ರಾಣಿ ಅಬ್ಬಕ್ಕ

ವಿಕಿಪೀಡಿಯ ಇಂದ
(ಉಳ್ಳಾಲದ ಅಬ್ಬಕ್ಕ ದೇವಿ ಇಂದ ಪುನರ್ನಿರ್ದೇಶಿತ)
Jump to navigation Jump to search
ಅಬ್ಬಕ್ಕ ರಾಣಿ ಚೌಟ
ರಾಣಿ
ರಾಜ್ಯಭಾರ೧೫೨೫ – ೧೫೭೦ರ ದಶಕ
ಪೂರ್ವಾಧಿಕಾರಿತಿರುಮಲರಾಯ
Consortಲಕ್ಷ್ಮಪ್ಪಅರಸ
ಸಂತತಿಚೌಟ

ಅಬ್ಬಕ್ಕ ರಾಣಿ ಅಥವಾ 'ಅಬ್ಬಕ್ಕ ಮಹಾದೇವಿ' ತುಳುನಾಡಿನ ರಾಣಿಯಾಗಿದ್ದಳು. ಇವರು ೧೬ನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿದಳು. ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶ ವನ್ನಾಳಿದ ಚೌಟ ವಂಶಕ್ಕೆ ಸೇರಿದವಳು. ಬಂದರು ನಗರಿ ಉಳ್ಳಾಲವು ರಾಜಧಾನಿಯಾಗಿದ್ದಿತು. ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಅನೇಕ ಯತ್ನಗಳನ್ನು ನೆಡೆಸಿದರು. ಆದರೆ ರಾಣಿಯು ಅವರ ಪ್ರಯತ್ನವನ್ನು ನಾಲ್ಕು ದಶಕಗಳಕಾಲ ಹಿಮ್ಮೆಟ್ಟಿಸಿದಳು. ಅವಳ ಧೈರ್ಯದಿಂದಾಗಿ ಅಭಯ ರಾಣಿಎಂದು ಹೆಸರಾಗಿದ್ದಳು[೧][೨]ಳು ವಸಾಹಶಾಷಿಗಳ ವಿರುದ್ಧ ಹೋರಾಡಿದ ಮೊದಲ ಭಾರತೀಯರಲ್ಲಿ ಒಬ್ಬಳು ಮತ್ತು ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ.[೩][೪]

ಹಿಂದಿನ ಜೀವನ[ಬದಲಾಯಿಸಿ]

  • ಚೌಟರು ಅಳಿಯ ಸಂತಾನವನ್ನು ಅನುಸರಿಸುವರು. ಹೀಗಾಗಿ ಮಾವ ತಿರುಮಲರಾಯನು ಅಬ್ಬಕ್ಕನನ್ನು ರಾಣಿಯನ್ನಾಗಿ ಪಟ್ಟಕಟ್ಟಿದನು ಮತ್ತು ಮಂಗಳೂರಿನ ಪ್ರಭಲ ಅರಸನಾಗಿದ್ದ ಲಕ್ಷ್ಮಪ್ಪಅರಸನೊಂದಿಗೆ ವಿವಾಹ ನೆರವೇರಿಸಿದನು. ತಿರುಮಲರಾಯನು ಅಬ್ಬಕ್ಕಳಿಗೆ ಯುದ್ಧತಂತ್ರಗಳನ್ನೂ ಮತ್ತು ಸೈನಿಕ ಕೌಶಲ್ಯಗಳನ್ನೂ ಹೇಳಿಕೊಟ್ತನು. ವಿವಾಹವು ಬಹಳ ಕಾಲ ಉಳಿಯಲಿಲ್ಲ, ಅಬ್ಬಕ್ಕ ಉಳ್ಳಾಲಕ್ಕೆ ಹಿಂತಿರುಗಿದಳು.
  • ಈ ಕಾರಣದಿಂದಾಗಿ ಮುಂದೆ ಪೋರ್ಚುಗೀಸರ ವಿರುದ್ಧದ ಅಬ್ಬಕ್ಕನ ಹೋರಾಟದಲ್ಲಿ ಪತಿಯು ಅಬ್ಬಕ್ಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಪೋರ್ಚುಗೀಸರ ಪರ ಸೇರಿಕೊಂಡನು. ಜನವರಿ ೧೫ ೨೦೦೩ ರಂದು ಭಾರತ ಸರಕಾರವು ರಾಣಿ ಅಬ್ಬಕ್ಕನ ಚಿತ್ರವುಳ್ಳ ಪೋಸ್ಟಲ್ ಸ್ಟಾಂಪ್ ಬಿಡುಗಡೆ ಮಾಡಿತು

ಇವನ್ನೂ ನೋಡಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

  1. "Queen Abbakka's triumph over western colonisers". Press Information Bureau, Govt., of India. Retrieved 2007-07-25.
  2. "The Intrepid Queen-Rani Abbakka Devi of Ullal". Retrieved 2007-07-25.
  3. .rediff.com/news/2003/feb/17tara.htm "Include Tulu in Eighth Schedule: Fernandes" Check |url= value (help). Rediff.com. Retrieved 2007-07-25.
  4. [http:/ /timesofindia.indiatimes.com/articleshow/29664181.cms "Blend past and present to benefit future"] Check |url= value (help). Times of Indiaತಿರುಮಲರಾಯನು. Retrieved 2007-07-25.

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]