ಶಿಕ್ಷಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಧ್ಯಾಪಕ ಇಂದ ಪುನರ್ನಿರ್ದೇಶಿತ)

ಶಿಕ್ಷಕನು ಇತರರಿಗೆ ಜ್ಞಾನ, ಸಾಮರ್ಥ್ಯಗಳು ಅಥವಾ ಮೌಲ್ಯಗಳನ್ನು ಪಡೆಯಲು ಸಹಾಯಮಾಡುವ ವ್ಯಕ್ತಿ.

ಅನೌಪಚಾರಿಕವಾಗಿ ಶಿಕ್ಷಕನ ಪಾತ್ರವನ್ನು ಯಾರು ಬೇಕಾದರೂ ವಹಿಸಬಹುದು (ಉದಾ. ಒಂದು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಲು ಸಹೋದ್ಯೋಗಿಗೆ ತೋರಿಸುವಾಗ). ಕೆಲವು ದೇಶಗಳಲ್ಲಿ, ಶಾಲಾ ವಯಸ್ಸಿನ ಯುವ ಜನರಿಗೆ ಅನೌಪಚಾರಿಕ ವ್ಯವಸ್ಥೆಯಲ್ಲಿ, ಶಾಲೆಯ ಅಥವಾ ಕಾಲೇಜು ಮುಂತಾದ ಔಪಚಾರಿಕ ವ್ಯವಸ್ಥೆಗಳಲ್ಲಿ ಹೆಚ್ಚಾಗಿ ಕುಟುಂಬದೊಳಗೆ ಮನೆಶಾಲೆಯಂತಹವುಗಳನ್ನು ನಡೆಸಲಾಗುತ್ತದೆ. ಕೆಲವು ಇತರ ವೃತ್ತಿಗಳು ಗಣನೀಯ ಪ್ರಮಾಣದ ಬೋಧನೆಗಳನ್ನು ಒಳಗೊಳ್ಳಬಹುದು (ಉದಾ. ಯುವಕರ ಕೆಲಸಗಾರ, ಪಾದ್ರಿ).

ಹೆಚ್ಚಿನ ದೇಶಗಳಲ್ಲಿ,ವಿದ್ಯಾರ್ಥಿಗಳ ಔಪಚಾರಿಕ ಬೋಧನೆಯು ಪಾವತಿಸಿದ ವೃತ್ತಿಪರ ಶಿಕ್ಷಕರಿಂದ ಸಾಮಾನ್ಯವಾಗಿ ನಡೆಸಲ್ಪಡುತ್ತದೆ. ಈ ಲೇಖನವು ಶಾಲೆಯಲ್ಲಿ ಅಥವಾ ಪ್ರಾಥಮಿಕ ಔಪಚಾರಿಕ ಶಿಕ್ಷಣ ಅಥವಾ ತರಬೇತಿಯ ಇತರ ಸ್ಥಳದಲ್ಲಿ ಔಪಚಾರಿಕ ಶಿಕ್ಷಣ ಸನ್ನಿವೇಶದಲ್ಲಿ ಇತರರಿಗೆ ಕಲಿಸಲು ನೇಮಕ ಮಾಡಿದವರ ಮೇಲೆ ಮುಖ್ಯ ಪಾತ್ರವಹಿಸುತ್ತದೆ.

ಕರ್ತವ್ಯಗಳು[ಬದಲಾಯಿಸಿ]

ಒಬ್ಬ ಶಿಕ್ಷಕನ ಪಾತ್ರ ಸಂಸ್ಕೃತಿಗಳಿಗನುಗುಣವಾಗಿ ಬದಲಾಗಬಹುದು.

ಶಿಕ್ಷಕರು ಅಕ್ಷರಜ್ಞಾನ ಮತ್ತು ಸಂಖ್ಯಾಜ್ಞಾನ, ಕುಸುರಿ ಅಥವಾ ವೃತ್ತಿಪರ ತರಬೇತಿ, ಕಲೆ ಧರ್ಮ, ಪೌರತ್ವ, ಸಮುದಾಯ ಚಟುವಟಿಕೆಗಳು, ಅಥವಾ ಜೀವನ ಕೌಶಲ್ಯಗಳಲ್ಲಿ ಸೂಚನೆಯನ್ನು ನೀಡಬಹುದು.

ಔಪಚಾರಿಕ ಬೋಧನಾ ಕಾರ್ಯಗಳೆಂದರೆ ಒಪ್ಪಿತವಾದ ಪಠ್ಯಕ್ರಮದ ಪ್ರಕಾರ ಪಾಠಗಳನ್ನು ತಯಾರಿಸುವುದು, ಪಾಠಗಳನ್ನು ಬೋಧಿಸುವುದು, ಮತ್ತು ವಿದ್ಯಾರ್ಥಿ ಪ್ರಗತಿಯನ್ನು ನಿರ್ಣಯಿಸುವುದು. ಮೊದಲಾದವುಗಳು.

ಶಿಕ್ಷಕನ ವೃತ್ತಿಪರ ಕರ್ತವ್ಯಗಳು ಔಪಚಾರಿಕ ಬೋಧನೆಗೆ ಮೀರಿ ವಿಸ್ತರಿಸಬಹುದು. ತರಗತಿಯ ಹೊರಗೆ ಕೂಡ ಶಿಕ್ಷಕರು ಅಧ್ಯಯನ ಪ್ರವಾಸದಲ್ಲಿ ವಿದ್ಯಾರ್ಥಿಗಳ ಜೊತೆಯಲ್ಲಿ ಹೋಗಬಹುದು, ಅಧ್ಯಯನ ಸಮೂಹಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ, ಶಾಲಾ ಕಾರ್ಯಗಳ ಸಂಘಟನೆಗೆ ಸಹಾಯ ಮಾಡುತ್ತಾರೆ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಬಹುದು. ಕೆಲವು ಶಿಕ್ಷಣ ವ್ಯವಸ್ಥೆಗಳಲ್ಲಿ, ಶಿಕ್ಷಕರಿಗೆ ವಿದ್ಯಾರ್ಥಿ ಶಿಸ್ತಿನ ಜವಾಬ್ದಾರಿ ಇರಬಹುದು.

ಶಿಕ್ಷಕರ ಅರ್ಹತೆಗಳು ಮತ್ತು ಗುಣಗಳು[ಬದಲಾಯಿಸಿ]

ಬೋಧನೆ ಅತ್ಯಂತ ಸಂಕೀರ್ಣ ಚಟುವಟಿಕೆಯಾಗಿದೆ.[೧] ಬೋಧನೆಯು ಒಂದು ಸಾಮಾಜಿಕ ಅಭ್ಯಾಸವಾಗಿದೆ, ಇದು ನಿರ್ದಿಷ್ಟ ಸಂದರ್ಭಗಳಲ್ಲಿ (ಸಮಯ, ಸ್ಥಳ, ಸಂಸ್ಕೃತಿ, ಸಾಮಾಜಿಕ-ರಾಜಕೀಯ-ಆರ್ಥಿಕ ಪರಿಸ್ಥಿತಿ ಇತ್ಯಾದಿ) ನಡೆಯುತ್ತದೆ ಮತ್ತು ಆ ನಿರ್ದಿಷ್ಟ ಸನ್ನಿವೇಶದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.[೨] ಶಿಕ್ಷಕರಿಗೆ ನಿರೀಕ್ಷಿತ (ಅಥವಾ ಅಗತ್ಯ) ಪ್ರಭಾವ ಬೀರುವ ಅಂಶಗಳು ಇತಿಹಾಸ, ಸಂಪ್ರದಾಯ, ಶಿಕ್ಷಣದ ಉದ್ದೇಶವನ್ನು ಕುರಿತು ಸಾಮಾಜಿಕ ದೃಷ್ಟಿಕೋನಗಳು, ಕಲಿಕೆ ಕುರಿತು ಒಪ್ಪಿತ ಸಿದ್ಧಾಂತಗಳು ಇತ್ಯಾದಿ.[೩]

ಸಾಮರ್ಥ್ಯ[ಬದಲಾಯಿಸಿ]

ಶಿಕ್ಷಕರಿಗೆ ಅಗತ್ಯವಿರುವ ಸಾಮರ್ಥ್ಯವು ಪ್ರಪಂಚದಾದ್ಯಂತ ಪಾತ್ರವನ್ನು ಅರ್ಥಮಾಡಿಕೊಳ್ಳುವ ವಿವಿಧ ವಿಧಾನಗಳಿಂದ ಪ್ರಭಾವಿತವಾಗಿರುತ್ತದೆ. ಸ್ಥೂಲವಾಗಿ, ನಾಲ್ಕು ಮಾದರಿಗಳು ಕಂಡುಬರುತ್ತವೆ:

  • ಸೂಚನಾ ವ್ಯವಸ್ಥಾಪಕನಾಗಿ ಶಿಕ್ಷಕ;
  • ಜವಾಬ್ದಾರಿಯುತ ರಕ್ಷಕನಾಗಿ ಶಿಕ್ಷಕ;
  • ತಜ್ಞ ವಿದ್ಯಾರ್ಥಿಯಾಗಿ ಶಿಕ್ಷಕ; ಮತ್ತು
  • ಸಾಂಸ್ಕೃತಿಕ ಮತ್ತು ನಾಗರಿಕ ವ್ಯಕ್ತಿಯಾಗಿ ಶಿಕ್ಷಕ.

ಶಿಕ್ಷಕರ ವೃತ್ತಿಜೀವನದ ದೀರ್ಘಾವಧಿಯ ಶಿಕ್ಷಣ ಮತ್ತು ವೃತ್ತಿಪರ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಸಲುವಾಗಿ, ಶಿಕ್ಷಕರು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನದ ಹಂಚಿಕೆಯ ವ್ಯಾಖ್ಯಾನವನ್ನು ಅಭಿವೃದ್ಧಿಪಡಿಸುವುದು ಅಗತ್ಯ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಓಇಸಿಡಿ) ವಾದಿಸಿದೆ.[೪] ಕೆಲವು ಪುರಾವೆ ಆಧಾರಿತ ಅಂತರರಾಷ್ಟ್ರೀಯ ಚರ್ಚೆಗಳು ಅಂತಹ ಸಾಮಾನ್ಯ ತಿಳುವಳಿಕೆಯನ್ನು ದೃಢಪಡಿಸಲು ಪ್ರಯತ್ನಿಸಿವೆ. ಉದಾಹರಣೆಗೆ, ಐರೋಪ್ಯ ಒಕ್ಕೂಟವು ಶಿಕ್ಷಕರು ಅಗತ್ಯವಿರುವ ಮೂರು ವಿಶಾಲವಾದ ಕ್ಷೇತ್ರಗಳನ್ನು ಗುರುತಿಸಿದೆ:

  • ಇತರರೊಂದಿಗೆ ಕೆಲಸ
  • ಜ್ಞಾನ, ತಂತ್ರಜ್ಞಾನ ಮತ್ತು ಮಾಹಿತಿಗಳೊಂದಿಗೆ ಕೆಲಸ ಮತ್ತು
  • ಸಮಾಜದಲ್ಲಿ ಮತ್ತು ಸಮಾಜದೊಂದಿಗೆ ಕೆಲಸ[೫]

ಮೂರು ಶಿರೋನಾಮೆಗಳ ಅಡಿಯಲ್ಲಿ ಶಿಕ್ಷಕರು ಅಗತ್ಯಗಳನ್ನು ವರ್ಗೀಕರಿಸಬಹುದು ಎಂದು ವಿದ್ವತ್ಪೂರ್ಣ ಒಮ್ಮತವು ಹೊರಹೊಮ್ಮುತ್ತಿದೆ:

  • ಜ್ಞಾನ (ಉದಾಹರಣೆಗೆ: ಸ್ವತಃ ವಿಷಯ ಮತ್ತು ಜ್ಞಾನವನ್ನು ಹೇಗೆ ಕಲಿಸುವುದು, ಪಠ್ಯಕ್ರಮದ ಜ್ಞಾನ, ಶೈಕ್ಷಣಿಕ ವಿಜ್ಞಾನಗಳ ಬಗ್ಗೆ ಜ್ಞಾನ, ಮನಃಶಾಸ್ತ್ರ, ಮೌಲ್ಯಮಾಪನ ಇತ್ಯಾದಿ)
  • ವೃತ್ತಿಕಲೆಯ ಕೌಶಲ್ಯಗಳು (ಪಾಠದ ಯೋಜನೆ, ಬೋಧನಾ ತಂತ್ರಜ್ಞಾನಗಳನ್ನು ಬಳಸುವುದು, ವಿದ್ಯಾರ್ಥಿಗಳು ಮತ್ತು ಗುಂಪುಗಳನ್ನು ನಿರ್ವಹಿಸುವುದು, ಕಲಿಕೆ ಇತ್ಯಾದಿಗಳನ್ನು ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವುದು)
  • ಮನೋಧರ್ಮ (ಅಗತ್ಯ ಮೌಲ್ಯಗಳು ಮತ್ತು ವರ್ತನೆಗಳು, ನಂಬಿಕೆಗಳು ಮತ್ತು ಬದ್ಧತೆ).[೬]

ಗುಣಗಳು[ಬದಲಾಯಿಸಿ]

ಉತ್ಸಾಹ[ಬದಲಾಯಿಸಿ]

ಶಿಕ್ಷಕ-ವಿದ್ಯಾರ್ಥಿ ಸಂವಾದ

ಕೋರ್ಸ್ ಸಾಮಗ್ರಿಗಳು ಮತ್ತು ವಿದ್ಯಾರ್ಥಿಗಳ ಬಗ್ಗೆ ಉತ್ಸಾಹ ತೋರಿಸಿದ ಶಿಕ್ಷಕರು ಧನಾತ್ಮಕ ಕಲಿಕೆಯ ಅನುಭವವನ್ನು ಸೃಜಿಸಬಹುದು ಎಂದು ಕಂಡು ಬಂದಿದೆ.[೭] ಈ ಶಿಕ್ಷಕರು ರೂಢಿಯಿಂದ ಕಲಿಸುವುದಿಲ್ಲ ಆದರೆ ಪ್ರತಿದಿನವೂ ಕೋರ್ಸ್ ಸಾಮಗ್ರಿಗಳಿಗೆ ಹೊಸ ಉತ್ತೇಜನವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ.[೮] ಶಿಕ್ಷಕರು ಎದುರಿಸುತ್ತಿರುವ ಸವಾಲುಗಳಲ್ಲಿ ಅವರು ಪದೇ ಪದೇ ಪಠ್ಯಕ್ರಮವನ್ನು ಪೂರೈಸುವುದರಿಂದ ವಿಷಯದೊಂದಿಗೆ ಬೇಸರವನ್ನು ಅನುಭವಿಸಿರಬಹುದು, ಮತ್ತು ಅವರ ವರ್ತನೆಗಳು ವಿದ್ಯಾರ್ಥಿಗಳಿಗೆ ಬೇಸರವನ್ನು ಮೂಡಿಸಬಹುದು. ಕೋರ್ಸ್ ಸಾಮಗ್ರಿಗಳ ವಿಷಯದಲ್ಲಿ ಉತ್ಸಾಹಪೂರ್ಣರಾದ ಶಿಕ್ಷಕರನ್ನು ವಿದ್ಯಾರ್ಥಿಗಳು ಹೆಚ್ಚು ಪ್ರಶಂಸಿಸಲು ಒಲವು ತೋರಿದ್ದಾರೆ.[೯]

ಶಿಕ್ಷಕರು ಉತ್ಸಾಹವನ್ನು ಪ್ರದರ್ಶಿಸುವುದರಿಂದ ವಿಷಯಗಳನ್ನು ಕಲಿಯುವಲ್ಲಿ ವಿದ್ಯಾರ್ಥಿಗಳಿಗೆ ತೊಡಗಿಕೊಳ್ಳುವಿಕೆ, ಆಸಕ್ತಿ, ಸತ್ವಪೂರ್ಣ ಕುತೂಹಲ ಉಂಟಾಗಬಹುದು. ಇತ್ತೀಚಿನ ಸಂಶೋಧನೆಯು ಶಿಕ್ಷಕರ ಉತ್ಸಾಹ ಮತ್ತು ವಿದ್ಯಾರ್ಥಿಗಳ ಹುರುಪಿನಿಂದ ಕೂಡಿದ ಕಲಿಕೆಯ ಪ್ರೇರಣೆಗಳ ನಡುವಿನ ಪರಸ್ಪರ ಸಂಬಂಧವನ್ನು ಕಂಡುಹಿಡಿದಿದೆ.[೧೦] ಕಾಲೇಜು ವಿದ್ಯಾರ್ಥಿಗಳ ಸ್ವಾಭಾವಿಕ ಪ್ರೇರಣೆಗಳನ್ನು ಅನ್ವೇಷಿಸಲು ನಡೆಸಿದ ನಿಯಂತ್ರಿತ, ಪ್ರಾಯೋಗಿಕ ಅಧ್ಯಯನಗಳು ಪ್ರದರ್ಶಕ ಅಂಗಸನ್ನೆಗಳು, ವೈವಿಧ್ಯಮಯವಾದ ನಾಟಕೀಯ ಚಲನೆಗಳು, ಮುಖದಲ್ಲಿ ಭಾವನೆಗಳ ಅಭಿವ್ಯಕ್ತಿ ಮೊದಲಾದ ಉತ್ಸಾಹದ ಅಮೌಖಿಕ ಅಭಿವ್ಯಕ್ತಿಗಳು ಕಾಲೇಜು ವಿದ್ಯಾರ್ಥಿಗಳಲ್ಲಿ ಉನ್ನತ ಮಟ್ಟದ ಕಲಿಕೆಯ ಸ್ವಾಭಾವಿಕ ಪ್ರೇರಣೆಗಳನ್ನು ಉಂಟುಮಾಡುತ್ತವೆ ಎಂದು ತೋರಿಸಿಕೊಟ್ಟಿವೆ.[೧೧] ಆದರೆ ಶಿಕ್ಷಕನ ಉತ್ಸಾಹವು ಪ್ರೇರಣೆ ಸುಧಾರಿಸಲು ಮತ್ತು ಕಾರ್ಯಗಳಲ್ಲಿ ತೊಡಗಿಸುವಿಕೆಯನ್ನು ಹೆಚ್ಚಿಸಿದರೂ, ಇದು ವಿಷಯವಸ್ತುಗಳ ಕಲಿಕೆ ಫಲಿತಾಂಶ ಅಥವಾ ಸ್ಮರಣಶಕ್ತಿಯನ್ನು ನಿಶ್ಚಿತವಾಗಿ ಸುಧಾರಿಸ ಬೇಕೆಂದಿಲ್ಲ.[೧೨]

ಶಿಕ್ಷಕನ ಉತ್ಸಾಹವು ಹೆಚ್ಚಿನ ಮಟ್ಟದ ಅಂತರ್ಗತ ಪ್ರೇರಣೆಗೆ ಅನುಕೂಲವಾಗುವಂತೆ ಹಲವಾರು ಕಾರ್ಯವಿಧಾನಗಳು ಇವೆ.[೧೩] ವಿಷಯದ ಕಲಿಕೆಯಲ್ಲಿ ವಿದ್ಯಾರ್ಥಿಯ ಆಸಕ್ತಿಯನ್ನು ಮತ್ತು ಉತ್ಸಾಹವನ್ನು ಪೋಷಿಸುವ ಶಕ್ತಿ ಹಾಗೂ ಉತ್ಸಾಹದ ತರಗತಿಯ ವಾತಾವರಣಕ್ಕೆ ಶಿಕ್ಷಕನ ಉತ್ಸಾಹವು ಸಹಕಾರಿಯಾಗಿರುತ್ತದೆ.[೧೪] ಉತ್ಸಾಹಪೂರ್ಣ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಕಲಿಕೆಯ ಪ್ರಕ್ರಿಯೆಯಲ್ಲಿ ಸ್ವಯಂ-ನಿರ್ಣಯಿಸುವುದಕ್ಕೆ ಕಾರಣವಾಗಬಹುದು. ಕೇವಲ ತೆರೆದುಕೊಳ್ಳುವಿಕೆಯ ಪರಿಕಲ್ಪನೆಯು ಶಿಕ್ಷಕರ ಉತ್ಸಾಹವು ಕಲಿಕೆಯ ಸಂದರ್ಭದಲ್ಲಿ ಆಂತರಿಕ ಪ್ರೇರಣೆಯ ಬಗ್ಗೆ ವಿದ್ಯಾರ್ಥಿಯ ನಿರೀಕ್ಷೆಗಳಿಗೆ ಕಾರಣವಾಗಬಹುದು ಎಂದು ಸೂಚಿಸುತ್ತದೆ. ಉತ್ಸಾಹ ಒಂದು "ಪ್ರೇರಕ ಅಲಂಕರಣ"ದಂತೆಯೂ ಇರಬಹುದು. ಇದು ಶಿಕ್ಷರನ ಉತ್ಸಾಹಪೂರ್ಣ ಪ್ರಸ್ತುತತೆಯ ವೈವಿಧ್ಯಮಯ, ನವೀನತೆ ಹಾಗೂ ಅಚ್ಚರಿಗಳಿಂದ ವಿದ್ಯಾರ್ಥಿಯ ಆಸಕ್ತಿಯನ್ನು ಹೆಚ್ಚಿಸುತ್ತದೆ. ಅಂತಿಮವಾಗಿ, ಭಾವನಾತ್ಮಕ ನಂಟಿನ ಪರಿಕಲ್ಪನೆಯು ಅನ್ವಯಿಸಬಹುದು; ಶಿಕ್ಷಕನ ಉತ್ಸಾಹ ಮತ್ತು ಶಕ್ತಿಯನ್ನು ಅವಲಂಬಿಸಿ ವಿದ್ಯಾರ್ಥಿಗಳು ಹೆಚ್ಚು ಆಂತರಿಕವಾಗಿ ಪ್ರಚೋದಿತರಾಗುತ್ತಾರೆ.[೧೫]

ಕಲಿಯುವವರೊಂದಿಗಿನ ಸಂವಹನ[ಬದಲಾಯಿಸಿ]

ವಿದ್ಯಾರ್ಥಿ-ಶಿಕ್ಷಕ ಸಂಬಂಧಗಳೊಂದಿಗೆ ಶಾಲೆಯಲ್ಲಿ ವಿದ್ಯಾರ್ಥಿ ಪ್ರೇರಣೆ ಮತ್ತು ವರ್ತನೆಗಳು ನಿಕಟ ಸಂಬಂಧ ಹೊಂದಿದೆಯೆಂದು ಸಂಶೋಧನೆ ತೋರಿಸುತ್ತದೆ. ಉತ್ಸಾಹಪೂರ್ಣ ಶಿಕ್ಷಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಪ್ರಯೋಜನಕಾರಿ ಸಂಬಂಧಗಳನ್ನು ರಚಿಸುವಲ್ಲಿ ವಿಶೇಷವಾಗಿ ಯಶಸ್ವಿಯಾಗುತ್ತಾರೆ. ವಿದ್ಯಾರ್ಥಿಯ ಸಾಧನೆಯನ್ನು ಪೋಷಿಸುವ ಪರಿಣಾಮಕಾರಿ ಕಲಿಕೆಯ ಪರಿಸರವನ್ನು ಸೃಷ್ಟಿಸುವ ಅವರ ಸಾಮರ್ಥ್ಯವು ಅವರ ವಿದ್ಯಾರ್ಥಿಗಳೊಂದಿಗೆ ಅವರು ರಚಿಸುವ ಸಂಬಂಧದ ಮೇಲೆ ಅವಲಂಬಿತವಾಗಿರುತ್ತದೆ.[೧೬][೧೭][೧೮][೧೯] ವೈಯಕ್ತಿಕ ಸಾಧನೆಯೊಂದಿಗೆ ಶೈಕ್ಷಣಿಕ ಯಶಸ್ಸನ್ನು ಬೆಸೆಯುವಲ್ಲಿ ಯೋಗ್ಯವಾದ ಶಿಕ್ಷಕ ಮತ್ತು ವಿದ್ಯಾರ್ಥಿ ಸಂವಾದಗಳು ಬಹುಮುಖ್ಯವಾಗಿವೆ.[೨೦] ಇಲ್ಲಿ, ವೈಯಕ್ತಿಕ ಯಶಸ್ಸು ಒಬ್ಬ ವಿದ್ಯಾರ್ಥಿಯ ಆಂತರಿಕ ಗುರಿಯಾಗಿದೆ, ಆದರೆ ತನ್ನ ಹಿರಿಯರಿಂದ ಪಡೆಯುವ ಗುರಿಗಳನ್ನು ಶೈಕ್ಷಣಿಕ ಯಶಸ್ಸು ಒಳಗೊಂಡಿದೆ. ಒಂದು ಶಿಕ್ಷಕ ತನ್ನ ಶೈಕ್ಷಣಿಕ ಗುರಿಗಳೊಂದಿಗೆ ತನ್ನ ವೈಯಕ್ತಿಕ ಗುರಿಗಳನ್ನು ಸರಿಹೊಂದಿಸಲು ತನ್ನ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಬೇಕು. ಈ ಸಕಾರಾತ್ಮಕ ಪ್ರಭಾವವನ್ನು ಸ್ವೀಕರಿಸುವ ವಿದ್ಯಾರ್ಥಿಗಳು ಬಲವಾದ ಆತ್ಮವಿಶ್ವಾಸವನ್ನು ತೋರಿಸುತ್ತಾರೆ ಮತ್ತು ಹೆಚ್ಚಿನ ವೈಯಕ್ತಿಕ ಮತ್ತು ಶೈಕ್ಷಣಿಕ ಯಶಸ್ಸನ್ನು ತೋರಿಸುತ್ತಾರೆ.[೨೧][೨೨][೨೩]

ವಿದ್ಯಾರ್ಥಿಗಳು ಸ್ನೇಹಪರ ಮತ್ತು ಪೋಷಕರಾಗಿರುವ ಶಿಕ್ಷಕರೊಂದಿಗೆ ಬಲವಾದ ಸಂಬಂಧವನ್ನು ಬೆಳೆಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಈ ಶಿಕ್ಷಕರಿಂದ ಕಲಿಸಲಾಗುವ ವಿಷಯಗಳಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಾರೆ.[೨೪][೨೫] ವಿದ್ಯಾರ್ಥಿಗಳೊಂದಿಗೆ ನೇರವಾಗಿ ಕೆಲಸ ಮಾಡುವ ಮತ್ತು ಹೆಚ್ಚು ಸಮಯ ಕಳೆಯುವ ಶಿಕ್ಷಕರು ಪೋಷಕ ಮತ್ತು ಪರಿಣಾಮಕಾರಿ ಶಿಕ್ಷಕರು ಎಂದು ಗ್ರಹಿಸಲಾಗುತ್ತದೆ. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಪರಿಣಾಮಕಾರಿ ಶಿಕ್ಷಕರು ಪ್ರಚೋದಿಸುತ್ತಾರೆ. ಅವರ ತರಗತಿಯಲ್ಲಿ ಹಾಸ್ಯವನ್ನು ಅನುಮತಿಸುತ್ತಾರೆ ಮತ್ತು ಆಡಲು ಇಚ್ಛೆ ತೋರಿಸುತ್ತಾರೆ.[೨೬]

ಬೋಧನಾ ವಿದ್ಯಾರ್ಹತೆಗಳು[ಬದಲಾಯಿಸಿ]

ಅನೇಕ ದೇಶಗಳಲ್ಲಿ, ಒಬ್ಬ ಶಿಕ್ಷಕರಾಗಲು ಬಯಸಿದ ವ್ಯಕ್ತಿಯು ಮೊದಲು ವಿಶ್ವವಿದ್ಯಾನಿಲಯ ಅಥವಾ ಕಾಲೇಜಿನಿಂದ ನಿಗದಿತ ವೃತ್ತಿಪರ ಅರ್ಹತೆಗಳು ಅಥವಾ ರುಜುವಾತುಗಳನ್ನು ಪಡೆಯಬೇಕು. ಈ ವೃತ್ತಿಪರ ವಿದ್ಯಾರ್ಹತೆಗಳು ಶಿಕ್ಷಕನ ಅಧ್ಯಯನ, ಬೋಧನೆಯ ಸಿದ್ಧಾಂತವನ್ನು ಒಳಗೊಂಡಿರಬಹುದು.

ಶಿಕ್ಷಕ ವಿದ್ಯಾರ್ಹತೆಯ ವಿಷಯವು ವೃತ್ತಿಯ ಸ್ಥಿತಿಯನ್ನು ಸಂಬಂಧಿಸಿದೆ. ಕೆಲವು ಸಮಾಜಗಳಲ್ಲಿ, ವೈದ್ಯರು, ವಕೀಲರು, ಎಂಜಿನಿಯರುಗಳು, ಮತ್ತು ಅಕೌಂಟೆಂಟ್ಗಳೊಂದಿಗೆ ಇತರರಲ್ಲಿ ಸಮಾನ ಸ್ಥಾನಮಾನವನ್ನು ಶಿಕ್ಷಕರು ಪಡೆಯುತ್ತಾರೆ. ಇಪ್ಪತ್ತನೆಯ ಶತಮಾನದಲ್ಲಿ, ಅನೇಕ ಬುದ್ಧಿವಂತ ಮಹಿಳೆಯರಿಗೆ ನಿಗಮಗಳು ಅಥವಾ ಸರ್ಕಾರಗಳಲ್ಲಿ ಕೆಲಸ ಪಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ಅನೇಕ ಜನರು ಮೊದಲ್ಗಾಣುವ ವೃತ್ತಿಯಾಗಿ ಬೋಧನೆಯನ್ನು ಆಯ್ಕೆಮಾಡಿದರು. ಇಂದು ನಿಗಮಗಳು ಮತ್ತು ಸರ್ಕಾರಗಳಿಗೆ ಹೆಚ್ಚು ಹೆಚ್ಚು ನೇಮಕಾತಿಗಳು ನಡೆದಂತೆ ಭವಿಷ್ಯದಲ್ಲಿ ಅರ್ಹ ಶಿಕ್ಷಕರನ್ನು ಪಡೆಯುವುದು ಕಷ್ಟವಾಗುತ್ತದೆ.

ಅಗತ್ಯವಿರುವ ಜ್ಞಾನ, ಸಾಮರ್ಥ್ಯಗಳು ಮತ್ತು ನೈತಿಕತೆಯ ಸಂಹಿತೆಗಳಿಗೆ ಅನುಗುಣವಾಗಿರಬೇಕು ಎಂದು ಖಚಿತಪಡಿಸಿಕೊಳ್ಳಲು ಶಿಕ್ಷಕರಿಗೆ ಶಿಕ್ಷಣದ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣದ ಪಠ್ಯಕ್ರಮವನ್ನು ಬೋಧಿಸಲಾಗುತ್ತದೆ.

ಶಿಕ್ಷಕರ ಜ್ಞಾನ ಮತ್ತು ವೃತ್ತಿಪರ ನಿಲುವನ್ನು ಹುಟ್ಟುಹಾಕಲು, ಸಂರಕ್ಷಿಸಲು ಮತ್ತು ನವೀಕರಿಸಲು ವಿನ್ಯಾಸಗೊಳಿಸಿದ ವಿವಿಧ ಸಂಸ್ಥೆಗಳಿವೆ. ಪ್ರಪಂಚದಾದ್ಯಂತ ಅನೇಕ ಶಿಕ್ಷಕರ ಕಾಲೇಜುಗಳು ಅಸ್ತಿತ್ವದಲ್ಲಿವೆ; ಅವುಗಳನ್ನು ಸರ್ಕಾರವೇ ನೇರವಾಗಿ ಅಥವಾ ಬೋಧನಾ ವೃತ್ತಿಯಿಂದ ನಿಯಂತ್ರಿಸಬಹುದು. ಬೋಧನಾ ವೃತ್ತಿಯ ಪ್ರಮಾಣೀಕರಣ, ಆಡಳಿತ, ಗುಣಮಟ್ಟದ ನಿಯಂತ್ರಣ, ಮತ್ತು ಅಭ್ಯಾಸದ ಗುಣಮಟ್ಟವನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿಗಳನ್ನು ಪೂರೈಸಲು ಮತ್ತು ರಕ್ಷಿಸಲು ಅವುಗಳನ್ನು ಸಾಮಾನ್ಯವಾಗಿ ಸ್ಥಾಪಿಸಲಾಗಿದೆ.

ವೃತ್ತಿಪರ ಮಾನದಂಡಗಳು[ಬದಲಾಯಿಸಿ]

ಶಿಕ್ಷಕರ ಕಾಲೇಜುಗಳ ಕಾರ್ಯಚಟುವಟಿಕೆಗಳೆಂದರೆ ಅಭ್ಯಾಸದ ಸ್ಪಷ್ಟ ಮಾನದಂಡಗಳನ್ನು ನಿಗದಿಪಡಿಸುವುದು, ಶಿಕ್ಷಕರಿಗೆ ಸಮಕಾಲದಲ್ಲಿ ಶಿಕ್ಷಣ ನೀಡುವುದು, ಸದಸ್ಯರನ್ನು ಒಳಗೊಂಡಿರುವ ದೂರುಗಳನ್ನು ತನಿಖೆ ಮಾಡುವುದು, ವೃತ್ತಿಪರ ದುಷ್ಕೃತ್ಯದ ಆರೋಪಗಳ ಬಗ್ಗೆ ವಿಚಾರಣೆ ನಡೆಸುವುದು ಮತ್ತು ಸರಿಯಾದ ಶಿಸ್ತು ಕ್ರಮ ತೆಗೆದುಕೊಳ್ಳುವುದು ಮತ್ತು ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳನ್ನು ಗುರುತಿಸುವುದು. ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಹಣವನ್ನು ಪಡೆದ ಶಾಲೆಗಳಲ್ಲಿನ ಶಿಕ್ಷಕರು ಕಾಲೇಜಿಯೊಂದಿಗೆ ಉತ್ತಮ ಸ್ಥಿತಿಯ ಸದಸ್ಯರಾಗಿರಬೇಕು, ಮತ್ತು ಖಾಸಗಿ ಶಾಲೆಗಳು ತಮ್ಮ ಶಿಕ್ಷಕರು ಕಾಲೇಜು ಸದಸ್ಯರಾಗಿರುವಂತೆ ನೋಡಿಕೊಳ್ಳಬೇಕು. ಇತರ ಕ್ಷೇತ್ರಗಳಲ್ಲಿ ಈ ಜವಾಬ್ದಾರಿ ರಾಜ್ಯ ಶಿಕ್ಷಣ ಮಂಡಳಿ, ಸಾರ್ವಜನಿಕ ಶಿಕ್ಷಣ ಅಧೀಕ್ಷಕ, ರಾಜ್ಯ ಶಿಕ್ಷಣ ಸಂಸ್ಥೆ ಅಥವಾ ಇತರ ಸರಕಾರಿ ಸಂಸ್ಥೆಗಳಿಗೆ ಸೇರಿರಬಹುದು. ಇನ್ನೂ ಇತರ ಪ್ರದೇಶಗಳಲ್ಲಿ ಬೋಧನಾ ಸಂಘಗಳು ಕೆಲವು ಅಥವಾ ಎಲ್ಲಾ ಕರ್ತವ್ಯಗಳಿಗೆ ಜವಾಬ್ದಾರರಾಗಿರಬಹುದು.


ಉಲ್ಲೇಖಗಳು[ಬದಲಾಯಿಸಿ]

  1. For a review of literature on competences required by teachers, see F Caena (2011) 'Literature review: Teachers’ core competences: requirements and development' accessed January 2017 at http://ec.europa.eu/dgs/education_culture/repository/education/policy/strategic-framework/doc/teacher-competences_en.pdf
  2. for a useful discussion see, for example: Cochran-Smith, M. (2006): 'Policy, Practice, and Politics in Teacher Education', Thousand Oaks, CA: Corwin Press
  3. see for example Cummings, W.K. (2003) 'The InstitutionS of Education. A Comparative Study of Educational Development in the Six Core Nations', Providence, MA: Symposium Books.
  4. 'Teachers Matter: Attracting, Developing and Retaining Effective Teachers', 2005, Paris: OECD publications [೧]
  5. F Caena (2011) 'Literature review: Teachers’ core competences: requirements and development' accessed January 2017 at http://ec.europa.eu/dgs/education_culture/repository/education/policy/strategic-framework/doc/teacher-competences_en.pdf
  6. Williamson McDiarmid, G. & Clevenger-Bright M. (2008) 'Rethinking Teacher Capacity', in Cochran-Smith, M., Feiman-Nemser, S. & Mc Intyre, D. (Eds.). 'Handbook of Research on Teacher Education. Enduring questions in changing contexts'. New York/Abingdon: Routledge/Taylor & Francis cited in F Caena (2011)
  7. Teaching Patterns: a Pattern Language for Improving the Quality of Instruction in Higher Education Settings by Daren Olson. Page 96
  8. Motivated Student: Unlocking the Enthusiasm for Learning by Bob Sullo. Page 62
  9. Barkley, S., & Bianco, T. (2006). The Wonder of Wows. Kappa Delta Pi Record, 42(4), 148-151.
  10. ^ Patrick, B.C., Hisley, J. & Kempler, T. (2000) "What's Everybody so Excited about?": The Effects of Teacher Enthusiasm on Student Intrinsic Motivation and Vitality", The Journal of Experimental Education, Vol. 68, No. 3, pp. 217-236
  11. ^ Brooks, Douglas M. (1985). "The Teacher's Communicative Competence: The First Day of School". Theory Into Practice. 24 (1): 63.
  12. ^ Motz, B. A.; de Leeuw, J. R.; Carvalho, P. F.; Liang, K. L.; Goldstone, R. L. (2017). "A dissociation between engagement and learning: Enthusiastic instructions fail to reliably improve performance on a memory task". PLoS ONE. 12 (7): e0181775. doi:10.1371/journal.pone.0181775.
  13. ^ All Of Us Should Be Teachers, Even If Just For One Day, Huffington Post, 27 September 2016
  14. ^ Amatora, M. (1950). Teacher Personality: Its Influence on Pupils. Education, 71(3), 154-158
  15. ^ Patrick, B.C., Hisley, J. & Kempler, T. (2000) "What's Everybody so Excited about?": The Effects of Teacher Enthusiasm on Student Intrinsic Motivation and Vitality", The Journal of Experimental Education, Vol. 68, No. 3, pp. 217-236
  16. ^ Baker, J. A., Terry, T., Bridger, R., & Winsor, A. (1997). Schools as caring communities: A relational approach to school reform. School Psychology Review, 26, 576-588.
  17. a b Bryant, Jennings . 1980. Relationship between college teachers' use of humor in the classroom and students' evaluations of their teachers. Journal of educational psychology. 72, 4.
  18. ^ Fraser, B. J., & Fisher, D. L. (1982). Predicting students' outcomes from their perceptions of classroom psychosocial environment. American Educational Research Journal, 19, 498- 518.
  19. a b Hartmut, J. (1978). Supportive dimensions of teacher behavior in relationship to pupil emotional cognitive processes. Psychologie in Erziehung und Unterricht, 25, 69-74.
  20. a b c Osborne, E.;. Salzberger, I.; Wittenberg, G. W. 1999. The Emotional Experience of Learning and Teaching. Karnac Books, London.
  21. a b Hartmut, J. (1978). Supportive dimensions of teacher behavior in relationship to pupil emotional cognitive processes. Psychologie in Erziehung und Unterricht, 25, 69-74.
  22. a b Baker, J. A.Teacher-Student Interaction in Urban At-Risk Classrooms: Differential Behavior, Relationship Quality, and Student Satisfaction with School. The Elementary School Journal Volume 100, Number 1, 1999 by The University of Chicago.
  23. ^ Moos, R. H. (1979). Evaluating Educational Environments: Measures, procedures, findings, and policy implications. San Francisco: Jossey-Bass.
  24. a b c Osborne, E.;. Salzberger, I.; Wittenberg, G. W. 1999. The Emotional Experience of Learning and Teaching. Karnac Books, London.
  25. a b Baker, J. A.Teacher-Student Interaction in Urban At-Risk Classrooms: Differential Behavior, Relationship Quality, and Student Satisfaction with School. The Elementary School Journal Volume 100, Number 1, 1999 by The University of Chicago.
  26. a b Bryant, Jennings . 1980. Relationship between college teachers' use of humor in the classroom and students' evaluations of their teachers. Journal of educational psychology. 72, 4.
"https://kn.wikipedia.org/w/index.php?title=ಶಿಕ್ಷಕ&oldid=1140215" ಇಂದ ಪಡೆಯಲ್ಪಟ್ಟಿದೆ