ಮಹಾಶ್ವೇತಾ ದೇವಿ
Mahasweta Devi | |
---|---|
ಜನನ | ಜನವರಿ 14, 1926 [೧] Dhaka, British India |
ಮರಣ | 28 July 2016 |
ವೃತ್ತಿ | Activist, Author |
ರಾಷ್ಟ್ರೀಯತೆ | Indian |
ಕಾಲ | ೧೯೫೬-೨೦೧೬ |
ಪ್ರಕಾರ/ಶೈಲಿ | novel, short story, drama, essay |
ವಿಷಯ | Denotified tribes of India |
ಸಾಹಿತ್ಯ ಚಳುವಳಿ | Gananatya |
ಪ್ರಮುಖ ಕೆಲಸ(ಗಳು) | Hajar Churashir Ma (No. ೧೦೮೪'s Mother) Aranyer Adhikar (The Occupation of the Forest) Titu Mir |
ಪ್ರಭಾವಿತರು |
ಮಹಾಶ್ವೇತಾ ದೇವಿ (ಬಂಗಾಳಿ: মহাশ্বেতা দেবী ಮೊಹಾಶೆಶೆತಾ ಡೇಬಿ ) (ಜನನ ೧೯೨೬, ಢಾಕಾದಲ್ಲಿ; ಸದ್ಯ ಇದು ಬಾಂಗ್ಲಾದೇಶ) ದಲ್ಲಿದ್ದು ಅವರು ಭಾರತೀಯ ಸಾಮಾಜಿಕ ಕಾರ್ಯಕರ್ತೆ ಮತ್ತು ಬರಹಗಾರ್ತಿ ಎನಿಸಿದ್ದಾರೆ.
ಜೀವನ ಚರಿತ್ರೆ
[ಬದಲಾಯಿಸಿ]ಮಹಾಶ್ವೇತಾದೇವಿಯು ಢಾಕಾದಲ್ಲಿ ೧೯೨೬ ರಲ್ಲಿ ಜನಿಸಿದರು.ಸಾಹಿತ್ಯ ಲೋಕದ ಪರಿಚಿತ ಹಿಂದು ಬ್ರಾಹ್ಮಣ ಕುಟುಂಬದಲ್ಲಿ ಅವರ ಜನನವಾಯಿತು. ಅವರ ತಂದೆ ಮನಿಷ್ ಘಟಕ್ ಅವರು ಕಲ್ಲೊಳ್ ಯುಗದ ಓರ್ವ ಕವಿ ಮತ್ತು ಕಾದಂಬರಿಕಾರ, ತಮ್ಮ ಹೆಸರನ್ನು ಜುಬನಾಶ್ವಾ ಎಂಬ ಗುಪ್ತನಾಮದಿಂದ ಪ್ರಸಿದ್ದರಾದವರು. ಹೆಸರಾಂತ ಚಿತ್ರನಿರ್ಮಾಪಕ ರಿತ್ವಿಕ್ ಘಟಕ್ ಅವರಿಗೆ ಹಿರಿಯ ಸಹೋದರರಾಗಿದ್ದಾರೆ. ಮಹಾಶ್ವೇತಾ ಅವರ ತಾಯಿ ಧರಿತ್ರಿ ದೇವಿ ಕೂಡ ಓರ್ವ ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿದ್ದರು.ಅವರ ಇಬ್ಬರು ಸಹೋದರರೂ ಸಹ ವಿವಿಧ ಕ್ಷೇತ್ರಗಳಲ್ಲಿ ಪ್ರಖ್ಯಾತ ವ್ಯಕ್ತಿಗಳೆನಿಸಿಕೊಂಡವರು.ಹೆಸರಾಂತ ಶಿಲ್ಪಕಲೆಗಾರ ಸಂಖಾ ಚೌಧರಿ ಹಾಗು ಇನ್ನೊಬ್ಬರು ಸಚಿನ್ ಚೌಧರಿ, ಎಕಾನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಆಫ್ ಇಂಡಿಯಾದ ಸಂಸ್ಥಾಪಕ ಸಂಪಾದಕರಾಗಿದ್ದರು. ಅವರ ಮೊದಲ ಶಿಕ್ಷಣವು ಢಾಕಾದಲ್ಲಿ ನಡೆಯಿತು.ಆದರೆ ಭಾರತದ ವಿಭಜನೆಯ ನಂತರ ಅವರು ಭಾರತದ ಪಶ್ಚಿಮ ಬಂಗಾಳಕ್ಕೆ ಬಂದರು. ರವೀಂದ್ರನಾಥ ಟ್ಯಾಗೋರ್ ಅವರು ಸಂಸ್ಥಾಪಿಸಿದ ಶಾಂತಿನಿಕೇತನದಲ್ಲಿನ ವಿಶ್ವಭಾರತಿ ಯುನ್ವರ್ಸಿಟಿಯಲ್ಲಿ ಪ್ರವೇಶ ಪಡೆದು ಅವರು ತಮ್ಮ ಬಿ.ಎ ಆನರ್ಸ್ )ಪದವಿ,ಹೀಗೆ ಇಂಗ್ಲೀಷ್ ವಿಷಯದಲ್ಲಿ ಆನರ್ಸ್ ಪಡೆದ ನಂತರ ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ತಮ್ಮ ಇಂಗ್ಲೀಷ್ ಎಂ.ಎ ಯನ್ನೂ ಪೂರ್ಣಗೊಳಿಸಿದರು. ಅವರು ತದನಂತರ ಪ್ರಸಿದ್ದ ನಾಟಕಕಾರ ಬಿಜೊನ್ ಭಟ್ಟಾಚಾರ್ಯ ಅವರನ್ನು ಮದುವೆಯಾದರು,ಅವರು IPTAದೊಂದಿಗೆ ಗುರುತಿಸಿಕೊಂಡರು.ಇಂಡಿಯಾ ಪೀಪಲ್ ಥೆಯಟರ್ ಅಸೊಶಿಯೇಶನ್ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ವೃತ್ತಿಜೀವನ
[ಬದಲಾಯಿಸಿ]ಅದಾದ ಮೇಲೆ ೧೯೬೪ ರಲ್ಲಿ ಅವರು ಬಿಜೊಯ್ ಘರ್ ಕಾಲೇಜ್ ನಲ್ಲಿ ಉಪನ್ಯಾಸಕಿಯಾಗಿದ್ದರು.(ಇದು ಕೊಲ್ಕತ್ತಾ ವಿಶ್ವವಿದ್ಯಾಲಯದ ಅಡಿ ಬರುವ ಅಧೀನ ಶಿಕ್ಷಣ ಪದ್ದತಿಯ ಸಂಸ್ಥೆಯಾಗಿದೆ.) ಆ ಕಾಲದಲ್ಲಿ ಬಿಜೊಯ್ ಘರ್ ಕಾಲೇಜು ಉದ್ಯೋಗ ನಿರತ ಮಹಿಳಾ ವಿದ್ಯಾರ್ಥಿಗಳಿಗಾಗಿರುವ ಶಿಕ್ಷಣ ಸಂಸ್ಥೆಯಾಗಿತ್ತು. ಅದೇ ವೇಳೆಗೆ ಅವರು ಓರ್ವ ಪತ್ರಕರ್ತೆ ಮತ್ತು ಸೃಜನಾತ್ಮಕ ಲೇಖಕಿಯಾಗಿ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ಅವರು ಪಶ್ಚಿಮ ಬಂಗಾಳದ ಲೋಧಾಸ್ ಮತ್ತು ಶಬರಾಸ್ ಗುಡ್ಡಗಾಡು ಜನಾಂಗದ ಸಮುದಾಯದ ಅಲ್ಲದೇ ಮಹಿಳೆಯರ ಮತ್ತು ದಲಿತರ ಕುರಿತು ಆಳ ಅಧ್ಯಯನ ನಡೆಸಿದ ಪ್ರಯುಕ್ತ ಹೆಚ್ಚು ಜನಮಾನಸದಲ್ಲಿ ಪ್ರಸಿದ್ದರಾಗಿದ್ದಾರೆ. ಅವರು ಗುಡ್ಡಗಾಡು ಜನಾಂಗದ ಹೋರಾಟಗಳಲ್ಲಿ ಸಕ್ರಿಯ ಭಾಗಿಯಾಗಿದ್ದವರು,ಬಿಹಾರ್,ಮಧ್ಯಪ್ರದೇಶ ಮತ್ತು ಛತ್ತೀಸ್ ಘಡ್ ಗಳಲ್ಲಿನ ಗುಡ್ಡಗಾಡು ಜನಾಂಗದ ಮೂಲಭೂತ ಬೇಡಿಕೆಗಳಿಗಾಗಿ, ಅವರ ಪರವಾಗಿ ನಿರಂತರ ಹೋರಾಟಕ್ಕಾಗಿ ತಮ್ಮನ್ನು ಮುಡುಪಾಗಿಸಿದ್ದಾರೆ. ಅವರ ಬಂಗಾಳಿ ಸಾಹಿತ್ಯ ಕಥನದಲ್ಲಿ ಗುಡ್ಡಗಾಡು ಜನಾಂಗದ ಮೇಲಾಗುವ ದೌರ್ಜನ್ಯ ಮತ್ತು ದಬ್ಬಾಳಿಕೆಗಳನ್ನು ವಿವರವಾಗಿ ಚಿತ್ರಿಸಿದ್ದಾರೆ.ಬಲವಂತರು,ಮೇಲ್ವರ್ಗದವರು,ಭೂಮಾಲೀಕರು,ಸಾಲನೀಡುವ ಸಾಹುಕಾರರು ಹಾಗು ಸರ್ಕಾರಿ ಅಧಿಕಾರಿ ವರ್ಗ ಹೇಗೆ ಈ ತುಳಿತಕ್ಕೊಳಗಾದ ಮತ್ತು ಅಸ್ಪೃಶ್ಯರನ್ನು ನಡೆಸಿಕೊಳ್ಳುತ್ತದೆ ಎಂದು ವಿಶದವಾಗಿ ವಿವರಿಸಿದ್ದಾರೆ. ಅವರು ತಮ್ಮ ಈ ಸಾಮಾಜಿಕ ಕಾರ್ಯದ ಸ್ಪೂರ್ತಿಯಿಂದ ಇದನ್ನು ಬರೆದಿದ್ದಾರೆ:
ಸಾಮಾನ್ಯ ಜನರೇ ನಿಜವಾದ ಇತಿಹಾಸ ನಿರ್ಮಿಸಬಲ್ಲರೆಂದು ನಾನು ಯಾವಾಗಲೂ ನಂಬಿದ್ದೇನೆ. ಇದಕ್ಕಾಗಿ ನಾನು ಸತತವಾಗಿ ಅವರ ಮರುಗೋಚರತೆಯನ್ನು ಎಲ್ಲೆಡೆಯೂ ಕಾಣುತ್ತಿದ್ದೇನೆ.ಅದು ಜಾನಪದ,ಗ್ರಾಮೀಣ ನೃತ್ಯಗಳು,ಪುರಾಣ-ಪುಣ್ಯಕಥೆಗಳು ಇತ್ಯಾದಿಗಳನ್ನು ಸಾಮಾನ್ಯ ಜನರೇ ತಮ್ಮ ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿ ಸಮಾಜವನ್ನು ಉಪಕರಿಸಿದ್ದಾರೆ...ನನ್ನ ಬರೆಹದ ಸ್ಪೂರ್ತಿಗೆ ಶೋಷಣೆಗೊಳಗಾದ,ದುರುಪಯೋಗಕ್ಕೊಳಗಾದ ಅದಲ್ಲದೇ ತಮ್ಮ ಸೋಲನ್ನೇ ಒಪ್ಪಿಕೊಳ್ಳದ ಇಂತಹ ಜನರೇ ನನಗೆ ಪ್ರೇರಣೆಯಾಗಿದ್ದಾರೆ. ನನಗೆ ಇಂತಹ ಉದಾತ್ತ ಮನೋಭಾವದ,ಚಕಿತಗೊಳಿಸುವ ವ್ಯಕ್ತಿತ್ವ ಹೊಂದಿದ ಮತ್ತು ನೋವಿನಿಂದ ಘಾಸಿಗೊಂಡ ಈ ಮನುಕುಲದ ಜನರೇ ನನ್ನ ಸಾಹಿತ್ಯದ ಗಟ್ಟಿ ಮೂಲವಸ್ತುಗಳಾಗಿದ್ದಾರೆ. ಇದಕ್ಕಾಗಿ ನಾನೇಕೆ ಬೇರೆ ಕಚ್ಚಾ ಸಾಮಗ್ರಿಗಳತ್ತ ಹೊರಳಲಿ,ಯಾವಾಗ ನಾನು ಇವರನ್ನು ತಿಳಿದುಕೊಳ್ಳಲು ಆರಂಭಿಸಿದೆನೋ? ಆಗ ಬೇರೆಡೆಗೆ ಹೋಗುವ ಅಗತ್ಯ ನನಗೆ ಕಾಣಲಿಲ್ಲ. ನನಗೆ ಹಲವು ವೇಳೆ ಅನಿಸಿದ್ದೇನೆಂದರೆ ನನ್ನ ಬರೆಹವೆಂದರೆ ಅವರ ಕಾರ್ಯಚಟುವಟಿಕೆಗಳು.
ಫ್ರಾಂಕ್ ಫರ್ಟ್ ಬುಕ್ ಫೇರ್, ೨೦೦೬ ರಲ್ಲಿನ ಪುಸ್ತಕ ಮೇಳದಲ್ಲಿ ಭಾರತವು ಈ ಮೇಳದ ಎರಡನೆಯ ಬಾರಿಗಿನ ಅತಿಥಿ ದೇಶವಾಗಿದ್ದುದು ಮೊದಲ ದೇಶವೆನಿಸಿತು.ಅದೇ ಸಂದರ್ಭದಲ್ಲಿ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಅದರಲ್ಲಿ ಈ ಜನರ ಪಾಡು ಬಿಂಬಿಸಿದಾಗ ಇಡೀ ಪ್ರೇಕ್ಷಕ ವರ್ಗ ಕಣ್ಣೀರಿನ ಕೋಡಿ ಹರಿಸಿತು.ಅವರು ಆಗ ರಾಜ್ ಕಪೂರ್ ಅವರ ಪ್ರಸಿದ್ದ ಹಿಂದಿ ಸಿನೆಮಾದ ಹಾಡಿನ ಸಾಲುಗಳನ್ನು ಉಚ್ಛರಿಸಿ ಕರಳು ಕರಗಿಸಿದ ಸನ್ನಿವೇಶ ಅದಾಗಿತ್ತು.(ಈ ಹಾಡಿನ ಇಂಗ್ಲೀಷ್ ರೂಪ ಕಂಸದಲ್ಲಿದೆ):
ಇದು ನಿಜವಾದ ಸಮಯವಾಗಿದ್ದು ಅದನ್ನು ನೆನಪಿಸಲು ಎಂದು ಅವರು ಹೇಳಿದ್ದರು,ಜೂತಾ (ಬೂಟು)ಜಪಾನಿನದಾದರೆ,ಪಾಟ್ಲೂನ್ (ಷರಾಯಿ) ಇಂಗ್ಲಿಸ್ಥಾನಿ (ಬ್ರಿಟಿಶ್)ಅದಲ್ಲದೇ ಟೊಪ್ಪಿಗೆ (ಹ್ಯಾಟ್)ರಷಿಯಾದಾದರೂ ಹೃದಯ ಮಾತ್ರ... ದಿಲ್ (ಹೃದಯ) ಮಿಡಿತ ಯಾವಾಗಲೂ ಹಿಂದೂಸ್ಥಾನೀ (ಭಾರತೀಯ)... ನನ್ನ ದೇಶವು ಹರಿದು ಹೋಗಿದ್ದರೂ,ಹಂಚಿ ಚೂರಾಗಿದ್ದರೂ,ಗರ್ವ ಮೂಡಿಸುವಂತಹದ್ದು,ಅಭಿಮಾನದ್ದು,ಸುಂದರ,ಬೆಚ್ಚಗಿನ,ಆರ್ದೃತೆಯುಳ್ಳದ್ದು,ತಂಪಾದುದು,ಮರಳು ಹೊದ್ದಿರುವ ನನ್ನ ದೇಶ ಪ್ರಕಾಶಿಸುತ್ತಿರುವ ಭಾರತ. ನನ್ನ ದೇಶ.
ಇತ್ತೀಚಿನ ಕಾರ್ಯಚಟುವಟಿಕೆ
[ಬದಲಾಯಿಸಿ]ಇತ್ತೀಚಿಗೆ ತನ್ನ ತಾಯ್ನಾಡು ಪಶ್ಚಿಮ ಬಂಗಾಳ, ರಾಜ್ಯದ ಕೈಗಾರಿಕಾ ನೀತಿಯ ವಿರುದ್ದ ಅವರು ಹೋರಾಟ ನಡೆಸಿದ್ದಾರೆ,ಇದಕ್ಕಾಗಿ ನ್ಯಾಯಕ್ಕಾಗಿ ಅವರ ಶ್ರಮ ಮೀಸಲಾಗಿದೆ. ಅದರಲ್ಲೂ ವಿಶೇಷವಾಗಿ ಫಲವತ್ತಾದ ಭೂಮಿಯನ್ನು ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿ ಹೆಸರಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿದೆ.ಸರ್ಕಾರವು ಬಡ ರೈತರ ಇಂತಹ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ ಖರೀದಿಸಿ ಅವರನ್ನು ಬೀದಿ ಪಾಲು ಮಾಡುತ್ತಿದೆ ಎಂದು ಅವರ ಹೋರಾಟದ ಮೂಲ ಮಂತ್ರವಾಗಿದೆ. ಅವರ ಪ್ರಕಾರ ಈ ಪ್ರಕ್ರಿಯೆಯು ರವೀಂದ್ರನಾಥ ಟ್ಯಾಗೊರ್ ರ ಶಾಂತಿನಿಕೇತನವನ್ನು ವಾಣೀಜ್ಯೀಕರಣಗೊಳಿಸದಂತಾಗಿದೆ.ಅವರು ಇದೇ ಸ್ಥಳದಲ್ಲಿಯೇ ಹೋರಾಟಕ್ಕಾಗಿ ಸಜ್ಜುಗೊಂಡಿದ್ದಾರೆ.[೨] ಅವರ ನೇತೃತ್ವವು ಅಸಂಖ್ಯಾತ ಬುದ್ದಿಜೀವಿಗಳು,ಕಲಾವಿದರು,ಬರೆಹಗಾರರು ಮತ್ತು ರಂಗ ಕಲಾವಿದರನ್ನು ಸರ್ಕಾರದ ಈ ನೀತಿಯ ವಿರುದ್ಧ ಹೋರಾಡಲು ಕರೆ ತಂದಿತು.ಅದಲ್ಲದೇ ಸಿಂಗೂರ್ ಮತ್ತು ನಂದಿ ಗ್ರಾಮಗಳಲ್ಲಿ ಇದರ ಬಹುತೇಕ ಅನುಷ್ಟಾನವೂ ಆಯಿತು.
ಇತ್ತೀಚಿಗೆ ಗುಜರಾತ ರಾಜ್ಯವು ಗ್ರಾಮೀಣ ಮಟ್ಟದಲ್ಲಿ ಕೆಳವರ್ಗದ ವರೆಗೂ ಅಭಿವೃದ್ಧಿ ತಂದುದನ್ನು ಶ್ಲಾಘಿಸಿದ್ದಾರೆ.ಆದರೆ ೩೦ ವರ್ಷಗಳಿಂದ ಎಡರಂಗದ ಆಡಳಿತ ಕಂಡ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅಭಿವೃದ್ಧಿ "ಅತ್ಯಲ್ಪ ಪ್ರಮಾಣ"ದಲ್ಲಿಯೂ ಇಲ್ಲ ಎಂದು ಅವರು ಟೀಕಿಸಿದ್ದಾರೆ.
ನಿಧನ
[ಬದಲಾಯಿಸಿ]ಮಹಾಶ್ವೇತಾದೇವಿ ಅವರು ಕೋಲ್ಕತ್ತದಲ್ಲಿ 2016 ಜುಲೈ 28ರಂದು ನಿಧನರಾದರು.[೩]
ಕೃತಿಗಳು
[ಬದಲಾಯಿಸಿ]- ದಿ ಕ್ವೀನ್ ಆಫ್ ಝಾನ್ಸಿ (ಜೀವನ ಚರಿತ್ರೆ, ಇದನ್ನು ಸಾಗರೀ ಮತ್ತು ಮಂದಿರಾ ಸೇನ್ ಗುಪ್ತಾ ಇಂಗ್ಲೀಷ್ ಗೆ ಅನುವಾದಿಸಿದ್ದಾರೆ. ಝಾನ್ಸಿರ್ ರಾಣಿ )ಎಂಬ ಬಂಗಾಳಿ ಕೃತಿ ೧೯೫೬ ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು.
- ಹಜಾರ್ ಚುರಾಶಿರ್ ಮಾ (ನಂ. ೧೦೮೪'ನ ತಾಯಿ , ೧೯೭೫)
- ಅರನ್ಯೆರ್ ಅಧಿಕಾರ್ (ಅರಣ್ಯದ ಸ್ವಾಧೀನತೆ , ೧೯೭೭)
- ಅಗ್ನಿಗರ್ಭ (ಬೆಂಕಿಯ ಗರ್ಭ , ೧೯೭೮)
- ಬಿಟರ್ ಸೊಯಿಲ್ ಅನುವಾದ, ಇಪ್ಸಿತಾ ಚಂದ್ರ. ಸೀಗಲ್, ೧೯೯೮. ಫೋರ್ ಸ್ಟೋರೀಸ್.
- ಛೋಟಿ ಮುಂಡಾ ಇವಾಮ್ ತಾರ್ ತಿರ್ (ಛೋಟಿ ಮುಂಡಾ ಅಂಡ್ ಹೀಸ್ ಆರೊವ್ , ೧೯೮೦)
- ಇಮ್ಯಾನರಿ ಮ್ಯಾಪ್ಸಿ (ಅನುವಾದ :ಗಾಯತ್ರಿ ಸ್ಪಿವ್ಯಾಕ್ ಲಂಡನ್& ನ್ಯುಯಾರ್ಕ್. ರೌಟ್‌ಲೆಡ್ಜ್, ೨೦೦೭.
- ದೋಪ್ತಿ (ಸಣ್ಣ ಕಥೆ)
- ಡಸ್ಟ್ ಆನ್ ದಿ ರೋಡ್ (ಇಂಗ್ಲೀಷ್ ಅನುವಾದ ಮೈತ್ರೇಯ್ ಘಟಕ್. ಸೀಗಲ್, ಕೊಲ್ಕತ್ತಾ.)
- ಅವರ್ ನಾನ್-ವೆಜ್ ಕೌ (ಸೀಗಲ್ ಬುಕ್ಸ್, ಕೊಲ್ಕತ್ತಾ, ೧೯೯೮. ಬೆಂಗಾಲಿಯಿಂದ ಪರಮಿತಾ ಬ್ಯಾನರ್ಜೀ ಅವರಿಂದ ಅನುವಾದ.)
- ಬಾಷೈ ತುಡು (ಇಂಗ್ಲೀಷ್ ಗೆ ಅನುವಾದ:ಗಾಯತ್ರಿ ಚಕ್ರ್ಬೊರ್ತಿ ಸ್ಪಿವ್ಯಾಕ್ ಅಂಡ್ ಶಮಿಕ್ ಬಂಡೋಪಾಧ್ಯಾಯ ಅವರಿಂದ. ಥಿಮಾ, ಕೊಲ್ಕತ್ತಾ, ೧೯೯೩)
- ತಿತು ಮೀರ್
- ರುಡಾಲಿ
- ಬ್ರೀಸ್ಟ್ ಸ್ಟೋರೀಸ್ (ಇಂಗ್ಲೀಷ್ ಗೆ ಅನುವಾದ:ಗಾಯತ್ರಿ ಚಕ್ರ್ಬೊರ್ತಿ ಸ್ಪಿವ್ಯಾಕ್ ಅಂಡ್ ಶಮಿಕ್ ಬಂಡೋಪಾಧ್ಯಾಯ ಅವರಿಂದ. ಸೀಗಲ್, ಕೊಲ್ಕತ್ತಾ, ೧೯೯೭)
- ಆಫ್ ಉಮೆನ್, ಒಟ್ ಕಾಸ್ಟ್ಸ್, ಪೀಜಂಟ್ಸ್, ಅಂಡ್ ರೆಬೆಲ್ಸ್ (ಇಂಗ್ಲೀಷ್ ಗೆ ಅನುವಾದ ಕಲ್ಪನಾ ಬರ್ಧನ್,ಯುನ್ವರ್ರ್ಸಿಟಿ ಆಫ್ ಕ್ಯಾಲಿಫೊರ್ನಿಯಾ, ೧೯೯೦.) ಸಿಕ್ಸ್ ಸ್ಟೋರೀಸ್.
- ಏಕ್-ಕೋರೀಸ್' ಡ್ರೀಮ್ (ಇಂಗ್ಲೀಷ್ ಗೆ ಲೀಲಾ ಮಜುಮದಾರ್ ಅವರಿಂದ ಅನುವಾದ. N.B.T., ೧೯೭೬)
- ದಿ ಬುಕ್ ಆಫ್ ಹಂಟರ್ (ಸೀಗಲ್ ಇಂಡಿಯಾ, ೨೦೦೨)
- ಔಟ್ ಕಾಸ್ಟ್ (ಸೀಗಲ್, ಇಂಡಿಯಾ, ೨೦೦೨)
- ಇನ್ ಅದರ್ ವರ್ಲ್ಡ್ಸ್: ಎಸ್ಸೆಯ್ಸ್ ಇನ್ ಕಲ್ಚರಲ್ ಪಾಲಿಟಿಕ್ಸ್ (ಇಂಗ್ಲೀಷ್ ಗೆ ಅನುವಾದ ಗಾಯತ್ರಿ ಚಕ್ರಬೊರ್ತಿ ಸ್ಪಿವ್ಯಾಕ್. ಮೆಥ್ಯುಯೆನ್ ಅಂಡ್ ಕಂಪನಿ, ೧೯೮೭. ನ್ಯುಯಾರ್ಕ್, ಲಂಡನ್)
- ಟಿಲ್ ಡೆತ್ ಡು ಅಸ್ ಪಾರ್ಟ್
- ಓಲ್ಡ್ ಉಮೆನ್
- ಕುಲಪುತ್ರ (ಇದನ್ನು ಕನ್ನಡಕ್ಕೆ ಶ್ರೀಮತಿ ಎಚ್ ಎಸ್ CVG ಪಬ್ಲಿಕೇಶನ್ಸ್, ಬೆಂಗಳೂರು)
- ದಿ ವ್ಹೈ-ವ್ಹೈ ಗರ್ಲ್ (ತುಳಿಕಾ, ಚೆನ್ನೈ.)
- ಡಕಾತೆಯ್ ಕಹಾನಿ
ಮಹಾಶ್ವೇತಾದೇವಿಯವರ ಕೃತಿಗಳ ಆಧರಿಸಿದ ಚಲನಚಿತ್ರಗಳು
[ಬದಲಾಯಿಸಿ]- ಸುಂಘರ್ಷ್ (೧೯೬೮), ಇದು ಅವರದೇ ಕಥೆಯಾದರಿಸದ ಕಲ್ಪನಾ ಕಥನ ಸಾಹಿತ್ಯ ಒಂದು ಥುಗ್ಗೀ ಪಂಥದವರ ದ್ವೇಷದ ಕುರಿತ ವಾರಾಣಸಿನಗರದಲ್ಲಿ ನಡೆಯುವ ಘಟನೆ.
- ರುಡಾಲಿ (೧೯೯೩)
- ಹಜಾರ್ ಚೌರಾಸಿ ಕಿ ಮಾ (೧೯೯೮)
- ಮಾಟಿ ಮಾಯ್ (೨೦೦೬),[೪] ಇದು ಸಣ್ಣ ಕಥೆ,ದಾಯೆನ್ ಆಧರಿಸಿದೆ[೫]
ಪ್ರಮುಖ ಪ್ರಶಸ್ತಿಗಳು
[ಬದಲಾಯಿಸಿ]- ೧೯೭೯: ಸಾಹಿತ್ಯ ಅಕಾಡಮಿ ಅವಾರ್ಡ್ (ಬೆಂಗಾಳಿ): –ಅರನ್ಯೆರ್ ಅಧಿಕಾರ್ (ಕಾದಂಬರಿ)
- ೧೯೮೬: ಪದ್ಮಶ್ರೀ
- ೧೯೯೬:ಜ್ಞಾನ ಪೀಠ ಅವಾರ್ಡ್- ಭಾರತೀಯ ಜ್ಞಾನಪೀಠದ ಅತ್ಯಂತ ದೊಡ್ಡ ಸಾಹಿತ್ಯ ಕ್ಷೇತ್ರದ ಪ್ರಶಸ್ತಿ ಇದಾಗಿದೆ.
- ೧೯೯೭: ರಾಮೊನ್ ಮ್ಯಾಗ್ಸೆಸೆ ಆವಾರ್ಡ್ - ಜರ್ನಾಲಿಜಮ್, ಲಿಟರೇಚರ್, ಅಂಡ್ ದಿ ಕ್ರಿಯೇಟಿವ್ ಕಮ್ಯುನಿಕೇಶನ್ಸ್ ಆರ್ಟ್ಸ್ [೬]
- ೧೯೯೯: ಹಾನರೀಸ್ ಕೌಸಾ - ಇಂದಿರಾ ಗಾಂಧಿ ನ್ಯಾಶನಲ್ ಒಪನ್ ಯುನ್ವರ್ಸಿಟಿ (IGNOU)
- ೨೦೦೬:ಪದ್ಮ ವಿಭೂಷಣ- ಭಾರತ ಸರ್ಕಾರದಎರಡನೆಯ ಅತಿದೊಡ್ಡ ನಾಗರಿಕ ಗೌರವ ಸನ್ಮಾನ ಇದಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Detailed Biography Ramon Magsaysay Award.
- ↑ "ದಿ ಮೇನ್ ಸ್ಟ್ರೀಮ್ ಡಿಸೆಂಬರ್ 23, 2006: ಡು ಉಯ್ ರಿಯಲ್ಲೀ ವಾಂಟ್ ರಬೀಂದ್ರನಾಥ್?". Archived from the original on 2008-03-09. Retrieved 2011-01-06.
- ↑ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಮಹಾಶ್ವೇತಾ ದೇವಿ ಇನ್ನಿಲ್ಲ, ಒನ್ ಇಂಡಿಯಾ ಕನ್ನಡ ಸುದ್ದಿತಾಣ, ೨೯ಜುಲೈ೨೦೧೬
- ↑ ಮಹಾಶ್ವೇತಾ ದೇವಿ ಐ ಎಮ್ ಡಿ ಬಿನಲ್ಲಿ
- ↑ ಮರಾಠೀ ಸಿನೆಮಾ ಹ್ಯಾಸ್ ಬೀನ್ ಪ್ರೊಡ್ಯುಸಿಂಗ್ ಎ ರೇಂಜ್ ಆಫ್ ಸಿರಿಯಸ್ ಫಿಲ್ಸ್ಮ್ಸ... ಫ್ರಂಟ್ ಲೈನ್ , ದಿ ಹಿಂದು ಗ್ರುಪ್ , ವ್ಯಾಲ್ಯುಮ್ ೨೩ - ಇಸ್ಯು ೨೦: ಅ. ೦೭-೨೦, 2006.
- ↑ ಸೈಟೇಶನ್ Archived 2012-04-26 ವೇಬ್ಯಾಕ್ ಮೆಷಿನ್ ನಲ್ಲಿ. ರಾಮೊನ್ ಮ್ಯಾಗ್ಸೆಸಿ ಆವಾರ್ಡ್.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಫ್ರಾಮ್ ದಿ ವೆಬ್ ಸೈಟ್ ಆಫ್ ಎಮೊರಿ ಯುನ್ವರ್ಸಿಟಿ Archived 2012-07-16 ವೇಬ್ಯಾಕ್ ಮೆಷಿನ್ ನಲ್ಲಿ.
- ಇಯರ್ ಆಫ್ ಬರ್ತ್- 1871 Archived 2014-05-12 ವೇಬ್ಯಾಕ್ ಮೆಷಿನ್ ನಲ್ಲಿ.
- ಮಹಾಶ್ವೇತಾ ದೇವಿ: ವಿಟ್ನೆಸ್, ಅಡ್ವಿಕೇಟ್, ರೈಟರ್ಸ್ Archived 2007-06-24 ವೇಬ್ಯಾಕ್ ಮೆಷಿನ್ ನಲ್ಲಿ. - ಎ ಫಿಲ್ಮ್ ಆನ್ ಮಹಾಶ್ವೇತಾ ದೇವಿ ಶಾಶ್ವತಿ ತಾಲೂಕ್ದಾರ್ ಅವರಿಂದ
- ಮಹಾಶ್ವೇತಾ ದೇವಿ ಆಟ್ imdb
- ಇಂಟರ್ ವಿವ್ ಉಯಿತ್ ಔಟ್ ಲುಕ್ ಮ್ಯಾಗ್ಜಿನ್
- ದಿ ರಿಡಿಫ್ ಇಂಟರಿವ್/ಮಹಾಶ್ವೇತಾ ದೇವಿ
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Commons category link is on Wikidata
- Persondata templates without short description parameter
- 1926ರಲ್ಲಿ ಜನಿಸಿದವರು
- ಬದುಕಿರುವ ವ್ಯಕ್ತಿಗಳು
- ಪೀಪಲ್ ಫ್ರಾಮ್ ಢಾಕಾ
- ಭಾರತೀಯ ಲೇಖಕರು
- ಇಂಡಿಯನ್ ಆಕ್ಟಿವಿಸ್ಟ್ಸ್
- ಇಂಡಿಯನ್ ಉಮೆನ್ ಆಕ್ಟಿವಿಸ್ಟ್ಸ್
- ಇಂಡಿಯನ್ ಹ್ಯುಮನ್ ರೈಟ್ಸ್ ಆಕ್ಟಿವಿಸ್ಟ್ಸ್
- ಬಂಗಾಳಿ-ಭಾಷೆಯ ಬರೆಹಗಾರರು
- ಭಾರತೀಯ ಮಹಿಳಾ ಬರಹಗಾರರು
- ವಿಶ್ವ-ಭಾರತಿ ಯುನ್ವರ್ಸಿಟಿ ಹಳೆಯ ವಿದ್ಯಾರ್ಥಿಗಳು
- ಕಲ್ಕತ್ತಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು
- ಯುನ್ವರ್ಸಿಟಿ ಆಫ್ ಕೊಲ್ಕತ್ತಾ ಫಾಕಲ್ಟಿ
- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
- ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತರು
- ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
- ಕನ್ನಡದಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
- ಸಾಹಿತಿಗಳು