ನಿರ್ಮಲ್ ವರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಿರ್ಮಲಾ ವರ್ಮ ಇಂದ ಪುನರ್ನಿರ್ದೇಶಿತ)
Jump to navigation Jump to search

ನಿರ್ಮಲ್ ವರ್ಮ (೩ ಏಪ್ರಿಲ್ ೧೯೨೯ - ೨೫ ಅಕ್ಟೋಬರ್ ೨೦೦೫) ಹಿಂದಿ ಲೇಖಕ ಮತ್ತು ಕಾದಂಬರಿಕಾರರು.

ಇವರು ದೆಹಲಿ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯಲ್ಲಿ ಪದವಿ ಪಡೆದ ನಂತರ ಪ್ರಾಗ್ ನಗರದಲ್ಲಿ ಚೆಕ್ ಭಾಷೆಯ ಅಧ್ಯಯನ ನಡೆಸಿದರು.

ನಿರ್ಮಲ್ ವರ್ಮಾ ಹಿಂದಿ ಸಾಹಿತ್ಯದಲ್ಲಿ "ನಯೀ ಕಹಾನಿ" ಎಂಬ ಸಣ್ಣ ಕಥೆಗಳ ಪ್ರಕಾರದ ಜನಕ ಎಂದು ಹೆಸರಾಗಿದ್ದಾರೆ. ಈ ಪ್ರಕಾರದ ಇತರ ಪ್ರಮುಖ ಲೇಖಕರೆಂದರೆ ಮೋಹನ್ ರಾಕೇಶ್, ಭೀಷ್ಮ ಸಾಹನಿ, ರಾಜೇಂದ್ರ ಯಾದವ್, ಮತ್ತಿತರರು. ನಿರ್ಮಲ್ ವರ್ಮಾ ಅವರ ಅತಿ ಪ್ರಸಿದ್ಧ ಸಣ್ಣ ಕತೆಯಾದ "ಪರಿಂದೇ" ಈ ಸಾಹಿತ್ಯ ಪ್ರಕಾರದ ಪ್ರಥಮ ಕತೆ ಎಂದು ಹೆಸರು ಪಡೆದಿದೆ. ಇವರ ಇತರ ಪ್ರಸಿದ್ಧ ಸಣ್ಣ ಕತೆಗಳೆಂದರೆ "ಅಂಧೇರೇ ಮೇ", "ಧೇಡ್ ಇಂಚ್ ಊಪರ್" ಮತ್ತು "ಕವ್ವೇ ಔರ್ ಕಾಲಾ ಪಾನಿ". ೬೦ ರ ಮತ್ತು ಎಪ್ಪತ್ತರ ದಶಕಗಳಲ್ಲಿ ಕಥಾವಸ್ತು ಮತ್ತು ಕಥಾತಂತ್ರಗಳ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿ ನಿರ್ಮಲ್ ವರ್ಮಾ ಹೆಸರುವಾಸಿಯಾದರು.

೧೯೮೫ ರಲ್ಲಿ ನಿರ್ಮಲ್ ವರ್ಮಾ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದರು. ೧೯೯೯ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು.