ಪ್ರೇಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪ್ರೇಮಾ (ನಟಿ) ಇಂದ ಪುನರ್ನಿರ್ದೇಶಿತ)
ಪ್ರೇಮಾ
ಎಲ್ಲರಂತವನಲ್ಲ ನನ್ನ ಗಂಡ ಚಿತ್ರದಲ್ಲಿ ವಿಷ್ಣುವರ್ಧನ್ ಅವರೊಂದಿಗೆ
ಜನನ
ನೆರವಂಡ ಚೆಟ್ಟಿಚ ಪ್ರೇಮಾ

(1977-01-06) ೬ ಜನವರಿ ೧೯೭೭ (ವಯಸ್ಸು ೪೬)
ಉದ್ಯೋಗನಟಿ
ಸಕ್ರಿಯ ವರ್ಷಗಳು1995–ಈವರೆಗೆ
ಪೋಷಕರುಚೆಟ್ಟಿಚ(ತಂದೆ)
ಕಾವೇರಿ(ತಾಯಿ)

ನೆರವಂಡ ಚೆಟ್ಟಿಚ ಪ್ರೇಮಾ (ಜನವರಿ ೬, ೧೯೭೭), ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಟಿಸುವ ದಕ್ಷಿಣ ಭಾರತದ ನಟಿ. ಕನ್ನಡದ ೧೯೯೫ರಲ್ಲಿ ಬಂದ ಸವ್ಯಸಾಚಿ ಪ್ರೇಮಾ ಅವರ ಮೊದಲ ಚಿತ್ರ. ಓಂ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಜನನ ಮತ್ತು ಬಾಲ್ಯ[ಬದಲಾಯಿಸಿ]

ಪ್ರೇಮಾ ಬೆಂಗಳೂರಿನಲ್ಲಿ ಜನಿಸಿದರು. ಇವರು ಕೊಡವ ಜನಾಂಗಕ್ಕೆ ಸೇರಿದ್ದು, ನೆರವಂಡ ಮನೆತನದವರು. ಬೆಂಗಳೂರಿನ ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯ ಬಳಿಕ ಪಿ ಯು ಸಿ ಯನ್ನು ಎಸ್ ಎಸ್ ಎಮ್ ಆರ್ ವಿ ಕಾಲೇಜಿನಲ್ಲಿ ಉತ್ತೀರ್ಣರಾದರು. ಇವರು ರಾಷ್ಟ್ರಮಟ್ಟದಲ್ಲಿ ಹೈ ಜಂಪ್ ಮತ್ತು ವಾಲಿ ಬಾಲ್ ಆಟದಲ್ಲಿ ಭಾಗವಹಿಸಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಪ್ರೇಮಾ ಸಾಫ್ಟ್ ವೇರ್ ಎಂಜಿನಿಯರ್ ಜೀವನ್ ಅಪ್ಪಚ್ಚು ಅವರನ್ನು ಜುಲೈ ೬, ೨೦೦೬ರಲ್ಲಿ ವಿವಾಹವಾದರು. ಕೆಲವರ್ಷಗಳ ಬಳಿಕ ವಿಚ್ಛೇದನ ಪಡೆದರು.

ಚಿತ್ರಜಗತ್ತು[ಬದಲಾಯಿಸಿ]

ಪ್ರೇಮಾ ೧೯೯೫ರಲ್ಲಿ 'ಸವ್ಯಸಾಚಿ' ಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪ್ರಥಮ ಪದಾರ್ಪಣ ಮಾಡಿದರು. ಇದರಲ್ಲಿ ಶಿವರಾಜ್ ಕುಮಾರ್ ನಾಯಕನಟರು. ೧೯೯೬ರಲ್ಲಿ ಬಿಡುಗಡೆಯಾದ 'ಓಂ' ಚಿತ್ರದಿಂದ ಅವರು ‘ಎಂಥ ಪಾತ್ರದಲ್ಲೂ ಪರಿಣಾಮಕಾರಿಯಾಗಿ ಅಭಿಸಯಿಸಬಲ್ಲರು’ ಎಂಬ ಕೀರ್ತಿಯನ್ನು ಗಳಿಸಿಕೊಂಡರು. ಅದೇ ವರ್ಷ ತಮಿಳು ನಿರ್ದೇಶಕ ಸುರೇಶ್ ಕೃಷ್ಣರವರ ಮಲೆಯಾಳಮ್ ಚಿತ್ರ ದ ಪ್ರಿನ್ಸ್ ನಲ್ಲಿ ಮೋಹನ್ ಲಾಲ್ ಜತೆ ಅಭಿನಯಿಸಿದರು. ಸುಮಾರು ೨೦ ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ಪ್ರೇಮಾರವರ ದೇವಿ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಅಮೋಘ ಜಯಭೇರಿ ಹೊಡೆಯಿತಲ್ಲದೆ, ಹಿಂದಿಗೆ ಭಾಷಾಂತರಗೊಂಡಿತು. ನಾಯಕ ನಟರಾದ ವಿಷ್ಣುವರ್ಧನ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ರಮೇಶ್ ಅರವಿಂದ್, ಸಾಯಿಕುಮಾರ್ ಮೊದಲಾದವರೊಡನೆ ಅಲ್ಲದೆ ಮಲಯಾಳಮ್ಮಿನ ಮೋಹನ್ ಲಾಲ್ ಅವರೊಡನೆ ನಟಿಸಿರುವ ಪ್ರೇಮಾ ಸುಮಾರು ೫೦ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅಭಿನಯಿಸಿದ ಕೆಲವು ಪ್ರಮುಖ ಚಿತ್ರಗಳು[ಬದಲಾಯಿಸಿ]

ಕನ್ನಡ[ಬದಲಾಯಿಸಿ]

ಚಿತ್ರದ ಹೆಸರು ನಾಯಕ ನಟ ನಿರ್ದೇಶಕ ಬಿಡುಗಡೆಯ ವರ್ಷ
ಸವ್ಯಸಾಚಿ ಶಿವರಾಜ್ ಕುಮಾರ್ ಎಮ್ ಎನ್ ರಾಜಶೇಖರ್ ೧೯೯೫
ಆಟ-ಹುಡುಗಾಟ ರಾಘವೇಂದ್ರ ರಾಜಕುಮಾರ್ ಬಿ ರಾಮ ಮೂರ್ತಿ ೧೯೯೫
ಓಂ ಶಿವರಾಜ್ ಕುಮಾರ್ ಉಪೇಂದ್ರ ೧೯೯೫
ನಮ್ಮೂರ ಮಂದಾರ ಹೂವೇ ಶಿವರಾಜ್ ಕುಮಾರ್, ರಮೇಶ್ ಸುನೀಲ್ ಕುಮಾರ್ ದೇಸಾಯಿ ೧೯೯೭
ಕೌರವ ಬಿ ಸಿ ಪಾಟೀಲ್ ಎಸ್ ಮಹೇಂದರ್ ೧೯೯೮
ಉಪೇಂದ್ರ ಉಪೇಂದ್ರ ಉಪೇಂದ್ರ ೧೯೯೯
ಚಂದ್ರಮುಖೀ ಪ್ರಾಣಸಖೀ ರಮೇಶ್ ಅರವಿಂದ್ ಸೀತಾರಾಮ ಕಾರಂತ ೧೯೯೯
ಯಜಮಾನ ವಿಷ್ಣುವರ್ಧನ ಪಿ ಶೇಷಾದ್ರಿ, ರಾಧಾಭಾರತಿ ೨೦೦೦
ನಾಗದೇವತೆ ಸಾಯಿಕುಮಾರ್ ಸಾಯಿಪ್ರಕಾಶ್ ೨೦೦೦
ಪ್ರೇಮಿ ನಂಬರ್ ೧ ರಮೇಶ್ ಅರವಿಂದ್ ೨೦೦೧
ಕನಸುಗಾರ ರವಿಚಂದ್ರನ್ ರವಿಚಂದ್ರನ್ ೨೦೦೧
ಮರ್ಮ ಆನಂದ್ ಸುನೀಲ್ ಕುಮಾರ್ ದೇಸಾಯಿ ೨೦೦೨
ಕಂಬಲಹಳ್ಳಿ ದೇವರಾಜ್ ಸೆಂತಿಲ್ ನಾದನ್ ೨೦೦೨
ಸಿಂಗಾರವ್ವ ಅವಿನಾಶ್ ಟಿ ಎಸ್ ನಾಗಾಭರಣ ೨೦೦೩
ಆಪ್ತಮಿತ್ರ ವಿಷ್ಣುವರ್ಧನ, ರಮೇಶ್ ಪಿ ವಾಸು ೨೦೦೪
ನಾನೂ, ನನ್ನ ಹೆಂಡತೀರೂ ರವಿಚಂದ್ರನ್ ೧೯೯೯
ನವಶಕ್ತಿ ವೈಭವ ರಾಮ್ ಕುಮಾರ್ ಸಾಯಿಪ್ರಕಾಶ್ ೨೦೦೮
ಶಿಶಿರ ಯಶಸ್ ಸೂರ್ಯ ಮಂಜು ಸ್ವರಾಜ್ಯ ೨೦೦೯
ಎಲ್ಲರಂಥಲ್ಲ ನನ್ನ ಗಂಡ ಡಾ.ವಿಷ್ಣುವರ್ಧನ್ ೧೯೯೭

ಇತರ ಭಾಷೆಗಳಲ್ಲಿ[ಬದಲಾಯಿಸಿ]

  1. ದ ಪ್ರಿನ್ಸ್ - ಮೋಹನ್ ಲಾಲ್ - ಮಲೆಯಾಳಮ್
  2. ದೈವತಿಂಟೆ ಮಗನ್ - ಮಲೆಯಾಳಮ್
  3. ದೇವಿ - ತೆಲುಗು
  4. ದೇವಿ ಅಭಯಮ್ - ತೆಲುಗು
  5. ಅಮ್ಮ ನಾಗಮ್ಮ - ತೆಲುಗು
  6. ಧರ್ಮಚಕ್ರಮ್ - ತೆಲುಗು
  7. ಮಾ ಆವಿದ ಕಲೆಕ್ಟರ್ - ತೆಲುಗು - ಜಗಪತಿಬಾಬು - ಕೋಡಿ ರಾಮಕೃಷ್ಣ - ೧೯೯೮

ಪ್ರಶಸ್ತಿಗಳು[ಬದಲಾಯಿಸಿ]

  1. ಓಂ ಚಿತ್ರಕ್ಕೆ ೧೯೯೫ರ ಅತ್ಯುತ್ತಮ ನಟಿಯೆಂದು ರಾಜ್ಯ ಪ್ರಶಸ್ತಿ.
  2. ಕನಸುಗಾರ ಚಿತ್ರಕ್ಕೆ ೨೦೦೧ರ ಅತ್ಯುತ್ತಮ ನಟಿಯೆಂದು ಫಿಲ್ಮ್ ಫೇರ್ ಪ್ರಶಸ್ತಿ.
  3. ಸ್ಕ್ರೀನ್ ವಿಡಿಯೊಕಾನ್ ಪ್ರಶಸ್ತಿ.
  4. ಉದಯ ಟಿ ವಿ ಪ್ರಶಸ್ತಿ.
  5. ದೇವಿಕಾರಾಣಿ ಪ್ರಶಸ್ತಿ.
  6. ಚಿತ್ರಪ್ರೇಮಿಗಳ ಸಂಘದ ಪ್ರಶಸ್ತಿ.
  7. ಸಿನಿಮಾ ಎಕ್ಸ್‌ಪ್ರೆಸ್ ಪ್ರಶಸ್ತಿ.


"https://kn.wikipedia.org/w/index.php?title=ಪ್ರೇಮಾ&oldid=1157721" ಇಂದ ಪಡೆಯಲ್ಪಟ್ಟಿದೆ