ವಿನೋದಿನಿ (ನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿನೋದಿನಿ (ಅಥವಾ ಶ್ವೇತಾ) ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ಮತ್ತು ಕಿರುತೆರೆ ನಟಿ. ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಶ್ವೇತಾ ಎಂಬ ಹೆಸರಿನಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ೧೯೯೦ರ ದಶಕದಲ್ಲಿ ನಾಯಕಿಯಾಗಿ, ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ವೃತ್ತಿರಂಗ[ಬದಲಾಯಿಸಿ]

ಬೆಳ್ಳಿತೆರೆ[ಬದಲಾಯಿಸಿ]

೧೯೯೨ರಲ್ಲಿ ಬಾಲು ಮಹೇಂದ್ರ ನಿರ್ದೇಶನದ ವಣ್ಣ ವಣ್ಣ ಪೂಕ್ಕಳ್ ಎಂಬ ತಮಿಳು ಚಿತ್ರದಲ್ಲಿ ಮೊದಲ ಬಾರಿ ನಾಯಕಿಯಾಗಿ ನಟಿಸಿದರು. ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರ ವಾಣಿಜ್ಯಿಕವಾಗಿಯೂ ಯಶಸ್ವಿಯಾಯಿತು. ಇದೇ ವರ್ಷ ಬಿಡುಗಡೆಯಾದ ಸೂರ್ಯ ಮಾನಸಂ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗ ಪ್ರವೇಶಿಸಿದ ಇವರ ಮೊದಲ ಕನ್ನಡ ಚಿತ್ರ ರಘುವೀರ್ ಅಭಿನಯದ ಚೈತ್ರದ ಪ್ರೇಮಾಂಜಲಿ(೧೯೯೨). ಈ ಎರಡೂ ಚಿತ್ರಗಳು ಅದ್ಭುತ ಯಶಸ್ಸು ಪಡೆದವು. ರಾಮ್ ಕುಮಾರ್ ಅವರೊಂದಿಗೆ ಅಭಿನಯಿಸಿದ ಗೆಜ್ಜೆನಾದ(೧೯೯೩) ಚಿತ್ರವೂ ಯಶಸ್ವಿಯಾಗಿ ಕನ್ನಡದಲ್ಲಿ ಬೇಡಿಕೆಯ ನಟಿಯಾದರು. ೧೯೯೫ರ ನಂತರದಲ್ಲಿ ಬಿಡುಗಡೆಯಾದ ಮುದ್ದಿನ ಅಳಿಯ(೧೯೯೬), ಕರ್ಪೂರದ ಗೊಂಬೆ(೧೯೯೬), ಮಾವನ ಮಗಳು(೧೯೯೭) ಮುಂತಾದ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ. ಶಶಿಕುಮಾರ್ ಅವರೊಂದಿಗೆ ಅಭಿನಯಿಸಿದ ಲಕ್ಷ್ಮಿ ಮಹಾಲಕ್ಷ್ಮಿ(೧೯೯೭) ಇವರ ವೃತ್ತಿ ಬದುಕಿನ ಗಮನಾರ್ಹ ಚಿತ್ರ. ಈ ಚಿತದಲ್ಲಿ ಇನ್ನೋರ್ವ ತಾರೆ ಶಿಲ್ಪಾ ಅವರೊಂದಿಗೆ ಪೈಪೋಟಿಯ ಅಭಿನಯ ನೀಡಿ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಪಂಜಾಬಿ ಹೌಸ್(೨೦೦೨) ಚಿತ್ರದಲ್ಲಿನ ಇವರ ಅಭಿನಯ ಸ್ಮರಣೀಯ. ಉಪೇಂದ್ರ ಅಭಿನಯದ ಕುಟುಂಬ(೨೦೦೩) ಇವರು ಅಭಿನಯಿಸಿದ ಕೊನೆಯ ಕನ್ನಡ ಚಿತ್ರ.

ಕನ್ನಡದಲ್ಲಿ ೧೯೯೦ರ ದಶಕದ ಪ್ರಸಿದ್ಧ ನಟರಾದ ರಮೇಶ್ ಅರವಿಂದ್, ಶಶಿಕುಮಾರ್, ರಾಮ್ ಕುಮಾರ್, ಕುಮಾರ್ ಗೋವಿಂದ್, ಅಭಿಜಿತ್ ಮತ್ತು ರಘುವೀರ್ರಂತಹ ನಟರೊಂದಿಗೆ ನಾಯಕಿಯಾಗಿ ಅಭಿನಯಿದ್ದಾರೆ.

ಕಿರುತೆರೆ[ಬದಲಾಯಿಸಿ]

ನಾಯಕಿಯಾಗಿ ಉತ್ತಮ ಅವಕಾಶಗಳು ಕಡಿಮೆಯಾದಾಗ ಕಿರಿತೆರೆಯನ್ನು ಪ್ರವೇಶಿಸಿದ ವಿನೋದಿನಿ ತಮಿಳಿನಲ್ಲಿ ಅನೇಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ನಟಿಸಿದ ಪ್ರಮುಖ ಧಾರಾವಾಹಿಗಳೆಂದರೆ ಚಿತ್ತಿ, ಅಗಳ್ ವಿಲಕ್ಕು ಮತ್ತು ಕನ್ನಾಡಿ ಕದವುಗಳ್.

ಉಲ್ಲೇಖಗಳು[ಬದಲಾಯಿಸಿ]

  1. "ಶ್ವೇತಾ". ಚಿಲೋಕ.ಕಾಮ್.