ಕೊಲ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಯಾನ್ ಸೆಬಾಸ್ಟಿಯಾನ್ ಕೊಲ್ಲಿ, ಸ್ಪೇನ್

ಕೊಲ್ಲಿ ಎಂದರೆ ಬಿರುಕು ಭಾಗದಲ್ಲಿರುವ ಕರಾವಳಿ ಜಲಸಮೂಹ. ಇದು ಹೆಚ್ಚು ದೊಡ್ಡ ಮುಖ್ಯ ಜಲಸಮೂಹಕ್ಕೆ (ಉದಾಹರಣೆಗೆ ಮಹಾಸಾಗರ, ಸರೋವರ, ಅಥವಾ ಮತ್ತೊಂದು ಕೊಲ್ಲಿ) ನೇರವಾಗಿ ಸಂಪರ್ಕ ಹೊಂದಿರುತ್ತದೆ. ದೊಡ್ಡ ಕೊಲ್ಲಿಯನ್ನು ಸಾಮಾನ್ಯವಾಗಿ ಗಲ್ಫ್, ಸಮುದ್ರ, ಖಾತ, ಅಥವಾ ಬೈಟ್ ಎಂದು ಕರೆಯಲಾಗುತ್ತದೆ. ಕೋವ್ ವೃತ್ತಾಕಾರದ ಕಡಲಚಾಚು ಮತ್ತು ಕಿರಿದಾದ ಪ್ರವೇಶಮಾರ್ಗವನ್ನು ಹೊಂದಿರುವ ಒಂದು ಬಗೆಯ ಹೆಚ್ಚು ಸಣ್ಣದಾದ ಕೊಲ್ಲಿ. ಕಡಲತೋಳು ಎಂದರೆ ಹಿಮನದಿಯ ಚಟುವಟಿಕೆಯಿಂದ ಆಕಾರ ಪಡೆದಿರುವ ಅಸಾಮಾನ್ಯವಾಗಿ ಕಡಿದಾದ ಕೊಲ್ಲಿ.

ಕೊಲ್ಲಿಯು ಒಂದು ನದಿಯ ನದೀಮುಖವಾಗಿರಬಹುದು, ಉದಾಹರಣೆಗೆ ಸಸ್ಕ್ವಹಾನಾ ನದಿಯ ನದೀಮುಖವಾದ ಚೆಸಪೀಕ್ ಕೊಲ್ಲಿ.[೧] ಕೊಲ್ಲಿಗಳು ಒಂದರೊಳಗೊಂದು ಅಂತರ್ಗತೀಕೃತವಾಗಿರಬಹುದು; ಉದಾಹರಣೆಗೆ ಜೇಮ್ಸ್ ಕೊಲ್ಲಿಯು ವಾಯವ್ಯ ಕ್ಯಾನಡಾದಲ್ಲಿನ ಹಡ್ಸನ್ ಕೊಲ್ಲಿಯ ಅಂಗವಾಗಿದೆ. ಬಂಗಾಳ ಕೊಲ್ಲಿ ಮತ್ತು ಹಡ್ಸನ್ ಕೊಲ್ಲಿಯಂತಹ ಕೆಲವು ಹೆಚ್ಚು ದೊಡ್ಡದಾದ ಕೊಲ್ಲಿಗಳು ವೈವಿಧ್ಯಮಯ ಭೂರಚನೆಯನ್ನು ಹೊಂದಿವೆ.

ಒಂದು ಕೊಲ್ಲಿಯ ಸುತ್ತಲಿರುವ ನೆಲವು ಹಲವುವೇಳೆ ಗಾಳಿಯ ಶಕ್ತಿಯನ್ನು ಕಡಿಮೆಮಾಡುತ್ತದೆ ಮತ್ತು ಅಲೆಗಳನ್ನು ತಡೆಹಿಡಿಯುತ್ತದೆ. ಮಾನವ ನೆಲಸೆಯ ಇತಿಹಾಸದಲ್ಲಿ ಕೊಲ್ಲಿಗಳು ಮಹತ್ವದ್ದಾಗಿದ್ದವು ಏಕೆಂದರೆ ಅವು ಮೀನುಗಾರಿಕೆಗೆ ಸುರಕ್ಷಿತ ಸ್ಥಳಗಳನ್ನು ಒದಗಿಸಿದ್ದವು. ನಂತರ ಅವು ಕಡಲ ವ್ಯಾಪಾರದ ಅಭಿವೃದ್ಧಿಯಲ್ಲಿ ಮುಖ್ಯವಾಗಿದ್ದವು ಏಕೆಂದರೆ ಅವು ಒದಗಿಸುವ ಸುರಕ್ಷಿತ ಲಂಗರುದಾಣಗಳು ರೇವುಗಳಾಗಿ ಅವುಗಳ ಆಯ್ಕೆಯನ್ನು ಪ್ರೋತ್ಸಾಹಿಸುತ್ತಿದ್ದವು.

ಕೊಲ್ಲಿಗಳು ರೂಪಗೊಳ್ಳಲು ವಿವಿಧ ರೀತಿಗಳಿವೆ. ಅತ್ಯಂತ ದೊಡ್ಡ ಕೊಲ್ಲಿಗಳು ಫಲಕ ಸಂಚಲನದ ಮೂಲಕ ಹೊಮ್ಮಿವೆ. ಮಹಾ ಖಂಡವಾದ ಪ್ಯಾಂಜೀಯಾ ವಕ್ರವಾದ ಮತ್ತು ಕೋಚುಕೋಚಾದ ಸ್ತರಭಂಗ ರೇಖೆಗಳ ಉದ್ದಕ್ಕೆ ವಿಭಜಿತವಾದಾಗ, ಖಂಡಗಳು ಬೇರೆ ಬೇರೆ ಕಡೆ ಚಲಿಸಿದವು ಮತ್ತು ದೊಡ್ಡ ಕೊಲ್ಲಿಗಳನ್ನು ಹಿಂದೆಬಿಟ್ಟವು; ಇವುಗಳಲ್ಲಿ ಗಿನೀ ಖಾರಿ, ಮೆಕ್ಸಿಕೊ ಖಾರಿ, ಮತ್ತು ವಿಶ್ವದ ಅತಿ ದೊಡ್ಡ ಕೊಲ್ಲಿಯಾದ ಬಂಗಾಳ ಕೊಲ್ಲಿ ಸೇರಿವೆ. ನದಿಗಳು ಮತ್ತು ಹಿಮನದಿಗಳಿಂದ ಕರಾವಳಿ ಕ್ಷರಣದ ಮೂಲಕ ಕೂಡ ಕೊಲ್ಲಿಗಳು ರೂಪಗೊಳ್ಳುತ್ತವೆ. ಹಿಮನದಿಯಿಂದ ರೂಪಗೊಂಡ ಕೊಲ್ಲಿಯನ್ನು ಕಡಲತೋಳು ಎಂದು ಕರೆಯಲಾಗುತ್ತದೆ. ಅಳಿವೆ ಕೊಲ್ಲಿಗಳು ನದಿಗಳಿಂದ ಸೃಷ್ಟಿಯಾಗುತ್ತವೆ ಮತ್ತು ಹೆಚ್ಚು ಅನುಕ್ರಮವಾದ ಇಳಿಜಾರುಗಳ ಲಕ್ಷಣಗಳನ್ನು ಹೊಂದಿರುತ್ತವೆ. ಹೆಚ್ಚು ಮೃದು ಕಲ್ಲುಗಳ ನಿಕ್ಷೇಪಗಳು ಹೆಚ್ಚು ಕ್ಷಿಪ್ರವಾಗಿ ಕ್ಷರಣವಾಗುತ್ತವೆ, ಮತ್ತು ಕೊಲ್ಲಿಗಳು ರೂಪಗೊಳ್ಳುತ್ತವೆ. ಅದೇ ಹೆಚ್ಚು ಗಟ್ಟಿಯಾದ ಕಡಿಮೆ ವೇಗದಿಂದ ಕ್ಷರಣವಾಗಿ, ಭೂಚಾಚುಗಳನ್ನು ಹಿಂದೆಬಿಡುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "Chesapeake Bay, Maryland". Maryland Manual On-Line. Maryland State Archives. November 28, 2016. Retrieved March 21, 2017.
"https://kn.wikipedia.org/w/index.php?title=ಕೊಲ್ಲಿ&oldid=887219" ಇಂದ ಪಡೆಯಲ್ಪಟ್ಟಿದೆ