ವಿಂದಾ ಕರಂದೀಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(ಜನನ: ಆಗಸ್ಟ್ ೨೩, ೧೯೧೮)-(ಮರಣ : ಮಾರ್ಚ್ ೧೪, ೨೦೧೦)

'ಗೋವಿಂದ್ ವಿನಾಯಕ್ ಕರಂದೀಕರ್' ರವರು ತಮ್ಮ ಪ್ರಿಯರಿಂದ, 'ವಿಂದಾ ಕರಂದೀಕರ್' ಎಂದೇ ಕರೆಯಲ್ಪಡುವ ಮರಾಠಿ ಕವಿ. ಇವರಿಗೆ ೨೦೦೩ ವರ್ಷದ ಜ್ಞಾನಪೀಠ ಪ್ರಶಸ್ತಿ ಸಂದಿದೆ. ಇವರು ಆಧುನಿಕ ಮರಾಠಿ ಕವಿಗಳಲ್ಲಿ ಪ್ರಯೋಗಶೀಲರೆಂದು ವಿಮರ್ಶಕರ ಅಭಿಪ್ರಾಯವಾಗಿದೆ. ಕಾವ್ಯವಷ್ಟೇ ಅಲ್ಲದೆ, ಪ್ರಬಂಧ, ವಿಮರ್ಶೆ ಹಾಗು ಅನುವಾದಗಳನ್ನು ಸಹ ಮಾಡಿದ್ದಾರೆ. ಅರಿಸ್ಟೋಟಲ್ ರಚಿಸಿದ ಗ್ರೀಕ್ ಕಾವ್ಯಗಳನ್ನು ಮರಾಠಿ ಭಾಷೆಗೆ ಅನುವಾದಿಸಿದ್ದಾರೆ ಹಾಗು ತಮ್ಮ ಕವಿತೆಗಳನ್ನು ಆಂಗ್ಲ ಭಾಷೆಗೆ ಭಾಷಾಂತರಿಸಿ, ಆಂಗ್ಲದಲ್ಲಿಯೂ "ವಿಂದಾ ಪೊಯೆಮ್ಸ್ ಆಫ್ ೧೯೭೫" ಕವನ ಸಂಕಲನವನ್ನು ರಚಿಸಿರುವರು. ಧ್ಯಾನೇಶ್ವರಿ, ಅಮೃತಾನುಭವ್ ನಂತಹ ಹಳೆಯ ಮರಾಠಿ ಸಾಹಿತ್ಯ ಕೃತಿಗಳಿಗೆ ನೂತನ ರೂಪ ಕೊಟ್ಟಿರುತ್ತಾರೆ. ಇವರು ಜ್ಞಾನಪೀಠಪ್ರಶಸ್ತಿ ಪಡೆದಿರುವ ೩ ನೆಯ ಮರಾಠಿ ಸಾಹಿತಿ.

ಕೃತಿಗಳು[ಬದಲಾಯಿಸಿ]

 • ಸ್ವೇದಗಂಗಾ (೧೯೪೯)
 • ಮೃದ್ಗಂಧ್ (೧೯೫೪)
 • ಧ್ರುಪದ್
 • ಸಂಹಿತಾ
 • ವಿರೂಪಿಕಾ

ಶಿಶು ಸಾಹಿತ್ಯ[ಬದಲಾಯಿಸಿ]

 • ರಾಣಿಚಿ ಬಾಗ್
 • ಸಶಾಚೇ ಕಾನ
 • ಪರಿ ಗ ಪರಿ

ಪ್ರಶಸ್ತಿ[ಬದಲಾಯಿಸಿ]

 • ಜ್ಞಾನಪೀಠ ಪ್ರಶಸ್ತಿ
 • ಕೇಶವಸುತ ಪ್ರಶಸ್ತಿ
 • ಸೋವಿಯತ್ ಲ್ಯಾಂಡ್ ನೆಹರು ಸಾಹಿತ್ಯ ಪ್ರಶಸ್ತಿ
 • ಕಬೀರ್ ಸಮ್ಮಾನ್
 • ಸಾಹಿತ್ಯ ಅಕಾಡೆಮಿಯ ಫೆಲೋಷಿಪ್

ಮರಣ[ಬದಲಾಯಿಸಿ]

೯೨ ವರ್ಷ ಪ್ರಾಯದ, ಹಿರಿಯ ಕವಿ, ಕರಂದೀಕರ್ ಮುಂಬೈನಲ್ಲಿ ನಿಧನರಾದರು.

ಹೊರಗಿನ ಸಂಪರ್ಕ[ಬದಲಾಯಿಸಿ]