ಕಾಂಭೋಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಂಭೋಜಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೨೮ನೇ ರಾಗ ಹರಿಕಾಂಭೋಜಿ ಜನ್ಯ. ಇದು ಷಾಡವ ಸಂಪೂರ್ಣ ರಾಗವಾಗಿದೆ. ಇದು ಶುಭಕರವಾದ ರಾಗ ಹಾಗಾಗಿ ಸಾಮಾನ್ಯವಾಗಿ ಈ ರಾಗವನ್ನು ವಾದ್ಯಗೋಷ್ಠಿಯನ್ನು ಪ್ರಾರಂಭ ಮಾಡುವಾಗ ನುಡಿಸುತ್ತಾರೆ.

ರಾಗ ಲಕ್ಷಣ ಮತ್ತು ಸ್ವರೂಪ[ಬದಲಾಯಿಸಿ]

ರಂಜನೀಯವಾದ ರಕ್ತಿ ರಾಗ, ವರ್ಜ್ಯ ರಾಗ ಭಾಷಾಂಗ ರಾಗ. ತ್ರಿಸ್ಥಾಯಿಯಲ್ಲಿಯೂ ಸಂಚಾರವಿರುವ ಪ್ರಸಿದ್ಧ ರಾಗ.
ಈ ರಾಗದ ಆರೋಹಣ ಮತ್ತು ಅವರೋಹಣದ ಸ್ವರಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೩ ಮ೧ ಪ ದ೨ ಸ'
ಅವರೋಹಣ ಸ' ನಿ೨ ದ೨ ಪ ಮ೧ ಗ೩ ರಿ೨ ಸ ಸ ನಿ ಪ ಎಂಬ ಸಂಚಾರ ಬಂದಾಗ ಕಾಕಲಿನಿಷಾದ ಪ್ರಯೋಗವಿದೆ. ಆರೋಹಣದಲ್ಲಿ ನಿಷಾದ ವರ್ಜ್ಯ.

ಜನಪ್ರಿಯ ರಚನೆಗಳು[ಬದಲಾಯಿಸಿ]

ಈ ರಾಗದಲ್ಲಿರುವ ಜನಪ್ರಿಯ ರಚನೆಗಳು

ವಿಧ ಕೃತಿ ವಾಗ್ಗೇಯಕಾರ ತಾಳ
ಕೃತಿ ಎವರಿಮಾಟ ತ್ಯಾಗರಾಜರು
ಕೃತಿ ಶ್ರೀ ಸುಬ್ರಹ್ಮಣ್ಯ ನಮಸ್ತೇ ಮುತ್ತುಸ್ವಾಮಿ ದೀಕ್ಷಿತರು
ಕೃತಿ ಮಾ ಜಾನಕಿ ತ್ಯಾಗರಾಜರು

.

ಉಲ್ಲೇಖಗಳು[ಬದಲಾಯಿಸಿ]

1) ಕರ್ನಾಟಕ ಸಂಗೀತ : ಮಾಧ್ಯಮಿಕ ಹಂತ - ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ.

"https://kn.wikipedia.org/w/index.php?title=ಕಾಂಭೋಜಿ&oldid=1202185" ಇಂದ ಪಡೆಯಲ್ಪಟ್ಟಿದೆ