ಮಹಾಸಾಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೂಮಿಯ ಜಲಸಮೂಹ ಮತ್ತು ಮಹಾಸಾಗರಗಳು

ಪ್ರಪಂಚದ ಇಡೀ ಉಪ್ಪುನೀರಿನ ಸಮೂಹ ಅಂತರಸಂಪರ್ಕವನ್ನು ಹೊಂದಿದೆ. ಈ ಸಮೂಹವು ಮಧ್ಯೆ ಮಧ್ಯೆಯಲ್ಲಿ ಖಂಡಗಳಿಂದ ಭಾಗಶಃ ಐದು ಉಪಸಮೂಹಗಳಾಗಿ ಬೇರ್ಪಟ್ಟಿದೆ. ಈ ಉಪಸಮೂಹಗಳೇ ಮಹಾಸಾಗರಗಳು.

ಚಿತ್ರ:Mappemonde oceanique Serret.gif
the World Ocean mappemonde océanique Serret

ಗಾತ್ರದಲ್ಲಿ ದೊಡ್ಡದಿಂದ ಚಿಕ್ಕದಾಗಿ ಮಹಾಸಾಗರಗಳು ಈ ರೀತಿ ಇವೆ:

  1. ಪೆಸಿಫಿಕ್ ಮಹಾಸಾಗರ
  2. ಅಟ್ಲಾಂಟಿಕ್ ಮಹಾಸಾಗರ
  3. ಹಿಂದೂ ಮಹಾಸಾಗರ
  4. ದಕ್ಷಿಣ ಮಹಾಸಾಗರ
  5. ಅರ್ಕ್ಟಿಕ್ ಮಹಾಸಾಗರ

ಅಂಕಿ-ಅಂಶಗಳು[ಬದಲಾಯಿಸಿ]

ದಕ್ಷಿಣದಿಂದ ಕಾಣುವಂತೆ ಪ್ರಪಂಚದ ಮಹಾಸಾಗರಗಳ ಚಿತ್ರಣ

ಇಡೀ ಜಲಸಮೂಹದ ವಿಸ್ತೀರ್ಣ ೩೬೨ಮಿಲಿಯನ್ ಚದರ ಕಿ.ಮಿ.ಗಳಷ್ಟು. ಭೂಮಿಯ ಮೇಲ್ಮೈನ ಸುಮಾರು ೪೦% ನ್ನು ಆವರಿಸಿರುವ ಮಹಾಸಮುದ್ರಗಳು ಸರಾಸರಿ ೩,೭೧೧ ಮೀಟರ್ ಆಳವನ್ನು ಹೊಂದಿದೆ. ಇಲ್ಲಿರುವ ನೀರಿನ ಪ್ರಮಾಣ ಸುಮಾರು ೧,೩೪೦ ಮಿಲಿಯನ್ ಘನ ಕಿ.ಮಿ.ಗಳಷ್ಟು ಇದ್ದು ಇದು ಭೂಮಿಯ ೦.೦೨೩% ಭಾರವಾಗಿದೆ.

ಪೆಸಿಫಿಕ್ ಮಹಾಸಾಗರದಲ್ಲಿರುವ ಪ್ರಪಂಚದ ಅತಿ ಆಳದ ಪ್ರದೇಶ ಮರಿಯಾನಾ ಕಂದಕ ೧೦,೯೨೩ ಮೀಟರ್ (ಸುಮಾರು ೧೧ ಕಿ.ಮಿ.) ಆಳದಲ್ಲಿದೆ.

"https://kn.wikipedia.org/w/index.php?title=ಮಹಾಸಾಗರ&oldid=865286" ಇಂದ ಪಡೆಯಲ್ಪಟ್ಟಿದೆ