ಮಹೇಶ್ ಮಹದೇವ್
ಮಹೇಶ್ ಮಹದೇವ್ | |
---|---|
[[ಚಿತ್ರ:]] | |
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | ಬೆಂಗಳೂರು, ಕರ್ನಾಟಕ |
ಸಂಗೀತ ಶೈಲಿ | ಚಲನಚಿತ್ರ ಸಂಗೀತ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ |
ವೃತ್ತಿ | ಸಂಗೀತ ನಿರ್ದೇಶಕರು, ಗೀತರಚನೆಕಾರರು, ಗಾಯಕರು |
ಸಕ್ರಿಯ ವರ್ಷಗಳು | ೨೦೦೧-ಇವರೆಗೆ |
ಅಧೀಕೃತ ಜಾಲತಾಣ | https://maheshmahadev.com/ |
ಮಹೇಶ್ ಮಹದೇವ್ ರವರು ಭಾರತೀಯ ಸಂಗೀತ ಸಂಯೋಜಕರು, ಗೀತರಚನಾಕಾರು ಹಾಗೂ ಗಾಯಕರು. [೧] ಇವರು ತಮಿಳು ಹಾಗೂ ಕನ್ನಡ ಚಲನಚಿತ್ರಗಳಲ್ಲಿ ಸಂಗೀತ ನಿರ್ದೇಶಕರು, ಗೀತರಚನಾಕಾರರಾಗಿದ್ದರೆ. [೨]ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತದಲ್ಲಿ ಅನೇಕ ಹೊಸ ರಾಗಗಳನ್ನು ಸೃಷ್ಟಿಸಿ ಕೃತಿ, ಭಕ್ತಿಗೀತೆಗಳ ಸಂಯೋಜನೆ ಮಾಡಿದ್ದಾರೆ[೩] [೪]ಇವರು ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್, ಮರಾಠಿ, ಸಂಸ್ಕೃತ ಭಾಷೆಗಳಲ್ಲಿ ಸಂಗೀತ ಸಂಯೋಜಿಸಿದ್ದಾರೆ[೧]
ಆರಂಭಿಕ ಜೀವನ[ಬದಲಾಯಿಸಿ]
ಮಹೇಶ್ ಮಹದೇವ್ ಅಕ್ಟೋಬರ್ ೨೮, ೧೯೮೧ ಬೆಂಗಳೂರಿನಲ್ಲಿ ಮಹದೇವರಾವ್, ಮಂಜುಳ ಜಾದವ್ ಎಂಬ ಮರಾಠಿ ದಂಪತಿಗಳಿಗೆ ಹಿರಿಯ ಮಗನಾಗಿ ಜನಿಸಿದರು. ಬಾಲ್ಯದಿಂದಲೂ ಕಲೆ, ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಹೊಂದಿದವರು. [೫]ಇವರು ಖ್ಯಾತ ಚಲನಚಿತ್ರ ವಾದ್ಯಸಂಗೀತರಾದ ಸದಾಸುದರ್ಶನಂ ಹಾಗೂ ರಾಧಾ ವಿಜಯನ್ ಬಳಿ ಪಾಶ್ಚಾತ್ಯ ಸಂಗೀತ ಅಭ್ಯಾಸ ಮಾಡಿದರು. ಇವರು ೩೫೦ ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಪ್ರಸ್ತುತ ಇವರು ಝಾನ್ಸಿ ಐ.ಪಿ.ಎಸ್ ಎಂಬ ಕನ್ನಡ ಚಲನ ಚಿತ್ರದಲ್ಲಿ "ಸಾಹಿತ್ಯ ರಚನೆಮಾಡಿದ್ದಾರೆ[೧] ಹಾಗೂ 'ಮಾಳಿಗೈ' [೬]ತಮಿಳು ಚಿತ್ರಗಳಲ್ಲಿ ಸಂಗೀತ ಸಂಯೋಜಕರಾಗಿದ್ದಾರೆ[೭][೮]
ಹಿಂದೂಸ್ತಾನಿ ಸಂಗೀತ[ಬದಲಾಯಿಸಿ]
'ಭಾರತ ರತ್ನ' ಪಂಡಿತ್ ಭೀಮಸೇನ್ ಜೋಶಿ (ಭೀಮ್) ತಾನ್ ಸೇನ್ (ಸೇನ್) ರವರ ಹೆಸರಲ್ಲಿ[೩] ಸೃಷ್ಟಿಸಿದ 'ಭೀಮ್ ಸೇನ್' ಹೊಸ ರಾಗದಲ್ಲಿ ಗಿರಿಧರ್ ಗೋಪಾಲ್ ಶ್ಯಾಮ್ ವಿಲಾಂಬಿತ್ ಮತ್ತು ಮಧ್ಯ ಲಯ ಬಂದಿಶ್ ರಚಿಸಿದ್ದಾರೆ. ಇದೇ ರಾಗದಲ್ಲಿ ಮನ್ ಕೆ ಮಂದಿರ್ ಅಯೋರೇ ದೃತ್ ಲಯ ಬಂದಿಶ್ ಸಂಯೋಜನೆ ಮಾಡಿದ್ದಾರೆ [೯][೩] ಇವರು ಸೃಷ್ಟಿಸಿದ ಹೊಸ ರಾಗ 'ಮುಕ್ತಿಪ್ರದಾಯಿನಿಯಲ್ಲಿ ಧ್ಯಾನ್ ಕರು ಝಾತಾ ಎಂಬ ಮರಾಠಿ ಅಭಾಂಗ್ ರಚನೆ ಮಾಡಿದ್ದಾರೆ [೧೦]
ಕರ್ನಾಟಕ ಸಂಗೀತ[ಬದಲಾಯಿಸಿ]
ಮಹೇಶ್ ಮಹದೇವ್ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಚಲಿತವಿಲ್ಲದ ಹಲವಾರು ರಾಗಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ರುದ್ರಪಂಚಮ್, ಶ್ರೀರಂಗಪ್ರಿಯ, ತಪಸ್ವಿನಿ, ಮಯೂರಪ್ರಿಯ, ಏಕಮುಖ, ಬಿಂದು ರೂಪಿಣಿ ಮತ್ತು ಹಲವಾರು ಹೊಸ ರಾಗಗಳನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಪರಿಚಯಿಸಿದ್ದಾರೆ.[೨] ಶ್ರೀಸ್ಕಂದ ಎಂಬ ಅಂಕಿತನಾಮದಲ್ಲಿ [೧೧]ಕರ್ನಾಟಕ ಸಂಗೀತದಲ್ಲಿ ವಿವಿಧ ತಾಳ ಪ್ರಕಾರ ಹಾಗೂ ರಾಗಗಳಲ್ಲಿ ಕೃತಿ, ತಿಲ್ಲಾನ, ಕೀರ್ತನೆಗಳು, ದಾಸರ ಪದಗಳನ್ನು ಸಂಯೋಜಿಸಿದ್ದಾರೆ.[೪] ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ತ್ಯಾಗರಾಜರ ಹೆಸರಿನಲ್ಲಿ "ಶ್ರೀ ತ್ಯಾಗರಾಜ"ಎಂಬ ಹೊಸ ರಾಗ ಸೃಷ್ಟಿಸಿ "ಶ್ರೀ ರಾಮಚಂದ್ರಂ ಭಜಾಮಿ" ಎಂಬ ಕರ್ನಾಟಕ ಸಂಗೀತದ ಕೃತಿಯನ್ನು ರಚಿಸಿದ್ದಾರೆ. [೧೧] ಕರ್ನಾಟಕ ಸಂಗೀತದ ದಿಗ್ಗಜರಾದ ಟಿ. ಎಂ. ತ್ಯಾಗರಾಜನ್ ರವರ ಜನ್ಮಶತಾಬ್ಧಿ ಸಲುವಾಗಿ ಅವರ ಹೆಸರಿನಲ್ಲಿ ತ್ಯಾಗರಾಜ ಮಂಗಳಂ ಎಂಬ ರಾಗ ಸೃಷ್ಟಿಸಿ "ಧ್ಯಾನ ಮೂಲಂ ಗುರು" ಎಂಬ ಉಗಾಭೋಗ ಹಾಗೂ ಕೃತಿಯನ್ನು ರಚಿಸಿ ಗೌರವ ಸಲ್ಲಿಸಿದ್ದಾರೆ.[೧]
ಇವರು ಸೃಷ್ಟಿಸಿದ ಹೊಸ ರಾಗಗಳು [೩][೪][ಬದಲಾಯಿಸಿ]
- ಮುಕ್ತಿಪ್ರದಾಯಿನಿ - ವಕುಳಾಭರಣ ಜನ್ಯ
- ಶ್ರೀರಂಗಪ್ರಿಯ
- ಭೀಮ್ ಸೇನ್ - ಕೋಕಿಲಪ್ರಿಯ ಜನ್ಯ
- ಶ್ರೀಸ್ಕಂದ
- ಶ್ರೀ ತ್ಯಾಗರಾಜ
- ಬಿಂದುರೂಪಿಣಿ,
- ನಾದ ಕಲ್ಯಾಣಿ - ಮೇಚ ಕಲ್ಯಾಣಿ ಜನ್ಯ
- ತಪಸ್ವಿ
- ಮಯೂರಪ್ರಿಯ,
- ಅಮೃತ ಕಲ್ಯಾಣಿ - ಮೇಚ ಕಲ್ಯಾಣಿ ಜನ್ಯ
- ರಾಜಸಾಧಕ- ಮೇಚ ಕಲ್ಯಾಣಿ ಜನ್ಯ
- ತ್ಯಾಗರಾಜ ಮಂಗಳಂ - ಗೌರಿಮನೋಹರಿ ಜನ್ಯ
ಡಿಸ್ಕೋಗ್ರಫಿ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ ೧.೦ ೧.೧ ೧.೨ ೧.೩ https://www.thehindu.com/entertainment/music/experimenting-with-ragas/article35742833.ece
- ↑ ೨.೦ ೨.೧ https://www.deccanherald.com/metrolife/metrolife-your-bond-with-bengaluru/bengaluru-composer-creating-new-ragas-1018393.html
- ↑ ೩.೦ ೩.೧ ೩.೨ ೩.೩ https://archive.org/details/saamagana-indian-classical-music-magazine-july-2018/page/12/mode/2up?q=Mahesh+Mahadev
- ↑ ೪.೦ ೪.೧ ೪.೨ https://newskarnataka.com/karnataka/bengaluru/sri-tyagaraja-a-new-raga-in-carnatic-music-by-mahesh-mahadev/19012023
- ↑ https://maheshmahadev.com/mahesh-mahadev-family-and-early-life/
- ↑ https://www.deccanchronicle.com/entertainment/kollywood/110419/maaligai-gave-me-scope-for-various-shades-of-acting-andrea-jeremiah.html
- ↑ https://www.filmibeat.com/celebs/mahesh-mahadev.html#upcoming
- ↑ ೮.೦ ೮.೧ https://indianexpress.com/article/entertainment/tamil/andrea-jeremiah-next-maaligai-5675331/
- ↑ https://www.indiantalentmagazine.com/2019/02/05/mahesh-mahadev/
- ↑ https://music.apple.com/in/album/santanche-abhang-single/1485681835
- ↑ ೧೧.೦ ೧೧.೧ http://samyukthakarnataka.com/articlepage.php?articleid=SMYK_BANG_20230123_03_4&width=174px&edition=Bangalore&curpage=3
- ↑ https://www.youtube.com/watch?v=pKKOjZHUlFQ
- ↑ https://www.youtube.com/watch?v=uW_qlCVhB1E
- ↑ https://www.youtube.com/watch?v=eiWtsl41-sE
- ↑ https://www.youtube.com/watch?v=m66CsRQrV_A
- ↑ https://music.apple.com/in/album/kailasa-shikaravare-ganesha-laali/1485680853?i=1485681190
- ↑ https://www.youtube.com/watch?v=Ujmj_eLFku4&list=OLAK5uy_nHnvKRkt8DdSAVHasfCyIbBexzFC7GQ6I
- ↑ https://www.youtube.com/watch?v=PwXFMOvIgSU
- ↑ https://www.discogs.com/release/15925928-Mahesh-Mahadev-Sri-Shankara-Stotra-Rathnas
- ↑ https://www.youtube.com/watch?v=_vUPQMBhPR4
- ↑ https://www.youtube.com/watch?v=GGsKAUimAuA&list=OLAK5uy_kmUt9cnMV6OB8G8ysVQCCKru_5OMt4otc
- ↑ https://www.youtube.com/watch?v=ow035_zK3RY&list=OLAK5uy_njX-xIcp3ahfgcvTVGFwqeUc2zeSmy1Hg
- ↑ https://www.youtube.com/watch?v=dt47ZR6f8bA
- ↑ https://www.youtube.com/watch?v=v4Syd_kbpvI
- ↑ https://music.apple.com/in/album/rangana-mareyalarenamma/1542912680?i=1542912681
- ↑ https://music.apple.com/in/album/dhimi-dhimi/1542912169?i=1542912173
- ↑ https://www.youtube.com/watch?v=F8UDOj2BYb0
- ↑ https://music.apple.com/in/album/kandenu-sriranganathana/1505277465?i=1505277466
