ಫಿರಾಕ್ ಗೋರಕ್ ಪುರಿ

ವಿಕಿಪೀಡಿಯ ಇಂದ
Jump to navigation Jump to search

ರಘುಪತಿ ಸಹಾಯ್ ಫಿರಾಕ್ ಗೋರಖ್‍‍ಪುರಿ (೧೮೯೬-೧೯೮೨) ಇವರು ಪ್ರಮುಖ ಉರ್ದು ಕವಿಗಳು. ಸಾಹಿರ್ ಲುಧಿಯಾನ್ವಿ, ಮಹಮ್ಮದ್ ಇಕ್ಬಾಲ್‍‍ರಂತಹ ಅನೇಕ ಹೆಸರಾಂತ ಉರ್ದು ಕವಿಗಳಿದ್ದ ಕಾಲದಲ್ಲಿ ಇವರು ಉತ್ತಮ ಉರ್ದು ಕವಿಗಳಾಗಿ ಪ್ರಸಿದ್ಧಿ ಪಡೆದರು. ಇವರ ಬೃಹತ್ ಕವನ ಸಂಕಲನ ಗುಲ್-ಏ-ನಗ್ಮಾಕ್ಕೆ ಜ್ಞಾನಪೀಠ ಪ್ರಶಸ್ತಿಯು ದೊರೆಯಿತು. ಗೋರಖ್ ಪುರದ ಕಾಯಸ್ಥ ಕುಟುಂಬವೊಂದರಲ್ಲಿ ಫಿರಾಕ್ ಪಬ್ಲಿಕ್ ಸರ್ವಿಸ್ ಕಮಿಷನ್ ಹುದ್ದೆಗೆ ಅಯ್ಕೆಯಾದರು. ಅದನ್ನು ತೊರೆದು ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ಸೇರಿಕೊಂಡರು. ಇಲ್ಲಿಯೇ ತಮ್ಮ ಹೆಚ್ಚಿನ ಉರ್ದು ಕಾವ್ಯ ಬೆಳವಣಿಗೆಯನ್ನು ಮಾಡಿದರು. ೧೯೬೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮತ್ತೊ ೧೯೭೦ರಲ್ಲಿ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ಪನ್ನು ಪಡೆದುಕೊಂಡರು.[೧][೨][೩]

ಪ್ರಶಸ್ತಿಗಳು[ಬದಲಾಯಿಸಿ]

  • 1960 - ಉರ್ದು ಭಾಷೆಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • 1968 - ಪದ್ಮಭೂಷಣ
  • 1968 - ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ
  • 1969 - ಜ್ಞಾನಪೀಠ ಪ್ರಶಸ್ತಿ (ಉರ್ದು ಸಾಹಿತ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ)
  • 1970 - ಸಾಹಿತ್ಯ ಅಕಾಡೆಮಿ ಫೆಲೋಶಿಪ್
  • 1981 - ಘಾಲಿಬ್ ಅಕಾಡೆಮಿ ಪ್ರಶಸ್ತಿ

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]