ಅಮೃತಾ ಪ್ರೀತಮ್
Amrita Pritam | |
---|---|
ಜನನ | Amrita Kaur ೩೧ ಆಗಸ್ಟ್ ೧೯೧೯ Gujranwala, British India |
ಮರಣ | October 31, 2005 Delhi, India | (aged 86)
ವೃತ್ತಿ | Novelist, poet, essayist |
ರಾಷ್ಟ್ರೀಯತೆ | Indian |
ಕಾಲ | 1936-2004 |
ಪ್ರಕಾರ/ಶೈಲಿ | poetry, prose, autobiography |
ವಿಷಯ | partition of India, women, dream |
ಸಾಹಿತ್ಯ ಚಳುವಳಿ | Romantic-Progressivism[೧] |
ಪ್ರಮುಖ ಕೆಲಸ(ಗಳು) | Pinjar (novel) Aj Akhan Waris Shah Nu (poem) Suneray (poem) |
ಅಮೃತಾ ಪ್ರೀತಮ್ (ಆಗಷ್ಟ್ 31,1919-ಅಕ್ಟೋಬರ್ 2005) (ಪಂಜಾಬಿ:ਅਮ੍ਰਿਤਾ ਪ੍ਰੀਤਮamritā prītam ಹಿಂದಿ:अमृता प्रीतमamr̥tā prītam ) ಇವರು ಭಾರತೀಯ ಬರೆಹಗಾರ್ತಿ ಮತ್ತು ಕವಿಯತ್ರಿಯಾಗಿದ್ದಾರೆ.ಮೊದಲ ಪಂಜಾಬೀ ಕವಿಯತ್ರಿ ಎಂದು ಇವರನ್ನು ಪರಿಗಣಿಸಲಾಗುತ್ತದೆ.ಕಾದಂಬರಿಗಾರ್ತಿ,ಪ್ರಬಂಧಗಾರ್ತಿ ಅಷ್ಟೇ ಅಲ್ಲದೇ 20ನೆಯ ಶತಮಾನದ ಪಂಜಾಬೀ ಭಾಷೆಯ ಕವಿಯತ್ರಿ ಎನ್ನಲಾಗುತ್ತಿದೆ.ಅವರು ಭಾರತ-ಪಾಕಿಸ್ತಾನಗಳೆರಡರ ಗಡಿಗಳ ಬಗ್ಗೆ ಸಮಾನ ಒಲವು ಹೊಂದಿದ್ದರು.ಸುಮಾರು ಆರು ದಶಕಗಳ ಅವರ ವೃತ್ತಿ ಜೀವನದಲ್ಲಿ ಸುಮಾರು 100ಕ್ಕಿಂತ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.ಇದರಲ್ಲಿ ಕವಿತೆ-ಕಾವ್ಯ,ಕಾಲ್ಪನಿಕ ಕಥಾನಕ,ಜೀವನ ಚರಿತ್ರೆಗಳು,ಪ್ರಭಂಧಗಳು,ಪಂಜಾಬೀ ಜನಪದ ಗೀತೆಗಳ ಸಂಗ್ರಹವೂ ಒಂದಾಗಿದೆ.ಅವರ ಜೀವನ ಚರಿತ್ರೆಯು ಹಲವು ಭಾರತೀಯ ಮತ್ತು ವಿದೇಶೀ ಭಾಷೆಗಳಲ್ಲಿ ಮುದ್ರಣ ಕಂಡಿದೆ.[೨][೩]
ಅವರ ಅತ್ಯಂತ ಹೃದಯಸ್ಪರ್ಶಿಯಾದ ಕವಿತೆ ಯಾವಾಗಲೂ ಎಲ್ಲರಲ್ಲೂ ನೆನಪಿನ ಮರುಕದ ಸ್ಪೂರ್ತಿ ತುಂಬುತ್ತದೆ.ಆಜ್ ಆಖಾಂಹ್ ವಾರಿಸ್ ಶಾಹ್ ನು (ಇಂದು ನಾನು ಅನಾಥ ಬಂಧು ವಾರಿಸ್ ಶಾನನ್ನು ಪ್ರಾರ್ಥಿಸುತ್ತೇನೆ-"ವಾರಿಸ್ ಶಾನಿಗೆ ಶ್ಲಾಘನೆಯ ಪ್ರಾರ್ಥನೆ")ಇದೊಂದು 18-ನೆಯ ಶತಮಾನದ ಪಂಜಾಬೀ ಕವಿಯತ್ರಿಯ ಚರಮಗೀತೆ ಎನ್ನಲಾಗುತ್ತದೆಭಾರತ ವಿಭಜನೆಯ ಸಂದರ್ಭದಲ್ಲಿನ ನರಮೇಧವನ್ನು ಕಂಡು ಮಮ್ಮಲನೆ ಮರಗಿದ ಆ ಜೀವ ಆತಂಕದಿಂದ ಘಾಸಿಗೊಂಡಿತ್ತು. ಅವರು ಓರ್ವ ಕಾದಂಬರಿಕಾರರಾಗಿ ಅತ್ಯುತ್ತಮ ಕೃತಿ ಪಿಂಜಾರ್ (ಅಸ್ಥಿಪಂಜರ)(1950)ದಲ್ಲಿ ಅತ್ಯುತ್ತಮ ಪಾತ್ರ ಪುರೊ ವನ್ನು ಸೃಷ್ಟಿಸಿದ್ದಾರೆ,ಒಟ್ಟಾರೆ ಈ ಕಥೆಯ ಸಾರರೂಪವೆಂದರೆ ಆಗ ಮಹಿಳೆಯರ ಮೇಲೆ ನಡೆದ ಅಮಾನವೀಯ ದೌರ್ಜನ್ಯ,ಮರೆತ ಮಾನವೀಯತೆ ಅಲ್ಲದೇ ಅಂತಿಮವಾಗಿ ಅಸ್ತಿತ್ವಕ್ಕಾಗಿ ಶರಣಾಗತಿಯ ದುರ್ಗತಿ ಒದಗಿ ಬಂದಿದ್ದನ್ನು ಕಣ್ಣೀರಿನ ಕಥೆಯಾಗಿ ಚಿತ್ರಿಸಿದ್ದಾರೆ.ಈ ಕಾದಂಬರಿಯನ್ನು ಪಿಂಜಾರ್ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿಸಿದಾಗ ಅದು 2003 ರಲ್ಲಿ ಪ್ರಶಸ್ತಿಗೆ ಪಾತ್ರವಾಯಿತು.[೪][೫]
ಯಾವಾಗ ಬ್ರಿಟಿಶ್ ಆಡಳಿತದ ಭಾರತವು 1947 ರಲ್ಲಿ ಎರಡು ರಾಜ್ಯಗಳಾಗಿ ಭಾರತ ಮತ್ತು ಪಾಕಿಸ್ತಾನಗಳೆಂದು ಇಭ್ಹಾಗವಾಯಿತೋ ಆಗ ಅವರು ಲಾಹೋರ್ ನಿಂದ ಭಾರತಕ್ಕೆ ವಲಸೆ ಬಂದರು.ಆದರೆ ತಮ್ಮ ಜೀವಿತದುದ್ದಕ್ಕೂ ಎರಡೂ ದೇಶಗಳಲ್ಲಿ ಅಷ್ಟೇ ಜನಪ್ರಿಯರಾಗಿದ್ದರು.ಇನ್ನುಳಿದ ಸಮಕಾಲೀನರಾದ ಮೋಹನ್ ಸಿಂಗ್ ಮತ್ತು ಶಿವಕುಮಾರ ಬಾಟಲ್ವಿ ಅವರುಗಳಿಗೆ ಹೋಲಿಸಿದರೆ ಅಮೃತಾ ಎರಡೂ ಕಡೆಯ ಪ್ರೀತಿ-ಅಭಿಮಾನಕ್ಕೆ ಭಾಜನರಾಗಿದ್ದರು.
ಪಂಜಾಬೀ ಸಾರಸ್ವತ ಲೋಕದಲ್ಲಿ ಅವರು ಮಹಿಳೆಯರ ಅತ್ಯಂತ ಮಹತ್ವದ ಧ್ವನಿಯಾಗಿದ್ದರು.ಅವರು 1956 ರಲ್ಲಿ ಸಾಹಿತ್ಯ ಅಕಾಡಮಿ ಅವಾರ್ಡ್ ಪಡೆಯುವ ಮೂಲಕ ಮೊದಲ ಮಹಿಳೆಯಾದರು.ಅವರ ಕೃತಿ ಮ್ಯಾಗ್ನಮ್ ಒಪಸ್ ಒಂದು ನೀಳ ಕವಿತೆ,ಸುನೆಹೆ (ಸಂದೇಶಗಳು)[೬] ಉತ್ತಮ ಕಾವ್ಯಕ್ಕೆ ಈ ಗೌರವ ಸಂದಿತು.ನಂತರ ಆಕೆ ಭಾರತೀಯ ಜ್ಞಾನಪೀಠ,ಭಾರತದ ಅತ್ಯುತ್ತಮ ಸಾಹಿತ್ಯ ಗೌರವವಾಗಿದೆ.ಅವರಿಗೆ 1982 ರಲ್ಲಿ ಕಾಗಜ್ ತೆ ಕ್ಯಾನ್ವಾಸ್ (ಕಾಗದ ಮತ್ತು ಅದರ ವ್ಯಾಪ್ತಿ) ಎಂಬ ಕೃತಿಗೆ ಈ ಪ್ರಶಸ್ತಿ ದೊರಕಿತು. ಅವರಿಗೆ 1969 ರಲ್ಲಿ ಪದ್ಮಶ್ರೀ ಗೌರವ ನೀಡಲಾಯಿತು.ಅಂತಿಮವಾಗಿ ಅವರು 2004 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೂ ಪಾತ್ರರಾದರು.ಭಾರತದ ಅತ್ಯುನ್ನತ ನಾಗರಿಕ ಸನ್ಮಾನ ಇದಾಗಿದೆ.ಅದೇ ವರ್ಷ ಅವರು ಸಾಹಿತ್ಯ ಅಕಾಡಮಿ ಅವಾರ್ಡ್ (ಇಂಡಿಯಾಸ್ ಅಕಾಡಮಿ ಆಫ್ ಲೆಟರ್ಸ್)ಸಾಹಿತ್ಯ ಅಕಾಡಮಿ ಫೆಲೊಶಿಪ್ ನೀಡಿ ಅವರನ್ನು ಸತ್ಕರಿಸಲಾಯಿತು.ಅದನ್ನು ಅವರಿಗೆ "ಇಮ್ಮೊರಟಲ್ಸ್ ಆಫ್ ಲಿಟರೇಚರ್" ಅಂದರೆ ಜೀವಮಾನ ಸಾಹಿತ್ಯ ಸಾಧನೆಗೆ ಈ ಸನ್ಮಾನ ಸಂದಿದೆ.[೭]
ಜೀವನ ಚರಿತ್ರೆ
[ಬದಲಾಯಿಸಿ]ಆಕಾರ ನೀಡಿದ ವರ್ಷಗಳು
[ಬದಲಾಯಿಸಿ]ಅಮೃತಾ ಪ್ರೀತಮ್ ಅವರು 1919 ರಲ್ಲಿ ಪಂಜಾಬ್ ನ ಗುಜ್ರನವಾಲಾದಲ್ಲಿ ಜನಿಸಿದರು.ಅದೀಗ ಪಾಕಿಸ್ತಾನದಲ್ಲಿದೆ.[೨] ಶಾಲಾಶಿಕ್ಷಕ,ಕವಿ,ಬ್ರಜ್ ಭಾಷಾ ವಿದ್ವಾಂಸ ಕರ್ತಾರ ಸಿಂಗ್ ಹಿತಕಾರಿ ಅವರ ಏಕೈಕ ಪುತ್ರಿಯಾಗಿ ಅವರು ಜನಿಸಿದ್ದರು.ಅವರ ತಂದೆ ಸಾಹಿತ್ಯಕ ಪತ್ರಿಕೆಯೊಂದಕ್ಕೆ ಸಂಪಾದಕರಾಗಿಯೂ ದುಡಿದಿದ್ದರು.[೮][೯] ಅಷ್ಟೇ ಅಲ್ಲದೇ ಅವರು ಸಿಖ್ಖ ಮತದ ಪ್ರಚಾರಕ ರಾಗಿ,-ಓರ್ವ ಬೋಧಕರಾಗಿದ್ದರು.[೧೦] ಅಮೃತಾ ಅವರು ಕೇವಲ ಹನ್ನೊಂದು ವರ್ಷದವರಿದ್ದಾಗ ಅವರ ತಾಯಿ ಮೃತರಾಗಿದ್ದರು. ಅದರ ನಂತರವೇ ಆಕೆಯ ತಂದೆ ಲಾಹೋರ್ ಗೆ ತೆರಳಿದರು;ಅದಾದ ಮೇಲೆ 1947 ರಲ್ಲಿ ಭಾರತಕ್ಕೆ ವಲಸೆ ಬರುವವರೆಗೂ ಅವರು ಅಲ್ಲಿಯೇ ನೆಲೆಸಿದ್ದರು. ತಮ್ಮ ಪ್ರೌಢಾವಸ್ಥೆಯಲ್ಲಿನ ಜವಾಬ್ದಾರಿಗಳೊಂದಿಗೆ ಅವರು ತಾಯಿಯಿಲ್ಲದೇ ಒಂಟಿತನ ಅನುಭವಿಸಿದರು.ಇದರಿಂದಾಗಿ ಅವರು ಎಳೆವಯಸ್ಸಿನಲ್ಲೇ ಬರೆಹದೆಡೆಗೆ ವಾಲಿದರು. ಅವರ ಮೊದಲ ಕವನ ಸಂಗ್ರಹ ಅಮೃತ ಲೆಹೆರಾನ್ (ಇಮ್ಮೊರ್ಟಲ್ ವೇವ್ಸ್)ಅವರು 16ನೆಯ ವಯಸ್ಸಿನವರಾದಾಗ,1936 ರಲ್ಲಿ ಪ್ರಕಟವಾಯಿತು.ಅದೇ ವರ್ಷ ಅವರು ಪ್ರೀತಮ ಸಿಂಗ್ ಅವರನ್ನು ವಿವಾಹವಾದರು.ಅವರೊಬ್ಬ ಸಂಪಾದಕರಾಗಿದ್ದರಲ್ಲದೇ ಬಾಲ್ಯಾವಸ್ಥೆಯಿಂದಲೂ ಅಮೃತಾಳನ್ನು ಬಲ್ಲವರಾಗಿದ್ದರು.[೧೧] ಹೀಗೆ 1936 ರಿಂದ 1943 ರ ಅವಧಿಯ ವರೆಗೆ ಅವರ ಅರ್ಧ ಡಜನ್ ನಷ್ಟು ಕವನಸಂಕಲನಗಳು ಬೆಳಕು ಕಂಡವು. ಅವರು ತಮ್ಮ ಕವಿತೆ-ಕವನಗಳನ್ನು ರೋಮಾಂಚಕಾರಿ ಪ್ರೇಮದ ವಸ್ತು ವಿಷಯಗಳಿಗೆ ಮೀಸಲಿಟ್ಟಿದ್ದರೂ ಅವರು ನಂತರ ತಮ್ಮ ಭಾವನೆಗಳಿಗೆ ತಿರುವು[೬] ನೀಡಿದರಲ್ಲದೇ ಪ್ರೊಗ್ರೆಸ್ಸಿವ್ ರೈಟರ್ಸ್ ಮೂಮೆಂಟ್ ನ ಭಾಗವಾದರು.ಇದರ ಪ್ರಭಾವವನ್ನು ಅವರ ಸಂಗ್ರಹಗಳಾದ ಲೋಕ ಪೀಡ್ (ಜನರ ಆಕ್ರೋಶ)(1944);ನಲ್ಲಿ ಕಾಣಬಹುದು,ಇದು ಸರ್ಕಾರದ ವಿರುದ್ದದ ಟೀಕಾಸ್ತ್ರವಾಗಿತ್ತು.ಇದು ಬಹುಮುಖ್ಯವಾಗಿ ಯುದ್ದಪೀಡಿತ ಆರ್ಥಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿತ್ತುಬಂಗಾಳದಲ್ಲಿನ 1943 ರ ಬರಗಾಲದ ಪರಿಸ್ಥಿತಿಯ ಅವಲೋಕನವಿತ್ತು. ಅವರು ಕೆಲಕಾಲ ಭಾರತದ ಇಭ್ಭಾಗದ ಮುಂಚೆ ಲಾಹೊರ್ ಆಕಾಶವಾಣಿ ಕೇಂದ್ರದಲ್ಲಿ ಕೆಲಸ ಮಾಡಿದರು.[೧೨]
ಇಬ್ಭಾಗ
[ಬದಲಾಯಿಸಿ]ಆಗ 1947ರಲ್ಲಿ ಭಾರತ ಇಭ್ಭಾಗದ ನಂತರ ಸುಮಾರು ಒಂದು ದಶಲಕ್ಷದಷ್ಟು ಮುಸ್ಲಿಮರು,ಹಿಂದುಗಳು ಮತ್ತು ಸಿಖ್ಖರು ಕೋಮುಗಲಭೆಗಳಲ್ಲಿ ಮೃತಪಟ್ಟರು.ಆಗ 28 ವರ್ಷ ವಯಸ್ಸಿನ ಅಮೃತಾ ಪ್ರೀತಮ್ ಲಾಹೊರ್ ನಲ್ಲಿನ ಪಂಜಾಬೀ ನಿರಾಶ್ರಿತರ ತಾಣದಿಂದ ನವದೆಹಲಿಗೆ ತೆರಳಿದರು. ನಂತರ 1948 ರಲ್ಲಿ ಅವರು ತಮ್ಮ ಪುತ್ರನನ್ನು ಒಡಲಲ್ಲಿ ಹೊತ್ತಾಗ ಡೆಹರಾಡೂನ್ ನಿಂದ ದೆಹಲಿಗೆ ಪ್ರಯಾಣಿಸುವ ಸಂದರ್ಭದಲ್ಲಿ ತಮ್ಮ ಆಕ್ರೋಶವನ್ನು ತುಂಡು ಕಾಗದವೊಂದರ [೧೩] ಮೇಲೆ ಕಾಣಿಸಿ ಅದಕ್ಕೆ ಉಗ್ರ ಕವನದ ರೂಪ ಕೊಟ್ಟರು.ಆ ಕವಿತೆ,"ಆಜ್ ಅಖಾನ್ ವಾರಿಸ್ ಶಾಹ್ ನು" (ನಾನಿಂದು ಶಾಹ್ ನು ವಾರಿಸ್ ನನ್ನು ಪ್ರಶ್ನಿಸುತ್ತಿದ್ದೇನೆ)ಈ ಕವಿತೆ ನಂತರ ಬಹಳ ಜನಪ್ರಿಯವಾಗಿ ಜನಮಾನಸದಲ್ಲಿ ಸ್ಥಿರಸ್ಥಾಯಿಯಾಯಿತು.ಭಾರತ ಇಭ್ಭಾಗದ ಅತ್ಯಂತ ಭಯಾನಕ ಕರಾಳ ನೆನಪಾಗಿ ಎಲ್ಲರನ್ನು ಕಾಡಿತು.[೧೪] ಈ ಕವನವು ಸೂಫಿ ಕವಿ ವಾರಿಸ್ ಶಾಹ,ಅವರು ಬರೆದ ಕರುಣಾಜನಕ ಹೀರ್ ಅಂಡ್ ರಂಜಾಹ್ ರ ಕಥಾನಕದ ಗ್ರಂಥವಾಗಿದೆ.ಅವರು ಜನಿಸಿದ ಸ್ಥಳಲ್ಲಿಯೇ ಕವಿಯತ್ರಿ ಜನಿಸಿದ್ದಾರೆ.ಪಂಜಾಬೀ ರಾಷ್ಟ್ರೀಯ ಮಹಾಗ್ರಂಥದ ಮೂಲಸ್ಥಳವೂ ಇದಾಗಿದೆ:[೧೫]
ಕವನಗಳು
[ಬದಲಾಯಿಸಿ]ਅੱਜ ਆਖਾਂ ਵਾਰਸ ਸ਼ਾਹ ਨੂੰ ਕਿਤੋਂ ਕਬਰਾਂ ਵਿਚੋਂ ਬੋਲ। ਤੇ ਅੱਜ ਕਿਤਾਬੇ ਇਸ਼ਕ ਦਾ ਕੋਈ ਅਗਲਾ ਵਰਕਾ ਫੋਲ।
ਇਕ ਰੋਈ ਸੀ ਧੀ ਪੰਜਾਬ ਦੀ ਤੂ ਲਿਖ ਲਿਖ ਮਾਰੇ ਵੈਣ
ਅਜ ਲੱਖਾਂ ਧੀਆਂ ਰੌਂਦੀਆਂ ਤੈਨੂ ਵਾਰਸਸ਼ਾਹ ਨੂੰ ਕਹਿਣ:
ਵੇ ਦਰਦਮੰਦਾਂ ਦਿਆ ਦਰਦੀਆ ਉੱਠ ਤੱਕ ਆਪਣਾ ਪੰਜਾਬ। ਅਜ ਬੇਲੇ ਲਾਸ਼ਾਂ ਵਿਛੀਆਂ ਤੇ ਲਹੂ ਦੀ ਭਰੀ ਚਨਾਬ [೧೬]
ಆಜ್ ಆಖಾನ್ ವಾರಿಸ್ ಶಾಹ್ ನುನ್,ಕಿತೊನ್ ಕಬ್ರಾನ್ ವಿಚ್ಚೊನ್ ಬೋಲ್,
ತೆ ಆಜ್ ಕಿತಾಬ್-ಇ-ಇಶ್ಕ್ ಕೊಯಿ ಅಗ್ಲಾ ವರ್ಕಾ ಫೂಲ್
ಈಕ್ ರೊಯಿ ಸಿ ಧಿ ಪಂಜಾಬ್ ದಿ,ತುನ್ ಲಿಖ್ ಲಿಖ್ ಮಾರೆ ವೆಯೆನ್,
ಆಜ್ ಲಾಖಾಹ್ ಧಿಯೆನ್ ಒಂಡಿಯನ್,ತೇನುನ್ ವಾರಿಸ್ ಶಾಹ್ ನೋನ್ ಕೆಹೆನ್
ಉಥ್ ದರ್ದ್ ಮಂಡಾನ್ ದಿಯಾ ದರ್ದಿಯಾ,ಉಥ್ ತಕ್ಕ್ ಅಪ್ನಾ ಪಂಜಾಬ್
ಆಜ್ ಬೆಲೆ ಲಾಶಾನ್ ಬಿಚ್ಚಿಯಾನ್ ತೆ ಲಾಹು ದಿ ಭರಿ ಚೆನಾಬ್
ನಾನಿಂದು, ವಾರಿಸ್ ಶಾ ಅವರು ತಮ್ಮ "ಸಮಾಧಿಯಿಂದೆದ್ದು ಮಾತನಾಡು"ವಂತೆ ಕರೆ ನೀಡುತ್ತೇನೆ.
ಅದಲ್ಲದೇ ಪ್ರೇಮ ಪುಸ್ತಕದ ವಾತ್ಸಲ್ಯದ ಮತ್ತೊಂದು ಪುಟದತ್ತ ವಾಲುತ್ತೇನೆ
ಒಮ್ಮೆ ಈ ಪಂಜಾಬದ ಪುತ್ರಿ ಅತ್ತಾಗ ನೀವು ಆ ಕರುಣಾಜನಕದ ಹಾದಿಯನ್ನು ಬರೆದಿದ್ದೀರಿ.
ಇಂದು,ದಶಲಕ್ಷದಷ್ಟು ನಿನ್ನ ಪುತ್ರಿಯರು ರೋದಿಸುತ್ತಿದ್ದಾರೆ,ವಾರಿಶ್ ಶಾಹ್ ರಿಗೆ ಅವರು ಪ್ರಾರ್ಥಿಸುತ್ತಿದ್ದಾರೆ.
ಏರಿಕೆ ಓ' ಈ ಜಗದ ದುಖಃ ಪರಿಹಾರಕನೇ;ಏಳು ಎದ್ದೇಳು! ನೋಡು ನಿನ್ನ ಪಂಜಾಬದೆಡೆಗೆ
ಇಂದು ಎಲ್ಲೆಡೆಗೂ ಮೈದಾನದಲ್ಲಿ ಶವಗಳ ರಾಶಿ ಬಿದ್ದಿದೆ,ರಕ್ತ ಚೆನಾಬ್ ನ ಸರೋವರವಾಗಿದೆ.[೧೭][೧೮]
ಸಾಹಿತ್ಯ
[ಬದಲಾಯಿಸಿ]ಅಮೃತಾ ಪ್ರೀತಮ್ ಅವರು ಪಂಜಾಬ್ ಸೇವೆಯಲ್ಲಿನ ದೆಹಲಿಯ ಆಲ್ ಇಂಡಿಯಾ ರೇಡಿಯೊ ದಲ್ಲಿ 1961 ವರೆಗೆ ಕೆಲಸ ಮಾಡುತ್ತಿದ್ದರು. ಅವರ ವಿವಾಹ ವಿಚ್ಛೇದನದ ನಂತರ ಅವರ ಬರೆಹಗಳು ಪರಿಪೂರ್ಣ ಮಹಿಳಾಪರವಾಗಿ ಹೊರಬಂದವು. ಹಲವಾರು ಕಥೆಗಳು ಮತ್ತು ಕವಿತೆಗಳು ಅವರ ವಿವಾಹದ ಅಹಿತಕರ ಅನುಭವಗಳ ಸಾರವಾಗಿವೆ. ಅವರ ಹಲವಾರು ಕೃತಿಗಳು ಇಂಗ್ಲೀಷ್, ಫ್ರೆಂಚ್, ಡ್ಯಾನಿಶ್, ಜಪಾನೀಸ್ಭಾಷೆಗಳಿಗೆ ಅನುವಾದ ಕಂಡಿವೆ.ಅದಲ್ಲದೇ ಪಂಜಾಬಿ ಮತ್ತು ಉರ್ದು,ಭಾಷೆಗಳಲ್ಲಿಯೂ ಪ್ರಕಟಗೊಂಡಿವೆ.ಅವರ ಜೀವನ ಚರಿತ್ರೆಯ ಕೃತಿಗಳಾದ ಬ್ಲ್ಯಾಕ್ ರೋಜ್ ಮತ್ತು ರೆವಿನ್ಯು ಸ್ಟಾಂಪ್ (ರಸೀದಿ ಟಿಕ್ಕಟ್ ಪಂಜಾಬಿಯಲ್ಲಿ) ಪ್ರಕಾಶನಗೊಂಡಿವೆ. ಅಮೃತಾ ಪ್ರೀತಮ್ ಅವರ ಧರ್ತಿ ಸಾಗರ್ ತೆ ಸಿಪ್ಪಿಯಾನ್ ನನ್ನು 'ಕದಂಬರ್'(1965)ಎಂಬ ಹೆಸರಿನಲ್ಲಿ ಚಲನಚಿತ್ರವಾಗಿಸಿದ ಮೊದಲ ಕೃತಿಯಾಗಿದೆ.ಅದರ ನಂತರ 'ಉನಾಹ್'ದಿ ಕಹಾನಿ' ಇದನ್ನು ಡಾಕು (ಡಕಾಯತ)1976) ಇದನ್ನು ಬಸು ಭಟ್ಟಾಚಾರ್ಯ ಅವರು ನಿರ್ದೇಶಿಸಿದ್ದಾರೆ.[೧೯] ಅವರ ಕಾದಂಬರಿ ಪಿಂಜಾರ (ದಿ ಸ್ಕೆಲೆಟನ್-ಅಸ್ಥಿಪಂಜರ 1970)ಕಥೆಯನ್ನು ಪ್ರಶಸ್ತಿ ಗಿಟ್ಟಿಸುವ ಹಿಂದಿ ಚಲನಚಿತ್ರವಾಗಿಸಿದವರು ಚಂದ್ರಪ್ರಕಾಶ ದ್ವಿವೇದಿ,ಅದರ ಮಾನವೀಯ ಮೌಲ್ಯಗಳ ಮೂಲಕ ಅದು ಜನಪ್ರಿಯವಾಯಿತು."ಅಮೃತಾಜಿ ಅವರು ಎರಡೂ ದೇಶಗಳ ಜನತೆಯ ಕಣ್ಣೀರ ಕಥೆಯನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ." ಪಿಂಜಾರ ಚಿತ್ರವನ್ನು ರಾಜಸ್ಥಾನ ಮತ್ತು ಪಂಜಾಬ ರಾಜ್ಯಗಳ ಗಡಿ ಭಾಗಗಳಲ್ಲಿ ಚಿತ್ರಿಸಲಾಗಿದೆ. ಅವರು "ನಾಗಮಣಿ" ಎಂಬ ಪಂಜಾಬಿ ಭಾಷೆಯಲ್ಲಿ ಸಾಹಿತ್ಯಿಕ ಮಾಸಿಕ ಪತ್ರಿಕೆಗೆ ಸುಮಾರು 33 ವರ್ಷಗಳ ವರೆಗೆ ಸಂಪಾದಕರಾಗಿದ್ದರು.ಅವರು ಇಮ್ರೊಜ್ ರೊಂದಿಗೆ ಇದನ್ನು ಹೊರಡಿಸುತ್ತಿದ್ದರು.ನಂತರ ಅವರು ಹಿಂದಿಯೆಡೆಗೆ ವಾಲಿದರು.[೨೦][೨೧] ನಂತರ ಅವರು ಜೀವನದಲ್ಲಿ ಒಶೊರೆಡೆಗೆ ತಮ್ಮ ಒಲವನ್ನು ಹರಿಸಿದರು.ಒಶೊ ಅವರ ಹಲವಾರು ಪುಸ್ತಕಗಳಿಗೆ ಪರಿಚಯ ಬರೆದಿದ್ದಾರೆ.ಅದರಲ್ಲಿ ಏಕ್ ಓಂಕಾರ್ ಸತ್ನಮ್ ,ಒಂದಾಗಿದೆ.ಅವರು ಆನಂತರ ಆಧ್ಯಾತ್ಮ ಕುರಿತು ಅದರ ತತ್ವ ಮತ್ತು ಕನಸುಗಳ ಬಗ್ಗೆ ಬರೆಯಲು ಪ್ರಾರಂಭಿಸಿದರು.ಅದರಲ್ಲಿ ಕಾಲ್ ಚೆತ್ನಾ (ಸಮಯ ಪ್ರಜ್ಞೆ) ಮತ್ತು ಅಗ್ಯತ್ ಕಾ ನಿಮಂತ್ರಣ (ಅನಾಮೇಧೇಯನ ಕರೆ)ಇತ್ಯಾದಿಗಳನ್ನು ಅವರು ಪ್ರಕಟಿಸಿದ್ದಾರೆ.[೨೨][೨೩] ಅವರು ಹಲವಾರು ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ.ಅದರಲ್ಲಿ ಕಾಲಾ ಗುಲಾಬ್ (ಕಪ್ಪು ಗುಲಾಬಿ)(1968),ರಸೀದಿ ಟಿಕೆಟ್ (ದಿ ರೆವ್ಯುನ್ಯು ಸ್ಟ್ಯಾಂಪ್)(1976),ಮತ್ತು ಅಕ್ಷರೋಂ ಕಾಯ್ ಸಾಯೇ (ಶಾಡೋಜ್ ಆಫ್ ವರ್ಡ್ಸ್)ಪ್ರಮುಖ ಶೀರ್ಷಿಕೆಯನ್ನೊಳಗೊಂಡಿವೆ.[೮][೨೪]
ಶ್ಲಾಘನೆ
[ಬದಲಾಯಿಸಿ]ಪಂಜಾಬ್ ರತನ್ ಅವಾರ್ಡ್ ಪಡೆಯುವಲ್ಲಿ ಅವರು ಮೊದಲಿಗರಾಗಿದ್ದಾರೆ.ಅದನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್.ಅಮರಿಂದರ್ ಸಿಂಗ್ ಅವರು ಪ್ರದಾನ ಮಾಡಿದರು. ಅವರು 1956 ರಲ್ಲಿ ಸಾಹಿತ್ಯ ಅಕಾಡಮಿ ಅವಾರ್ಡ್ ಪಡೆದ ಮೊದಲ ಮಹಿಳೆಯಾಗಿದ್ದಾರೆ.ಅವರ ಸುನೆಹ್ರೆಯ್ (ಸಂದೇಶಗಳು )ಕೃತಿಗಾಗಿ ಇದನ್ನು ನೀಡಲಾಗಿದೆ.ಅಮೃತಾ ಪ್ರೀತಮ್ ಅವರು ಭಾರತದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಭಾರತೀಯ ಜ್ಞಾನ ಪೀಠ ದ ಗೌರವಕ್ಕೂ ಪಾತ್ರರಾಗಿದ್ದಾರೆ.ಅದನ್ನು 1982 ರಲ್ಲಿ ಕಾಗಜ್ ತೆ ಕ್ಯಾನ್ವಾಸ್ (ಪೇಪರ್ ಅಂಡ್ ಕ್ಯಾನ್ವಾಸ್)ಗೆ ಕೊಡಲಾಗಿದೆ.[೨೫] ಅವರು ಪದ್ಮಶ್ರೀ(1969)ಮತ್ತು ಭಾರತದ ಎರಡನೆಯ ಅತಿದೊಡ್ಡ ನಾಗರಿಕ ಸನ್ಮಾನವಾದ ಪದ್ಮವಿಭೂಷಣವನ್ನೂ ಪಡೆದರು.ಅದಲ್ಲದೇ ಭಾರತದ ಅತಿದೊಡ್ಡ ಸಾಹಿತ್ಯ ಪ್ರಶಸ್ತಿ ಎನಿಸಿದ ಸಾಹಿತ್ಯ ಅಕಾಡಮಿ ಫೆಲೊಶಿಪ್ ನ್ನು 2004 ರಲ್ಲಿ ಪಡೆದರು. ಅದಲ್ಲದೇ ಅವರು ಹಲವು ವಿಶ್ವವಿದ್ಯಾಲಯಗಳಿಂದ ಡಿ.ಲಿಟ್. ಪದವಿಗಳ ಗೌರವಕ್ಕೂ ಪಾತ್ರರಾಗಿದ್ದಾರೆ,ಅದರಲ್ಲಿ ದೆಹಲಿ ಯುನ್ವರ್ವಸಿಟಿ (1973), ಜಬಲಪುರ್ ಯುನ್ವರ್ವಸಿಟಿ (1973) ಮತ್ತು ವಿಶ್ವ ಭಾರತಿ (1987)ಒಳಗೊಂಡಿವೆ.[೨೬] ಅವರು ಇಂಟರ್ ನ್ಯಾಶನಲ್ ವಾಪ್ತ್ ಸರೊವ್ ಅವಾರ್ಡ್ ನ್ನು ರಿಪಬ್ಲಿಕ್ ಆಫ್ ಬಲ್ಗೇರಿಯಾದಿಂದ (1979)ರಲ್ಲಿ ಮತ್ತು ಡಿಗ್ರೀ ಆಫ್ ಆಫೀಸರ್ ಡೆನ್ಸ್ ಆರ್ಡರೆ ದೆಸ್ ಆರ್ಟ್ಸ್ ಎಟ್ ದೆಸ್ ಲೆಟ್ಟರ್ಸ್ (ಆಫೀಸಿಯರ್)ಇದನ್ನು ಫ್ರೆಂಚ್ ಸರ್ಕಾರ್ (1987) ದಿ6ದ ಪದೆದಿದ್ದಾರೆ.[೨೦] ಅವರನ್ನು 1986-92 ರ ವರೆಗಿನ ಅವಧಿಗೆ ರಾಜ್ಯ ಸಭೆ ಸದಸ್ಯರನ್ನಾಗಿ ನಾಮಕರಣ ಮಾಡಲಾಗಿತ್ತು. ಅವರ ಕಡೆಯ ದಿನಗಳಲ್ಲಿ ಅವರಿಗೆ ಪಾಕಿಸ್ತಾನದ ಪಂಜಾಬಿ ಅಕಾಡಮಿ ಅವರನ್ನು ಗುರುತಿಸಿ ಪ್ರಶಸ್ತಿಯ ಗೌರವ ಸಲ್ಲಿಸಿತು.ಅದಕ್ಕೆ ಅವರು ಪ್ರತಿಕ್ರಿಯಿಸಿದ್ದು ಹೀಗೆ ಬಡೆ ದಿನೊ ಬಾದ್ ಮೇರೆ ಮೈಕೆ ಕೊ ಮೇರಿ ಯಾದ್ ಆಯೀ.. ;ಅದಲ್ಲದೇ ಪಾಕಿಸ್ತಾನದ ಪಂಜಾಬಿ ಕವಿಗಳು ಅವರಿಗೆ ಚದ್ದರ್ ವೊಂದನ್ನು ಗೌರವ ಸೂಚಕವಾಗಿ ನೀಡಲಾಯಿತು.ಈ ಚದ್ದರ್ ನ್ನು ವಾರಿಸ್ ಶಾಹ್ ಅವರ ಗದ್ದುಗೆ ಮೇಲಿಂದ ಅಲ್ಲದೇ ಸೂಫಿ ಪುರಾಣ ಪುರುಷರೆನಿಸಿದ ಕವಿಗಳು ಬುಲ್ಲೆ ಶಾಹ್ ಮತ್ತು ಸುಲ್ತಾನ್ ಬಾಹು ಅವರ ಆಶೀರ್ವಾದದಿಂದ ಇದು ದೊರಕಿತು.[೨]
ವೈಯಕ್ತಿಕ ಜೀವನ
[ಬದಲಾಯಿಸಿ]ಅಮೃತಾ ಅವರು ಸಿದ್ದ ಉಡುಪು ಮಾರಾಟದ ಮುಂಚೂಣಿಯಲ್ಲಿದ್ದ ಲಾಹೋರ್ ದ ಅನಾರಕಲಿ ಬಜಾರ್ ನ ವ್ಯಾಪಾರಿಯ ಪುತ್ರ ಪ್ರೀತಮ್ ಸಿಂಗ್ ಅವರನ್ನು 1935 ರಲ್ಲಿ ವಿವಾಹವಾದರು. ಅಮೃತಾ ಪ್ರೀತಮ್ 1960 ರಲ್ಲಿ ತಮ್ಮ ಪತಿಯನ್ನು ಬಿಟ್ಟು ಕವಿ ಸಾಹಿರ್ ಲುಧಿಯಾನ್ವಿ (ಅಬ್ದುಲ್ ಹಾಯೀ)ಅವರೊಂದಿಗೆ ಬಾಳ ಪಥದಲ್ಲಿ ಸಾಗುವ ನಿರ್ಧಾರ ಮಾಡಿದರು.[೨೭] ಈ ಪ್ರೇಮ ಕಥಾನಕವನ್ನು ಅವರು ತಮ್ಮ ಆತ್ಮಚರಿತ್ರೆ ರಸೀದಿ ಟಿಕೆಟ್ ನಲ್ಲಿ ಚಿತ್ರಿಸಿದ್ದಾರೆ. ಯಾವಾಗ ಇನ್ನೊಬ್ಬ ಮಹಿಳೆ ಸಾಹಿರ್ ಅವರ ಜೀವನ ಪ್ರವೇಶಿಸಿದಳೋ ಆಗ ಅವರು ಹೆಸರಾಂತ ಕಲಾವಿದ ಮತ್ತು ಬರೆಹಗಾರ ಇಮ್ರೊಜ್ ಅವರ ಸಂಗಾತಿಯಾದರು. ಅವರು ತಮ್ಮ ಕೊನೆಯ ನಲವತ್ತು ವರ್ಷಗಳನ್ನು ಇಮ್ರೊಜ್ ರೊಂದಿಗೆ ಕಳೆದರು,ಅವರ ಬಹುತೇಕ ಪುಸ್ತಕಗಳ ಮುಖಚಿತ್ರಗಳನ್ನು ಇಮ್ರೊಜ್ ರಚಿಸಿದ್ದಾರೆ. ಅವರ ಇಬ್ಬರ ಜೊತೆ ಬದುಕಿನ ವಿಷಯವಾದ ಪುಸ್ತಕ,ಅಮೃತಾ ಇಮ್ರೊಜ್:ಎ ಲೌ ಸ್ಟೊರಿ .[೨೮][೨೯] ದೀರ್ಘ ಕಾಲದ ಅನಾರೋಗ್ಯದ ನಂತರ ನಿದ್ರಾವಸ್ಥೆಯಲ್ಲಿಯೇ, ತಮ್ಮ 86 ನೆಯ ವಯಸ್ಸಿನಲ್ಲಿ ಅವರು ನವದೆಹಲಿಯಲ್ಲಿ ಅಕ್ಟೋಬರ್ 31,2005 ರಲ್ಲಿ ನಿಧನರಾದರು. ಅವರು ತಮ್ಮ ಸಂಗಾತಿ ಇಮ್ರೊಜ್, ಪುತ್ರಿ ಕಂಡ್ಲಾ,ಪುತ್ರ ನವರಾಜ್,ಸೊಸೆ ಅಲ್ಕಾ ಮತ್ತು ಮೊಮ್ಮಕ್ಕಳಾದ ಟೌರಸ್,ನೂರ್,ಅಮಾನ್ ಮತ್ತು ಶಿಲ್ಪಿ ಇವರನ್ನು ಅಗಲಿದ್ದಾರೆ.
ಕೃತಿಗಳು
[ಬದಲಾಯಿಸಿ]ಅವರು ತಮ್ಮ ಆರು ದಶಕಗಳ ವೃತ್ತಿ ಬದುಕಿನಲ್ಲಿ 28 ಕಾದಂಬರಿಗಳು,18 ಗದ್ಯ ಸಂಕಲನಗಳು,ಐದು ಸಣ್ಣ ಕಥೆಗಳು ಮತ್ತು 16 ಇನ್ನಿತರ ಬೇರೆಬೇರೆ ಗದ್ಯಸಾಹಿತ್ಯಗಳನ್ನು ರಚಿಸಿದ್ದಾರೆ.
- ಡಾಕ್ಟರ್ ದೇವ್
- ಕೋರೆ ಕಾಗಜ್, ಉಂಚಾಸ್ ದಿನ್
- ಸಾಗರ್ ಐರ್ ಸೀಪಿಯನ್
- ರಂಗ್ ಕಾ ಪತ್ತಾ
- ದಿಲ್ಲಿ ಕಿ ಗಾಲಿಯನ್
- ತೆರೆವ್ಹಾನ್ ಸೂರಜ್
- ಯಾತ್ರಿ
- ಜಿಲಾವತನ್ (1968)
ಆತ್ಮಕಥೆ
[ಬದಲಾಯಿಸಿ]- ರಸೀದಿ ಟಿಕೆಟ್ (1976)
- ಶಾಡೊಸ್ ಆಫ್ ವರ್ಡ್ಸ್ (2004)
ಸಣ್ಣ ಕಥೆಗಳು
[ಬದಲಾಯಿಸಿ]- ಕಹಾನಿಯಾ ಜೊ ಕಹಾನಿಯಾ ನಹಿ
- ಕಹಾನಿಯೊಂಕೆ ಆಂಗನ್ ಮೆ
- ಸ್ಟೆಂಚ್ ಆಫ್ ಕೆರೊಸಿನ್
ಕವನ ಸಂಕಲನಗಳು
[ಬದಲಾಯಿಸಿ]- ಅಮೃತ್ ಲೆಹರೆ (ಅಮೃತ ಅಲೆಗಳು)(1936)
- ಜಿಯುನ್ಡಾ ಜೀವನ್ (ದಿ ಎಕ್ಸೆಬೆರೆಂಟ್ ಲೈಫ್) (1939)
- ತ್ರೆಲ್ ಧೊತೆ ಫೌಲ್ (1942)
- O ಗೀತನ್ ವ್ಯಾಲಿಯಾ (1942)
- ಬದ್ಲಾಮ್ ದೆ ಲಾಲಿ (1943)
- ಸಾಂಜ್ ದೆ ಲಾಲಿ (1943)
- ಲೋಕ್ ಪೀರಾ (ದಿ ಪೀಪಲ್ಸ್ ಆಂಗ್ವಿಶ್) (1944)
- ಪಥರ್ ಗೀತೆಯ್ (ದಿ ಪೆಬ್ಬಲ್ಸ್) (1946)
- ಪಂಜಾಬಿ ದಿ ಆವಾಜ್ (1952)
- ಸುನೆಹೆರೆಯ್ (ಮೆಸೇಜಿಸ್) (1955) - ಸಾಹಿತ್ಯ ಅಕಾಡಮಿ ಅವಾರ್ಡ್
- ಅಶೋಕ ಚೆಟಿ (1957)
- ಕಸ್ತೂರಿ (1957)
- ನಾಗಮಣಿ (1964)
- ಏಕ್ ಸಿ ಅನಿತಾ (1964)
- ಚಕ್ ನಂಬರ್ ಛಟ್ಟಿ (1964)
- ಯುನಿಂಜಾ ದಿನ್ (49 ಡೇಯ್ಸ್) (1979)
- ಕಾಗಜ್ ತೆ ಕ್ಯಾನ್ವಾಸ್ (1981)- ಭಾರತೀಯ ಜ್ಞಾನಪೀಠ
- ಚುನಿ ಹುವೀ ಕವಿತಾಯೆ
ಸಾಹಿತ್ಯಿಕ ಪತ್ರಿಕೆ
[ಬದಲಾಯಿಸಿ]- ನಾಗಮಣಿ , ಕವಿತೆಗಳ ಮಾಸಿಕ.
ಸಾರಾಂಶಗಳು
[ಬದಲಾಯಿಸಿ]ಕವನಗಳು
ಸಿಗರೇಟ್ ಅಂಡ್ ಪೊಯಿಟ್ರಿ
ದೇರ್ ವಾಜ್ ಎ ಪೇನ್
ಐ ಇನ್ ಹೇಲ್ಡ್ ಇಟ್
ಕ್ವೈಟ್ಲಿ
ಲೈಕ್ ಎ ಸಿಗರೇಟ್
ಲೆಫ್ಟ್ ಬಿಹೈಂಡ್ ಆರ್ ಎ ಫಿವ್ ಸಾಂಗ್ಸ್
ಐಹ್ಯಾವ್ ಫ್ಲಿಕರೆಡ್ ಆಫ್
ಲೈಕ್ ಆಶಿಸ್
ಫ್ರಾಮ್ ದಿ ಸಿಗರೇಟ್.[೩೦]
ಕವನಗಳು
ಐ ಉಯಿಲ್ ಮೀಟ್ ಯು ಯೆಟ್ ಅಗೇನ್ (ಮೈ ತೇನು ಫಿರ್ ಮಿಲಂಗಿ )
ಐ ಉಯಿಲ್ ಮೀಟ್ ಯು ಯೆಟ್ ಅಗೇನ್
ಹೌ ಅಂಡ್ ವ್ಹೇರ್ ಐ ನೊ ನಾಟ್
ಪರ್ ಹ್ಯಾಪ್ಸ್ ಐ ಉಯಿಲ್ ಬಿಕಮ್ ಎ
ಫಿಗ್ಮೆಂಟ್ ಆಫ್ ಯುವರ್ ಇಮ್ಯಾಜಿನೇಶನ್
ಅಂಡ್ ಮೇಬಿ ಸ್ಪ್ರೆಡಿಂಗ್ ಮೈಸೆಲ್ಫ್
ಇನ್ ಎ ಮಿಸ್ಟಿರಿಯಸ್ ಲೈನ್
ಆನ್ ಯುವರ್ ಕ್ಯಾನ್ವಾಸ್
ಐ ಉಯಿಲ್ ಕೀಪ್ ಗೇಜಿಂಗ್ ಆಟ್ ಯು .[೩೧]
ಪರಂಪರೆ
[ಬದಲಾಯಿಸಿ]ಸುಮಾರು 2007 ರಲ್ಲಿ 'ಅಮೃತಾ ರಿಸೈಟೆಡ್ ಗುಲ್ಜರ್'ಎಂಬ ಹೆಸರಿನ ಒಂದು ಆಡಿಯೊ ಅಲ್ಬಮ್ ನ್ನು ಹೆಸರಾಂತ ಗೀತ ರಚನೆಗಾರ ಗುಲ್ಜಾರ್ ಅವರು ಅಮೃತಾ ಪ್ರೀತಮ್ ಅವರ ಹಲವು ಕವಿತೆಗಳಿಗೆ ಅವರು ಕಂಠ ದಾನ ಮಾಡಿದ್ದಾರೆ.[೩೨][೩೩] ಅವರ ಬಗ್ಗೆ ಚಿತ್ರವೊಂದು ಬರುವ ಹಾದಿಯಲ್ಲಿದೆ.[೩೪]
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಉಮಾ ತ್ರಿಲೋಕ್, ಅಮೃತಾ ಇಮ್ರೊಜ್:ಎ ಲೌ ಸ್ಟೊರಿ, ಪೆಂಗ್ವಿನ್ ಇಂಡಿಯಾ(2006) ISBN 0143100440
- ಇಂದ್ರ ಗುಪ್ತಾ, ಇಂಡಿಯಾಸ್’ 50 ಮೊಸ್ಟ್ ಇಲ್ಲುಸ್ಟ್ರೇಟೆಡ್ ಉಮೆನ್ ISBN 8188086193
- ಇಂಡಿಯನ್ ಫಿಕ್ಕನ್ ಇನ್ ಇಂಗ್ಲೀಷ್ ಟ್ರಾನ್ಸ್ಲೇಶನ್ - ಚಾಪ್ತ್ 4: ಕಮೆಂತ್ಸ್ ಆನ್ ಅಮೃತಾ ಪ್ರೀತಮ್ಸ್ ಮ್ಯಾಗ್ನೆಮ್ ಒಪಸ್: ದಿ ಸ್ಕೆಲೆಟೆನ್ (ಜಗದೇವ ಸಿಂಗ್), ಬೈ ಶುಭಾ ತಿವಾರಿ . ಅಟ್ಲಂಟಿಕ್ ಪಬ್ಲಿಶರ್ಸ್ & ಡಿಸ್ಟ್ರಿಬುಟರ್ಸ್, 2005. ISBN 812690450X. Page 28-35
- ಸ್ಟಡೀಸ್ ಇನ್ ಪಂಜಾಬ್ ಪೊಯೆಟ್ರಿ. ಚಾಪ್ಟ್. 9- ಅಮೃತಾ ಪ್ರೀತಮ್: ದಿ ಪೊಯೆಟ್ರಿ ಆಫ್ ಪ್ರೊಟೆಸ್ಟ್ , ಬೈ ದರ್ಶನ್ ಸಿಂಗ್ ಮೈನಿ. ವಿಕಾಸ್ ಪಬ್ಲಿ., 1979. ISBN 0688168949 ಪುಟ 349..
- 1 ಸ್ಟ್ ಚಾಪ್ಟರ್ ಆಫ್ ರೆವ್ಯುನ್ಯು ಸ್ಟಾಂಪ್ ಬೈ ಅಮೃತಾ ಪ್ರೀತಮ್
- "ದಿ ಸೆಲ್ಲರ್" ಬೈ ಅಮೃತಾ ಪ್ರೀತಮ್
- “ಸಾಹಿಬನ್ ಇನ್ ಎಕ್ಸೈಲ್” ಬೈ ಅಮೃತಾ ಪ್ರೀತಮ್
- "ದಿ ವೀಡ್" ಬೈ ಅಮೃತಾ ಪ್ರೀತಮ್
- "ವೈಲ್ಡ್ ಫ್ಲಾವರ್" ಬೈ ಅಮೃತಾ ಪ್ರೀತಮ್
- ಮೈ ತೆನು ಫಿರ್ ಮಿಲಂಗಿ , (ಐ ಉಯಿಲ್ ಮೀಎಟ್ ಯು ಯೆಟ್ ಅಗೇನ್) ಟ್ರಾನ್ಸ್ಲೇಶನ್
ಉಲ್ಲೇಖಗಳು
[ಬದಲಾಯಿಸಿ]- ↑ Muslim Feminism and Feminist Movement: Middle-East Asia, by Abida Samiuddin, Rashida Khanam. Global Vision Pub. House, 2002. ISBN 8187746408. Page viii and 426.
- ↑ ೨.೦ ೨.೧ ೨.೨ ಅಮೃತಾ ಪ್ರೀತಮ್ - ಆಬುಟುರಿ ದಿ ಗಾರ್ಡಿಯನ್ , ನವೆಂಬರ್ 4, 2005.
- ↑ ಅಮೃತಾ ಪ್ರೀತಮ್: ಎ ಗ್ರೇಟ್ ವರ್ಡ್ಸ್ ಸ್ಮಿತ್ ಇನ್ ಪಂಜಾಬ್ಸ್ ಲಿಟರರಿ ಹಿಸ್ಟ್ರಿ ಡೇಲಿ ಟೈಮ್ಸ್ (ಪಾಕಿಸ್ತಾನ್) , ನವೆಂಬರ್ 14, 2005.
- ↑ ಆಲ್ವೇಜ್ ಅಮೃತಾ, ಆಲ್ವೇಜ್ ಅಮೃತಾ ಗುಲ್ಜಾರ್ ಸಿಂಗ್ ಸಂಧು ಆನ್ ದಿ ಗ್ರ್ಯಾಂಡ್ ಡೇಮ್ ಆಫ್ ಪಂಜಾಬಿ ಲೆಟರ್ಸ್ , ದಿ ಟ್ರಿಬೂನ್ , ನವೆಂಬರ್ 5, 2005.
- ↑ Pinjar at IMDb
- ↑ ೬.೦ ೬.೧ ಅಮೃತಾ ಪ್ರೀತಮ್ ಮಾಡೆರ್ನ್ ಇಂಡಿಯನ್ ಲಿಟರೇಚರ್: ಆನ್ ಅಂಥೊಲಾಜಿ , ಬೈ ಕೆ.ಎಂ ಜಾರ್ಜ್, ಸಾಹಿತ್ಯ ಅಕಾಡಮೆ. 1992, ISBN 8172013248.945-947 .
- ↑ ಸಾಹಿತ್ಯ್ ಅಕಾಡಮಿ ಫೆಲೊಶಿಪ್ ಫಾರ್ ಅಮೃತಾ ಪ್ರೀತಮ್,ಅನಂತ ಮೂರ್ತಿ Archived 2004-12-10 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದು , ಅಕ್ಟೋಬರ್ 5, 2004.
- ↑ ೮.೦ ೮.೧ ಅಮೃತಾ ಪ್ರೀತಮ್ ಉಮೆನ್ ರೈಟಿಂಗ್ ಇನ್ ಇಂಡಿಯಾ: 600 B.C. ಟು ದಿ ಪ್ರೆಜೆಂಟ್ , ಬೈ ಸುಸೀ ಜೆ ಜೆ. ಥರು , ಕೆ ಲಲಿತಾ ಪಬ್ಲಿಶೆಡ್ ಬೈ ಫೆಮಿಸ್ನಿಸ್ಟ್ ಪ್ರೆಸ್, 1991. ISBN 0688168949 Page 160-163 .
- ↑ ನಿವ್ ಪಂಜಾಬಿ ಪೊಯೆಟ್ರಿPanjabi Poetry ( 1935-47) ಹ್ಯಾಂಡ್ ಬುಕ್ ಆಫ್ ಟ್ವೆಂಟಿಯತ್-ಸೆಂಚುರಿ ಲಿಟರೇಚರ್ಸ್ ಆಫ್ ಇಂಡಿಯಾ , ಬೈ ನಳಿನಿ ನಟರಾಜನ್ ಎಮ್ಯುನ್ಯಾಲನ್ ಸಂಪತ್ ನೆಲ್ಸನ್, ಗ್ರೀನ್ ವುಡ್ ಪಬ್ಲಿಶಿಂಗ್ ಗ್ರುಪ್, 1996. ISBN 0688168949Page 253-254 .
- ↑ ಖುಶ್ವಂತ್ ಸಿಂಗ್, "ಅಮೃತಾ ಪ್ರೀತಮ್: ಕ್ವೀನ್ ಆಫ್ ಪಂಜಾಬಿ ಲಿಟರೇಚರ್", ದಿ ಸಿಖ್ ಟೈಮ್ಸ್
- ↑ ಅಮೃತಾ ಪ್ರೀತಮ್ - ಆಬಿಟುವರಿ Archived 2011-07-01 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಇಂಡೆಪೆಂಡೆಂಟ್ , ನವೆಂಬರ್ 2, 2005.
- ↑ ಎಡಿಟೋರಿಯಲ್ ಡೇಲಿ ಟೈಮ್ಸ್(ಪಾಕಿಸ್ತಾನ್) , ನವೆಂಬರ್ 2, 2005.
- ↑ ಆನ್ ಅಲ್ಟರ್ ನೇಟಿವ್ ವೈಸ್ ಆಫ್ ಹಿಸ್ಟ್ರಿ Archived 2005-12-08 ವೇಬ್ಯಾಕ್ ಮೆಷಿನ್ ನಲ್ಲಿ. ನೊನಿಕಾ ದತ್ತಾ, ದಿ ಹಿಂದು, ಡಿಸೆಂಬರ್04, 2005.
- ↑ ಜಗಲಿಂಗ್ ಟು ಲೈವ್ಸ್ ದಿ ಹಿಂದು, ನವೆಂಬರ್ 13, 2005.
- ↑ ಕಂಪ್ಲೀಟ್ ಹೀರ್ ವಾರಿಸ್ ಶಾಹ್
- ↑ [೧] ಅಕಾಡಮಿ ಆಫ್ ದಿ ಪಂಜಾಬ್ ಇನ್ ನಾರ್ಥ್ ಅಮೆರಿಕಾ (APNA).
- ↑ ಕಂಪ್ಲೀಟ್ ವೆರ್ಸೆ ಉಯಿತ್ ಟ್ರಾನ್ಸ್ಲೇಶನ್
- ↑ ಆಜ್ ಆಖಾನ್ ವಾರಿಸ್ ಶಾಹ್ ನು- ಪೊಯೆಟ್ರಿ ಇನ್ ಅಮೃತಾಸ್ ಓನ್ ವೈಸ್ Archived 2011-06-15 ವೇಬ್ಯಾಕ್ ಮೆಷಿನ್ ನಲ್ಲಿ. ಅಕಾಡಮಿ ಆಫ್ ದಿ ಪಂಜಾಬ್ ಇನ್ ನಾರ್ಥ್ ಅಮೆರಿಕಾ(APNA).
- ↑ ಜೀವನ್ ಪ್ರಕಾಶ್ ಶರ್ಮಾ,"ಅಮೃತಾ ಪ್ರೀತಮ್'ಸ್ ನಾವೆಲ್ ಟು ಬಿ ರೆಂಡರ್ಡ್ ಆನ್ ಫಿಲ್ಮ್",ದಿ ಹಿಂದುಸ್ತಾನ್ ಟೈಮ್ಸ್ (ಆಗಷ್ತ್ 27, 2002)
- ↑ ೨೦.೦ ೨೦.೧ ಅಮೃತಾ ಪ್ರೀತಮ್Pritam, ದಿ ಬ್ಲ್ಯಾಕ್ ರೋಜ್ ಬೈ ವಿಜಯ್ ಕುಮಾರ್ ಸುನ್ವಾನಿ, ಲ್ಯಾಂಗ್ವೇಜ್ ಇನ್ ಇಂಡಿಯಾ, ಸಂಚಿಕೆ 5 : 12 ಡಿಸೆಂಬರ್ 2005.
- ↑ "ಬುಕ್ಸ್ ಆಫ್ ಅಮೃತಾ ಪ್ರೀತಮ್". Archived from the original on 2016-01-17. Retrieved 2011-01-10.
- ↑ ಎ ಟ್ರಿಬೂಟ್ ಟು ಅಮೃತಾ ಪ್ರೀತಮ್ ಬೈ ಒಶೊ ಲೌವರ್ಸ್ Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ. Sw. ಚೈತನ್ಯ್ ಕೀರ್ತಿ , sannyasworld.com .
- ↑ ವಿಜನ್ಸ್ ಆಫ್ ಡೈವಿನಿಟಿ-ಅಮೃತಾ ಪ್ರೀತಮ್ Archived 2008-09-27 ವೇಬ್ಯಾಕ್ ಮೆಷಿನ್ ನಲ್ಲಿ. ಲೈಫ್ ಪಾಜಿಟಿವ್ , ಏಪ್ರಿಲ್ 1996.
- ↑ ಅಮೃತಾ ಪ್ರೀತಮ್ ಬಯೊಗ್ರಾಫಿ Archived 2008-12-05 ವೇಬ್ಯಾಕ್ ಮೆಷಿನ್ ನಲ್ಲಿ. ಚೌಕ್ , ಮೇ 15, 2005.
- ↑ "Jnanpith Laureates Official listings". Jnanpith Website. Archived from the original on 2007-10-13. Retrieved 2011-01-10.
- ↑ ಅಮೃತಾ ಪ್ರೀತಮ್ www.punjabilok.com .
- ↑ ಸಾಹಿರ್ ಬಯಗ್ರಾಫಿ Upperstall.com .
- ↑ ಅಮೃತಾ ಪ್ರೀತಮ್ ಇಮ್ರೊಜ್: ಎ ಲೌ ಸ್ಟೊರಿ ಆಫ್ ಪೊಯೆಟ್ ಅಂಡ್ ಎ ಪೇಂಟರ್ Archived 2010-01-08 ವೇಬ್ಯಾಕ್ ಮೆಷಿನ್ ನಲ್ಲಿ. Passionforcinema.com, ಆಗಸ್ಟ್ 8, 2008.
- ↑ ನಿರುಪಮಾ ದತ್ತ, "ಎ ಲೌ ಲೆಜೆಂಡ್ ಆಫ್ ಅವರ್ ಟೈಮ್ಸ್ " ಟ್ರಿಬೂನ್ , 5 ನವೆಂಬರ್ 2006.
- ↑ ಲಿವಿಂಗ್ ಲೈಫ್ ಆನ್ ಹರ್ ಓನ್ ಟರ್ಮ್ಸ್ ಕಾಂಚನ್ ಮೆಹ್ತಾ. ದಿ ಟ್ರಿಬೂನ್ , 3 ಆಗಷ್ಟ್ 2003.
- ↑ ಐ ಉಯಿಲ್ ಮೀಟ್ ಯುವ್ ಯೆಟ್ ಅಗೇನ್ ಬೈ ಅಮೃತಾ ಪ್ರೀತಮ್ ಲಿಟ್ಟಲ್ ಮ್ಯಾಗ್ಜಿನ್ .
- ↑ 'ಅಮೃತಾ ರಿಸೈಟೆಡ್ ಬೈ ಗುಲ್ಜಾರ್' Archived 2008-07-05 ವೇಬ್ಯಾಕ್ ಮೆಷಿನ್ ನಲ್ಲಿ. www.gulzaronline.com.
- ↑ ಗುಲ್ಜಾರ್ ರಿಸೈಟ್ಸ್ ಫಾರ್ ಅಮೃತಾ ಪ್ರೀತಮ್ ಟೈಮ್ಸ್ ಆಫ್ ಇಂಡಿಯಾ , ಮೇ 7, 2007.
- ↑ ಮೂವೀ ಆನ್ ಅಮೃತಾ ಪ್ರೀತಮ್ ಟು ಬಿ ಶಾಟ್ ಇನ್ ಹಿಮಾಚಲ್ realbollywood.com .
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಮೃತಾ ಪ್ರೀತಮ್ ಅಂಡ್ ಹರ್ ವರ್ಕ್ಸ್ ಆಟ್ ಸೌತ್ ಏಶಿಯನ್ ಉಮೆನ್ಸ್ ನೆಟ್ವರ್ಕ್ (ಸಾನೆಟ್)
- ಅಮೃತಾ ಪ್ರೀತಮ್ 1919-2005-ಎ ಟ್ರಿಬೂಟ್ ಬೈ ರಾಜಾ ರುಮಿ Archived 2008-06-18 ವೇಬ್ಯಾಕ್ ಮೆಷಿನ್ ನಲ್ಲಿ.
- ಪೊಯೆಮ್ಸ್ ಬೈ ಅಮೃತಾ ಪ್ರೀತಮ್ ಆಟ್ ಕವಿತಾಯಾ( 2009-10-25)
- ವಿಡಿಯೊ ಲಿಂಕ್ಸ್
- ಆಜ್ ವಾರಿಸ್ ಶಾಹ್ ನು ,ಅಮೃತಾ ಪ್ರೀತಮ್ಸ್ ಮೊಸ್ಟ್ ಇಂಪಾರ್ಟಂಟ್ ಪೊಯೆಮ್, ರಿಸೈಟೆಡ್ ಬೈ ಗುಲ್ಜಾರ್
- ಅಮೃತಾ ಪ್ರೀತಮ್ಸ್ ಪೊಯೆಮ್ಮೈ ತುನು ಪಿರ್ ಮಿಲಂಗಿ ರಿಸೈಟೈಡ್ ಬೈ ಗುಲ್ಜಾರ್
- Pages using the JsonConfig extension
- IMDb title ID different from Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using ISBN magic links
- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
- ೧೯೧೯ ಜನನ
- ೨೦೦೫ ನಿಧನ
- ಭಾರತೀಯ ಲೇಖಕರು
- ಭಾರತೀಯ ಜೀವನಚರಿತ್ರಕಾರರು
- ಪಂಜಾಬಿ ಕವಿಗಳು
- ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
- ಸಾಹಿತ್ಯ ಅಕಾಡಮಿ ಫೆಲೊಶಿಪ್ ಪಡೆದವರು
- ಭಾರತದ ಸಿಖ್ಖರು
- ಇಂಡಿಯನ್ ಫೆಮಿನಿಸ್ಟ್ಸ್
- ಪಂಜಾಬಿ-ಲ್ಯಾಂಗ್ವೇಜ್ ಪೊಯೆಟ್ಸ್
- ಪಂಜಾಬಿ-ಭಾಷೆಯ ಬರಹಗಾರರು
- ಭಾರತೀಯ ಮಹಿಳಾ ಬರಹಗಾರರು
- ನಾಮಾಂಕಿತ ರಾಜ್ಯಸಭಾ ಸದಸ್ಯರು
- ದೆಹಲಿಯ ಜನರು
- ಪಂಜಾಬಿ ಜನರು
- ಸಾಹಿತಿಗಳು
- ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು