ಸೋನಾಕ್ಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೋನಾಕ್ಷಿ
ಕುಂತೀಪುತ್ರ ಚಲನಚಿತ್ರದಲ್ಲಿ ಸೋನಾಕ್ಷಿ
Born
Occupation(s)ನಟಿ, ರೂಪದರ್ಶಿ
Years active೧೯೯೪-೧೯೯೬

ಸೋನಾಕ್ಷಿ ಅವರು ಕನ್ನಡ ಚಲನಚಿತ್ರ ನಟಿ. ಇವರು ಕನ್ನಡ ಚಿತ್ರರಂಗದಲ್ಲಿ ಇದ್ದಿದ್ದು ಮೂರೇ ವರ್ಷವಾದರೂ ಇವರು ತಮ್ಮ ಕುಂತೀಪುತ್ರ ಮತ್ತು ಮೋಜುಗಾರ ಸೊಗಸುಗಾರ ಚಿತ್ರಗಳ ಅಭಿನಯದಿಂದ ಪ್ರೇಕ್ಷಕರ ಮನಗೆದ್ದರು.

ಸಿನಿಮಾ ಜೀವನ[ಬದಲಾಯಿಸಿ]

ಸೋನಾಕ್ಷಿ ಅವರ ಮೊದಲ ಚಿತ್ರ ಕುಂತೀಪುತ್ರವನ್ನು ವಿಜಯ್ ಅವರು ನಿರ್ದೇಶಿಸಿದ್ದರು. ಇದರಲ್ಲಿ ಇವರು ಡಾ| ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದರು. ಇದರಲ್ಲಿ ಇವರ "ಈ ಪ್ರೇಮ ಮರೆಯದ ಮನಸಿನ ಸಂಗಮ" ಗೀತೆ ತುಂಬಾ ಪ್ರಸಿದ್ಧವಾಗಿತ್ತು. ವಿಷ್ಣುವರ್ಧನ್ ಮತ್ತು ಸೋನಾಕ್ಷಿ ಅವರ ಯಶಸ್ವಿ ಜೋಡಿ ಯಮಕಿಂಕರ, ಮೋಜುಗಾರ ಸೊಗಸುಗಾರ ಮತ್ತು ಹೆಲೋ ಡ್ಯಾಡಿ ಚಿತ್ರಗಳಲ್ಲಿ ಅಭಿನಯಿಸಿದರು.

ವಿಷ್ಣುವರ್ಧನ್ ನಾಯಕಿ[ಬದಲಾಯಿಸಿ]

ಇವರ ನಾಲ್ಕೂ ಚಿತ್ರಗಳಲ್ಲಿ ವಿಷ್ಣುವರ್ಧನ್ ಅವರೇ ನಾಯಕರಾಗಿದ್ದರಿಂದ ಇವರಿಗೆ ವಿಷ್ಣುವರ್ಧನ್ ಅವರ ನಾಯಕಿ ಎಂದೇ ಜನ ಕರೆಯುತ್ತಿದ್ದರು.

ಸೋನಾಕ್ಷಿ ಅವರ ಅಭಿನಯದ ಚಲನಚಿತ್ರಗಳು[ಬದಲಾಯಿಸಿ]

ಕೀಲಿ
Films that have not yet been released ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಚಿತ್ರದ ಶೀರ್ಷಿಕೆ ಪಾತ್ರ ನಾಯಕ ನಟ ನಿರ್ದೇಶಕ ಭಾಷೆ ಟಿಪ್ಪಣಿಗಳು ಉಲ್ಲೇಖಗಳು
೧೯೯೪ ಕುಂತೀ ಪುತ್ರ [೧] [೨] ಮಾಲಾ "ಸೂರ್ಯ/ರವಿ" ಆಗಿ ವಿಷ್ಣುವರ್ಧನ್ [೩] ವಿಜಯ್ ಕನ್ನಡ
೧೯೯೫ ಯಮ ಕಿಂಕರ [೪] ವಿಷ್ಣುವರ್ಧನ್ , ಟೈಗರ್ ಪ್ರಭಾಕರ್ ಟೈಗರ್ ಪ್ರಭಾಕರ್ ಕನ್ನಡ ಈ ಚಿತ್ರದಲ್ಲಿ ಟೈಗರ್ ಪ್ರಭಾಕರ್ ಅವರು ಯಮನಾಗಿಯೂ ವಿಷ್ಣುವರ್ಧನ್ ಅವರು ಭೂಲೋಕಕ್ಕೆ ಹುಡುಗಿಯೊಬ್ಬಳ ಪ್ರಾಣವನ್ನು ತರಲೆಂದು ಬಂದು ಆಕೆಯ ಪ್ರೇಮದಲ್ಲಿ ಸಿಲುಕುವ ಯಮನ ದೂತನಾಗಿಯೂ ನಟಿಸಿದ್ದಾರೆ. ಇದಕ್ಕೆ ರಾಜನ್ ನಾಗೇಂದ್ರ ಅವರು ಸಂಗೀತ ನಿರ್ದೇಶಿಸಿದ್ದಾರೆ
ಮೋಜುಗಾರ ಸೊಗಸುಗಾರ [೫] ಅಂಜನಾ ವಿಷ್ಣುವರ್ಧನ್ ವಿಜಯ್ ಕನ್ನಡ ಇದು ವಿಷ್ಣುವರ್ಧನ್ ಅವರ ೧೫೦ನೇ ಸಿನಿಮಾ ಆಗಿತ್ತು. [೬] ಇದು ೧೯೬೪ರಲ್ಲಿ ತೆರೆಕಂಡ ತೆಲುಗು ಚಿತ್ರ "ರಾಮುಡು ಭೀಮುಡು" ವಿನ ರಿಮೇಕ್ ಆಗಿದೆ. ಇದರಲ್ಲಿ ವಿಷ್ಣುವರ್ಧನ್ ಅವರು ದ್ವಿಪಾತ್ರದಲ್ಲಿ ನಟಿಸಿದ್ದಾರೆ
೧೯೯೬ ಹಲೋ ಡ್ಯಾಡಿ [೭] ವಿಷ್ಣುವರ್ಧನ್ ಬಿ ನಾಗಣ್ಣ ಕನ್ನಡ

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]