlines merger complete". Hindustan Times. Retrieved 2009-04-28.[ಶಾಶ್ವತವಾಗಿ ಮಡಿದ ಕೊಂಡಿ]
 9. "Alliance Partner : Code Share Partners". Archived from the original on 2012-02-26. Retrieved 2010-03-09.
 10. "Accident description". Aviation Safety Network. Archived from the original on 2012-10-25. Retrieved 2009-10-02.
 11. "Accident description". Aviation Safety Network. Archived from the original on 2012-10-25. Retrieved 2009-10-06.
 12. "Accident description". Aviation Safety Network. Archived from the original on 2012-10-25. Retrieved 2009-10-08.
 13. "2004 ವಾರ್ಷಿಕ ವರದಿ" (PDF). Archived from the original (PDF) on 2010-11-28. Retrieved 2010-03-09.

ಹೊರಗಿನ ಕೊಂಡಿಗಳು[ಬದಲಾಯಿಸಿ]