ಶಿಕ್ಷಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Classroom at a seconday school in Pendembu Sierra Leone.jpg

ಶಿಕ್ಷಕನು ಇತರರಿಗೆ ಜ್ಞಾನ, ಸಾಮರ್ಥ್ಯಗಳು ಅಥವಾ ಮೌಲ್ಯಗಳನ್ನು ಪಡೆಯಲು ಸಹಾಯಮಾಡುವ ವ್ಯಕ್ತಿ.

ಅನೌಪಚಾರಿಕವಾಗಿ ಶಿಕ್ಷಕನ ಪಾತ್ರವನ್ನು ಯಾರು ಬೇಕಾದರೂ ವಹಿಸಬಹುದು (ಉದಾ. ಒಂದು ನಿರ್ದಿಷ್ಟ ಕೆಲಸವನ್ನು ಹೇಗೆ ಮಾಡಬೇಕು ಎಂದು ಸಹೋದ್ಯೋಗಿಗೆ ತೋರಿಸುತ್ತಿರುವಾಗ). ಕೆಲವು ದೇಶಗಳಲ್ಲಿ, ಶಾಲಾ ವಯಸ್ಸಿನ ಯುವ ಜನರಿಗೆ ಕಲಿಸುವುದು ಶಾಲೆ ಅಥವಾ ಕಾಲೇಜಿನಂತಹ ಔಪಚಾರಿಕ ವ್ಯವಸ್ಥೆಯ ಬದಲು ಕುಟುಂಬದಂತಹ ಒಂದು ಅನೌಪಚಾರಿಕ ವ್ಯವಸ್ಥೆಯಲ್ಲಿ ನಡೆಯಬಹುದು (ಮನೆಶಾಲೆ). ಕೆಲವು ಇತರ ವೃತ್ತಿಗಳು ಗಣನೀಯ ಪ್ರಮಾಣದ ಬೋಧನೆಯನ್ನು ಒಳಗೊಳ್ಳಬಹುದು (ಉದಾ. ಯುವ ಕಾರ್ಮಿಕ, ಪಾದ್ರಿ).

ಬಹುತೇಕ ದೇಶಗಳಲ್ಲಿ, ಔಪಚಾರಿಕ ಬೋಧನೆಯನ್ನು ಸಾಮಾನ್ಯವಾಗಿ ಸಂಬಳ ಪಡೆಯುವ ವೃತ್ತಿಪರ ಶಿಕ್ಷಕರು ನಡೆಸುತ್ತಾರೆ.

ಒಬ್ಬ ಶಿಕ್ಷಕನ ಪಾತ್ರ ಸಂಸ್ಕೃತಿಗಳಲ್ಲಿ ಬದಲಾಗಬಹುದು.

ಶಿಕ್ಷಕರು ಸಾಕ್ಷರತೆ ಮತ್ತು ಗಣಿತಜ್ಞತೆ, ಕಲೆಗಾರಿಕೆ ಅಥವಾ ವೃತ್ತಿಪರ ತರಬೇತಿ, ಕಲೆಗಳು, ಧರ್ಮ, ಪೌರನೀತಿ, ಸಮುದಾಯ ಪಾತ್ರಗಳು, ಅಥವಾ ಜೀವನ ಕೌಶಲಗಳಲ್ಲಿ ಬೋಧನೆಯನ್ನು ನೀಡಬಹುದು.

ಔಪಚಾರಿಕ ಬೋಧನಾ ಕಾರ್ಯಗಳು ಒಪ್ಪಿಕೊಂಡ ಪಠ್ಯಕ್ರಮದ ಪ್ರಕಾರ ಪಾಠಗಳನ್ನು ತಯಾರಿಸುವುದು, ಪಾಠಗಳನ್ನು ನೀಡುವುದು, ಮತ್ತು ವಿದ್ಯಾರ್ಥಿಯ ಪ್ರಗತಿಯನ್ನು ಮೌಲ್ಯಮಾಪಿಸುವುದನ್ನು ಒಳಗೊಳ್ಳುತ್ತವೆ.

ಒಬ್ಬ ಶಿಕ್ಷಕನ ವೃತ್ತಿಪರ ಕರ್ತವ್ಯಗಳು ಔಪಚಾರಿಕ ಬೋಧನೆಯಾಚೆಗೆ ವಿಸ್ತರಿಸಬಹುದು. ತರಗತಿಯ ಹೊರಗೆ ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಕ್ಷೇತ್ರ ಪ್ರವಾಸಕ್ಕೆ ಹೋಗಬಹುದು, ಅಧ್ಯಯನ ಕೋಣೆಗಳ ಮೇಲ್ವಿಚಾರಣೆ ಮಾಡಬಹುದು, ಶಾಲಾ ಸಮಾರಂಭಗಳ ಸಂಘಟನೆಯಲ್ಲಿ ಸಹಾಯಮಾಡಬಹುದು, ಪಠ್ಯೇತರ ಚಟುವಟಿಕೆಗಳಿಗೆ ಮೇಲ್ವಿಚಾರಕರಾಗಿ ಇರಬಹುದು. ಕೆಲವು ಶಿಕ್ಷಣ ವ್ಯವಸ್ಥೆಗಳಲ್ಲಿ, ಶಿಕ್ಷಕರು ವಿದ್ಯಾರ್ಥಿ ಶಿಸ್ತಿನ ಜವಾಬ್ದಾರಿ ಹೊಂದಿರಬಹುದು.

ಪಠ್ಯ ವಸ್ತುಗಳು ಮತ್ತು ವಿದ್ಯಾರ್ಥಿಗಳ ಬಗ್ಗೆ ಉತ್ಸಾಹ ತೋರಿಸಿದ ಶಿಕ್ಷಕರು ಸಕಾರಾತ್ಮಕ ಕಲಿಕಾ ಅನುಭವವನ್ನು ಸೃಷ್ಟಿಸಬಲ್ಲರು ಎಂದು ಕಂಡುಕೊಳ್ಳಲಾಗಿದೆ.[೧] ಈ ಶಿಕ್ಷಕರು ಬರಿಯ ರೂಢಿಯಿಂದ ಬೋಧಿಸುವುದಿಲ್ಲ ಬದಲಾಗಿ ದೈನಂದಿನ ಆಧಾರದಲ್ಲಿ ಪಠ್ಯ ವಸ್ತುಗಳಿಗೆ ಹೊಸ ಉದ್ದೀಪನೆ ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಶಿಕ್ಷಕರು ಎದುರಿಸುವ ಸವಾಲುಗಳ ಪೈಕಿ ಒಂದೇನೆಂದರೆ ಒಂದು ಪಠ್ಯಕ್ರಮವನ್ನು ಮತ್ತೆಮತ್ತೆ ಬೋಧಿಸಿ ಅವರಿಗೆ ವಿಷಯದ ಬಗ್ಗೆ ಬೇಸರ ಅನಿಸಬಹುದು, ಮತ್ತು ಅವರ ನಿಲುವು ಪ್ರತಿಯಾಗಿ ವಿದ್ಯಾರ್ಥಿಗಳಿಗೆ ಬೇಸರ ಉಂಟುಮಾಡಬಹುದು. ಉತ್ಸಾಹಿ ಶಿಕ್ಷಕರನ್ನು ಹೊಂದಿದ ವಿದ್ಯಾರ್ಥಿಗಳು ಅವರನ್ನು ಹೆಚ್ಚು ಉನ್ನತವಾಗಿ ಪರಿಗಣಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. Teaching Patterns: a Pattern Language for Improving the Quality of Instruction in Higher Education Settings by Daren Olson. Page 96
"https://kn.wikipedia.org/w/index.php?title=ಶಿಕ್ಷಕ&oldid=756270" ಇಂದ ಪಡೆಯಲ್ಪಟ್ಟಿದೆ