ಶ್ರೀ ತ್ಯಾಗರಾಜ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಶ್ರೀ ತ್ಯಾಗರಾಜ ಕರ್ನಾಟಕ ಸಂಗೀತದಲ್ಲಿ (ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತದ ಒಂದು ಪ್ರಕಾರ) ಮಹೇಶ್ ಮಹದೇವ್ ಸೃಷ್ಟಿಸಿರುವ ಒಂದು ರಾಗವಾಗಿದೆ [೧] ಇದು ಕರ್ನಾಟಕ ಶಾಸ್ತ್ರೀಯ ಸಂಗೀತದ 72 ಮೇಳಕರ್ತ ರಾಗ ವ್ಯವಸ್ಥೆಯಲ್ಲಿ 59ನೇ ಮೇಳಕರ್ತ ರಾಗ ಧರ್ಮಾವತಿಯ ಜನ್ಯವಾಗಿದ್ದು ಇದು ಔಡವ-ಷಾಡವ ರಾಗವಾಗಿದೆ.[೨]
ರಾಗ ಸ್ವರೂಪ ಮತ್ತು ಲಕ್ಷಣ
[ಬದಲಾಯಿಸಿ]ಶ್ರೀ ತ್ಯಾಗರಾಜ ರಾಗವು ಔಡವ-ಷಾಡವ ರಾಗವಾಗಿದ್ದು ಇದರ ಆರೋಹಣದಲ್ಲಿ ಷಡ್ಜ, ಸಾಧಾರಣ ಗಾಂಧಾರ, ಪ್ರತಿ ಮಧ್ಯಮ, ಪಂಚಮ, ಕಾಕಲಿ ನಿಷಾದವಿದೆ. ಅವರೋಹಣದಲ್ಲಿ ಮಾತ್ರ ಚತುಶ್ರುತಿ ರಿಷಭದ ಪ್ರಯೋಗವಿರುತ್ತದೆ. ಈ ರಾಗದ ಆರೋಹಣ ಮತ್ತು ಅವರೋಹಣ ಕೆಳಕಂಡಂತಿದೆ.
ಆರೋಹಣ ಸ ಗ2 ಮ2 ಪ ನಿ3 ಸ
ಅವರೋಹಣ ಸ ನಿ3 ಪ ಮ2 ಗ2 ರಿ2 ಸ
ಆರೋಹಣದಲ್ಲಿ ಐದು ಸ್ವರ ಹಾಗೂ ಅವರೋಹಣದಲ್ಲಿ ಏಳೂ ಸ್ವರಗಳು ಇರುವುದರಿಂದ ಇದು ಔಡವ-ಷಾಡವ ರಾಗವಾಗಿದೆ.[೩]
ಸಂಗೀತ ರಚನೆ
[ಬದಲಾಯಿಸಿ]ಈ ರಾಗವು ಹೊಸರಾಗವಾಗಿದ್ದು ಮಹೇಶ್ ಮಹದೇವ್ ಈ ರಾಗದಲ್ಲಿ ಮೊದಲಿಗೆ "ಶ್ರೀ ರಾಮಚಂದ್ರಂ ಭಜಾಮಿ" ಎಂಬ ಕರ್ನಾಟಕ ಸಂಗೀತದ ಕೃತಿಯನ್ನು ಆದಿ ತಾಳದಲ್ಲಿ ರಚಿಸಿದ್ದಾರೆ. ಪ್ರಿಯದರ್ಶಿನಿ ಈ ಕೃತಿಯನ್ನು ಹಾಡಿದ್ದು ಕೃತಿಯ ಬಿಡುಗಡೆಯನ್ನು ತ್ಯಾಗರಾಜರ ಜೀವ ಸಮಾಧಿಯಾದ ಸ್ಥಳದಲ್ಲಿ ನಡೆಯುವ 176ನೇ ತ್ಯಾಗರಾಜ ಆರಾಧನಾ ಮಹೋತ್ಸವ, ತಿರುವಯ್ಯರು ತಮಿಳುನಾಡಿನಲ್ಲಿ ಬಿಡುಗಡೆ ಮಾಡಲಾಯಿತು.[೩]
ಕೃತಿಯ ಸಾಹಿತ್ಯ
[ಬದಲಾಯಿಸಿ]ಮಹೇಶ್ ಮಹದೇವ್ ಶ್ರೀಸ್ಕಂದ ಎಂಬ ಅಂಕಿತ ನಾಮದೊಂದಿಗೆ ಈ ರಾಗದಲ್ಲಿ ರಚಿಸಿದ "ಶ್ರೀ ರಾಮಚಂದ್ರಂ ಭಜಾಮಿ"[೨] ಕೃತಿಯ ಸಾಹಿತ್ಯ
ಪಲ್ಲವಿ:
ಶ್ರೀ ರಾಮಚಂದ್ರಂ ಭಜಾಮಿ ಸತತಂ
ದಶರಥ ತನಯಂ ರಘುಕುಲ ತಿಲಕಂ
ಅನುಪಲ್ಲವಿ:
ವೀರ ರಾಘವಂ ರಾಜೀವ ನಯನಂ
ಜಾನಕಿ ಪ್ರಾಣ ಜಗದಾನಂದಕಾರಕಂ
ಚರಣ:
ಶ್ರೀ ತ್ಯಾಗರಾಜ ರಾಗನುತಂ
ಕಂದರ್ಪ ಕೋಟಿ ಲಾವಣ್ಯ ಸದೃಶಂ
ಶ್ರೀಸ್ಕಂದ ಜನಕ ಹೃದಯ ಮಂದಿರಸ್ಥಿತಂ
ಸುಗ್ರೀವ ವಾನರ ಹನುಮಾದಿ ಸಂ ಸೇವಿತಂ
ಉಲ್ಲೇಖಗಳು
[ಬದಲಾಯಿಸಿ]- ↑ http://samyukthakarnataka.com/articlepage.php?articleid=SMYK_BANG_20230123_03_4&width=174px&edition=Bangalore&curpage=3
- ↑ ೨.೦ ೨.೧ "Sri Tyagaraja Raga created by Mahesh Mahadev". Mahesh Mahadev - Official Website. 2023-01-10. Retrieved 2023-08-04.
- ↑ ೩.೦ ೩.೧ "a New Raga in Carnatic Music by Mahesh Mahadev". News Karnataka. 2023-01-19. Retrieved 2023-08-04.