ವಿಷಯಕ್ಕೆ ಹೋಗು

ಸಂತ ಏಕನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂತ ಏಕನಾಥ್ ಒಬ್ಬ ಪ್ರಖ್ಯಾತ ಮರಾಠಿ ಸಂತ, ವಿದ್ವಾಂಸ ಮತ್ತು ಧಾರ್ಮಿಕ ಕವಿ. ಮರಾಠಿ ಸಾಹಿತ್ಯದ ಬೆಳವಣಿಗೆಯಲ್ಲಿ ಏಕನಾಥ್‌ರು ಅವರ ಪೂರ್ವಜರನ್ನು( ಜ್ಞಾನೇಶ್ವರ, ನಾಮದೇವ) ಅನುಸರಿಸಿದ್ದಾರೆ. ಇವರು ಮರಾಠಿ ಸಾಹಿತ್ಯವನ್ನು ಮತ್ತಷ್ಟು ಸಮೃದ್ಧಿಗೊಳಿಸಿದ್ದಾರೆ. ಇವರು ಕೂಡ ಮಹಾರಾಷ್ಟ್ರದ ಅಸ್ಪೃಶ್ಯತೆಯ ಸುಧಾಕಾರರಲ್ಲಿ ಒಬ್ಬರು.


ಮೂಲಗಳು

[ಬದಲಾಯಿಸಿ]
ಮಹಾರಾಷ್ಟ್ರ

ಏಕನಾಥ್‍ ಅವರು ಸುಮಾರು ಹದಿನಾರನೇ ಶತಮಾನದವರು. ಆದರು ಕ್ರಿ.ಶ. ೧೫೩೦ರಲ್ಲಿ ಹುಟ್ಟಿರಬಹುದು. ಕೆಲವು ಪುರಾವೆಗಳು ಇವರು ಮಹಾರಾಷ್ಟ್ರದ ಪೈಥಾನ್‍ನಲ್ಲಿ ಒಂದು ಸುಪ್ರಸಿದ್ಧ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೆಂದು ತಿಳಿಸುತ್ತದೆ. ಅವರ ತಂದೆಯ ಹೆಸರು ಸೂರ್ಯನಾರಾಯಣ ಮತ್ತು ತಾಯಿಯ ಹೆಸರು ರುಕ್ಮಿಣಿ. ಅವರನ್ನು ಕುಲಕರ್ಣಿ ಎಂದೂ ಕರೆಯಲಾಗುತ್ತಿತ್ತು. ತನ್ನ ನಿಜವಾದ ಹೆಸರು ಏಕನಾಥ್ ಸೂರ್ಯಪಂಥ ಕುಲಕರ್ಣಿ.[]

ಅವರು ಚಿಕ್ಕವರಾಗಿದ್ದಾಗ ತನ್ನ ಹೆತ್ತವರನ್ನು ಕಳೆದುಕೊಂಡರು. ಅವರ ತಾತನಾದ ಭಾನುದಾಸ್‍ರವರು ಅವರನ್ನು ಬೆಳೆಸಿದರು. ಕೆಲವು ದಾಖಲೆಗಳು ಭಾನುದಾಸ್ ತಮ್ಮ ಮುತ್ತಾತ ಎಂದು ಹೇಳುತ್ತವೆ. ತನ್ನ ಗುರುವಿನ ಹೆಸರು ಜನಾರ್ದನಸ್ವಾಮಿ. ಅವರಿಂದ ಏಕನಾಥ್ ವೇದಾಂತ, ನ್ಯಾಯ ,ಯೋಗ ,ಮೀಮಾಂಸೆ, ಅತ್ಯಂತ ಮುಖ್ಯವಾಗಿ ಸಂತ ಜ್ಞಾನೇಶ್ವರರ ಕೃತಿಗಳನ್ನು ಕಲಿತರು. ತನ್ನ ಗುರು ಭಗವಾನ್ ದತ್ತಾತ್ರೇಯರ ಭಕ್ತರಾಗಿದ್ದರು.[]

ಬರವಣಿಗೆಗಳು

[ಬದಲಾಯಿಸಿ]

ಬಹುತೇಕ ಏಕನಾಥ್‌ರ ಎಲ್ಲಾ ಬರಹಗಳು ಮರಾಠಿ ಪದ್ಯ ಶೈಲಿಯಲ್ಲಿ ಬರೆಯಲಾಗಿದೆ. ಸಂಸ್ಕೃತದ ಭಾಗವತ ಪುರಾಣವನ್ನು ಏಕನಾಥಿ ಭಾಗವತ ಎಂದು ರೂಪಾಂತರಿಸಿದರು. ಇದು ೧೮೮೦೦ ಓವಿಗಳೊಳಗೊಂಡಿವೆ. ಓವಿಗಳೆಂದರೆ ಮರಾಠಿ ಕವಿತೆಗಳಲ್ಲಿ ಬಳಸಲಾಗುವ ಒಂದು ಛಂದಸ್ಸಿನ ಕ್ರಮ. ರಾಮಾಯಣವನ್ನು ಭಾವರ್ಥ ರಾಮಾಯಣ ಎಂದು ರೂಪಾಂತರಿಸಿದರು. ಇದು ೨೫೫೦೦ ಓವಿಗಳೊಳಗೊಂಡಿವೆ. ಅವರು ಭಾಗವತ ಪುರಾಣದ ೧೪೪ ಪದ್ಯಗಳನ್ನು ಆಧರಿಸಿ ರುಕ್ಮಿಣಿ ಸ್ವಯಂವರ ಬರೆದರು. ಅವರ ಕೃತಿ ಹಸ್ತಮಾಲಕ (೭೬೪ ಓವಿಗಳೊಳಗೊಂಡಿವೆ), ಶಂಕರಾಚಾರ್ಯರ ೧೪ ಸಂಸ್ಕೃತ ಶ್ಲೋಕಗಳನ್ನು ಆಧರಿಸಿದೆ.[]

ಅವರ ಇತರ ಕೃತಿಗಳು ಶುಕಾಶ್ತಕ್ (೪೪೭ ಓವಿಗಳು), ಸ್ವಥ್ಮ ಸುಖ (೫೧೦ ಓವಿಗಳು), ಆನಂದ ಲಹರಿ (೧೫೪ ಓವಿಗಳು), ಗೀತಾ ಸಾರ್ ಮತ್ತು ಪ್ರಹ್ಲಾದ್‍ ವಿಜಯ. ಅವರು ೩೦೦ ಮರಾಠಿ ಧಾರ್ಮಿಕ ಹಾಡುಗಳನ್ನು ಬಾರೂಡ್ ಎಂಬ ಹೊಸ ಶೈಲಿಯನ್ನು ಪರಿಚಯಿಸಿದರು. ಅವರು ಇದನ್ನು ಇತರ ಭಾಷೆಗಳಲ್ಲಿ ರೂಪಾಂತರಿಸಿದರು. ಅವರು ಅಭಂಗ ಶೈಲಿಯಲ್ಲಿ ೩೦೦ ಧಾರ್ಮಿಕ ಹಾಡುಗಳನ್ನು ಬರೆದರು. ಅವರು ಬೋಧಕರಾಗಿದ್ದು ಹಲವಾರು ಸಾರ್ವಜನಿಕ ಪ್ರವಚನಗಳನ್ನು ನೀಡಿದರು. ಇದು ಜನರ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತಿತ್ತು.

ದ್ಯನೇಶ್ವರ್

ಜ್ಞಾನೇಶ್ವರಿಗೆ ಪುನರ್‍ಜ್ಜೀವನ

[ಬದಲಾಯಿಸಿ]

ಏಕನಾಥ್‍ರು ಜ್ಞಾನೇಶ್ವರನ ಪ್ರಕ್ಯಾತ ಕಾವ್ಯವಾದ ಜ್ಞಾನೇಶ್ವರಿಯನ್ನು ಸಂಶೋಧಿಸಿದರು. ಜ್ಞಾನೇಶ್ವರಿ ಮರಾಠಿ ಸಾಹಿತ್ಯದ ಮೊದಲ ಬಾರ್ಡ್ ಮಹಾಕಾವ್ಯ. ಇದನ್ನು ಭಾವರ್ಥ ದೀಪಿಕ ಎಂದು ಕರೆಯಲಾಗುತ್ತಿತ್ತು. ಮುಸ್ಲಿಂರ ಆಳ್ವಿಕತೆಯಿಂದ ಎಲ್ಲಾ ಹಿಂದೂ ಮಹಾಕಾವ್ಯಗಳಂತೆ ಇದನ್ನೂ ಮರೆತುಬಿಟ್ಟರು. ಈ ಕೃತಿಯನ್ನು ಜ್ಞಾನೇಶ್ವರರು ಸುಮಾರು ೨೩೦ ವರ್ಷಗಳಿಂದೆ ಸಂಸ್ಕೃತದ ಭಗವದ್ಗೀತಾವನ್ನು ಆಧಾರಿಸಿ ರಚಿಸಿದ್ದರು.

ಮಹಾರಾಷ್ಟ್ರದಲ್ಲಿ ಮುಸ್ಲಿಂರ ಆಳ್ವಿಕತೆಯಿಂದಾಗಿ ಅಲ್ಲಿದ್ದ ಜನರು ತಮ್ಮ ಪದ್ಯ ,ಕಾವ್ಯಗಳನ್ನು ಒಂದೆರಡು ತಲೆಮಾರಿನ ನಂತರ ಮರೆತುಬಿಟ್ಟರು. ಏಕನಾಥ್‍ರು ಈ ಮಹಾಕಾವ್ಯ, ಕವಿತೆಗಳನ್ನು ಪುನರ್‍ಸ್ಥಾನಕ್ಕೆ ತರುವುದರಲ್ಲಿ ತೊಡಗಿದ್ದರು. ಅವರ ಮೊದಲ ಕೆಲಸವಾಗಿ ಜ್ಞಾನೇಶ್ವರರು ಒಬ್ಬ ಪೌರಾಣಿಕ ಜೀವಿಯಲ್ಲ, ತಮ್ಮದೇ ಆದ ಒಬ್ಬ ಮನುಷ್ಯ ಎಂದು ಜನರಿಗೆ ತೋರಿಸಲು ಜ್ಞಾನೇಶ್ವರ ಸಮಾಧಿಯನ್ನು ಪತ್ತೆ ಮಾಡಿದರು.

ದತ್ತಾತ್ರೇಯ

ಜನಾರ್ದನಸ್ವಾಮಿಯವರಿಂದ ದೊರೆತ ಬೋಧನೆಗಳು

[ಬದಲಾಯಿಸಿ]

ತನ್ನ ಗುರುವಿನ ಹೆಸರು ಜನಾರ್ದನಸ್ವಾಮಿ. ಇವರು ಸೂಫಿ ಎಂದು ಕೆಲವು ಮೂಲಗಳು ತಿಳಿಸುತ್ತವೆ. ಏಕನಾಥ್‍ರಿಗೆ ೧೨ ವರ್ಷವಿದ್ದಾಗ ಜನಾರ್ದನಸ್ವಾಮಿಯವರ ಬಗ್ಗೆ ಕೇಳಿದ್ದರು. ಅವರು ದೇವಗಿರಿಯ ದೊಡ್ಡ ವಿದ್ವಾಂಸರಗಿದ್ದಾರು. ಅವರಿಂದ ಏಕನಾಥ್ ವೇದಾಂತ, ನ್ಯಾಯ, ಯೋಗ, ಮೀಮಾಂಸೆ, ಅತ್ಯಂತ ಮುಖ್ಯವಾಗಿ ಸಂತ ಜ್ಞಾನೇಶ್ವರರ ಕೃತಿಗಳನ್ನು ಕಲಿತರು. ತನ್ನ ಗುರು ಭಗವಾನ್ ದತ್ತಾತ್ರೇಯರ ಭಕ್ತರಾಗಿದ್ದರು. ಆದ್ದರಿಂದಲೇ ಏಕನಾಥ್‍ರು ಎಲ್ಲಾ ಸಹ ಜೀವಿಗಳ ಕಡೆಗೆ ಸಹನೆ ಮತ್ತು ದಯೆ ಹೊಂದಿರಬೇಕೆಂದು ತಿಳಿದಿದ್ದಾರೆ.

ಬೋಧನೆಗಳು

[ಬದಲಾಯಿಸಿ]

ಏಕನಾಥ್ ಮಹಾರಾಷ್ಟ್ರದ ಮೊದಲ ಅಸ್ಪೃಶ್ಯತೆಯ ಸುಧಾರಕರಲ್ಲಿ ಒಬ್ಬರು. ಅವರು ಸಾರ್ವಜನಿಕವಾಗಿ ಅಸ್ಪೃಶ್ಯರ ಕಡೆಗೆ ಆಧಾರ ತೋರಿದರು. ಅವರ ಕಾವ್ಯಗಳು ಪ್ರತಿಯೊಬ್ಬ ಓದುಗಾರರೂ ದಯೆ-ಮಾನವೀಯತೆನ್ನು ತೋರಬೇಕೆಂದು, ಸಹೋದರ-ಸಹೋದರಿ ಮನೋಭಾವದಿಂದಿರಬೇಕೆಂದು ತಿಳಿಸುತ್ತವೆ. ಏಕನಾಥ್ ಮಹಾರಾಷ್ಟ್ರದಲ್ಲಿ 'ವಾಸುದೇವ ಸಂಸ್ಥಾ' ಎಂಬ ಆಂದೋಲನವನ್ನು ಪರಿಚಯಿಸಿದರು. ಜನರ ಮನೆ ಮುಂದೆ ನಿಂತು, ಭಜನೆ ಮೂಲಕ ಧಾರ್ಮಿಕ ಸಂದೇಶಗಳನ್ನು ಹರಡುವುದರಿಂದ 'ವಾಸುದೇವ' ಎಂದು ಕರೆಯಲಾಗುತ್ತಿತ್ತು.

ಇವನ್ನೂ ನೋಡಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಜೀವನ ಚರಿತ್ರೆ-ಸಂತ ಏಕನಾಥ್".
  2. "ಆರ್ಕೈವ್ ನಕಲು". Archived from the original on 2012-04-08. Retrieved 2015-11-05.
  3. "ಏಕನಾಥ್‌ರ ಕೃತಿಗಳು". Archived from the original on 2013-12-06. Retrieved 2015-11-05.