ವಿಷಯಕ್ಕೆ ಹೋಗು

ಜ್ಞಾನೇಶ್ವರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜ್ಞಾನೇಶ್ವರಿಯು ಭಗವದ್ಗೀತೆಯ ವ್ಯಾಖ್ಯಾನವಾಗಿದೆ. ದೇವನಾಗರಿ ಲಿಪಿಯಲ್ಲಿ ೧ ಮತ್ತು ೨ ನೇ ಪುಟಗಳು, ಮರಾಠಿ ಭಾಷೆ.

ಜ್ಞಾನೇಶ್ವರಿ (ಮರಾಠಿ: ज्ञानेश्वरी) (ಐಎಎಸ್‌ಟಿ: Jñānēśvarī) ಅಥವಾ ಭಾವಾರ್ಥ ದೀಪಿಕಾ ಎಂದೂ ಕರೆಯಲ್ಪಡುವ ಈ ಗ್ರಂಥವು ಕ್ರಿ.ಶ ೧೨೯೦ ರಲ್ಲಿ ಕವಿ ಜ್ಞಾನೇಶ್ವರ ಅವರು ಮರಾಠಿ ಭಾಷೆಯಲ್ಲಿ ಬರೆದ ಭಗವದ್ಗೀತೆಯ ವ್ಯಾಖ್ಯಾನವಾಗಿದೆ.[] ಜ್ಞಾನೇಶ್ವರರು (ಹುಟ್ಟು ೧೨೭೫) ೨೧ ವರ್ಷಗಳ ಅಲ್ಪಾವಧಿಯ ಜೀವನವನ್ನು ನಡೆಸಿದ್ದು, ಈ ವ್ಯಾಖ್ಯಾನವು ಅವರು ಹದಿಹರೆಯದಲ್ಲಿದ್ದಾಗ ಬರೆಯಲ್ಪಟ್ಟಿದ್ದು ಗಮನಾರ್ಹ. ಈ ಪಠ್ಯವು ಮರಾಠಿ ಭಾಷೆಯಲ್ಲಿ ಉಳಿದಿರುವ ಅತ್ಯಂತ ಹಳೆಯ ಸಾಹಿತ್ಯ ಕೃತಿಯಾಗಿದೆ. ಇದು ಭಕ್ತಿ ಚಳವಳಿಯ ಪ್ರಮುಖ ಸಂತ-ಕವಿಗಳಾದ ಏಕನಾಥ್ ಮತ್ತು ವರ್ಕಾರಿ (ವಿಥೋಬಾ) ಸಂಪ್ರದಾಯದ ತುಕಾರಂಗೆ ಪ್ರೇರಣೆ ನೀಡಿತು.[] [] [] ಜ್ಞಾನೇಶ್ವರಿಯು ಹಿಂದೂ ಧರ್ಮದ ಅದ್ವೈತ ವೇದಾಂತ ಸಂಪ್ರದಾಯದಲ್ಲಿ ಭಗವದ್ಗೀತೆಯನ್ನು ವ್ಯಾಖ್ಯಾನಿಸುತ್ತದೆ.[] ಪಠ್ಯದ ತಾತ್ವಿಕ ಆಳ ಮತ್ತು ಅದರ ಸೌಂದರ್ಯದ ಜೊತೆಗೆ ಪಾಂಡಿತ್ಯಪೂರ್ಣ ಮೌಲ್ಯಗಳನ್ನು ಪ್ರಶಂಸಿಸಲಾಗಿದೆ.[]

ಪ್ರಧಾನ್ ಮತ್ತು ಲ್ಯಾಂಬರ್ಟ್ ಅವರ ಪ್ರಕಾರ, ಯಾದವ ರಾಜ ರಾಮದೇವನ ಪಠ್ಯದಲ್ಲಿನ ಉಲ್ಲೇಖ ಹಾಗೂ ಬರಹಗಾರನ ಹೆಸರು ಮತ್ತು ಅದು ಪೂರ್ಣಗೊಂಡ ಸಂವತ್ ಅನ್ನು ಆಧರಿಸಿ, ಜ್ಞಾನೇಶ್ವರಿಯು ಕ್ರಿ.ಶ ೧೨೯೦ ಕಾಲಮಾನಕ್ಕೆ ಸೇರಿದ್ದು ಎಂಬುದು ವಿಶ್ವಾಸಾರ್ಹವಾಗಿ ತಿಳಿಯುತ್ತದೆ. []: xiii–xv  ಸಮಕಾಲೀನರಾದ ಮತ್ತೊಂದು ಭಕ್ತಿ ಚಳವಳಿಯ ಸಂತ-ಕವಿ ನಾಮದೇವ್ ಅವರ ಕೃತಿಗಳಿಂದಲೂ ಇದನ್ನು ದೃಢೀಕರಿಸಲಾಗಿದೆ. ನಾಮದೇವ್ ಅವರು ಜ್ಞಾನೇಶ್ವರಿಯನ್ನು ಉಲ್ಲೇಖಿಸುತ್ತಾರೆ ಮತ್ತು ವಿವಿಧ ತೀರ್ಥಯಾತ್ರೆಗಳಲ್ಲಿ ಜ್ಞಾನೇಶ್ವರರೊಂದಿಗೆ ಇದ್ದರು ಎಂಬುದು ಹಿಂದೂ ಸಂಪ್ರದಾಯದ ನಂಬಿಕೆಯಾಗಿದೆ.[]: xv–xvi  ಜ್ಞಾನೇಶ್ವರಿಯ ಸತ್ಯಾಸತ್ಯತೆಯನ್ನು ಏಕನಾಥರ ೧೬ನೇ ಶತಮಾನದ ಉತ್ತರಾರ್ಧದ ಟಿಪ್ಪಣಿಗಳ ಆಧಾರದಲ್ಲಿ ಸ್ಪರ್ಧಿಸಲಾಗಿದೆ. ಅಲ್ಲಿ ಅವರು ಪಠ್ಯವನ್ನು ಮೂಲ ಆವೃತ್ತಿಗೆ ಮರುಸ್ಥಾಪಿಸಿರುವುದಾಗಿ ಹೇಳಿದ್ದು, "ಬದಲಾವಣೆ ಮತ್ತು ಸೇರ್ಪಡೆ ಎರಡಕ್ಕೂ ಅನುಮತಿಸಬಾರದು" ಎಂದು ಹೇಳಿದರು.[]: xv–xvi  ಈ ಆವೃತ್ತಿಯು ಅತ್ಯಂತ ನಿಷ್ಠಾವಂತವಾದದ್ದು ಎಂದು ವಿದ್ವಾಂಸರು ಸಾಮಾನ್ಯವಾಗಿ ಒಪ್ಪಿಕೊಳ್ಳುತ್ತಾರೆ. ಈ ಆವೃತ್ತಿಯನ್ನು ೧೯೦೯ ರಲ್ಲಿ ವಿ. ಕೆ. ರಾಜ್ವಾಡೆ ಗುರುತಿಸಿ, ೧೯೫೯ ರಲ್ಲಿ ಪ್ರಕಟಿಸಿದರು.[]: viii–ix 

ಜ್ಞಾನೇಶ್ವರಿಯ ನಿರೂಪಣೆಯು ಭಗವದ್ಗೀತೆಯನ್ನು ನಿಕಟವಾಗಿ ಅನುಸರಿಸುತ್ತದೆ. ಆದರೂ ಸ್ಥಳೀಯ ಸಂಪ್ರದಾಯದಲ್ಲಿ ಟಿಕಾ ಎಂದು ಕರೆಯಲ್ಪಡುವ ಈ ವ್ಯಾಖ್ಯಾನವನ್ನು "ಹಾಡು-ಧರ್ಮೋಪದೇಶ" ರೂಪದಲ್ಲಿ ಬರೆಯಲಾಗಿದ್ದು, ೧೩ನೇ ಶತಮಾನದ ಪ್ರಮುಖ ಹಿಂದೂ ತತ್ವಚಿಂತನೆಗಳು ಮತ್ತು ನಂಬಿಕೆಗಳ ವಿವರಣೆಗಳನ್ನು ಸೇರಿಸಿ ವಿಸ್ತರಿಸಲಾಗಿದೆ.[]: xvii–xviii  ಭಗವದ್ಗೀತೆಯಲ್ಲಿ ೭೦೦ ಶ್ಲೋಕಗಳಿದ್ದರೆ, ಜ್ಞಾನೇಶ್ವರಿಯಲ್ಲಿ ಸುಮಾರು ೯,೦೦೦ ಶ್ಲೋಕಗಳಿವೆ. ಇದು ವೇದಗಳು, ಉಪನಿಷತ್ತುಗಳು ಮತ್ತು ಬೇರೆ ಪ್ರಮುಖ ಹಿಂದೂ ಗ್ರಂಥಗಳ ಉಲ್ಲೇಖಗಳನ್ನು ಒಳಗೊಂಡಿದೆ.[]: xviii–xix  ಜ್ಞಾನೇಶ್ವರಿಯು ಒಂದು ಲಯಬದ್ಧ ಗದ್ಯವಾಗಿದ್ದು, ಅದನ್ನು ಒಬ್ಬರೇ ಪಠಿಸಲೂ, ಗುಂಪಾಗಿ ಜಪಿಸಲೂಬಹುದು. ಅದರ ಪ್ರತಿ ೯,೦೦೦ ಶ್ಲೋಕಗಳು ಓವಿ ಎಂದು ಕರೆಯಲ್ಪಡುವ ನಾಲ್ಕು ಸಾಲುಗಳನ್ನು (ಕ್ವಾರ್ಟರ್ಸ್) ಒಳಗೊಂಡಿದೆ. ಭಗವದ್ಗೀತೆಯ ಶ್ಲೋಕಗಳು ಒಂದು ನಿರ್ದಿಷ್ಟ ಮಾತ್ರಾಗಣದಲ್ಲಿದ್ದರೆ, ಜ್ಞಾನೇಶ್ವರಿಯ ಶ್ಲೋಕಗಳು ಬೇರೆಬೇರೆ ಮಾತ್ರಾಗಣದಲ್ಲಿದೆ. ಶ್ಲೋಕದ ನಾಲ್ಕರಲ್ಲಿನ ಮೊದಲ ಮೂರು ಸಾಲುಗಳ ಪ್ರಾಸದಲ್ಲಿ ಹೊಂದಾಣಿಕೆ ಇಲ್ಲ. ಜ್ಞಾನೇಶ್ವರಿಯಲ್ಲಿನ ಸಾಲುಗಳು ಸಾಮಾನ್ಯವಾಗಿ ಮೂರು ಮತ್ತು ಹದಿಮೂರರ ನಡುವಿನ ಉಚ್ಚಾರಾಂಶಗಳನ್ನು ಹೊಂದಿದೆ.[]: xix–xx 

ವೈಷ್ಣವ ಪಂಥ, ಶೈವ ಪಂಥ ಮತ್ತು ಶಾಕ್ತ ಪಂಥದ ಹಲವಾರು ದೇವ ಮತ್ತು ದೇವತೆಗಳು, ಹಾಗೂ ವೈದಿಕ ದೇವತೆಯಾದ ಸರಸ್ವತಿಯ (ಶಾರದಾ) ಹೆಸರುಗಳು ಗೌರವಯುತವಾಗಿ ಜ್ಞಾನೇಶ್ವರಿಯಲ್ಲಿ ಒಳಗೊಂಡಿವೆ. ಅದರ ಅನೇಕ ಶ್ಲೋಕಗಳ ಕೊನೆಯ ಸಾಲಿನಲ್ಲಿ "ಜ್ಞಾನದೇವರು ಹೇಳುತ್ತಾರೆ" ಅಥವಾ "ಜ್ಞಾನೇಶ್ವರರು ಹೇಳುತ್ತಾರೆ" ಎಂದು ಇದೆ.[]: 1–24 [] ಈ ಶೈಲಿಯನ್ನು ನಂತರದ ಯುಗದ ಭಕ್ತಿ ಚಳುವಳಿಯ ಕವಿಗಳು ಮತ್ತು ಸಿಖ್ ಧರ್ಮದ ಗುರು ಗ್ರಂಥದಲ್ಲಿ ಅಳವಡಿಸಲಾಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. Dnyandev; Pradhan, Vitthal Ganesh (1987), Lambert, Hester Marjorie (ed.), Dnyaneshwari : Bhāvārthadipikā, State University of New York Press, p. x-xi, ISBN 978-0-88706-487-6
  2. D. C. Sircar (1996). Indian Epigraphy. Motilal Banarsidass. pp. 53–54. ISBN 978-81-208-1166-9.
  3. R. D. Ranade (1997). Tukaram. State University of New York Press. pp. 9–11. ISBN 978-1-4384-1687-8.
  4. J. Gordon Melton (2011). Religious Celebrations: An Encyclopedia of Holidays, Festivals, Solemn Observances, and Spiritual Commemorations. ABC-CLIO. pp. 373–374. ISBN 978-1-59884-206-7.
  5. Dnyandev; Pradhan, Vitthal Ganesh (1987), Lambert, Hester Marjorie (ed.), Dnyaneshwari : Bhāvārthadipikā, State University of New York Press, p. xviii with footnote 1, ISBN 978-0-88706-487-6
  6. ೬.೦ ೬.೧ ೬.೨ ೬.೩ ೬.೪ ೬.೫ ೬.೬ ೬.೭ ೬.೮ Dnyandev; Pradhan, Vitthal Ganesh (1987), Lambert, Hester Marjorie (ed.), Dnyaneshwari : Bhāvārthadipikā, State University of New York Press, ISBN 978-0-88706-487-6
  7. Jñānadeva; Pu. Vi Bobaḍe (1987). Garland of Divine Flowers: Selected Devotional Lyrics of Saint Jnanesvara. Motilal Banarsidass. pp. 1–14. ISBN 978-81-208-0390-9.
  8. Neeti M. Sadarangani (2004). Bhakti Poetry in Medieval India: Its Inception, Cultural Encounter and Impact. Sarup & Sons. pp. 65–66. ISBN 978-81-7625-436-6.

ಹೆಚ್ಚಿನ ಓದು

[ಬದಲಾಯಿಸಿ]
  • "ಸ್ವಾಧ್ಯಾಯ ಜ್ಞಾನೇಶ್ವರಿ" - ಮರಾಠಿ ಸ್ವಯಂ ಅಧ್ಯಯನ ಪುಸ್ತಕ, ಛಾಪ್ಖಾನೆ ಕೇಶವ್ ರಾಮಚಂದ್ರ (ಹುಟ್ಟು- ೧೮೭೫, ಸಾಂಗ್ಲಿ, ಮಹಾರಾಷ್ಟ್ರ, ಭಾರತ), ಜೆ. ಕೃಷ್ಣಮೂರ್ತಿ ಸಂದೇಶ್ ಆಣಿ ಪರಿಚಯ್ " ಲೇಖಕರು.

ಇದನ್ನೂ ನೋಡಿ

[ಬದಲಾಯಿಸಿ]