ವಿಷಯಕ್ಕೆ ಹೋಗು

ಚಂದ್ರಶೇಖರ ಕಂಬಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ಚಂದ್ರಶೇಖರ ಕಂಬಾರ
ಜನನ೨ ಜನವರಿ ೧೯೩೭
ಘೋಡಗೇರಿ ಗ್ರಾಮ, ಹುಕ್ಕೇರಿ ತಾಲೂಕ, ಬೆಳಗಾವಿ ಜಿಲ್ಲೆ
ವೃತ್ತಿಲೇಖಕ
ರಾಷ್ಟ್ರೀಯತೆಭಾರತೀಯ
ಕಾಲ೧೯೫೬ - ಪ್ರಸ್ತುತ
ಪ್ರಕಾರ/ಶೈಲಿಕಥೆ, ಕವನ, ಕಾದಂಬರಿ, ನಾಟಕ
ವಿಷಯಜನಪದ, ಕರ್ನಾಟಕ, ಜೀವನ
ಚಂದ್ರಶೇಖರ  ಕಂಬಾರರಿಗೆ ಎಲ್ ಬಿ ಕಾಲೇಜಿನಿಂದ ಬೀಳ್ಕೊಡುಗೆ ನೀಡಿದ ದಿನದ ಚಿತ್ರ

ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ, ಜಪಾನ್ ಮುಂತಾದೆಡೆಗಳ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು.


ಜನನ ವಿದ್ಯಾಭ್ಯಾಸ

ಡಾ. ಚಂದ್ರಶೇಖರ ಕಂಬಾರ (ಜನನ - ಜನವರಿ ೨, ೧೯೩೭) ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ 'ಕರ್ನಾಟಕ ವಿವಿ'ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ.

ವೃತ್ತಿಜೀವನ

  • ಕಂಬಾರರು ಯುವಕರಾಗಿದ್ದಾಗ ಧಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ, ಖ್ಯಾತ ಕವಿಗಳೊಬ್ಬರು ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ, ಅದ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರು. "ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ " ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು.  
  • ಅಂದೇ ಕಂಬಾರ ಕಾವ್ಯವನ್ನು ಪಳಗಿಸಿಕೊಳ್ಳಲು ನಿರ್ಧರಿಸಿದರಂತೆ. ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ೨೦೦೪-೨೦೧೦ರವರೆಗೆ ಕಾಂಗ್ರೆಸ್ ಪಕ್ಷದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು ಇತ್ಯಾದಿ.
  • ಕಂಬಾರರು ಸ್ನಾತಕೋತ್ತರ ಶಿಕ್ಷಣದ ನಂತರ ಅವರ ಸಾಹಿತ್ಯದ ಗುರು ಎಂದೇ ಗುರುತಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ಅಡಿಗರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಾಗರದ ಲಾಲ್ ಬಹದೂರ್ ಕಲಾ, ವಿಜ್ಞಾನ ಮತ್ತು ಎಸ್ ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ  ಮಹಾವಿದ್ಯಾಲಯದಲ್ಲಿ Archived 2019-11-28 ವೇಬ್ಯಾಕ್ ಮೆಷಿನ್ ನಲ್ಲಿ. ಎರಡು ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
  • ೨೦೧೯ ನೇ ಸಾಲಿನ ವಿದ್ಯಾಕಾಶಿ ಧಾರವಾಡದಲ್ಲಿ ನಡೆದ ೮೪ ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಕವಿ/ನಾಟಕಕಾರ

  • ಮುಖ್ಯವಾಗಿ ಕವಿ-ನಾಟಕಕಾರರಾಗಿ ಕಂಬಾರ ಜನಪ್ರಿಯರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಉಪನ್ಯಾಸಕ ವೃತ್ತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈಗ ಬೆಂಗಳೂರಿನ ಬನಶಂಕರಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿಯೂ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
  • ತಮ್ಮ ಊರಿನ ವಾತಾವರಣದಲ್ಲಿನ ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಸಂಗ್ರಹ, ಬರವಣಿಗೆಯನ್ನು ರೂಢಿಸಿಕೊಂಡರು. ಉತ್ತರ ಕರ್ನಾಟಕದ ಅದರಲ್ಲೂ ಗೋಕಾಕ, ಬೆಳಗಾವಿ, ಧಾರವಾಡದ ಗಂಡು ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಹೊತ್ತು ತಂದರು. ಧಾರವಾಡದ ವರಕವಿ ಡಾ. ದ.ರಾ.ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿ ಕೊಂಡವರಲ್ಲಿ ಕಂಬಾರರು ಒಬ್ಬರು.
  • ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರ ಗಳಾಗಿಸಿದರು. "ಕರಿಮಾಯಿ, ಸಂಗೀತಾ, ಕಾಡುಕುದುರೆ ಸಿಂಗಾರವ್ವ ಮತ್ತು ಅರಮನೆ" ಇವುಗಳಲ್ಲಿ ಪ್ರಮುಖವಾದುವು. ಕಂಬಾರರು ತಮ್ಮ ಚಿತ್ರಗಳಿಗೆ ತಾವೇ ಸಂಗೀತ ನೀಡಿದ್ದಾರೆ. ಕಾಡುಕುದುರೆಯ ಹಿನ್ನೆಲೆ ಸಂಗೀತದ ``ಕಾಡು ಕುದುರೆ ಓಡಿಬಂದಿತ್ತಾsss.." ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕ ಕೂಡ ಸಿಕ್ಕಿತು. `ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಜೊತೆಗೆ ಜಾನಪದ ಶೈಲಿಯ ಹಾಡುಗಳಿಂದ ಜನಪ್ರಿಯರು. ಅವರು ತಾವೇ ಸ್ವತಃ ಹಾಡುಗಾರರೂ ಆಗಿದ್ದಾರೆ.

ಕೃತಿಗಳು

ಕಂಬಾರು ಬರೆದ ಪುಸ್ತಕಗಳು ತುಂಬ. ಅವರ ೧೦ಕಾವ್ಯ ಪುಸ್ತಕ, ೨೫ ನಾಟಕ ಪುಸ್ತಕ, ೧ ಮಹಾಕಾವ್ಯ, ೫ ಕಾದಂಬರಿ ಅಲ್ಲದೆ ೧೭ ಬೇರೆಬೇರೆ ಗದ್ಯ ಸಂಪಾದನೆಗಳು, ಸಂಗ್ರಹಗಳು, ಪ್ರಬಂಧ ಸಂಕಲನಗಳು, ಸಂಶೋಧನ ಪುಸ್ತಕಗಳು ಬಂದಿವೆ.ಅಭಿನಂನ ಗ್ರಂಥ:-ಸಿರಿಸಂಪಿಗೆ.

ಕಾವ್ಯಗಳು

  1. ಮುಗುಳು ೧೯೫೮
  2. ಹೇಳತೇನ ಕೇಳ ೧೯೬೪
  3. ತಕರಾರಿನವರು ೧೯೭೧
  4. ಸಾವಿರಾರು ನೆರಳು ೧೯೭೯ (ಕುಮಾರ ಆಶನ್ ಪ್ರಶಸ್ತಿ ೧೯
  5. ಬೆಳ್ಳಿ ಮೀನು ೧೯೮೯
  6. ಅಕ್ಕಕ್ಕು ಹಾಡುಗಳೆ ೧೯೯೩
  7. ಈ ವರೆಗಿನ ಹೇಳತೇನ ಕೇಳ ೧೯೯೩
  8. ಹಂಪಿಯ ಕಲ್ಲುಗಳು (ಈ ಕಾವ್ಯ ಪುಸ್ತಕವನ್ನು ಓ.ಎಲ್. ನಾಗಭೂಷಣ ಸ್ವಾಮಿಯವರು ಸಾಹಿತ್ಯ ಅಕಾಡೆಮಿಗಾಗಿ ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಮಾಡಿದ್ದಾರೆ) ೨೦೦೪
  9. ಎಲ್ಲಿದೆ ಶಿವಾಪುರ ೨೦೦೯

ನಾಟಕಗಳು

  1. ಬೆಂಬತ್ತಿದ ಕಣ್ಣು ೧೯೬೧
  2. ನಾರ್ಸಿಸ್ಸ್ ೧೯೬೯
  3. ಋಷ್ಯಶೃಂಗ ೧೯೭೦ (ಸಿನಿಮಾ ಆಗಿದೆ)
  4. ಜೋಕುಮಾರಸ್ವಾಮಿ ೧೯೭೨ (ನಾಟ್ಯ ರಂಗ ಪ್ರಶಸ್ತಿ).
  5. ಚಾಲೇಶ ೧೯೭೩ (ಮದ್ರಾಸ್ ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ವತಿಯಿಂದ ಈ ಪುಸ್ತಕವು ಹಿಂದಿ ಇಂಗ್ಲಿಷ್ ಭಾಷೆಗೆ ೧೯೭೩ರಲ್ಲಿ ಅನುವಾದ ಆಗಿದೆ)
  6. ಸಂಗ್ಯಾಬಾಳ್ಯಾ ಅನ್ಬೇಕೊ ನಾಡೊಳಗ ೧೯೭೫
  7. ಕಿಟ್ಟಿಯ ಕಥೆ ೧೯೭೪
  8. ಜೈಸಿದ್ದನಾಯಕ ೧೯೭೫ (ಈ ಪುಸ್ತಕಕ್ಕೆ ೧೯೮೪ರ ನವದೆಹಲಿದ ಸರಸ್ವತಿ ವಿಹಾರಕ್ಕೆ ಹಿಂದಿ ಮತ್ತು ಇಂಗ್ಲಿಷ್ ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಮಾಡಿದ್ದಾರೆ). (ಹಾಗೇ ಕೆಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು ವರ್ಧಮಾನ ಪ್ರಶಸ್ತಿಗೆ ಆಯ್ಕೆ ಆಗಿದೆ.)
  9. ಆಲಿಬಾಬ ೧೯೮೦ (ಸಾಹಿತ್ಯ ಅಕಾಡೆಮಿದ ಭಾರತೀಯ ಸಾಹಿತ್ಯಕ್ಕೆ ಅನುವಾದ ಆಗಿದೆ)
  10. ಕಾಡುಕುದುರೆ ೧೯೭೯ ಸಿನಿಮಾ ಆಗಿದೆ. ಮತ್ತು ಆ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.
  11. ನಾಯಿಕಥೆ ೧೯೮೦ (ಸಂಗೀತ ಸಿನಿಮಕ್ಕೆ ಆಯ್ಕೆ ಮತ್ತು ೫ ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿ ಬಂದಿದೆ.
  12. ಖಾರೋಖಾರ ೧೯೭೭
  13. ಮತಾಂತರ ೧೯೭೮
  14. ಹರಕೆಯ ಕುರಿ ೧೯೮೩ (ಸಿನಿಮಾ ಆಗಿದೆ. ರಾಷ್ಟ್ರಪ್ರಶಸ್ತಿ ಬಂದಿದೆ. ಹಾಗೇ ೧೯೮೯ರಲ್ಲಿ ನವದೆಹಲಿಯ ಜ್ಞಾನಭಾರತಿಯಿಂದ ಹಿಂದಿ ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಆಗಿದೆ)
  15. ಕಂಬಾರ ಅವರ ನಾಟಕಗಳು ೧೯೮೪
  16. ಸಾಂಬಶಿವ ಪ್ರಹಸನ ೧೯೮೭ (೧೯೯೧ರಲ್ಲಿಇ ಕಲ್ಕತ್ತದ ಸೀಗಲ್ ಬೂಕ್‍ ಪ್ರಕಾಶಕರು ಈ ಪುಸ್ತಕವನ್ನು ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಬಾಸೆಗ್ ಅನುವಾದ ಮಾಡಿ ಪ್ರಕಟಿಸಿದ್ದಾರೆ)
  17. ಸಿರಿಸಂಪಿಗೆ ೧೯೯೧ (ಕೇಂದ್ರ

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ)

  1. ಹುಲಿಯ ನೆರಳು ೧೯೮೦ (ಸಿನೆಮ ಆಗಿದೆ)
  2. ಬೋಳೆ ಶಂಕರ ೧೯೯೧
  3. ಪುಷ್ಪರಾಣಿ ೧೯೯೧
  4. ತಿರುಕನ ಕನಸು ೧೯೮೯
  5. ಮಹಾಮಾಯಿ ೧೯೯೯ (೨೦೦೦ನೇ ವರ್ಷದಲ್ಲಿ ದೆಹಲಿಯ ಎನ್.ಎಸ್.ಡಿ. ಸಂಸ್ಥೆಯಿಂದ ಇಂಗ್ಲಿಷ್ ಮತ್ತು ಹಿಂದಿ ಭಾಷೆಗೆ ಅನುವಾದ ಆಗಿದೆ.
  6. ನೆಲಸಂಪಿಗೆ ೨೦೦೪ (ಈ ಪುಸ್ತಕವನ್ನು ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರ ಪ್ರಕಟ ಮಾಡಿದೆ)
  7. ಜಕ್ಕಣ ೨೦೦೮
  8. ಶಿವರಾತ್ರಿ ೨೦೧೧

ಮಹಾಕಾವ್ಯ

  1. ಚಕೋರಿ೧೯೯೬ (೧೯೯೯ರಲ್ಲಿ ಪ್ರಕಟವಾದ ಈ ಪುಸ್ತಕವು ಭಾರತದ ಪೆಂಗ್ವಿನ್ ಪ್ರಕಾಶನದಿಂದ ಇಂಗ್ಲಿಷ್ ಭಾಷೆಗೆ ಅನುವಾದ ಆಗಿದೆ)

ಕಾದಂಬರಿ

  1. ಅಣ್ಣತಂಗಿ ೧೯೫೬
  2. ಕರಿಮಾಯಿ ೧೯೭೫ - ಸಿನಿಮಾ ಆಗಿದೆ
  3. ಜಿ.ಕೆ.ಮಾಸ್ತರ್ ಪ್ರಣಯ ಪ್ರಸಂಗ ೧೯೮೬ (ದೂರದರ್ಶನ ಸಿನೆಮಾ ಆಗಿದೆ. ಹಾಗೇ ದೆಹಲಿಯ ವಿದ್ಯಾ ಪ್ರಕಾಶನ ಮಂದಿರದಿಂದ ಹಿಂದಿ ಭಾಷೆಗೆ ಅನುವಾದ ಆಗಿದೆ)
  4. ಸಿಂಗಾರವ್ವ ಮತ್ತು ಅರಮನೆ ೧೯೮೨(ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ೨೦೦೨ರಲ್ಲಿ ನವದೆಹಲಿಯಿಂದ ಕಥಾಪುಸ್ತಕ ರೂಪದಲ್ಲಿ ಇಂಗ್ಲಿಷ್ ಭಾಷೆಗೆ ಅನುವಾದ ಆಗಿದೆ. ೧೯೮೪ರಲ್ಲಿ ನವದೆಹಲಿಯ ರಾಧಾಕೃಷ್ಣ ಪ್ರಕಾಶನದಿಂದ ಹಿಂದಿ ಭಾಷೆಗೆ ಅನುವಾದ ಆಗಿದೆ. ೧೯೯೯ರಲ್ಲಿ ಕೇರಳದ ಕೊಟ್ಟಾಯಂನಿಂದ ಕುಲೊಥೆ ಚಿಂಗಾರಮ್ಮ ಹೆಸರಲ್ಲಿ ಡಿ.ಸಿ. ಪುಸ್ತಕವಾಗಿ ಮಲಯಾಳಿ ಭಾಷೆಗೆ ಅನುವಾದವಾಗಿದೆ.)
  5. ಶಿಖರ ಸೂರ್ಯ ೨೦೦೭ ಅಕ್ಷರ ಪ್ರಕಾಶನ ಪ್ರಕಟ
  6. ಶಿವನ ಡಂಗುರ

ಸಂಶೋಧನಾ ಗ್ರಂಥ

  1. ಉತ್ತರ ಕರ್ನಾಟಕ ಜಾನಪದ ರಂಗಭೂಮಿ ೧೯೮೦
  2. ಸಂಗ್ಯಾ ಬಾಳ್ಯಾ ೧೯೬೬
  3. ಬನ್ನಿಸಿ ಹಾಡುವ ನನ ಬಳಗ ೧೯೬೮
  4. ಬಯಲಾಟಗಳು ೧೯೭೩
  5. ಮಾತಾಡೊ ಲಿಂಗವೆ ೧೯೭೩
  6. ನಮ್ಮ ಜನಪದ ೧೯೮೦
  7. ಬಂದಿರೆ ನನ್ನ ಜೈಯೊಳಗೆ ೧೯೮೧
  8. ಜಾನಪದ ವಿಶ್ವಕೋಶ ೧೯೮೫ (ಗ್ರಂಥದ ೨ ಸಂಪುಟವನ್ನು ಕನ್ನಡದಲ್ಲಿ ತಂದಿದ್ದಾರೆ)
  9. ಬೇಡರ ಹುಡುಗ ಮತ್ತು ಗಿಳಿ ೧೯೮೯ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ)
  10. ಲಕ್ಷಪತಿ ರಾಜನ ಕಥೆ ೧೯೮೬
  11. ಕಾಸಿಗೊಂದು ಸೇರು ೧೯೮೯
  12. ನೆಲದ ಮರೆಯ ನಿಧಾನ ೧೯೯೩
  13. ಬೃಹದ್ಧೇಸಿಯ ಚಿಂತನ ೨೦೦೧
  14. An Anthology of Modern India Plays for the National School of Drama – ೨೦೦೦
  15. ದೇಶಿಯ ಚಿಂತನ ೨೦೦೪ (ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿ ಅಂಕಿತ ಪುಸ್ತಕ ಪ್ರಕಾಶನದ ಸಂಗ್ರಹ ಪುಸ್ತಕವಾಗಿ ಪ್ರಕಟ ಆಗಿದೆ)
  16. ಮರವೆ ಮರ್ಮರವೆ ೨೦೦೭
  17. ಇದು ದೇಸಿ ೨೦೧೦

ಸ್ಥಾನಮಾನ

  1. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ
  2. ನವದೆಹಲಿದ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ
  3. ೨೦೦೪-೨೦೧೦ರ ವರೆಗೆ ಕಾಂಗ್ರೆಸ್ ಪಕ್ಷಕರ್ನಾಟಕ ವಿಧಾನ ಪರಿಷತ್ನ ಸದಸ್ಯ
  4. ಹಂಪಿ ಕನ್ನಡ ವಿವಿದ ಮೊದಲ ಉಪಕುಲಪತಿ (ಎರಡು ಅವಧಿಗೆ)
  5. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು.

ಪ್ರಶಸ್ತಿಗಳು ಮತ್ತು ಸನ್ಮಾನಗಳು

  1. ಅಕಾಡೆಮಿ ರತ್ನ ಪ್ರಶಸ್ತಿ ೨೦೧೧(ಕೇಂದ್ರ ಸಂಗೀತ ನಾಟಕ ಅಕಾಡೆಮಿ)
  2. ಜ್ಞಾನಪೀಠ ಪ್ರಶಸ್ತಿ ೨೦೧೦
  3. ದೇವರಾಜ ಅರಸ್ ಪ್ರಶಸ್ತಿ ೨೦೦೭
  4. ಜೋಶು ಸಾಹಿತ್ಯ ಪುರಸ್ಕಾರಂ ೨೦೦೫ (ಆಂದ್ರಪ್ರದೇಶ ಸರಕಾರ)
  5. ನಾಡೋಜ ಪ್ರಶಸ್ತಿ ೨೦೦೪ (ಹಂಪಿ ಕನ್ನಡ ವಿಶ್ವವಿದ್ಯಾಲಯ)
  6. ಪಂಪ ಪ್ರಶಸ್ತಿ ೨೦೦೪
  7. ಸಂತ ಕಬೀರ್ ಪ್ರಶಸ್ತಿ ೨೦೦೨
  8. ೨೦೦೬ರ ಆಳ್ವಾಸ್ ನುಡಿಸಿರಿ ಸಮ್ಮೇಳನದ ಅಧ್ಯಕ್ಷರು
  9. ೨೦೦೪ ರಿಂದ ೨೦೧೦ರ ವರೆಗೆ ವಿಧಾನ ಪರಿಷತ್ ಸದಸ್ಯ
  10. ಪದ್ಮಶ್ರೀ ಪ್ರಶಸ್ತಿ ೨೦೦೧
  11. ಮಾಸ್ತಿ ಪ್ರಶಸ್ತಿ ೧೯೯೭ (ಕರ್ನಾಟಕ ಸರಕಾರ)
  12. ಜಾನಪದ ಮತ್ತು ಯಕ್ಷಗಾನೊ ಅಕಾಡೆಮಿ ಪ್ರಶಸ್ತಿ ೧೯೯೩
  13. ಸಿರಿಸಂಪಿಗೆ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೧
  14. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೯
  15. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೮೮
  16. ನಂದಿಕರ್ ಪ್ರಶಸ್ತಿ ೧೯೮೭ (ಕಲ್ಕತ್ತ)
  17. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ೧೯೮೭
  18. ಸಂಗೀತ ನಾಟಕ ಅಕಾಡೆಮಿ ೧೯೮೩
  19. ಕುಮಾರ ಆಶನ್ ಪ್ರಶಸ್ತಿ ೧೯೮೨ (ಕೇರಳ ಸರಕಾರ)
  20. ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ೧೯೭೫
  21. ಮಧ್ಯಪ್ರದೇಶ ಸರ್ಕಾರ ಕೊಡುವ ಕಾಳಿದಾಸ ಸಮ್ಮಾನ್ ಪ್ರಶಸ್ತಿ
  22. "ಜೋ ಕುಮಾರಸ್ವಾಮಿ" ನಾಟಕಕ್ಕೆ ೧೯೭೫ದ ಭಾರತೀಯ ಭಾಷೆಯ ಅತ್ಯುತ್ತಮ ನಾಟಕ - ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ
  23. ಶಿಖರ ಸೂರ್ಯ ಪುಸ್ತಕಕ್ಕೆ ಟ್ಯಾಗೋರ್‌ ಪ್ರಶಸ್ತಿ,

ಹುದ್ದೆಗಳು/ಗೌರವ ಹುದ್ದೆಗಳು

  • ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ
  • ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ
  • ೨೦೦೪-೨೦೧೦ರವರೆಗೆ ಕಾಂಗ್ರೆಸ್ ಪಕ್ಷದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು
  • ಹಂಪಿ ಕನ್ನಡ ವಿವಿಯ ಮೊದಲ ಉಪಕುಲಪತಿ (ಎರಡು ಅವಧಿ)
  • ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷ []
  • ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ []
  • ೨೦೨೧ರ ಭಾರತ ಸರ್ಕಾರದ ಮೂರನೆಯ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ.[]

ಹೊರಗಿನ ಸಂಪರ್ಕಗಳು

ಉಲ್ಲೇಖ

  1. "ಕಂಬಾರ - ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ". ಪ್ರಜಾವಾಣಿ. May 18, 2013. Archived from the original on ಜನವರಿ 10, 2023.
  2. ಸಾಹಿತಿ ಕಂಬಾರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ[ಶಾಶ್ವತವಾಗಿ ಮಡಿದ ಕೊಂಡಿ], ಪ್ರಜಾವಾಣಿ ವಾರ್ತೆ; 12 Feb, 2018
  3. https://www.thehindu.com/news/national/list-of-padma-awardees-2021/article33661766.ece