ವಾಣಿಜ್ಯ(ವ್ಯಾಪಾರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಣಿಜ್ಯ ವೆಂಬುದು ವಸ್ತುಗಳನ್ನು, ಸೇವೆಗಳನ್ನು ,ಅಥವಾ ಎರಡನ್ನೂ ಉದ್ದೇಶಪೂರ್ವಕವಾಗಿ ವಿನಿಮಯ ಮಾಡಿಕೊಳ್ಳುವಿಕೆಯಾಗಿದೆ. ವಾಣಿಜ್ಯವನ್ನು ವಿಶಾಲ ಅರ್ಥದಲ್ಲಿ ವ್ಯಾಪಾರ ಅಥವಾ ವ್ಯವಹಾರವೆಂದೂ ಕರೆಯಲಾಗುತ್ತದೆ. ವಾಣಿಜ್ಯ-ವಹಿವಾಟು ನಡೆಸುವಂತಹ ಪ್ರದೇಶವನ್ನು ಅದರ ಕಾರ್ಯರೀತಿಯನ್ನು ಮಾರುಕಟ್ಟೆ ಎಂದು ಕರೆಯಲಾಗುವುದು. ವಾಣಿಜ್ಯದ ಮೂಲ ರೂಪ ವಿನಿಮಯವಾಗಿದೆ, ಸರಕುಗಳು ಮತ್ತು ಸೇವೆಗಳ ನೇರ ವಿನಿಮಯ. ಹೀಗೆ, ವಿನಿಮಯವು ಒಂದೆಡೆ ಲೋಹಗಳು, ಬೆಲೆಬಾಳುವ ಲೋಹಗಳು (ಲೋಹದಕಂಬಗಳು, ನಾಣ್ಯಗಳು),ಖರೀದಿಪತ್ರ, ಹಾಗು ಕಾಗದ ರೂಪದ ನಗದನ್ನು ಹೊಂದಿದೆ. ಇವುಗಳ ಬದಲಿಗೆ ಆಧುನಿಕ ವ್ಯಾಪಾರಿಗಳು , ಬಹುಮಟ್ಟಿಗೆ ವಿನಿಮಯ ಮಾಧ್ಯಮದ ಮೂಲಕ ವ್ಯವಹಾರವನ್ನು ನಡೆಸಿದರು, ಉದಾಹರಣೆಗೆ ಹಣ.ಅಥವಾ ನಗದು ಎನ್ನಬಹುದು. ಇದರಿಂದ, ಕೊಂಡುಕೊಳ್ಳುವುದನ್ನು ಮಾರುವುದ ರಿಂದ, ಅಥವಾ ಗಳಿಸುವುದರಿಂದ ಬೇರ್ಪಡಿಸಬಹುದು. ಹಣದ ಅನ್ವೇಷಣೆ (ಹಾಗು ನಂತರ ಖಾತೆಯಲ್ಲಿರುವ ಹಣ, ನೋಟು ಹಾಗು ಹಣದ ರೂಪದಲ್ಲಿರುವ ಇತರ ಪ್ಲಾಸ್ಟಿಕ್ ಕಾರ್ಡ್ ಗಳು (ಕ್ರೆಡಿಟ್ ಕಾರ್ಡ್), ಬಹುಮಟ್ಟಿಗೆ ವಾಣಿಜ್ಯವನ್ನು ಸುಲಭೀಕರಿಸಿ, ಅದನ್ನು ಉತ್ತೇಜಿಸಿತು. ಇಬ್ಬರು ವ್ಯಾಪಾರಿಗಳ ನಡುವಿನ ವ್ಯವಹಾರವನ್ನು ಉಭಯಪಕ್ಷೀಯ ವಾಣಿಜ್ಯವೆಂದು ಕರೆಯಲಾಗುತ್ತದೆ.ಅದೇ ಇಬ್ಬರಿಗಿಂತ ಹೆಚ್ಚಿನ ವ್ಯಾಪಾರಿಗಳ ನಡುವೆ ನಡೆಯುವ ವಾಣಿಜ್ಯವನ್ನು ಬಹುಪಕ್ಷೀಯ ವಾಣಿಜ್ಯವೆಂದು ಕರೆಯಲಾಗುತ್ತದೆ.

ಜರ್ಮನಿಯಲ್ಲಿ ವ್ಯಾಪಾರ ಮಾಡುವವರು, 16ನೇ ಶತಮಾನದ ಅವಧಿಯಲ್ಲಿ.

ಕೆಲಸವನ್ನು , ವಿಶಿಷ್ಟಗೊಳಿಸುವ ಹಾಗು ಹಂಚುವ ಕಾರಣದಿಂದ ವ್ಯವಹಾರವು ಮನುಷ್ಯನ ಉಪಯೋಗಕ್ಕಾಗಿ ಅಸ್ತಿತ್ವದಲ್ಲಿದೆ.ಬಹುಪಾಲು ಜನರು ಇತರ ಉತ್ಪನ್ನಗಳನ್ನು ವ್ಯಾಪಾರ ಮಾಡಲು ,ಚಿಕ್ಕಪ್ರಮಾಣದ ಉತ್ಪಾದನೆಯ ಕಡೆ ಗಮನವಹಿಸುತ್ತಾರೆ. ವಾಣಿಜ್ಯವು ಪರಸ್ಪರ ಆಯಾ ಪ್ರದೇಶಗಳ ನಡುವೆ ನಡೆಯುತ್ತದೆ, ಏಕೆಂದರೆ ವಿವಿಧ ಪ್ರದೇಶಗಳು ವ್ಯಾಪಾರ ಮಾಡುವಂತಹ ಸರಕುಗಳ ಉತ್ಪಾದನೆಯಲ್ಲಿ ತುಲನಾತ್ಮಕ ಲಾಭವನ್ನುಹೊಂದಿರುತ್ತವೆ. ಅಥವಾ ಪ್ರದೇಶಗಳ ವಿವಿಧ ವಿಸ್ತೀರ್ಣ ಒಟ್ಟು ಉತ್ಪಾದನೆಯ ಲಾಭವನ್ನು ತಂದುಕೊಡುತ್ತದೆ. ಅದೇ ರೀತಿಯಲ್ಲಿ, ಸ್ಥಳಗಳ ನಡುವೆ ಮಾರುಕಟ್ಟೆ ಬೆಲೆಗಳಲ್ಲಿ ನಡೆಯುವ ವ್ಯಾಪಾರ ಎರಡೂ ಸ್ಥಳಗಳಿಗೂ ಲಾಭದಾಯಕವಾಗಿರುತ್ತದೆ.

ಗುದಲಜರದಲ್ಲಿ ಸ್ಯಾನ್ ಜುವನ್ ದೆ ಡಿವೊಸ್ ಮಾರುಕಟ್ಟೆ , ಜಲಿಸ್ಕೊ

ಚಿಲ್ಲರೆವ್ಯಾಪಾರವು , ವಸ್ತುಗಳ ಮಾರಾಟವನ್ನು ಅಥವಾ ನಿರ್ದಿಷ್ಟ ಸ್ಥಳದಿಂದ ವ್ಯಾಪಾರದ ಸರಕುಗಳನ್ನು ಕೊಂಡುಕೊಂಡು ವ್ಯಾಪಾರ ಮಾಡುವ ಕ್ರಿಯೆಯನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ವಿವಿಧ ಸರಕಿನ ಮಳಿಗೆಗಳು, ಬೂಟೀಕ್ ಅಥವಾ ಕಿಯಾಸ್ಕ್, ಅಥವಾ ಮೇಲ್ (ಅಂಚೆಯ), ಹಾಗು ಚಿಕ್ಕದಾದ ಅಥವಾ ವ್ಯಕ್ತಿಗಳ ಮೂಲಕ ಕೊಂಡುಕೊಳ್ಳುವವನು ನೇರವಾಗಿ ಬಳಸಬಹುದು.[೧] ಸಗಟು ವ್ಯಾಪಾರ ಎಂಬುದನ್ನು , ಸರಕು ಅಥವಾ ವಾಣಿಜ್ಯ ಸರಕುಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ, ಕೈಗಾರಿಕಾ ,ವ್ಯಾಪಾರಿ ಸಂಬಂಧೀ, ಸಾಂಸ್ಥಿಕ ಅಥವಾ ಇತರ ವೃತ್ತಿಪರ ವ್ಯಾಪಾರದ ಬಳಕೆದಾರರಿಗೆ, ಅಥವಾ ಇತರ ಸಗಟು ವ್ಯಾಪಾರಿಗಳಿಗೆ ಹಾಗು ಇದರಡಿಯಲ್ಲಿ ಬರುವಂತಹ ಸೇವೆಗಳಿಗೆ ಮಾರಾಟಮಾಡುವುದು ಎಂದು ವ್ಯಾಖ್ಯಾನಿಸಲಾಗಿದೆ.[೨]

ವ್ಯಾಪಾರವು, ವ್ಯಾಪಾರಿಗಳಿಂದ ನಡೆಯುವಂತಹ ಚಟುವಟಿಕೆಯನ್ನು ಸೂಚಿಸುತ್ತದೆ. ಅಲ್ಲದೇ ಇದು ಹಣಕಾಸಿನ ಮಾರುಕಟ್ಟೆಗಳಲ್ಲಿ ಇತರ ಮಾರುಕಟ್ಟೆ ಪ್ರತಿನಿಧಿಗಳು ನಡೆಸುವಂತಹ ಕ್ರಿಯೆಯನ್ನೂ ಕೂಡ ಸೂಚಿಸುತ್ತದೆ.

ವಾಣಿಜ್ಯದ ಇತಿಹಾಸ[ಬದಲಾಯಿಸಿ]


ವಾಣಿಜ್ಯವು, ಪ್ರಾಗೈತಿಹಾಸಿಕ ಕಾಲದಲ್ಲಿ ಸಂವಹನ ಪ್ರಾರಂಭವಾದಾಗ ಅದರ ಜೊತೆಯಲ್ಲಿಯೇ ಸಂಪರ್ಕದ ಜಾಲವೂ ಹುಟ್ಟಿಕೊಂಡಿತು. ವ್ಯಾಪಾರ,(ಪ್ರಾಚೀನ)ಪ್ರಾಗೈತಿಹಾಸಿಕ ಕಾಲದ ಜನರಿಗೆ ಇದ್ದಂತಹ ಪ್ರಮುಖ ಸೌಲಭ್ಯವಾಗಿದೆ.ಆಧುನಿಕ ಕಾಲದ ಕರನ್ಸಿಯನ್ನು ಕಂಡುಹಿಡಿಯುವ ಮೊದಲು ಆ ಕಾಲದ ಜನ ಸರಕುಗಳನ್ನು ಮತ್ತು ಸೇವೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಪೀಟರ್ ವಾಟ್ ಸನ್, ವಾಣಿಜ್ಯದ ಇತಿಹಾಸವನ್ನು, ಸುಮಾರು 150,000 ವರ್ಷಗಳ ಹಿಂದಿನದ್ದಾಗಿದೆ ಎಂದು ತಿಳಿಸಿದ್ದಾನೆ.[೩]

ದಾಖಲಿಸಲ್ಪಟ್ಟ ಮಾನವ ಇತಿಹಾಸದುದ್ದಕ್ಕೂ ವಾಣಿಜ್ಯ ತನ್ನ ಸ್ಥಾನವನ್ನು ಪಡೆದುಕೊಂಡಿದೆ ಎಂದು ನಂಬಲಾಗಿದೆ. ಶಿಲಾಯುಗದ ಸಮಯದಲ್ಲಿ ಖನಿಜದ ಕಾರ್ಗಲ್ಲು ಹಾಗು ಚಕಮಕಿ ಕಲ್ಲುಗಳ ವಿನಿಮಯ ನಡೆಯುತಿತ್ತು ಎಂಬುದಕ್ಕೆ ಪುರಾವೆಗಳಿವೆ. ಆಭರಣಗಳನ್ನು ತಯಾರಿಸಲು ಬಳಸುವ ವಸ್ತುಗಳ ವ್ಯಾಪಾರವನ್ನು ಈಜಿಫ್ಟ್ ನೊಂದಿಗೆ 3000 BC ಯಲ್ಲಿ ಮಾಡಲಾಗುತ್ತಿತ್ತು. ಮೆಸಪಟೋಮಿಯ ನಾಗರಿಕತೆಯಲ್ಲಿದ್ದ ಸುಮೇರಿಯನ್ ಗಳು ಸಿಂಧೂ ಕಣಿವೆಯ ಹರಪ್ಪನ್ ನಾಗರಿಕತೆಯ ಜೊತೆಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ, ದೂರವ್ಯಾಪ್ತಿಯ ವ್ಯಾಪಾರಿ ಮಾರ್ಗವು ಮೊಟ್ಟ ಮೊದಲ ಬಾರಿಗೆ 3ನೇ ಸಹಸ್ರವರ್ಷ BCಯಲ್ಲಿ ಕಾಣಿಸಿಕೊಂಡಿತು. ಫಿನಿಷಿಯನ್ನರು,ಮೆಡಿಟರೇನಿಯನ್ ಸಮುದ್ರದ ಸುತ್ತ ಪ್ರವಾಸವನ್ನು ಕೈಗೊಳ್ಳುವ ಮೂಲಕ, ಹಾಗು ಕಂಚನ್ನು ತಯಾರಿಸಲು ಬೇಕಾದ ತವರಕ್ಕಾಗಿ ಉತ್ತರದಲ್ಲಿ ಬ್ರಿಟನ್ ಗೆ ಪ್ರವಾಸ ಕೈಗೊಂಡು ಸಮುದ್ರದ ವ್ಯಾಪಾರಿಗಳೆಂದು ಕರೆಯಲ್ಪಟ್ಟಿದ್ದಾರೆ. ಈ ಉದ್ದೇಶಕ್ಕಾಗಿ ಅವರು ವಾಣಿಜ್ಯ ವಸಾಹತುಗಳನ್ನು ಸ್ಥಾಪಿಸಿದರು. ಇವುಗಳನ್ನು ಗ್ರೀಕರು(ಬೃಹತ್ ಡಿಪಾರ್ಟ್ ಮೆಂಟಲ್ ಸ್ಟೋರ್ ) ಎಂಪೋರಿಯವೆಂದು ಕರೆದಿದ್ದಾರೆ. ಗ್ರೀಕ್ ನಾಗರಿಕತೆಯ ಪ್ರಾರಂಭದಿಂದ ರೋಮನ್ ಸಾಮ್ರಾಜ್ಯ 5ನೇ ಶತಮಾನದಲ್ಲಿ ಮುಳುಗುವ ವರೆಗೂ,ಆರ್ಥಿಕವಾಗಿ ಲಾಭದಾಯಕವಾಗಿತ್ತು.ನಂತರ ಈ ವ್ಯಾಪಾರವು ಯುರೋಪಿಗೆ ,ಭಾರತ ಮತ್ತು ಚೀನಾವನ್ನು ಒಳಗೊಂಡಂತೆ ದೂರಪ್ರಾಚ್ಯದಿಂದ, ಬೆಲೆಬಾಳುವ ಸಂಬಾರು ಪದಾರ್ಥಗಳನ್ನು ತಂದುಕೊಡುತ್ತಿತ್ತು. ರೋಮನ್ ವ್ಯಾಪಾರ, ಅದರ ಸಾಮ್ರಾಜ್ಯವನ್ನು ಅಭಿವೃದ್ಧಿಯಾಗುವಂತೆ ಹಾಗು ಅಸ್ತಿತ್ವದಲ್ಲಿರುವಂತೆ ಮಾಡಿತು. ರೋಮನ್ ಸಾಮ್ರಾಜ್ಯವು ಸ್ಥಿರ ಹಾಗು ಸುರಕ್ಷಿತ ಸಾರಿಗೆ ಸಂಪರ್ಕವನ್ನು ನೀಡಿತ್ತು.ಈ ಸಾರಿಗೆ ಸಂಪರ್ಕದಿಂದ ಸರಕುಗಳನ್ನು ಸಾಗಿಸುತ್ತಿದ್ದ ಹಡಗುಗಳು ಕಡಲುಗಳ್ಳತನದ ಹೆದರಿಕೆ ಇಲ್ಲದೆಯೇ ಸಾಗುವಂತಾಯಿತು.

ರೋಮನ್ ಸಾಮ್ರಾಜ್ಯದ ಅಂತ್ಯ ಹಾಗು ಕತ್ತಲೆಯುಗ ಪಾಶ್ಚಾತ್ಯ ಸಾಮ್ರಾಜ್ಯದಲ್ಲಿ ಅಭದ್ರತೆಯನ್ನು ಮೂಡಿಸಿತ್ತು.ಅಲ್ಲದೇ ಪಾಶ್ಚಾತ್ಯ ಲೋಕದಲ್ಲಿ ವ್ಯಾಪಾರ ಸಂಪರ್ಕ ಕುಸಿಯುವಂತೆಯೂ ಮಾಡಿತ್ತು. ಆದರೂ, ವಾಣಿಜ್ಯದ ಅಭಿವೃದ್ದಿ ಆಫ್ರಿಕಾ, ಮಧ್ಯಪ್ರಾಚ್ಯ, ಭಾರತ, ಚೀನಾ ಹಾಗು ಆಗ್ನೇಯ ಏಷ್ಯಾ ಮೊದಲಾದ ದೇಶಗಳಲ್ಲಿ ಮುಂದುವರೆಯಿತು. ಕೆಲವು ವ್ಯಾಪಾರಗಳು ಪಶ್ಚಿಮದಲ್ಲಿಯೂ ಕಾಣಿಸಿಕೊಂಡವು; ಉದಾಹರಣೆಗೆ, ರಾಧನೈಟ್ಸ್, ಇದು ಮಧ್ಯಕಾಲೀನದ ಜ್ಯೂಯಿಷ್ ವ್ಯಾಪಾರಿಗಳ ಸಂಘ ಅಥವಾ ಸಂಘಟನೆಯ ಗುಂಪಾಗಿದೆ. (ಪದದ ಸರಿಯಾದ ಅರ್ಥ ಇತಿಹಾಸವನ್ನು) ಇವರು ಯುರೋಪ್ ನಲ್ಲಿ ಕ್ರೈಸ್ತರೊಡನೆ , ಸಮೀಪದಲ್ಲಿದ್ದ ಪ್ರಾಚ್ಯದಲ್ಲಿ ಮುಸಲ್ಮಾನರೊಡನೆ ವ್ಯಾಪಾರವನ್ನು ಮಾಡಿದ್ದರು.

ಸುಯಬ್ ಮತ್ತು ತಲಾಸ್ ಗಳು ಉತ್ತರದಲ್ಲಿ ಪ್ರಮುಖ ಕೇಂದ್ರಗಳೆಂದು ಕರೆಯಲ್ಪಡುವುದರ ಜೊತೆಗೆ ಸಾಗ್ಡಿಯನ್ಸ್ ರು ಆಳುತ್ತಿದ್ದ ಪೂರ್ವ-ಪಶ್ಚಿಮ ವಾಣಿಜ್ಯ ಮಾರ್ಗಗಳನ್ನು 4 ನೇ ಶತಮಾನದ AD ಯ ನಂತರ 8ನೇ ಶತಮಾನದ AD ಯವರೆಗೆ ಸಿಲ್ಕ್ ರೋಡ್ ಎಂದು ಕರೆಯಲಾಗುತ್ತಿತ್ತು. ಇವರುಗಳು ಮಧ್ಯ ಏಷ್ಯಾಕ್ಕೆ ಪ್ರಯಾಣ ಬೆಳೆಸಿದ ತಂಡಗಳಲ್ಲಿ ಪ್ರಮುಖ ವರ್ತಕರಾಗಿದ್ದಾರೆ.

8 ರಿಂದ 11 ನೇ ಶತಮಾನದವರೆಗೆ,ವೈಕಿಂಗ್ ಗಳು ಮತ್ತು ವರಾನ್ಗಿಯನ್ಸರು ಸ್ಕ್ಯಾಂಡಿನೇವಿಯಾಕ್ಕೆ ಹೋಗಿ ಬಂದು ಹಡಗಿನ ಪ್ರಯಾಣದ ಮೂಲಕ ವ್ಯಾಪಾರ ಮಾಡಿದರು. ವೈಕಿಂಗ್ಸ್ ಪಾಶ್ಚಾತ್ಯ ಸಾಮ್ರಾಜ್ಯಕ್ಕೆ ಪ್ರಯಾಣ ಬೆಳೆಸಿದರೆ, ವರಾನ್ಜಿಯನ್ಸ್ ರಷ್ಯಾಕ್ಕೆ ಪ್ರಯಾಣ ಬೆಳೆಸಿದರು. ದಿ ಹ್ಯಾನ್ಸಿಯಾಟಿಕ್ ಲೀಗ್ (ವರ್ತಕ ಕೂಟ) ಎಂಬುದು ವಾಣಿಜ್ಯ ನಗರಗಳ ಒಕ್ಕೂಟವಾಗಿದ್ದು,13ನೇ ಶತಮಾನದಿಂದ 17 ನೇ ಶತಮಾನದ ವರೆಗೆ ಬಹುಪಾಲು ಉತ್ತರ ಯುರೋಪ್ ಹಾಗು ಬಾಲ್ಟಿಕ್ ಗಳ ಮೇಲಿನ ವಾಣಿಜ್ಯ ಏಕಸಸೌಮ್ಯವನ್ನು ನಡೆಸಿಕೊಂಡುಬಂದಿದೆ.

ವಾಸ್ಕೋಡಗಾಮ,ಆಫ್ರಿಕಾ ಭೂಖಂಡದುದ್ದಕ್ಕೂ ನೌಕಾಯಾನ ಕೈಗೊಂಡ ಸಂದರ್ಭದಲ್ಲಿ ಕ್ಯಾಲಿಕಟ್ಅನ್ನು ತಲುಪಿದಾಗ , ಯುರೋಪಿನ ಸಂಬಾರು ಪದಾರ್ಥಗಳ ವ್ಯಾಪಾರವನ್ನು 1498 ರಲ್ಲಿ ಅನ್ವೇಷಿಸಿದ. ಇದಕ್ಕೂ ಮೊದಲು ,ಭಾರತದಿಂದ ಯುರೋಪಿಗೆ ಧಾರಾಳವಾಗಿ ಹರಿದುಹೋಗುತ್ತಿದ್ದ ಸಂಬಾರು ಪದಾರ್ಥಗಳ ರಫ್ತನ್ನು ಇಸ್ಲಾಮ್ ಶಕ್ತಿಗಳು,ಅದರಲ್ಲೂ ವಿಶೇಷವಾಗಿ ಈಜಿಪ್ಟ್ ನಿಯಂತ್ರಿಸುತ್ತಿತ್ತು. ಸಂಬಾರು ಪದಾರ್ಥಗಳ ವ್ಯಾಪಾರವು, ಪ್ರಮುಖ ಆರ್ಥಿಕ ಮಹತ್ವ ಪಡೆದಿದೆ. ಅಲ್ಲದೇ ಇದು ಯುರೋಪಿನಲ್ಲಿ ಪರಿಶೋಧನೆಯ ಅವಧಿ ಯನ್ನು ಉತ್ತೇಜಿಸಲು ಸಹಾಯಮಾಡಿತು. ಸಂಬಾರು ಪದಾರ್ಥಗಳನ್ನು ಯುರೋಪಿಗೆ ಪೂರ್ವ ದೇಶಗಳಿಂದ ತರಲಾಗುತ್ತಿತ್ತು. ಅಲ್ಲದೇ ಇದು ಬೆಲೆಬಾಳುವ ವ್ಯಾಪಾರೀ ಸರಕುಗಳನ್ನು, ಕೆಲವೊಮ್ಮೆ ಚಿನ್ನವನ್ನು ಒಳಗೊಂಡಿರುತ್ತಿತ್ತು.

16ನೇ ಶತಮಾನದಲ್ಲಿ ಹಾಲೆಂಡ್,ವ್ಯಾಪಾರದ ಮೇಲೆ ಯಾವುದೇ ವಿನಿಮಯ ನಿಯಂತ್ರಣಗಳನ್ನು ವಿಧಿಸದೆ ಹಾಗು ಸರಕುಗಳ ಅನಿರ್ಬಂಧ ಚಟುವಟಿಕೆಯನ್ನು ಸಮರ್ಥಿಸುವ ಮೂಲಕ ಅನಿರ್ಬಂಧ ವಾಣಿಜ್ಯದ ಕೇಂದ್ರವಾಗಿತ್ತು. ಈಸ್ಟ್ ಇಂಡಿಸ್ ನಲ್ಲಿ ವಾಣಿಜ್ಯವು 16 ನೇ ಶತಮಾನದಲ್ಲಿ ಪೋರ್ಚುಗಲ್ ನಿಂದ, 17ನೇ ಶತಮಾನದಲ್ಲಿ ನೆದರಲ್ಯಾಂಡ್ ನಿಂದ , ಹಾಗು 18ನೇ ಶತಮಾನದಲ್ಲಿ ಬ್ರಿಟಿಷರಿಂದ ಆಡಳಿತದ ನಿಯಂತ್ರಣಕ್ಕೆ ಒಳಪಟ್ಟಿತು. ಸ್ಪ್ಯಾನಿಷ್ ಸಾಮ್ರಾಜ್ಯವು, ಅಟ್ಲಾಂಟಿಕ್ ಮತ್ತು ಫೆಸಿಫಿಕ್ ಸಾಗರದುದ್ದಕ್ಕೂ ಕಾಯಂ ಆದ ವಾಣಿಜ್ಯ ಸಂಪರ್ಕವನ್ನು ಅಭಿವೃದ್ಧಿಪಡಿಸಿತ್ತು.

17ನೇ ಶತಮಾನದಲ್ಲಿ ಡ್ಯಾನ್ ಜಿಗ್

1776 ರಲ್ಲಿ ಆಡಂ ಸ್ಮಿತ್ ಆನ್ ಇನ್ಕ್ವೇರಿ ಇನ್ ಟು ದಿ ನೇಚರ್ ಅಂಡ್ ಕಾಸಸ್ ಆಫ್ ದಿ ವೆಲ್ತ್ ಆಫ್ ನೇಷನ್ಸ್ ಎಂಬ ಗ್ರಂಥವನ್ನು ಪ್ರಕಟಿಸಿದನು. ಇದು ವಾಣಿಜ್ಯ ಸಿದ್ಧಾಂತವನ್ನು ಟೀಕಿಸಿತು.ಅಲ್ಲದೇ ಆರ್ಥಿಕತೆಯ ವಿಶೇಷ ಪ್ರಜ್ಞೆ ಯು ರಾಷ್ಟ್ರಕ್ಕೆ ವ್ಯವಹಾರ ಸಂಸ್ಥೆಗಳಷ್ಟೇ ಲಾಭವನ್ನು ತಂದುಕೊಂಡುತ್ತದೆ ಎಂಬುದನ್ನು ತೋರಿಸಿತು. ಈ ಕಾರಣಕ್ಕಾಗಿ ಶ್ರಮಿಕ ಶಕ್ತಿ ವಿತರಣೆಯನ್ನು ಮಾರುಕಟ್ಟೆಯ ವಿಸ್ತೀರ್ಣದ ಆಧಾರದ ಮೇಲೆ ಸೀಮಿತಗೊಳಿಸಲಾಗಿದೆ. ರಾಷ್ಟ್ರಗಳು ದೊಡ್ಡ ಮಾರುಕಟ್ಟೆಯಲ್ಲಿ ಪ್ರವೇಶ ಪಡೆಯುವುದರಿಂದ ಕಾರ್ಯವನ್ನು ಹೆಚ್ಚು ದಕ್ಷತೆಯಿಂದ ವಿಂಗಡಿಸಬಹುದು. ಅಲ್ಲದೇ ಅದರಿಂದ ಹೆಚ್ಚು ಉತ್ಪಾದಕತೆ ಸಾಧ್ಯವಾಗಬಹುದು ಎಂಬುದನ್ನು ಆತ ಹೇಳಿದನು. ನಿರ್ದಿಷ್ಟ ಉದ್ಯಮದ ಮೇಲೆ ಬಂಡವಾಳ ಹೂಡಿ,ವ್ಯಾಪಾರ ಮಾಡುವಂತಹ ರಾಷ್ಟ್ರಕ್ಕೆ ನಷ್ಟವನ್ನು ಉಂಟು ಮಾಡುವ, ಆಮದು ಹಾಗು ರಫ್ತಿನ "ಮೋಸ"ವನ್ನು ನಿಯಂತ್ರಣ ಮಾಡುವ ಎಲ್ಲಾ ಪುನರ್ವ್ಯವಸ್ಥೆಗಳನ್ನು ತಾನು ಪರಿಗಣಿಸುವುದಾಗಿ ಸ್ಮಿತ್ ಹೇಳಿದನು.

1799 ರಲ್ಲಿ ,ಪ್ರಪಂಚದ ಅತಿ ದೊಡ್ಡ ಕಂಪನಿಯಾಗಿದ್ದ ಡಚ್ ಈಸ್ಟ್ ಇಂಡಿಯ ಕಂಪನಿ, ಪ್ರತಿಸ್ಪರ್ಧಿ ಅನಿರ್ಬಂಧ ವಾಣಿಜ್ಯದ ಆಗಮನದಿಂದ ಬಹುಮಟ್ಟಿಗೆ ದಿವಾಳಿಯಾಯಿತು.

ಟಿಮ್ ಬುಕುಟುವಿನ ಜೊತೆಯಲ್ಲಿ ಬರ್ಬರರ ವ್ಯಾಪಾರ,1853

1817ರಲ್ಲಿ , ಡೇವಿಡ್ ರಿಕಾರ್ಡೊ, ಜೆಮ್ಸ್ ಮಿಲ್ ಹಾಗು ರಾಬರ್ಟ್ ಟೊರೆನ್ಸ್ ಎಂಬುವವರು ತುಲನಾತ್ಮಕ ಪ್ರಯೋಜನವೆಂಬ ಜನಪ್ರಿಯ ಸಿದ್ಧಾಂತದಲ್ಲಿ, ಅನಿರ್ಬಂಧ ವಾಣಿಜ್ಯ ಉದ್ಯಮಕ್ಕೆ ಸಡಿಲತೆಯಲ್ಲೂ ಹಾಗು ಶಕ್ತಿಶಾಲಿಯಾಗಿಯೂ ಲಾಭವನ್ನು ತಂದುಕೊಡುತ್ತದೆ ಎಂಬುದನ್ನು ಸಾಬೀತುಪಡಿಸಿದರು. ಪ್ರಿನ್ಸಿಪಲ್ಸ್ ಆಫ್ ಪಾಲಿಟಿಕಲ್ ಎಕಾನಮಿ ಅಂಡ್ ಟ್ಯಾಕ್ಸೆಷನ್ ಎಂಬ ಪುಸ್ತಕದಲ್ಲಿ ರಿಕಾರ್ಡೊ ಮುಂದುವರೆಸಿದ ಸಿದ್ಧಾಂತ, ಸಾಮಾನ್ಯ ಸಿದ್ಧಾಂತದ(ಸಾಮಾನ್ಯ ಪ್ರಜ್ಞೆಯ) ವಿರುದ್ಧವಾಗಿದೆ ಎಂದೂ ಅರ್ಥಶಾಸ್ತ್ರದಲ್ಲಿ ತಿಳಿಯಲಾಗಿದೆ:

ಅನನುಭವಿ ಉತ್ಪಾದಕ ವಾಣಿಜ್ಯ ಸರಕನ್ನು ಕಳುಹಿಸಿದಾಗ ,ಅದನ್ನು ಇನ್ನು ಹೆಚ್ಚು ಸಮರ್ಥವಾಗಿ ಉತ್ಪಾದಿಸಲು ಸಾಧ್ಯವಾಗುವ ಮೂಲಕ ಅದು ರಾಷ್ಟ್ರಕ್ಕೆ ಲಾಭವನ್ನು ತಂದುಕೊಡುತ್ತದೆ,ಅಲ್ಲದೇ ಎರಡೂ ರಾಷ್ಟ್ರಗಳು ಲಾಭವನ್ನು ಪಡೆಯುತ್ತವೆ.

19 ನೇ ಶತಮಾನದ ಮಧ್ಯಭಾಗದಲ್ಲಿ ಅನಿರ್ಬಂಧ ವಾಣಿಜ್ಯದ ಪ್ರಾಬಲ್ಯ, ಪ್ರಧಾನವಾಗಿ ರಾಷ್ಟ್ರೀಯ ಲಾಭವನ್ನು ಆಧರಿಸಿತ್ತು. ಯಾವುದೇ ಪ್ರತ್ಯೇಕ ರಾಷ್ಟ್ರ ಅದರ ಸ್ವಪ್ರಯೋಜನಕ್ಕಾಗಿ ಆಮದಿನ ಮೇಲೆ ಅದರ ಮಿತಿಗಳನ್ನು ಹೇರುವುದರಲ್ಲಿ ಲಾಭವಿದೆಯೇ ಎಂಬುದರ ಮೇಲೆ ಲೆಕ್ಕಚಾರ ಮಾಡಲಾಗುತ್ತಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಯನ್ನು ನಿರ್ಧರಿಸುವ ಅಧಿಕಾರದ ಸಂಪೂರ್ಣ ಹಕ್ಕನ್ನು ಹೊಂದಿರುವ ರಾಷ್ಟ್ರ, ತೆರಿಗೆ ಗಳನ್ನು ಹೇರುವುದರ ಮೂಲಕ ವಾಣಿಜ್ಯದ ದುರುಪಯೋಗ ಮಾಡಿಕೊಳ್ಳಬಹುದು.ಅಲ್ಲದೇ ಅದು ಪ್ರತಿಕ್ರಿಯಿಸುವುದು ವಾಣಿಜ್ಯ ನೀತಿಯಲ್ಲಿ ವಾಣಿಜ್ಯ ವಿನಿಮಯವಾಗಬಹುದು ಎಂಬುದನ್ನು ಜಾನ್ ಸ್ಟುವರ್ಟ್ ಮಿಲ್ ಸಾಬೀತುಪಡಿಸಿ ತೋರಿಸಿದ್ದಾನೆ. ರಿಕಾರ್ಡೊ ಮತ್ತು ಇತರರು ಇದನ್ನು ಮೊದಲೇ ತಿಳಿಸಿದ್ದರು. ಇದನ್ನು ಅನಿರ್ಬಂಧ ವಾಣಿಜ್ಯದ ಸಾರ್ವತ್ರಿಕ ಮೋಸಕ್ಕೆ ಸಾಕ್ಷಿಯಾಗಿ ತೆಗೆದುಕೊಳ್ಳಲಾಯಿತು. ಸಂಪೂರ್ಣವಾಗಿ ಅನಿರ್ಬಂಧ ವಾಣಿಜ್ಯದ ನೀತಿಗಿಂತ ಬದಲಿ ವಾಣಿಜ್ಯ ನೀತಿಯನ್ನು ಅನುಸರಿಸುವ ಮೂಲಕ ವಾಣಿಜ್ಯದ ಆರ್ಥಿಕ ಹೆಚ್ಚುವರಿ ರಾಷ್ಟ್ರಕ್ಕೆ ಸೇರಿಕೊಳ್ಳುವುದು. ಸಂಪೂರ್ಣವಾಗಿ ಅಭಿವೃದ್ಧಿ ಹೊಂದುವವರೆಗೂ ಕೆಲವು ಸಮಯದವರೆಗೆ ಸರ್ಕಾರವು ಹೊಸ ಉದ್ಯಮಗಳನ್ನು ರಕ್ಷಿಸುವ "ಕರ್ತವ್ಯವನ್ನು" ಹೊಂದಿರುತ್ತದೆ ಎಂಬ ಸಿದ್ಧಾಂತವನ್ನು ಬೆಂಬಲಿಸಲಾಯಿತು. ಮಿಲ್ ಅಭಿವೃದ್ಧಿಪಡಿಸಿದಂತಹ ಬೆಳವಣಿಗೆಯ ಪ್ರಾರಂಭಿಕ ಸ್ಥಿಯಲ್ಲಿರುವ ಉದ್ಯಮಗಳು ಇದನ್ನು ಕೆಲವೇ ವರ್ಷಗಳಲ್ಲಿ ಅನುಸರಿಸಿದವು. ಕೈಗಾರೀಕರಣ ಮಾಡುವ ಹಾಗು ಇಂಗ್ಲೀಷ್ ರಫ್ತುದಾರರನ್ನು ಮೀರಿಸುವ ಮೂಲಕ ಇದು ಅನೇಕ ರಾಷ್ಟ್ರಗಳ ಕಾರ್ಯನೀತಿಯಾಯಿತು. ಈ ತೆರಿಗೆಯು ಕೆಲವು ಪರಿಸ್ಥಿತಿಗಳಲ್ಲಿ ಹೊಸದಾಗಿ ಸದಸ್ಯತ್ವ ಪಡೆದಿರುವ ರಾಷ್ಟ್ರಕ್ಕೆ ಲಾಭದಾಯಕವಾಗಬದುದು;ಆದರೆ ಪ್ರಂಪಚಕ್ಕೆ ಎಂದಿಗೂ ದೊಡ್ಡ ಪ್ರಮಾಣದಲ್ಲಿ ಲಾಭದಾಯಕವಾಗಲಾರದು, ಎಂಬುದನ್ನು ತೋರಿಸುವ ಮೂಲಕ ಮಿಲ್ಟನ್ ಫ್ರೈಡ್ ಮನ್ ನಂತರ ಈ ವಿಚಾರದ ಎಳೆಯನ್ನು ಮುಂದುವರೆಸಿದನು.[೪]

1929 ರಿಂದ 1930ರ ಕೊನೆಯವರೆಗೆ ನಡೆದ ಆರ್ಥಿಕ ಕುಸಿತ ದೊಡ್ಡ ಆರ್ಥಿಕ ಹಾಗು ಕೈಗಾರಿಕಾ ಕುಸಿತ ಎನಿಸಿದೆ. ಈ ಸಮಯದಲ್ಲಿ ,ವಾಣಿಜ್ಯ ಹಾಗು ಇತರ ಆರ್ಥಿಕ ಸೂಚಕಗಳಲ್ಲಿ ದೊಡ್ಡ ಕುಸಿತವೇ ಉಂಟಾಗಿತ್ತು.

ಅನಿರ್ಬಂಧ ವಾಣಿಜ್ಯದ ಕೊರತೆಯೇ, ಆರ್ಥಿಕ ಹಾಗು ಕೈಗಾರಿಕಾ ಕುಸಿತಕ್ಕೆ ಮುಖ್ಯ ಕಾರಣ ಎಂದು ಅನೇಕರು ಭಾವಿಸಿದರು. ವಿಶ್ವಯುದ್ಧ II ರ ಸಮಯದಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮಾತ್ರ ಆರ್ಥಿಕ ಕುಸಿತ ಕೊನೆಗೊಂಡಿತು. 1944 ರಲ್ಲಿ ನಡೆಯುತ್ತಿದ್ದ ಯುದ್ಧದ ಸಮಯದಲ್ಲೂ ಕೂಡ, ರಾಷ್ಟ್ರೀಯ ವ್ಯಾಪಾರಕ್ಕೆ ನಿರ್ಬಂಧ ಹೇರುವುದನ್ನು ಹಾಗು ಆರ್ಥಿಕ ಕುಸಿತವನ್ನು ತಡೆಯಲು,44 ರಾಷ್ಟ್ರಗಳು ಬ್ರಿಟನ್ ವುಡ್ಸ್ ಕರಾರಿಗೆ ಸಹಿಹಾಕಿದವು. ಈ ಒಪ್ಪಂದ ಅಂತರರಾಷ್ಟ್ರೀಯ ರಾಜಕೀಯ ಅರ್ಥಶಾಸ್ತ್ರವನ್ನು ನಿಯಂತ್ರಿಸುವ ನಿಯಮಗಳನ್ನು ಹಾಗು ಸಂಸ್ಥೆಗಳನ್ನು ಹುಟ್ಟುಹಾಕಿತು: ದಿ ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ ಹಾಗು ದಿ ಇಂಟರ್ ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ ಸ್ಟ್ರಕ್ಷನ್ ಅಂಡ್ ಡೆವಲಪ್ ಮೆಂಟ್ (ವಿಶ್ವ ಬ್ಯಾಂಕ್ ಹಾಗು ಬ್ಯಾಂಕ್ ಫಾರ್ ಇಂಟರ್ ನ್ಯಾಷನಲ್ ಸೆಟಲ್ ಮೆಂಟ್ಸ್ ಎಂದು ವಿಂಗಡಿಸಲಾಯಿತು). ಸಾಕಷ್ಟು ರಾಷ್ಟ್ರಗಳು ಒಪ್ಪಂದವನ್ನು ಅನುಮೋದಿಸಿದ ನಂತರ ಈ ಸಂಸ್ಥೆ 1946 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. 1947ರಲ್ಲಿ , ಅನಿರ್ಬಂಧ ವಾಣಿಜ್ಯವನ್ನು ಪ್ರೋತ್ಸಾಹಿಸಲು 23 ರಾಷ್ಟ್ರಗಳು ತೆರಿಗೆ ಹಾಗು ವಾಣಿಜ್ಯದ ಮೇಲಿನ ಸಾರ್ವತ್ರಿಕ ಒಪ್ಪಂದಕ್ಕೆ ಸಹಿ ಹಾಕಿದವು.

ಅನಿರ್ಬಂಧ ವಾಣಿಜ್ಯ, 20ನೇ ಶತಮಾನದ ಉತ್ತರಾರ್ಧದಲ್ಲಿ ಹಾಗು 2000ನೇ ಇಸವಿಯ ಪೂರ್ವಾರ್ಧದಲ್ಲಿ ಮುಂದುವರೆಯಿತು:

ಹಣಕಾಸು ಅಭಿವೃದ್ಧಿ[ಬದಲಾಯಿಸಿ]

ಹಣದ ಮೊದಲನೆಯ ಮಾದರಿಗಳು ವಾಸ್ತವಿಕ ಮೌಲ್ಯದೊಂದಿಗೆ ವಸ್ತುರೂಪದಲ್ಲಿದ್ದವು. ಇದನ್ನು ಉಪಯುಕ್ತ ವಸ್ತುವಿನ ರೂಪದ ಹಣವೆಂದು ಕರೆಯಲಾಗುತ್ತದೆ.ಇದು ವಾಸ್ತವಿಕ ಮೌಲ್ಯವನ್ನು ಹೊಂದಿರುವ ಯಾವುದೇ ಸಾಮಾನ್ಯವಾಗಿ ದೊರೆವ ಉಪಯುಕ್ತ ವಸ್ತುಗಳನ್ನು ಒಳಗೊಳ್ಳುತ್ತದೆ; ಐತಿಹಾಸಿಕ ಉದಾಹರಣೆಗಳು ಹಂದಿಗಳನ್ನು, ವಿರಳ ಕಪ್ಪೆಚಿಪ್ಪುಗಳನ್ನು,ತಿಮಿಂಗಿಲದ ಹಲ್ಲುಗಳನ್ನು,ಹಾಗು (ವಿರಳವಾಗಿ) ಕುದುರೆಗಳನ್ನು ಒಳಗೊಂಡಿದೆ. ಮಧ್ಯಕಾಲೀನ ಇರಾಕ್ ನಲ್ಲಿ, ತಳಿಗಳನ್ನು ಹಣದ ಹಿಂದಿನ ರೂಪವಾಗಿ ಬಳಸಲಾಗುತ್ತಿತ್ತು. ಮೆಕ್ಸಿಕೊದಲ್ಲಿನ ಮಾನ್ ಟೆಜೋಮ[disambiguation needed]ವರ್ಗದಲ್ಲಿ ಕೋಕೋಬೀಜಗಳೇ ಹಣದ ರೂಪವಾಗಿದ್ದವು.. [೧] Archived 2005-11-28 ವೇಬ್ಯಾಕ್ ಮೆಷಿನ್ ನಲ್ಲಿ.

ರೋಮನ್ ಬೆಳ್ಳಿನಾಣ್ಯ

ಕರನ್ಸಿಯನ್ನು, ಸರುಕಗಳ ಹಾಗು ಸೇವೆಗಳ ದೊಡ್ಡ ಪ್ರಮಾಣದ ವಿನಿಮಯವನ್ನು ಸುಲಭಗೊಳಿಸಲು ಮಾಡಿರುವ ಪ್ರಮಾಣೀಕರಿಸಲ್ಪಟ್ಟ ಹಣದಂತೆ ಪರಿಚಯಿಸಲಾಯಿತು. ಕರನ್ಸಿಯ ಮೊದಲನೆಯ ಹಂತದಲ್ಲಿ,ನಾಣ್ಯದ ಬೆಲೆಯನ್ನು ಪ್ರತಿನಿಧಿಸಲು ಲೋಹಗಳನ್ನು ಬಳಸಲಾಗುತ್ತಿತ್ತು. ಅಲ್ಲದೇ ಉಪಯುಕ್ತ ವಸ್ತುಗಳನ್ನು ಪ್ರತಿನಿಧಿಸಲು ಚಿಹ್ನೆಗಳನ್ನು ಬಳಸಲಾಗುತ್ತಿತ್ತು.ಈ ಚಿಹ್ನೆಗಳನ್ನು ವ್ಯಾಪಾರದ ಆಧಾರದ ಮೇಲೆ ಅರ್ಧಚಂದ್ರಾಕೃತಿಯಲ್ಲಿ ಸುಮಾರು 1500 ವರ್ಷಗಳ ಕಾಲ ನಿರ್ಮಿಸಲಾಯಿತು.

ನಾಣ್ಯ ಸಂಗ್ರಹಕಾರರು ಹಿಂದೆ ಇದ್ದ ವಿಶಾಲ ತಳಹದಿಯ ಸಮಾಜ ನಿರ್ಮಿತ ನಾಣ್ಯಗಳ ಉದಾಹರಣೆಯನ್ನು ಹೊಂದಿದ್ದಾರೆ. ಆದರೂ ಆರಂಭದಲ್ಲಿ ಈ ನಾಣ್ಯಗಳನ್ನು ಬೆಲೆಬಾಳುವ ಲೋಹಗಳ ರಾಶಿ ಎಂದು ಗುರುತಿಸಲಿಲ್ಲ.[೫]

ಪ್ರಾಚೀನ ಸ್ಪಾರ್ಟ ,ಅದರ ಪ್ರಜೆಗಳು ಹೊರಗಿನವರೊಂದಿಗೆ ವ್ಯಾಪಾರದಲ್ಲಿ ತೊಡಗದಂತೆ ಮಾಡಲು ಕಬ್ಬಿಣದಿಂದ ನಾಣ್ಯಗಳನ್ನು ಟಂಕಿಸುತ್ತಿತ್ತು.

ಪ್ರಚಲಿತ ಪ್ರವೃತ್ತಿಗಳು[ಬದಲಾಯಿಸಿ]

ದೋಹಾಾ ರೌಂಡ್ಸ್ (ದೋಹಾಾ ಮಾತುಕತೆಗಳು)[ಬದಲಾಯಿಸಿ]

ವಿಶ್ವ ವಾಣಿಜ್ಯ ಸಂಸ್ಥೆಯ ದೋಹಾ ರೌಂಡ್ ನ ಸಂಧಾನ ಸಭೆಯೂ, ಅಭಿವೃದ್ಧಿಶೀಲ ರಾಷ್ಟ್ರಗಳು ವ್ಯಾಪಾರ ಮಾಡಲು ಸುಲಭವಾಗಿಸುವುದರ ಬಗ್ಗೆ ಬೆಳಕು ಚೆಲ್ಲುತ್ತವೆ.ಪ್ರಪಂಚದಾದ್ಯಂತ ವಾಣಿಜ್ಯದ ಮೇಲೆ ಪ್ರತಿಬಂಧವನ್ನು ಕಡಿಮೆ ಪ್ರಮಾಣದಲ್ಲಿ ಹೇರುವ ಉದ್ದೇಶವನ್ನು ಹೊಂದಿತ್ತು. ಮಾತುಕತೆಯು ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳನ್ನು ಪ್ರತಿನಿಧಿಸುತ್ತಿದ್ದ G20ಹಾಗು ಇತರ ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳ ಭಿನ್ನಾಬಿಪ್ರಾಯಗಳ ಮಧ್ಯೆ ನಿಂತಿತು. ವ್ಯವಸಾಯದ ಸಹಾಯಧನ ನಿಧಿಗಳು, ಒಪ್ಪಂದವನ್ನು ಸಂಧಾನದ ಮೂಲಕ ತೀರ್ಮಾನಿಸಲು ಕಷ್ಟವಾಗುವಂತೆ ಮಾಡುವ ಅತ್ಯಂತ ಪ್ರಮುಖ ವಿಚಾರಗಳಾಗಿವೆ. ವೈದೃಶ್ಯವಾಗಿ , ವಾಣಿಜ್ಯವನ್ನು ಸುಲಭಗೊಳಿಸಲು ಹಾಗು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಮೇಲೆ ಹೆಚ್ಚು ಒಪ್ಪಂದಗಳಿವೆ.

ದಿ ದೋಹಾ ರೌಂಡ್ ದೋಹಾ, ಕತಾರ್ ನಲ್ಲಿ ಪ್ರಾರಂಭವಾಯಿತು,ಹಾಗು ಸಂಧಾನ ಸಭೆಗಳು ನಂತರ ಈ ಕೆಳಕಂಡ ಪ್ರದೇಶಗಳಲ್ಲಿ ಮುಂದುವರೆದವು: ಕಾನ್ ಕುನ್ , ಮೆಕ್ಸಿಕೊ; ಜಿನೇವಾ, ಸ್ವಿಜರ್ ಲ್ಯಾಂಡ್; ಹಾಗು ಪ್ಯಾರೀಸ್, ಫ್ರಾನ್ಸ್ ಮತ್ತು ಹಾಂಗ್ ಕಾಂಗ್.

ಚೀನಾ[ಬದಲಾಯಿಸಿ]

1978 ರ ಪ್ರಾರಂಭದ ಸುಮಾರಿಗೆ,ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ(PRC)ದ ಸರ್ಕಾರವು ಆರ್ಥಿಕ ಸುಧಾರಣೆಯಲ್ಲಿ ಪ್ರಯೋಗವನ್ನು ಪ್ರಾರಂಭಿಸಿತು. ಹಿಂದಿನ ಸೋವಿಯತ್ಕೇಂದ್ರೀಯವಾಗಿ ಯೋಜಿಸಲ್ಪಟ್ಟ ಅರ್ಥಶಾಸ್ತ್ರ ಶೈಲಿಗೆ ಸಮರೂಪವಾದಂತೆ ,ಹೊಸ ಕ್ರಮಗಳು ವ್ಯವಸಾಯ, ಕೃಷಿ ವಿತರಣೆ ಹಾಗು ಅನೇಕ ವರ್ಷಗಳ ನಂತರ ನಗರದ ಉದ್ಯಮಗಳು ಹಾಗು ದುಡಿಮೆಯ ಮೇಲಿರುವ ನಿರ್ಬಂಧಗಳನ್ನು ಸಡಿಲಗೊಳಿಸಿದವು. ಮಾರುಕಟ್ಟೆ ಆಧಾರಿತ ಹೆಚ್ಚು ವ್ಯಾಪಾರಗಳು, ಅದಕ್ಷತೆಯನ್ನು ಕಡಿಮೆಮಾಡುತ್ತವೆ. ಅಲ್ಲದೇ ಖಾಸಗಿ ಬಂಡವಾಳ ಹೂಡಿಕೆಯನ್ನು ವಿಶೇಷವಾಗಿ ಕೃಷಿಕರಿಂದ ಪ್ರೋತ್ಸಾಹಿಸುತ್ತವೆ.ಅಲ್ಲದೇ ಇದು ಉತ್ಪಾದಕತೆಯನ್ನು ಹಾಗು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆಗ್ನೇಯ ಕರಾವಳಿಯಲ್ಲಿರುವ ನಾಲ್ಕು (ನಂತರ ಐದು) ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ ಇದರ ಒಂದು ಪ್ರಮುಖ ಲಕ್ಷಣವಾಗಿದೆ.

ಉತ್ಪಾದನೆ, ವಿವಿಧತೆ, ಗುಣಮಟ್ಟ, ಬೆಲೆಯಲ್ಲಿ ಹಾಗು ಬೇಡಿಕೆಗಳು ಹೆಚ್ಚಾಗುವ ಮೂಲಕ ಸುಧಾರಣೆಗಳು ಅದ್ಭುತವಾಗಿ ಯಶಸ್ವಿಯಾದವು. ನಿಜವಾದ ಅರ್ಥದಲ್ಲಿ,ಆರ್ಥಿಕ ಸ್ಥಿತಿಯು 1978 ರಿಂದ 1986ರ ವರೆಗೆ ದುಪ್ಪಟ್ಟಾಯಿತು; ಮತ್ತೆ 1994ರಲ್ಲಿ ದುಪ್ಪಟ್ಟಾಯಿತು, ಅದು ಮತ್ತೆ 2003ರಲ್ಲಿಯೂ ದ್ವಿಗುಣವಾಯಿತು. ನಿಜವಾದ ತಲಾವರಮಾನದ ಆಧಾರದ ಮೇಲೆ, 1978ರಿಂದ ಪ್ರಾರಂಭವಾಗಿ 1987, 1996 ಹಾಗು 2006ರಲ್ಲಿ ದ್ವಿಗುಣಗೊಂಡಿತು. 2008 ರಷ್ಟಕ್ಕೆ, ಆರ್ಥಿಕ ಪರಿಸ್ಥಿತಿ 1978 ರಲ್ಲಿ ಇದ್ದ ಪ್ರಮಾಣಕ್ಕಿಂತ 16.7 ಪ್ರಮಾಣದಷ್ಟು ಆರ್ಥಿಕ ಪ್ರಗತಿ ಹೆಚ್ಚಾಯಿತು.ಅಲ್ಲದೇ ಹಿಂದೆ ಇದ್ದ ತಲಾವರಮಾನದ 12.1 ರ ಪ್ರಮಾಣದಲ್ಲಿ ತಲಾದಾಯ ಹೆಚ್ಚಾಯಿತು. ಅಂತರರಾಷ್ಟ್ರೀಯ ವಾಣಿಜ್ಯ ಇನ್ನು ವೇಗವಾಗಿ ಅಭಿವೃದ್ಧಿಯನ್ನು ಹೊಂದಿತು,ಸುಮಾರು ಪ್ರತಿ 4.5 ವರ್ಷಗಳಿಗೆ ಇದು ದುಪ್ಪಟ್ಟಾಗುತ್ತಿದೆ. ಜನವರಿ 1998 ರಲ್ಲಿ ಎರಡೂ ಕಡೆಯ ಒಟ್ಟು ವ್ಯಾಪಾರ 1978 ರಲ್ಲಿ ಆದ ಎಲ್ಲಾ ವ್ಯಾಪಾರವನ್ನು ಮೀರಿಸಿತು;2009ರ ಮೊದಲಾರ್ಧದಲ್ಲಿ, 1998ರ ಇಡೀ ವರ್ಷದ ವ್ಯಾಪಾರವನ್ನು ಮೀರಿಸಿದೆ. 2008ರಲ್ಲಿ,ಚೀನಾದ ಎರಡೂ ಕಡೆಯ ಒಟ್ಟು ವ್ಯಾಪಾರ US$2.56 ಟ್ರಿಲಿಯನ್.

1991ರಲ್ಲಿ PRC, ವಾಣಿಜ್ಯವನ್ನು ಪ್ರೋತ್ಸಾಹಿಸುವ ಫೋರಂ ಆಗಿರುವ ಏಷ್ಯ-ಫೆಸಿಫಿಕ್ ಎಕಾನಮಿಕ್ ಕಾರ್ಪೋರೇಷನ್ ಗುಂಪಿಗೆ ಸೇರಿಕೊಂಡಿತು. 2001ರಲ್ಲಿ ,ಇದು ವಿಶ್ವ ವಾಣಿಜ್ಯ ಸಂಸ್ಥೆಗೂ ಸೇರಿಕೊಂಡಿತು. ಇದನ್ನೂ ನೋಡಿ: ಪಿಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಆರ್ಥಿಕ ಪರಿಸ್ಥಿತಿ

ಅಂತರರಾಷ್ಟ್ರೀಯ ವಾಣಿಜ್ಯ[ಬದಲಾಯಿಸಿ]

ಅಂತರರಾಷ್ಟ್ರೀಯ ವಾಣಿಜ್ಯವು,ರಾಷ್ಟ್ರದ(ಗಡಿ) ಎಲ್ಲೆಗಳಲ್ಲಿ ನಡೆಯುವ ಸರಕುಗಳ ಹಾಗು ಸೇವೆಗಳ ವಿನಿಮಯವಾಗಿದೆ. ಬಹುಪಾಲು ರಾಷ್ಟ್ರಗಳಲ್ಲಿ ,ಇದು GDPಯ ಪ್ರಧಾನ ಭಾಗವನ್ನು ಪ್ರತಿನಿಧಿಸುತ್ತದೆ .ಅಂತರರಾಷ್ಟ್ರೀಯ ವಾಣಿಜ್ಯವು ಇತಿಹಾಸದುದ್ದಕ್ಕೂ ಬಹುಮಟ್ಟಿಗಿದ್ದರೂ ಕೂಡ(ಸಿಲ್ಕ್ ರೋಡ್, ಅಂಬರ್ ರೋಡ್ನೋಡಿ),ಇದರ ಆರ್ಥಿಕ, ಸಾಮಾಜಿಕ, ಹಾಗು ರಾಜಕೀಯ ಮಹತ್ವವು ಇತ್ತೀಚಿನ ಶತಮಾನದಲ್ಲಿ ಹೆಚ್ಚಿತು. ಮುಖ್ಯವಾಗಿ ಕೈಗಾರಿಕೀಕರಣದಿಂದ, ಮುಂದುವರೆದ ಸಾರಿಗೆ ಸಂಪರ್ಕ, ಜಾಗತೀಕರಣದಿಂದ, ಬಹುರಾಷ್ಟ್ರೀಯ ಸಂಘಟನೆಗಳಿಂದ, ಹಾಗು ಹೊರಗಿನಿಂದಲೂ ಇದರ ಮಹತ್ವ ಹೆಚ್ಚಿದೆ. ಭಾಗಶಃ ಇದು, ಅಂತರರಾಷ್ಟ್ರೀಯ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಾಗುತ್ತಿರುವ ಪ್ರಾಧಾನ್ಯತೆಯಾಗಿದೆ. ಇದನ್ನು ಯಥಾಪ್ರಕಾರ "ಜಾಗತೀಕರಣ"ವೆಂಬ ಹೆಸರಿನಲ್ಲಿ ಸೂಚಿಸಲಾಗುತ್ತದೆ.

ವಾಣಿಜ್ಯದ ಯಶಸ್ಸಿಗೆ ಪ್ರಾಯೋಗಿಕ ಪುರಾವೆಗಳನ್ನು ರಾಷ್ಟ್ರಗಳ ನಡುವಿನ ಸಾಮರಸ್ಯದಲ್ಲಿ ನೋಡಬಹುದು.ಉದಾಹರಣೆಗೆ , ದಕ್ಷಿಣ ಕೊರಿಯ,ಇದು ರಫ್ತು-ಆಧಾರಿತ ಕೈಗಾರಿಕೀಕರಣ ನಿಯಮವನ್ನು ಅನುಸರಿಸಿತು. ಭಾರತ, ಐತಿಹಾಸಿಕವಾಗಿ ಹೆಚ್ಚು ಪ್ರತಿಬಂಧಕ ನಿಯಮವನ್ನು ಅನುಸರಿಸಿದೆ. (ಆದರೂ ,2005 ರಿಂದ ಅದರ ಅರ್ಥಿಕ ಪರಿಸ್ಥಿತಿಯನ್ನು ಅನಿರ್ಬಂಧಗೊಳಿಸಲಿದೆ.) ಸುಮಾರು ಐವತ್ತು ವರ್ಷಗಳ ಆರ್ಥಿಕ ಪರಿಸ್ಥಿಯನ್ನು ತಾಳೆಮಾಡಿ ನೋಡಿದರೆ ದಕ್ಷಿಣ ಕೊರಿಯ ಭಾರತಕ್ಕಿಂತ ಹೆಚ್ಚು ಉತ್ತಮವಾಗಿ ನಿರ್ವಹಿಸಿದೆ.ಆದರೂ ಇದರ ಯಶಸ್ಸು ರಾಜ್ಯಗಳ ಪರಿಣಾಮಕಾರಿ ಆಡಳಿತ ಸಂಸ್ಥೆಗಳಿಂದಲೂ ಸಾಧ್ಯವಾಗಿದೆ.

ಕೆಲವೊಮ್ಮೆ ನಿರ್ದಿಷ್ಟ ರಾಷ್ಟ್ರಗಳ ಮೇಲೆ ಹೇರಲಾಗುವ [[]]ವಾಣಿಜ್ಯ ನಿರ್ಬಂಧಗಳು , ಯಾವುದೋ ಕೆಲಸಕ್ಕಾಗಿ ಆ ರಾಷ್ಟ್ರವನ್ನು ಶಿಕ್ಷಿಸಲು ಮಾಡಿರುವ ದಂಡನೆಗಳಾಗಿವೆ. (ಆರ್ಥಿಕ) ವಾಣಿಜ್ಯ ದಿಗ್ಬಂಧನ ,ಎಂಬುದು ಬಾಹ್ಯವಾಗಿ ಹೇರಿರುವಂತಹ ಕ್ರಮಬದ್ಧವಾದ ಪ್ರತ್ಯೇಕತೆಯಾಗಿದೆ.ಇದು ಒಂದು ದೇಶ ಮತ್ತೊಂದರೊಂದಿಗಿನ ಎಲ್ಲಾ ವ್ಯಾಪಾರ-ವಹಿವಾಟನ್ನು ನಿರ್ಭಂದಿಸುವುದಾಗಿದೆ. ಉದಾಹರಣೆಗೆ, ಅಮೇರಿಕ ಸಂಯುಕ್ತ ಸಂಸ್ಥಾನ ಸುಮಾರು ನಲವತ್ತು ವರ್ಷಗಳ ಕಾಲ ಕ್ಯೂಬಾ ವಿರುದ್ಧ ವಾಣಿಜ್ಯ ಪ್ರತಿಬಂಧಕಾಜ್ಞೆಯನ್ನು ಹೊಂದಿತ್ತು.

ಆದರೂ, ರಾಷ್ಟ್ರಗಳೊಳಗೆ ಕೆಲವು ಮಾಮೂಲಿನ ವಾಣಿಜ್ಯ ಪರಿಮಿತಿಗಳು ಇರುತ್ತವೆ.ಅಂತರರಾಷ್ಟ್ರೀಯ ವಾಣಿಜ್ಯವು ಸರ್ಕಾರಿ ಹಕ್ಕು ಭಾದ್ಯತೆಗಳಿಂದ ನಿಯಂತ್ರಿಸಲ್ಪಡುತ್ತದೆ. ಅಲ್ಲದೇ ನಿರ್ಬಂಧಿಸಲ್ಪಡುತ್ತದೆ.ಅಲ್ಲದೇ ಯಾವಾಗಲೂ ನಿಗದಿತ ವ್ಯಾಪಾರಗಳಿಂದ ತೆರಿಗೆ ಬರುತ್ತದೆ. ಸುಂಕ ಸಾಮಾನ್ಯವಾಗಿ ಆಮದಿನ ಮೇಲಿರುತ್ತದೆ,ಆದರೆ ಕೆಲವು ಸಂದರ್ಭಗಳಲ್ಲಿ ರಾಷ್ಟ್ರಗಳು ರಫ್ತಿನ ಮೇಲೂ ಸುಂಕವನ್ನು ಅಥವಾ ರಿಯಾಯತಿ ನಿಧಿಯನ್ನು ವಿಧಿಸಬಹುದು. ಇವೆಲ್ಲವನ್ನು ವಾಣಿಜ್ಯದ ಪ್ರತಿಬಂಧಕ ಗಳು ಎಂದು ಕರೆಯಲಾಗುತ್ತದೆ. ಸರ್ಕಾರ ಎಲ್ಲಾ ವಾಣಿಜ್ಯ ಪ್ರತಿಬಂಧಕಗಳನ್ನು ತೆಗೆದುಹಾಕಿದರೆ,ಅನಿರ್ಬಂಧ ವಾಣಿಜ್ಯ ಪರಿಸ್ಥಿತಿ ಉಂಟಾಗುತ್ತದೆ. ಸರ್ಕಾರ ಜಾರಿಗೆ ತರುವಂತಹ ಆರ್ಥಿಕ ರಕ್ಷಣಾನೀತಿ, ವಾಣಿಜ್ಯ ಪ್ರತಿಬಂಧಕಗಳನ್ನು ಉಂಟುಮಾಡುತ್ತದೆ.

ಫೇರ್ ಟ್ರೇಡ್ ಚಳವಳಿಯು,ಟ್ರೇಡ್ ಜಸ್ಟಿಸ್ ಎಂದು ಕೂಡ ಕರೆಯಲ್ಪಡುತ್ತದೆ,ಇದುಕಾರ್ಯಚಟುವಟಿಕೆಯ ಬಳಕೆಗೆ ಪ್ರೋತ್ಸಾಹಿಸುವುದು.ಅಲ್ಲದೇ ಉಪಯುಕ್ತ ವಸ್ತುಗಳ ಉತ್ಪಾದನೆಯ ಮೇಲೆ ವಾತಾವರಣದ ಹಾಗು ಸಾಮಾಜಿಕ ಗುಣಮಟ್ಟವನ್ನು ಹೆಚ್ಚಿಸಲು ಉತ್ತೇಜಿಸುವುದು. ವಿಶೇಷವಾಗಿ ತೃತೀಯ ಹಾಗು ದ್ವಿತೀಯ ವರ್ಲ್ಡ್ ನಿಂದ ಮೊದಲನೆಯ ವರ್ಲ್ಡ್ ಗೆ(ಅಭಿವೃದ್ಧಿ ಹೊಂದಿದ ರಾಷ್ಟ್ರಗಳು) ರಫ್ತಾಗುವ ವಸ್ತುಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರೋತ್ಸಾಹಿಸಿತು. . ಈ ವಿಚಾರಗಳು,ವಾಣಿಜ್ಯಮಾನವ ಹಕ್ಕುಗಳಂತೆ ಸಂಹಿತೆಯನ್ನು ರಚಿಸಿಕೊಂಡಿವೆ ಎಂಬ ವಿಷಯದ ಬಗ್ಗೆ ಚರ್ಚೆನಡೆಯುವಂತೆ ಮಾಡಿವೆ.[೬]

ಗುಣಮಟ್ಟವು ಆಮದು ಮಾಡುವ ವ್ಯವಹಾರ ಸಂಸ್ಥೆಗಳಲ್ಲಿಯೇ ಸೇರಿಕೊಂಡಿರುತ್ತದೆ ಅಥವಾ ಉದ್ಯೋಗ ಮತ್ತು ವಾಣಿಜ್ಯ ಕಾನೂನಿನ ಮೂಲಕ ಸರ್ಕಾರದಿಂದ ವಿಧಿಸಲ್ಪಡಬಹುದು. ಅನಿರ್ಬಂಧ ವಾಣಿಜ್ಯ ನೀತಿಗಳು ಆಗಾಗ ಹೆಚ್ಚಾಗಿ ವ್ಯತ್ಯಾಸಗೊಂಡಿವೆ, ಈ ವ್ಯತ್ಯಾಸಗಳು ಸಾಮಾನ್ಯವಾದ ನಿಷ್ಠೆಯಿಂದ ಕಾರ್ಮಿಕರಿಂದ ಉತ್ಪಾದಕತೆಗೆ ನೇಮಕ ಮಾಡಲ್ಪಟ್ಟ ಸರಕುಗಳ ನಿಷೇಧದವರೆಗೂ ಹಾಗು ಜೀತದಾಳುಗಳಿಗೆ ಕನಿಷ್ಠ ಸಂಬಳ ನೀಡುವ ಯೋಜನೆಗಳು,ಉದಾಹರಣೆಗೆ 1980ರ ಕಾಫಿಯಲ್ಲಿದ್ದವರಿಗೆ,ಇವುಗಳವರೆಗೂ ನೋಡಬಹುದು. ಸರ್ಕಾರೇತರ ಸಂಸ್ಥೆಗಳು, ಅನಿರ್ಬಂಧ ವಾಣಿಜ್ಯ ಗುರುತಿನ ಅಗತ್ಯತೆಗಳೊಡನೆ ಅನುವರ್ತನೆಯ ಸ್ವತಂತ್ರ ನಿಯಂತ್ರಕವಾಗಿ,ಅನಿರ್ಬಂಧ ವಾಣಿಜ್ಯ ಗುಣಮಟ್ಟವನ್ನು ಪ್ರೋತ್ಸಾಹಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "Distribution Services". Foreign Agricultural Service. 2000-02-09. Retrieved 2006-04-04.
  2. WTO - ವಿಶ್ವ ವಾಣಿಜ್ಯ ಸಂಸ್ಥೆ
  3. Watson, Peter (2005). Ideas : A History of Thought and Invention from Fire to Freud. HarperCollins. ISBN 0-06-621064-X. ಪರಿಚಯ.
  4. ಬೆಲೆ ಸಿದ್ಧಾಂತ ಮಿಲ್ಟನ್ ಫ್ರೈಡ್ ಮನ್
  5. ಒರಿಜಿನ್ಸ್ ಆಫ್ ಮನಿ ಅಂಡ್ ಆಫ್ ಬ್ಯಾಂಕಿಂಗ್ನಲ್ಲಿ ವಿವರಿಸಿರುವಂತೆ,ಚಿನ್ನವು ವಿಶೇಷವಾಗಿ ಹಿಂದೆ ಇದ್ದ ಹಣದ ಸಾಮಾನ್ಯ ರೂಪವಾಗಿದೆDavies, Glyn (2002). Ideas : A history of money from ancient times to the present day. University of Wales Press. ISBN 0-7083-1717-0.
  6. "Should trade be considered a human right?". COPLA. 9 December 2008. Archived from the original on 29 ಏಪ್ರಿಲ್ 2011. Retrieved 16 ಜುಲೈ 2010.